Homeಕರ್ನಾಟಕಶಿಕ್ಷಣದ ರಾಷ್ಟ್ರೀಕರಣಕ್ಕಾಗಿ, JNU ಉಳಿವಿಗಾಗಿ ಒತ್ತಾಯ: ’ಉಚಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ’ ಅಸ್ತಿತ್ವಕ್ಕೆ, ನಾಳೆ...

ಶಿಕ್ಷಣದ ರಾಷ್ಟ್ರೀಕರಣಕ್ಕಾಗಿ, JNU ಉಳಿವಿಗಾಗಿ ಒತ್ತಾಯ: ’ಉಚಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ’ ಅಸ್ತಿತ್ವಕ್ಕೆ, ನಾಳೆ ಮಹತ್ವದ ಸಭೆ.

KVS, BVS, SFI, CFI, NSUI, SIO ಹಾಗೂ ವಿದ್ಯಾರ್ಥಿ ಜನತಾದಳದ ಪ್ರತಿನಿಧಿಗಳೂ ಸಹ ಒಕ್ಕೊರಲಿನಿಂದ ಈ ಸಭೆಯಲ್ಲಿ ಭಾಗವಹಿಸಿ ಐಕ್ಯಮತ್ಯ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.

- Advertisement -
- Advertisement -

ಜೆಎನ್‌ಯು ಪ್ರತಿಭಟನೆಯ ನಂತರ ಕರ್ನಾಟಕದಲ್ಲಿ ಎಲ್ಲಾ ಧಾರೆಗಳ ವಿದ್ಯಾರ್ಥಿ ಸಂಘಟನೆಗಳು ಒಂದೆಡೆ ಸೇರುತ್ತಿರುವ ಪ್ರಯತ್ನವೊಂದು ಆರಂಭವಾಗಿದೆ. ಆ ಪ್ರಯತ್ನದ ಮುಂಚೂಣಿಯಲ್ಲಿರುವವರು ಹೇಳಿದ್ದನ್ನು ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಶಿಕ್ಷಣ ಪ್ರತಿಯೊಬ್ಬರ ಮೂಲಭೂತ ಹಕ್ಕು. ಅದು ಉಚಿತವಾಗಿ, ಸಮಾನವಾಗಿ ಎಲ್ಲರಿಗೂ ಕಡ್ಡಾಯವಾಗಿ ಸಿಗಬೇಕೆಂಬುದು ಸಂವಿಧಾನ ಆಶಯ. ಅದಕ್ಕಾಗಿ ಸಾವಿತ್ರಿಬಾಯಿ ಫುಲೆ, ಮಹಾತ್ಮ ಜ್ಯೋತಿಬಾ ಫುಲೆ, ಡಾ.ಬಿ.ಆ‌ರ್‌ ಅಂಬೇಡ್ಕರ್‌ ಸೇರಿದಂತೆ ನೂರಾರು ಮಹನೀಯರು ಹೋರಾಡಿದ್ದಾರೆ. ಇಂದಿಗೂ ಆ ಹೋರಾಟ ನಡೆಯುತ್ತಲೇ ಇದೆ. ಆದರೆ ಆಳುವ ಸರ್ಕಾರಗಳು ಮಾತ್ರ ಶಿಕ್ಷಣ ನೀಡುವ ತಮ್ಮ ಸಾಂವಿಧಾನಿಕ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸದಾ ಪ್ರಯತ್ನಿಸುತ್ತಿರುತ್ತವೆ. ಮನಬಂದಂತೆ ಖಾಸಗಿ ಸಂಸ್ಥೆಗಳನ್ನು ತೆರೆಯಲು ಅವಕಾಶ ಕೊಡುವುದು, ಸರ್ಕಾರಿ ಶಾಲಾ-ಕಾಲೇಜುಗಳನ್ನು ಮುಚ್ಚುವುದರಿಂದ ಹಿಡಿದು ಈಗ JNUವಿನಲ್ಲಿ ಯಥೇಚ್ಚ ಶುಲ್ಕ ಹೆಚ್ಚಳದವರೆಗೆ ಸರ್ಕಾರ ಹುನ್ನಾರ ನಡೆಯುತ್ತಲೇ ಇದೆ.

ಸರ್ಕಾರದ ಈ ಹುನ್ನಾರವನ್ನು ಬಯಲುಗೊಳಿಸಲು, JNU ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಲು ಮತ್ತು ಸರ್ವರಿಗೂ ಉಚಿತ ಶಿಕ್ಷಣದ ಹಕ್ಕಿನ ದ್ವನಿಯನ್ನು ದೇಶಾದ್ಯಂತ ಪಸರಿಸಲು ಕರ್ನಾಟಕದ ಪ್ರಜ್ಞಾವಂತ ಬಳಗವೊಂದು ಸಿದ್ದಗೊಂಡಿದೆ. ಅದು ಕರ್ನಾಟಕದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳನ್ನು ಒಂದೆಡೆ ತಂದು ಈ ಹೋರಾಟವನ್ನು ಮುನ್ನಡೆಸಲು ತೀರ್ಮಾನಿಸಿದೆ. ಆ ನೂತನ ಪ್ರಯತ್ನವೇ ’ಉಚಿತ ಶಿಕ್ಷಣಕ್ಕಾಗಿ ವಿದ್ಯಾರ್ಥಿ ಸಂಘಟನೆಗಳ ಒಕ್ಕೂಟ’ವಾಗಿದೆ.

ಇದರ ಮೊದಲ ಪೂರ್ವಭಾವಿ ಸಭೆ ಹಿಂದುಳಿದ  ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಡಾ.ಸಿ.ಎಸ್‌ ದ್ವಾರಕನಾಥ್‌ ಮತ್ತು ಯುವ ಹೋರಾಟಗಾರರಾದ ಬಿ.ಆರ್‌ ಭಾಸ್ಕರ್‌ ಪ್ರಸಾದ್‌ರವರ ನೇತೃತ್ವದಲ್ಲಿ ನವೆಂಬರ್‌ 23ರಂದು ಬೆಂಗಳೂರಿನ ಗಾಂಧಿನಗರದಲ್ಲಿ ನಡೆದಿದೆ. KVS, BVS, SFI, CFI, NSUI, SIO ಹಾಗೂ ವಿದ್ಯಾರ್ಥಿ ಜನತಾದಳದ ಪ್ರತಿನಿಧಿಗಳೂ ಸಹ ಒಕ್ಕೊರಲಿನಿಂದ ಈ ಸಭೆಯಲ್ಲಿ ಭಾಗವಹಿಸಿ ಐಕ್ಯಮತ್ಯ ಸೂಚಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಮುಂದಿನ ಸಭೆಯು ನವೆಂಬರ್‌ 25ರ ಸೋಮವಾರ ಸಂಜೆ 4ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್‌‌ನಲ್ಲಿ ನಡೆಯಲಿದ್ದು ABVP, AISA, AIDSO, DSF ಸಂಘಟನೆಗಳಿಗೂ ಆಹ್ವಾನ ನೀಡಲಾಗಿದ್ದು ಅವರೂ ಕೂಡ ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಿ.ಆರ್‌ ಭಾಸ್ಕರ್‌ ಪ್ರಸಾದ್‌ ತಿಳಿಸಿದ್ದಾರೆ.

LKGಯಿಂದ PHDವರೆಗೂ ದೇಶದ ಪ್ರತಿಯೊಬ್ಬರಿಗೂ ಶಿಕ್ಷಣ ಉಚಿತವಾಗಿರಬೇಕು. ಶಿಕ್ಷಣ ರಾಷ್ಟ್ರೀಕರಣವಾಗಬೇಕು. ಜಾತಿ-ಲಿಂಗ ಧರ್ಮಗಳ ತಾರತಮ್ಯವಿಲ್ಲದೇ ಈ ದೇಶದ ಪ್ರತಿಯೊಬ್ಬರಿಗೂ ಸಮಾನ ಶಿಕ್ಷಣ ಸಿಗಬೇಕೆಂಬುದು ಒಕ್ಕೂಟದ ಆಶಯವಾಗಿದೆ. ಇದರ ಜೊತೆಗೆ JNU ಉಳಿಸಿಕೊಳ್ಳೋಣ ಬನ್ನಿ, ಈ ಹೋರಾಟ ನಮಗಾಗಿ, ನಮ್ಮ ಮುಂದಿನ ಪೀಳಿಗೆಗಾಗಿ, ದೇಶದ ಭವ್ಯ ಭವಿಷ್ಯಕ್ಕಾಗಿ ಎಂದು ಸಹ ಕರೆ ಕೊಡಲಾಗಿದೆ.

JNU ವಿದ್ಯಾರ್ಥಿಗಳ ಹೋರಾಟಕ್ಕೆ ನಾವು ಹೇಗೆ ಬೆಂಬಲಿಸಬಹುದು? ಇದರೊಂದಿಗೆ ಎಲ್ಲಾ ಜಾತಿಯ ವಿದ್ಯಾರ್ಥಿಗಳಿಗೆ ಪ್ರೈಮರಿಯಿಂದ ಪಿಎಚ್.ಡಿ‌ ವರಗೂ ಉಚಿತ ಶಿಕ್ಷಣ ನೀಡಬೇಕು ಮತ್ತು‌ ಅತಿಮುಖ್ಯವಾಗಿ ಶಿಕ್ಷಣವನ್ನು ರಾಷ್ಡ್ರೀಕರಣ ಮಾಡಬೇಕು ಎಂಬುದರ ಬಗ್ಗೆ ನಮ್ಮ ಗಾಂಧಿನಗರದ ಕಛೇರಿಯಲ್ಲಿ ಇಂದು ಕರೆದಿದ್ದ ಸಭೆಗೆ ಬಹುತೇಕ ಎಲ್ಲಾ ವಿದ್ಯಾರ್ಥಿ ಸಂಘಟನೆಗಳ ನಾಯಕರು ತಮ್ಮ ಪಕ್ಷಬೇದ ತೊರೆದು, ಸೈದ್ದಾಂತಿಕ ಬಿನ್ನಾಭಿಪ್ರಾಯ ಬದಿಗಿಟ್ಟು ಬಂದಿದ್ದರು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಸಭೆಯಲ್ಲಿ ಹಲವು ವಿಷಯಗಳ ಕುರಿತಂತೆ ಸುದೀರ್ಘವಾಗಿ ಚರ್ಚೆಯಾಯಿತು. ಈ ವಿಷಯದ ಬಗ್ಗೆ ಕಾಳಜಿ ಇರುವ ಇನ್ನಷ್ಟು ಜನರನ್ನು ಕರೆಸಬೇಕೆಂದು ತೀರ್ಮಾನಿಸಲಾಯಿತು ಎಂದು ಸಿ.ಎಸ್.ದ್ವಾರಕಾನಾಥ್‌ರವರು ತಿಳಿಸಿದ್ದಾರೆ.

ನಾನು 2002ರಿಂದ 2010ರವರೆಗೆ ದೆಹಲಿಯ ಜೆಎನ್‌ಯುನಲ್ಲಿ ಎಂ.ಎ, ಎಂ.ಫಿಲ್‌ ಮತ್ತು ಪಿಎಚ್‌ಡಿ ಮಾಡಿದ್ದೇನೆ. ಜೆಎನ್‌ಯು ಅತ್ಯುತ್ತಮ ಶಿಕ್ಷಣವನ್ನು ಅತಿ ಕಡಿಮೆ ವೆಚ್ಚದಲ್ಲಿ ನೀಡುತ್ತದೆ. ಹಾಗಾಗಿಯೇ ಭಾರತದ ಎಲ್ಲಾ ಮೂಲೆಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳು ಅಲ್ಲಿಗೆ ಬರುತ್ತಾರೆ. ನಾನು ಕೂಡ ಹಳ್ಳಿಯಿಂದ ಹೋಗಿ ಅಲ್ಲಿ ವರ್ಷಕ್ಕೆ ಕೇವಲ 300 ರೂ ಕಟ್ಟಿ ಓದಿದವನು. ಅದಿಲ್ಲದಿದ್ದರೆ ನಾನು ಇಷ್ಟು ಮುಂದೆ ಬರಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲಿ ಕಮ್ಯುನಿಷ್ಟ್‌ ಪ್ರಭಾವ ಹೆಚ್ಚಾಗಿ ಇದ್ದರೂ ಕೂಡ ಯಾರ ಮೇಲೆಯು ಅವರು ತಮ್ಮ ಸಿದ್ದಾಂತವನ್ನು ಹೇರುವುದಿಲ್ಲ. ಅಲ್ಲಿ ABVP, NSUI ಸಹ ಇದೆ. ನಾವು ಕೂಡ ಬಹುಜನ್‌ ಸ್ಟೂಟೆಂಡ್ಸ್‌ ಫ್ರಂಟ್‌ ಎಂಬ ಸಂಘಟನೆ ಶುರು ಮಾಡಿದ್ದೆವು. ಅಷ್ಟೆಲ್ಲ ಸಂಘಟನೆಗಳು ಇದ್ದರೂ ಯಾರು ಯಾರಿಗೂ ಒತ್ತಾಯ ಮಾಡುವುದಿಲ್ಲ. ಅಲ್ಲಿ ಮುಕ್ತ ವಾತಾವರಣ ಇದ್ದು ಇಡೀ ದೇಶದ ವಸ್ತುಸ್ಥಿತಿಯನ್ನು ನಮಗೆ ಅರ್ಥ ಮಾಡಿಸುತ್ತದೆ. ಅದೇ ಬಲಿಷ್ಟ ಭಾರತ ಕಟ್ಟಲು ಎಲ್ಲರಿಗೂ ಪ್ರೇರಣೆ ಕೊಡುತ್ತದೆ. ಅಲ್ಲಿಂದ ಹೊರಬಂದವರು ಅದೇ ಆಲೋಚನೆಗಳನ್ನು ಬಿತ್ತುತ್ತಾರೆ ಎಂಬುದೇ ಬಿಜೆಪಿ ಸರ್ಕಾರಕ್ಕೆ ತಲೆನೋವಾಗಿದೆ. ಅದೊಂದೇ ಕಾರಣಕ್ಕೆ ಕೇಂದ್ರ ಸರ್ಕಾರ ಜೆಎನ್‌ಯು ಮುಗಿಸಲು ಹೊರಟಿದೆ. ಅದನ್ನು ಉಳಿಸಲು ನಾವು ಕರ್ನಾಟಕದಲ್ಲಿ ಒಂದೂಗೂಡುತ್ತಿದ್ದೆವೆ. – ಶ್ರೀನಿವಾಸ್‌, ಬಹುಜನ ವಿದ್ಯಾರ್ಥಿ ಸಂಘ(BVS)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. Only basic education should be given free by the state . Higher education should be made available to only those who have the aptitude for it .It should not be based on any kind of reservation .

  2. ತುಂಬಾ ಒಳ್ಳೆಯ ಚರ್ಚೆ ಇದಾಗಿದ್ದು ಎಲ್ಲಾ ಮದ್ಯಮ . ಮತ್ತು ಬಡವರಿಗೂ ತುಂಬಾ ಉಪಯುಕ್ತ ಮಾಹಿತಿ ಎಲ್ಲರು ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

- Advertisment -

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...