Homeಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

ಪಶ್ಚಿಮ ಬಂಗಾಳದ ಬಿಜೆಪಿ ಗೆಲುವು ಎಸ್‌ಐಆರ್‌ ಕುತಂತ್ರದ ಫಲ?

- Advertisement -
- Advertisement -

ಕಳೆದ 15 ವರ್ಷದಿಂದ ಪಶ್ಚಿಮ ಬಂಗಾಳದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ಆಡಳಿತಕ್ಕೆ 2026ರ ಚುನಾವಣಾ ಫಲಿತಾಂಶ ಬ್ರೇಕ್ ನೀಡಿದೆ.  ಪಶ್ಚಿಮ ಬಂಗಾಳದ ಒಟ್ಟು 294 ಕ್ಷೇತ್ರಗಳ ಪೈಕಿ 200ರಲ್ಲಿ ಬಿಜಿಪಿ ಪಕ್ಷವು ಗೆಲುವಿಗೆ ದಾಪುಗಾಲಿಡುತ್ತಿದೆ.

ಬಿಜೆಪಿಯ ರಾಜಕೀಯ ಕುತಂತ್ರದ ಬಗ್ಗೆ ಮಮತಾ ಬ್ಯಾನರ್ಜಿ ಎಷ್ಟೆಲ್ಲಾ ಎಚ್ಚರಿಕೆಯನ್ನು ವಹಿಸಿದ್ದರು, ಅದನ್ನು ಭೇದಿಸುವಲ್ಲಿ ವಿಫಲವಾಗಿದ್ದಾರೆ. ಅದರ ಪರಿಣಾಮ ಬಂಗಾಳದಲ್ಲಿ ಕಮಲ ಅರಳಿದೆ. ಕಮಲ ಅರಳಲು ಮತ್ತೊಂದು ಮುಖ್ಯ ಕಾರಣ ಭಾರತೀಯ ಚುನಾವನಾ ಆಯೋಗ ಜಾರಿ ಮಾಡಿದ ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬ ಮಾತುಗಳು ಕೇಳಿಬರುತ್ತಿವೆ.

ಹೌದು ಪಶ್ಚಿಮ ಬಂಗಾಳದ ಈ ಚುನಾವಣಾ ಫಲಿತಾಂಶ ಮತ್ತು ಮತದಾರರ ಪಟ್ಟಿಯ ಪರಿಷ್ಕರಣೆಯ (SIR) ಕುರಿತಾದ ದತ್ತಾಂಶಗಳು ಪ್ರಜಾಪ್ರಭುತ್ವದ ವ್ಯವಸ್ಥೆಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡುತ್ತವೆ. ವಿಶೇಷವಾಗಿ 90 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿಹಾಕಿರುವುದು ಮತ್ತು ಆ ಮೂಲಕ ಚುನಾವಣಾ ಅಖಾಡವನ್ನೇ ಬದಲಿಸಿರುವುದು ಅತ್ಯಂತ ಕಳವಳಕಾರಿ ವಿಷಯ.

ಚುನಾವಣಾ ಆಯೋಗವು ನಡೆಸಿದ SIR ಪ್ರಕ್ರಿಯೆಯು ಬಂಗಾಳದ ಮತದಾರರ ಪಟ್ಟಿಯಲ್ಲಿ ಭಾರಿ ಬದಲಾವಣೆಗಳನ್ನು ತಂದಿತು. ಇದು ಚುನಾವಣಾ ಫಲಿತಾಂಶದ ಮೇಲೆ ಬೀರಿದ ಪ್ರಭಾವವನ್ನು ಈ ಕೆಳಗಿನ ಅಂಶಗಳ ಮೂಲಕ ವಿಶ್ಲೇಷಿಸಬಹುದು.

ಮತದಾನದಿಂದ ವಂಚಿತರಾದ ಶೇ.12 ಮತದಾರರು 

ಎಸ್‌ಐಆರ್ ಪ್ರಕ್ರಿಯೆಯ ನಂತರ ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಹೆಸರುಗಳನ್ನು ಅಳಿಸಿಹಾಕಲಾಯಿತು. ಇದು ಒಟ್ಟು ಮತದಾರರ ಸಂಖ್ಯೆಯಲ್ಲಿ ಶೇ. 12ರಷ್ಟು ದೊಡ್ಡ ಕುಸಿತವಾಗಿದೆ. ಈ ಹೆಸರುಗಳ ಅಳಿಸುವಿಕೆಯು ಅನೇಕ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನ ಅಂತರದ ಮೇಲೆ ನೇರ ಪರಿಣಾಮ ಬೀರಿದೆ.

ಪಶ್ಚಿಮ ಬಂಗಾಳದ ಮತದಾರರ ಸಂಖ್ಯೆಯು ಎಸ್‌ಐಆರ್ ಪ್ರಕ್ರಿಯೆಯ ಮೊದಲು 7.66 ಕೋಟಿ ಇತ್ತು. ಅಂತಿಮ ಪಟ್ಟಿ ಮತ್ತು ನ್ಯಾಯಾಂಗ ಪರಿಶೀಲನೆಯ (Under adjudication) ನಂತರ ಈ ಸಂಖ್ಯೆಯು 6.75 ಕೋಟಿಗೆ ಕುಸಿದಿತ್ತು. ಒಟ್ಟಾರೆಯಾಗಿ ಮತದಾರರ ಪಟ್ಟಿಯಲ್ಲಿ ಶೇ. 12 ರಷ್ಟು ಇಳಿಕೆಯಾಗಿತ್ತು.ಇದುವರೆಗೆ ಒಟ್ಟು 90,62,188 (ಸುಮಾರು 90 ಲಕ್ಷ) ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಅಳಿಸಿಹಾಕಲಾದವರಲ್ಲಿ ಶೇ. 63.42 ರಷ್ಟು ಜನರು ಹಿಂದೂ ಸಮುದಾಯಕ್ಕೆ ಸೇರಿದವರಾಗಿದ್ದರೆ, ಶೇ. 34.32 ರಷ್ಟು ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ.

ಬಾಂಗ್ಲಾದೇಶದಿಂದ ಬಂದಿರುವ ಹಿಂದೂ ಮತುವಾ ಪ್ರಾಬಲ್ಯದ ಜಿಲ್ಲೆಗಳಿಂದ (ಉತ್ತರ 24 ಪರಗಣ ಮತ್ತು ನಾದಿಯಾ) ಒಟ್ಟು 2,42,721 ಹೆಸರುಗಳನ್ನು ಅಳಿಸಲಾಗಿದೆ. ಸುಮಾರು 58 ಲಕ್ಷ ಹೆಸರುಗಳು ಈ ವರ್ಗದಲ್ಲಿ ಅಳಿಸಲ್ಪಟ್ಟಿವೆ. ಸುಮಾರು 27 ಲಕ್ಷ ಹೆಸರುಗಳನ್ನು ಈ ಹಂತದಲ್ಲಿ ತೆಗೆಯಲಾಗಿದ್ದು, ಇದರಲ್ಲಿ ಮುಸ್ಲಿಂ ಮತದಾರರ ಸಂಖ್ಯೆ (ಸುಮಾರು 17 ಲಕ್ಷ) ಅತಿ ಹೆಚ್ಚಾಗಿದೆ.

ಕ್ಷೇತ್ರವಾರು ಸಂಶೋಧನಾ ಮಾಹಿತಿ (ಸಬರ್ ಇನ್‌ಸ್ಟಿಟ್ಯೂಟ್):

  • ನಂದಿಗ್ರಾಮ: ಇಲ್ಲಿ ಅಳಿಸಲಾದ ಒಟ್ಟು 3,461 ಮತದಾರರಲ್ಲಿ ಶೇ. 94.5 ರಷ್ಟು (3,270) ಜನರು ಮುಸ್ಲಿಂ ಸಮುದಾಯದವರಾಗಿದ್ದಾರೆ.
  • ಭವಾನಿಪುರ: ಇಲ್ಲಿ ಅಳಿಸಲಾದ 3,875 ಮತದಾರರಲ್ಲಿ ಶೇ. 40.1 ರಷ್ಟು ಜನರು ಮುಸ್ಲಿಮರಾಗಿದ್ದು, ಶೇ. 59.9 ರಷ್ಟು ಜನರು ಮುಸ್ಲಿಮೇತರರಾಗಿದ್ದಾರೆ.

ಮುಸ್ಲಿಂ ಸಮುದಾಯದವರ ಬಳಿ ಸರಿಯಾದ ದಾಖಲೆಗಳಿದ್ದರೂ ಸಹ, ‘ಲಾಜಿಕಲ್ ಡಿಸ್ಕ್ರಿಪನ್ಸಿ’ (LD) ಹೆಸರಿನಲ್ಲಿ ಅವರ ಹೆಸರುಗಳನ್ನು ಅಸಮರ್ಪಕವಾಗಿ ಗುರಿಯಾಗಿಸಿ ಅಳಿಸಲಾಗಿದೆ ಎಂಬ ಆರೋಪವು ಇದೆ. ಚುನಾವಣಾ ಆಯೋಗವು ಮುಸ್ಲಿಂ ಹೆಸರುಗಳನ್ನು ಗುರುತಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸಿರುವ ಬಗ್ಗೆಯು ಕಳವಳ ವ್ಯಕ್ತವಾಗಿದೆ.

ಹೆಸರು ಅಳಿಸಲ್ಪಟ್ಟ ಮತದಾರರು ಮುಂದಿನ ದಿನಗಳಲ್ಲಿ ಪಟ್ಟಿಗೆ ಸೇರ್ಪಡೆಗೊಳ್ಳಲು ನ್ಯಾಯಮಂಡಳಿಯನ್ನು (Tribunal) ಸಂಪರ್ಕಿಸುತ್ತಿದ್ದಾರೆ. ಆದಾಗ್ಯೂ, ಏಪ್ರಿಲ್ 23 ಮತ್ತು 29 ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗಿಲ್ಲ.

ಬಂಗಾಳದ ಫಲಿತಾಂಶದ ಮೇಲೆ ಎಸ್‌ಐಆರ್ ಪ್ರಭಾವ

‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮುನ್ನಡೆಗೆ ದಾರಿ ತೋರಿದೆ ಫಲಿತಾಂಶದ ಮೇಲೆ ಹೇಗೆ ನೇರ ಪ್ರಭಾವ ಬೀರಿದೆ ಎಂಬುದನ್ನು ಲಭ್ಯವಿರುವ ಅಂಕಿಅಂಶಗಳು ಸಾಬೀತುಪಡಿಸುತ್ತಿವೆ.

5000 ಕ್ಕಿಂತ ಕಡಿಮೆ ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (<5K):

ಯಾವ ಕ್ಷೇತ್ರಗಳಲ್ಲಿ 5000ಕ್ಕಿಂತ ಕಡಿಮೆ ಹೆಸರುಗಳನ್ನು ಅಳಿಸಲಾಗಿದೆಯೋ ಅಂತಹ 13 ಕ್ಷೇತ್ರಗಳ ಪೈಕಿ ಬಿಜೆಪಿ 12 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಟಿಎಂಸಿ ಕೇವಲ 1 ಸ್ಥಾನದಲ್ಲಿ ಗೆದ್ದಿದೆ.

5,000 ದಿಂದ 15,000 ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (5K-15K):

ಸರಾಸರಿ 5 ರಿಂದ 15 ಸಾವಿರ ಮತದಾರರ ಹೆಸರನ್ನು ಅಳಿಸಿಹಾಕಲಾದ 64 ಕ್ಷೇತ್ರಗಳಲ್ಲಿ ಬಿಜೆಪಿ 46 ಸ್ಥಾನಗಳನ್ನು ಗೆದ್ದರೆ, ಟಿಎಂಸಿ 17 ಸ್ಥಾನಗಳನ್ನು ಗೆದ್ದಿದೆ.

15,000 ದಿಂದ 25,000 ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (15K-25K):

ಭಾರಿ ಪ್ರಮಾಣದಲ್ಲಿ ಅಂದರೆ 15 ರಿಂದ 25 ಸಾವಿರದಷ್ಟು ಹೆಸರುಗಳನ್ನು ಅಳಿಸಿಹಾಕಲಾದ 69 ಕ್ಷೇತ್ರಗಳ ಪೈಕಿ ಬಿಜೆಪಿ 44 ಸ್ಥಾನಗಳಲ್ಲಿ ಜಯಗಳಿಸಿದೆ ಮತ್ತು ಟಿಎಂಸಿ 23 ಸ್ಥಾನಗಳನ್ನು ಪಡೆದಿದೆ.

25,000 ಕ್ಕಿಂತ ಹೆಚ್ಚು ಮತದಾರರನ್ನು ಅಳಿಸಿಹಾಕಿದ ಕ್ಷೇತ್ರಗಳು (>25K):

ಅತಿ ಹೆಚ್ಚು ಅಂದರೆ 25 ಸಾವಿರಕ್ಕೂ ಅಧಿಕ ಹೆಸರುಗಳನ್ನು ಪಟ್ಟಿಯಿಂದ ಕೈಬಿಟ್ಟಿರುವ 147 ಕ್ಷೇತ್ರಗಳ ಪೈಕಿ ಬಿಜೆಪಿ 87 ಸ್ಥಾನಗಳನ್ನು ಗೆದ್ದು  ಮುನ್ನಡೆ ಸಾಧಿಸಿದೆ, ಇಲ್ಲಿ ಟಿಎಂಸಿ 60 ಸ್ಥಾನಗಳನ್ನು ಗೆದ್ದಿದೆ.

ಹೆಚ್ಚಿನ ಅಳಿಸುವಿಕೆ = ಬಿಜೆಪಿಗೆ ದೊಡ್ಡ ಲಾಭ:

ಅತಿ ಹೆಚ್ಚು ಅಂದರೆ 25,000ಕ್ಕೂ ಅಧಿಕ ಮತದಾರರನ್ನು ಅಳಿಸಿಹಾಕಲಾದ 147 ಕ್ಷೇತ್ರಗಳ ಪೈಕಿ ಬಿಜೆಪಿ 87 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದು ಆಯಕಟ್ಟಿನ ಜಾಗಗಳಲ್ಲಿ ದೊಡ್ಡ ಮಟ್ಟದ ಮತದಾರರನ್ನು ಗುರಿಯಾಗಿಸಿ ಪಟ್ಟಿಯಿಂದ ಹೊರಹಾಕಿರುವುದನ್ನು ತೋರಿಸುತ್ತದೆ.

ಮಧ್ಯಮ ಮಟ್ಟದ ಅಳಿಸುವಿಕೆಯಲ್ಲೂ ಕುತಂತ್ರ: 5,000 ದಿಂದ 25,000ದವರೆಗೆ ಮತದಾರರನ್ನು ಅಳಿಸಿದ ಒಟ್ಟು 133 ಕ್ಷೇತ್ರಗಳಲ್ಲಿ , ಬಿಜೆಪಿ 90 ಸ್ಥಾನಗಳನ್ನು ಕಿತ್ತುಕೊಂಡಿದೆ. ಅಂದರೆ, ಡಿಲೀಶನ್ ಪ್ರಮಾಣ ಹೆಚ್ಚಾದಷ್ಟೂ ಬಿಜೆಪಿಯ ಗೆಲುವಿನ ಸಾಧ್ಯತೆಯೂ ಹೆಚ್ಚಾಗಿರುವುದು ಇಲ್ಲಿ ಸ್ಪಷ್ಟ.

ಅಲ್ಪ ಅಳಿಸುವಿಕೆ ನಡೆದ ಕಡೆಯೂ ಬಿಡದ ಹಿಡಿತ: ಕೇವಲ 5,000ಕ್ಕಿಂತ ಕಡಿಮೆ ಅಳಿಸುವಿಕೆ ನಡೆದ 13 ಕ್ಷೇತ್ರಗಳ ಪೈಕಿ 12ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಇದು ಕಡಿಮೆ ಅಳಿಸುವಿಕೆ ನಡೆದ ಕಡೆಯೂ ಸಹ ಬಿಜೆಪಿ ತನ್ನ ಕುತಂತ್ರದ ಮೂಲಕ ಸಮೀಕರಣಗಳನ್ನು ತನಗೆ ಪೂರಕವಾಗಿ ಬದಲಿಸಿಕೊಂಡಿರುವುದನ್ನು ಎತ್ತಿ ತೋರಿಸುತ್ತದೆ.

ಬಿಜೆಪಿಯ ಗೆಲುವು ಕೇವಲ ರಾಜಕೀಯ ಪ್ರಚಾರದಿಂದ ಬಂದಿದ್ದಲ್ಲ. ಇದು 90 ಲಕ್ಷ ಮತದಾರರನ್ನು (ಶೇ. 12) ವ್ಯವಸ್ಥಿತವಾಗಿ ಪಟ್ಟಿಯಿಂದ ಹೊರಹಾಕಿದ ‘SIR’ ಎಂಬ ಕುತಂತ್ರದ ಫಲ. ವಿಶೇಷವಾಗಿ ಅಲ್ಪಸಂಖ್ಯಾತ ಮತ್ತು ಟಿಎಂಸಿ ಪರ ಒಲವಿರುವ ಮತದಾರರನ್ನು ಗುರಿಯಾಗಿಸಿಕೊಂಡು ಈ ಡಿಲೀಶನ್ ಮಾಡಲಾಗಿದೆ ಎಂಬ ಸಂಶೋಧನಾ ವರದಿಗಳು ಈ ಗೆಲುವಿನ ಹಿಂದಿನ ಕರಾಳ ಮುಖವನ್ನು ಬಯಲು ಮಾಡುತ್ತವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...