Homeಅಂಕಣಗಳುಆರ್ ಬಿ ಐ ಯ ಅಂತರಂಗವನ್ನರಸುತ್ತ...

ಆರ್ ಬಿ ಐ ಯ ಅಂತರಂಗವನ್ನರಸುತ್ತ…

- Advertisement -
- Advertisement -

ಭಾರತೀಯ ರಿಸರ್ವ್ ಬ್ಯಾಂಕಿನ 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರ ಅವರು ಬೆಳ್ಳುಳ್ಳಿ ದರ ರೂ 500 ರ  ಗಡಿ ದಾಟುತ್ತಿರುವಂತಹ ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ. ಅಂಕೆಗೆ ಸಿಗದ ಹಣದುಬ್ಬರದ ದಿನಮಾನದಲ್ಲಿ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಸಂಜಯ್ ಮಲ್ಹೋತ್ರ  ಆರ್ಥಿಕ ಸ್ಥಿರತೆಯ ಜಪ ಮಾಡುತ್ತಾ ಜನರ ನಂಬಿಕೆ ಕಾಪಾಡಲು ಬದ್ಧ ಎಂದಿದ್ದಾರೆ.

ಅಧಿಕಾರ ವಹಿಸಿಕೊಂಡ ನಂತರ ಮಾಧ್ಯಮದವರೊಂದಿಗೆ  ಮಾತನಾಡುತ್ತಾ ದೇಶದ ಜನರು ಏನನ್ನು ಎದುರು ನೋಡುತ್ತಿದ್ದಾರೆ ಎಂಬ ಸ್ಪಷ್ಟ ಅರಿವಿದೆ. ಅವರ ನಂಬಿಕೆ ಬಗ್ಗೆಯೂ ತಿಳಿದಿದೆ. ಯಾವುದು ಆರ್ಥಿಕ ಬೆಳವಣಿಗೆ  ಯಾವುದು ಸ್ಥಿರ ಹಾಗೂ ನಿಶ್ಚಿತ ನೀತಿ ಎನ್ನುವ ತಿಳುವಳಿಕೆ ಇದೆ. ಈ ಗುರಿ ಸಾಧನೆಯ ಹಾದಿಯಲ್ಲಿ ಜನರ ಹಿತಾಸಕ್ತಿ ಕಾಪಾಡಲು ಒತ್ತು ನೀಡುವುದಾಗಿ ಹೇಳಿಕೊಂಡಿದ್ದಾರೆ.

ಸುಮಾರು 33 ವರ್ಷಗಳ ಹಣಕಾಸು ಇಲಾಖೆಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಇರುವ ವಿಜಯ ಮಲೋಹೋತ್ರ ಅವರು ರಾಜಸ್ಥಾನ್ ಕೇಡರ್ ನ 1990 ಬ್ಯಾಚ್ಐಎಎಸ್ ಅಧಿಕಾರಿ. ಅವರು ಕಾನ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಯಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಇಂಜಿನಿಯರಿಂಗ್ ಪದವಿ ಮತ್ತು ಅಮೆರಿಕಾದ ಪ್ರಿನ್ಸ್ ಟೌನ್ ವಿಶ್ವವಿದ್ಯಾನಿಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರು ರಾಜಸ್ಥಾನ್ದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಂತರ ಕಂದಾಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತದಲ್ಲಿ ಇಂದು ಜಾರಿಯಾಗಿರುವ ಹೊಸ ತೆರಿಗೆ ನೀತಿ ಜಿಎಸ್‌ಟಿಯ ಮಾಸ್ಟರ್ ಮೈಂಡ್ ಇವರೇ. ಭಾರತದಲ್ಲಿನ  ನೇರ ಆಗ ಪರೋಕ್ಷ ತೆರಿಗೆಗಳಿಗೆ ಸಂಬಂಧಿಸಿದಂತೆ  ಹೊಸ ತೆರಿಗೆ ನೀತಿ ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ವಿಜಯ್ ಮಲ್ಹೋತ್ರರಿಗೆ  ಆರ್ಥಿಕ ವಿಚಾರಕ್ಕೆ ಸಂಬಂಧ ಪಟ್ಟಂತೆ ಸಾಕಷ್ಟು ಅನುಭವ  ಇದ್ದರೂ ನರೇಂದ್ರ ಮೋದಿಯಂತಹ ಸರ್ವಾಧಿಕಾರಿ ಮನೋಭಾವದ ವ್ಯಕ್ತಿಯೊಬ್ಬ ಪ್ರದಾನಿಯಾಗಿರುವ ಹಾಗು ದೇಶದ ಎಲ್ಲ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯನ್ನು ಸರ್ವನಾಶ ಮಾಡಿರುವ ದೇಶದ ಸಂದರ್ಭದಲ್ಲಿ ಹೊಸ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡು ಮೋದಿ  ಅವರ ಅಣತಿಯಂತೆ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದ್ದರಿಂದ ಆರ್ಥಿಕ ಸ್ಥಿರತೆಯ ಕುರಿತು ಬಾಲಿಸತನದಿಂದ ಕೂಡಿದ ಜಪ ಮಾಡುತ್ತಿದ್ದಾರೆ ಹಾಗು ಹೇಳಿಕೆ ನೀಡುತ್ತಿದ್ದಾರೆ.  ಹೀಗೆ ಆರ್ಥಿಕ ಸ್ಥಿರತೆ ಕುರಿತು ಜಪಿಸುತ್ತಿರುವ ಹೊಸ ಗವರ್ನರ್ ಗೆ  ಅಥವಾ ಅವರ ನೇತೃತ್ವದ  ಆರ್ ಬಿ ಐಗೆ  ಇಂದು ಬೆಳ್ಳುಳ್ಳಿಯ ಬೆಲೆ ರೂ.500ರ ಗಡಿ ದಾಟುತ್ತಿರುವಾಗ ಇದನ್ನು ತಡೆಯಲು ಸಾಧ್ಯವಾಗಬಹುದಾದ ಯಾವುದಾದರೂ ಮಾರ್ಗೋಪಾಯಗಳನ್ನು ರೂಪಿಸಲು ಸಾದ್ಯ ಇದೆಯೇ….. ಅಥವಾ ಬೆಲೆಯೇರಿಕೆಯನ್ನು ನಿಯಂತ್ರಿಸಲು  ಸಾದ್ಯವಿದೆಯೇ….?

ಹವಾನಿಯಂತ್ರಿತ ಕೊಠಡಿಯೊಳಗೆ ಕುಳಿತು ನೀಡಬಹುದಾದ ನಿರ್ದೇಶನಗಳು, ಸಲಹೆಗಳು ಈ ರೀತಿಯ ಬೆಲೆಯೇರಿಕೆಯನ್ನು ತಡೆಯಬಲ್ಲುದೇ….!?  ಈ ಕುರಿತು ಅವಲೋಕನ ನಡೆಸಿದಾಗ  ಕೆಲವೊಂದು ಸತ್ಯ  ಗೋಚರಿಸುತ್ತದೆ.  ಆರ್‌ಬಿಐಯ ಬಳಿ ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಇರುವ  ಸೂತ್ರ ರೆಪೋ ದರವನ್ನು ಏರಿಸುವ ಇಳಿಸುವ ಹಾಗೂ ನಗದು ಮೀಸಲು ಅನುಪಾತವನ್ನು (CRR- Cash Reserve Ratio-ನಗದು ಮೀಸಲು ಅನುಪಾತ. ಮೇಲ್ನೋಟಕ್ಕೆ ಇವರೆಡೂ ಬೇರೆ ಬೇರೆ ಎನಿಸಿದರೂ ಮೂಲದಲ್ಲಿ ಒಂದೇ ಆಗಿದೆ. ರೇಪೋ ಜನರನ್ನು ಸಾಲ ತೆಗೆದುಕೊಳ್ಳದಂತೆ ತಡೆದು ನಿಲ್ಲಿಸಿದರೆ  CRR ಹೆಚ್ಚಳ ಹೆಚ್ಚು ಸಾಲ ನೀಡದಂತೆ ಬ್ಯಾಂಕ್ ಗಳ ಕೈ ಕಟ್ಟಿ ಹಾಕುತ್ತದೆ )  ಹೆಚ್ಚಿಸುವ -ತಗ್ಗಿಸುವ ಕೆಲಸ ಮಾಡುವುದು. ಇದನ್ನು ಹೊರತುಪಡಿಸಿದರೆ ಇನ್ನೊಂದು ಯೋಜನೆ ನಮಗೆ ಕಾಣುತ್ತಿಲ್ಲ. ಹಣದುಬ್ಬರ ಉಂಟಾದಾಗ ಆರ್‌ಬಿಐ  ರೆಪೋ ದರ ಏರಿಸುತ್ತದೆ . ರೆಪೋ ದರವನ್ನು ಏರಿಸಿದರೆ ಬ್ಯಾಂಕ್ ಸಾಲಗಳ ಮೇಲಿನ ಬಡ್ಡಿ ಹೆಚ್ಚಾಗುತ್ತದೆಯಂತೆ. ಆರ್ ಬಿ ಐ ತನ್ನ ಈ ಕ್ರಮಕ್ಕೆ ಬ್ಯಾಂಕ್ ” ಸಾಲಗಳ ಮೇಲಿನ ಬಡ್ಡಿ ಕಡಿಮೆಯಾದರೆ ಜನತೆ ಹೆಚ್ಚು ಹೆಚ್ಚು ಸಾಲ ಪಡೆದುಕೊಳ್ಳಲು ಮುಂದಾಗುತ್ತಾರೆ ಮತ್ತು ಅದರಿಂದ ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ ಹಾಗೂ ಇದರಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದರೆ ಗ್ರಾಹಕ ವಸ್ತುಗಳ ಬೆಲೆ ಏರಿಕೆಯಾಗುತ್ತದೆ. ಇದೇ ಹಣದುಬ್ಬರ. ಬಡ್ಡಿದರ ಹೆಚ್ಚಾದರೆ ಜನತೆಗೆ ಸಾಲ ಪಡೆಯುವ ಆಸಕ್ತಿ ಕುಂದುತ್ತದೆ ಹಾಗೂ ಮಾರುಕಟ್ಟೆಯಲ್ಲಿ ಹಣದ ಹರಿವು ಕಡಿಮೆಯಾಗುತ್ತದೆ  ಮತ್ತು ಇದರಿಂದ ಗ್ರಾಹಕವಸ್ತುಗಳ ಬೇಡಿಕೆ ತಗ್ಗುತ್ತದೆ. ಈ ಮೂಲಕ ಬೆಲೆ ಏರಿಕೆಯನ್ನು ತಡೆಗಟ್ಟಬಹುದು  ಎಂಬ ಸಿದ್ದ ಉತ್ತರ ನೀಡುತ್ತದೆ.

ವಾಸ್ತವದಲ್ಲಿ  ಹಣದುಬ್ಬರವೆಂದರೆ ಬೆಲೆ ಏರಿಕೆ ಎಂಬುದು ನಿಜ. ಆದರೆ ಆರ್‌ಬಿಐ ಹೇಳುವಂತೆ ಹೆಚ್ಚಾಗುವ ಹಣದ ಹರಿವಿನ ಕಾರಣದಿಂದ ಹೆಚ್ಚುವ ಬೇಡಿಕೆ ಮಾತ್ರ ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂಬುದು ಶುದ್ಧ ಸುಳ್ಳು. ಹಣದುಬ್ಬರ ಉಂಟಾಗಲು ಮಾರುಕಟ್ಟೆಯಲ್ಲಿ ಹಣದ ಹೆಚ್ಚುವರಿ ಹರಿವು ಮಾತ್ರ ಕಾರಣವಾಗಲು ಸಾಧ್ಯವಿಲ್ಲ. ಬೇಡಿಕೆಗೆ ತಕ್ಕಂತೆ ವಸ್ತುಗಳ ಪೂರೈಕೆಯಾಗದಿದ್ದರೂ ವಸ್ತುಗಳ ಬೆಲೆ ಏರಿಕೆ ಕಂಡು ಬರುತ್ತದೆ ಹಾಗೂ ಈ ಮೂಲಕ ಹಣದುಬ್ಬರ ಉಂಟಾಗುತ್ತದೆ. ಉದಾಹರಣೆಗೆ ಬೆಳ್ಳುಳ್ಳಿ  ದರ ರೂ ಐದುನೂರು ದಾಟುತ್ತಿರುವುದು ಬೇಡಿಕೆಯಷ್ಟು ಬೆಳ್ಳುಳ್ಳಿ ಲಭ್ಯತೆ ಇರದಿರುವುದರರಿಂದ. ಅಕಾಲಿಕ ಅಥವಾ ಹೆಚ್ಚಾದ ಮಳೆಯಿಂದ ಬೆಳ್ಳುಳ್ಳಿ ಇಳುವರಿ ಕುಸಿತಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ . ಆರ್ ಬಿ ಐ ಯ ರೆಪೋ ದರ ಏರಿಸುವಂತಹ ಕಾರ್ಯಗಳು ಕಾರ್ಯಸಾಧುವಾಗುತ್ತದೆಯೇ…..?. ಕೇವಲ ರೆಪೋ ದರ ಏರಿಸುವ ಅಥವಾ ಇಳಿಸುವ  ಕ್ರಮ ಕೈಗೊಂಡ ಮಾತ್ರಕ್ಕೆ ಎಲ್ಲವೂ ಸರಿ ಆಗುವುದಿಲ್ಲ.  ಹಾಗೆ ಆಗುವುದಿದ್ದರೆ ಟೊಮ್ಯಾಟೊ, ಮೆಣಸಿನ ಕಾಯಿ ಬೆಳೆಯುವಂತಹ  ರೈತರು ತಮ್ಮ ಬೆಳೆಗೆ ಸೂಕ್ತ ಬೆಲೆ ಸಿಗಧಿಧ್ಧಾಗ ತಮ್ಮ ಬೆಳೆಯನ್ನು ರಸ್ತೆಗಳಲ್ಲಿ ಚಲ್ಲಿ ಹೋಗುವಂತಹ ಪ್ರಸಂಗ ಬರುತ್ತಿರಲಿಲ್ಲ. ಇವುಗಳನ್ನು ಅರ್ಥಮಾಡಿಕೊಂಡರೆ ಆರ್‌ಬಿಐ ಸಮರ್ಥನೆ ಬರಿ ಬೂಸಿ ಅಷ್ಟೇ ಎನಿಸುವುದಿಲ್ಲವೇ?

ಮೇಲಾಗಿ ಆರ್ ಬಿ ಐ ಒಂದು ಬಂಡವಾಳಶಾಹಿ ನಿರ್ದೇಶಿತ ಸಂಸ್ಥೆ. ಅದರ ಕರ್ತವ್ಯಗಳು ಬಂಡವಾಳ ವ್ಯವಸ್ಥೆಯ ಬೆಳವಣಿಗೆಗೆ ಬೇಕಾದ ಅನುಕೂಲಕರ ವಾತಾವರಣ ನಿರ್ಮಿಸುವುದಾಗಿದೆ. ಕೇಂದ್ರದ ಬಂಡವಾಳಶಾಹಿಪರ ನೀತಿ ನಿಯಮಾವಳಿಗಳನ್ನು ಶಿರಸಾವಹಿಸಿ ಅನುಷ್ಠಾನಕ್ಕೆ ತರುವುದಷ್ಟೇ ಅದರ ಕರ್ತವ್ಯವಾಗಿದೆ. ಸದ್ಯದ ಚಿಲ್ಲರೆ ವಿಚಾರವನ್ನೇ ತೆಗೆದುಕೊಳ್ಳಿ. ಮಾರುಕಟ್ಟೆಯಲ್ಲಿ ಚಿಲ್ಲರೆ ಹಣದ ಅಭಾವ ತೀವ್ರವಾಗಿದೆ.  ಇಂತಹ ಸಂದರ್ಭದಲ್ಲಿ ಸಮರ್ಪಕ ಚಲಾವಣೆಗೆ ಬೇಕಾಗುವಷ್ಟು ಚಿಲ್ಲರೆ ಹಣ ಮುದ್ರಿಸಿ ಕೊರತೆ ನೀಗಲು ಗಮನ ಹರಿಸದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಚಿಲ್ಲರೆ ಅಭಾವವನ್ನು ಖುದ್ದು ಆರ್‌ಬಿಐಯೇ  ಮಾಡುತ್ತಿದೆ. ಈ ಮೂಲಕ  ಜನತೆ ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಡಿಜಿಟಲ್ ಹಣ ವರ್ಗಾವಣೆಗೆ ತೊಡಗಿಸಿಕೊಳ್ಳುತ್ತಿದ್ದಾರೆ. ಇದನ್ನು ನಾವು ಡಿಜಿಟಲ್ ಹಣ ವರ್ಗಾವಣೆಗೆ ಜನತೆಯನ್ನು ತೊಡಗುವಂತೆ ಮಾಡುತ್ತಿರುವ ಬಲತ್ಕಾರ ಎಂದು ವ್ಯಾಖ್ಯಾನಿಸದೆ ಇರಲು ಸಾದ್ಯವಿದೆಯೆ….? .

ಡಿಜಿಟಲ್ ಹಣ ವರ್ಗಾವಣೆ ಎಂಬುದು ಒಂದು ಸಾಮ್ರಾಜ್ಯವಾದಿ ಮಾರುಕಟ್ಟೆ, ಭಾರತದ ಈ ಅಗಾಧ ಜನ ಸಮೂಹ ನಗದು ಚಲಾವಣೆಯನ್ನು ತೊರೆದು ಡಿಜಿಟಲ್ ಹಣ ವರ್ಗಾವಣೆಗೆ ತೊಡಗಿಸಿಕೊಂಡರೆ ಅದೊಂದು ಅಗಾದವಾದ ಮಾರುಕಟ್ಟೆಯನ್ನು ನಿರ್ಮಿಸುತ್ತದೆ. ಹೀಗೆ ಜನತೆಯನ್ನು  ಗ್ರಾಹಕರನ್ನಾಗಿ ಮಾಡುವ ಹೊಣೆಗಾರಿಕೆಯನ್ನು ಆರ್ ಬಿ ಐ ಯೇ ಖುದ್ದು ತಾನೇ ಹೊತ್ತುಕೊಂಡಿದೆ. ಸ್ವಾವಲಂಬಿ ಜೀವಿಗಳು ತಮ್ಮ ನಿತ್ಯ ಬದುಕಿನ ಅವಶ್ಯಕತೆಗಾಗಿ ಮಾರುಕಟ್ಟೆಯನ್ನು ಅವಲಂಬಿಸಿ ಗ್ರಾಹಕರಾಗಿ ರೂಪುಗೊಂಡರೆಂದರೆ ಅದು ಹಣದುಬ್ಬರಕ್ಕೆ ಮುನ್ನುಡಿ ಬರೆದಂತೆ ಆಗುತ್ತದೆ. ಹಣದುಬ್ಬರದ ಮೂಲ ಪೀಠಿಕೆ ಅಲ್ಲಿಂದಲೇ ಆರಂಭಗೊಳ್ಳುತ್ತದೆ. ಹಾಗಾಗಿ ಹಣದುಬ್ಬರ ತರುವ ಮೇಲುಸ್ತುವಾರಿಯನ್ನು ಖುದ್ದು ಆರ್ ಬಿ ಐಯೇ ಹೊತ್ತುಕೊಂಡಿದೆ.

ಹಾಗಿದ್ದರೆ ರೆಪೋ ದರ ಏರಿಸುವ ಇಳಿಸುವ ಆರ್ ಬಿಐನ ಕ್ರಮ ಪ್ರಸ್ತುತ ಆರ್ಥಿಕತೆಯ ಮೇಲೆ ಬೀರಬಹುದಾದ  ಪರಿಣಾಮವಾದರೂ ಏನಿರಬಹುದು …?

ರೆಪೋ ದರ ಏರಿಸಿ ಆ ಮೂಲಕ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವ ಕ್ರಮ ಸಹ ಹಣದುಬ್ಬರ ತಡೆಯುವ ನೆಪ ಹೇಳಿ ಬಂಡವಾಳಿಗರಿಗೆ ಲಾಭ ತಂದು ಕೊಡುವ ಕೆಲಸವನ್ನು ಮಾಡುತ್ತಿರುವುದನ್ನುಗಮನಿಸಬೇಕಿದೆ. ಮಾರುಕಟ್ಟೆಯಲ್ಲಿ ಹೆಚ್ಚು ಹಣ ಚಲಾವಣೆಯನ್ನು ತಡೆಯಬೇಕೆನ್ನುವ ಉದ್ದೇಶದಿಂದ ಹೊಸದಾಗಿ ಪಡೆಯುವ ಕಾಲದ ಮೇಲಿನ ಬಡ್ಡಿದರ ಏರಿಸುವುದೇನೋ ಖರೆ. ಆದರೆ ಹಳೆಯ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವ ಉದ್ದೇಶವಾದರೂ ಏನು…!?

ಉದ್ದೇಶ ಇಷ್ಟೇ. ಹಣಕಾಸು ಸಂಸ್ಥೆಗಳನ್ನು ಈ ದೇಶದಲ್ಲಿ ತೆರೆದು ಸಾಲ ನೀಡುತ್ತಿರುವವರು ದೊಡ್ಡ ದೊಡ್ಡ ಬಂಡವಾಳಿಗರೆ ಆಗಿದ್ದಾರೆ. ಈ ರೀತಿ ಬಡ್ಡಿ ಏರಿಸುವುದರಿಂದ ಹೆಚ್ಚುವುದು ಈ ಬಂಡವಾಳಿಗರ ಲಾಭವೇ ಆಗುತ್ತದೆ.  ಇನ್ನೊಂದು ನೆಲೆಯಿಂದ ಹೇಳಬೇಕೆಂದರೆ ಹಳೆಯ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುವುದರಿಂದ ಮಾರುಕಟ್ಟೆಗೆ ಹೆಚ್ಚಿನ ಹಣ ಹರಿದು ಬರುವಂತೆ ಆಗುತ್ತದೆ. ಹಾಗು ಆ ಮೂಲಕ ಹಣದುಬ್ಬರವುಂಟಾಗುತ್ತದೆ. ಆದುದರಿಂದ ಮೇಲ್ನೋಟಕ್ಕೆ ರೆಪೋ ದರ ಏರಿಸುವ ಆರ್ ಬಿ ಐ ಈ ಕ್ರಮ  ವಿವೇಚನಾರಹಿತವಾದದ್ದು ಮತ್ತು ವಂಚನೆ  ಎಂದು ತೋರುತ್ತದೆ. ನಿತ್ಯ ಏರುತ್ತಿರುವ ಬೆಲೆ ಏರಿಕೆಯಿಂದಾಗಿ  ಉಂಟಾಗಬಹುದಾದ ಜನಾಕ್ರೋಶವನ್ನು  ತಣ್ಣಗಾಗಿಸುವ ನಿಟ್ಟಿನಲ್ಲಿ  ಆರ್‌ಬಿಐ ಈ ಒಂದು ಸುಂದರ ನಾಟಕವನ್ನು ಆಡುತ್ತಿದೆ. ಬಂಡವಾಳಶಾಹಿ ವ್ಯವಸ್ಥೆಯ ಸೂತ್ರದ ಗೊಂಬೆಯಂತೆ ಕುಣಿಯುತ್ತಿದೆ ಅಷ್ಟೇ.

ಡಿಸೆಂಬರ್ 25 – ಅಂಬೇಡ್ಕರ್ ‘ಮನುಸ್ಮೃತಿ’ ಸುಟ್ಟ ದಿನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...