Homeಮುಖಪುಟವಂದೇ ಮಾತರಂ ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

ವಂದೇ ಮಾತರಂ ಕಡ್ಡಾಯವಲ್ಲ, ಹಾಡದಿದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

- Advertisement -
- Advertisement -

‘ವಂದೇ ಮಾತರಂ’ ದೇಶದ ರಾಷ್ಟ್ರೀಯ ಗೀತೆಯಾಗಿ (National Song) ಮುಂದುವರಿಯಲಿದೆ, ಆದರೆ ಸಂವಿಧಾನದ ವಿಧಿ 25 ಮತ್ತು 26ರ ಅಡಿಯಲ್ಲಿ ನೈಜ ಧಾರ್ಮಿಕ ಆಕ್ಷೇಪಣೆ ಹೊಂದಿರುವ ಯಾವುದೇ ವ್ಯಕ್ತಿಯು ಅದರ ಕೆಲವು ಚರಣಗಳನ್ನು ಹಾಡದೇ ಇದ್ದರೆ, ಅವರ ವಿರುದ್ಧ ಯಾವುದೇ ಶಿಕ್ಷಾರ್ಹ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.

‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಹೊರಡಿಸಿದ್ದ ಸುತ್ತೋಲೆ ಹಾಗೂ ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆಗೆ ತಂದ ತಿದ್ದುಪಡಿಯನ್ನು ಪ್ರಶ್ನಿಸಿ ಪ್ರಸಿದ್ಧ ಕರ್ನಾಟಕ ಸಂಗೀತಗಾರ ಟಿ.ಎಂ. ಕೃಷ್ಣ ಅರ್ಜಿಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ಮುರಳೀಧರ್, ಗೀತೆಯ ಆರು ಚರಣಗಳ ಪೈಕಿ ನಾಲ್ಕು ಚರಣಗಳು ಹಿಂದು ದೇವತೆಗಳ ಆರಾಧನೆಯನ್ನು ಒಳಗೊಂಡಿವೆ. ಇವುಗಳನ್ನು ಎಲ್ಲರ ಮೇಲೆಯೂ ಬಲವಂತವಾಗಿ ಹೇರುವುದು ಸಂವಿಧಾನದ ಜಾತ್ಯತೀತ ಸ್ವರೂಪಕ್ಕೆ ವಿರುದ್ಧವಾಗಿದೆ. ಸರ್ಕಾರವು ಯಾವುದೇ ಜಾಗೃತಿ ಅಥವಾ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸದೆ ಆತುರದಲ್ಲಿ ಈ ನಿಯಮ ತಂದಿದೆ. ಹೀಗೆ ಅಸ್ಪಷ್ಟ ನಿಯಮಗಳ ಮೇಲೆ ಜನರಿಗೆ ಶಿಕ್ಷೆ ವಿಧಿಸುವುದು ಸರಿಯಲ್ಲ ಎಂದು ವಾದಿಸಿದರು.

ವಾದ ಆಲಿಸಿದ ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ, “ವಂದೇ ಮಾತರಂ ದೇಶದ ರಾಷ್ಟ್ರೀಯ ಗೀತೆ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಒಬ್ಬ ವ್ಯಕ್ತಿ ಎಷ್ಟು ಚರಣಗಳನ್ನು ಹಾಡಬೇಕು ಎಂಬುದನ್ನು ಅವರೇ ನಿರ್ಧರಿಸಬಹುದು, ಇದನ್ನು ಹಾಡದಿದ್ದಕ್ಕೆ ಶಿಕ್ಷೆ ವಿಧಿಸಲು ಬರುವುದಿಲ್ಲ” ಎಂದರು. ಐತಿಹಾಸಿಕ ‘ಬಿಜೋಯ್ ಇಮ್ಯಾನುಯೆಲ್’ ತೀರ್ಪನ್ನು ನೆನಪಿಸಿದ ಅವರು, ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಧಕ್ಕೆಯಾದಾಗ ಕಾನೂನಿನಡಿ ಯಾರನ್ನೂ ಅಪರಾಧಿ ಎನ್ನಲಾಗುವುದಿಲ್ಲ ಎಂದು ತಿಳಿಸಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸುವಾಗ “ಕಾನೂನು ರಚನೆಯು ನಕ್ಸಲೈಟ್‌ಗಳ ಇಷ್ಟದಂತೆ ನಡೆಯಬಾರದು” ಎಂದು ಹೇಳಿದ್ದು ವಕೀಲರ ನಡುವೆ ತೀವ್ರ ಆಕ್ಷೇಪಕ್ಕೆ ಕಾರಣವಾಯಿತು. ನಂತರ ಮೆಹ್ತಾ ಅವರು, ಕಾನೂನು ಪ್ರಕ್ರಿಯೆಯು ಸಾಂವಿಧಾನಿಕವಾಗಿರಬೇಕು ಎಂಬುದಷ್ಟೇ ತಮ್ಮ ಉದ್ದೇಶವಾಗಿತ್ತು ಎಂದು ಸ್ಪಷ್ಟನೆ ನೀಡಿದರು. ಈ ಮಾತನ್ನು ನ್ಯಾಯಾಲಯದ ದಾಖಲೆಗೆ ತೆಗೆದುಕೊಳ್ಳದ ಪೀಠವು, ಭಯೋತ್ಪಾದನೆ ಆರೋಪಿಗಳಿಗೂ ಸಂವಿಧಾನದ ಅಡಿಯಲ್ಲೇ ವಿಚಾರಣೆ ನಡೆಯುತ್ತದೆ ಎಂದು ನೆನಪಿಸಿತು.

ಅಂತಿಮವಾಗಿ, ‘ವಂದೇ ಮಾತರಂ’ ಅನ್ನು ರಾಷ್ಟ್ರೀಯ ಗೀತೆ ಎಂದು ಘೋಷಿಸಿರುವುದನ್ನು ಪ್ರಶ್ನಿಸಲು ಸಾಧ್ಯವಿಲ್ಲ ಎಂದ ಪೀಠವು, ಗೀತೆ ಹಾಡದಿದ್ದಾಗ ವಿಧಿಸಲಾಗುವ ಶಿಕ್ಷಾರ್ಹ ಕ್ರಮಗಳ ಕಾನೂನು ಸಿಂಧುತ್ವವನ್ನು ಪರಿಶೀಲಿಸುವುದಾಗಿ ತಿಳಿಸಿ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ: ಸರ್ಕಾರದ ಜೊತೆ ಇರಬೇಕಾದರೆ ಎಲೆಕ್ಷನ್ ‘ಟೆಸ್ಟ್’ನಲ್ಲಿ ಗೆಲ್ಲಿ, ಮುಸ್ಲಿಮರಿಗೆ ಸುವೇಂದು ಅಧಿಕಾರಿ ಎಚ್ಚರಿಕೆ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ....

ಮಹಿಳೆಯರ ಮೇಲಿನ ದಾಳಿಗಳು ಮತ್ತಷ್ಟು ಹಿಂಸಾತ್ಮಕವಾಗುತ್ತಿವೆ: ಪ್ರಿಯಾಂಕಾ ಗಾಂಧಿ

ದೆಹಲಿ ಮತ್ತು ಬಿಹಾರದಲ್ಲಿ ಮಹಿಳೆಯರ ಮೇಲೆ ಇತ್ತೀಚೆಗೆ ನಡೆದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಳವಳ ವ್ಯಕ್ತಪಡಿಸಿದ್ದು, ಇಂತಹ ದಾಳಿಗಳು ಹೆಚ್ಚಾಗುತ್ತಿರುವುದು ಮಾತ್ರವಲ್ಲದೆ ಇನ್ನಷ್ಟು ಹಿಂಸಾತ್ಮಕವಾಗುತ್ತಿವೆ...

ಜಮುಯಿ ಅಪ್ರಾಪ್ತರ ಮೇಲಿನ ದೌರ್ಜನ್ಯ ಪ್ರಕರಣ: ಎನ್‌ಕೌಂಟರ್ ಬಳಿಕ ಪ್ರಮುಖ ಆರೋಪಿ ನಂದನ್ ಯಾದವ್ ಬಂಧನ; 7 ಮಂದಿಯಲ್ಲಿ 5 ಮಂದಿ ವಶಕ್ಕೆ

ಪಾಟ್ನಾ: ಬಿಹಾರದ ಜಮುಯಿ ಜಿಲ್ಲೆಯಲ್ಲಿ ಕೋಚಿಂಗ್‌ ತರಗತಿಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿ ಮತ್ತು ಬಾಲಕನನ್ನು ತಡೆದು ಹಲ್ಲೆ ಮಾಡಿ, ಕಿರುಕುಳ ನೀಡಿದ ಪ್ರಕರಣದಲ್ಲಿ ಪೊಲೀಸರು ಪ್ರಮುಖ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ....

ಬಿಹಾರ|ಸಭ್ಯ ರೀತಿಯಲ್ಲಿ ಅನೈತಿಕ ಪೊಲೀಸ್‌ಗಿರಿ ಮಾಡಿ: ಬಿಜೆಪಿ ಸಚಿವೆ ಶ್ರೇಯಸಿ ಸಿಂಗ್

ಬಿಹಾರದ ಜಮುಯಿ ಜಿಲ್ಲೆಯಲ್ಲಿ ಯುವಕ ಮತ್ತು ಯುವತಿಗೆ ಗುಂಪೊಂದು ಸಾರ್ವಜನಿಕವಾಗಿ ಕಿರುಕುಳ ನೀಡಿದ ಘಟನೆಯನ್ನು ಖಂಡಿಸುವ ಭರದಲ್ಲಿ, ‘ಅನೈತಿಕ ಪೊಲೀಸ್‌ಗಿರಿಯನ್ನು ಹೆಚ್ಚು ಸಭ್ಯ ಮತ್ತು ಘನತೆಯುತ ರೀತಿಯಲ್ಲಿ ಮಾಡಬಹುದು’ ಎಂದು ಬಿಹಾರದ ಬಿಜೆಪಿ...

ಭೋಪಾಲ್: ಮಕ್ಕಳ ಸಾವಿನ ಬಗ್ಗೆ ವರದಿ ಮಾಡುತ್ತಿದ್ದಾಗ ಪೊಲೀಸರು ಹೋಟೆಲ್‌ಗಳಿಂದ ಹೊರಹಾಕಿದರು ಎಂದು ಖ್ಯಾತ ಯೂಟ್ಯೂಬರ್ ಕಾವ್ಯ ಕರ್ನಾಟಕ್ ಆರೋಪ

ಭೋಪಾಲ್: ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ಮಕ್ಕಳ ಸಾವಿನ ಕುರಿತು ವರದಿ ಮಾಡಲು ತೆರಳಿದ್ದ ತಮ್ಮ ತಂಡವನ್ನು ಎರಡು ಹೋಟೆಲ್‌ಗಳಿಂದ ಹೊರಹೋಗುವಂತೆ ಒತ್ತಾಯಿಸಲಾಯಿತು. ಪೊಲೀಸರು ಹೋಟೆಲ್‌ಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ದೆಹಲಿಯಿಂದ ಬಂದ ಪತ್ರಕರ್ತರನ್ನು ಅಲ್ಲಿಂದ...

DELHI SIR |’ನೋಟಿಸ್‌ಗಳನ್ನು ಯಾಂತ್ರಿಕವಾಗಿ ನೀಡಿದಂತಿದೆ, ಲಾಜಿಕಲ್ ಡಿಸ್ಕ್ರಿಪೆನ್ಸಿ ಬಗ್ಗೆ ಸ್ಪಷ್ಟನೆ ಅಗತ್ಯ : ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌

ದೆಹಲಿಯ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಮಯದಲ್ಲಿ ಮತದಾರರಿಗೆ ನೀಡಲಾದ ನೋಟಿಸ್‌ಗಳು 'ಬಹುತೇಕ ಯಾಂತ್ರಿಕವಾಗಿ' ಜಾರಿಯಾದಂತೆ ಕಂಡುಬರುತ್ತಿವೆ ಮತ್ತು 'ತಾರ್ಕಿಕ ವ್ಯತ್ಯಾಸ'ವನ್ನು ಗುರುತಿಸಲು ಬಳಸಲಾದ ಆಧಾರದ ಬಗ್ಗೆ ಸ್ಪಷ್ಟೀಕರಣದ ಅಗತ್ಯವಿದೆ...

ಹಮೀದ್ ಅನ್ಸಾರಿ ಅವರಿಗೆ ನೀಡಿರುವ ಪದ್ಮಶ್ರೀ ಹಿಂಪಡೆಯುವಂತೆ ಹಿಂದೂ ಸೇನಾ ಆಗ್ರಹ

ಮಾಜಿ ಉಪರಾಷ್ಟ್ರಪತಿ ಮೊಹಮ್ಮದ್ ಹಮೀದ್ ಅನ್ಸಾರಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳ ಹಿನ್ನೆಲೆಯಲ್ಲಿ ಅವರಿಗೆ ನೀಡಲಾದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕೆಂದು ಬಲಪಂಥೀಯ ರಾಷ್ಟ್ರೀಯತಾವಾದಿ ಸಂಘಟನೆ ಹಿಂದೂ ಸೇನಾ ಆಗ್ರಹಿಸಿದೆ. ಸೋಮವಾರ (ಸೆ. 21) ಕೇಂದ್ರ...

ಉತ್ತರ ಪ್ರದೇಶ ಸೇರಿದಂತೆ 3 ರಾಜ್ಯಗಳ 12 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ದಿನಾಂಕ ಘೋಷಣೆ

ಭಾರತೀಯ ಚುನಾವಣಾ ಆಯೋಗವು (ಇಸಿಐ) 11 ರಾಜ್ಯಸಭಾ ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆಗಳು ಹಾಗೂ ಪಶ್ಚಿಮ ಬಂಗಾಳದ ಒಂದು ಸ್ಥಾನಕ್ಕೆ ಉಪಚುನಾವಣೆಯನ್ನು ಅಕ್ಟೋಬರ್ 16ರಂದು ನಡೆಸುವುದಾಗಿ ಘೋಷಿಸಿದೆ. ದ್ವೈವಾರ್ಷಿಕ ಚುನಾವಣೆಯಲ್ಲಿ ಮತದಾನ ನಡೆಯಲಿರುವ 11 ಸ್ಥಾನಗಳ...

ಪತ್ರಕರ್ತ ರವಿ ನಾಯರ್ ಬಂಧನ ಮುಂದುವರಿಕೆ: ಅದಾನಿ ಮಾನನಷ್ಟ ಪ್ರಕರಣದಲ್ಲಿ ಬಿಡುಗಡೆ ಅರ್ಜಿ ಮುಂದೂಡಿದ ಗುಜರಾತ್ ಹೈಕೋರ್ಟ್ 

ಅದಾನಿ ಎಂಟರ್‌ಪ್ರೈಸಸ್ ವಿರುದ್ಧದ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಬಂಧನ ಪ್ರಶ್ನಿಸಿ ಪತ್ರಕರ್ತ ರವಿ ನಾಯರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಗುಜರಾತ್ ಹೈಕೋರ್ಟ್ ಸೋಮವಾರ ಮುಂದೂಡಿದೆ. ನಾಯರ್ ಅವರ ಅರ್ಜಿಗೆ ಪ್ರತಿಕ್ರಿಯಿಸಲು ಅದಾನಿ ಎಂಟರ್‌ಪ್ರೈಸಸ್‌ಗೆ...

ರಾಮನ ಹೆಸರಿಗೆ ಕಳಂಕ ತರಬೇಡಿ’: ರಾಮಮಂದಿರ ದೇಣಿಗೆ ಪ್ರಕರಣದ ಚಾರ್ಜ್‌ಶೀಟ್‌ ವಿಳಂಬದ ಕುರಿತು ಕಾಂಗ್ರೆಸ್‌ ಆಕ್ರೋಶ

ಅಯೋಧ್ಯೆಯ ರಾಮಮಂದಿರದ ದೇಣಿಗೆ ಹಣದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್‌ ಸಲ್ಲಿಕೆ ಕುರಿತು ಕಾಂಗ್ರೆಸ್‌ ಪ್ರಶ್ನೆಗಳನ್ನು ಎತ್ತಿದ್ದು, ಪ್ರಕರಣದಲ್ಲಿ ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿದೆ. ದೇಣಿಗೆ ನಿರ್ವಹಣೆ ಮತ್ತು...