HomeಅಂಕಣಗಳುKarnataka against SIRದೇಶದ ಜನರಿಗೆ ‘SIR, EVM, ECI’ಗಳಿಂದ ಸ್ವಾತಂತ್ರ್ಯ ಬೇಕಿದೆ: ಎದ್ದೇಳು ಕರ್ನಾಟಕ

ದೇಶದ ಜನರಿಗೆ ‘SIR, EVM, ECI’ಗಳಿಂದ ಸ್ವಾತಂತ್ರ್ಯ ಬೇಕಿದೆ: ಎದ್ದೇಳು ಕರ್ನಾಟಕ

- Advertisement -
- Advertisement -

ಬೆಂಗಳೂರು: ಭಾರತವು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿರುವಾಗಲೇ, ದೇಶದ ಪ್ರಜೆಗಳು ತಮ್ಮ ಅತಿ ಅಮೂಲ್ಯವಾದ ‘ಮತದಾನದ ಹಕ್ಕನ್ನು’ ಕಳೆದುಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ಉಳಿವಿಗಾಗಿ ಈ ದೇಶದ ಜನರಿಗೆ ಈಗ ‘SIR (ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ), EVM ಮತ್ತು ECI (ಚುನಾವಣಾ ಆಯೋಗ)’ ಗಳಿಂದಲೇ ಸ್ವಾತಂತ್ರ್ಯ ಬೇಕಿದೆ ಎಂದು ‘ಎದ್ದೇಳು ಕರ್ನಾಟಕ’ ಸಂಘಟನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಸಂಘಟನೆಯ ಪ್ರಮುಖರಾದ ತಾರಾ ರಾವ್‌, ಜೆ.ಎಂ. ವೀರಸಂಗಯ್ಯ, ಯೂಸೂಫ್‌ ಕನ್ನಿ ಹಾಗೂ ವಿ.ಎಸ್.‌ ಶ್ರೀಧರ್ ಅವರು ಜಂಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದು, ಮತದಾರರ ಪಟ್ಟಿಯಿಂದ ವ್ಯವಸ್ಥಿತವಾಗಿ ಹೆಸರುಗಳನ್ನು ಕೈಬಿಡಲಾಗುತ್ತಿರುವ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಕಾಣೆಯಾಗುತ್ತಿದ್ದಾರೆ ಕೋಟ್ಯಂತರ ಮತದಾರರು!

ಈಗಾಗಲೇ ಭಾರತದಲ್ಲಿ ಬರೋಬ್ಬರಿ 6 ಕೋಟಿ ಮತದಾರರು ಮತದಾರರ ಪಟ್ಟಿಯಿಂದ ಕಣ್ಮರೆಯಾಗಿದ್ದಾರೆ. ಅಲ್ಲದೆ, ಇನ್ನೂ 6 ಕೋಟಿಗೂ ಹೆಚ್ಚು ಮತದಾರರು ತಮ್ಮ ಹಕ್ಕನ್ನು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಕರ್ನಾಟಕ ರಾಜ್ಯವೊಂದರಲ್ಲೇ 1 ಕೋಟಿಗೂ ಹೆಚ್ಚು ಜನ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ.

ಬೆಂಗಳೂರಿನಂತಹ ನಿರಂತರವಾಗಿ ಬೆಳೆಯುತ್ತಿರುವ ನಗರದಲ್ಲಿ ಮತದಾರರ ಸಂಖ್ಯೆ ಹೆಚ್ಚಾಗುವ ಬದಲು ಅರ್ಧದಷ್ಟು ಕಡಿಮೆಯಾಗಿರುವುದು ಈ ಷಡ್ಯಂತ್ರಕ್ಕೆ ಸಾಕ್ಷಿಯಾಗಿದೆ. SIR ಹೆಸರಿನಲ್ಲಿ ನಡೆಯುತ್ತಿರುವುದು ಮನೆಮನೆಗೆ ಹೋಗಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಕೆಲಸವಲ್ಲ, ಬದಲಾಗಿ ಮನೆಮನೆಗೆ ಹೋಗಿ ಡಿಲೀಟ್‌ ಮಾಡುವ ಕೆಲಸವಾಗಿದೆ ಎಂದು ಆರೋಪಿಸಲಾಗಿದೆ.

ನಾಗರಿಕ ಸಂಘಟನೆಗಳ ಹೋರಾಟದ ನಡುವೆಯೂ ಅನ್ಯಾಯ!

ಕರ್ನಾಟಕದಲ್ಲಿ SIR ಪ್ರಕ್ರಿಯೆಯನ್ನು ನಾಗರಿಕ ಸಂಘಟನೆಗಳು ಬಹಳ ಗಂಭೀರವಾಗಿ ಪರಿಗಣಿಸಿವೆ. ಪ್ರಕ್ರಿಯೆ ಆರಂಭವಾಗುವ 6 ತಿಂಗಳ ಮೊದಲಿನಿಂದಲೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. BLA ಗಳಿಗೆ ತರಬೇತಿ ನೀಡಿ, ಸಾವಿರಾರು ಕಾರ್ಯಕರ್ತರು ಎನ್ಯುಮರೇಷನ್‌ ಫಾರಂಗಳನ್ನು ತುಂಬಲು ಜನರಿಗೆ ನೆರವಾಗಿದ್ದಾರೆ. BLO ಗಳ ಜೊತೆ ಕುಳಿತು ಲಕ್ಷಾಂತರ ತಪ್ಪುಗಳನ್ನು ಸರಿಪಡಿಸಲಾಗಿದೆ. ಕೊಡಗು, ಚಾಮರಾಜನಗರದಂತಹ ಆದಿವಾಸಿ ಪ್ರದೇಶಗಳಿಗೆ ಅಧಿಕಾರಿಗಳು ವಿಶೇಷ ಗಸ್ತು ನಡೆಸಿ ಪ್ರಕ್ರಿಯೆ ನಡೆಸುವಂತೆ ಮಾಡಲಾಗಿದೆ. ಪೆಂಡಾಲ್‌ ಹಾಕಿ ತಿದ್ದುಪಡಿ ಅಭಿಯಾನ ಮಾಡಿಸಲಾಗಿದೆ.

ಇಷ್ಟೆಲ್ಲಾ ಪ್ರಯತ್ನಗಳ ಹೊರತಾಗಿಯೂ ಕರ್ನಾಟಕದಲ್ಲಿ 1 ಕೋಟಿಗಿಂತ ಹೆಚ್ಚು ಜನ ಡಿಲೀಷನ್‌ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಒಂದು ವೇಳೆ ಸಂಘಟನೆಗಳು ಈ ಕೆಲಸ ಮಾಡದೇ ಇದ್ದಿದ್ದರೆ, ಡಿಲೀಟ್ ಆಗುವವರ ಸಂಖ್ಯೆ 2 ಕೋಟಿ ದಾಟುತ್ತಿತ್ತು. ಅರ್ಹ ಪ್ರಜೆಗಳನ್ನು ಪಟ್ಟಿಯಿಂದ ಹೊರಹಾಕುವ ಷಡ್ಯಂತ್ರ ಸ್ವತಃ SIR ಪ್ರಕ್ರಿಯೆಯ ಒಳಗಡೆಯೇ ಅಡಕವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

ಅವೈಜ್ಞಾನಿಕ ಮತ್ತು ಸರ್ವಾಧಿಕಾರಿ ಡಿಲೀಷನ್ ಪ್ರಕ್ರಿಯೆ

ಹಿಂದೆಲ್ಲಾ ಮತದಾರರ ಪಟ್ಟಿಯ ಪರಿಷ್ಕರಣೆ ನಡೆದಾಗ ಮನೆಮನೆಗೆ ಭೇಟಿ ನೀಡಿ ಮೃತರ ಹೆಸರನ್ನು ಮಾತ್ರ ತೆಗೆಯಲಾಗುತ್ತಿತ್ತು. ಹೊಸಬರಿಗೆ ಫಾರಂ ನಂ. 6 ಹಾಗೂ ವಿಳಾಸ ಬದಲಿಸಿದವರಿಗೆ ಫಾರಂ ನಂ. 8 ಕೊಟ್ಟು ವರ್ಗಾವಣೆ ಮಾಡಲಾಗುತ್ತಿತ್ತು. ಆದರೆ ಈಗ, ಮನೆ ಬದಲಾಯಿಸಿದ್ದರೆ ನೇರವಾಗಿ ಡಿಲೀಟ್ ಮಾಡಲಾಗುತ್ತಿದೆ. ಬೇರೆ ಮನೆಗೆ ಬಂದವರಿಗೆ ವಿಳಾಸ ಬದಲಾಯಿಸಲು ಫಾರಂ 8 ಅಥವಾ ಎನ್ಯುಮರೇಷನ್‌ ಫಾರಂ ನೀಡುತ್ತಿಲ್ಲ. BLO ಗಳು ಭೇಟಿ ನೀಡಿದಾಗ ಮನೆಯವರು ದುಡಿಯಲು ಹೋಗಿದ್ದರೆ ಅಥವಾ ಊರಲ್ಲಿ ಇಲ್ಲದಿದ್ದರೆ ಯಾವುದೇ ವಿಚಾರಣೆಯಿಲ್ಲದೆ ನೇರವಾಗಿ ಹೆಸರು ತೆಗೆದುಹಾಕಲಾಗುತ್ತಿದೆ.

ಇದಲ್ಲದೆ ‘ಮ್ಯಾಪಿಂಗ್‌ ಆಗದವರು’ ಎಂದು 30 ಲಕ್ಷ ಜನರನ್ನು ಮಾರ್ಕ್‌ ಮಾಡಲಾಗಿದ್ದು, ಅವರಿಗೆಲ್ಲಾ ನೋಟಿಸ್‌ ಬರಲಿದೆ. ‘ಲಾಜಿಕಲ್‌ ಡಿಸ್ಕ್ರಿಪೆನ್ಸಿ’ (ತಾರ್ಕಿಕ ವ್ಯತ್ಯಾಸ) ಎಂಬ ಹೆಸರಿನಲ್ಲಿ ರಹಸ್ಯ ಪಟ್ಟಿಯೊಂದು ಸಿದ್ಧವಾಗುತ್ತಿದ್ದು, ಈ ಕಾರಣ ನೀಡಿ 1 ಕೋಟಿ ಜನರಿಗೆ ನೋಟಿಸ್‌ ನೀಡುವ ಸಾಧ್ಯತೆಯಿದೆ. ನೋಟಿಸ್‌ ಬಂದವರು SIR ಕೇಳುವ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಮತ್ತಷ್ಟು ಲಕ್ಷಾಂತರ ಮಂದಿ ಮತದಾನದ ಹಕ್ಕಿನಿಂದ ವಂಚಿತರಾಗಲಿದ್ದಾರೆ.

ಶೋಷಿತರ ಮತ ಕಸಿದುಕೊಳ್ಳುವ ಷಡ್ಯಂತ್ರ!

ಆಳುವವರ ದೃಷ್ಟಿಯಲ್ಲಿ ಜನಸಾಮಾನ್ಯರ ಬದುಕಿಗೆ, ಅವರ ಮತಕ್ಕೆ ಯಾವುದೇ ಬೆಲೆ ಇಲ್ಲದಂತಾಗಿದೆ. ಈ ರೀತಿ ಓಟಿನ ಹಕ್ಕನ್ನು ಕಳೆದುಕೊಳ್ಳುತ್ತಿರುವವರಲ್ಲಿ ಬಹುಪಾಲು ಶೋಷಿತ ಹಾಗೂ ದುಡಿಯುವ ವರ್ಗದ ಜನರೇ ಆಗಿದ್ದಾರೆ. ತಳ ಸಮುದಾಯದ ಮತಗಳು ಕಡಿಮೆಯಾದಷ್ಟೂ ತಮಗೆ ಒಳ್ಳೆಯದು ಎಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮನುವಾದಿ ಶಕ್ತಿಗಳು ಆಲೋಚಿಸುತ್ತಿವೆ ಎಂದು ಪ್ರಕಟಣೆಯಲ್ಲಿ ನೇರವಾಗಿ ಆರೋಪಿಸಲಾಗಿದೆ.

ನಟ ಪ್ರಕಾಶ್ ರಾಜ್ ಮಾದರಿ: ಬೇಡುವ ಬದಲು ಹೋರಾಡೋಣ

ಮತದಾನದ ಹಕ್ಕು ನಮಗೆ ಸಿಕ್ಕಿರುವ ಸ್ವಾತಂತ್ರ್ಯ. “ನಮ್ಮ ಓಟನ್ನು ಉಳಿಸಿ” ಎಂದು ಬೇಡುವುದು ಸ್ವಾತಂತ್ರ್ಯಕ್ಕೆ ಮಾಡುವ ಅವಮಾನ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ಓಟನ್ನು ಉಳಿಸಿಕೊಳ್ಳಲು “ಫಾರಂ ನಂ 8 ಕೊಟ್ಟು ನನ್ನ ಮತವನ್ನು ವರ್ಗಾವಣೆ ಮಾಡಬೇಕೇ ಹೊರತು ಡಿಲೀಟ್‌ ಮಾಡಲು ಅವಕಾಶ ನೀಡುವುದಿಲ್ಲ, ಫಾರಂ ನಂ 6 ತುಂಬುವುದಿಲ್ಲ” ಎಂದು ಸವಾಲು ಹಾಕುವ ಮೂಲಕ ಸ್ವಾಭಿಮಾನದ ಹಾದಿ ಆಯ್ದುಕೊಂಡಿದ್ದಾರೆ. ASDDO ಪಟ್ಟಿಯಲ್ಲಿ ಡಿಲೀಟ್‌ ಆಗಿರುವ ಎಲ್ಲಾ ಅರ್ಹ ಮತದಾರರು ಇದನ್ನೊಂದು ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.

“ದೇಶಕ್ಕೆ ಈ ಸಂವಿಧಾನ ವಿರೋಧಿ ಶಕ್ತಿಗಳ ಕೈನಿಂದ ಸ್ವಾತಂತ್ರ್ಯ ಬೇಕಾಗಿದೆ. ಕರ್ನಾಟಕದಲ್ಲಿ ಒಂದೇ ಒಂದು ಮತವನ್ನು ಡಿಲೀಟ್‌ ಮಾಡಲು ಬಿಡುವುದಿಲ್ಲ. ಬೇಡುವ ಮೂಲಕವಲ್ಲ, ಹೋರಾಡುವ ಮೂಲಕ ನಮ್ಮ ಹಕ್ಕನ್ನು ಸಾಧಿಸುತ್ತೇವೆ ಎಂಬ ಸಂಕಲ್ಪವನ್ನು ಇಂದಿನ ದಿನ ಪ್ರಜ್ಞಾವಂತ ಜನರು ಮಾಡಬೇಕಿದೆ” ಎಂದು ‘ಎದ್ದೇಳು ಕರ್ನಾಟಕ’ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR | ಫಾರಂ-8ರ ಬದಲು ಫಾರಂ-6 ಸಲ್ಲಿಸುವಂತೆ ಒತ್ತಡ : ಒಂದೇ ಕುಟುಂಬದ 6 ಜನರ ವೋಟ್ ಡಿಲೀಟ್; ಚುನಾವಣಾ ಆಯೋಗಕ್ಕೆ ಬಾಂಬೆ ಹೈಕೋರ್ಟ್ ತಪರಾಕಿ

ಗೋವಾದ ಸಾಂತಾ ಕ್ರೂಝ್ ಮತಕ್ಷೇತ್ರದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ, ಒಂದು ಕುಟುಂಬದ ಆರು ಸದಸ್ಯರು ತಮ್ಮ ವಿಳಾಸ ಬದಲಾವಣೆಯನ್ನು ತಿಳಿಸಲು 'ಫಾರ್ಮ್ 8' ಸಲ್ಲಿಸಿದ್ದರೂ ಸಹ, ಮತದಾರರ ಪಟ್ಟಿಯಿಂದ...

ಚುನಾವಣಾ ಆಯೋಗದ ವಿರುದ್ಧ ವ್ಯಂಗ್ಯಚಿತ್ರ: ಸತೀಶ್ ಆಚಾರ್ಯ Instagram ಖಾತೆಗೆ ಭಾರತದಲ್ಲಿ ನಿರ್ಬಂಧ; ಮಂಜುಲ್‌ಗೂ ತಡೆ

ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದ ರಾಜಕೀಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ Instagram ಖಾತೆಗೆ ಭಾರತದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಇದೇ ವೇಳೆ ಮತ್ತೊಬ್ಬ...

ಎಸ್‌ಐಆರ್ ಹಾಗೂ ಚುನಾವಣಾ ಆಯೋಗದ ಅಕ್ರಮ ಖಂಡಿಸಿ ‘ಇಂಡಿಯಾ’ ಮೈತ್ರಿಕೂಟದ ರಾಷ್ಟ್ರವ್ಯಾಪಿ ಅಭಿಯಾನ: ಪ್ರಜಾಪ್ರಭುತ್ವ ರಕ್ಷಣೆಗೆ ವಿಪಕ್ಷಗಳಿಂದ 6 ಪ್ರಮುಖ ಬೇಡಿಕೆಗಳು!

ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯ ಅಕ್ರಮಗಳು, 'ಫಾರ್ಮ್ 6' ನಮೂನೆಯಲ್ಲಿ ಸಾಫ್ಟ್‌ವೇರ್ ಮೂಲಕ ತಂದಿದ್ದ ಅಡೆತಡೆಗಳು ಹಾಗೂ ಮತದಾರರ ಪಟ್ಟಿಯಿಂದ ಅರ್ಹರ ಹೆಸರು ರದ್ದುಗೊಳಿಸಿರುವ ಕ್ರಮಗಳನ್ನು ಖಂಡಿಸಿ 'ಇಂಡಿಯಾ'...

ಮ್ಯಾನ್ಮಾರ್‌ನಲ್ಲಿ ಜನನಿಬಿಡ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 50ಕ್ಕೂ ಹೆಚ್ಚು ಸಾವು; ಗಡೀಪಾರು ನಿಲ್ಲಿಸಲು ಮಲೇಷ್ಯಾಕ್ಕೆ ವಿಶ್ವಸಂಸ್ಥೆ ಕರೆ

ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಜನನಿಬಿಡ ಮಾರುಕಟ್ಟೆಯ ಮೇಲೆ ನಡೆದ ಮಿಲಿಟರಿ ವೈಮಾನಿಕ ದಾಳಿಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ತೀವ್ರವಾಗಿ ಖಂಡಿಸಿದ್ದಾರೆ. ಕ್ಯುಕ್ತಾವ್ ಪಟ್ಟಣದಲ್ಲಿ ನಡೆದ ಈ ದಾಳಿಯಲ್ಲಿ ಮಹಿಳೆಯರು...

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ RSS ಕಾರ್ಯಸೂಚಿಗಳನ್ನು ತಡೆಯುವಂತೆ ಖರ್ಗೆ-ರಾಹುಲ್ ಸೂಚನೆ

ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಶಿಕ್ಷಣ ಕ್ಷೇತ್ರದಲ್ಲಿ ಆರ್‌ಎಸ್‌ಎಸ್ ಹಾಗೂ ಸಂಘ ಪರಿವಾರದ ವಿಭಜಕ ಮತ್ತು ಕೋಮು ಕಾರ್ಯಸೂಚಿಯನ್ನು ಜಾರಿಗೆ ತರುವುದನ್ನು ತಕ್ಷಣವೇ ತಡೆಯಬೇಕು ಹಾಗೂ ಸಂಪೂರ್ಣ ವಿದ್ಯಾರ್ಥಿ ಕೇಂದ್ರಿತ, ಜಾತ್ಯತೀತ ಶಿಕ್ಷಣ ನೀತಿಗಳನ್ನು...

ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ‘ಸೆಂಗೋಲ್‌’ ಸೇರ್ಪಡೆ

ನೂತನ ಸಂಸತ್ ಭವನದಲ್ಲಿ ಸ್ಥಾಪಿಸಲಾದ ಸೆಂಗೋಲ್‌ (ರಾಜದಂಡ) ಈಗ ಎನ್‌ಸಿಇಆರ್‌ಟಿಯ 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದ ಭಾಗವಾಗಿದೆ. ಪಠ್ಯಪುಸ್ತಕವು ಇದನ್ನು "ಆಡಳಿತ ಮತ್ತು ಉತ್ತಮ ಆಡಳಿತದ ಸಾಂಸ್ಕೃತಿಕ ಸಂಕೇತ" ಎಂದು...

Mangaluru| MRPLನಲ್ಲಿ ಭಾರಿ ಸ್ಫೋಟ: 8 ಮಂದಿಗೆ ಗಾಯ, ಕಂಪಿಸಿದ ಜೋಕಟ್ಟೆಯ ಮನೆಗಳು-ಅಂಗನವಾಡಿ

ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಬಳಿ ಇರುವ ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌‌ ಲಿಮಿಟೆಡ್‌ (MRPL) ಸಂಸ್ಥೆಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ (ಸಿಎಚ್‌ಟಿ) ಬುಧವಾರ ಮಧ್ಯಾಹ್ನ 12:15 ರ ಸುಮಾರಿಗೆ ಭಾರಿ...

ಎಸ್‌ಐಆರ್ ಪೂರ್ಣಗೊಂಡ ರಾಜ್ಯಗಳ ಫಾರ್ಮ್-6 ರಲ್ಲಿನ ‘ಸ್ವಘೋಷಣೆ’ ನಿಯಮಕ್ಕೆ ಬ್ರೇಕ್‌; ವಿವಾದದ ಬೆನ್ನಲ್ಲೇ ಚುನಾವಣಾ ಆಯೋಗದ ನಿರ್ಧಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪೂರ್ಣಗೊಂಡಿರುವ ರಾಜ್ಯಗಳಲ್ಲಿ, ಆನ್‌ಲೈನ್ ಮತದಾರರ ನೋಂದಣಿ 'ಫಾರ್ಮ್ 6' ರಲ್ಲಿದ್ದ ಹೆಚ್ಚುವರಿ ಎಸ್‌ಐಆರ್-ಸಂಬಂಧಿತ ಸ್ವಯಂಘೋಷಣಾ ಪತ್ರವನ್ನು ಚುನಾವಣಾ ಆಯೋಗವು ಹಿಂಪಡೆದಿದೆ. ಈ ನಿಯಮವು ಎಸ್‌ಐಆರ್...

‘ಇವಿಎಂ ಬಿಜೆಪಿ ಬಳಸುವ ಸಾಧನ’: ಬ್ಯಾಲೆಟ್ ಪೇಪರ್‌ಗೆ ಮರಳಲು ಖರ್ಗೆ ಒತ್ತಾಯ; ಗ್ಯಾನೇಶ್ ಕುಮಾರ್ ವಿರುದ್ಧ ವಾಗ್ದಾಳಿ

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಮತ್ತು ಕೇಂದ್ರದ ಆಡಳಿತಾರೂಢ ಬಿಜೆಪಿ ನಡುವಿನ ರಾಜಕೀಯ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್ ಅಧ್ಯಕ್ಷ...

‘ಮಹಿಳೆಯರೇ ಪರಿಸ್ಥಿತಿ ಬದಲಿಸುತ್ತಾರೆ’: ಸುರಕ್ಷತೆ ಹೆಸರಿನಲ್ಲಿ ನಿರ್ಬಂಧ, ಅತ್ಯಾಚಾರ, ಲಿಂಗಾಧಾರಿತ ಹಿಂಸೆ ವಿರುದ್ಧ ದೆಹಲಿ ವಿದ್ಯಾರ್ಥಿನಿಯರ ಪ್ರತಿಭಟನೆ

ನವದೆಹಲಿ: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮರುಕಳಿಸುತ್ತಿರುವ ಬೆನ್ನಲ್ಲೇ, ಮಹಿಳೆಯರ ಸುರಕ್ಷತೆಯ ಹೆಸರಿನಲ್ಲಿ ಅವರ ಸ್ವಾತಂತ್ರ್ಯ ಮತ್ತು ಚಲನವಲನದ ಮೇಲೆಯೇ ನಿರ್ಬಂಧ ಹೇರುವ ಕ್ರಮಗಳ ವಿರುದ್ಧ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಬೀದಿಗಿಳಿದು...