HomeUncategorizedದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು

ದೆಹಲಿ ಚುನಾವಣಾ ಫಲಿತಾಂಶ: ಬಿಜೆಪಿಯ ಕೈ ಬಲಪಡಿಸಿದ ಮಹಿಳಾ ಮತ್ತು ಮಧ್ಯಮ ವರ್ಗದ ಮತದಾರರು

- Advertisement -
- Advertisement -

ನವದೆಹಲಿ: ‘ಮೋದಿ, ಮಹಿಳಾ (ಮಹಿಳೆ), ಮಧ್ಯಮ ವರ್ಗದ’ ಮಂತ್ರವು ದೆಹಲಿಯಲ್ಲಿ ಬಿಜೆಪಿಯ ಪುನರಾಗಮನಕ್ಕೆ ದಾರಿ ಮಾಡಿಕೊಟ್ಟಿದೆ ಎಂದು 2025ರ ವಿಧಾನಸಭಾ ಚುನಾವಣೆಯ ಮತಗಳ ಎಣಿಕೆಯ ಸಮಯದಲ್ಲಿ ತಜ್ಞರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಮಹಿಳೆಯರು ಮತ್ತು ದೆಹಲಿಯ ಮಧ್ಯಮ ವರ್ಗದ ನಿವಾಸಿಗಳ ದೊಡ್ಡ ವಿಭಾಗವು ಎಎಪಿಯನ್ನು ತಿರಸ್ಕರಿಸಿದೆ ಮತ್ತು ಈ ಬಾರಿ ಮತದಾರರಲ್ಲಿ ಪ್ರಧಾನಿ ನರೇಂದ್ರ ಮೋದಿಯ ನಿರಂತರ ಪ್ರಭಾವವು ಅರವಿಂದ್ ಕೇಜ್ರಿವಾಲ್ ಅವರ ಎಎಪಿಯನ್ನು ದೊಡ್ಡ ಸೋಲಿನ ಅಂಚಿಗೆ ತಳ್ಳಿತು. ಬಿಜೆಪಿ ಗೆಲುವು ಸಾಧಿಸಿದೆ.

ಈ ಚುನಾವಣೆಯಲ್ಲಿ ಎಎಪಿಯ ಪ್ರಭಾವಿಗಳಾದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸೋಲನ್ನನುಭವಿಸಿದ್ದಾರೆ. 2013ರಿಂದ ನವದೆಹಲಿ ಕ್ಷೇತ್ರದಿಂದ  ಕೇಜ್ರಿವಾಲ್ ಮತ್ತು ಜಂಗ್‌ಪುರ ಕ್ಷೇತ್ರದಿಂದ ಸಿಸೋಡಿಯಾ ಗೆಲುವು ಸಾಧಿಸುತ್ತಾ ಬಂದಿದ್ದರು.

2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಪ್ರಾಬಲ್ಯ ಸಾಧಿಸಿತ್ತು. ಆಗ ಎಎಪಿಯು 70 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿತು. 2015ರಲ್ಲಿ ಅದು ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿ ಬಹುತೇಕ 67 ಸ್ಥಾನಗಳನ್ನು ಬಾಚಿಕೊಂಡಿತ್ತು.

ಮಾಜಿ ಭ್ರಷ್ಟಾಚಾರ ವಿರೋಧಿ ಕಾರ್ಯಕರ್ತನಾಗಿದ್ದ ಕೇಜ್ರಿವಾಲ್ ಅವರ ಮೇಲೆ ‘ಶೀಶ್‌ಮಹಲ್’ ವಿವಾದದಿಂದ ಹಿಡಿದು ಮದ್ಯ ಅಬಕಾರಿ ನೀತಿ ಹಗರಣದವರೆಗೆ ಆರೋಪಗಳನ್ನು ಹೊರಿಸಲಾಗಿತ್ತು. ಈ ಸೋಲು ದೆಹಲಿ ಮೇಲಿನ ಅವರ ದಶಕದ ನಿಯಂತ್ರಣವನ್ನು ಕೊನೆಗೊಳಿಸಿದಂತಾಗಿದೆ.

ಆದರೆ ಬಿಜೆಪಿಯ (ಎಲ್ಲವೂ ಖಚಿತವಲ್ಲ) ಗೆಲುವಿನ ಹಿಂದಿನ ದೊಡ್ಡ ಅಂಶಗಳು ಮಧ್ಯಮ ವರ್ಗ ಮತ್ತು ಮಹಿಳಾ ಮತದಾರರಾಗಿದ್ದಾರೆ. ಈ ಎರಡು ವರ್ಗ ಈ ಹಿಂದೆ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಎಎಪಿಯ ಬಲವಾದ ಬೆಂಬಲಿಗರಾಗಿದ್ದರು.

‘ಮಹಿಳಾ’ ಮತದಾರರು

ಈ ಚುನಾವಣೆಯ ಆರಂಭದಲ್ಲಿಯೇ ಮಹಿಳೆಯರನ್ನು ಸಂಭಾವ್ಯ ಪ್ರಮುಖ ಮತಗಳ ನೆಲೆಯಾಗಿ ಗುರುತಿಸಿ ಬಿಜೆಪಿ, ಎಎಪಿ ಮತ್ತು ಕಾಂಗ್ರೆಸ್ ಎಲ್ಲರೂ ತಮ್ಮ ಪ್ರಣಾಳಿಕೆಗಳಲ್ಲಿ ಅವರಿಗಾಗಿ ವಿಶೇಷ ಭರವಸೆಗಳನ್ನು ನೀಡಿದ್ದರು. ದೆಹಲಿಯ ನೋಂದಾಯಿತ ಮತದಾರರಲ್ಲಿ ಶೇ.46ಕ್ಕಿಂತ ಹೆಚ್ಚು ಮಹಿಳಾ ಮತದಾರರಿದ್ದಾರೆ. ಅಂದರೆ ಸುಮಾರು 71 ಲಕ್ಷ ಮಹಿಳಾ ಮತದಾರನ್ನು ದೆಹಲಿ ವಿಧಾನಸಭಾ ಕ್ಷೇತ್ರವು ಹೊಂದಿದೆ.

ಮತದಾನದ ಹಿಂದಿನ ದಿನಗಳಲ್ಲಿ (ಅದು ಬುಧವಾರ), ಹೆಚ್ಚಿನ ಮಹಿಳೆಯರು ಮತ ಚಲಾಯಿಸಲು ಸಹಿ ಹಾಕುತ್ತಿದ್ದರು ಮತ್ತು ಅದು ಹೆಚ್ಚಿನ ಮತಗಳಾಗಿ ಬದಲಾಯಿತು. ಇದರಿಂದಾಗಿ ಈ ಚುನಾವಣಾ ಸಂದರ್ಭ ಮಹಿಳಾ ಮತದಾರರ ಸಂಖ್ಯೆ ಸುಮಾರು ಎರಡು ಪ್ರತಿಶತದಷ್ಟು ಏರಿಕೆ ಕಂಡಿತ್ತು.

2020ರ  ಚುನಾವಣೆಯಲ್ಲಿ ಎಎಪಿಯು ಸುಮಾರು ಶೇ. 60ರಷ್ಟು ಮಹಿಳಾ ಮತಗಳನ್ನು ಗಳಿಸಿತ್ತು ಎಂದು ರಾಜಕೀಯ ವಿಶ್ಲೇಷಕರು ಎನ್‌ಡಿಟಿವಿಗೆ ತಿಳಿಸಿದ್ದಾರೆ. ಆಗ ಬಿಜೆಪಿಯು ಕೇವಲ ಶೇ.35 ರಷ್ಟು ಮಾತ್ರ ಮಹಿಳಾ ಮತಗಳನ್ನು ಗಳಿಸಿತ್ತು. ಈ ಬಾರಿ ಎಲ್ಲವೂ ತಲೆಕೆಳಗಾಗಿರುವಂತೆ ಕಾಣುತ್ತಿದೆ. ತಿಂಗಳಿಗೆ ರೂ. 2,500 ನೇರ ನಗದು ವರ್ಗಾವಣೆಯ ಭರವಸೆ ನೀಡಿದ ಕೇಸರಿ ಪಕ್ಷದ ಕಡೆ ಮಹಿಳೆಯರು ತಿರುಗಿರುವುದು ಕಾಣುತ್ತಿದೆ.

ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದಂತಹ ಇತರ ಭರವಸೆಗಳನ್ನು ಬಿಜೆಪಿ ಮತ್ತು ಎಎಪಿಗಳೆರಡರಿಂದ ನೀಡಲಾಗಿತ್ತು. ಇದರ ಜೊತೆ ಬಿಜೆಪಿಯು ಗರ್ಭಿಣಿ ಮಹಿಳೆಯರಿಗೆ ನಗದು ಸಹಾಯ ನೀಡುವ ಎರಡನೇ ವಿಶೇಷ ಪ್ರತಿಜ್ಞೆ ಮಾಡಿತ್ತು. ಎಎಪಿ ಇದೇ ರೀತಿಯ ತಿಂಗಳಿಗೆ ರೂ. 2,100 ನೀಡುವ ಭರವಸೆ ನೀಡಿತ್ತು. ಆದರೆ ಇದು ನಿಷ್ಪರಿಣಾಮಕಾರಿಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷವು ಇದರ ಅನುಷ್ಠಾನ ವಿಳಂಬದ ತಪ್ಪು ಕಾರ್ಯತಂತ್ರ ಇದಕ್ಕೆ ಕಾರಣವೆಂದು  ತಜ್ಞರು ಎನ್‌ಡಿಟಿವಿಗೆ  ಎಂದು ಹೇಳಿದ್ದಾರೆ.

ಈ ಸಂಬಂಧ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮತ್ತು ಎಎಪಿ ನಡುವೆ ಹಲವಾರು ಪೈಪೋಟಿಗಳು ನಡೆದವು. ಆಗಲೂ ಕೇಜ್ರಿವಾಲ್ ಇದನ್ನು ಕಾರ್ಯರೂಪಕ್ಕೆ ತರಬೇಕಿತ್ತು ಎಂದು ತಜ್ಞರು ಹೇಳಿದ್ದಾರೆ.

ಇದರರ್ಥ ಮಹಿಳಾ ಮತದಾರರು ಒಂದು ಕಾಲದಲ್ಲಿ ಎಎಪಿಗೆ ಪ್ರಮುಖವಾಗಿದ್ದರು. ಈಗ ವಿಶೇಷವಾಗಿ ಮಹಿಳಾ ಮಧ್ಯಮ ವರ್ಗದ ಮತದಾರರು ತಮ್ಮ ನಿಷ್ಠೆಯನ್ನು ಬದಲಾಯಿಸಿದ್ದಾರೆ.

ಮಧ್ಯಮ ವರ್ಗ

2025ರ ಕೇಂದ್ರ ಬಜೆಟ್ ನಂತರ ಮಧ್ಯಮ ವರ್ಗದವರು ಬಿಜೆಪಿ ಪಾಳಯಕ್ಕೆ ಜಿಗಿದಿರುವುದು ಕಂಡು ಬರುತ್ತಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವೈಯಕ್ತಿಕ ಆದಾಯ ತೆರಿಗೆ ರಿಯಾಯಿತಿ ಮಿತಿಯಲ್ಲಿ ಭಾರಿ ಹೆಚ್ಚಳವನ್ನು ಘೋಷಿಸಿದರು. ರೂ. 12 ಲಕ್ಷ  ಹೊಂದಿರುವ ಜನರು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲವೆಂಬುದು ಈ ಘೋಷಣೆಯಾಗಿದೆ. ಈ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಈ ಕ್ರಮವನ್ನು ಶ್ಲಾಘಿಸಿ ಮಾತನಾಡಿದರು. ದಕ್ಷಿಣ ದೆಹಲಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿಯವರು ಆ ಅಂಶವನ್ನು ಮಂಡಿಸಿದರು.

ಭ್ರಷ್ಟಾಚಾರ ಹಗರಣಗಳಲ್ಲಿ ಎಎಪಿ ಸಿಲುಕಿದ ನಂತರ ಮಧ್ಯಮ ವರ್ಗದ ಮತಗಳು ಬಿಜೆಪಿಯತ್ತ ತಿರುಗಿದವು ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ. ಕೇಜ್ರಿವಾಲ್ ಮೇಲಿನ ಮದ್ಯ ನೀತಿ ವಿವಾದದ ಆರೋಪವು ಪ್ರಮುಖವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಮತ್ತು ಅವರ ಆಪ್ತ ಮನೀಶ್ ಸಿಸೋಡಿಯಾ ಇಬ್ಬರೂ ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದರು.

ಮಧ್ಯಮ ವರ್ಗದವರು ದೆಹಲಿಯ ಮತದಾರರಲ್ಲಿ ಸುಮಾರು 40 ಪ್ರತಿಶತದಷ್ಟಿದ್ದಾರೆ. ಇದು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಯಾವುದೇ ಚುನಾವಣೆಗೂ ಇವರು ನಿರ್ಣಾಯಕವಾಗಿದ್ದಾರೆ. ಬಿಜೆಪಿಯು ಇವರನ್ನು ತನ್ನ ಕಡೆಗೆ ಸೆಳೆಯಲು ಸಹಾಯ ಮಾಡಿದ್ದು ಆದಾಯ ತೆರಿಗೆ ವಿನಾಯಿತಿಯಾಗಿದೆ. ಇಷ್ಟು ಮಾತ್ರವಲ್ಲ ಕುಸಿಯುತ್ತಿರುವ ಮೂಲಸೌಕರ್ಯ ಮತ್ತು ವಾರ್ಷಿಕ ವಾಯು ಗುಣಮಟ್ಟದ ಬಿಕ್ಕಟ್ಟು ಕೂಡ ಕಾರಣವಾಗಿದೆ.

ಬಿಜೆಪಿ ಕಡೆ ಮತದಾರರು ಒಲವು ತೋರಿಸಲು ಮತ್ತೊಂದು ಪ್ರಮುಖ ‘ಆಕರ್ಷಕ’ವೆಂದರೆ 8ನೇ ವೇತನ ಆಯೋಗವಾಗಿದೆ. ಈ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಗಳಿಗೆ ದೊಡ್ಡ ಪರಿಷ್ಕರಣೆಯನ್ನು ಶಿಫಾರಸು ಮಾಡಿತು. ಅವರಲ್ಲಿ ಹೆಚ್ಚಿನವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಒಟ್ಟಾರೆಯಾಗಿ ಈ ಚುನಾವಣೆಯ ಫಲಿತಾಂಶದ ಹೊರತಾಗಿಯೂ, ಕೇಜ್ರಿವಾಲ್ ಅವರ ‘ಸ್ವಚ್ಛ’ ಮತ್ತು ‘ಭ್ರಷ್ಟಾಚಾರ ರಹಿತ’ ಇಮೇಜ್ ಕುಸಿದಿರುವಂತೆ ತೋರುತ್ತಿದೆ.

Delhi Election Results 2025 | ಎಎಪಿ ಘಟಾನುಘಟಿಗಳ ಹೀನಾಯ ಸೋಲು; ಅತಿಶಿ ಗೆಲುವು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...