Homeಕರ್ನಾಟಕಅರೆಸ್ಸೆಸ್‌ನ “ಭಾರತಿಯ ಸಂಸ್ಕೃತಿ ಉತ್ಸವ’’ದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಬಾರದು: ಸಾಹಿತಿ, ಪ್ರಗತಿಪರ ಚಿಂತಕರಿಂದ ಜಂಟಿ ಪತ್ರಿಕಾ...

ಅರೆಸ್ಸೆಸ್‌ನ “ಭಾರತಿಯ ಸಂಸ್ಕೃತಿ ಉತ್ಸವ’’ದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಬಾರದು: ಸಾಹಿತಿ, ಪ್ರಗತಿಪರ ಚಿಂತಕರಿಂದ ಜಂಟಿ ಪತ್ರಿಕಾ ಹೇಳಿಕೆ

- Advertisement -
- Advertisement -

ಬೆಂಗಳೂರು: ಕಲಬುರಗಿ ಜಿಲ್ಲೆಯ  ಸೇಡಂನಲ್ಲಿ 2025ರ ಜನವರಿ 29ರಿಂದ  ಆರೆಸ್ಸೆಸ್ ನ ಶತಮಾನೋತ್ಸವದ ಅಂಗವಾಗಿ ನಡೆಯುತ್ತಿರುವ  ಭಾರತೀಯ ಸಂಸ್ಕೃತಿ ಉತ್ಸವ ಎಂಬ ಅಖಿಲ ಭಾರತ ಮಟ್ಟದ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಹಲವು ಸಚಿವರ ಹೆಸರುಗಳಿದ್ದು, ಸರಕಾರದ ಎಲ್ಲ ಸಚಿವರು ಮತ್ತು ಸಂವಿಧಾನದ ಪರ ಇರುವ ಕಾಂಗ್ರೆಸ್‌ನ ಹಿರಿಯ ನಾಯಕರು , ಈ ಕೋಮುವಾದಿ ಸಮ್ಮೇಳನ’’ಲ್ಲಿ ಭಾಗವಹಿಸಬಾರದು ಎಂದು ಪ್ರಗತಿಪರ ಚಿಂತಕರು, ಸಾಹಿತಿಗಳು, ಹೋರಾಟಗಾರರು ಒತ್ತಾಯಿಸಿದ್ದಾರೆ.

ತಮ್ಮ ಜಂಟಿ ಹೇಳಿಕೆಯಲ್ಲಿ, ಸ್ವಾತಂತ್ರ್ಯ ಪೂರ್ವದಿಂದಲೂ, ಜಾತಿ ಧರ್ಮಗಳ ವಿಭಜನೆಯ ಮೂಲಕ ಕೋಮುವಾದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು  ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಸಂವಿಧಾನ ಜಾರಿಯಾದ ನಂತರ , ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳಲ್ಲಿ ನಂಬಿಕೆಯಿಲ್ಲದೆ ಒಂದಲ್ಲಾ ಒಂದು ಬಗೆಯಲ್ಲಿ ಸಂವಿಧಾನವನ್ನು ಗೌಣಗೊಳಿಸಿ  ಧರ್ಮ ಹಾಗು ಕೋಮುವಾದದ ನೆಲೆಯಲ್ಲಿ ಭಾರತವನ್ನು ಒಂದು ಜನಾಂಗೀಯ ರಾಷ್ಟ್ರವನ್ನಾಗಿಸಲು ನಿರಂತರವಾಗಿ ಒಡಕಿನ ರಾಜಕೀಯ ಮಾಡುತ್ತಾ ಬಂದಿರುವ  ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯು   ಇದೀಗ ತನ್ನ ಶತಮಾನೋತ್ಸವ ಕಾರ್ಯಕ್ರಮಗಳಿಗೆ ದೇಶಾದ್ಯಂತ ಚಾಲನೆ ನೀಡಿದೆ .

ಇದೇ ಕೋಮುವಾದಿ ಆರೆಸ್ಸೆಸಿನ ಹೊಕ್ಕುಳ ಬಳ್ಳಿಯೊಂದು ಸೇಡಂನಲ್ಲಿ ಜನವರಿ ೨೯ರಿಂದ ಭಾರತೀಯ ಸಂಸ್ಕೃತಿ ಉತ್ಸವ ಎಂಬ ಅಖಿಲ ಭಾರತ ಮಟ್ಟದ ಸಮ್ಮೇಳನವನ್ನು ಸಂಘಟಿಸುತ್ತಿದೆ. ಆರೆಸ್ಸೆಸ್ಸಿನ   ಶತಮಾನೋತ್ಸವ ಸಂದರ್ಭದ ಪೀಠಿಕಾ ಕಾರ್ಯಕ್ರಮದಂತೆ ಇದನ್ನು ಸಂಘಟಿಸಲಾಗಿದೆ. ಇದೇ ಆರ್‌ಎಸ್‌ಎಸ್‌ ನೂರು ವರ್ಷಗಳ ಹಿಂದೆ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿಸುವ ಪ್ರತಿಜ್ಞೆಗೈದಿದ್ದನ್ನು ನಾವು ಸ್ಮರಿಸಬೇಕಿದೆ. ಈ ಕಾರ್ಯಕ್ರಮದ  ರೂವಾರಿ ಗೋವಿಂದಾಚಾರ್ಯ ಒಂದು ಕಾಲದಲ್ಲಿ ಭಾಜಪದಸೂತ್ರಧಾರರಾಗಿದು ಈಗ ಆರೆಸ್ಸೆಸ್‌ ಅಣತಿ ಮೇರೆಗೆ ಇನ್ನೊಂದು ಪಾತ್ರ ನಿರ್ವಹಿಸುತ್ತಿದ್ದಾರೆ.

ಸಂವಿಧಾನವನ್ನು ಬದಲಿಸಬೇಕೆಂಬ ಮೊದಲಮಾತು ಶುರು ಮಾಡಿದ್ದೇ ಈ ಗೋವಿಂದಾಚಾರ್ಯ. ಈ ಸದರಿ ಸಮ್ಮೇಳನವು ಹಿಂದೂ ರಾಷ್ಟ್ರವನ್ನು ಸ್ಥಾಪಿಸುವ ಗೌಪ್ಯ ಅಜೆಂಡಾವನ್ನು ಹೊಂದಿದ್ದು , ಅದರಲ್ಲಿ ಭಾಗವಹಿಸುತ್ತಿರುವ ಎಲ್ಲರೂ ಭಾಜಪ/ ಆರೆಸ್ಸೆಸ್ಸಿಗರು ಅಥವಾ ತೆರೆಮೆರೆಯಲ್ಲಿ  ಆರೆಸ್ಸೆಸ್‌ ಬೆಂಬಲಿಸುವ ಮೂಲಕ  ಸಂವಿಧಾನವನ್ನು ಬುಡಮೇಲು ಮಾಡುವ ಶಕ್ತಿಗಳೇ ಆಗಿವೆ .  ಈ ಅಜೆಂಡವೂ ಅವರ ಸಾರ್ವಜನಿಕ ಹೇಳಿಕೆಗಳು , ಸಿದ್ಧತೆಗಳು ಮತ್ತು ಕ್ರಿಯೆಗಳು ನಿಚ್ಚಳವಾಗಿದೆ. ಇದು ಅವರ ಹಿಂದುತ್ವ ನಿಲುವನ್ನು ಢಾಳಾಗಿ ತೋರಿಸಿದೆ.

ಈ  ಸಮ್ಮೇಳನವೂ ಮಾರುವೇಶದ ಆರೆಸ್ಸೆಸ್‌ನ ದೇಶ ವಿಭಜನೆ  ಕಾರ್ಯಕ್ರಮ ಎಂಬುದು ಸ್ಪಷ್ಟವಾಗಿದೆ. ಭಾರತೀಯ ಎಂದರೆ ಹಿಂದೂ ಅದರಲ್ಲೂ ಹಿಂದೂ ಬ್ರಾಹ್ಮಣೀಯ ಸಂಸ್ಕೃತಿ ಎಂಬಾ ಆರೆಸ್ಸೆಸ್ಸಿನ ಸಿದ್ಧಾಂತ ವನ್ನು ಪ್ರಚಾರ ಮಾಡುವುದೇ ಈ ಸಮಾವೇಶದ ಉದ್ದೇಶವಾಗಿದೆ. ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯು ಬಸವರಾಜ ಪಾಟಿಲ ಸೇಡಂ ಎಂಬ ಕಟ್ಟಾ ಆರ್ ಎಸ್ ಎಸ್ ನ  ನಾಯಕರು ಇದರ ಪ್ರಮುಖ ಸಂಘಟಕರದ್ದು. ಭಾರತೀಯ ಸಂಸ್ಕೃತಿ ಉತ್ಸವ ಎಂಬುದು ತೋರಿಕೆಯ ಹೆಸರು. 240 ಎಕರೆ ಜಾಗದಲ್ಲಿ ಒಂಬತ್ತು ದಿನಗಳ ಕಾಲ ನಡೆಯುವ ಉತ್ಸವವು ಹಿಂದೂ ಧರ್ಮ ಉಳಿಸಲು ಅಂದರೆ ಸನಾತನ ವ್ಯವಸ್ಥೆ ಉಳಿಸಲು ನಡೆಸಲಾಗುತ್ತಿರುವ ಉತ್ಸವವಾಗಿದೆ. ಇದೊಂದು ಆರ್ ಎಸ್ ಎಸ್ ನ ನೂರನೇ ವರ್ಷದ ಆಚರಣೆಯ ಆರಂಭದ ಭಿನ್ನರೂಪ. ದಕ್ಷಿಣ ಭಾರತದ ರಾಜ್ಯಗಳಿಗೆ ಪ್ರವೇಶದ ಭಾಗವಾಗಿ ಆರ್ ಎಸ್ ಎಸ್ ಕರ್ನಾಟಕವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ,  ಕಲಬುರ್ಗಿಯನ್ನು ಹೆಬ್ಬಾಗಿಲು ಮಾಡಿಕೊಂಡಿದೆ. ಈ ಉದ್ಧೇಶಕ್ಕಾಗಿಯೇ “ಭಾರತೀಯ ಸಂಸ್ಕೃತಿ ಉತ್ಸವ ಎಂಬ ಹೆಸರಿನ  “ಪುರೋಹಿತಶಾಹಿತ್ವದ ಉತ್ಸವ” ನಡೆಸಲಾಗುತ್ತಿದೆ. ಪುರೋಹಿತಶಾಹಿಗಳಿಗೆ ಗೌರವಿಸುವ ಸಂವಿಧಾನ (ಮನುಸ್ಮೃತಿ)ಕ್ಕಾಗಿ ಈ ಉತ್ಸವ. ಸಂವಿಧಾನವನ್ನು ಗೌರವಿಸಿ ಮಾನವೀಯತೆ, ಸೌಹಾರ್ದತೆ, ಶಾಂತಿ , ಬಂಧುತ್ವ, ಬಹುತ್ವ , ಬಹು ಸಂಸ್ಕೃತಿ, ಬಹುಭಾಷೆ ಮತ್ತು ಸಮಗ್ರತೆಯನ್ನು ಬಯಸುವವರೆಲ್ಲರೂ ಈ ಉತ್ಸವನ್ನುನ ಧಿಕ್ಕರಿಸಬೇಕಿದೆ.

ಈಗಾಗಲೇ, ಸೇಡಂ ನಲ್ಲಿ  ನಡೆಯಲಿರುವ  ಈ ಭಾರತೀಯ ಸಂಸ್ಕೃತಿ ಕಾರ್ಯಕ್ರಮದಲ್ಲಿ  ಭಾಗವಹಿಸುತ್ತಿಲ್ಲ ಎಂದು ತಮ್ಮ X ಖಾತೆಯಲ್ಲಿ ಸನ್ಮಾನ್ಯ ಮುಖ್ಯ ಮಂತ್ರಗಳು  ಬಹಿರಂಗವಾಗಿ ಘೋಷಣೆ ಮಾಡುವ ಮೂಲಕ ಅವರು ಮುಖ್ಯ ಮಂತ್ರಿಯಾಗಿ  ಅಧಿಕಾರ ಸ್ವೀಕರಿಸುವಾಗ ಸಂವಿಧಾನದ ಹೆಸರಿನಲ್ಲಿ ತೆಗೆದುಕೊಂಡ ಪ್ರತಿಜ್ಞೆಗೆ ಅನುಗುಣವಾಗಿ  ನಿರ್ಧಾರ ತೆಗೆದುಕೊಂಡಿದ್ದಾರೆ. ಸಚಿವ ಪ್ರಿಯಾಂಕ ಖರ್ಗೆ ಅವರೂ ನಾನು ಭಾಗವಹಿಸಲಾರೆ ಎಂದು ಬಹಿರಂಗವಾಗಿ ಸ್ಪಷ್ಟ ಮಾಡಿದ್ದಾರೆ

ಆದರೆ ಈ  ಕಾರ್ಯಕ್ರಮದ  ಆಹ್ವಾನ ಪತ್ರಿಕೆಯಲ್ಲಿ ಇರುವುದು ಕೇವಲ  ಮುಖ್ಯಮಂತ್ರಿಯವರ  ಹೆಸರು, ಪ್ರಿಯಾಂಕ ಖರ್ಗೆಯವರ ಹೆಸರು ಮಾತ್ರವಲ್ಲ. ಸಂಘಟಕರು ಹೊರತಂದಿರುವ 52 ಪುಟಗಳ ಆಹ್ವಾನ ಪತ್ರಿಕೆಯಲ್ಲಿ ಮುಖ್ಯ ಮಂತ್ರಿಗಳ ಸಚಿವ ಸಂಪುಟದ ಭಾಗವಾಗಿರುವ ಹಲವು ಮಂತ್ರಿಗಳು, ಸಂಸದರು  ಮತ್ತು   ಆ ಪ್ರದೇಶದ ಕಾಂಗ್ರೆಸ್‌ ನ ಹಿರಿಯ ನಾಯಕರೂ ಭಾಗವಹಿಸಲಿದ್ದಾರೆ  ಎಂದು  ಅವರ ಹೆಸರುಗಳನ್ನು ಮುದ್ರಿಸಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ  ಈ ಎಲ್ಲಾ ಹೆಸರಗಳನ್ನು ಅವರ ಗಮನಕ್ಕೆ ತಾರದೆ ಮತ್ತು ಒಪ್ಪಿಗೆಯಿಲ್ಲದೆ ಹಾಕಲಾಗಿದೆ ಎಂಬ ಮಾತು ಕೇಳು ಬರುತ್ತಿದೆ.  ಇಷ್ಟೇ ಅಲ್ಲದೆ , ಕಾರ್ಯಕ್ರಮದ ಸಿದ್ಧತೆಗಾಗಿ ಇಲಾಖಾವಾರು ಸಭೆಗಳು ನಡೆದಿವೆ ಎಂಬ ಮಾಹಿತಿ ಕೂಡಾ ಇದೆ .

ಹಾಗಾದರೆ ಕೇಳದೇ ಹೆಸರು ಬಳಸಿಕೊಂಡು   ರಾಜ್ಯದ ಜನತೆಯನ್ನು ತಪ್ಪುದಾರಿಗೆ ಎಳೆಯುತ್ತಿರುವ  ಸಂಘಟಕರ ಮೇಲೆ  ಕಾನೂನು  ಕ್ರಮ ಜರುಗಿಸಬೇಕೆಂದು ನಾವೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸುತ್ತೇವೆ.  ಕಾಂಗ್ರೆಸ್‌ನ ಈ  ಮೃದು ಹಿಂದುತ್ವದ ಧೋರಣೆ  ರಾಜ್ಯದ  ಶಾಂತಿ ಸೌಹಾರ್ದತೆಗೆ ಧಕ್ಕೆಯ ಸಂಗತಿಯಾಗಿದೆ. ಆದರೂ  ಆಡಳಿತರೂಢ ಕಾಂಗೆಸ್‌ ಪಕ್ಷವೂ ಏಕೆ  ನಿರ್ಲಕ್ಷ್ಯವಹಿಸುತ್ತಿದೆ ಎಂಬುದು ನಮಗೆ ತಿಳಿಯುತ್ತಿಲ್ಲ? ಜೊತೆಗೆ ಇದು ಸೈದ್ಧಾಂತಿಕ ನಿಲುವಿನ ಪ್ರಶ್ನೆಯಾಗಿದ್ದು ಒಂದು ಸಮ್ಮೇಳನದ ಪೂರ್ವಾಪರಗಳನ್ನು ತಿಳಿಯದೆ ಕಾಂಗ್ರೆಸ್‌ ಸರಕಾರದ ಸಚಿವರು ಮತ್ತು ನಾಯಕರು ಈ ಸಮ್ಮೇಳನಕ್ಕೆ ಹೋಗಲು ಹೇಗೆ ಒಪ್ಪಿಕೊಂಡರು ಎಂಬುದು ಪ್ರಶ್ನೆಯಾಗಿದೆ ?

ಈ  ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೋಡಿದರೆ ಕಾಂಗ್ರೆಸ್‌ ನಾಯಕರನ್ನು ನಿರ್ದಿಷ್ಟ ಕಾರ್ಯಕ್ರಮಗಳಿಗೆ ಆಹ್ವಾನಿಸಿರುವುದು ಸ್ಪಷ್ಠ. ಕೇಳದೇ, ಒಪ್ಪಿಗೆ ಪಡೆಯದೇ ಇಂಥಾ ದೊಡ್ಡ ಸಮ್ಮೇಳದ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸುವುದು ಸಾಧ್ಯವೇ ಇಲ್ಲ. ಕಾಂಗ್ರೆಸಿಗರಿಗೆ ಕನಿಷ್ಠ ತಮ್ಮ ಪಕ್ಷದ ಸೈದ್ಧಾಂತಿಕ ನಿಲುವು,   ಪರಂಪರೆ ಬಗ್ಗೆ ಕನಿಷ್ಠ ತಿಳುವಳಿಕೆ ಇದ್ದಿದ್ದರೆ ಇಂಥಾ ಅಭಾಸಕ್ಕೆಡೆಯಾಗುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ ಗಾಂಧಿಯವರು ಸದಾ ಸಂವಿಧಾನವನ್ನು ಎತ್ತಿ ಹಿಡಿಯುವ ಭಾಗವಾಗಿ ಕಾರ್ಯನಿರ್ವಹಿಸುತ್ತಿರುವುದು ಕಾಂಗ್ರೆಸ್ಸಿಗರಿಗೆ ಮಾದರಿಯಾಗಬೇಕಿತ್ತು. ಹಾಗಾಗದಿರುವುದು ವಿಷಾದನೀಯ ಸಂಗತಿಯಾಗಿದೆ

240 ಎಕರೆ ಬೆಳೆಯುವ ಭೂಮಿಯಿಂದ ತಾತ್ಪೂರ್ತಿಕವಾಗಿ ರೈತರನ್ನು ಒಕ್ಕಲೆಬ್ಬಿಸಿ ಲಕ್ಷಾಂತರ ಜನರನ್ನು ಸೇರಿಸಿ ವಾತಾವರಣ ಕಲುಷಿತ ಮಾಡುತ್ತಿದ್ದಾರೆ. ಇದಕ್ಕೇನು ಕ್ರಮ ಕೈಗೊಳ್ಳಲಾಗುತ್ತಿದೆ ಈ ಸರ್ಕಾರ ಉತ್ತರಿಸಬೇಕು

ಈ ಎಲ್ಲಾ ಕಾರಣಗಳಿಂದ ಸರ್ಕಾರದ ಎಲ್ಲಾ ಸಚಿವರು ಮತ್ತು ಸಂವಿಧಾನದ ಪರ ಇರುವ ಕಾಂಗ್ರೆಸ್‌ನ ಹಿರಿಯ ನಾಯಕರರು  ಈ ಕೋಮುವಾದೀ ಸಮ್ಮೇಳನದಲ್ಲಿ ಭಾಗವಹಿಸಬಾರದೆಂದು ನಾವು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ. ಜೊತೆಗೆ,  ಈ ಸಮ್ಮೇಳನದಲ್ಲಿ ಭಾಗಿಯಾಗುವ ನಿರ್ಧಾರದಿಂದ  ಸಚಿವರು ಮತ್ತು ಕಾಂಗ್ರೆ ಸ್‌ ನಾಯಕರು ಹಿಂದೆ ಸರಿದರೆ ಮಾತ್ರ ಸಾಲದು, ಹಿಂದುತ್ವದ ಹಲವು ಮುಖಗಳ ಸೈದ್ಧಾಂತಿಕ ದಾಳಿಯನ್ನು ಎದುರಿಸುವ ಸೈದ್ಧಾಂತಿಕ ಕಾರ್ಯಕ್ರಮವನ್ನು  ಜನಾಂದೋಲನವಾಗಿ ಕಾಂಗ್ರೆಸ್‌ ನಾಯಕರು ರೂಪಿಸಬೇಕೆಂದು  ನಾವು ಒತ್ತಾಯಿಸುತ್ತೇವೆ.

ರಾಜ್ಯದ ಜನಗಳಿಗೆ ಕೋಮುವಾದಿ ವಿಷಾನಿಲ ಉಣಿಸಿ ಮುಗ್ಧ ಶೂದ್ರ ಮಕ್ಕಳ ಮನೋಸ್ವಾಸ್ಥ್ಯವನ್ನು ಹಾಳುಗೆಡಹುತ್ತಿದ್ದಾರೆ. ಅಲ್ಲಿ ಈಗಾಗಲೇ ನೂರಾರು ಶೂದ್ರರನ್ನು ಹಗಲು ರಾತ್ರಿ ದುಡಿಸಿಕೊಂಡು ಸನಾತನಿಗಳ ಸೇವೆಗೆ ಅವರ ಚರ್ಮವನ್ನು ರತ್ನಗಂಬಳಿ ಮಾಡಿ ಹಾಸಲಾಗುತ್ತಿದೆ ಎಂಬುದನ್ನು ರಾಜ್ಯದ ಎಚ್ಚರಿಕೆಯಿಂದ ಗಮನಿಸಬೇಕು ಮತ್ತದನ್ನು ವಿರೋಧಿಸಬೇಕು ಎಂಬುದು ನಮ್ಮ ನಿಲುವಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ…ಕೇರಳ | ಮತ್ತೊಬ್ಬ ಹಿರಿಯ ಸಿಪಿಐ(ಎಂ) ನಾಯಕ ನಿರ್ಗಮನ; ಬಿಜೆಪಿ ಸೇರುವ ಸಾಧ್ಯತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...