Homeಮುಖಪುಟಉಮರ್ ಖಾಲಿದ್ ಮತ್ತು ಇತರರ ಬಿಡುಗಡೆಗೆ 150ಕ್ಕೂ ಹೆಚ್ಚು ಪ್ರಖ್ಯಾತ ಬರಹಗಾರರು, ಚಲನಚಿತ್ರ ನಿರ್ಮಾಪಕರಿಂದ ಹೇಳಿಕೆ...

ಉಮರ್ ಖಾಲಿದ್ ಮತ್ತು ಇತರರ ಬಿಡುಗಡೆಗೆ 150ಕ್ಕೂ ಹೆಚ್ಚು ಪ್ರಖ್ಯಾತ ಬರಹಗಾರರು, ಚಲನಚಿತ್ರ ನಿರ್ಮಾಪಕರಿಂದ ಹೇಳಿಕೆ ಬಿಡುಗಡೆ

- Advertisement -
- Advertisement -

ನವದೆಹಲಿ: ಅಮಿತಾವ್ ಗೋಶ್, ನಸೀರುದ್ದೀನ್ ಶಾ, ರಾಜಮೋಹನ್ ಗಾಂಧಿ ಮತ್ತು ಇತರರು ಸೇರಿದಂತೆ 150ಕ್ಕೂ ಹೆಚ್ಚು ಪ್ರಸಿದ್ಧ ಬರಹಗಾರರು, ಚಲನಚಿತ್ರ ನಿರ್ಮಾಪಕರು ಮತ್ತು ಕಾರ್ಯಕರ್ತರು ಗುರುವಾರ ವಿದ್ಯಾರ್ಥಿ ಕಾರ್ಯಕರ್ತ ಉಮರ್ ಖಾಲಿದ್ ಮತ್ತು ಇತರ ಸಿಎಎ ವಿರೋಧಿ (ಪೌರತ್ವ ತಿದ್ದುಪಡಿ ಕಾಯ್ದೆ) ಕಾರ್ಯಕರ್ತರ ಬಿಡುಗಡೆಗೆ ಒತ್ತಾಯಿಸಿದ್ದಾರೆ.

ಉಮರ್ ಮತ್ತು ಅವರಂತಹ ಅನೇಕರು ಯುಎಪಿಎ ಕಾಯ್ದೆ ಅಡಿಯಲ್ಲಿ ಜೈಲಿನಲ್ಲಿದ್ದಾರೆ. ಜಾಮೀನು ಇಲ್ಲದೆ, ವಿಚಾರಣೆಯಿಲ್ಲದೆ, ವರ್ಷಗಳ ಕಾಲ ಜೈಲಿನಲ್ಲಿದ್ದಾರೆ. ಅವರು ಯಾರನ್ನೋ ಯಾವುದೇ ಹಿಂಸಾಚಾರವನ್ನು ಮಾಡಲು ಪ್ರೇರೇಪಿಸಿದರು ಅಥವಾ ಪ್ರಚೋದಿಸಿದರು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಅವರು ಶಾಂತಿ ಮತ್ತು ನ್ಯಾಯದ ರಕ್ಷಣೆಗಾಗಿ ನಿಂತರು ಮತ್ತು ಅನ್ಯಾಯದ ಕಾನೂನುಗಳ ವಿರುದ್ಧ ಅಹಿಂಸಾತ್ಮಕ ಭಿನ್ನಾಭಿಪ್ರಾಯವನ್ನು ಪ್ರತಿಪಾದಿಸಿದರು ಎಂಬ ಕಾರಣಕ್ಕಾಗಿ ಎಂದು ಗುರುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇತಿಹಾಸಕಾರರಾದ ರಾಮಚಂದ್ರ ಗುಹಾ, ರೊಮಿಲಾ ಥಾಪರ್, ಅಮೆರಿಕದ ಪ್ರಾಧ್ಯಾಪಕರಾದ ಗಾಯತ್ರಿ ಚಕ್ರವರ್ತಿ ಮತ್ತು ಅಕೀಲ್ ಬಿಲ್ಗ್ರಾಮಿ, ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಸಂದೀಪ್ ಪಾಂಡೆ ಮತ್ತು ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತ ಹರ್ಷ್ ಮಂದರ್ ಅವರುಗಳು ಶಾರ್ಜೀಲ್ ಇಮಾಮ್, ಗುಲ್ಫಿಶಾ ಫಾತಿಮಾ, ಖಾಲಿದ್ ಸೈಫ್, ಮೀರನ್ ಹೈದರ್, ಅಥರ್ ಖಾನ್ ಮತ್ತು ಶಿಫಾ-ಉರ್ ರೆಹಮಾನ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿದ ಹೇಳಿಕೆಗೆ ಸಹಿ ಹಾಕಿರುವವರಲ್ಲಿ ಸೇರಿದ್ದಾರೆ. 2020ರಲ್ಲಿ ಬಂಧನಕ್ಕೊಳಗಾಗಿದ್ದ ಉಮರ್ ಖಾಲಿದ್  ಅವರ ಜೈಲು ವಾಸವು 1600ನೇ ದಿನಗಳನ್ನು ಗತಿಸಿದೆ.

ತಮ್ಮ ಬಂಧನಕ್ಕೆ ಮುಂಚಿನ ಭಾಷಣದಲ್ಲಿ ಉಮರ್ ಖಾಲಿದ್ ಅವರು ಗಾಂಧಿಯನ್ನು ಕೊಂದ ಅದೇ ಶಕ್ತಿಗಳು ಸಿಎಎ ಅನ್ನು ಸಹ ತಂದಿವೆ ಎಂದು ಪ್ರತಿಪಾದಿಸಿದ್ದರು. ಈ ಸಿಎಎಯನ್ನು ಉಮರ್ ಮತ್ತು ಇತರರು ಪ್ರತಿಭಟಿಸಿದರು ಎಂದು ಇವರ ಹೇಳಿಕೆ ತಿಳಿಸಿದೆ.

“ಅವರು ಮಹಾತ್ಮಾ ಗಾಂಧಿಯವರ ಮೌಲ್ಯಗಳನ್ನು ನಾಶಪಡಿಸುತ್ತಿದ್ದಾರೆ ಮತ್ತು ಭಾರತದ ಜನರು ಅವರ ವಿರುದ್ಧ ಹೋರಾಡುತ್ತಿದ್ದಾರೆ. ಅಧಿಕಾರದಲ್ಲಿರುವವರು ಭಾರತವನ್ನು ವಿಭಜಿಸಲು ಬಯಸಿದರೆ, ಭಾರತದ ಜನರು ದೇಶವನ್ನು ಒಂದುಗೂಡಿಸಲು ಸಿದ್ಧರಿದ್ದಾರೆ.” ಎಂದು ಆಗ ಉಮರ್ ಹೇಳಿದ್ದರು.

ಎಲ್ಲಾ ಕಾರ್ಯಕರ್ತರ ಹೆಸರುಗಳನ್ನು ಉಲ್ಲೇಖಿಸಿರುವ ಹೇಳಿಕೆಯ ಕೊನೆಯಲ್ಲಿ, ಇದು ಕೇವಲ ಉಮರ್ ಖಾಲಿದ್ ಬಗ್ಗೆ ಮಾತ್ರ ಅಲ್ಲ. ಉದಾಹರಣೆಗೆ ಉಮರ್ ಖಾಲಿದ್ ಅವರ ಜೊತೆ ಬಂಧಿತ ಗುಲ್ಫಿಶಾ ಫಾತಿಮಾ ಅವರು ಜೈಲಿನಲ್ಲಿ ಬರೆದ ಕವಿತೆಯನ್ನು ಓದಿದಾಗ ನಮಗೆ ನೋವುಂಟು ಮಾಡುತ್ತದೆ. ಅವರು ಜೈಲಿನ “ಮೂಕ ಗೋಡೆಗಳು” ಎಂಬ ಕವನ ಬರೆದಿದ್ದಾರೆ. ಒಬ್ಬ ಪ್ರತಿಭಾವಂತ ಯುವ ವಿದ್ಯಾರ್ಥಿ ಕಾರ್ಯಕರ್ತೆ, ಎಂಬಿಎ ಪದವೀಧರೆ ಮತ್ತು ಇತಿಹಾಸ ಉತ್ಸಾಹಿ ಗುಲ್ಫಿಶಾ ತನ್ನ ಐದನೇ ವರ್ಷವನ್ನು ಜೈಲಿನಲ್ಲಿ ಕಳೆಯುತ್ತಿದ್ದಾರೆ. ಅದೇ ರೀತಿ ಜಾತ್ಯತೀತತೆ ಮತ್ತು ಸಮಾನತೆಯ ಬಗ್ಗೆ ಮಾತನಾಡುವ ಭಾರತದ ಸಂವಿಧಾನದ ಪೀಠಿಕೆಯನ್ನು ಪಠಿಸಿದ್ದಕ್ಕಾಗಿ ಖಾಲಿದ್ ಸೈಫಿಗೆ “ಶಿಕ್ಷೆ” ವಿಧಿಸಲಾಗುತ್ತಿದೆಯೇ ಎಂದು ಯಾರಾದರೂ ಆಶ್ಚರ್ಯ ಪಡುತ್ತಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

“ಇತಿಹಾಸದ ಪ್ರತಿಭಾವಂತ ವಿದ್ವಾಂಸ ಮತ್ತು ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್, ಈ ಆಡಳಿತದಲ್ಲಿ ಭಿನ್ನಮತೀಯರು ಬಂಧನದ ಅಪಾಯವನ್ನು ಎದುರಿಸುತ್ತಾರೆ ಎಂದು ತಿಳಿದಿದ್ದರೂ, ಅವರು “ಭಯೋತ್ಪಾದನೆಯ” ಆರೋಪ ಹೊರಿಸಲ್ಪಡುತ್ತಾರೆಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ. ಪಟ್ಟಿಯಲ್ಲಿ ಮೀರನ್ ಹೈದರ್, ಅಥರ್ ಖಾನ್, ಶಿಫಾ ಉರ್ ರೆಹಮಾನ್ ಮತ್ತು ಇತರರು ಸೇರಿದ್ದಾರೆ ಎಂದು ಅದು ಉಲ್ಲೇಖಿಸಿದೆ.

ಬಾಲಿವುಡ್ ನಟ ರತ್ನ ಪಾಠಕ್ ಶಾ, ಚಲನಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್, ನಾಗರಿಕ ಹಕ್ಕುಗಳ ಕಾರ್ಯಕರ್ತ ಆನಂದ್ ತೇಲ್ತುಂಬ್ಡೆ, ಎಎಂಯು ಪ್ರಾಧ್ಯಾಪಕ ಇರ್ಫಾನ್ ಹಬೀಬ್ ಮತ್ತು ಜೆಎನ್‌ಯು ಪ್ರಾಧ್ಯಾಪಕ ಪ್ರಭಾತ್ ಪಟ್ನಾಯಕ್ ಮತ್ತು ಅಮೆರಿಕ ಮೂಲದ ಪ್ರಾಧ್ಯಾಪಕರು ಸಹ ಸಹಿ ಮಾಡಿದವರಲ್ಲಿ ಸೇರಿದ್ದಾರೆ.

2020ರ ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಈ ಕಾರ್ಯಕರ್ತರನ್ನು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ಗುರಿಯಾಗಿಸಲಾಗಿದೆ ಎಂದು ಹೇಳಿಕೆಯಲ್ಲಿ ಪ್ರತಿಪಾದಿಸಲಾಗಿದೆ. “ಒಂದು ಆಡಳಿತವು ಭಾರತೀಯ ಪೌರತ್ವದ ಹಕ್ಕಿಗೆ ಸಂಬಂಧಿಸಿ ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುವ ಕಾನೂನನ್ನು ತಂದಿತು ಮತ್ತು ನಂತರ ಈ ಕ್ರಮದ ವಿರುದ್ಧ ಧ್ವನಿ ಎತ್ತಿದವರನ್ನು, ವಿಶೇಷವಾಗಿ ಅವರು ಮುಸ್ಲಿಮರಾಗಿದ್ದರೆ ಅವರನ್ನು ಆಯ್ದು ಹಿಂಸಿಸಿದೆ ಎಂದು ಅದು ಹೇಳಿದೆ.

ವಾಸ್ತವವಾಗಿ, ಈ ಪದೇ ಪದೇ ಜಾಮೀನು ನಿರಾಕರಣೆ ಮತ್ತು ವಿಚಾರಣೆಯಿಲ್ಲದೆ ದೀರ್ಘಕಾಲದ ಜೈಲುವಾಸವು ಉಮರ್ ಖಾಲಿದ್ ಮತ್ತು ಈ ಪ್ರಕರಣದ ಇತರರ ಪ್ರಕರಣಗಳು ಅತ್ಯಂತ ದುಃಖಕರ ಅಂಶಗಳಲ್ಲಿ ಒಂದಾಗಿದೆ. 2021ರಲ್ಲಿ ಹೈಕೋರ್ಟ್ ಮೂವರು ಆರೋಪಿಗಳಿಗೆ ಜಾಮೀನು ನೀಡುವಾಗ ರಾಜ್ಯವು ಮಂಡಿಸಿದ ವಾದಗಳ ಬಗ್ಗೆ ಬಲವಾದ ಅವಲೋಕನಗಳನ್ನು ಮಾಡಿದ್ದರೂ ಸಹ ಇದು ಸಂಭವಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಂಸತ್ ಬಜೆಟ್ ಅಧಿವೇಶನ ಆರಂಭ | ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ಭಾಷಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಜೆಪಿ ಪ್ರತಿಭಟನೆ: ವಿದ್ಯಾರ್ಥಿಗಳ ಮೇಲೆ ‘ಪೆಲೆಟ್‌ ಗನ್’ ದಾಳಿ ದೃಢ; ನಿಯಮಾವಳಿಗಳನ್ನು ಉಲ್ಲಂಘಿಸಿ ಬಲಪ್ರಯೋಗ ನಡೆಸಿರುವ RAF

ನವದೆಹಲಿ: ತಮ್ಮ ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕವಾಗಿ ಧ್ವನಿ ಎತ್ತುತ್ತಿದ್ದ ವಿದ್ಯಾರ್ಥಿ ಸಮುದಾಯದ ಮೇಲೆ ಕೇಂದ್ರದ ಸಶಸ್ತ್ರ ಪಡೆಗಳು ಎಸಗಿದ ದೌರ್ಜನ್ಯದ ಕರಾಳ ಮುಖ ಕೊನೆಗೂ ಅನಾವರಣಗೊಂಡಿದೆ. ಜುಲೈ 20ರಂದು ದೆಹಲಿಯ ಕನ್ಹಾಟ್ ಪ್ಲೇಸ್ ಪ್ರದೇಶದಲ್ಲಿ...

ಕೇವಲ ಪ್ರತಿಭಟಿಸಿದ್ದಕ್ಕೆ ವಿದ್ಯಾರ್ಥಿಗಳು ಜೈಲುಪಾಲು; ಗಂಗೆಯ ದೋಣಿಯಲ್ಲಿ ಬಿರಿಯಾನಿ ತಿಂದವರಿಗೂ ಸಿಗುತ್ತಿಲ್ಲ ಜಾಮೀನು : ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಕಳವಳ

ಭಾರತದಲ್ಲಿ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಮತ್ತು ಅವುಗಳಿಗೆ ಅವಕಾಶ ನೀಡುವ ಸಾರ್ವಜನಿಕ ಸ್ಥಳಗಳು ಎಷ್ಟು ಕಡಿಮೆಯಾಗುತ್ತಿವೆ ಎಂದರೆ, ತಮ್ಮ ಹಕ್ಕುಗಳಿಗಾಗಿ ಪ್ರತಿಭಟಿಸುವ ವಿದ್ಯಾರ್ಥಿಗಳನ್ನು ಬಂಧಿಸಿ ಅವರಿಗೆ ಜಾಮೀನು ನಿರಾಕರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ...

ಪ.ಬಂಗಾಳ: ನೂತನ ‘ಗೂಂಡಾ ಕಾಯ್ದೆ’ ಅಡಿ NEET ಪ್ರತಿಭಟನೆಯಲ್ಲಿ ಭಾಗಿಯಾದ 10 ಮುಸ್ಲಿಂ ಯುವಕರು ಸೇರಿದಂತೆ 11 ಜನರ ಬಂಧನ 

ಕೋಲ್ಕತ್ತಾ: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಶಿಕ್ಷಣ ಕ್ಷೇತ್ರದ ವೈಫಲ್ಯಗಳು ಹಾಗೂ ನೀಟ್-ಯುಜಿ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಖಂಡಿಸಿ ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಬೃಹತ್ ವಿದ್ಯಾರ್ಥಿ ಪ್ರತಿಭಟನೆಯು ತೀವ್ರ ರಾಜಕೀಯ...

ಪೊಲೀಸರ ಅನುಮತಿ ಪಡೆದಿದ್ದರೂ ನೀಟ್ ಪ್ರತಿಭಟನೆಗೆ ವಾಟ್ಸಾಪ್ ಗ್ರೂಪ್ ರಚಿಸಿದ್ದಕ್ಕಾಗಿ ಅಸ್ಸಾಂನಲ್ಲಿ ಮೂವರು ಮುಸ್ಲಿಂ ವಿದ್ಯಾರ್ಥಿಗಳ ಬಂಧನ

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರದ ಕೋಮುವಾದಿ ಧೋರಣೆ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ದಮನದ ದಾರುಣ ಚಿತ್ರಣವೊಂದು ಮತ್ತೆ ಮುನ್ನೆಲೆಗೆ ಬಂದಿದೆ. ದೇಶಾದ್ಯಂತ ಸದ್ದು ಮಾಡಿದ್ದ 'ನೀಟ್' (NEET) ಅಕ್ರಮಗಳ ವಿರುದ್ಧ ಧ್ವನಿ ಎತ್ತಲು ಮತ್ತು...

‘ವಿದ್ಯಾರ್ಥಿಗಳ ಮೇಲಿನ ವಿಕೃತ ದಾಳಿಗೆ ನಿಮ್ಮ ಸಮ್ಮತಿ ಇತ್ತೇ?’: ಪತ್ರದ ಮೂಲಕ ಅಮಿತ್ ಶಾಗೆ ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಕಾರಣವಾದ ದೇಶವ್ಯಾಪಿ ವಿದ್ಯಾರ್ಥಿ ಆಂದೋಲನದ ವೇಳೆ ದೆಹಲಿ ಪೊಲೀಸರು ನಡೆಸಿದ ಭೀಕರ ದೌರ್ಜನ್ಯ ಮತ್ತು ಮಿತಿಮೀರಿದ ಬಲಪ್ರಯೋಗದ ವಿರುದ್ಧ ಲೋಕಸಭೆಯ ವಿರೋಧ...

‘ಮಗ ಬೇಗನೆ ಮನೆಗೆ ಬರಲಿ..’; ಭಾವುಕರಾದ ಅಭಿಜೀತ್ ದಿಪ್ಕೆ ಅವರ ಪೋಷಕರು

ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ನೇತೃತ್ವದಲ್ಲಿ ನಡೆದ ಅಸಾಧಾರಣ ಹೋರಾಟವು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜಿನಾಮೆಯಲ್ಲಿ ಅಂತಿಮವಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರ ಪೋಷಕರು ಭಾವುಕರಾಗಿದ್ದಾರೆ. "ಮಗ ಬೇಗನೆ ಮನೆಗೆ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಕಾಕ್ರೋಚ್‌ಗಳಿಗೆ ಅಭಿನಂದಿಸಿದ ಸೋನಮ್ ವಾಂಗ್‌ಚುಕ್ – ಪ್ರಕಾಶ್‌ ರಾಜ್

ದೇಶದ ಯುವಜನರ ಹಲವು ದಿನಗಳ ಹೋರಾಟದ ಬಳಿಕ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿದ್ಯಾರ್ಥಿಗಳ ಮುಂದೆ ಮಂಡಿಯೂರಿದೆ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಈ ಗೆಲುವಿಗೆ ಕಾಕ್ರೋಚ್ ಜನತಾ ಪಕ್ಷದ...

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಜಿರಳೆಗಳ ಹರ್ಷೋದ್ಗಾರ: ದೆಹಲಿ ಪೊಲೀಸರಿಂದ ಸಾರ್ವಜನಿಕ ಕ್ಷಮೆಯಾಚನೆಗೆ ಆಗ್ರಹ

ದೇಶಾದ್ಯಂತ ನಡೆಯುತ್ತಿರುವ ಸಿಜೆಪಿ ಪ್ರತಿಭಟನೆಗಳ ನಡುವೆ ನೀಟ್ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಿದ್ದು, ದೆಹಲಿಯ ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್‌ ಜನತಾ...

ಕಾಕ್ರೋಚ್‌ಗಳಿಗೆ ಮಣಿದ ಮೋದಿ ಸರ್ಕಾರ; ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳ ಮಧ್ಯೆ, ನೀಟ್ ಅಕ್ರಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಇಂದು (ಜುಲೈ 25) ಪ್ರಧಾನ ಮಂತ್ರಿಗಳಿಗೆ ತಮ್ಮ...

ಅಭಿಜೀತ್ ದಿಪ್ಕೆಗೆ ಟೈಫಾಯ್ಡ್; ಪ್ರತಿಭಟನೆ ಮುಂದುವರಿಯಲಿದೆ ಎಂದ ಸಿಜೆಪಿ ಸಂಸ್ಥಾಪಕ

ತನಗೆ ಟೈಫಾಯ್ಡ್ ಇರುವುದು ಪತ್ತೆಯಾಗಿದೆ ಎಂದು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ಇಂದು ಹೇಳಿದ್ದಾರೆ. "ನನ್ನ ಅನಾರೋಗ್ಯವು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ...