Homeಮುಖಪುಟ‘ನಿಮ್ಮ ವಿಷವನ್ನು ಕೇರಳ ದೂರವಿಟ್ಟಿದೆ; ಒಬ್ಬ ಗೆದ್ದಿದ್ದಾರೆ, ಆದರೆ ಅದನ್ನು ಮುಚ್ಚುತ್ತೇವೆ’: ಬಿಜೆಪಿಗೆ ಸಿಪಿಐ(ಎಂ) ಸಂಸದ...

‘ನಿಮ್ಮ ವಿಷವನ್ನು ಕೇರಳ ದೂರವಿಟ್ಟಿದೆ; ಒಬ್ಬ ಗೆದ್ದಿದ್ದಾರೆ, ಆದರೆ ಅದನ್ನು ಮುಚ್ಚುತ್ತೇವೆ’: ಬಿಜೆಪಿಗೆ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್

- Advertisement -
- Advertisement -

ಕೇಂದ್ರದ ಬಿಜೆಪಿ ಸರ್ಕಾರ ಮಂಡಿಸಿರುವ ವಕ್ಫ್ ತಿದ್ದುಪಡಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ ಸಿಪಿಐ(ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, ಸರ್ಕಾರವು ಉದ್ದೇಶಪೂರ್ವಕವಾಗಿ ಜನರನ್ನು ವಿಭಜಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರವು ನಿಜವಾಗಿಯೂ ಸಂವಿಧಾನವನ್ನು ನಂಬಿದರೆ, ಅದು ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ತಮ್ಮ ಭಾಷಣದ ಸಮಯದಲ್ಲಿ, ಇತ್ತಿಚೆಗೆ ಬಿಡುಗಡೆಯಾದ ಮಲಯಾಳಂ ಸಿನಿಮಾ ಎಂಪುರಾನ್ ಅನ್ನು ಉಲ್ಲೇಖಿಸಿದ ಬ್ರಿಟ್ಟಾಸ್, ಬಿಜೆಪಿ ಸಂಸದ ಸುರೇಶ್ ಗೋಪಿ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ. ನಿಮ್ಮ ವಿಷವನ್ನು ಕೇರಳ

ಸದನದಲ್ಲಿರುವ ಬಿಜೆಪಿ ಸದಸ್ಯರಲ್ಲಿ ಎಂಪೂರನ್‌ ಸಿನಿಮಾದ ‘ಮುನ್ನಾ’ ಎಂಬ ಪಾತ್ರಧಾರಿಯಂತ ವ್ಯಕ್ತಿಯಿದ್ದಾರೆ ಎಂದು ಬ್ರಿಟ್ಟಾಸ್ ಪರೋಕ್ಷವಾಗಿ ಬಿಜೆಪಿ ಸಂಸದ ಸುರೇಶ್ ಗೋಪಿಯನ್ನು ಉಲ್ಲೇಖಿಸಿದ್ದಾರೆ. ನಂತರ ಅವರು,“ನಾವು ನಿಮ್ಮ ವಿಷವನ್ನು ಕೇರಳದಿಂದ ದೂರವಿಟ್ಟಿದ್ದೇವೆ. ಆದಾಗ್ಯೂ, ಒಬ್ಬ ವ್ಯಕ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಶೀಘ್ರದಲ್ಲೇ ಆ ಖಾತೆಯನ್ನು ಸಹ ಮುಚ್ಚಲಾಗುವುದು.” ಎಂದು ಹೇಳಿದ್ದಾರೆ. ನಿಮ್ಮ ವಿಷವನ್ನು ಕೇರಳ

ಜಾನ್ ಬ್ರಿಟ್ಟಾಸ್ ಅವರ ಭಾಷಣದ ಆಯ್ದ ಭಾಗಗಳು:

“ಕಳೆದ ವರ್ಷವೊಂದರಲ್ಲೇ, ಕ್ರಿಶ್ಚಿಯನ್ನರ ಮೇಲೆ ಸುಮಾರು 700 ದಾಳಿಗಳು ನಡೆದಿವೆ. ಮಣಿಪುರದಲ್ಲಿ, ಅವರು 200 ಕ್ಕೂ ಹೆಚ್ಚು ಚರ್ಚ್‌ಗಳನ್ನು ಸುಟ್ಟುಹಾಕಿದರು. ಕಳೆದ ಎರಡು ಅಥವಾ ಮೂರು ದಿನಗಳಿಂದ ಬಿಜೆಪಿ ಇದ್ದಕ್ಕಿದ್ದಂತೆ ಕ್ರಿಶ್ಚಿಯನ್ನರು ಮತ್ತು ಮುನಂಬಮ್ ಪ್ರದೇಶದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ನಾವು ಸ್ಟಾನ್ ಸ್ವಾಮಿಯನ್ನು ಮರೆಯಲು ಸಾಧ್ಯವೆ? ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ, ಸಹಾಯವಿಲ್ಲದೆ ಒಂದು ಹನಿ ನೀರು ಕುಡಿಯಲು ಸಾಧ್ಯವಾಗದ ಅವರಿಗೆ ಒಂದು ಸ್ಟ್ರಾ ಕೂಡಾ ನೀಡದೆ ಜೈಲಿನಲ್ಲಿ ಸಾಯಲು ಬಿಡಲಿಲ್ಲವೇ? ನಾವು ಗ್ರಹಾಂ ಸ್ಟೇನ್ಸ್ ಅವರನ್ನು ಮರೆಯಲು ಸಾಧ್ಯವೇ? ಅವರನ್ನು ಅವರ ಮಕ್ಕಳೊಂದಿಗೆ ಜೀವಂತವಾಗಿ ಸುಟ್ಟುಹಾಕಲಿಲ್ಲವೇ? ಇಂದಿಗೂ ದಾಳಿಗಳು ಮುಂದುವರೆದಿವೆ.”

“ಕೇವಲ ಮೂವತ್ತು ಬೆಳ್ಳಿಯ ತುಂಡುಗಳಿಗಾಗಿ ಯೇಸು ಕ್ರಿಸ್ತನಿಗೆ ದ್ರೋಹ ಮಾಡಿದ ಪಾತ್ರವೊಂದು ಬೈಬಲ್‌ನಲ್ಲಿದೆ. ಇಲ್ಲಿ ಕೆಲವರು ಹಾಗೆ ಇದ್ದಾರೆ. ಕೆಲವು ದಿನಗಳ ಹಿಂದೆ, ಕೆಲವು ವ್ಯಕ್ತಿಗಳು ಶಿಲುಬೆ ಮತ್ತು ಕ್ರಿಶ್ಚಿಯನ್ನರ ಬಗ್ಗೆ ಮಾತನಾಡಿದರು, ಆದರೆ ವಾಸ್ತವದಲ್ಲಿ, ಅವರು ಕ್ರಿಸ್ತನಿಗೆ ದ್ರೋಹ ಮಾಡಿದ ಯೂದನಂತಿದ್ದಾರೆ.”

“ಇತ್ತೀಚೆಗೆ, ನಾವು ಎಂಪುರಾನ್ ಚಿತ್ರದ ಬಗ್ಗೆ ಮಾತನಾಡಿದ್ದೆವು. ಆ ಚಿತ್ರದಲ್ಲಿ ಮುನ್ನಾ ಎಂಬ ಪಾತ್ರವಿದೆ. ಮುನ್ನಾ ಯಾರೆಂದು ನಿಮಗೆ ತಿಳಿದಿದೆಯೇ? ಆ ಪಾತ್ರವನ್ನು ನೀವು ಇಲ್ಲಿಯೇ(ಬಿಜೆಪಿ ಪೀಢಗಳ ಮೇಲೆ) ನೋಡಬಹುದು. ಕೇರಳದ ಜನರು ಈ ಮುನ್ನಾ ಪಾತ್ರಧಾರಿಯನ್ನು ಗುರುತಿಸುತ್ತಾರೆ. ಅದು ಕೇರಳದ ಇತಿಹಾಸ. ನಾವು ನಿಮ್ಮ ವಿಷವನ್ನು ನಮ್ಮ ರಾಜ್ಯದಿಂದ ದೂರವಿಟ್ಟಿದ್ದೇವೆ. ಹೌದು, ಒಬ್ಬ ವ್ಯಕ್ತಿ ಗೆದ್ದಿದ್ದಾನೆ, ವಿಧಾನಸಭೆಯಲ್ಲಿ ಕೂಡಾ ಒಂದು ಖಾತೆ ಇತ್ತು, ಅದನ್ನು ನಾವು ಮುಚ್ಚಿದ್ದೇವೆ. ಅದನ್ನು ಮುಚ್ಚಿದಂತೆ, ಶೀಘ್ರದಲ್ಲೇ ಲೋಕಸಭೆಯ ಈ ಖಾತೆಯನ್ನು ಸಹ ಮುಚ್ಚುತ್ತೇವೆ. ಕೇರಳದಲ್ಲಿ ಒಂದು ತಪ್ಪು ಸಂಭವಿಸಿದೆ, ಆದರೆ ನಾವು ಅದನ್ನು ಶೀಘ್ರದಲ್ಲೇ ಸರಿಪಡಿಸುತ್ತೇವೆ – ಚಿಂತಿಸುವ ಅಗತ್ಯವಿಲ್ಲ.”

ಬ್ರಿಟ್ಟಾಸ್ ಅವರ ಈ ಹೇಳಿಕೆ ಸಂಸದ ಸುರೇಶ್ ಗೋಪಿ ಅವರ ತ್ರಿಶೂರ್‌ ಕ್ಷೇತ್ರದ ಬಗ್ಗೆಯಾಗಿದೆ. ಅವರು ಕೇರಳದ ಮೊದಲ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು.

ಮುನಂಬಮ್ ಬಗ್ಗೆ ಭರವಸೆ:

ಬ್ರಿಟಸ್ ಮುನಂಬಮ್ ಪ್ರದೇಶದ ಜನರಿಗೆ ಇದೇ ವೇಳೆ ಭರವಸೆ ನೀಡಿದ್ದಾರೆ. “ಮುನಂಬಮ್‌ನಲ್ಲಿ ಯಾರೂ ತಮ್ಮ ಮನೆಯನ್ನು ಕಳೆದುಕೊಳ್ಳುವುದಿಲ್ಲ. ಇದು ಎಡಪಂಥೀಯ ಸರ್ಕಾರದ ಬದ್ಧತೆಯಾಗಿದೆ. ಐದು ಲಕ್ಷ ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿಸುವ ಶಕ್ತಿ ಮತ್ತು ಪ್ರಾಮಾಣಿಕತೆ ನಮಗಿದ್ದರೆ, ಮುನಂಬಮ್‌ನ ಜನರನ್ನು ರಕ್ಷಿಸುವ ಜವಾಬ್ದಾರಿಯೂ ನಮಗಿದೆ.” ಎಂದು ಘೋಷಿಸಿದ್ದಾರೆ.

“ನಾವು ಅದನ್ನು ಮಾಡಲಿದ್ದು, ನಮಗೆ ಯಾರ ಸಹಾನುಭೂತಿಯೂ ಅಗತ್ಯವಿಲ್ಲ. ಕೇರಳದಲ್ಲಿ ಯಾವುದೇ ಮಸೀದಿಯನ್ನು ಬಲವಂತವಾಗಿ ಮುಚ್ಚಲಾಗುವುದಿಲ್ಲ. ಯಾವುದೇ ಪೂಜಾ ಸ್ಥಳವನ್ನು ಮರೆಮಾಡಲಾಗುವುದಿಲ್ಲ. ಯಾರೂ ಭಯದಿಂದ ಬದುಕಬೇಕಾಗಿಲ್ಲ. ಕೇರಳದಲ್ಲಿ ಸಹೋದರತ್ವದ ವಾತಾವರಣವನ್ನು ನಾವು ಖಚಿತಪಡಿಸುತ್ತೇವೆ. ಅದು ಅಲ್ಲಿ ಅಸ್ತಿತ್ವದಲ್ಲಿದ್ದು, ಅದನ್ನು ಹೇಗೆ ನಿರ್ವಹಿಸಬೇಕೆಂದು ನಮಗೆ ತಿಳಿದಿದೆ. ನೀವು ಈಗ ಕ್ರಿಶ್ಚಿಯನ್ನರಿಗಾಗಿ ಮೊಸಳೆ ಕಣ್ಣೀರು ಸುರಿಸಿರಬಹುದು, ಆದರೆ ಕೇರಳದ ಜನರು ನಿಮ್ಮ ವಂಚನೆಯನ್ನು ನೋಡುತ್ತಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಿ.”

ಬಿಜೆಪಿಯ ಕೋಮು ರಾಜಕೀಯದ ಟೀಕೆ:

ದೇಶದಲ್ಲಿ ನಿರಾಶ್ರಿತರಾಗಿರುವ ಜನರ ದುಃಸ್ಥಿತಿಯನ್ನು ಎತ್ತಿ ತೋರಿಸಿದ ಜಾನ್ ಬ್ರಿಟ್ಟಾಸ್, “ನೀವು ಈ ಮಸೂದೆಯನ್ನು ಮಂಡಿಸುವಾಗ ‘ಮುನಂಬಂ, ಮುನಂಬಂ’ ಎಂದು ಪುನರಾವರ್ತಿಸುತ್ತಿದ್ದೀರಿ. ಆದರೆ ಉತ್ತರ ಭಾರತದಲ್ಲಿ, ನೀವು ಹತ್ತಾರು ಸಾವಿರ ಜನರನ್ನು ಸ್ಥಳಾಂತರಗೊಳಿಸಿ, ನಿರಾಶ್ರಿತರನ್ನಾಗಿ ಮಾಡಿದ್ದೀರಿ. ಮಣಿಪುರದಲ್ಲಿ 50,000 ಕ್ಕೂ ಹೆಚ್ಚು ಜನರು ಈಗ ನಿರಾಶ್ರಿತರಾಗಿದ್ದಾರೆ. ಅನೇಕರು ದೇಶವನ್ನು ಬಿಟ್ಟು ಓಡಿಹೋಗಿದ್ದಾರೆ. ಅವರ ಬಗ್ಗೆ ನೀವು ಏನೂ ಹೇಳುತ್ತಿಲ್ಲ. ನೀವು ಹಲವಾರು ಚರ್ಚುಗಳನ್ನು ನಾಶಪಡಿಸಿದ್ದೀರಿ. ನೀವು ಎಂಪುರಾನ್‌ನ ಮುನ್ನಾ ಪಾತ್ರಧಾರಿಯಾಗಿದ್ದೀರಿ. ಆದರೆ ಕೇರಳದ ಜನರು ನಿಮ್ಮಲ್ಲಿರುವ ಈ ಮುನ್ನಾಗಳನ್ನು ಗುರುತಿಸುವ ಶಕ್ತಿಯನ್ನು ಹೊಂದಿದ್ದಾರೆ.”

“ನಿಜವಾಗಿಯೂ ಭಾರತೀಯ ಸಂವಿಧಾನವನ್ನು ನೀವು ನಂಬಿದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ. ನೀವು ಕೋಮು ಸಾಮರಸ್ಯವನ್ನು ಬಯಸಿದರೆ, ಎಲ್ಲಾ ಜನರನ್ನು ಮತ್ತು ಎಲ್ಲಾ ನಂಬಿಕೆಗಳನ್ನು ಸಮಾನವಾಗಿ ಪರಿಗಣಿಸುವಲ್ಲಿ ನಂಬಿಕೆಯಿದ್ದರೆ, ಈ ಮಸೂದೆಯನ್ನು ಹಿಂತೆಗೆದುಕೊಳ್ಳಿ” ಎಂದು ಬ್ರಿಟ್ಟಾಸ್ ನೇರ ಮನವಿಯೊಂದಿಗೆ ತನ್ನ ಭಾಷಣವನ್ನು ಮುಕ್ತಾಯಗೊಳಿಸಿದರು.

ಇಲ್ಲಿ ಕ್ಲಿಕ್ ಮಾಡಿ

ಇದನ್ನೂಓದಿ:  ವಕ್ಫ್ ಮಸೂದೆಗೆ ಬೆಂಬಲ | ನಿತೀಶ್‌ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ

ವಕ್ಫ್ ಮಸೂದೆಗೆ ಬೆಂಬಲ | ನಿತೀಶ್‌ ನೇತೃತ್ವದ ಜೆಡಿಯುನಲ್ಲಿ ಸರಣಿ ರಾಜೀನಾಮೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...