Homeಮುಖಪುಟಸಿರಿಯಾ ಬಳಿಕ ಕೊರಿಯಾದಲ್ಲಿ ಅರಾಜಕತೆ : ಅಧ್ಯಕ್ಷರ ವಿರುದ್ಧ ಜನಾಕ್ರೋಶ ; ಆತ್ಮಹತ್ಯೆಗೆ ಯತ್ನಿಸಿದ ಮಾಜಿ...

ಸಿರಿಯಾ ಬಳಿಕ ಕೊರಿಯಾದಲ್ಲಿ ಅರಾಜಕತೆ : ಅಧ್ಯಕ್ಷರ ವಿರುದ್ಧ ಜನಾಕ್ರೋಶ ; ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸಚಿವ!

- Advertisement -
- Advertisement -

ಡಿಸೆಂಬರ್ 3, 2024ರಂದು ದಕ್ಷಿಣ ಕೊರಿಯಾದಲ್ಲಿ ಏಕಾಏಕಿ ‘ತುರ್ತು ಮಿಲಿಟರಿ ಆಡಳಿತ’ ಘೋಷಣೆ ಮಾಡಿದ ಬಳಿಕ ಉಂಟಾಗಿರುವ ರಾಜಕೀಯ ಅರಾಜಕತೆ, ದಿನಕ್ಕೊಂದು ಬೆಳವಣಿಗೆಗೆ ಕಾರಣವಾಗುತ್ತಿದೆ.

ಆಡಳಿತ ವಿರೋಧಿ ಅಲೆಯನ್ನು ಹತ್ತಿಕ್ಕಲು ಅಧ್ಯಕ್ಷ ಯೂನ್ ಸುಕ್ ಯೋಲ್ ಅವರು ಡಿ.3 ಮಂಗಳವಾರ ಸಂಜೆ (ಭಾರತೀಯ ಕಾಲಮಾನ ಸಂಜೆ 6.57 ನಿಮಿಷ) ದೇಶದಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಘೋಷಿಸಿದರು.

ಅಧ್ಯಕ್ಷರ ನಡೆಯ ವಿರುದ್ದ ಸಂಪುಟ ಸಚಿವರೇ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಮತ್ತಷ್ಟು ರಾಜಕೀಯ ಬಿಕ್ಕಟ್ಟು ಉಂಟಾಗಲಿದೆ. ಜನಾಕ್ರೋಶ ಭುಗಿಲೇಲಲಿದೆ ಎಂದಿದ್ದರು. ಸಂಪುಟ ಸಚಿವರ ಒತ್ತಡ ಮತ್ತು ಜನಾಕ್ರೋಶಕ್ಕೆ ಮಣಿದ ಅಧ್ಯಕ್ಷ ಯೋಲ್ ತನ್ನ ಆದೇಶವನ್ನು ಕೇವಲ 6 ಗಂಟೆಗಳಲ್ಲೇ ಹಿಂಪಡೆದರು.

ಮಿಟಲಿರಿ ಆಡಳಿತ ಘೋಷಣೆ ಬಳಿ ಏನಾಯಿತು? 

ಮಿಲಿಟರಿ ಆಡಳಿತ ಘೋಷಿಸಿದ ಬೆನ್ನಲ್ಲೇ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸಭೆ ಸೇರಿದ ಸಂಸದರು, ಮಿಲಿಟರಿ ಆಡಳಿತ ತಿರಸ್ಕರಿಸುವುದರ ಪರವಾಗಿ ಮತ ಚಲಾಯಿಸಿದರು. ದೇಶದ ವಿವಿದೆಡೆಗಳಲ್ಲಿ ಜನರು ಬೀದಿಗಿಳಿದು ಹೋರಾಟ ಆರಂಭಿಸಿದರು. ಇದರಿಂದ ಬೆದರಿದ ಅಧ್ಯಕ್ಷ ಮಿಲಿಟರಿ ಆಡಳಿತವನ್ನು ವಾಪಸ್ ಪಡೆದರು.

ಅಧ್ಯಕ್ಷ ತುರ್ತು ಮಿಲಿಟರಿ ಆಡಳಿತ ಘೋಷಣೆ ಮಾಡಿದ ಬೆನ್ನಲ್ಲೇ ಭದ್ರತಾ ಪಡೆಗಳು ರಾಷ್ಟ್ರೀಯ ಅಸೆಂಬ್ಲಿಯ ಬಾಗಿಲನ್ನು ಸೀಲ್ ಮಾಡಿತು. ಅಸೆಂಬ್ಲಿ ಕಟ್ಟಡದ ಛಾವಣಿಯ ಮೇಲೆ ಹೆಲಿಕಾಫ್ಟರ್ ಮೂಲಕ ಬಂದಿಳಿದ ಭದ್ರತಾ ಪಡೆಗಳು, ಸಂಸದರು ಅಸೆಂಬ್ಲಿ ಕಟ್ಟಡ ಪ್ರವೇಶಿಸದಂತೆ ತಡೆಯಲು ಪ್ರಯತ್ನಿಸಿತು. ಆದರೆ, ಸುಮಾರು 190 ಸಂಸದರು ಭದ್ರತಾ ಪಡೆಗಳನ್ನು ಬೇಧಿಸಿ ಅಸೆಂಬ್ಲಿ ಒಳಗೆ ಪ್ರವೇಶಿಸಿದರು. ತುರ್ತು ಮಿಲಿಟರಿ ಆಡಳಿತ ಅಥವಾ ಸಮರ ಕಾನೂನು ತೆಗೆದು ಹಾಕಲು ಸರ್ವಾನುಮತದಿಂದ ಮತ ಚಲಾಯಿಸಿದರು.

ಅಸೆಂಬ್ಲಿ ಒಳಗೆ ಅಧ್ಯಕ್ಷರ ನಿರ್ಧಾರದ ವಿರುದ್ದ ಸಂಸದರು ಮತ ಚಲಾಯಿಸಿದರೆ, ಹೊರಗಡೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಅಧ್ಯಕ್ಷರ ಬಂಧನಕ್ಕೆ ಒತ್ತಾಯಿಸಿದರು.

ಜನರ ಆಕ್ರೋಶಕ್ಕೆ ಮಣಿದು ತನ್ನ ಆದೇಶವನ್ನು ಹಿಂಪಡೆದ ಬಳಿಕ ದೇಶವನ್ನು ಉದ್ದೇಶಿಸಿ ಟೆಲಿವಿಷನ್‌ನಲ್ಲಿ ಮಾತನಾಡಿದ ಅಧ್ಯಕ್ಷ ಯೋಲ್, “ಅಸೆಂಬ್ಲಿಯಲ್ಲಿ ತುರ್ತು ಮಿಲಿಟರಿ ಆಡಳಿತವನ್ನು ಹಿಂಪಡೆಯುವಂತೆ ಮತ ಚಲಾಯಿಸಲಾಗಿದೆ. ಆದ್ದರಿಂದ ನಾವು ಆದೇಶವನ್ನು ಹಿಂಪಡೆಯುತ್ತಿದ್ದೇವೆ” ಎಂದರು.

ದಕ್ಷಿಣ ಕೊರಿಯಾದ ಸಂವಿಧಾನದ ಪ್ರಕಾರ, ಮಿಲಿಟರಿ ಆಡಳಿತ ಅಥವಾ ಸಮರ ಕಾನೂನು ಜಾರಿ ಆದೇಶದ ವಿರುದ್ದ ರಾಷ್ಟ್ರೀಯ ಅಸೆಂಬ್ಲಿ ಬಹುಮತದೊಂದಿಗೆ ಮತ ಚಲಾಯಿಸಿದರೆ, ಅದನ್ನು ಗೌರವಿಸಿ ಆದೇಶ ವಾಪಸ್ ಪಡೆಯಬೇಕಿದೆ.

ಅಧ್ಯಕ್ಷರ ಪದಚ್ಯುತಿಗೆ ವಾಗ್ದಂಡನೆ ಗೊತ್ತುವಳಿ 

ವಿಪಕ್ಷಗಳನ್ನು ಹತ್ತಿಕ್ಕಲು ಮಿಲಿಟರಿ ಆಡಳಿತ ಹೇರಲು ವಿಫಲ ಯತ್ನ ನಡೆಸಿದ್ದ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಪ್ರತಿಪಕ್ಷಗಳು ವಾಗ್ದಂಡನೆ ಗೊತ್ತುವಳಿ ಮಂಡಿಸಿತ್ತು. ಇದು ಸಂಸತ್ತಿನಲ್ಲಿ ಶುಕ್ರವಾರ (ಡಿ.6) ಮತಕ್ಕೆ ಬಂತು. ಆದರೆ, ಸೂಕ್ತ ಬೆಂಬಲ ದೊರೆಯದ ಹಿನ್ನೆಲೆ ವಿಫಲವಾಯಿತು.

ಅಸೆಂಬ್ಲಿಯಲ್ಲಿ ಒಟ್ಟು 195 ಸದಸ್ಯರು ಮತ ಚಲಾಯಿಸಿದ್ದಾರೆ. ಆದರೆ, ಮತ ಚಲಾಯಿಸಿದ ಸದಸ್ಯರ ಸಂಖ್ಯೆಯು ಒಟ್ಟು ಸದಸ್ಯರ ಮೂರನೇ ಎರಡರಷ್ಟು ಬಹುಮತವನ್ನು ತಲುಪಲಿಲ್ಲ. ಆದ್ದರಿಂದ ಈ ವಿಷಯದ ಮೇಲಿನ ಮತವು ಮಾನ್ಯವಾಗಿಲ್ಲ ಎಂದು ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್ ವೂ ವೊನ್-ಶಿಕ್ ಹೇಳಿದ್ದಾರೆ.

300 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಮೂರನೇ ಎರಡರಷ್ಟು ಅಂದರೆ 200 ಮತಗಳ ಅಗತ್ಯವಿತ್ತು. ಸದನದಲ್ಲಿ ವಿಪಕ್ಷಗಳು 192 ಸದಸ್ಯರನ್ನು ಹೊಂದಿದ್ದು, ಆಡಳಿತಾರೂಢ ಮೈತ್ರಿಕೂಟದ ಮೂವರು ನಿರ್ಣಯದ ಪರ ಮತ ಹಾಕಿದ್ದರು. ಅಧ್ಯಕ್ಷ ಯೂನ್ ಅವರ ಪೀಪಲ್ ಪವರ್ ಪಾರ್ಟಿ(ಪಿಪಿಪಿ)ಯ ಸದಸ್ಯರು ಮತದಾನವನ್ನು ಬಹಿಷ್ಕರಿಸಿದ್ದರು.

ಅಧ್ಯಕ್ಷರ ವಿರುದ್ಧ ಮತ್ತೊಂದು ವಾಗ್ದಂಡನೆ ಗೊತ್ತುವಳಿ ಮಂಡಿಸಲು ವಿಪಕ್ಷಗಳಿಗೆ ಡಿಸೆಂಬರ್ 11ರ ಬಳಿಕವಷ್ಟೇ ಅವಕಾಶವಿತ್ತು. ಹಾಗಾಗಿ, ಮುಂದಿನ ಶನಿವಾರ (ಡಿ.15) ಪದಚ್ಯುತಿಗೆ ಆಗ್ರಹಿಸಿ ಮತ್ತೊಂದು ವಾಗ್ದಂಡನೆ ಗೊತ್ತುವಳಿ ಮಂಡಿಸುವ ಸಾಧ್ಯತೆ ಇದೆ.

ಕ್ಷಮೆ ಯಾಚಿಸಿದ ಅಧ್ಯಕ್ಷ ಯೋಲ್

ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಘೋಷಿಸಿದ್ದ ಅಧ್ಯಕ್ಷ ಯೂನ್ ಸುಕ್ ಯೋಲ್, ದೇಶದ ಜನರ ಕ್ಷಮೆ ಯಾಚಿಸಿದ್ದಾರೆ. ಸಾರ್ವಜನಿಕವಾಗಿ ಗದ್ದಲ ಸೃಷ್ಟಿಯಾಗುವಂತೆ ಆದೇಶ ಹೊರಡಿಸಿದ್ದಕಾಗಿ ಕ್ಷಮೆ ಕೋರುತ್ತಿರುವುದಾಗಿ ದೂರದರ್ಶನದ ಭಾಷಣದಲ್ಲಿ ಅವರು ಶನಿವಾರ (ಡಿ.7) ಹೇಳಿದ್ದಾರೆ. ಸೇನಾ ಆಡಳಿತ ಜಾರಿಯಾಗುವುದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಯೋಲ್ ವಿರುದ್ದ ತನಿಖೆ 

ದೇಶದಲ್ಲಿ ಮಿಲಿಟರಿ ಆಡಳಿತ ಹೇರಿಕೆ ಮಾಡಲು ವಿಫಲ ಯತ್ನ ನಡೆಸಿದ್ದ ಅಧ್ಯಕ್ಷ ಯೂನ್ ಸುಕ್ ಯೋಲ್, ಆಂತರಿಕ ಇಲಾಖೆ ಸಚಿವ ಮತ್ತು ರಕ್ಷಣಾ ಇಲಾಖೆಯ ಮಾಜಿ ಸಚಿವರ ವಿರುದ್ಧ ದಕ್ಷಿಣ ಕೊರಿಯಾ ಪ್ರಾಸಿಕ್ಯೂಟರ್‌ಗಳು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಮಂಗಳವಾರ (ಡಿ.10) ಯೋಲ್ ಅವರ ಕಚೇರಿಗಳಿಗೆ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಯೋಲ್ ಅವರ ವಿದೇಶ ಪ್ರಯಾಣಕ್ಕೆ ನಿರ್ಬಂಧ ವಿಧಿಸಲಾಗಿದೆ.

ರಕ್ಷಣಾ ಸಚಿವ ರಾಜೀನಾಮೆ

ಏಕಾಏಕಿ ತುರ್ತು ಮಿಲಿಟರಿ ಆಡಳಿತ ಹೇರಿದ ಅಧ್ಯಕ್ಷ ಯೋನ್ ಸುಕ್ ಯೋಲ್ ಅವರ ನಡೆ ಖಂಡಿಸಿ ರಕ್ಷಣಾ ಸಚಿವ ಕಿಮ್ ಯೋಂಗ್-ಹ್ಯುನ್ ಬುಧವಾರ (ಡಿ.4) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಅವರನ್ನು ಬಂಧಿಸಿರುವ ಪೊಲೀಸರು ಕಸ್ಟಡಿಯಲ್ಲಿಟ್ಟಿದ್ದಾರೆ. ಅಲ್ಲಿ ಕಿಮ್ ಯೋಂಗ್-ಹ್ಯುನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಕಿಮ್ ಯೋಂಗ್-ಹ್ಯುನ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನೂತನ ರಕ್ಷಣಾ ಸಚಿವರಾಗಿ ಸೌದಿ ಅರೇಬಿಯಾದಲ್ಲಿ ದೇಶದ ರಾಯಭಾರಿಯಾಗಿದ್ದ ಚೋಯ್ ಬ್ಯುಂಗ್-ಹ್ಯುಕ್ ಅವರನ್ನು ಅಧ್ಯಕ್ಷ ಯೋಲ್ ನೇಮಿಸಿದ್ದಾರೆ.

ಏಪ್ರಿಲ್ ಅಥವಾ ಮೇನಲ್ಲಿ ಚುನಾವಣೆ ಸಾಧ್ಯತೆ

ಮಿಲಿಟರಿ ಆಡಳಿತ ಹೇರಲು ವಿಫಲ ಯತ್ನ ನಡೆಸಿ ದೇಶದ ಜನರ ಕೆಂಗಣ್ಣಿಗೆ ಗುರಿಯಾಗಿರುವ ಅಧ್ಯಕ್ಷ
ಯೂನ್ ಸುಕ್ ಯೋಲ್ ಅವರು ಫೆಬ್ರವರಿಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಏಪ್ರಿಲ್-ಮೇನಲ್ಲಿ ದೇಶದಲ್ಲಿ ಚುನಾವಣೆ ನಡೆಯಬಹುದು ಎಂದು ದಕ್ಷಿಣ ಕೊರಿಯಾದ ಆಡಳಿತ ಪಕ್ಷ ಪೀಪಲ್ ಪವರ್ ಪಾರ್ಟಿ (ಪಿಪಿಪಿ) ಹೇಳಿದೆ. ಆದರೆ, ಅದಕ್ಕೂ ಮುನ್ನ ಸಂಸತ್ತಿನಲ್ಲಿ ಅಧ್ಯಕ್ಷರ ಪದಚ್ಯುತಿಗೆ ಚುನಾವಣೆ ನಡೆದರೆ ಯೋಲ್ ತನ್ನ ಸ್ಥಾನ ಕಳೆದುಕೊಳ್ಳಬಹುದು.

ಅಸೆಂಬ್ಲಿ ಮುಂದೆ ಬೃಹತ್ ಪ್ರತಿಭಟನೆ

ಮಿಲಿಟರಿ ಆಡಳಿತದ ವಿಫಲ ಯತ್ನದ ಬಳಿಕ ಅಧ್ಯಕ್ಷ ಯೋನ್ ಸುಕ್ ಯೋಲ್ ರಾಜೀನಾಮೆಗೆ ಆಗ್ರಹಿಸಿ ದೇಶದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಮಂಗಳವಾರ (ಡಿ.10) ರಾಜಧಾನಿ ಸಿಯೋಲ್‌ನಲ್ಲಿ ರಾಷ್ಟ್ರೀಯ ಅಸೆಂಬ್ಲಿ ಮುಂದೆ ಜಮಾಯಿಸಿದ ಸಾವಿರಾರು ಜನರು ಕೈಯ್ಯಲ್ಲಿ ಕ್ಯಾಂಡಲ್ ಹಿಡಿದು ಪ್ರತಿಭಟಿಸಿದರು. ಯೋಲ್ ಪದಚ್ಯುತಿಗೆ ಆಗ್ರಹಿಸಿದರು. ಈ ಪ್ರತಿಭಟನೆಯಲ್ಲಿ ಸುಮಾರು 40 ಸಾವಿರ ಜನರು ಭಾಗವಹಿಸಿದ್ದಾರೆ ಎಂದು ಅದರ ಸಂಘಟಕರು ತಿಳಿಸಿದ್ದಾರೆ.

ಪ್ರಸ್ತುತ ದಕ್ಷಿಣ ಕೊರಿಯಾದಲ್ಲಿ ಯೋನ್ ಸುಕ್ ಯೋಲ್ ವಿರುದ್ದ ಜನಾಕ್ರೋಶವಿದೆ. ರಾಜೀನಾಮೆಗೆ ಒತ್ತಾಯಗಳು ಹೆಚ್ಚಾಗುತ್ತಿದೆ. ದೇಶದ ಅಲ್ಲಲ್ಲಿ ಪ್ರತಿಭಟನೆಗಳು ಹೆಚ್ಚಾಗುತ್ತಿದೆ. ದಿನಕ್ಕೊಬ್ಬರು ಸಂಪುಟ ಸಚಿವರು ರಾಜೀನಾಮೆ ಕೊಡುತ್ತಿದ್ದಾರೆ. ಅಧ್ಯಕ್ಷ ತುರ್ತು ಪರಿಸ್ಥಿತಿ ಹೇರಲು ಯತ್ನಿಸಿ ತಪ್ಪು ಮಾಡಿದರು ಎಂಬ ಅಸಮಾಧಾನ ಅವರ ಸ್ವಪಕ್ಷದಲ್ಲೇ ಇದೆ.

1980ರ ದಶಕದ ಉತ್ತರಾರ್ಧದಲ್ಲಿ ದೇಶದಲ್ಲಿ ಮಿಲಿಟರಿ ಸರ್ವಾಧಿಕಾರವು ಕೊನೆಗೊಂಡ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷರು ಇದೇ ಮೊದಲ ಬಾರಿಗೆ ‘ಮಿಲಿಟರಿ ಆಡಳಿತ ಜಾರಿ’ ಮಾಡಿ ಆದೇಶ ಹೊರಡಿಸಿದ್ದರು. ಉತ್ತರ ಕೊರಿಯಾದ ಕಮ್ಯುನಿಸ್ಟ್ ಪಡೆಗಳ ಬೆದರಿಕೆಗಳಿಂದ ದಕ್ಷಿಣ ಕೊರಿಯಾವನ್ನು ರಕ್ಷಿಸಲು ಮತ್ತು ಜನರ ಸ್ವಾತಂತ್ರ್ಯ ಮತ್ತು ಸಂತೋಷವನ್ನು ಲೂಟಿ ಮಾಡುವ ರಾಜ್ಯ ವಿರೋಧಿ ಅಂಶಗಳನ್ನು ನಿರ್ಮೂಲನೆ ಮಾಡಲು ತುರ್ತು ಪರಿಸ್ಥಿತಿ ಘೋಷಿಸುತ್ತಿದ್ದೇವೆ ಎಂದು ಯೂನ್ ಸುಕ್ ಯೋಲ್ ತಮ್ಮ ಭಾಷಣದಲ್ಲಿ ಹೇಳಿದ್ದರು.

ದೇಶ ವಿರೋಧಿ ಕೃತ್ಯದ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸಲು ಉತ್ತರ ಕೊರಿಯಾ ಯತ್ನಿಸುತ್ತಿದೆ ಎಂದು ಸುಕ್‌ ಯೋಲ್‌ ಆರೋಪಿಸಿದ್ದರು. ದೇಶದ ಪರಿಸ್ಥಿತಿ ಅತ್ಯಂತ ಕ್ಲಿಷ್ಟಕರ ಸ್ಥಿತಿ ತಲುಪಿರುವುದರಿಂದ ಸಾಂವಿಧಾನಿಕ ಆದೇಶವನ್ನು ಪ್ರಕಟಿಸಲಾಗಿದೆ ಎಂದು ಟೆಲಿವಿಷನ್‌ ಮೂಲಕ ಅವರು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

ಇದನ್ನೂ ಓದಿ : ಸಿರಿಯಾದ ಹಂಗಾಮಿ ಪ್ರಧಾನಿಯಾಗಿ ಮೊಹಮ್ಮದ್ ಅಲ್ ಬಶೀರ್ ನೇಮಕ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂ: ರಂಜಾನ್ ಆಹಾರ ವ್ಯವಸ್ಥೆಗಾಗಿ ಮೀನು ಹಿಡಿಯುತ್ತಿದ್ದ ಮುಸ್ಲಿಂ ಸಹೋದರರ ಮೇಲೆ ಬಿಎಸ್‌ಎಫ್ ಗುಂಡಿನ ದಾಳಿ: ಗಂಭೀರ ಗಾಯ

ಅಸ್ಸಾಂನ ದಕ್ಷಿಣ ಸಲ್ಮಾರಾ–ಮಂಕಚಾರ್ ಜಿಲ್ಲೆಯ ಇಬ್ಬರು ಸಹೋದರರು ಭಾರತದ ಭೂಪ್ರದೇಶದೊಳಗಿನ ನದಿನೀರಿನಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಗುಂಡು ಹಾರಿಸಿ ಪ್ರಾಣಕ್ಕಾಗಿ ಹೋರಾಡುತ್ತಿದ್ದಾರೆ. ಈ ಘಟನೆ ಮಾರ್ಚ್ 8-9, 2026...

ಊನಾ ದಲಿತ ದೌರ್ಜನ್ಯ ಪ್ರಕರಣ: ಐವರು ದೋಷಿಗಳೆಂದು ತೀರ್ಪು ನೀಡಿದ ನ್ಯಾಯಾಲಯ; 37 ಆರೋಪಿಗಳು ಖುಲಾಸೆ

ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯ ಪ್ರಕರಣಗಳಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಗುಜರಾತ್‌ನ ಊನಾ ದಲಿತರ ಮೇಲೆ ಹಲ್ಲೆ ಪ್ರಕರಣದಲ್ಲಿ, ಗಿರ್ ಸೋಮನಾಥ್ ಜಿಲ್ಲೆಯ ವೆರಾವಲ್ ನ್ಯಾಯಾಲಯವು ಸೋಮವಾರ ತನ್ನ ತೀರ್ಪು ನೀಡಿದ್ದು,...

ರಾಜ್ಯಸಭೆ ಚುನಾವಣೆ : ಬಿಹಾರದ ಎಲ್ಲಾ ಐದು ಸ್ಥಾನಗಳು ಎನ್‌ಡಿಎ ಪಾಲು; ಒಡಿಶಾದ ಮೂರು ಸ್ಥಾನಗಳಲ್ಲಿ ಗೆಲುವು

ರಾಜ್ಯಸಭೆಯ 37 ಸ್ಥಾನಗಳಿಗೆ ಸೋಮವಾರ (ಮಾ.16) ನಡೆದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ 21 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಪೈಕಿ ಬಿಜೆಪಿ ಮಾತ್ರ 11 ಸ್ಥಾನಗಳನ್ನು ಪಡೆದಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಒಟ್ಟು 11 ಸ್ಥಾನಗಳನ್ನು...

ಅಫ್ಘಾನಿಸ್ತಾನದ ಆಸ್ಪತ್ರೆ ಮೇಲೆ ಪಾಕಿಸ್ತಾನದಿಂದ ವಾಯುದಾಳಿ ; ಕನಿಷ್ಠ 400 ಸಾವು : ವರದಿ

ರಾಜಧಾನಿ ಕಾಬೂಲ್‌ನಲ್ಲಿ ಮಾದಕ ವ್ಯಸನಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ಮೇಲೆ ಪಾಕಿಸ್ತಾನದ ಮಿಲಿಟರಿ ವಾಯು ದಾಳಿ ನಡೆಸಿದ್ದು, ಕನಿಷ್ಠ 400 ಜನರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನಿಸ್ತಾನ ಆರೋಪಿಸಿದೆ. ಅಲ್‌-ಜಝೀರಾ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಆರೋಪವನ್ನು...

‘ನನ್ನ ಮನೆ ಮೇಲೆ ದಾಳಿ ಮಾಡಿ… ಹೇಗೆ ಎದುರಿಸಬೇಕೆಂದು ಗೊತ್ತಿದೆ..’; ಬಿಜೆಪಿಗೆ ಮಮತಾ ಬ್ಯಾನರ್ಜಿ ಸವಾಲು

"ತಮ್ಮ ನಿವಾಸ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ನಾಯಕರ ನಿವಾಸವನ್ನು ಗುರಿಯಾಗಿಸಿಕೊಳ್ಳುವಂತೆ" ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಬಿಜೆಪಿಗೆ ಸವಾಲು ಹಾಕಿದರು. ರಾಜ್ಯದಲ್ಲಿ, ಟಿಎಂಸಿ ನಾಯಕರ ಮೇಲಿನ ದಾಳಿಗೆ...

ಬೆಂಗಳೂರು: ವಿಶೇಷ ಪೂಜೆ ಹೆಸರಿನಲ್ಲಿ ಐಟಿ ಅಧಿಕಾರಿಗೆ 35 ಲಕ್ಷ ವಂಚನೆ: 59 ವರ್ಷದ ‘ಗಿಳಿ ಶಾಸ್ತ್ರ’ ಹೇಳುವ ವ್ಯಕ್ತಿ ಬಂಧನ

ಬೆಂಗಳೂರು: ವಿಶೇಷ ಪೂಜೆ ಮಾಡುವುದಾಗಿ ಹೇಳಿಕೊಂಡು ಆದಾಯ ತೆರಿಗೆ ಅಧಿಕಾರಿಗೆ 35 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ 59 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಥೇಣಿಯ ಶೇಖರ್...

ಬಿಹಾರ| ರಾಜ್ಯಸಭಾ ಚುನಾವಣೆ ಮತದಾನದಿಂದ ಹೊರಗುಳಿದ ನಾಲ್ವರು ಶಾಸಕರು; ಮಹಾಘಟಬಂಧನ್‌ಗೆ ಹಿನ್ನಡೆ

ಸೋಮವಾರ ಸಂಜೆ 4 ಗಂಟೆಗೆ ಮುಕ್ತಾಯಗೊಂಡ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ವರು ಶಾಸಕರು ಮತದಾನದಿಂದ ಹೊರಗುಳಿಯುವ ಮೂಲಕ ಬಿಹಾರದ ಮಹಾಘಟಬಂಧನ್‌ಗೆ ಭಾರಿ ಹಿನ್ನಡೆಯಾಗಿದೆ. ಐದನೇ ಸ್ಥಾನಕ್ಕಾಗಿ ನಡೆಯುವ ಸ್ಪರ್ಧೆಯಲ್ಲಿ ವಿರೋಧ ಮೈತ್ರಿಕೂಟದ ನಿರೀಕ್ಷೆಗೆ ಭಾರಿ...

ರಾಜ್ಯಸಭೆಯಲ್ಲಿ LPG ಕೊರತೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ; ಪ್ರತಿಪಕ್ಷ ಅರಾಜಕತೆ ಸೃಷ್ಟಿಸಲು ಯತ್ನಿಸುತ್ತಿದೆ ಎಂದ ಸರ್ಕಾರ !

ನವದೆಹಲಿ: ರಾಜ್ಯಸಭೆಯಲ್ಲಿ ಸೋಮವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಎಲ್‌ಪಿಜಿ ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಅಡುಗೆ ಅನಿಲದ ಬಿಕ್ಕಟ್ಟು ಮತ್ತು ಕಾಳಸಂತೆಕೋರತನವನ್ನು ತಡೆಯಲು ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು...

ಬೆಂಗಳೂರು| ಹಣ ನೀಡಲು ನಿರಾಕರಿಸಿದ ವ್ಯಕ್ತಿಯನ್ನು ಮಕ್ಕಳ ಮುಂದೆಯೇ ಥಳಿಸಿ ಕೊಂದ ಗುಂಪು

ಹಣ ನೀಡಲು ನಿರಾಕರಿಸಿದ ತಂದೆಯನ್ನು ಮಕ್ಕಳ ಮುಂದೆಯೇ ಗುಂಪೊಂದು ಥಳಿಸಿ ಕೊಂದಿರುವ ಘಟನೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿಲ್ಸನ್ ಗಾರ್ಡನ್‌ನ ಬಡಾ ಮಕನ್ ರಸ್ತೆ ಬಳಿ ರಶೀದ್ ಪಾಷಾ ಎಂದು...

ಅಬಕಾರಿ ನೀತಿ ಪ್ರಕರಣದಲ್ಲಿ ಖುಲಾಸೆ ಪ್ರಶ್ನಿಸಿ ಸಿಬಿಐ ಅರ್ಜಿ; ಪ್ರತಿಕ್ರಿಯಿಸಲು ಕೇಜ್ರಿವಾಲ್-ಸಿಸೋಡಿಯಾಗೆ ಸಮಯ ನೀಡಿದ ದೆಹಲಿ ಹೈಕೋರ್ಟ್

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರ ತಮ್ಮ ಬಿಡುಗಡೆಯನ್ನು ಪ್ರಶ್ನಿಸಿ ಸಿಬಿಐ ಅರ್ಜಿಗೆ ಪ್ರತಿಕ್ರಿಯೆಗಳನ್ನು ಸಲ್ಲಿಸಲು ದೆಹಲಿ...