Homeಕರ್ನಾಟಕಎಲೆಮರೆ-8 : ನಮ್ಮ ನಡುವಿನ ಮಂದಣ್ಣ - ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

ಎಲೆಮರೆ-8 : ನಮ್ಮ ನಡುವಿನ ಮಂದಣ್ಣ – ಪರಿಸರ ಪ್ರೇಮಿ ಮಳಿಮಠದ ಪಂಪಯ್ಯ

- Advertisement -
- Advertisement -

ಎಲೆಮರೆ-8

ಅರುಣ್‌ ಜೋಳದ ಕೂಡ್ಲಿಗಿ

ಕಳೆದ ಹದಿನಾಲ್ಕು ವರ್ಷದಿಂದ ಪಂಪಯ್ಯನ ಜತೆಗಿನ ಒಡನಾಟವನ್ನು `ಮಳೇಮಠದ ಪಂಪಯ್ಯನಿಂದಿಡಿದು ಪರಿಸರದ ಪಂಪಯ್ಯನವರೆಗೆ ಎನ್ನಬಹುದೇನೋ’. ಹೌದು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಾನು ಎಂ.ಎ.ಪಿಹೆಚ್.ಡಿಗೆ 2002-03 ರ ಹೊತ್ತಿಗೆ ವಿದ್ಯಾರ್ಥಿಯಾಗಿ ಸೇರಿದ ಆಸುಪಾಸಿನಲ್ಲೆ ಮೆಕಾನಿಕಲ್ ಡಿಪ್ಲೊಮಾ ಓದಿದ್ದ ಪಂಪಯ್ಯ ಕನ್ನಡ ವಿವಿಯ ವಿದ್ಯಾರಣ್ಯದಲ್ಲಿ ಬುಕ್ ಅಂಡ್ ಜನರಲ್ ಸ್ಟೋರ್ ತೆರೆದು ವ್ಯಾಪಾರಿಯಾಗಿ ಕ್ಯಾಂಪಸ್ ಪ್ರವೇಶಿಸಿದರು. ನಾವು ಆತನ ಅಂಗಡಿಯ ನಿತ್ಯದ ಒಡನಾಡಿಗಳಾದೆವು. ಅವರ ಮಾತುಕತೆ ನಮ್ಮನ್ನು ಆಪ್ತರನ್ನಾಗಿಸಿತು. ಹಕ್ಕಿ, ಹಾವು, ಕ್ರಿಮಿ, ಕೀಟ, ಕರಡಿಗಳ ಬಗ್ಗೆ ನಮಗೆ ತಿಳಿಯದ ಸಂಗತಿಗಳನ್ನು ಅಚ್ಚರಿಪಡುವಂತೆ ಕಥನ ಮಾಡಿ ವಿವರಿಸುತ್ತಿದ್ದರು. ಕನ್ನಡ ಸಾಹಿತ್ಯ ಜಾನಪದ ಅಂತೆಲ್ಲಾ ಪಾಠ ಮಾಡುವ ಅಧ್ಯಾಪಕರ ಜತೆ ಪಂಪಯ್ಯನೂ ಆಗ ಪರಿಸರದ ಅಧ್ಯಾಪಕನಂತೆ ಕಂಡದ್ದು ವಿಶೇಷವೇನಲ್ಲ. ಹಾಗಾಗಿಯೇ ಪ್ರೊ.ರಹಮತ್ ತರೀಕೆರೆ ಅವರು ಪಂಪಯ್ಯನನ್ನು ತೇಜಸ್ವಿ ಜೊತೆಗಿನ ಮಂದಣ್ಣನಿದ್ದಂತೆ ಎನ್ನುತ್ತಾರೆ.

ವಿದ್ಯಾರಣ್ಯ ಕ್ಯಾಂಪಸ್ಸಿನ ಮತ್ತು ಕಮಲಾಪುರದ ಅವರ ಜನರಲ್ ಸ್ಟೋರುಗಳಿಗೆ ಗುಡ್‍ಬೈ ಹೇಳಿದ ನಂತರ ವ್ಯಾಪಾರಿ ಪಂಪಯ್ಯನು ಪೂರ್ಣಪ್ರಮಾಣದಲ್ಲಿ `ಪರಿಸರದ ಪಂಪಯ್ಯ’ನಾಗಿ ಬದಲಾದರು. ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾದ ಇವರು ಹಂಪಿ ಪರಿಸರದ ಪಕ್ಷಿಪ್ರಾಣಿಗಳನ್ನು ಒಳಗೊಂಡ ವನ್ಯಜೀವಿಗಳನ್ನು ಸೆರೆಹಿಡಿದು ಈ ಭಾಗದ ಜೀವವೈವಿಧ್ಯಗಳನ್ನು ಲೋಕದೆದುರು ತೆರೆದಿಟ್ಟರು.

ಈತನಕ ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಂತೆಯೇ ಹಾವುಗಳ ಬಗೆಗೆ ಜನರಿಗೆ ತಿಳಿವನ್ನೂ ಮೂಡಿಸಿದ್ದಾರೆ. ಇದರ ಪರಿಣಾಮವಾಗಿ, ಹಾವುಕಂಡರೆ ಹೊಡೆಯಲು ಕೋಲು ಹುಡುಕುತ್ತಿದ್ದವರು ಈಗ ಪಂಪಯ್ಯನ ನಂಬರಿಗೆ ಕಾಲ್ ಮಾಡಿ ಹಾವು ಹಿಡಿಯಲು ಕರೆಯುತ್ತಾರೆ.

ಹಂಪಿಗೆ ಬರುವ ವನ್ಯಜೀವಿ ಪ್ರೇಮಿಗಳಿಗೆ, ಫೋಟೋಗ್ರಾಫರ್‍ಗಳಿಗೆ ಈ ಭಾಗದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯಿತ್ತು. ಕಾರಣ ಹಂಪಿಯ ಗೈಡ್‍ಗಳೆಲ್ಲಾ ಸ್ಮಾರಕಗಳಿಗೆ ಸೀಮಿತರಾದವರು. ಅಂತಹ ಕೊರತೆಯನ್ನು ಪಂಪಯ್ಯ ತುಂಬಿದರು. ಮೂರ್ನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುವ ಪಂಪಯ್ಯ ಇದೀಗ ಯಾರೇ ವನ್ಯಜೀವಿ ಫೋಟೋಗ್ರಾಫರ್ಸ್ ಬಂದರೆ ಆತನೆ ಮಾರ್ಗದರ್ಶಿ. ಸ್ವತಃ ಪಂಪಯ್ಯ ಅತ್ಯುತ್ತಮ ವನ್ಯಜೀವಿ ಫೋಟೋಗ್ರಾಫರ್. ಹಾರ್ನ್‍ಬಿಲ್‍ನಂತಹ ಅಂತಾರಾಷ್ಟ್ರೀಯ ವನ್ಯಜೀವಿ ಪತ್ರಿಕೆ ಮುಖಪುಟದಲ್ಲಿ ಪಂಪಯ್ಯ ಕ್ಲಿಕ್ಕಿಸಿದ ಬೆನ್ನ ಮೇಲೆ ಮರಿಗಳ ಹೊತ್ತ ಕರಡಿಯ ಫೋಟೋ ಪ್ರಕಟವಾಗಿತ್ತು. ದರೋಜಿಯ ಕರಡಿಧಾಮವನ್ನು ಒಳಗೊಂಡ ಅರಣ್ಯ ಇಲಾಖೆಯ ವರದಿ ಇತ್ಯಾದಿಗಳ ಸರಕಾರಿ ದಾಖಲೆಗಳ ಮುಖಪುಟವನ್ನೂ, ಕನ್ನಡ ವಿಶ್ವವಿದ್ಯಾಲಯದ ವಾರ್ಷಿಕ ಕ್ಯಾಲೆಂಡರುಗಳನ್ನೂ ಪಂಪಯ್ಯನ ಫೋಟೋಗಳು ಆವರಿಸಿವೆ. ಹಂಪಿ ಉತ್ಸವಗಳಲ್ಲಿ ಫೋಟೋಪ್ರದರ್ಶನ ಮಾಡಿ ಜನಸಾಮಾನ್ಯರ ಮೆಚ್ಚುಗೆಯನ್ನೂ ಪಡೆದಿದ್ದಾರೆ. ಹೀಗೆ ವನ್ಯಜೀವಿ ಫೋಟೋಗ್ರಫಿಗೆ ಹತ್ತಾರು ಪ್ರಶಸ್ತಿಗಳು ಅರಸಿ ಬಂದಿವೆ. ವನ್ಯಜೀವಿ ಫೋಟೋಗ್ರಫಿಯಲ್ಲಿ ಪಂಪಯ್ಯ ತನ್ನದೇ ಆದ ಗುರುತನ್ನು ಕಾಯ್ದುಕೊಂಡಿದ್ದಾರೆ.

ವ್ಯಕ್ತಿಯಾಗಿ ಪಂಪಯ್ಯ ವನ್ಯಜೀವಿ ಪರಿಸರ ಅಂತೆಲ್ಲಾ ಹತ್ತಾರು ಸೂಕ್ಷ್ಮಗಳನ್ನು ಅರಿತಿರುವ ಇವರು ಶಾಲಾ ಮಕ್ಕಳಿಗೂ, ಹಲವು ಬಗೆಯ ಕಾರ್ಯಕ್ರಮಗಳಲ್ಲಿ ಜನಸಾಮಾನ್ಯರಿಗೂ ಭಾಷಣ, ಸಂವಾದ, ಚರ್ಚೆಗಳ ಮೂಲಕ ಈ ಅರಿವನ್ನು ಸಮುದಾಯಕ್ಕೆ ವಿಸ್ತರಿಸುತ್ತಿದ್ದಾರೆ. ಈ ಕಾರಣಕ್ಕೆ ಪಂಪಯ್ಯ ಸಮುದಾಯದ ಪರಿಸರ ಪ್ರಜ್ಞೆಯನ್ನು ಸೂಕ್ಷ್ಮಗೊಳಿಸುತ್ತಿದ್ದಾರೆ. ಇವರು ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿದ್ದಾಗಲೂ, ಕಮಲಾಪುರ ಪಟ್ಟಣ ಪಂಚಾಯ್ತಿಯ ಸದಸ್ಯ ಮತ್ತು ಅಧ್ಯಕ್ಷರಾಗಿದ್ದಾಗಲೂ ಈ ಸರಕಾರಿ ಸಂಸ್ಥೆಗಳನ್ನು ಪರಿಸರ ಪ್ರಜ್ಞೆಯನ್ನು ರೂಪಿಸುವುದಕ್ಕೆ ಬಳಸಿಕೊಂಡದ್ದು ವಿಶೇಷ.

ಇದೀಗ ತನ್ನ ಪರಿಸರದ ಅರಿವು ಮತ್ತು ಕಾಳಜಿಯನ್ನು ವಿಸ್ತರಿಸುವ ಪ್ರಾಯೋಗಿಕ ಹಂತಕ್ಕೆ ಪಂಪಯ್ಯ ಬಂದಿದ್ದಾರೆ. ಐದು ವರ್ಷದ ಹಿಂದೆ ಬರಡಾಗಿದ್ದ ನೆಲವೊಂದನ್ನು ಹಸಿರಾಗಿಸಿ ಗಮನ ಸೆಳೆದಿದ್ದಾರೆ. ಹೊಸಪೇಟೆ ತಾಲೂಕಿನ ಕಮಲಾಪುರದಿಂದ ನಾಲ್ಕು ಕಿಲೋಮೀಟರ್ ಅಂತರದ ತುಂಗಭದ್ರಾ ಜಲಾಶಯದ (ಎಚ್.ಎಲ್.ಸಿ) ಮೇಲ್ಮಟ್ಟದ ಕಾಲುವೆಯ ಬಳಿ ತುಂಗಭದ್ರ ಮಂಡಳಿಗೆ ಸೇರಿದ ಮೂರುವರೆ ಎಕರೆ ಪ್ರದೇಶದಲ್ಲಿ 60 ಬಗೆಯ 800ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಗಿಡಗಳನ್ನು ಪಡೆದದ್ದು ಬಿಟ್ಟರೆ, ನೀರು ಗೊಬ್ಬರ ಪಾಲನೆಯನ್ನು ಪಂಪಯ್ಯನೇ ಸ್ವಂತ ಖರ್ಚಿನಲ್ಲಿ ನಿರ್ವಹಿಸಿದ್ದಾರೆ.

ಇದಕ್ಕೆ ಹೊಂದಿಕೊಂಡಂತೆ ಪಂಪಯ್ಯನ ಸ್ವಂತದ ಒಂದೆಕರೆ ಹೊಲವೂ ಕಾಡಿನಂತಿದೆ. ಬೇಸಿಗೆಯಲ್ಲಿ ಪ್ರಾಣಿಪಕ್ಷಿಗಳ ನೀರಿನ ದಾಹ ತಣಿಸಲು ಕೃಷಿಹೊಂಡ ಹಾಕಿಸಿದ್ದಾರೆ. ಫೋಟೋಗ್ರಫಿಗಾಗಿ ಬಂಕರ್ ನಿರ್ಮಿಸಿದ್ದಾರೆ. ಇದೀಗ ಹತ್ತಾರು ವಿಧದ ಪಕ್ಷಿ ಪ್ರಾಣಿ ವನ್ಯಜೀವಿಗಳು ಈ ಪುಟ್ಟ ಅರಣ್ಯದ ಸಂಗಾತಿಗಳಾಗಿವೆ. ಹೀಗೆ ಕಮಲಾಪುರದ ಮಳೇಮಠದ ಪಂಪಯ್ಯ ನಿಧಾನಕ್ಕೆ `ಪರಿಸರದ ಪಂಪಯ್ಯ’ನಾಗಿ ರೂಪಾಂತರಗೊಂಡ ಪಯಣವೇ ಕುತೂಹಲಕಾರಿಯಾಗಿದೆ.

`1994 ರಲ್ಲಿ ದರೋಜಿ ಕರಡಿಧಾಮ ಆದಾಗ ಅದರ ಓಡಾಟದಲ್ಲಿ ಸಿಕ್ಕ ಫೋಟೋಗ್ರಾಫರ್ಸ್, ವನ್ಯಜೀವಿ ತಜ್ಞರುಗಳ ಜತೆಗಿನ ಒಡನಾಟವೇ ನನ್ನನ್ನು ಪರಿಸರಕ್ಕೆ ಹತ್ತಿರ ತಂದಿತು. ಅಲ್ಲಿಂದ ನನ್ನ ಆಸಕ್ತಿ ವನ್ಯಜೀವಿ ಪರಿಸರ ಫೋಟೋಗ್ರಫಿ ಅಂತೆಲ್ಲಾ ಹೆಚ್ಚಾಯಿತು, ಇದೀಗ ಪುಟ್ಟ ಕಾಡು ಬೆಳೆಸುವ ಮಟ್ಟಕ್ಕೆ ಬಂದಿದೆ. ಪರಿಸರದ ಬಗೆಗೆ ಸಮುದಾಯಗಳಿಗೆ, ಈಗ ಬೆಳೆಯುವ ಮಕ್ಕಳಿಗೆ ಹೆಚ್ಚಿನ ತಿಳವಳಿಕೆ ಕೊಡಬೇಕು ಎನ್ನುವುದು ನನ್ನ ಕನಸು’ ಎಂದು ಪಂಪಯ್ಯ ಹೇಳುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿ ಗಲಭೆ ಪ್ರಕರಣದಿಂದ ಒಂಬತ್ತು ಜನರನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದ ಪ್ರಕರಣದಲ್ಲಿ ಒಂಬತ್ತು ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ. ಸಾಕ್ಷ್ಯಗಳು ನಿರ್ದಿಷ್ಟತೆಯ ಕೊರತೆ ಮತ್ತು ಸಾಮಾನ್ಯ ಸ್ವರೂಪದ್ದಾಗಿರುವುದರಿಂದ ಪ್ರಕರಣದಲ್ಲಿ ಅವುಗಳನ್ನು ನಂಬಲಾಗುವುದಿಲ್ಲ ಎಂ ನ್ಯಾಯಾಲಯ ಹೇಳಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ...

ಚುನಾವಣಾ ಕಾರ್ಯಕ್ಕೆ ಅರಣ್ಯ ಸಿಬ್ಬಂದಿ : ಅಸ್ಸಾಂ ಸರ್ಕಾರದ ಆದೇಶಕ್ಕೆ ಎನ್‌ಜಿಟಿ ತಡೆ

ವಿಧಾನಸಭೆ ಚುನಾವಣೆಗೆ ಅಸ್ಸಾಂ ಅರಣ್ಯ ಸಂರಕ್ಷಣಾ ಪಡೆಯ 1,600 ಸಿಬ್ಬಂದಿಯನ್ನು ನಿಯೋಜಿಸಲು ಕೋರಿದ್ದ ಅಸ್ಸಾಂ ಸರ್ಕಾರದ ಆದೇಶವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪೂರ್ವ ವಲಯ ಪೀಠ ಗುರುವಾರ (ಮಾ.2) ತಡೆಹಿಡಿದಿದೆ. ಈ ಆದೇಶವನ್ನು...

‘ಕರೂರು ದುರಂತದಲ್ಲಿ ಪಿತೂರಿ ಇದೆ’ ಈ ಘಟನೆಯಲ್ಲಿ ನನಗೂ ನ್ಯಾಯ ಬೇಕು: ಟಿವಿಕೆ ಮುಖ್ಯಸ್ಥ ನಟ, ರಾಜಕಾರಣಿ ವಿಜಯ್ ಆರೋಪ  

ಕರೂರಿನಲ್ಲಿ ನಡೆದ ದುರಂತ ಕಾಲ್ತುಳಿತ ಮತ್ತು ಅವರ ಕೊನೆಯ ಚಿತ್ರ ಜನನಾಯಗನ್ ಬಿ ಡುಗಡೆಯ ಹಿಂದೆ ಜಂಟಿ ಕುತಂತ್ರ ಮತ್ತು ಪಿತೂರಿ ಇದೆ ಎಂದು ಟಿವಿಕೆ ಮುಖ್ಯಸ್ಥ ವಿಜಯ್ ಗುರುವಾರ ಆರೋಪಿಸಿದ್ದಾರೆ ಮತ್ತು...

ತೆಲಂಗಾಣ| ಗೋಮಾಂಸ ಮಾರಾಟ ಆರೋಪ; ಮುಸ್ಲಿಂ ಸಮುದಾಯದ ತಂದೆ-ಮಗನ ಮೇಲೆ ಹಲ್ಲೆ

ಹನುಮಾನ್ ಜಯಂತಿ ಸಂದರ್ಭದಲ್ಲಿ ಗೋಮಾಂಸ ಮಾರಾಟ ಮಾಡಿದ ಆರೋಪದ ಮೇಲೆ ಹಿಂದುತ್ವವಾದಿ ಗುಂಪೊಂದು 60 ವರ್ಷದ ಮುಸ್ಲಿಂ ವ್ಯಕ್ತಿ ಮತ್ತು ಆತನ ಹದಿಹರೆಯದ ಮಗನ ಮೇಲೆ ಹಲ್ಲೆ ನಡೆಸಿರುವ ಘಟನೆ ತೆಲಂಗಾಣದ ಜಗ್ತಿಯಾಲ್...

‘ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ’..ಚುನಾವಣೆ ಗೆಲ್ಲಲು ಧರ್ಮ ಮುಂದಿಟ್ಟ ಗುರುವಾಯೂರು ಬಿಜೆಪಿ ಅಭ್ಯರ್ಥಿ

ಕೇರಳದ ಗುರುವಾಯೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಗೋಪಾಲಕೃಷ್ಣನ್ ಚುನಾವಣೆ ಗೆಲ್ಲಲು ಧರ್ಮವನ್ನೇ ಮುಖ್ಯ ಅಸ್ತ್ರವನ್ನಾಗಿ ಬಳಸಿಕೊಂಡಿದ್ದು, ಕಳೆದ 50 ವರ್ಷಗಳಲ್ಲಿ ಕೇವಲ ಮುಸ್ಲಿಮರೇ ಶಾಸಕರಾಗಿದ್ದಾರೆ ಎಂಬುವುದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಪ್ರಚಾರದ ಭಾಗವಾಗಿ...

ಹೊಸ ಹಿಂದೂ ದೇವಾಲಯಕ್ಕೆ ಭೂಮಿ ಮಂಜೂರು ಮಾಡಿದ ಸಿಂಗಾಪುರ ಆಡಳಿತ

ಸಿಂಗಪುರದಲ್ಲಿ ಹೆಚ್ಚುತ್ತಿರುವ ಹಿಂದೂ ಸಮುದಾಯದ ಅಗತ್ಯಗಳನ್ನು ಪೂರೈಸಲು ಸಿಂಗಾಪುರ ಸರ್ಕಾರವು ನಗರ-ರಾಜ್ಯದ ಯಿಶುನ್ ಅವೆನ್ಯೂ 3 ರಲ್ಲಿ ಹೊಸ ಹಿಂದೂ ದೇವಾಲಯವನ್ನು ನಿರ್ಮಿಸಲು ಭೂಮಿ ಮಂಜೂರು ಮಾಡಿದೆ. ಏಪ್ರಿಲ್ 1 ರ ಬುಧವಾರದ ಮಾಧ್ಯಮ...

ಕೇರಳ ಚುನಾವಣೆಗೆ ಮುನ್ನ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಬೆಂಬಲ ಘೋಷಿಸಿದ ‘ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ’

ಎಡ ಸರ್ಕಾರ ಕೈಗೊಂಡ ಅಭಿವೃದ್ಧಿ ಉಪಕ್ರಮಗಳು ಆದಿವಾಸಿ, ದಲಿತ ಮತ್ತು ಇತರ ಅಂಚಿನಲ್ಲಿರುವ ಸಮುದಾಯಗಳನ್ನು ಬದಿಗಿಟ್ಟಿವೆ ಎಂದು ಆರೋಪಿಸಿ, ಅಂಬೇಡ್ಕರ್‌ವಾದಿ ಪ್ರಜಾಸತ್ತಾತ್ಮಕ ರಂಗ (ಎಡಿಎಫ್) ಬುಧವಾರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗ...

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಪೂರ್ವಾನುಮತಿ ನೀಡಲು ಹೈಕೋರ್ಟ್ ನಿರ್ದೇಶನ

ಪರಿಸರ ಸ್ನೇಹಿ ಬಟ್ಟೆ ಚೀಲಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳಿಗೆ ಸಂಬಂಧಿಸಿದಂತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಅನುಮತಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ವರದಿಯಾಗಿದೆ....

ನ್ಯಾಯಾಂಗ ಅಧಿಕಾರಿಗಳನ್ನು ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ: ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಎಸ್‌ಐಆರ್ ಕಾರ್ಯದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗಳನ್ನು 'ರಕ್ಷಿಸುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ' ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂಷಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರುಗಳನ್ನು ಅಳಿಸಿಹಾಕಿದ್ದಕ್ಕಾಗಿ ಬುಧವಾರ ಪ್ರತಿಭಟನಾಕಾರರು ಹಲವಾರು...

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾಗೆ ಕೋಕ್, ಅಶೋಕ್ ಮಿತ್ತಲ್ ಗೆ ಅಧಿಕಾರ: ವರದಿ

ಮಹತ್ವದ ಬೆಳವಣಿಗೆಯೊಂದರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) ರಾಜ್ಯಸಭೆಯಲ್ಲಿ ರಾಘವ್ ಚಡ್ಡಾ ಅವರನ್ನು ಉಪನಾಯಕ ಹುದ್ದೆಯಿಂದ ಬದಲಾಯಿಸಲು ಮುಂದಾಗಿದ್ದು, ಇದು ಪಕ್ಷದೊಳಗಿನ ಆಂತರಿಕ ಬಿರುಕು ಉಂಟಾಗಿರುವ ಲಕ್ಷಣಗಳನ್ನು ಸೂಚಿಸುತ್ತದೆ. ಮೇಲ್ಮನೆಯಲ್ಲಿ ಪಕ್ಷದ ಹೊಸ...