Homeಮುಖಪುಟವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

- Advertisement -
- Advertisement -

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ ಭಿನ್ನಾಭಿಪ್ರಾಯ ಮತ್ತು ವಿರೋಧವನ್ನು ಹತ್ತಿಕ್ಕಲು ಕಾನೂನು ವ್ಯವಸ್ಥೆಯನ್ನು ಬಳಸಿ ವ್ಯಕ್ತಿಯೊಬ್ಬನನ್ನು ಬಂಧನದಲ್ಲಿಡಲಾಗಿದೆ.

ಫೆಬ್ರವರಿ 2, 2020 ರ ಆ ಚಿತ್ರವು ಇಂದಿಗೂ ಸಾರ್ವಜನಿಕರ ನೆನಪಿನಲ್ಲಿದೆ: ದೆಹಲಿಯ ಶಾಹೀನ್ ಬಾಗ್‌ನಲ್ಲಿ ಉಮರ್ ಖಾಲಿದ್ ಜನಸಮೂಹವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆಗಳ ವಿರುದ್ಧ ಅಲ್ಲಿ ಜನ ಸಮಾವೇಶಗೊಂಡಿದ್ದರು. ಡಿಸೆಂಬರ್ 2019 ರಲ್ಲಿ ಪ್ರಾರಂಭವಾದ ಈ ಪ್ರತಿಭಟನೆಯು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ತಾರತಮ್ಯದ ನೀತಿಗಳ ವಿರುದ್ಧ ಮುಸ್ಲಿಂ ಮಹಿಳೆಯರು ಮುಂಚೂಣಿಗೆ ಬಂದು ನಿಂತಾಗ ಪ್ರತಿರೋಧದ ಸಂಕೇತವಾಗಿ ಮಾರ್ಪಟ್ಟಿತು.

ಅಂದು ಖಾಲಿದ್ ಹೇಳಿದ ಮಾತುಗಳು ಇಂದಿಗೂ ತನ್ನ ತೂಕ ಕಳೆದುಕೊಂಡಿಲ್ಲ. ಫೆಬ್ರವರಿ 24 ರಂದು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಾಗ, “ಪ್ರಧಾನಿ ಮತ್ತು ಅವರ ಸರ್ಕಾರ ದೇಶವನ್ನು ಒಡೆಯಲು ಮತ್ತು ಗಾಂಧೀಜಿಯವರ ಮೌಲ್ಯಗಳನ್ನು ಮೆಟ್ಟಿ ತುಳಿಯಲು ಯತ್ನಿಸುತ್ತಿದ್ದರೆ, ಭಾರತದ ಜನತೆ ಅವರ ವಿರುದ್ಧ ಒಗ್ಗಟ್ಟಿನಿಂದ ನಿಂತಿದ್ದಾರೆ ಎಂಬ ಸಂದೇಶವನ್ನು ರವಾನಿಸಲಾಗುವುದು” ಎಂದು ಅವರು ಹೇಳಿದ್ದರು. “ಅಧಿಕಾರದಲ್ಲಿರುವವರು ದೇಶವನ್ನು ಒಡೆಯಲು ಬಯಸಿದರೆ, ಜನರು ಅದನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳಲು ಸಿದ್ಧರಾಗಿದ್ದಾರೆ” ಎಂದಿದ್ದರು.

“ಹಿಂಸೆಗೆ ಎಂದಿಗೂ ಹಿಂಸೆಯಿಂದಾಗಲಿ, ದ್ವೇಷಕ್ಕೆ ದ್ವೇಷದಿಂದಾಗಲಿ ಉತ್ತರಿಸುವುದಿಲ್ಲ, ಬದಲಿಗೆ ಪ್ರೀತಿಯಿಂದ ಉತ್ತರಿಸಲಾಗುವುದು ಎಂಬ ಪ್ರತಿಜ್ಞೆ. ಲಠಿ ಏಟು ಬಿದ್ದರೂ ತ್ರಿವರ್ಣ ಧ್ವಜ ಕೈಯಲ್ಲೇ ಇರುತ್ತದೆ; ಗುಂಡು ಹಾರಿಸಿದರೂ ಸಂವಿಧಾನವನ್ನು ಎತ್ತಿ ಹಿಡಿಯಲಾಗುವುದು; ಜೈಲಿಗೆ ತಳ್ಳಿದರೆ, ಒಮ್ಮೆ ಬ್ರಿಟಿಷ್ ಆಡಳಿತದ ವಿರುದ್ಧದ ಧ್ವನಿಯಾಗಿ ಧ್ವನಿಸಿದ ಹಾಗೂ ಇಂದಿಗೂ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗಳಲ್ಲಿ ಮೊಳಗುವ ಮುಹಮ್ಮದ್ ಇಕ್ಬಾಲ್ ಅವರ 1904 ರ ‘ಸಾರೆ ಜಹಾಂ ಸೆ ಅಚ್ಛಾ ಹಿಂದೂಸ್ತಾನ್ ಹಮಾರಾ’ ಗೀತೆಯನ್ನು ಹಾಡುತ್ತಾ ಸಾಗುತ್ತೇವೆ” ಎಂದು ಹೇಳಿದ್ದರು.

ಅದೇ ಭಾಷಣವು ಅವರ ಬಂಧನಕ್ಕೆ ಆಧಾರವಾಯಿತು. ಮಾರ್ಚ್ 6 ರಂದು ದಾಖಲಾದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ಅಡಿಯಲ್ಲಿ ಖಾಲಿದ್ ಅವರನ್ನು ಆರೋಪಿ ಎಂದು ಹೆಸರಿಸಿ ಬಂಧಿಸಲಾಯಿತು. ಅವರು ಪ್ರಚೋದನೆ, ಸಾವು ಉಂಟುಮಾಡುವುದು, ನಿಧಿ ಸಂಗ್ರಹಣೆ ಮತ್ತು ಸಂಚು ರೂಪಿಸುವಿಕೆಯನ್ನು ಒಳಗೊಂಡ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ನಾಲ್ಕು ಸೆಕ್ಷನ್‌ಗಳು, ಕೊಲೆ, ಗಲಭೆ, ಅತಿಕ್ರಮಣ ಸೇರಿದಂತೆ ಭಾರತೀಯ ದಂಡಸಂಹಿತೆಯ (ಐಪಿಸಿ) 18 ಸೆಕ್ಷನ್‌ಗಳು, ಸಾರ್ವಜನಿಕ ಆಸ್ತಿಗೆ ಹಾನಿ ತಡೆ ಕಾಯ್ದೆ 1984 ರ ಎರಡು ಸೆಕ್ಷನ್‌ಗಳು ಮತ್ತು ಶಸ್ತ್ರಾಸ್ತ್ರ ಕಾಯ್ದೆ 1959 ರ ಎರಡು ಸೆಕ್ಷನ್‌ಗಳಡಿ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಸೆಪ್ಟೆಂಬರ್ 14 ರಂದು, ಕರ್ಕರ್ಡೂಮಾ ನ್ಯಾಯಾಲಯದ ಹೆಚ್ಚುವರಿ ಸತ್ರ ನ್ಯಾಯಾಧೀಶ ಅಮಿತಾಭ್ ರಾವತ್ ಅವರು ಉಮರ್ ಖಾಲಿದ್ ಅವರನ್ನು 10 ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಿದರು. 11 ಲಕ್ಷ ಪುಟಗಳಷ್ಟು ಬೃಹತ್ ದಾಖಲೆಗಳೊಂದಿಗೆ ಅವರನ್ನು ವಿಚಾರಣೆಗೊಳಪಡಿಸಬೇಕಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಜುಲೈ 31 ರಂದೇ ಅವರನ್ನು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಬಂಧನದ ದಿನದಂದು ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಸೆಪ್ಟೆಂಬರ್ 17 ರಂದು ದೋಷಾರೋಪಣೆ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸುವ ನಿರೀಕ್ಷೆಯಿತ್ತು.

ಒಗ್ಗಟ್ಟಿನ ಕರೆ ನೀಡಿದ್ದಕ್ಕಾಗಿ ಜೈಲುವಾಸ

ವಿಪರ್ಯಾಸವೆಂದರೆ, ಖಾಲಿದ್ ಅವರಂತಹ ವ್ಯಕ್ತಿಯನ್ನು ಜೈಲಿಗಟ್ಟಿ, ಅವರ ವಿರುದ್ಧ ಸುಳ್ಳು ಆರೋಪಪಟ್ಟಿ ಸಿದ್ಧಪಡಿಸುವ ಆಡಳಿತವು, ಅದೇ ಸಮಯದಲ್ಲಿ ಫೆಬ್ರವರಿ 2020 ರ ಕೊಲೆಗಳು ಮತ್ತು ಪ್ರಚೋದನೆಗಳಿಗೆ ಕಾರಣರಾದವರನ್ನು ರಕ್ಷಿಸುತ್ತಿದೆ. ಅವರನ್ನು ಪುರಸ್ಕರಿಸುತ್ತಿದೆ. ಇದು ಸರ್ಕಾರದ ಶಕ್ತಿಯ ಸಂಕೇತವಲ್ಲ; ಬದಲಿಗೆ ದೌರ್ಬಲ್ಯಕ್ಕೆ ಸಾಕ್ಷಿಯಾಗಿದೆ. ಯಾವುದೇ ಸರ್ವಾಧಿಕಾರವು ಯುವಕರ ಆಕ್ರೋಶ ಮತ್ತು ಆದರ್ಶವಾದವನ್ನು ಎಂದಿಗೂ ಎದುರಿಸಿ ನಿಲ್ಲಲು ಸಾಧ್ಯವಿಲ್ಲ.

ಹಿರಿಯ ವಕೀಲರಾದ ಬೃಂದಾ ಗ್ರೋವರ್ ಅವರು ಇತ್ತೀಚೆಗೆ ಮಾತನಾಡಿ, ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ ಖಾಲಿದ್ ವಿಚಾರಣೆಯಿಲ್ಲದೆ ಆರು ವರ್ಷಗಳನ್ನು ಕೇವಲ ತಮ್ಮ ಆಲೋಚನೆಗಳಿಗಾಗಿ ಜೈಲಿನಲ್ಲಿ ಕಳೆದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಿಯಮಿತವಾಗಿ ಮತ ಚಲಾಯಿಸುವ ನಿಷ್ಕ್ರಿಯ ಪ್ರಜೆಯಾಗುವ ಬದಲು, ಜಾಗರೂಕ ಪ್ರಜೆಯಾಗಿ ಧ್ವನಿ ಎತ್ತಿದ್ದಕ್ಕಾಗಿ ಮತ್ತು ತಮ್ಮ ಸಿದ್ಧಾಂತಗಳಿಗಾಗಿ ಅವರನ್ನು ಜೈಲಿಗಡಲಾಗಿದೆ ಎಂಬುದು ಅವರ ಚಾರ್ಜ್‌ಶೀಟ್‌ನಿಂದಲೇ ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಉಮರ್ ಖಾಲಿದ್ ಅವರ ತಾಯಿ ಡಾ. ಸಬೀಹಾ ಖಾನಂ, ತಮ್ಮ ಮಗಳ (ಖಾಲಿದ್ ಅವರ ತಂಗಿ) ಮದುವೆಗಾಗಿ ಮಧ್ಯಂತರ ಜಾಮೀನಿನಲ್ಲಿ ಮನೆಗೆ ಬಂದಾಗ ಅವರೊಂದಿಗೆ ಕಳೆದ ಆತಂಕದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಖಾಲಿದ್ ಅವರ ಡಾಕ್ಟರೇಟ್ ಮಹಾಪ್ರಬಂಧವು ಈಗ ಪುಸ್ತಕವಾಗಿ ಪ್ರಕಟವಾಗಿರುವುದು ತಮಗೆ ದೊರೆತ ಅಪರೂಪದ ಭರವಸೆಯ ಮೂಲ ಎಂದು ಅವರು ಹೇಳಿದ್ದಾರೆ. ಅವನು ಜೈಲಿನಲ್ಲಿದ್ದರೂ, ಆತನ ಬರಹಗಳು ಮತ್ತು ಮಾತುಗಳು ಬಹುದೂರ ಪ್ರಯಾಣಿಸಿ, ಅವನು ತಲುಪಲಾಗದ ಜನರನ್ನು ತಲುಪಬಹುದು, ಅವನ ಸಂಶೋಧನೆಯನ್ನು ಅರ್ಥೈಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ನಂಬಿದ್ದಾರೆ.

ಒತ್ತಡದ ನಡುವೆ ಬರೆದ ಪುಸ್ತಕ

“ಫ್ರ್ಯಾಕ್ಚರ್ಡ್ ಕಮ್ಯುನಿಟೀಸ್: ಆದಿವಾಸಿ ಹಿಸ್ಟರೀಸ್ ಅಂಡ್ ಪವರ್” (Fractured Communities: Adivasi Histories and Power) ಪುಸ್ತಕದ ಮೊದಲ ಪ್ರತಿಗಳು ಮನೆಗೆ ಬಂದಾಗ, ಅದು ಸಂಭ್ರಮದ ಕ್ಷಣವಾಗಬೇಕಿತ್ತು. ಆದರೆ, ಅವರು ವಿಚಾರಣೆಯಿಲ್ಲದೆ ಯುಎಪಿಎ ಅಡಿಯಲ್ಲಿ ಜೈಲಿನಲ್ಲಿಯೇ ಉಳಿದಿದ್ದಾರೆ. ಈ ಪುಸ್ತಕವು ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅವರು ನಡೆಸಿದ ಸಂಶೋಧನೆಯಿಂದ ರೂಪುಗೊಂಡಿದೆ. ಜುಲೈ 2018 ರ ಹೊತ್ತಿಗಾಗಲೇ ಅವರು ದೇಶದ್ರೋಹದ ಆರೋಪ ಎದುರಿಸಿ, ಜೈಲುವಾಸ ಅನುಭವಿಸಿ, ವಿಶ್ವವಿದ್ಯಾನಿಲಯದಿಂದ ಅಮಾನತುಗೊಂಡಿದ್ದಾಗ ಈ ಪ್ರಬಂಧವನ್ನು ಸಲ್ಲಿಸಿದ್ದರು.

ಈ ಪುಸ್ತಕವನ್ನು ಅವರು ಯಾವುದೇ ಗ್ರಂಥಾಲಯದ ಪ್ರಶಾಂತ ವಾತಾವರಣದಲ್ಲಿ ಬರೆಯಲಿಲ್ಲ; ಬದಲಿಗೆ ಬಂಧನದ ನೆರಳು, ಮಾಧ್ಯಮಗಳ ವಿಚಾರಣೆ, ಪ್ರಾಣ ಬೆದರಿಕೆ ಮತ್ತು ನಿರಂತರ ಕೋರ್ಟ್ ವಿಚಾರಣೆಗಳ ನಡವಳಿಕೆಯ ನಡುವೆ ಬರೆದಿದ್ದಾರೆ.

ಅವರ ತಂದೆ ಡಾ. ಎಸ್.ಕ್ಯು.ಆರ್. ಇಲ್ಯಾಸ್ ಸೆಪ್ಟೆಂಬರ್ 13 ರಂದು ಮಾತನಾಡಿ, ಖಾಲಿದ್ ವಿಚಾರಣೆಯಿಲ್ಲದೆ ಆರು ವರ್ಷಗಳ ಕಸ್ಟಡಿ ಪೂರ್ಣಗೊಳಿಸಿರುವುದು ಪ್ರಜಾಪ್ರಭುತ್ವ, ಸಂವಿಧಾನದ ವಿಧಿ 21 ರ ಅಡಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತದ ಮೇಲಿನ ಗಂಭೀರ ದಾಳಿಯಾಗಿದೆ ಎಂದು ಹೇಳಿದ್ದಾರೆ. ಆರು ವರ್ಷಗಳ ಅವಧಿ ಅತ್ಯಂತ ದೀರ್ಘವಾದದ್ದು, ಇನ್ನು ಮೌನವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

ಹಲವು ಮಾನವ ಹಕ್ಕುಗಳ ಸಂಘಟನೆಗಳು ಈ ತನಿಖೆಯನ್ನು “ನಕಲಿ” ಎಂದು ಕರೆದಿದ್ದು, ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಯತ್ನ ಎಂದು ಹೇಳಿದ್ದಾರೆ. ಇತ್ತೀಚೆಗೆ, ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಅವರು ಖಾಲಿದ್ ಅವರಿಗೆ ಪತ್ರ ಬರೆದಿದ್ದರು. ಕಹಿ ಭಾವನೆಗಳು ತಮ್ಮನ್ನು ಆವರಿಸಲು ಬಿಡಬಾರದು ಎಂಬ ಖಾಲಿದ್ ಅವರ ಮಾತುಗಳನ್ನು ತಾವು ಆಗಾಗ್ಗೆ ನೆನಪಿಸಿಕೊಳ್ಳುವುದಾಗಿ ಮತ್ತು “ನಾವೆಲ್ಲರೂ ನಿಮ್ಮ ಬಗ್ಗೆ ಯೋಚಿಸುತ್ತಿದ್ದೇವೆ” ಎಂದು ಆ ಪತ್ರದಲ್ಲಿ ಬರೆದಿದ್ದರು.

ಸುಪ್ರೀಂ ಕೋರ್ಟ್ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿರುವುದು ಅನೇಕರಿಗೆ ಆಘಾತಕಾರಿ ಮತ್ತು ಅನ್ಯಾಯದ ನಿರ್ಧಾರವಾಗಿ ಕಂಡಿದೆ. ಇಬ್ಬರೂ ಹಿಂಸಾಚಾರದಲ್ಲಿ ತೊಡಗಿಸಿಕೊಂಡ ಆರೋಪ ಹೊತ್ತಿಲ್ಲ, ಬದಲಿಗೆ ಸಂಚು ರೂಪಿಸಿದ ಆರೋಪ ಹೊತ್ತಿದ್ದಾರೆ. ಅವರ ಭಾಷಣಗಳ ವೀಡಿಯೊಗಳು ಅವರು ಹಿಂಸಾಚಾರದ ವಿರುದ್ಧವಾಗಿ ಮಾತನಾಡಿರುವುದನ್ನು ಸ್ಪಷ್ಟವಾಗಿ ತೋರಿಸುತ್ತವೆ. ವಿಚಾರಣೆಯಿಲ್ಲದೆ ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದರೂ, ಗುರುತು ಬಹಿರಂಗಪಡಿಸದ ‘ರಕ್ಷಿತ ಸಾಕ್ಷಿಗಳ’ ಹೇಳಿಕೆಗಳನ್ನು ಆಧರಿಸಿ ಕೋರ್ಟ್ ಜಾಮೀನು ನಿರಾಕರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...