HomeಅಂಕಣಗಳುKarnataka against SIRSIR | ಕೊಡಗಿನ ಪಾಲೆಮಾಡಿನಲ್ಲಿ 'ಬೃಹತ್ ಪಬ್ಲಿಕ್ ಹಿಯರಿಂಗ್' : ನಟ ಪ್ರಕಾಶ್ ರಾಜ್ ಮುಂದೆ...

SIR | ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ : ನಟ ಪ್ರಕಾಶ್ ರಾಜ್ ಮುಂದೆ ನೋವು ತೋಡಿಕೊಂಡ ಹಾಡಿ ಜನರು

- Advertisement -
- Advertisement -

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ‘ಪರಿಶೋಧನೆ ಮತ್ತು ಪ್ರತಿರೋಧ ಜಾಥಾ’ದ ಭಾಗವಾಗಿ ಬಹುಭಾಷಾ ನಟ, ಹೋರಾಟಗಾರ ಪ್ರಕಾಶ್ ರಾಜ್‌ ನೇತೃತ್ವದಲ್ಲಿ ಮಂಗಳವಾರ (ಸೆ.29) ಕೊಡಗಿನ ಪಾಲೆಮಾಡಿನಲ್ಲಿ ‘ಬೃಹತ್ ಪಬ್ಲಿಕ್ ಹಿಯರಿಂಗ್’ ನಡೆಯಿತು.

ನಾಗರಿಕ ಮತಕಾವಲು ಸಮಿತಿ, ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಹಾಗೂ ವಿವಿಧ ಜಾತ್ಯತೀತ ಪಕ್ಷ ಮತ್ತು ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ, ನಿರಾಶ್ರಿತರಾದ ಹಾಡಿ ಜನರು ಎಸ್‌ಐಆರ್‌ನಿಂದ ತಾವು ಎದುರಿಸಿದ ಸಂಕಟ ತೋಡಿಕೊಂಡರು.

ಬಿ.ಶೆಟ್ಟಿಗೇರಿಯ ಮಂಜುಳಾ ಎಂಬವರು ಮಾತನಾಡಿ, “ನನಗೆ ನೋಟಿಸ್ ಬಂದಿದೆ ಎಂದು ಹೇಳುತ್ತಿದ್ದಾರೆ, ಆದರೆ ಈವರೆಗೆ ಕೊಟ್ಟಿಲ್ಲ. ಐದಾರು ಬಾರಿ ಹೋದರೂ ‘ನಾಳೆ ಬಾ, ನಾಳೆ ಬಾ’ ಎಂದು ಹೇಳುತ್ತಿದ್ದಾರೆ. ನಾನು ಎನ್ಯುಮರೇಷನ್ ಫಾರಂ ಫಿಲ್ ಮಾಡಿ ಕೊಟ್ಟಿದ್ದೆ. ಆದರೆ, ನೋಟಿಸ್ ಬಂದಿದೆ ಎಂದು ಈವರೆಗೆ ನನಗೆ ತಿಳಿದಿರಲಿಲ್ಲ, ಅವರೇ ಇಟ್ಟುಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದಿದ್ದೇ ಕೊಡಗಿನಲ್ಲಿ. ‘ಅನ್‌ಮ್ಯಾಪ್ಡ್’ ಎಂದು ಕಾರಣ ನೀಡಿ ನೋಟಿಸ್ ನೀಡಿದ್ದಾರೆ. ಐದಾರು ಬಾರಿ ಪಂಚಾಯಿತಿಗೆ ಭೇಟಿ ನೀಡಲು 300 ರೂಪಾಯಿ ಕೊಟ್ಟು ಆಟೋ ಮಾಡಿಕೊಂಡು ಹೋಗಿದ್ದೇವೆ. ನಾವು ಕೂಲಿ ಮಾಡುತ್ತಿದ್ದು, ಅಷ್ಟೊಂದು ಕೂಲಿಯೂ ಸಹ ನಮಗೆ ಸಿಗುತ್ತಿಲ್ಲ” ಎಂದು ಹೇಳಿದರು.

ಗೌರಿ ಎಂಬವರು ಮಾತನಾಡಿ, “ನನ್ನ ಹೆಸರು ಗೌರಿ. ನಮಗೆ ಈ ಮುಂಚೆ ಅಮ್ಮತಿಯಲ್ಲಿ ವೋಟು ಇತ್ತು. ನಾವು ಅಲ್ಲಿ ಹೋಗಿ ಕೇಳಿದಾಗ ‘ಬಿ.ಶೆಟ್ಟಿಗೇರಿಯಲ್ಲಿ ಮಾಡಿಕೊಳ್ಳಿ’ ಎಂದು ಹೇಳಿದರು. ನಾವು ಅಲ್ಲಿ ಇಲ್ಲ ಎಂಬ ಕಾರಣಕ್ಕೆ ನಮ್ಮ ವೋಟ್ ಡಿಲೀಟ್ ಮಾಡಿದ್ದಾರೆ” ಎಂದು ತಿಳಿಸಿದರು.

ಬಿ.ಶೆಟ್ಟಿಗೇರಿಯ ನಿವಾಸಿ ಕಮಲ ಎಂಬವರು 1995ರಲ್ಲಿ ಮತದಾನ ಮಾಡಿದ್ದು, ಆದರೆ 2002ರ ಮತದಾರರ ಪಟ್ಟಿಯಲ್ಲಿ ಅವರು ಹೆಸರು ಸಿಕ್ಕಿಲ್ಲ ಎನ್ನಲಾಗಿದೆ. ಹಾಗಾಗಿ, ಅವರಿಗೆ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ಬಂದಿಲ್ಲ ಎಂದು ತಿಳಿದು ಬಂದಿದೆ.

ಪೊನ್ನಂಪೇಟೆಯ ಭಾರತಿ ಮಾತನಾಡಿ, “ನಾವು ಸಾಲು ಮನೆಯಲ್ಲಿ (ಲೈನ್ ಮನೆ) ಇದ್ದೇವೆ. ವರ್ಷಕ್ಕೊಮ್ಮೆ ತೋಟಗಳನ್ನು ಬದಲಿಸುತ್ತೇವೆ. ನಾವು ವಲಸೆ ಹೋಗುತ್ತಿರುವ ಕಾರಣಕ್ಕೆ ನಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದಿದ್ದಾರೆ. ನಾವೀಗ ಶೆಡ್ ಹಾಕಿಕೊಂಡು ಕುಳಿತಿದ್ದೇವೆ. ನಮಗೆ ಕರೆಂಟ್ ಅಥವಾ ಕುಡಿಯುವ ನೀರು ಇಲ್ಲ. ಈವರೆಗೆ ಪಂಚಾಯಿತಿಯಿಂದ ನೀಡುತ್ತಿದ್ದ ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ. ನಮಗೆ ವಸತಿ ಹಾಗೂ ಮತದಾನದ ಅವಕಾಶ ಕಲ್ಪಿಸಿಕೊಡಬೇಕು” ಎಂದು ಮನವಿ ಮಾಡಿದರು.

“ನನ್ನ ಗಂಡನ ಹೆಸರಿಗೆ ಸಂಬಂಧಿಕರ ಹೆಸರು ಮ್ಯಾಚ್ ಆಗಿಲ್ಲ ಎಂದು ನೋಟಿಸ್ ನೀಡಿದ್ದಾರೆ. ರೇಷನ್ ಕಾರ್ಡ್ ರದ್ದಾಗುವ ಆತಂಕದಲ್ಲೇ ಬದುಕುತ್ತಿದ್ದೇವೆ. ಸಾಲು ಮನೆಯಲ್ಲಿ ಇದ್ದುಕೊಂಡೇ ನನ್ನ ತಂದೆ-ತಾಯಿ ಓದಿಸಿದ್ದಾರೆ. ಆದರೆ ಈ ಎಸ್‌ಐಆರ್ ನಮಗೆ ಅರ್ಥವಾಗುತ್ತಿಲ್ಲ. ಏನೇ ದಾಖಲೆ ನೀಡಿದರೂ..ಒಂದಲ್ಲ ಒಂದು ಕಾರಣ ನೀಡಿ ನಮ್ಮನ್ನು ವಾಪಸ್ ಕಳುಹಿಸುತ್ತಿದ್ದಾರೆ. ದಾಖಲೆಗಳನ್ನು ಸರಿಪಡಿಸಬೇಕಾದವರೇ ನಿಮ್ಮ ಮಾಹಿತಿ ಸರಿ ಇಲ್ಲ ಎಂದು ಹೇಳುತ್ತಿದ್ದಾರೆ. ನಾವು ಆಗಾಗ ಲೈನ್ ಮನೆಗಳನ್ನು ಬದಲಿಸುತ್ತೇವೆ. ಇದೀಗ ಬಿ.ಶೆಟ್ಟಿಗೇರಿ ಗ್ರಾಮದಲ್ಲಿ ಟೆಂಟ್‌ ಹಾಕಿಕೊಂಡು ವಾಸ ಮಾಡುತ್ತಿದ್ದೇವೆ. ನಮಗೆ ನಿವೇಶನ ಬೇಕಿದೆ” ಎಂದು ಲಕ್ಷ್ಮಿ ಜೋಯಿಸ್ ಎಂಬವರು ಹೇಳಿದರು.

ಬಿ.ಶೆಟ್ಟಿಗೇರಿ ಗ್ರಾಮದ 14 ಜನರಿಗೆ ಈವರೆಗೆ ಎನ್ಯುಮರೇಷನ್ ಫಾರಂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಈ ಜನರಿಗೆ ಇರಲು ಮನೆ ಇಲ್ಲ. ಎಸ್‌ಐಆರ್ ನಡೆಯುತ್ತಿದೆ ಎಂಬುದೇ ಇವರಿಗೆ ಗೊತ್ತಿಲ್ಲ. ವೋಟರ್ ಐಡಿ ಇದ್ದರೂ ಎನ್ಯುಮರೇಷನ್ ಫಾರ್ಮ್ ಸಿಕ್ಕಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂಭಲ್ ಚುನಾವಣೆ ವಿವಾದ: ಸಿಇಸಿ ಅಳಿಯನ ವರದಿ ಆಧರಿಸಿ ದೂರು ವಜಾ? ಎದ್ದುನಿಂತ ‘ಸ್ವಹಿತಾಸಕ್ತಿ ಸಂಘರ್ಷ’ದ ಪ್ರಶ್ನೆ!

ಭಾರತೀಯ ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಕಾರ್ಯವೈಖರಿಯ ಪಾರದರ್ಶಕತೆಯ ಕುರಿತು ‘ಸ್ಕ್ರಾಲ್.ಇನ್’ (Scroll.in) ಡಿಜಿಟಲ್ ಮಾಧ್ಯಮ ಸಂಸ್ಥೆ ಪ್ರಕಟಿಸಿರುವ ಸರಣಿ ತನಿಖಾ ವರದಿಯೊಂದು ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿದೆ. 2024ರ ಲೋಕಸಭಾ ಚುನಾವಣೆ...

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು...

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...

UPI ವಹಿವಾಟುಗಳ ಮೇಲೆ ಶುಲ್ಕ : ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಯುಪಿಐ ಮೂಲಕ ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕ್ರಮದ ಆಧಾರವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ...

TMC ಪಕ್ಷ ಚಿಹ್ನೆ ಸಂಘರ್ಷ: ಆರು ತಿಂಗಳು ಬೇಕಿಲ್ಲ, ‘ಎಐ’ ಬಳಸಿ 3 ತಿಂಗಳಲ್ಲಿ ಇತ್ಯರ್ಥಗೊಳಿಸಿ ಎಂದ ಸುಪ್ರೀಂ ಕೋರ್ಟ್‌!

ಪಶ್ಚಿಮ ಬಂಗಾಳದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ಅಧಿಕೃತ 'ಹೂವು ಮತ್ತು ಹುಲ್ಲು' (Flowers & Grass) ಚುನಾವಣಾ ಚಿಹ್ನೆಯ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಬಂಡಾಯ ಹಾಗೂ...

‘ದೆಹಲಿ-ಎನ್‌ಸಿಆರ್‌ ಅತ್ಯಾಚಾರ ಪ್ರಕರಣಗಳು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ’ : ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ದೆಹಲಿಯ ಉದ್ಯಾನವನವೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಲಿಸುತ್ತಿದ್ದ ಸ್ಲೀಪರ್ ಬಸ್‌ನೊಳಗೆ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸೇರಿದಂತೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇತ್ತೀಚೆಗೆ ವರದಿಯಾದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್...

ಆಗ್ರಾದಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ನಿವಾಸದ ಮೇಲೆ ‘ಗ್ಯಾನೇಶ್ ಗದ್ದರ್, ವೋಟ್ ಚೋರ್’ ಬರಹ; ಎಸ್‌ಐಆರ್ ವಿರುದ್ಧ ತೀವ್ರಗೊಂಡ ಪ್ರತಿಭಟನೆ

ಆಗ್ರಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ದೇಶಾದ್ಯಂತ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ನಿವಾಸದ ಹೊರಗೆ...

‘ಇಂತಹ ಸರ್ಕಾರವನ್ನು ಬೆಂಬಲಿಸುವುದಕ್ಕೆ ವಿಷಾದವಿದೆ’: ಬಿಹಾರದ ಕಾನೂನು-ಸುವ್ಯವಸ್ಥೆ ಬಗ್ಗೆ ಚಿರಾಗ್ ಪಾಸ್ವಾನ್ ಬಹಿರಂಗ ಅಸಮಾಧಾನ

ಪಾಟ್ನಾ: ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ...