Homeಮುಖಪುಟಖುಲಾಸೆಗೊಂಡರೂ 7 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ₹30 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್; ಅಕ್ರಮ...

ಖುಲಾಸೆಗೊಂಡರೂ 7 ವರ್ಷ ಜೈಲಿನಲ್ಲಿದ್ದ ವ್ಯಕ್ತಿಗೆ ₹30 ಲಕ್ಷ ಪರಿಹಾರ ಘೋಷಿಸಿದ ಸುಪ್ರೀಂ ಕೋರ್ಟ್; ಅಕ್ರಮ ಬಂಧನಕ್ಕೆ ಪರಿಹಾರ ನೀಡಲು ಕಾನೂನು ರಚಿಸುವಂತೆ ಶಿಫಾರಸು

- Advertisement -
- Advertisement -

ಖುಲಾಸೆ ಆದೇಶದ ಮಾಹಿತಿಯನ್ನು ಜೈಲು ಅಧಿಕಾರಿಗಳಿಗೆ ತಲುಪಿಸುವಲ್ಲಿ ಉಂಟಾದ ಸಂವಹನದ ಕೊರತೆಯಿಂದಾಗಿ, ನಿರ್ದೋಷಿ ಎಂದು ಸಾಬೀತಾದ ನಂತರವೂ ಏಳು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕಳೆದ ವ್ಯಕ್ತಿಗೆ ಸುಪ್ರೀಂ ಕೋರ್ಟ್ ಸೋಮವಾರ (ನವೆಂಬರ್ 16) 30 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ.

ವ್ಯಕ್ತಿಯ ಬಿಡುಗಡೆಯನ್ನು ಖಚಿತಪಡಿಸುವಲ್ಲಿ ವಿಫಲವಾದ ಈ ಸುದೀರ್ಘ ಜೈಲುವಾಸವನ್ನು ‘ಕ್ರಿಮಿನಲ್ ನ್ಯಾಯ ಆಡಳಿತದ ವೈಫಲ್ಯ’ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿದೆ. ಅಲ್ಲದೆ, ಅಕ್ರಮ ಬಂಧನಕ್ಕೊಳಗಾದ ವ್ಯಕ್ತಿಗಳಿಗೆ ಪರಿಹಾರ ನೀಡಲು ಭಾರತದಲ್ಲಿ ಶಾಸನಬದ್ಧ ಚೌಕಟ್ಟಿನ ಕೊರತೆಯಿರುವುದನ್ನು ಎತ್ತಿ ತೋರಿಸಿದ ನ್ಯಾಯಾಲಯ, ಇಂತಹ ಪ್ರಕರಣಗಳನ್ನು ನಿರ್ವಹಿಸಲು ಸೂಕ್ತ ಕಾನೂನು ವ್ಯವಸ್ಥೆಯನ್ನು ರೂಪಿಸುವ ಅಗತ್ಯವನ್ನು ಒತ್ತಿಹೇಳಿದೆ.

ನ್ಯಾಯಾಂಗ ಆದೇಶಗಳ ಸಕಾಲಿಕ ಸಂವಹನ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಮಧ್ಯಪ್ರದೇಶ ಹೈಕೋರ್ಟ್ ಹೊರಡಿಸಿರುವ ಮಾದರಿಯಲ್ಲೇ ನಿರ್ದೇಶನಗಳನ್ನು ನೀಡುವ ಬಗ್ಗೆ ಹಾಗೂ ‘ಆನ್‌ಲೈನ್ ಕ್ರಿಮಿನಲ್ ಜಸ್ಟಿಸ್ ಇಕೋಸಿಸ್ಟಮ್’ (Online Criminal Justice Ecosystem) ಸ್ಥಾಪಿಸುವ ಬಗ್ಗೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

ಈ ತೀರ್ಪಿನ ಪ್ರತಿಯನ್ನು ಆಯಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಪರಿಗಣನೆಗಾಗಿ ಮಂಡಿಸುವ ಸಲುವಾಗಿ, ಎಲ್ಲಾ ಹೈಕೋರ್ಟ್‌ಗಳ ರಿಜಿಸ್ಟ್ರಾರ್ ಜನರಲ್‌ಗಳಿಗೆ ಕಳುಹಿಸಿಕೊಡುವಂತೆ ನ್ಯಾಯಾಲಯ ಆದೇಶಿಸಿದೆ.

2018ರ ಜನವರಿ 20ರಂದು ಖುಲಾಸೆಗೊಂಡಿದ್ದರೂ 2025ರ ಮೇ 19ರವರೆಗೆ ಜೈಲಿನಲ್ಲೇ ಉಳಿದಿದ್ದ ದೇವಿಲಾಲ್ ಗೊಂಡ್ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಅಗಸ್ಟೀನ್ ಜಾರ್ಜ್ ಮಸಿಹ್ ಮತ್ತು ನ್ಯಾಯಮೂರ್ತಿ ಸಂಜೀವ್ ಸಚ್‌ದೇವ ಅವರನ್ನೊಳಗೊಂಡ ಪೀಠವು ನಡೆಸಿದೆ.

ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2012ರ ಡಿಸೆಂಬರ್ 7ರಂದು ಗೊಂಡ್ ಅವರನ್ನು ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯವು 2013ರ ಆಗಸ್ಟ್ 14ರಂದು ಅವರನ್ನು ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಆದರೆ, 2018ರ ಜನವರಿ 20ರಂದು ಛತ್ತೀಸ್‌ಗಢ ಹೈಕೋರ್ಟ್ ಅವರ ಶಿಕ್ಷೆ ಮತ್ತು ಅಪರಾಧ ನಿರ್ಣಯವನ್ನು ರದ್ದುಗೊಳಿಸಿ ಖುಲಾಸೆಗೊಳಿಸಿತ್ತು. ರಾಜ್ಯ ಸರ್ಕಾರವು ಈ ಖುಲಾಸೆ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸದ ಕಾರಣ, ಆ ತೀರ್ಪು ಅಂತಿಮವಾಗಿತ್ತು.

ಖುಲಾಸೆಗೊಂಡಿದ್ದರೂ ಸಹ, ಗೊಂಡ್ ಅವರು 2025ರ ಮೇ 19ರಂದು ಅಂತಿಮವಾಗಿ ಬಿಡುಗಡೆಯಾಗುವವರೆಗೂ ಜೈಲಿನಲ್ಲೇ ಮುಂದುವರಿದಿದ್ದರು. ಈ ಮೂಲಕ ಖುಲಾಸೆ ಆದೇಶದ ನಂತರವೂ ಅವರು ಏಳು ವರ್ಷ ಮತ್ತು ಮೂರು ತಿಂಗಳಿಗೂ ಹೆಚ್ಚು ಕಾಲ ಅಕ್ರಮ ಬಂಧನದಲ್ಲಿದ್ದರು.

ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳು ಸಲ್ಲಿಸಿರುವ ಮೇಲ್ಮನವಿಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನಾ ಕಾರ್ಯದ ವೇಳೆ, 2025ರ ಮೇ 15ರಂದು ಈ ಲೋಪ ಬೆಳಕಿಗೆ ಬಂದಿದೆ ಎಂದು ರಾಜ್ಯ ಸರ್ಕಾರ ವಿವರಿಸಿದೆ. ಜೈಲು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಕಾನೂನು ನೆರವು ಅಧಿಕಾರಿಗಳ ನಡುವೆ ಸಂವಹನ ಹಾಗೂ ಸಮನ್ವಯದ ಕೊರತೆ ಉಂಟಾಗಿತ್ತು ಎಂದು ಅದು ತಿಳಿಸಿದೆ.

ಗೊಂಡ್ ಅವರ ಕ್ರಿಮಿನಲ್ ಮೇಲ್ಮನವಿಯ ಸ್ಥಿತಿಗತಿಯ ಕುರಿತು ಮಾಹಿತಿ ಕೋರಿ, ಜೈಲು ಅಧೀಕ್ಷಕರು 2018ರ ಏಪ್ರಿಲ್ ಮತ್ತು ಜೂನ್ ತಿಂಗಳಲ್ಲಿ ಸಂಬಂಧಪಟ್ಟ ಪ್ಯಾನೆಲ್ ವಕೀಲರಿಗೆ ಪತ್ರ ಬರೆದಿದ್ದರು ಎಂದು ವರದಿಯಾಗಿದೆ. ಆದಾಗ್ಯೂ, ಹೈಕೋರ್ಟ್ ನೀಡಿದ ಖುಲಾಸೆ ಆದೇಶದ ಮಾಹಿತಿಯು ಕಾರಾಗೃಹ ಅಧಿಕಾರಿಗಳನ್ನು ತಲುಪಲೇ ಇಲ್ಲ.

ಛತ್ತೀಸ್‌ಗಢ ಹೈಕೋರ್ಟ್ ಗೊಂಡ್ ಅವರಿಗೆ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು. ಈ ಪರಿಹಾರದ ಮೊತ್ತದಿಂದ ಅತೃಪ್ತರಾದ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಸುದೀರ್ಘ ಜೈಲುವಾಸ ಮತ್ತು ಅವರ ಬಿಡುಗಡೆಯನ್ನು ಖಚಿತಪಡಿಸುವಲ್ಲಿ ಕ್ರಿಮಿನಲ್ ನ್ಯಾಯ ಆಡಳಿತ ವಿಫಲವಾದ ಪರಿಣಾಮಗಳನ್ನು ಪರಿಗಣಿಸಿದ ನ್ಯಾಯಮೂರ್ತಿ ಸಚ್‌ದೇವ ಅವರು ಬರೆದ ತೀರ್ಪಿನಲ್ಲಿ, ಅಕ್ರಮ ಜೈಲುವಾಸ ಅನುಭವಿಸಿದ ವ್ಯಕ್ತಿಗಳಿಗೆ ಪರಿಹಾರ ನೀಡುವ ತತ್ವಗಳು ಅಥವಾ ಮಾನದಂಡಗಳನ್ನು ನಿಗದಿಪಡಿಸುವ ಶಾಸನಬದ್ಧ ವ್ಯವಸ್ಥೆ ಭಾರತದಲ್ಲಿಲ್ಲ ಎಂದು ಉಲ್ಲೇಖಿಸಲಾಗಿದೆ.

ಅಧಿಕಾರಿಗಳ ಈ ವಿವರಣೆಯು ಅವರ ಕಡೆಯಿಂದ ಉಂಟಾದ “ಸಂಪೂರ್ಣ ನಿರ್ಲಕ್ಷ್ಯ”ವನ್ನು ತೋರಿಸುತ್ತದೆ ಮತ್ತು ಸಮನ್ವಯದ ಕೊರತೆ ಹಾಗೂ ಸಾಂಸ್ಥಿಕ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಗೊಂಡ್ ಅವರು ಖುಲಾಸೆಗೊಂಡಾಗ ಸುಮಾರು 28 ವರ್ಷದವರಾಗಿದ್ದರು ಮತ್ತು ಬಿಡುಗಡೆಯಾದಾಗ ಅವರಿಗೆ ಸುಮಾರು 35 ವರ್ಷ ವಯಸ್ಸಾಗಿತ್ತು ಎಂಬುವುದನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ. ಈ ಅವಧಿಯಲ್ಲಿ ಅವರು ಜೈಲುವಾಸದ ದೈಹಿಕ ಮತ್ತು ಮಾನಸಿಕ ಕಠಿಣತೆಯನ್ನು ಅನುಭವಿಸಿದ್ದಲ್ಲದೆ, ತಮ್ಮ ಸ್ವಾತಂತ್ರ್ಯ, ಜೀವನೋಪಾಯ, ಗಳಿಕೆಯ ಅವಕಾಶಗಳು ಹಾಗೂ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಯ ಭವಿಷ್ಯವನ್ನು ಕಳೆದುಕೊಂಡಿದ್ದಾರೆ ಎಂದು ಪೀಠ ಹೇಳಿದೆ.

ಈ ನಿಟ್ಟಿನಲ್ಲಿ, 2017ರ ‘ಬಬ್ಲೂ ಚೌಹಾಣ್ V/s ಸ್ಟೇಟ್ (ದೆಹಲಿ ಎನ್‌ಸಿಟಿ ಸರ್ಕಾರ)’ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ನೀಡಿದ ತೀರ್ಪು ಮತ್ತು ಭಾರತೀಯ ಕಾನೂನು ಆಯೋಗವು ತನ್ನ 277ನೇ ವರದಿಯಲ್ಲಿ ಮಾಡಿದ ಶಿಫಾರಸುಗಳನ್ನು ನ್ಯಾಯಾಲಯವು ಉಲ್ಲೇಖಿಸಿದೆ. ಅಕ್ರಮ ಕಾನೂನು ಕ್ರಮದ (wrongful prosecution) ವಿಷಯವನ್ನು ಪರಿಶೀಲಿಸಿದ್ದ ಆಯೋಗವು, ಪರಿಹಾರ ಮತ್ತು ಪುನರ್ವಸತಿಗಾಗಿ ಸೂಕ್ತ ಚೌಕಟ್ಟನ್ನು ರೂಪಿಸುವಂತೆ ಶಿಫಾರಸು ಮಾಡಿತ್ತು.

ಅಕ್ರಮ ಕಾನೂನು ಕ್ರಮ ಮತ್ತು ಜೈಲುವಾಸದಿಂದ ಉಂಟಾಗುವ ಹಾನಿಯು ಕೇವಲ ಸ್ವಾತಂತ್ರ್ಯದ ನಷ್ಟಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಕಾನೂನು ಆಯೋಗವು ಗುರುತಿಸಿತ್ತು. ಇದು ಆರ್ಥಿಕ ಸಂಕಷ್ಟ, ಗೌರವಕ್ಕೆ ಧಕ್ಕೆ, ಸಾಮಾಜಿಕ ಕಳಂಕ ಮತ್ತು ಮಾನಸಿಕ ಯಾತನೆಯನ್ನೂ ಒಳಗೊಂಡಿರಬಹುದು ಎಂದು ಆಯೋಗ ಹೇಳಿತ್ತು.

ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ನಾಲ್ಕು ವರ್ಷ ಮತ್ತು ಏಳು ತಿಂಗಳ ಕಾಲ ಜೈಲಿನಲ್ಲೇ ಉಳಿದಿದ್ದ ವ್ಯಕ್ತಿಗೆ 25 ಲಕ್ಷ ರೂ. ಪರಿಹಾರ ನೀಡಿದ್ದ ‘ಸೋಹನ್ ಸಿಂಗ್ ಅಲಿಯಾಸ್ ಬಬ್ಲು V/s ಮಧ್ಯಪ್ರದೇಶ ರಾಜ್ಯ’ ಪ್ರಕರಣದಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ತಾನು ನೀಡಿದ್ದ ತೀರ್ಪನ್ನೂ ನ್ಯಾಯಾಲಯ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಆ ತೀರ್ಪಿನ ಬೆನ್ನಲ್ಲೇ, ಖುಲಾಸೆ ಮತ್ತು ಬಿಡುಗಡೆ ಆದೇಶಗಳನ್ನು ಜೈಲು ಅಧಿಕಾರಿಗಳಿಗೆ ತಕ್ಷಣವೇ ತಲುಪಿಸುವುದು, ವಿಚಾರಣಾ ನ್ಯಾಯಾಲಯಗಳು ಮತ್ತು ಕಾನೂನು ಸೇವೆಗಳ ಪ್ರಾಧಿಕಾರಗಳಿಂದ ಅನುಪಾಲನಾ ವರದಿಗಳನ್ನು (compliance reports) ಪಡೆಯುವುದು ಹಾಗೂ ಶಿಕ್ಷೆಯ ಅವಧಿ ಪೂರ್ಣಗೊಂಡ ನಂತರವೂ ಜೈಲಿನಲ್ಲೇ ಉಳಿದಿರುವವರನ್ನು ಗುರುತಿಸಲು ಕಾರಾಗೃಹಗಳ ನಿಯತಕಾಲಿಕ ತಪಾಸಣೆ ನಡೆಸುವಂತೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನಗಳನ್ನು ನೀಡಿತ್ತು.

ಪೊಲೀಸ್, ನ್ಯಾಯಾಲಯಗಳು, ಕಾರಾಗೃಹಗಳು, ಅಭಿಯೋಜನಾ ಇಲಾಖೆ (ಪ್ರಾಸಿಕ್ಯೂಷನ್), ವಿಧಿವಿಜ್ಞಾನ ಸಂಸ್ಥೆಗಳು ಮತ್ತು ಆಸ್ಪತ್ರೆಗಳ ನಡುವೆ ದತ್ತಾಂಶ ಹಂಚಿಕೆಗೆ ಅನುಕೂಲವಾಗುವಂತೆ ಮಧ್ಯಪ್ರದೇಶ ಹೈಕೋರ್ಟ್ ಪ್ರಾರಂಭಿಸಿರುವ ಸಮಗ್ರ ವೇದಿಕೆಯಾದ ‘ಆನ್‌ಲೈನ್ ಕ್ರಿಮಿನಲ್ ಜಸ್ಟಿಸ್ ಇಕೋಸಿಸ್ಟಮ್’ ಕುರಿತೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.

ಹೀಗಾಗಿ, ನ್ಯಾಯಾಂಗ ಆದೇಶಗಳ ಸಕಾಲಿಕ ಸಂವಹನ ಮತ್ತು ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು, ಮಧ್ಯಪ್ರದೇಶ ಹೈಕೋರ್ಟ್ ಹೊರಡಿಸಿರುವ ಮಾದರಿಯಲ್ಲೇ ನಿರ್ದೇಶನಗಳನ್ನು ನೀಡುವ ಬಗ್ಗೆ ಹಾಗೂ ‘ಆನ್‌ಲೈನ್ ಕ್ರಿಮಿನಲ್ ಜಸ್ಟಿಸ್ ಇಕೋಸಿಸ್ಟಮ್’ ಸ್ಥಾಪಿಸುವ ಬಗ್ಗೆ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಎಲ್ಲಾ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿದೆ.

Courtesy :livelaw.in

























































ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ನಿರ್ಧಾರಗಳಿಗೆ ಮೂವರು ಆಯುಕ್ತರ ಸರ್ವಾನುಮತದ ಒಪ್ಪಿಗೆ ಇತ್ತು ಎಂಬುದಕ್ಕೆ ಚುನಾವಣಾ ಆಯೋಗ ದಾಖಲೆ ಸಲ್ಲಿಸಿಲ್ಲ : ಸುಪ್ರೀಂ ಕೋರ್ಟ್‌ಗೆ ಅರ್ಜಿದಾರರ ಹೇಳಿಕೆ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ಕಾರ್ಯನಿರ್ವಹಣೆಯನ್ನು ಪ್ರಶ್ನಿಸಿರುವ ಅರ್ಜಿದಾರರು ಸುಪ್ರೀಂ ಕೋರ್ಟ್ ಮುಂದೆ ತಮ್ಮ ವಾದವನ್ನು ಮಂಡಿಸಿದ್ದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್‌) ಸಂಬಂಧಿಸಿದಂತೆ ಭಾರತೀಯ ಚುನಾವಣಾ...

‘ನೋವು, ಆಘಾತ, ಅಪನಂಬಿಕೆಯಲ್ಲಿದ್ದೇನೆ’: ಇಬ್ಬರು ಅತ್ಯಾಚಾರ ಅಪರಾಧಿಗಳ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಆದೇಶದ ಕುರಿತು ಬಿಲ್ಕಿಸ್ ಬಾನು ಪ್ರತಿಕ್ರಿಯೆ

ಗುಜರಾತ್ ಗಲಭೆಯ ಸಂದರ್ಭದಲ್ಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ತಮ್ಮ ಕುಟುಂಬ ಸದಸ್ಯರನ್ನು ಹತ್ಯೆಗೈದ ಪ್ರಕರಣದಲ್ಲಿ ಶಿಕ್ಷೆಗೊಳಗಾದ 11 ಅಪರಾಧಿಗಳ ಪೈಕಿ ಇಬ್ಬರ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿರುವುದು ತನಗೆ...

ಕಿಶ್ತ್ವಾರ್ ಪೊಲೀಸರ ಹತ್ಯೆ : ‘ಮಸೀದಿ ಘೋಷಣೆ’ ಕುರಿತ ಬಿಜೆಪಿ ಶಾಸಕಿಯ ಹೇಳಿಕೆಗೆ ಆಕ್ರೋಶ; ತನಿಖೆಗೆ ಕಾಂಗ್ರೆಸ್ ಆಗ್ರಹ

ಕಿಶ್ತ್ವಾರ್‌ನಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್‌ಪಿಒ) ಹತ್ಯೆಯ ಕುರಿತು ಹಲವು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ, ಈ ಘಟನೆಯನ್ನು ಮಸೀದಿ ಘೋಷಣೆಗಳೊಂದಿಗೆ ತಳುಕು ಹಾಕುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಯತ್ನಕ್ಕೆ ಸ್ಥಳೀಯ...

SIR ವಿವಾದ: ಚುನಾವಣಾ ಆಯೋಗಕ್ಕೆ 48 ಪ್ರಶ್ನೆಗಳನ್ನು ಕೇಳಲು ಸುಪ್ರೀಂ ಕೋರ್ಟ್ ಅನುಮತಿ ಕೋರಿದ ರಾಹುಲ್ ಗಾಂಧಿ!

ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಏಕಪಕ್ಷೀಯ ನಿರ್ಧಾರಗಳು ಮತ್ತು ಬೃಹತ್ ಪ್ರಮಾಣದ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಿರುವ ಆರೋಪಗಳಿಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ...

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ | ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ : ಸಚಿವ ಮಧು ಬಂಗಾರಪ್ಪ

ಶಾಲಾ ಮಕ್ಕಳ ಮುಂದೆ ರಾಜಕೀಯ ದ್ವೇಷ ಭಾಷಣ ಮಾಡಿದ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು...

ಬಿಲ್ಕಿಸ್ ಬಾನು ಪ್ರಕರಣ: ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ ಜಾಮೀನು ನೀಡಿದ ಸುಪ್ರೀಂ ಕೋರ್ಟ್

2002ರ ಗುಜರಾತ್ ಕೋಮುಗಲಭೆಯ ಸಂದರ್ಭದಲ್ಲಿ ನಡೆದಿದ್ದ ಭೀಕರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಮತ್ತು ಕುಟುಂಬಸ್ಥರ ಹತ್ಯೆ ಪ್ರಕರಣದ ಇಬ್ಬರು ಅಪರಾಧಿಗಳ ಜೀವಾವಧಿ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿ ಅವರಿಗೆ ಜಾಮೀನು ಮಂಜೂರು...

‘ನೀವು ಆ ಕುರ್ಚಿಯಲ್ಲಿ ಕೂರಲು ಅರ್ಹರಲ್ಲ, ನಿಮಗೆ ಸಮಗ್ರತೆ ಇಲ್ಲ’: ಸುಪ್ರೀಂ ಕೋರ್ಟ್‌ನಲ್ಲಿ ಸಿಜೆಐ ಸೂರ್ಯ ಕಾಂತ್ ವಿರುದ್ಧ ವಕೀಲರ ಆಕ್ರೋಶ; ಲೈವ್ ಪ್ರಸಾರ ಮ್ಯೂಟ್!

ನವದೆಹಲಿ: ಭಾರತೀಯ ನ್ಯಾಯಾಂಗದ ಇತ್ತೀಚಿನ ಇತಿಹಾಸದಲ್ಲೇ ಅತ್ಯಂತ ಅಪರೂಪದ ಮತ್ತು ತೀವ್ರ ಘರ್ಷಣೆಯೊಂದು ಸುಪ್ರೀಂ ಕೋರ್ಟ್‌ನಲ್ಲಿ ನಡೆದಿದೆ. ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ನೇತೃತ್ವದ ಪೀಠದ ಮುಂದೆ ವಾದ ಮಂಡಿಸಲು...

ಜಾರ್ಖಂಡ್‌ | ಕಲ್ಲಿದ್ದಲು ಗಣಿ ವಿಸ್ತರಣೆಗೆ ಕೇಂದ್ರ ಅನುಮತಿ : 6 ಲಕ್ಷ ಮರಗಳ ಮಾರಣಹೋಮ, ಆನೆಗಳ ಆವಾಸಸ್ಥಾನ ನಾಶಕ್ಕೆ ಕಾರಣವಾಗಲಿರುವ ಯೋಜನೆ!

ಜಾರ್ಖಂಡ್‌ನ ಚತ್ರಾ ಜಿಲ್ಲೆಯಲ್ಲಿನ ಓಪನ್‌ಕಾಸ್ಟ್ ಕಲ್ಲಿದ್ದಲು ಗಣಿಗಾರಿಕೆ ಯೋಜನೆಯ ವಿಸ್ತರಣೆಗಾಗಿ 928.03 ಹೆಕ್ಟೇರ್ ಅರಣ್ಯ ಭೂಮಿಯನ್ನು ಬಳಸಿಕೊಳ್ಳುವ (ವರ್ಗಾಯಿಸುವ) ಯೋಜನೆಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿರುವ ಅರಣ್ಯ...

ಹೈದರಾಬಾದ್‌ನಲ್ಲಿ ಇಸ್ರೇಲಿ ಕಂಪನಿಗಳ ಕಾರ್ಯಕ್ರಮಕ್ಕೆ ವಿರೋಧ : SIO, APCR ನಾಯಕರನ್ನು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಪೊಲೀಸರು

ಹೈದರಾಬಾದ್‌ನ ಟಿ-ಹಬ್‌ನಲ್ಲಿ ನಡೆಯುತ್ತಿರುವ ಇಸ್ರೇಲಿ ಕಂಪನಿಗಳ ಕಾರ್ಯಕ್ರಮವನ್ನು ವಿರೋಧಿಸಿದ್ದಕ್ಕಾಗಿ ಸೋಮವಾರ (ನ.16) ಮುಂಜಾನೆ ತೆಲಂಗಾಣ ಪೊಲೀಸರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್‌ಐಒ) ಮತ್ತು ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)...

ದೋಷಯುಕ್ತ ಬ್ರೇಕ್‌ಗಳೊಂದಿಗೆ 463 ಕಿ.ಮೀ. ಸಂಚರಿಸಿದ ವಂದೇ ಭಾರತ್ ರೈಲು; ತನಿಖೆಗೆ ಆದೇಶ

ಬ್ರೇಕ್ ಸಾಮರ್ಥ್ಯದ ಕೊರತೆಯ ಬಗ್ಗೆ ಲೋಕೋ ಪೈಲಟ್ ಎಚ್ಚರಿಕೆ ನೀಡಿದ್ದರೂ ಸಹ, ಖಾಲಿ ವಂದೇ ಭಾರತ್ ರೈಲನ್ನು ಅಕ್ಟೋಬರ್ 24 ರಂದು ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ನಡುವೆ 463 ಕಿ.ಮೀ. ದೂರ...