Homeಕರ್ನಾಟಕಸ್ಥಳೀಯರ ಹೋರಾಟಕ್ಕೆ ಸಂದ ಜಯ: 'ನಮ್ಮ ಮೆಟ್ರೋ' ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ...

ಸ್ಥಳೀಯರ ಹೋರಾಟಕ್ಕೆ ಸಂದ ಜಯ: ‘ನಮ್ಮ ಮೆಟ್ರೋ’ ಪಿಂಕ್ ಲೈನ್‌ನ 3 ನಿಲ್ದಾಣಗಳ ಹೆಸರು ಬದಲಾವಣೆಗೆ ಕೇಂದ್ರದಿಂದ ಅನುಮೋದನೆ!

- Advertisement -
- Advertisement -

ಬೆಂಗಳೂರು: ‘ನಮ್ಮ ಮೆಟ್ರೋ’ ಗುಲಾಬಿ ಮಾರ್ಗದ (Pink Line) ಎಲಿವೇಟೆಡ್‌ ಕಾರಿಡಾರ್‌ನ ಮೂರು ಪ್ರಮುಖ ನಿಲ್ದಾಣಗಳ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರ ಸಲ್ಲಿಸಿದ್ದ ಪ್ರಸ್ತಾವನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅಧಿಕೃತ ಅನುಮೋದನೆ ನೀಡಿದೆ. ಈ ಮೂಲಕ ತಮ್ಮ ಊರಿನ ಅಸ್ಮಿತೆ ಮತ್ತು ಕಂದಾಯ ಗ್ರಾಮಗಳ ಹೆಸರನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದ ಸ್ಥಳೀಯ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಕೊನೆಗೂ ಜಯ ಸಿಕ್ಕಂತಾಗಿದೆ.

ನವೆಂಬರ್ 10, 2026 ರಂದು ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಯು ಈ ಮೂರು ನಿಲ್ದಾಣಗಳ ಮರುನಾಮಕರಣದ ಕುರಿತು ಕೇಂದ್ರಕ್ಕೆ ಪತ್ರ ಬರೆದು ಮನವಿ ಸಲ್ಲಿಸಿತ್ತು. ಇದಕ್ಕೆ ಸ್ಪಂದಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಉಪ ಕಾರ್ಯದರ್ಶಿ ಸೂರ್ಯ ನಾರಾಯಣ ಝಾ ಅವರು ನವೆಂಬರ್ 11, 2026 ರಂದು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ರವಾನಿಸಿದ್ದು, ಪ್ರಸ್ತಾವನೆಗೆ ಸಕ್ಷಮ ಪ್ರಾಧಿಕಾರದಿಂದ ಒಪ್ಪಿಗೆ ದೊರೆತಿರುವುದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬೀಳಲಿದ್ದು, ಪತ್ರದ ಪ್ರತಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮದ (BMRCL) ವ್ಯವಸ್ಥಾಪಕ ನಿರ್ದೇಶಕರಿಗೂ ಕಳುಹಿಸಲಾಗಿದೆ.

ನಾನುಗೌರಿ.ಕಾಂ ವರದಿಯನ್ನು ಇಲ್ಲಿ ಸ್ಮರಿಸಬಹುದು: ಬನ್ನೇರುಘಟ್ಟ ರಸ್ತೆಯ ‘ಬಿಳೇಕಹಳ್ಳಿ’ ನಿಲ್ದಾಣಕ್ಕೆ ಊರಿನ ಹೆಸರನ್ನು ಕೈಬಿಟ್ಟು ಕೇವಲ ‘ಐಐಎಂಬಿ’ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಬೆಂಗಳೂರು) ಎಂದು ಹೆಸರಿಟ್ಟಿರುವುದಕ್ಕೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಹೋರಾಟ ಆರಂಭಿಸಿದ್ದರ ಕುರಿತು ‘ನಾನುಗೌರಿ.ಕಾಂ’ ಈ ಹಿಂದೆ ವಿಸ್ತೃತ ವರದಿ ಪ್ರಕಟಿಸಿತ್ತು. “ಬಿಳೇಕಹಳ್ಳಿ ಎನ್ನುವುದು ಕೇವಲ ಒಂದು ಊರಿನ ಹೆಸರಲ್ಲ, ಅದು ನಮ್ಮ ಪೂರ್ವಜರ ನೆನಪು ಮತ್ತು ನೆಲದ ಇತಿಹಾಸ. ಅಭಿವೃದ್ಧಿಯ ಜೊತೆಗೆ ನಮ್ಮ ಊರಿನ ಐತಿಹಾಸಿಕ ಅಸ್ತಿತ್ವವೂ ಉಳಿಯಬೇಕು” ಎಂದು ಸ್ಥಳೀಯರು ಆಗ್ರಹಿಸಿದ್ದರು. ಅಲ್ಲದೆ, ಈ ಸಂಬಂಧ ಸ್ಥಳೀಯ ಮುಖಂಡರು ಹಾಗೂ ನಿವಾಸಿಗಳ ನಿಯೋಗವು ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ ನಿಲ್ದಾಣಗಳ ಹೆಸರು ಪರಿಶೀಲನೆಗಾಗಿ ರಾಜ್ಯ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು.

ಮೂರು ನಿಲ್ದಾಣಗಳ ಹೆಸರು ಹೇಗೆ ಬದಲಾಗಿದೆ:

ರಾಜ್ಯ ಸರ್ಕಾರ ರಚಿಸಿದ್ದ ಸಮಿತಿಯು ಸಾರ್ವಜನಿಕರಿಂದ ಬಂದ ಮನವಿಗಳನ್ನು ಪರಿಶೀಲಿಸಿ ಶಿಫಾರಸುಗಳನ್ನು ಮಾಡಿತ್ತು. ಅದರಂತೆ, ಈ ಹಿಂದೆ ‘ಐಐಎಂಬಿ ಮೆಟ್ರೋ ನಿಲ್ದಾಣ’ ಎಂದು ಹೆಸರಿಸಲಾಗಿದ್ದ ನಿಲ್ದಾಣವು ಬಿಳೇಕಹಳ್ಳಿ ಕಂದಾಯ ಗ್ರಾಮದ ವ್ಯಾಪ್ತಿಗೆ ಬರುವುದರಿಂದ, ಮೂಲ ಹೆಸರಿನ ಮುಂದೆ ‘ಬಿಳೇಕಹಳ್ಳಿ’ ಸೇರಿಸಿ ‘ಬಿಳೇಕಹಳ್ಳಿ–ಐಐಎಂಬಿ’ (Bilekahalli–IIMB) ಎಂದು ಮರುನಾಮಕರಣ ಮಾಡಲಾಗಿದೆ.

ಅದೇ ರೀತಿ, ಈ ಹಿಂದೆ ‘ಜೆ.ಪಿ. ನಗರ 4ನೇ ಹಂತ ಮೆಟ್ರೋ ನಿಲ್ದಾಣ’ ಎಂದು ಗುರುತಿಸಲಾಗಿದ್ದ ನಿಲ್ದಾಣದ ವ್ಯಾಪ್ತಿಯ ಕಂದಾಯ ಗ್ರಾಮದ ಹೆಸರು ಎನ್.ಎಸ್. ಪಾಳ್ಯ ಆಗಿರುವುದರಿಂದ, ಹಳೆಯ ಹೆಸರಿನೊಂದಿಗೆ ಸೇರಿಸಿ ‘ಎನ್.ಎಸ್. ಪಾಳ್ಯ ಜೆ.ಪಿ. ನಗರ 4ನೇ ಹಂತ’ (NS Palya JP Nagar 4th Phase) ಎಂದು ಬದಲಾಯಿಸಲಾಗಿದೆ.

ಈ ಹಿಂದೆ ‘ತಾವರೆಕೆರೆ ಮೆಟ್ರೋ ನಿಲ್ದಾಣ’ ಎಂದು ಹೆಸರಿಡಲಾಗಿದ್ದ ನಿಲ್ದಾಣದಿಂದ ತಾವರೆಕೆರೆ ಕಂದಾಯ ಗ್ರಾಮವು ಸ್ವಲ್ಪ ದೂರದಲ್ಲಿದ್ದು, ಸ್ಥಳೀಯವಾಗಿ ವಾರ್ಡ್ ಹೆಸರಾದ ‘ಎಸ್.ಜಿ. ಪಾಳ್ಯ’ ಹೆಚ್ಚು ಜನಪ್ರಿಯವಾಗಿದೆ. ಹೀಗಾಗಿ ತಾವರೆಕೆರೆ ಬದಲಿಗೆ ‘ಎಸ್.ಜಿ. ಪಾಳ್ಯ (ಸುದ್ದಗುಂಟೆ ಪಾಳ್ಯ)’ (S.G. Palya – Suddagunte Palya) ಎಂದು ಮರುನಾಮಕರಣ ಮಾಡಲು ಒಪ್ಪಿಗೆ ನೀಡಲಾಗಿದೆ.

ಇನ್ನುಳಿದಂತೆ, ಪಿಂಕ್ ಲೈನ್ ಎಲಿವೇಟೆಡ್‌ ಕಾರಿಡಾರ್‌ನ ಇತರ ಪ್ರಮುಖ ನಿಲ್ದಾಣಗಳಾದ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣ (ಇದು ಕಂದಾಯ ಗ್ರಾಮದ ಹೆಸರಾಗಿರುವುದರಿಂದ), ಹುಳಿಮಾವು ಮೆಟ್ರೋ ನಿಲ್ದಾಣ ಹಾಗೂ ಜಯದೇವ ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆಗೆ ಯಾವುದೇ ಮನವಿಗಳು ಸಲ್ಲಿಕೆಯಾಗದ ಕಾರಣ ಅವುಗಳ ಹೆಸರುಗಳನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳಲು ಸಮಿತಿ ತೀರ್ಮಾನಿಸಿದೆ. ಒಟ್ಟಿನಲ್ಲಿ, ಸ್ಥಳೀಯರ ನಿರಂತರ ಒತ್ತಾಯ ಮತ್ತು ಹೋರಾಟಕ್ಕೆ ಸರ್ಕಾರ ಮನ್ನಣೆ ನೀಡಿದ್ದು, ಬೆಂಗಳೂರಿನ ಮೂಲ ಗ್ರಾಮಗಳ ಹೆಸರು ಮೆಟ್ರೋ ನಿಲ್ದಾಣಗಳ ಮೂಲಕ ಶಾಶ್ವತವಾಗಿ ಉಳಿಯುವಂತಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದ ನಾಸರ್ ಆಸ್ಪತ್ರೆಯ ಮೇಲೆ ಇಸ್ರೇಲ್‌ನಿಂದ ವೈಮಾನಿಕ ದಾಳಿ : ಕನಿಷ್ಠ 6 ಸಾವು, 20ಕ್ಕೂ ಹೆಚ್ಚು ಜನರಿಗೆ ಗಾಯ

ದಕ್ಷಿಣ ಗಾಝಾದ ನಾಸರ್ ಆಸ್ಪತ್ರೆಯ ಕಟ್ಟಡವೊಂದರ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಖಾನ್ ಯೂನಿಸ್‌ನಲ್ಲಿರುವ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮೇಲೆ ದಾಳಿ...

ಮುಸ್ಲಿಂ ದಂಪತಿಗೆ ನಿಂದನೆ; ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಕಂಡಕ್ಟರ್ ಅಮಾನತು

ತಪ್ಪಾಗಿ ಬೇರೆ ಬಸ್ ಹತ್ತಿ ಇಳಿದ ಇಬ್ಬರು ಪ್ರಯಾಣಿಕರ ವಿರುದ್ಧ ಕೋಮುವಾದಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಆಧರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್‌ಆರ್‌ಟಿಸಿ) ಬಸ್ ಕಂಡಕ್ಟರ್ ಒಬ್ಬರನ್ನು...

ನೊಂದವರ ದನಿಯಾಗಿ, ಶೋಷಿತರ ಹೋರಾಟದ ಶಕ್ತಿಯಾಗಿ ಬೆಳೆದ ಶಿವರಾಮ ಮೋಘ: ಡಾ. ಪಿ. ನಂದಕುಮಾರ್

ಭಾರತದ ಸಾಂಸ್ಕೃತಿಕ ಚರಿತ್ರೆಯಲ್ಲಿ ಹೈದರಾಬಾದ್ ಕರ್ನಾಟಕ’ (ಕಲ್ಯಾಣ ಕರ್ನಾಟಕ) ಪ್ರದೇಶಕ್ಕೆ ವಿಶೇಷವಾದ ಸ್ಥಾನವಿದೆ. ಹಲವು ಸಾಂಸ್ಕೃತಿಕ ವಿಶೇಷತೆಯನ್ನು ಒಳಗೊಂಡಿರುವ ಈ ಪ್ರದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದೆ. ಶ್ರೀವಿಜಯ...

ಅರ್ಜೆಂಟೀನಾದ ನೌಕಾಪಡೆ -ವಾಯುಪಡೆಯನ್ನು ‘ಭಯೋತ್ಪಾದಕ ಸಂಸ್ಥೆಗಳು’ ಎಂದು ಘೋಷಿಸಿದ ಇರಾನ್‌

ಅರ್ಜೆಂಟೀನಾದ ನೌಕಾಪಡೆ ಮತ್ತು ವಾಯುಪಡೆಯನ್ನು ಇರಾನ್ ಸರ್ಕಾರವು ಭಯೋತ್ಪಾದಕ ಸಂಸ್ಥೆಗಳು ಎಂದು ಘೋಷಿಸಿದ್ದು, ಈ ವರ್ಷದ ಆರಂಭದಲ್ಲಿ ಟೆಹ್ರಾನ್‌ನ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್ ಜಿಸಿ) ಅನ್ನು ಕಪ್ಪುಪಟ್ಟಿಗೆ ಸೇರಿಸುವ ಬ್ಯೂನಸ್...

ಎಸ್‌ಐಆರ್ ಅವಧಿಯಲ್ಲಿ ಕೈಬಿಡಲಾದ ವ್ಯಕ್ತಿಗಳ ಗುರುತಿನ ಚೀಟಿ ಸಂಖ್ಯೆ ಮರುಸ್ಥಾಪನೆ ಕೋರಿ ಅರ್ಜಿ

ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು (ಎಸ್‌ಐಆರ್) ಪ್ರಶ್ನಿಸಿರುವ ಇಬ್ಬರು ಅರ್ಜಿದಾರರು, ತಮ್ಮ ಪರಿಷ್ಕೃತ ಪರಿಹಾರ ಪ್ರಕ್ರಿಯೆಯನ್ನು ಕೇವಲ ಏಳು ರಾಜ್ಯಗಳಿಗೆ ಸೀಮಿತಗೊಳಿಸುವ ಬದಲು, ಕರಡು ಪಟ್ಟಿಯಿಂದ ಕೈಬಿಡಲಾದ...

ಜಮ್ಮು ಕಾಶ್ಮೀರ : CRPF ತುಕಡಿ ಮೇಲೆ ಭಯೋತ್ಪಾದಕರಿಂದ ಗುಂಡಿನ ದಾಳಿ ; ಮೂವರು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ (ನ.11) ನಡೆದ ಭಯೋತ್ಪಾದಕ ದಾಳಿಯಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್‌ನ (ಸಿಆರ್‌ಪಿಎಫ್‌)ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಜಿಲ್ಲೆಯ ಚೆಕ್‌ಪಾಯಿಂಟ್ ಒಂದರಲ್ಲಿ ನಿಯೋಜನೆಗೊಂಡಿದ್ದ ಭದ್ರತಾ...

‘ಮಾಲಿನ್ಯ ಹೆಚ್ಚಾದರೆ ಕಡಿಮೆಯಾಗುತ್ತದೆ, ಚಿಂತೆ ಏಕೆ?’: ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ: ದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಜನರ ಜೀವಕ್ಕೆ ಕಂಟಕವಾಗುತ್ತಿರುವ ಬೆನ್ನಲ್ಲೇ, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆ ತೀವ್ರ ಚರ್ಚೆಗೆ...

‘ಗ್ಯಾನೇಶ್ ಕುಮಾರ್ 2 ಕೋಟಿ ರೂ. ಲಂಚ ಕೇಳಿದ್ದರು’: ಹೇಳಿಕೆ ದಾಖಲಿಸಿಕೊಂಡ ಕೇರಳ ವಿಜಿಲೆನ್ಸ್-ವರದಿ

ಕೇರಳದ ಭ್ರಷ್ಟಾಚಾರ ನಿಗ್ರಹ ಮತ್ತು ವಿಜಿಲೆನ್ಸ್ ಬ್ಯೂರೋ (ವಿಎಸಿಬಿ) ಪ್ರಸ್ತುತ ಮುಖ್ಯ ಚುನಾವಣಾ ಆಯುಕ್ತರಾಗಿರುವ ಗ್ಯಾನೇಶ್ ಕುಮಾರ್ ಅವರ ವಿರುದ್ಧ ಕೇಳಿಬಂದಿರುವ ಲಂಚದ ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ಆರಂಭಿಸಿದೆ. 2006ರಲ್ಲಿ ಗ್ಯಾನೇಶ್ ಕುಮಾರ್...

ತಮಿಳುನಾಡು ಮತದಾರರ ಪಟ್ಟಿಯಿಂದ 74 ಲಕ್ಷಕ್ಕೂ ಹೆಚ್ಚು ಮತದಾರರು ನಾಪತ್ತೆ : ನ.26ರಂದು ಬೃಹತ್ ಪ್ರತಿಭಟನೆ

ತಮಿಳುನಾಡಿನ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಒಟ್ಟು 74.07 ಲಕ್ಷ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಯಂಗ್ ಸಿಟಿಝನ್ಸ್ ಕಲೆಕ್ಟಿವ್ (ಐವೈಸಿಸಿ) ಗಂಭೀರ ಆರೋಪ ಮಾಡಿದ್ದು, ಈ ಹೆಸರುಗಳ...

ವಾಯುಮಾಲಿನ್ಯದಿಂದ ಜನರ ಜೀವಕ್ಕೆ ಕುತ್ತು: ‘ಭಾರತೀಯರು ಅನಾಥರಾಗಿ ಗ್ಯಾಸ್ ಚೇಂಬರ್‌ನಲ್ಲಿ ಸಿಲುಕಿದ್ದಾರೆ’; ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಎನ್‌ಜಿಟಿಗೆ ಮನವಿ

ನವದೆಹಲಿ: ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಹಲವು ನಗರಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟವನ್ನು ತಲುಪಿದ್ದು, ಜನರು ಉಸಿರಾಡುವುದೇ ಜೀವಕ್ಕೆ ಅಪಾಯಕಾರಿಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿಷಕಾರಿ ಗಾಳಿಯ ನಡುವೆ ಬದುಕುತ್ತಿರುವ ಜನರ ಆರೋಗ್ಯ ಮತ್ತು...