Homeಮುಖಪುಟದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು...

ದೆಹಲಿ-ಎನ್‌ಸಿಆರ್‌ನಲ್ಲಿ ಸರಣಿ ಅತ್ಯಾಚಾರ: ‘ವ್ಯವಸ್ಥಿತ ವೈಫಲ್ಯ’ ಎಂದ ಸುಪ್ರೀಂ ಕೋರ್ಟ್, ಸಾರ್ವಜನಿಕ ಸ್ಥಳಗಳು ‘ಅಪಾಯದ ವಲಯ’ವಾಗಲು ಬಿಡಲಾಗದು

- Advertisement -
- Advertisement -

ನವದೆಹಲಿ: ದೆಹಲಿ-ಎನ್‌ಸಿಆರ್‌ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ವರದಿಯಾಗುತ್ತಿರುವ ಸರಣಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಈ ಪ್ರಕರಣಗಳು ಕೇವಲ ಪ್ರತ್ಯೇಕ ಅಪರಾಧಗಳಾಗಿ ನೋಡಲು ಸಾಧ್ಯವಿಲ್ಲ ಎಂದು ಹೇಳಿದೆ. ಸಾರ್ವಜನಿಕರ ಮೂಲಭೂತ ಸುರಕ್ಷತೆಯನ್ನು ಖಚಿತಪಡಿಸುವಲ್ಲಿ ಕಾನೂನು ಜಾರಿ ಸಂಸ್ಥೆಗಳು ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆಯ ‘ವ್ಯವಸ್ಥಿತ ವೈಫಲ್ಯ’ವನ್ನು ಈ ಘಟನೆಗಳು ಎತ್ತಿ ತೋರಿಸುತ್ತಿವೆ ಎಂದು ನ್ಯಾಯಾಲಯ ಸೋಮವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲು ನಿರ್ದೇಶಿಸಿದೆ.

ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರಿದ್ದ ಪೀಠ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪದೇಪದೇ ವರದಿಯಾಗುತ್ತಿರುವ ಲೈಂಗಿಕ ಅಪರಾಧಗಳ ಸುದ್ದಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಇಂತಹ ಅಪರಾಧಗಳು ನಡೆಯಲು ಕಾರಣವಾಗಿರುವ ಆಡಳಿತಾತ್ಮಕ ಮತ್ತು ಕಾನೂನು ಜಾರಿ ವೈಫಲ್ಯಗಳಿಗೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ಗುರುತಿಸುವ ಅಗತ್ಯವಿದೆ ಎಂದು ಪೀಠ ಒತ್ತಿ ಹೇಳಿತು. 

ಸ್ವರೂಪ್ ನಗರದಲ್ಲಿ ಹದಿಹರೆಯದ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನೂ ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಈ ಪ್ರಕರಣದಲ್ಲಿ ಸಂತ್ರಸ್ತೆಯ ಕೊಳೆತ ದೇಹವನ್ನು ಪೊಲೀಸರು ಹೊಲವೊಂದರಿಂದ ವಶಪಡಿಸಿಕೊಂಡಿದ್ದರು ಎಂದು ನ್ಯಾಯಾಲಯ ಗಮನಿಸಿದೆ. ಇದೇ ವೇಳೆ ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಸುಮಾರು 47 ಕಿಲೋಮೀಟರ್ ಪ್ರಯಾಣಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನೂ ಪೀಠ ಉಲ್ಲೇಖಿಸಿತು. ವರದಿಗಳ ಪ್ರಕಾರ, ಬಸ್ ತನ್ನ ಪ್ರಯಾಣ ಮುಂದುವರಿಸಿದರೂ ಪೊಲೀಸರು ಅದನ್ನು ತಡೆಯಲು ವಿಫಲರಾಗಿದ್ದರು. ಈ ಘಟನೆಯನ್ನು ಉಲ್ಲೇಖಿಸಿದ ನ್ಯಾಯಾಲಯ, 2012ರ ನಿರ್ಭಯಾ ಪ್ರಕರಣದೊಂದಿಗೆ ನೋವಿನ ಹೋಲಿಕೆಗಳು ಮೂಡುತ್ತವೆ ಎಂದು ಹೇಳಿತು.

2012ರ ನಿರ್ಭಯಾ ಪ್ರಕರಣದ ಬಳಿಕ ಮಹಿಳೆಯರು ಮತ್ತು ಬಾಲಕಿಯರ ಸುರಕ್ಷತೆಗಾಗಿ ಕಾನೂನು ಜಾರಿ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳು ಮತ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಇತ್ತೀಚಿನ ಘಟನೆಗಳು ಆ ಕ್ರಮಗಳು ನೆಲಮಟ್ಟದಲ್ಲಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿವೆ ಎಂಬ ಗಂಭೀರ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನಿರ್ಭಯಾ ಪ್ರಕರಣದ ನಂತರ ಕಾನೂನು ಜಾರಿ ವ್ಯವಸ್ಥೆಯಲ್ಲಿ ಅರ್ಥಪೂರ್ಣ ಪ್ರಗತಿ ಆಗಿದೆಯೇ ಎಂಬುದನ್ನೂ ಈ ಘಟನೆಗಳು ಪ್ರಶ್ನಿಸುವಂತಿವೆ ಎಂದು ಪೀಠ ಅಭಿಪ್ರಾಯಪಟ್ಟಿದೆ. 

ಸಾರ್ವಜನಿಕ ಸ್ಥಳಗಳ ಸುರಕ್ಷತೆಯ ವಿಚಾರದಲ್ಲಿಯೂ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ನಿಲುವು ವ್ಯಕ್ತಪಡಿಸಿದೆ. ರಸ್ತೆಗಳು, ಉದ್ಯಾನಗಳು, ಬಸ್‌ಗಳು, ಮೆಟ್ರೋ ನಿಲ್ದಾಣಗಳು, ಸುರಂಗಮಾರ್ಗಗಳು ಮತ್ತು ಪಾದಚಾರಿ ಸೇತುವೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳು ಸಮರ್ಪಕ ಬೆಳಕಿನ ಕೊರತೆ, ದುರ್ಬಲ ಕಣ್ಗಾವಲು, ಪೊಲೀಸ್ ಗಸ್ತಿನ ಕೊರತೆ ಅಥವಾ ತಪ್ಪಿಸಬಹುದಾದ ಆಡಳಿತಾತ್ಮಕ ಲೋಪಗಳಿಂದಾಗಿ ‘ಹೆಚ್ಚಿನ ಅಪಾಯದ ವಲಯ’ಗಳಾಗಿ ಪರಿವರ್ತನೆಯಾಗಲು ಅವಕಾಶ ನೀಡಲಾಗದು ಎಂದು ನ್ಯಾಯಾಲಯ ಹೇಳಿದೆ.

ಸಂವಿಧಾನದ 21ನೇ ವಿಧಿಯಡಿ ಪ್ರತಿಯೊಬ್ಬರಿಗೂ ಖಾತರಿಪಡಿಸಿರುವ ಬದುಕುವ ಹಕ್ಕಿನಲ್ಲಿ, ಕೇವಲ ಜೀವಂತವಾಗಿರುವುದಷ್ಟೇ ಅಲ್ಲದೆ ಘನತೆಯಿಂದ ಮತ್ತು ಹಿಂಸೆಯ ಭಯವಿಲ್ಲದೆ ಬದುಕುವ ಹಕ್ಕೂ ಸೇರಿದೆ ಎಂದು ಪೀಠ ಸ್ಪಷ್ಟಪಡಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ದುರ್ಬಲ ವರ್ಗದವರು ಭಯವಿಲ್ಲದೆ ಸಂಚರಿಸಲು ಸಾಧ್ಯವಾಗುವಂತಹ ಪರಿಸರವನ್ನು ನಿರ್ಮಿಸುವುದು ಆಡಳಿತದ ಮೂಲಭೂತ ಜವಾಬ್ದಾರಿಯಾಗಿದೆ ಎಂಬ ಅಂಶವನ್ನು ನ್ಯಾಯಾಲಯದ ಅಭಿಪ್ರಾಯ ಮತ್ತೊಮ್ಮೆ ಒತ್ತಿ ಹೇಳಿದೆ. 

ಅಪರಾಧ ನಡೆದ ಬಳಿಕ ಕಳವಳ ವ್ಯಕ್ತಪಡಿಸುವುದು ಅಥವಾ ಸಂತ್ರಸ್ತರೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವ ಹೇಳಿಕೆಗಳನ್ನು ನೀಡುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಅಪರಾಧ ತಡೆಗಟ್ಟುವಿಕೆ, ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು ಮತ್ತು ದುರ್ಬಲ ವ್ಯಕ್ತಿಗಳ ರಕ್ಷಣೆಯ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ಮೇಲೆ ನಿರ್ದಿಷ್ಟ ಜವಾಬ್ದಾರಿ ಹಾಗೂ ಹೊಣೆಗಾರಿಕೆ ನಿಗದಿಯಾಗಬೇಕು ಎಂದು ಪೀಠ ಹೇಳಿದೆ. ಸಾರ್ವಜನಿಕ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಹೇಳಿಕೆಗಳು ನೆಲಮಟ್ಟದ ಸುರಕ್ಷತಾ ವ್ಯವಸ್ಥೆಯ ವೈಫಲ್ಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನ್ಯಾಯಾಲಯ ನೀಡಿದೆ. 

“ಒಗ್ಗಟ್ಟಿನ ಅಭಿವ್ಯಕ್ತಿ ಮಾತ್ರ ಈ ಸಾಮಾಜಿಕ ದುಷ್ಟತನಕ್ಕೆ ಪರಿಹಾರವಲ್ಲ. ಅಳೆಯಬಹುದಾದ ಪ್ರತಿಕ್ರಿಯೆಯ ಅಗತ್ಯವಿದೆ. ಅಪರಾಧ ತಡೆಗಟ್ಟುವಿಕೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ದುರ್ಬಲ ವ್ಯಕ್ತಿಗಳ ರಕ್ಷಣೆಯ ಜವಾಬ್ದಾರಿ ವಹಿಸಿರುವ ಅಧಿಕಾರಿಗಳ ಮೇಲೆ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು” ಎಂಬ ಅರ್ಥದಲ್ಲಿ ಪೀಠ ತನ್ನ ಆದೇಶದಲ್ಲಿ ಕಠಿಣವಾಗಿ ದಾಖಲಿಸಿದೆ. 

ದೆಹಲಿ-ಎನ್‌ಸಿಆರ್‌ನಲ್ಲಿ ಪ್ರತ್ಯೇಕವಾಗಿ ನಡೆದಿರುವಂತೆ ಕಾಣುವ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಒಟ್ಟಾಗಿ ಪರಿಗಣಿಸುವ ಮೂಲಕ, ಅವುಗಳ ಹಿಂದೆ ಇರುವ ಸಾರ್ವಜನಿಕ ಸುರಕ್ಷತಾ ವ್ಯವಸ್ಥೆಯ ಲೋಪಗಳನ್ನು ಪರಿಶೀಲಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಪರಿಶೀಲಿಸಲು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಪೀಠ ನಿರ್ದೇಶಿಸಿದೆ. 

ನ್ಯಾಯಾಲಯದ ಈ ಮಧ್ಯಪ್ರವೇಶವು ಕೇವಲ ಅಪರಾಧಗಳ ತನಿಖೆ ಅಥವಾ ಆರೋಪಿಗಳ ವಿರುದ್ಧದ ಕಾನೂನು ಕ್ರಮಕ್ಕೆ ಸೀಮಿತವಾಗದೆ, ಇಂತಹ ಘಟನೆಗಳು ನಡೆಯದಂತೆ ತಡೆಯಬೇಕಾದ ಪೊಲೀಸ್ ವ್ಯವಸ್ಥೆ, ಗಸ್ತು, ಕಣ್ಗಾವಲು, ಸಾರ್ವಜನಿಕ ಸ್ಥಳಗಳ ಸುರಕ್ಷತಾ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಪ್ರಶ್ನೆಯ ವ್ಯಾಪ್ತಿಗೆ ತರುವ ಸಾಧ್ಯತೆ ಇದೆ. ಸರಣಿ ಲೈಂಗಿಕ ಅಪರಾಧಗಳ ನಡುವೆ ಸಾರ್ವಜನಿಕ ಸುರಕ್ಷತೆಯನ್ನು ಖಚಿತಪಡಿಸುವ ರಾಜ್ಯದ ಜವಾಬ್ದಾರಿಯನ್ನೇ ಕೇಂದ್ರ ಪ್ರಶ್ನೆಯನ್ನಾಗಿ ಮಾಡಿರುವ ಸುಪ್ರೀಂ ಕೋರ್ಟ್‌ನ ಈ ವಿಚಾರಣೆ, ನಿರ್ಭಯಾ ಪ್ರಕರಣದ ಬಳಿಕ ರೂಪುಗೊಂಡ ಸುರಕ್ಷತಾ ವ್ಯವಸ್ಥೆಗಳ ಪರಿಣಾಮಕಾರಿತ್ವವನ್ನೂ ಪರಿಶೀಲಿಸುವ ಪ್ರಮುಖ ನ್ಯಾಯಾಂಗ ಹಸ್ತಕ್ಷೇಪವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎಲ್‌ಪಿಯು ಕ್ಯಾಂಪಸ್‌ ಹಿಂಸಾಚಾರ: ಹೆಣ್ಣುಮಕ್ಕಳಿಗೆ ‘ಹಾಸ್ಟೆಲ್‌ನೊಳಗೂ ಸುರಕ್ಷತೆ ಇಲ್ಲದಿದ್ದರೆ ಅದು ಗಂಭೀರ ಸಮಸ್ಯೆ’: ಅಭಿಜೀತ್ ದೀಪ್ಕೆ 

ಫಾಗ್ವಾರಾ: ಪಂಜಾಬ್‌ನ ಫಾಗ್ವಾರಾದಲ್ಲಿರುವ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯ (ಎಲ್‌ಪಿಯು) ಕ್ಯಾಂಪಸ್‌ನಲ್ಲಿ ವಾರಾಂತ್ಯದಲ್ಲಿ ನಡೆದ ಪ್ರತಿಭಟನೆ, ಹಿಂಸಾಚಾರ ಮತ್ತು ಬೆಂಕಿ ಹಚ್ಚಿದ ಘಟನೆಗಳ ಬೆನ್ನಲ್ಲೇ ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ...

ಉಜ್ಜಯಿನಿ ಶಾಹಿ ಮಸೀದಿ ವಿವಾದ: ರಸ್ತೆ ಅಗಲೀಕರಣಕ್ಕಾಗಿ ಭಾಗಶಃ ಕೆಡವುವಿಕೆಯ ವಿರುದ್ಧದ ಮೇಲ್ಮನವಿ ವಜಾಗೊಳಿಸಿದ ಮಧ್ಯಪ್ರದೇಶ ಹೈಕೋರ್ಟ್ 

ಭೋಪಾಲ್: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಶಾಹಿ ಮಸೀದಿಯ ಒಂದು ಭಾಗವನ್ನು ತೆರವುಗೊಳಿಸುವ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠ ಸೋಮವಾರ, ಸೆಪ್ಟೆಂಬರ್ 28ರಂದು ವಿಲೇವಾರಿ ಮಾಡಿದೆ. ಮಸೀದಿ...

ಮುಖ್ಯ ಚುನಾವಣಾ ಆಯುಕ್ತ ಹುದ್ದೆಯಿಂದ ಗ್ಯಾನೇಶ್ ಕುಮಾರ್‌ ಅಮಾನತುಗೊಳಿಸಲು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ

ಇತರ ಪರಿಹಾರಗಳ ಜೊತೆಗೆ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ಅಮಾನತುಗೊಳಿಸಬೇಕು ಮತ್ತು ಭಾರತೀಯ ಚುನಾವಣಾ ಆಯೋಗಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಅದರ ಮುಖ್ಯಸ್ಥರು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂಬುವುದಾಗಿ ಘೋಷಿಸಬೇಕು...

UPI ವಹಿವಾಟುಗಳ ಮೇಲೆ ಶುಲ್ಕ : ಕೇಂದ್ರದ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂ ಕೋರ್ಟ್‌ ನಕಾರ

ಯುಪಿಐ ಮೂಲಕ ವ್ಯಕ್ತಿಗಳಿಂದ ವ್ಯಾಪಾರಿಗಳಿಗೆ ರೂ. 2,000ಕ್ಕಿಂತ ಹೆಚ್ಚಿನ ಮೊತ್ತದ ವಹಿವಾಟುಗಳಿಗೆ ಶುಲ್ಕ ವಿಧಿಸುವ ಕ್ರಮದ ಆಧಾರವನ್ನು ವಿವರಿಸಿ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.28) ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ...

TMC ಪಕ್ಷ ಚಿಹ್ನೆ ಸಂಘರ್ಷ: ಆರು ತಿಂಗಳು ಬೇಕಿಲ್ಲ, ‘ಎಐ’ ಬಳಸಿ 3 ತಿಂಗಳಲ್ಲಿ ಇತ್ಯರ್ಥಗೊಳಿಸಿ ಎಂದ ಸುಪ್ರೀಂ ಕೋರ್ಟ್‌!

ಪಶ್ಚಿಮ ಬಂಗಾಳದ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಹೆಸರು ಹಾಗೂ ಅಧಿಕೃತ 'ಹೂವು ಮತ್ತು ಹುಲ್ಲು' (Flowers & Grass) ಚುನಾವಣಾ ಚಿಹ್ನೆಯ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ಬಂಡಾಯ ಹಾಗೂ...

‘ದೆಹಲಿ-ಎನ್‌ಸಿಆರ್‌ ಅತ್ಯಾಚಾರ ಪ್ರಕರಣಗಳು ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತವೆ’ : ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್

ದೆಹಲಿಯ ಉದ್ಯಾನವನವೊಂದರಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಚಲಿಸುತ್ತಿದ್ದ ಸ್ಲೀಪರ್ ಬಸ್‌ನೊಳಗೆ ಅಪ್ರಾಪ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಸೇರಿದಂತೆ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಇತ್ತೀಚೆಗೆ ವರದಿಯಾದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್...

ಆಗ್ರಾದಲ್ಲಿ ಸಿಇಸಿ ಗ್ಯಾನೇಶ್ ಕುಮಾರ್ ನಿವಾಸದ ಮೇಲೆ ‘ಗ್ಯಾನೇಶ್ ಗದ್ದರ್, ವೋಟ್ ಚೋರ್’ ಬರಹ; ಎಸ್‌ಐಆರ್ ವಿರುದ್ಧ ತೀವ್ರಗೊಂಡ ಪ್ರತಿಭಟನೆ

ಆಗ್ರಾ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ದೇಶಾದ್ಯಂತ ರಾಜಕೀಯ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಆಗ್ರಾದಲ್ಲಿರುವ ನಿವಾಸದ ಹೊರಗೆ...

‘ಇಂತಹ ಸರ್ಕಾರವನ್ನು ಬೆಂಬಲಿಸುವುದಕ್ಕೆ ವಿಷಾದವಿದೆ’: ಬಿಹಾರದ ಕಾನೂನು-ಸುವ್ಯವಸ್ಥೆ ಬಗ್ಗೆ ಚಿರಾಗ್ ಪಾಸ್ವಾನ್ ಬಹಿರಂಗ ಅಸಮಾಧಾನ

ಪಾಟ್ನಾ: ಬಿಹಾರದಲ್ಲಿ ಮಹಿಳೆಯರ ಮೇಲಿನ ಅಪರಾಧಗಳು ಸೇರಿದಂತೆ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ರಾಜ್ಯದ ಬಿಜೆಪಿ ನೇತೃತ್ವದ ಸರ್ಕಾರದ...

ಕೊಲ್ಕತ್ತಾದ SRFTIನಲ್ಲಿ ಆರ್‌ಎಸ್‌ಎಸ್-ಸಂಯೋಜಿತ ಸಭೆಗೆ ವಿರೋಧ: 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಭೀಕರ ಹಲ್ಲೆ ಆರೋಪ!

ಕೊಲ್ಕತ್ತಾದ ಪ್ರತಿಷ್ಠಿತ ‘ಸತ್ಯಜಿತ್ ರೇ ಫಿಲ್ಮ್ ಆಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್’ (SRFTI) ಆವರಣದಲ್ಲಿ ಭಾನುವಾರ ವಿದ್ಯಾರ್ಥಿಗಳು ಮತ್ತು ಆರ್‌ಎಸ್‌ಎಸ್‌ ಜೊತೆ ಸಂಪರ್ಕ ಹೊಂದಿರುವ ‘ಅಖಿಲ ಭಾರತೀಯ ಗ್ರಾಹಕ್ ಪಂಚಾಯತ್’ (ABGP) ಸದಸ್ಯರ ನಡುವೆ...

‘ಕರ್ನಾಟಕದಲ್ಲಿ ಕೇವಲ ಮೂರು ತಿಂಗಳಲ್ಲಿ ಎಸ್ಐಆರ್ ಸಾಧ್ಯವೇ ಇಲ್ಲ’: ಚುನಾವಣಾ ಆಯೋಗದ ವಿರುದ್ಧ ಮಂಗಳೂರಿನಲ್ಲಿ ನಟ ಪ್ರಕಾಶ್ ರಾಜ್ ವಾಗ್ದಾಳಿ  

ಮಂಗಳೂರು: ‘ಸಂವಿಧಾನ ಹಾಗೂ ಪ್ರಜಾಪ್ರಭುತ್ವವನ್ನು ಕೊಲ್ಲುವುದಕ್ಕಾಗಿ ಬಿಜೆಪಿ ಮಾಡಿರುವ ಬಹುದೊಡ್ಡ ಹುನ್ನಾರವೇ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)’ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಆರೋಪಿಸಿದ್ದಾರೆ....