Homeಮುಖಪುಟಮೋದಿ ನೀತಿಗಳನ್ನು ಟೀಕಿಸಿದ್ದ ನನ್ನ ಭಾಷಣದ ಭಾಗಗಳನ್ನು ರಾಜ್ಯಸಭೆ ಕಡತದಿಂದ ತೆಗೆಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ

ಮೋದಿ ನೀತಿಗಳನ್ನು ಟೀಕಿಸಿದ್ದ ನನ್ನ ಭಾಷಣದ ಭಾಗಗಳನ್ನು ರಾಜ್ಯಸಭೆ ಕಡತದಿಂದ ತೆಗೆಯಲಾಗಿದೆ : ಮಲ್ಲಿಕಾರ್ಜುನ ಖರ್ಗೆ

- Advertisement -
- Advertisement -

ಫೆಬ್ರವರಿ 4ರಂದು ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯ ಸಂದರ್ಭದಲ್ಲಿ ತಾನು ಮಾಡಿದ್ದ ಭಾಷಣದ ಬಹುಪಾಲು ಅಂಶಗಳನ್ನು ಯಾವುದೇ ಸಮರ್ಪಕ ಕಾರಣ ನೀಡದೆ ರಾಜ್ಯಸಭೆಯ ಅಧಿಕೃತ ದಾಖಲೆಗಳಿಂದ ತೆಗೆದುಹಾಕಲಾಗಿದೆ ಎಂದು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಸಂವಿಧಾನದ 105(1)ನೇ ವಿಧಿಯಡಿ ಸಂಸದರಿಗೆ ಖಾತರಿಪಡಿಸಿದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದಿರುವ ಖರ್ಗೆ, ತೆಗೆದುಹಾಕಲಾದ ಭಾಗಗಳನ್ನು ಪುನಃಸ್ಥಾಪಿಸುವುದನ್ನು ಪರಿಗಣಿಸುವಂತೆ ರಾಜ್ಯಸಭೆಯ ಅಧ್ಯಕ್ಷ ಹಾಗೂ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಒತ್ತಾಯಿಸಿದ್ದಾರೆ. ದಾಖಲೆಯಿಂದ ತೆಗೆಯುವಂತಹ ಯಾವುದೇ ಸಂಸತ್ತಿನ ವಿರೋಧಿ ಹೇಳಿಕೆಗಳನ್ನು ನಾನು ನೀಡಿಲ್ಲ ಎಂದು ಅವರು ಒತ್ತಿ ಹೇಳಿದ್ದಾರೆ.

ಸಾರ್ವಜನಿಕವಾಗಿ ಲಭ್ಯವಿರುವ ಮಲ್ಲಿಕಾರ್ಜುನ ಖರ್ಗೆ ಅವರ ಫೆಬ್ರವರಿ 4ರ ಭಾಷಣದ ಅಧಿಕೃತ ಪ್ರತಿಗಳನ್ನು ಪರಿಶೀಲಿಸಿದಾಗ, ಹಲವು ಕಡೆಗಳಲ್ಲಿ ಭಾಷಣದ ಭಾಗಗಳನ್ನು “ದಾಖಲಾಗಿಲ್ಲ” (not recorded) ಎಂದು ಗುರುತಿಸಿರುವುದು ಕಂಡುಬಂದಿದೆ. ಈ ಬೆಳವಣಿಗೆಯ ಕುರಿತು ಆಡಳಿತ ಪಕ್ಷದ ಪರವಾಗಿ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಖರ್ಗೆಯವರ ಆರೋಪಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯಸಭೆಯ ಅಧ್ಯಕ್ಷರ ತೀರ್ಮಾನವನ್ನು ಪ್ರಶ್ನಿಸುವ ಖರ್ಗೆಯವರ ನಡವಳಿಕೆಯು ಅವರಿಗೆ ತೋರುವ ಅಗೌರವ. ಇದು ಖರ್ಗೆಯವರ ಸ್ಥಾನಕ್ಕೆ ತಕ್ಕುದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ತನಗೆ ನ್ಯಾಯ ಸಿಗದಿದ್ದಲ್ಲಿ, ಅಧಿಕೃತವಾಗಿ “ದಾಖಲಾಗಿಲ್ಲ” ಎಂದು ಕೈಬಿಡಲಾದ ತನ್ನ ಭಾಷಣದ ಭಾಗಗಳನ್ನು ಸಾರ್ವಜನಿಕರ ಮುಂದೆ ಹಂಚಿಕೊಳ್ಳಲು ಅನಿವಾರ್ಯವಾಗಿ ಮುಂದಾಗಬೇಕಾಗುತ್ತದೆ ಎಂದು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದಾರೆ. ಸಂಸದೀಯ ಹಕ್ಕುಗಳ ರಕ್ಷಣೆಗಾಗಿ ಮತ್ತು ಜನರ ಮುಂದೆ ಸತ್ಯವನ್ನು ಇರಿಸಲು ಈ ಕ್ರಮ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.

ಅಧ್ಯಕ್ಷ ರಾಧಾಕೃಷ್ಣನ್ ಅವರು ಈ ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದರಾದರೂ, ಅಧಿಕೃತ ದಾಖಲೆಗಳಿಂದ ಅಳಿಸಿಹಾಕಲಾದ ಯಾವುದೇ ಅಂಶಗಳನ್ನು ಸದನದ ಹೊರಗೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾತನಾಡಿರುವ ರಾಧಾಕೃಷ್ಣನ್, “ನೀವು ಹಾಗೆ ಹೇಳಲು ಹೇಗೆ ಸಾಧ್ಯ? ಯಾವುದನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆಯೋ, ಅದನ್ನು ನೀವು ಹೊರಗೆ ಹೇಳುವಂತಿಲ್ಲ” ಎಂದು ಖರ್ಗೆಯವರ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ರಾಜ್ಯಸಭೆಯ ಕಲಾಪವನ್ನು ಮಾರ್ಚ್ 9ರವರೆಗೆ ಮುಂದೂಡಲಾಗಿದೆ. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಶೂನ್ಯ ವೇಳೆಯಲ್ಲಿ ಸಭೆ ಸೇರಿ, ನಿಗದಿತ ಪ್ರಶ್ನೋತ್ತರ ಅವಧಿಯ ನಂತರ ಮಧ್ಯಾಹ್ನ 1 ಗಂಟೆಗೆ ಕಲಾಪ ಮುಂದೂಡಲ್ಪಟ್ಟಿತು.

ಪ್ರಶ್ನೋತ್ತರ ಅವಧಿ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ತನ್ನ ಭಾಷಣ ತೆಗೆದು ಹಾಕಿರುವ ವಿಷಯವನ್ನು ಪ್ರಸ್ತಾಪಿಸಿದ ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ, “ರಾಜ್ಯಸಭೆಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಲಾದ ನನ್ನ ಭಾಷಣದ ಅಧಿಕೃತ ಪ್ರತಿಯನ್ನು ಪರಿಶೀಲಿಸಿದಾಗ, ನನ್ನ ಭಾಷಣದ ಬಹುದೊಡ್ಡ ಭಾಗವನ್ನು ಯಾವುದೇ ಸರಿಯಾದ ಸಮರ್ಥನೆ ಅಥವಾ ಕಾರಣವಿಲ್ಲದೆ ತೆಗೆದುಹಾಕಲಾಗಿದೆ ಅಥವಾ ಅಳಿಸಿಹಾಕಲಾಗಿದೆ ಎಂಬುದು ಗಮನಕ್ಕೆ ಬಂದಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ನನ್ನ ಭಾಷಣದ ಯಾವ ಭಾಗಗಳನ್ನು ದಾಖಲೆಯಿಂದ ಕೈಬಿಡಲಾಗಿದೆಯೋ, ಅವುಗಳಲ್ಲಿ ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಸಂಸತ್ತಿನ ಕಾರ್ಯವೈಖರಿಯ ಬಗ್ಗೆ ನಾನು ಸತ್ಯಾಧಾರಿತವಾಗಿ ನೀಡಿದ್ದ ಅಭಿಪ್ರಾಯಗಳು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕೆಲವು ನೀತಿಗಳ ಕುರಿತಾದ ಟೀಕೆಗಳಿದ್ದವು. ಈ ನೀತಿಗಳು ಭಾರತದ ಸಾರ್ವಜನಿಕರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ನಾನು ನಂಬಿರುವುದರಿಂದ, ಅವುಗಳನ್ನು ವಿಮರ್ಶಿಸುವುದು ವಿಪಕ್ಷ ನಾಯಕನಾಗಿ ನನ್ನ ಕರ್ತವ್ಯವೂ ಆಗಿದೆ” ಎಂದು ಖರ್ಗೆ ಹೇಳಿದರು.

ಖರ್ಗೆ ಅವರ ಮಾತಿಗೆ ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಸಭೆಯ ಕಲಾಪಕ್ಕೆ ಸಂಬಂಧಿಸಿದ ನಿಯಮ 261 ಅನ್ನು ಉಲ್ಲೇಖಿಸಿದರು. ಭಾಷಣದ ಭಾಗಗಳನ್ನು ತೆಗೆದುಹಾಕುವ ವಿವೇಚನಾ ಅಧಿಕಾರ ಸಭಾಪತಿಗಳಿಗೆ ಇದೆ ಎಂದ ಅವರು, ವಿರೋಧ ಪಕ್ಷದ ನಾಯಕರು ಅಧ್ಯಕ್ಷರ ನಿರ್ಧಾರವನ್ನು ಪ್ರಶ್ನಿಸುವ ಮೂಲಕ ಅವರಿಗೆ ಅಗೌರವ ತೋರುತ್ತಿದ್ದಾರೆ ಎಂದರು.

ಖರ್ಗೆ ಅವರು ತಾನು ಯಾವುದೇ ಅಸಂಸದೀಯ ಅಥವಾ ಅಗೌರವದ ಮಾತುಗಳನ್ನಾಡಿಲ್ಲ ಎಂಬ ಸ್ವಯಂ ತೀರ್ಮಾನಕ್ಕೆ ಬಂದು, ಅಧ್ಯಕ್ಷರು ಆ ಮಾತುಗಳನ್ನು ತೆಗೆದುಹಾಕಿರುವ ಕ್ರಮವನ್ನು ಪ್ರಶ್ನಿಸುತ್ತಿದ್ದಾರೆ. ಪ್ರಧಾನಿಯನ್ನು ರಕ್ಷಿಸುವ ಉದ್ದೇಶದಿಂದ ಭಾಷಣದ ಭಾಗಗಳನ್ನು ಅಳಿಸಲಾಗಿದೆ ಎಂದು ಹೇಳುವುದು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸೂಕ್ತವಾದುದಲ್ಲ ಎಂದು ಸೀತಾರಾಮನ್ ಆಕ್ಷೇಪ ವ್ಯಕ್ತಪಡಿಸಿದರು.

ಸಭೆಯ ನಿಯಮ 261 ಅನ್ನು ಉಲ್ಲೇಖಿಸಿದ ಸೀತಾರಾಮನ್, ಚರ್ಚೆಯ ಸಂದರ್ಭದಲ್ಲಿ ಯಾವುದೇ ಸಚಿವರು ಅಥವಾ ಸದಸ್ಯರು ಬಳಸಿದ ಪದಗಳು ಮಾನಹಾನಿಕರ, ಅಸಭ್ಯ, ಅಸಂಸದೀಯ ಅಥವಾ ಘನತೆಗೆ ತಕ್ಕುದಲ್ಲದವು ಎಂದು ಸಭಾಪತಿಗಳು ಅಭಿಪ್ರಾಯಪಟ್ಟರೆ, ಅಂತಹ ಪದಗಳನ್ನು ಸದನದ ನಡಾವಳಿಗಳಿಂದ ತೆಗೆದುಹಾಕಲು ತಮ್ಮ ವಿವೇಚನಾ ಅಧಿಕಾರವನ್ನು ಬಳಸಿ ಆದೇಶಿಸಬಹುದು ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ: ಎಸ್‌ಐಆರ್ ವಿಚಾರಣೆಗೆಂದು ಕರೆ ಮಾಡಿ ವ್ಯಕ್ತಿಯನ್ನು ಕೊಂದು, ಕತ್ತರಿಸಿ, ಮೂರು ಚೀಲಗಳಲ್ಲಿ ಕಾಲುವೆಗೆ ಎಸೆದ ಬಿಎಲ್‌ಒ ಬಂಧನ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ 36 ವರ್ಷದ ವ್ಯಕ್ತಿಯೊಬ್ಬರ ಭೀಕರ ಕೊಲೆ ಮತ್ತು ಛಿದ್ರಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ) ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ...

ಫೆ.17ರಂದು ತಾರಿಖ್ ರೆಹಮಾನ್ ಪ್ರಮಾಣವಚನ : ಪ್ರಧಾನಿ ಮೋದಿಗೆ ಆಹ್ವಾನ

ವಿದ್ಯಾರ್ಥಿ ದಂಗೆ, ಆಡಳಿತ ಅಸ್ಥಿರತೆಯ ಬಳಿಕ ಬಾಂಗ್ಲಾದೇಶದಲ್ಲಿ ಹೊಸ ಸರ್ಕಾರ ರಚನೆಗೆ ಸಿದ್ದತೆಗಳು ನಡೆದಿದ್ದು, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಮುಖ್ಯಸ್ಥ ತಾರಿಖ್ ರೆಹಮಾನ್ ನೂತನ ಪ್ರಧಾನಿಯಾಗಿ ಮಂಗಳವಾರ (ಫೆ.17) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹೊಸ...

ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಮಾರ್ಚ್ 9ರಂದು ಚರ್ಚೆ : ಸಚಿವ ಕಿರಣ್ ರಿಜಿಜು

ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಮತ್ತು ಮತ ಚಲಾವಣೆ ಮಾರ್ಚ್ 9ರಂದು ನಡೆಯಲಿದೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಭಾನುವಾರ...

ಭಯೋತ್ಪಾದಕರ ಸಂಪರ್ಕ ಶಂಕೆ: ಮಹಾರಾಷ್ಟ್ರದ 21 ಸ್ಥಳಗಳಲ್ಲಿ ದಾಳಿ ನಡೆಸಿದ ಎಟಿಎಸ್

ಮುಂಬೈ: ಉಗ್ರಗಾಮಿ ಚಟುವಟಿಕೆಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ನಂತರ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಭಾನುವಾರ ಬೆಳಿಗ್ಗೆ ಸುಮಾರು 21 ಸ್ಥಳಗಳಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಯಾವತ್ಮಲ್ ಮತ್ತು ಅಹಲ್ಯಾನಗರ...

ಬೌದ್ಧಿಕ ದಾರಿದ್ರ್ಯ ಮತ್ತು ಸಾಂಸ್ಥಿಕ ಹತ್ಯೆಗಳು: ಡಾ.ಪಿ. ನಂದಕುಮಾರ 

                                                      ಸಂವಿಧಾನ ವಿರೋಧಿ ಹಾಗೂ ದಲಿತ, ಹಿಂದುಳಿದ, ಮಹಿಳೆಯರ ಹಕ್ಕುಗಳ ಅಂದಿನ ಮನುವಾದಿ  ಆರ್ಯಪಳೆಯುಳಿಕೆಗಳೆ ಇಂದೂ ಯುಜಿಸಿ- 2026ರ ಕರಡು ವಿರುದ್ಧ ಷಂಡ್ಯಂತ್ರ ರೂಪಿಸುತ್ತಿರುವುದು. ಕೇವಲ 3% ಜನಾಭಿಪ್ರಾಯವೇ ಭಾರತೀಯ ಒಟ್ಟು ಬಹುಸಮುದಾಯಗಳ ಅಭಿಪ್ರಾಯವೆಂಬಂತೆ...

ಬಾಗಲಕೋಟೆ : ಇಳಕಲ್ ಬಳಿಯ ಇಟ್ಟಿಗೆ ಭಟ್ಟಿಯಿಂದ 34 ಜೀತದಾಳುಗಳ ರಕ್ಷಣೆ

ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಸಂಕ್ಲಾಪೂರ ಗ್ರಾಮದ ಇಟ್ಟಿಗೆ ಗೂಡುಗಳಲ್ಲಿ ಜೀತಕ್ಕಿದ್ದ ಐವರು ಮಕ್ಕಳು ಸೇರಿದಂತೆ 34 ಮಂದಿ ಒಡಿಶಾ ಮೂಲದ ಕಾರ್ಮಿಕರನ್ನು ಮಂಗಳವಾರ (ಫೆ.10,2026) ರಕ್ಷಿಸಲಾಗಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ...

ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ಕಾಣೆಯಾಗಿದ್ದ ಕರ್ನಾಟಕ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತದೇಹ ಪತ್ತೆ

ನವದೆಹಲಿ: ಅಮೆರಿಕದ ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿ ಕಾಣೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಮೃತದೇಹ ಪತ್ತೆಯಾಗಿದೆ ಎಂದು ಭಾರತದ ಕಾನ್ಸುಲೇಟ್ ಅಧಿಕಾರಿಗಳು ತಿಳಿಸಿದ್ದಾರೆ.   ಈ ಕುರಿತು ಭಾರತದ ಕಾನ್ಸುಲೇಟ್ ಜನರಲ್ ಪ್ರಕಟಣೆ ಹೊರಡಿಸಿದ್ದು, ಸ್ಥಳೀಯ ಪೊಲೀಸರು...

ಬೆಂಗಳೂರು | ಡಿವೈಡರ್ ಹಾರಿ ಬಸ್‌ಗೆ ಡಿಕ್ಕಿ ಹೊಡೆದ ಕಾರು : ಐವರು ಸಾವು

ವೇಗವಾಗಿ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಹಾರಿ ಎದುರಿನಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಸಾವಿಗೀಡಾದ ಘಟನೆ ಬೆಂಗಳೂರಿನ ನೆಲಮಂಗಲದ ಜಿಂದಾಲ್‌ ಸಂಸ್ಥೆಯ ಬಳಿ...

ಉತ್ತರಾಖಂಡ| ದಲಿತ ಪತ್ರಕರ್ತನಿಗೆ ಕಸ್ಟಡಿ ಚಿತ್ರಹಿಂಸೆ; ಅಕ್ರಮವಾಗಿ ಕಟ್ಟಡ ಧ್ವಂಸ ಆರೋಪ

ಸ್ಥಳೀಯ ಪೊಲೀಸರು ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ ನೀಡಿ ಜಾತಿ ಆಧಾರಿತ ದೌರ್ಜನ್ಯ ನಡೆಸಿದ್ದಾರೆ. ನನ್ನ ಕಟ್ಟಡವನ್ನು ಅಕ್ರಮವಾಗಿ ಕೆಡವಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಉಧಮ್ ಸಿಂಗ್ ನಗರ ಜಿಲ್ಲೆಯ ಬಾಜ್‌ಪುರದ ದಲಿತ ಪತ್ರಕರ್ತರೊಬ್ಬರು...

ಲೈಂಗಿಕ ಅಪರಾಧಿ ‘ಎಪ್ಸ್ಟೀನ್’ನದ್ದು ಆತ್ಮಹತ್ಯೆಯಲ್ಲ, ಕತ್ತು ಹಿಸುಕಿದ ಪರಿಣಾಮ ಸಾವನ್ನಪ್ಪಿದ್ದಾನೆ: ವೈದ್ಯ ಮೈಕೆಲ್ ಬಾಡೆನ್ ಹೇಳಿಕೆ

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜೈಲಿನಲ್ಲಿದ್ದಾಗ 2019ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನೆಂದು ಘೋಷಿಸಲಾಗಿತ್ತು. ಆದರೆ, ಆತನ ಸಾವಿನ ಕುರಿತಾದ ಚರ್ಚೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಆತನ ಜೈಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು...