HomeಅಂಕಣಗಳುKarnataka against SIRಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ : ಕೆ. ಮೊಣ್ಣಪ್ಪ

ಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ : ಕೆ. ಮೊಣ್ಣಪ್ಪ

ಕೊಡಗಿನ ಪಾಲೆಮಾಡಿನಲ್ಲಿ 'ಬೃಹತ್ SIR ಪಬ್ಲಿಕ್ ಹಿಯರಿಂಗ್'

- Advertisement -
- Advertisement -

“ಶೋಷಿತ ಸಮುದಾಯದಲ್ಲಿ ಹುಟ್ಟಿದ ನನ್ನ ತಂದೆಗೆ 12 ಜನ ಮಕ್ಕಳು. ಐದು ತಲೆಮಾರು ಬದಲಾದರೂ..ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ಇಂದಿಗೂ ನಮ್ಮ ಜನರಿಗೆ ನೆಲೆ ಸಿಕ್ಕಿಲ್ಲ. ಭೂಮಾಲೀಕರು ಹೇಳಿದಂತೆ ಕೇಳಿದರೆ ಮಾತ್ರ ನಮಗೆ ಕೆಲಸ ಇರುತಿತ್ತು. ನನ್ನ ತಂದೆ ಒಂದು ವರ್ಷ ಮಾತ್ರ ಒಂದು ತೋಟದಲ್ಲಿ ಕೆಲಸ ಮಾಡಿದ್ದರು. ನಮಗೆ ಸತ್ತಾಗ ಹೂಳುವುದಕ್ಕೂ ಜಾಗವಿರಲಿಲ್ಲ, ಇನ್ನು ದಾಖಲೆ ಎಲ್ಲಿಂದ ಬರಬೇಕು? ಕೊಡಗು ಎಂದರೆ ಸಂಪತ್ಭರಿತ ನಾಡು, ಕಾಶ್ಮೀರ ಎಂದೆಲ್ಲ ಹೇಳುತ್ತಾರೆ. ಆದರೆ, ಇಲ್ಲಿ ಬಡವ ಮತ್ತು ಶ್ರೀಮಂತರ ನಡುವಿನ ಅಂತರ ಬಹಳಷ್ಟಿದೆ ಎಂದು ವಸತಿ ಮತ್ತು ಭೂಮಿ ಹಕ್ಕು ವಂಚಿತರ ಹೋರಾಟಗಾರ ಕೆ.ಮೊಣ್ಣಪ್ಪ ಹೇಳಿದರು.

ಎಸ್‌ಐಆರ್ ಪರಿಶೋಧನೆ ಮತ್ತು ಪ್ರತಿರೋಧ ಜಾಥಾದ ಭಾಗವಾಗಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಆದಿವಾಸಿ ನಿರಾಶ್ರಿತರ ಬೃಹತ್ ಪಬ್ಲಿಕ್ ಹಿಯರಿಂಗ್ ನಡೆಯಿತು.

“ಸಂವಿಧಾನ ಇಲ್ಲಿನ ಬಡವರ ಮನೆಗೆ ತಲುಪಿಲ್ಲ, ಅವರಿಗೆ ಸಾಂವಿಧಾನಿಕ ಹಕ್ಕುಗಳು ಸಿಕ್ಕಿಲ್ಲ. ಹಕ್ಕು ಕೊಡಿಸಲು ನಾವು ಸಾಕಷ್ಟು ಹೋರಾಟ ಮಾಡಬೇಕಾಯಿತು. ನಾವು 20 ವರ್ಷಗಳ ಹಿಂದೆ ಕಾನ್ಶಿರಾಮ್ ನಗರ ಕಟ್ಟಿದ್ದೇವೆ. 119 ಎಕರೆ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಹೋರಾಟ ಪ್ರಾರಂಭ ಮಾಡಿದಾಗ, ಇಲ್ಲಿನ ಭೂಮಾಲೀಕರಿಗೆ ಅಂದಿನ ಸರ್ಕಾರ ಸಾಕಷ್ಟು ಬೆಂಬಲ ನೀಡುತ್ತಿತ್ತು. ನಮ್ಮ ಗಂಜಿ ಕೇಂದ್ರಕ್ಕೆ ರೇಷನ್ ತರುವುದಕ್ಕೆ ತೆರಳಿದ್ದ ಯುವಕರ ಮೇಲೆ ನೂರ್ನಾಡಿನಲ್ಲಿ ಹಲ್ಲೆ ನಡೆಸಿದ್ದರು. ಭೂಮಾಲೀಕರು ಅಲ್ಲಿ ಓರ್ವ ಯುವಕನ ಮೇಲೆ ಗುಂಡು ಹಾರಿಸಿದ್ದರು. ಇಂತಹ ಘಟನೆಗಳು ಸಾಕಷ್ಟಿವೆ” ಎನ್ನುತ್ತಾರೆ ಮೊಣ್ಣಪ್ಪ.

“ನಮಗೆ ಕುಡಿಯುವ ನೀರನ್ನೂ ಸಹ ಬಂದ್ ಮಾಡಿದ್ದರು. ಪಕ್ಕದ ಮಸೀದಿಯವರು ನಮಗೆ ನೀರು ಕೊಟ್ಟಾಗ ಅವರಿಗೂ ಇಲ್ಲಿನ ಭೂಮಾಲೀಕರು ಬಹಿಷ್ಕಾರದ ಬೆದರಿಕೆ ಹಾಕಿ ನೀರು ಕೊಡುವುದನ್ನು ನಿಲ್ಲಿಸಿದರು. ನಾವು ಕೆರೆ ನೀರು ಕುಡಿಯಲು ಪ್ರಾರಂಭಿಸಿದಾಗ, ಅದನ್ನೂ ದನಗಳನ್ನು ಬಿಟ್ಟು ಮಲೀನ ಮಾಡಿದರು. ನಮ್ಮ ಗುಡಿಸಲುಗಳಿಗೆ ಬೆಂಕಿ ಇಟ್ಟು ನಮ್ಮನ್ನು ಇಲ್ಲಿಂದ ಓಡಿಸುವ ಬೆದರಿಕೆ ಹಾಕಿದರು” ಎಂದು ನೋವು ತೋಡಿಕೊಂಡರು.

“ನಮ್ಮ ಅಹವಾಲು ಹೇಳಿಕೊಳ್ಳಲು ಗ್ರಾಮಸಭೆಗೆ ತೆರಳಿದ್ದಾಗ, ನಮ್ಮನ್ನು ಅಲ್ಲಿಂದ ಪೊಲೀಸ್ ದೌರ್ಜನ್ಯದ ಮೂಲಕ ಹೊರಗೆ ಕಳುಹಿಸಿದ್ದರು. ನಮ್ಮ ಮೇಲೆ ಕೇಸ್ ದಾಖಲಿಸುವಂತೆ, ಸಭೆಯಿಂದ ಹೊರಗೆ ಕಳುಹಿಸುವಂತೆ ಒತ್ತಡ ಹೇರಿದ್ದರು. ಇದೀಗ 25 ಎಕರೆಯ ಕಾನ್ಶಿರಾಮ್ ನಗರದಲ್ಲಿ ಅಂಬೇಡ್ಕರ್, ಬುದ್ಧ, ಬಸವ, ಫುಲೆ ಹೆಸರು ಇಟ್ಟಿದ್ದೇವೆ. ಈ ಹೆಸರುಗಳಿಗೂ ಇಲ್ಲಿನ ಕೆಲವರು ಹೊರಗಿನವರು ಎಂದು ಆಕ್ಷೇಪ ಎತ್ತಿದ್ದರು. ಬಳಿಕ ನಾವು ಒಂದು ರಸ್ತೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಹೆಸರು ಇಟ್ಟಿದ್ದೇವೆ” ಎಂದರು.

“ನಮಗೆ ಬೇರೆ ಜಾಗ ಕೊಡುವುದಾಗಿ ಹೇಳಿ ಇಲ್ಲಿಂದ ತೆರಳುವಂತೆ ಮಾಡಿ, ನಂತರ ಕೊಡುವುದಾಗಿ ಹೇಳಿದ್ದ ಜಾಗವನ್ನೇ ಕ್ರಿಕೆಟ್ ಸ್ಟೇಡಿಯಂ ಮಾಡಲು ಕೊಟ್ಟರು. ಇದನ್ನು ಪ್ರಶ್ನೆ ಮಾಡಿದ ನಮ್ಮ ಮೇಲೆ ಕೇಸ್ ದಾಖಲಿಸಿದರು. ವಿನಾಕಾರಣ ನಮ್ಮ ಮೇಲೆ ರೌಡಿ ಶೀಟ್ ತೆರೆದಿದ್ದಾರೆ. ಇಲ್ಲಿ ಬಹಳಷ್ಟು ಜನರಿಗೆ ಕೃಷಿ ಭೂಮಿಯಿಲ್ಲ, ವಸತಿಗೆ ಜಾಗವಿಲ್ಲ. ಎಲ್ಲಾ ಭೂಮಿ ಬಲಾಡ್ಯರ ವಶದಲ್ಲಿದೆ. ಅದನ್ನು ಬಿಡಿಸಿಕೊಳ್ಳುವ ಧೈರ್ಯ ಸರ್ಕಾರಕ್ಕಿಲ್ಲ. ನಾವು ಇಲ್ಲಿನ ಎಲ್ಲ ವಸತಿ ರಹಿತರ ಪಟ್ಟಿ ಮಾಡಿದ್ದೇವೆ. ಅವರಲ್ಲಿ ಬಹುತೇಕರು ಭೂಮಾಲೀಕರ ಲೈನ್ ಮನೆಗಳಲ್ಲಿದ್ದಾರೆ” ಎಂದು ವಿವರಿಸಿದರು.

“ನಿವೇಶನ ಮತ್ತು ಎಸ್‌ಐಆರ್‌ಗೆ ನೇರ ಸಂಬಂಧ ಇದೆ. ಇಲ್ಲಿ ಹೋರಾಟ ಮಾಡಬೇಕಾದರೆ ಮತದಾರರ ಗುರುತಿನ ಚೀಟಿ ಬೇಕು. ಅದನ್ನು ಇಟ್ಟುಕೊಂಡು ನಮಗೂ ಹಕ್ಕು ಕೊಡಿ ಎಂದು ಕೇಳುವ ಅಧಿಕಾರವಿತ್ತು. ಆದರೆ ಎಸ್‌ಐಆರ್‌ ಮೂಲಕ ಆ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಶೋಷಿತ ದಲಿತ, ಕಾರ್ಮಿಕ ಮತ್ತು ಅಲ್ಪಸಂಖ್ಯಾತರು ಎಸ್‌ಐಆರ್‌ನಿಂದ ತೊಂದರೆಗೆ ಒಳಗಾಗುತ್ತಿದ್ದಾರೆ. ಬಹುತೇಕರು ಕೂಲಿ ಕೆಲಸಕ್ಕಾಗಿ ಜಾಗ ಮತ್ತು ಊರುಗಳನ್ನು ಬದಲಾಯಿಸುತ್ತಾರೆ. ಇವರನ್ನು ಉದ್ದೇಶಪೂರ್ವಕವಾಗಿ ಹೆಸರು ಅಥವಾ ವಯಸ್ಸಿನ ಕಾರಣಕ್ಕೆ ನೋಟಿಸ್ ನೀಡಿ ಹತ್ತಿಕ್ಕಲಾಗುತ್ತಿದೆ” ಎಂದು ಮೊಣ್ಣಪ್ಪ ಹೇಳಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಇಂದಿನಿಂದ ಎಸ್‌ಐಆರ್ ‘ಕಚೇರಿ ವಿಚಾರಣೆ’ ಸ್ಥಗಿತ: ಚುನಾವಣಾ ಆಯೋಗದಿಂದ ಹೊಸ ಮಾರ್ಗದರ್ಶಿ!

ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (Special Intensive Revision - SIR) ಪ್ರಕ್ರಿಯೆಯಲ್ಲಿ ನೋಟಿಸ್ ಪಡೆದಿರುವ ಮತದಾರರು ಚುನಾವಣಾ ಕಚೇರಿಗಳಿಗೆ ನೇರವಾಗಿ ಹಾಜರಾಗುವ 'ಕಚೇರಿ ವಿಚಾರಣೆ' (Physical Hearing) ವ್ಯವಸ್ಥೆಯನ್ನು ಕರ್ನಾಟಕದ...

ಕರ್ನಾಟಕ ಎಸ್ಐಆರ್: ‘ಕೊನೆಯ ಮತದಾರನಿಗೆ ತನ್ನ ಹಕ್ಕು ಸಿಗುವವರೆಗೂ ನನ್ನ ಹೋರಾಟ ನಿಲ್ಲಲ್ಲ’: ನಟ ಪ್ರಕಾಶ್‌ ರಾಜ್

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದ ಬಡವರು, ಆದಿವಾಸಿಗಳು ಹಾಗೂ ದಾಖಲೆಗಳ ಕೊರತೆ ಹೊಂದಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿರುವ ನಟ, ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್, ರಾಜ್ಯದ...

ಸಂಭಲ್ ಚುನಾವಣೆ ವಿವಾದ: ಸಿಇಸಿ ಅಳಿಯನ ವರದಿ ಆಧರಿಸಿ ದೂರು ವಜಾ? ಎದ್ದುನಿಂತ ‘ಸ್ವಹಿತಾಸಕ್ತಿ ಸಂಘರ್ಷ’ದ ಪ್ರಶ್ನೆ!

ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಯ ಕುರಿತು ‘ಸ್ಕ್ರಾಲ್.ಇನ್’ (Scroll.in) ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ಸರಣಿ ತನಿಖಾ ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 2024ರ ಲೋಕಸಭಾ ಚುನಾವಣೆ...

SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) 'ಪರಿಶೋಧನೆ ಮತ್ತು ಪ್ರತಿರೋಧ ಜಾಥಾ'ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ 'ಬೃಹತ್ ಪಬ್ಲಿಕ್ ಹಿಯರಿಂಗ್'...

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು...

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...

UPI ವಹಿವಾಟುಗಳ ಮೇಲೆ ಶುಲ್ಕ : ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಯುಪಿಐ ಮೂಲಕ ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕ್ರಮದ ಆಧಾರವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ...

TMC ಪಕ್ಷ ಚಿಹ್ನೆ ಸಂಘರ್ಷ: ಆರು ತಿಂಗಳು ಬೇಕಿಲ್ಲ, ‘ಎಐ’ ಬಳಸಿ 3 ತಿಂಗಳಲ್ಲಿ ಇತ್ಯರ್ಥಗೊಳಿಸಿ ಎಂದ ಸುಪ್ರೀಂ ಕೋರ್ಟ್‌!

ಪಶ್ಚಿಮ ಬಂಗಾಳದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ಅಧಿಕೃತ 'ಹೂವು ಮತ್ತು ಹುಲ್ಲು' (Flowers & Grass) ಚುನಾವಣಾ ಚಿಹ್ನೆಯ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಬಂಡಾಯ ಹಾಗೂ...