Homeಮುಖಪುಟದೆಹಲಿ ಪೊಲೀಸರಿಂದ ಎನ್‌ಎಸ್‌ಯುಐ ನಾಯಕರ ಮೇಲೆ ಹಲ್ಲೆ : ಜೈಪುರ ಕಮಿಷನರ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ...

ದೆಹಲಿ ಪೊಲೀಸರಿಂದ ಎನ್‌ಎಸ್‌ಯುಐ ನಾಯಕರ ಮೇಲೆ ಹಲ್ಲೆ : ಜೈಪುರ ಕಮಿಷನರ್ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ ಆಹೋರಾತ್ರಿ ಧರಣಿ

- Advertisement -
- Advertisement -

ರಾಜಸ್ಥಾನ ಕಾಂಗ್ರೆಸ್‌ನ ಹಿರಿಯ ನಾಯಕರು ಮತ್ತು ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಸೇರಿದಂತೆ ಹಲವಾರು ಶಾಸಕರು ಜೈಪುರ ಪೊಲೀಸ್ ಕಮಿಷನರೇಟ್ ಕಚೇರಿಯಲ್ಲಿ ಸೋಮವಾರ (ಅಕ್ಟೋಬರ್ 19) ರಾತ್ರಿಯಿಡೀ ಧರಣಿ ಸತ್ಯಾಗ್ರಹ ನಡೆಸಿದ್ದು, ಮಂಗಳವಾರ (ಅ.20) ಮುಂಜಾನೆಯ ನಂತರವೂ ಧರಣಿ ಮುಂದುವರಿದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಮಹಿಳಾ ನಾಯಕಿಯರ ಮೇಲೆ ಹಲ್ಲೆ ನಡೆಸಿದ ದೆಹಲಿ ಪೊಲೀಸ್ ಮಹಿಳಾ ಕಾನ್‌ಸ್ಟೆಬಲ್ ವಿರುದ್ಧ ‘ಝೀರೋ ಎಫ್‌ಐಆರ್’ ದಾಖಲಿಸಬೇಕೆಂದು ಆಗ್ರಹಿಸಿ ಈ ಧರಣಿ ಹಮ್ಮಿಕೊಳ್ಳಲಾಗಿದೆ.

‘ಝೀರೋ ಎಫ್‌ಐಆರ್’ ವ್ಯವಸ್ಥೆಯು, ಅಪರಾಧ ನಡೆದ ಸ್ಥಳವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅವಕಾಶ ನೀಡುತ್ತದೆ.

ಇದಕ್ಕೂ ಮುನ್ನ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಅವರಿಗೆ ದೂರವಾಣಿ ಕರೆ ಮಾಡಿ, ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಚಂಚಲ್ ಯಾದವ್ ವಿರುದ್ಧ ಝೀರೋ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅ. 13 ರಂದು ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ, ಈ ಮಹಿಳಾ ಕಾನ್‌ಸ್ಟೆಬಲ್ ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯದರ್ಶಿ ರಿತು ಬರಾಲಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

‘ಝೀರೋ ಎಫ್‌ಐಆರ್’ ದಾಖಲಾಗುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ನಮಗೆ ಎಫ್‌ಐಆರ್ ದಾಖಲಿಸಲೂ ಸಾಧ್ಯವಾಗದಿದ್ದರೆ, ಇನ್ನು ಸಾರ್ವಜನಿಕರಿಗೆ ನಾವು ಹೇಗೆ ಸಹಾಯ ಮಾಡಲು ಸಾಧ್ಯ? ಒಬ್ಬ ಯುವತಿಯ ಮೇಲೆ ಹಲ್ಲೆ ನಡೆದಿದೆ, ಇಡೀ ರಾಷ್ಟ್ರೀಯ ಮಾಧ್ಯಮಗಳು ಇದನ್ನು ಕಂಡಿವೆ, ವಿರೋಧ ಪಕ್ಷದ ನಾಯಕರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ; ಆದರೂ ಎಫ್‌ಐಆರ್ ದಾಖಲಿಸಲು ಸಾಧ್ಯವಿಲ್ಲವೇ?” ಎಂದು ದೋತಾಸ್ರಾ ಪ್ರಶ್ನಿಸಿದ್ದಾರೆ.

ಈ ಪ್ರಕರಣದ ದೂರುದಾರರಾದ ಬರಾಲಾ ಅವರಲ್ಲದೆ, ಎನ್‌ಎಸ್‌ಯುಐ ರಾಷ್ಟ್ರೀಯ ಅಧ್ಯಕ್ಷ ವಿನೋದ್ ಜಾಖರ್, ಶಾಸಕರಾದ ರಫೀಕ್ ಖಾನ್, ಅಮೀನ್ ಕಾಗ್ಜಿ, ಇಂದಿರಾ ಮೀನಾ ಮತ್ತು ಮಾಜಿ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಸೇರಿದಂತೆ ಇನ್ನೂ ಹಲವು ನಾಯಕರು ದೋತಾಸ್ರಾ ಅವರೊಂದಿಗೆ ಧರಣಿಯಲ್ಲಿ ಕುಳಿತಿದ್ದರು.

ಕಾಂಗ್ರೆಸ್ ನಾಯಕರು ಸೋಮವಾರ ಸಂಜೆ ಮೊದಲು ಎಫ್‌ಐಆರ್ ದಾಖಲಿಸಲು ಕೋರಿ ಮೋತಿ ಡೂಂಗ್ರಿ ಪೊಲೀಸ್ ಠಾಣೆಗೆ ತೆರಳಿದ್ದರು; ನಂತರ ಅವರು ಜೈಪುರ ಪೊಲೀಸ್ ಕಮಿಷನರೇಟ್‌ಗೆ ಹೋಗಿ ಪೊಲೀಸ್ ಕಮಿಷನರ್‌ರನ್ನು ಭೇಟಿಯಾಗಲು ಪ್ರಯತ್ನಿಸಿದರಾದರೂ, ಆ ಸಮಯದಲ್ಲಿ ಅವರು ಅಲ್ಲಿ ಲಭ್ಯವಿರಲಿಲ್ಲ.

ನಂತರ, ಪೊಲೀಸರು ತಮಗೆ ಕಾಯುವಂತೆ ಸೂಚಿಸಿದ್ದಾರೆ ಎಂದು ಹೇಳಿಕೊಂಡ ಕಾಂಗ್ರೆಸ್ ನಾಯಕರು, ಸೋಮವಾರ ಸಂಜೆ ಮತ್ತು ರಾತ್ರಿಯನ್ನು ಜೈಪುರ ಕಮಿಷನರೇಟ್‌ನಲ್ಲಿ ಕಳೆದರು. ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಕಚೇರಿ ಕೊಠಡಿಗಳ ಹೊರಗೆ ಹಾಸಿಗೆಗಳನ್ನು ಹಾಸಿಕೊಂಡು ಮಲಗಿದರು ಮತ್ತು ಕಮಿಷನರೇಟ್‌ನ ವಿಶಾಲ ಆವರಣದಲ್ಲಿದ್ದ ಹುಲ್ಲುಹಾಸಿನ ಮೇಲೆ ಭಜನೆಗಳನ್ನು ಹಾಡಿದರು.

ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕೂಡ ತಡರಾತ್ರಿ ಜೈಪುರ ಕಮಿಷನರೇಟ್‌ನಲ್ಲಿ ಕಾಂಗ್ರೆಸ್ ನಿಯೋಗವನ್ನು ಭೇಟಿ ಮಾಡಿದರು.

“ಸರ್ವಾಧಿಕಾರಿಗಳ ವಿರುದ್ಧ ಹೋರಾಡುವ ವಿಷಯಕ್ಕೆ ಬಂದರೆ, ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಜನರು ವರ್ಷಗಟ್ಟಲೆ ಜೈಲಿನಲ್ಲಿ ಕಳೆದಿದ್ದರು. ಕಾನೂನು ಪಾಲನೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಆಗುವುದಾದರೆ, 1-2 ದಿನಗಳಿರಲಿ, ಅಥವಾ ಒಂದು ತಿಂಗಳು, 6 ತಿಂಗಳು ಅಥವಾ 12 ತಿಂಗಳು ಜೈಲಿನಲ್ಲಿ ಇರಬೇಕಾಗಿ ಬಂದರೂ ಅದರಿಂದೇನೂ ತೊಂದರೆಯಿಲ್ಲ. ಮೋದಿ ಮತ್ತು ಅಮಿತ್ ಶಾ ಅವರು ರೂಪಿಸಿರುವ ಬಿಎನ್‌ಎಸ್‌ಎಸ್‌ನ 173(1)ನೇ ಕಲಂ, ಸಂತ್ರಸ್ತ ವ್ಯಕ್ತಿಗಳು — ವಿಶೇಷವಾಗಿ ಮಹಿಳೆಯರು ಮತ್ತು ವೃದ್ಧರು ತಮ್ಮ ದೂರು ಅಥವಾ ವರದಿಯನ್ನು ದಾಖಲಿಸಬಹುದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಇಂತಹ ಸಂದರ್ಭದಲ್ಲಿ ಅವರು ‘ಝೀರೋ ಎಫ್‌ಐಆರ್’ ಅನ್ನು ದಾಖಲಿಸಿ, ಅದನ್ನು ದೆಹಲಿಗೆ ಕಳುಹಿಸಬೇಕಾಗುತ್ತದೆ” ಎಂದು ದೋತಾಸ್ರಾ ಮಂಗಳವಾರ ಹೇಳಿದ್ದಾರೆ. ಅವರು ಜೈಪುರ ಪೊಲೀಸ್ ಕಮಿಷನರೇಟ್‌ನಲ್ಲಿ ರಾತ್ರಿಯನ್ನು ಕಳೆದ ನಂತರ ಈ ಹೇಳಿಕೆ ನೀಡಿದ್ದಾರೆ.

ಮೋತಿ ಡೂಂಗ್ರಿ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಹೆಚ್‌ಒ) ಸೂಚಿಸಿದ ಮೇರೆಗೆ ಕಾಂಗ್ರೆಸ್ ನಿಯೋಗವು ಜೈಪುರ ಪೊಲೀಸ್ ಕಮಿಷನರೇಟ್‌ಗೆ ಬಂದಿದ್ದು, ಪೊಲೀಸರ ಪ್ರತಿಕ್ರಿಯೆಗಾಗಿ ಕಾಯುತ್ತಿದೆ ಎಂದು ದೋತಾಸ್ರಾ ತಿಳಿಸಿದ್ದಾರೆ. ರಾಜಸ್ಥಾನದಲ್ಲಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸರ್ಕಾರವು ಮುಂದಿನ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರದಿಂದ ಬರುವ “ಪರ್ಚಿ (ಚೀಟಿ/ಸೂಚನೆ)”ಗಾಗಿ ಕಾಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ರಾಜಸ್ಥಾನದ ಭಜನ್ ಲಾಲ್ ಶರ್ಮಾ ನೇತೃತ್ವದ ಸರ್ಕಾರವನ್ನು ಕಾಂಗ್ರೆಸ್ ನಿರಂತರವಾಗಿ “ಪರ್ಚಿ ಸರ್ಕಾರ” (ಚೀಟಿ ಆಧಾರಿತ ಸರ್ಕಾರ) ಎಂದು ಕರೆಯುತ್ತಾ ಬಂದಿದೆ. ಅಂದರೆ, ಬಿಜೆಪಿ ಕೇಂದ್ರ ನಾಯಕತ್ವವು ಚೀಟಿಗಳ ಮೂಲಕ ಕಳುಹಿಸುವ ಸೂಚನೆಗಳ ಆಧಾರದ ಮೇಲೆ ನಡೆಯುವ ಸರ್ಕಾರ ಎಂದು ಇದರ ಅರ್ಥ.

“ಈ ಧರಣಿಯನ್ನು ನಾವು ನಡೆಸುತ್ತಿಲ್ಲ. ತಾವು ಕಾನೂನನ್ನು ಪಾಲಿಸುತ್ತೇವೆಯೋ ಇಲ್ಲವೋ ಎಂಬುದನ್ನು ತಿಳಿಸುವುದಾಗಿ ಅವರು ನಮಗೆ ಹೇಳಿದ್ದಾರೆ. ಅವರು ಕಾನೂನನ್ನು ಪಾಲಿಸುವುದಾದರೆ, ಎಫ್‌ಐಆರ್ ದಾಖಲಿಸಬೇಕಾಗುತ್ತದೆ; ಆಗ ನಾವು ಅವರಿಗೆ ಧನ್ಯವಾದ ತಿಳಿಸಿ ಇಲ್ಲಿಂದ ಹೊರಟುಹೋಗುತ್ತೇವೆ. ಒಂದು ವೇಳೆ ಅವರು ಕಾನೂನನ್ನು ಪಾಲಿಸದಿದ್ದರೆ, ಕಾನೂನು ಜಾರಿಯಾಗುವಂತೆ ನೋಡಿಕೊಳ್ಳಲು ನಾವು ಎಂತಹ ಹಂತಕ್ಕಾದರೂ ಹೋಗಲು ಸಿದ್ಧರಿದ್ದೇವೆ. ನಾವು ಇಲ್ಲೇ ಕುಳಿತುಕೊಳ್ಳುತ್ತೇವೆ. ಅವರಿಗೆ ಬೇಕಿದ್ದರೆ ನಮ್ಮ ಮೇಲೆ ಗುಂಡು ಹಾರಿಸಲಿ ಅಥವಾ ಲಾಠಿಗಳಿಂದ ಹೊಡೆಯಲಿ. ಇಂದು ರಾವಣನ ಅಹಂಕಾರ ದಹನವಾಗಲಿದೆ (ಇದು ದಸರಾ ಹಬ್ಬವಾಗಿರುವುದರಿಂದ), ಹಾಗೆಯೇ ಕಾಂಗ್ರೆಸ್ ಕಾರ್ಯಕರ್ತರು ‘ಡಬಲ್ ಇಂಜಿನ್’ ಸರ್ಕಾರದ ಅಹಂಕಾರವನ್ನು ದಹಿಸಲಿದ್ದಾರೆ” ಎಂದು ದೋತಾಸ್ರಾ ಹೇಳಿದ್ದಾರೆ.



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಅತಿಕ್ರಮಣ ಆರೋಪ: ಸಿಜೆಪಿಯ ಅಶುತೋಷ್, ಸೌರವ್ ಬಂಧನ ಮುಂದುವರಿಕೆ, ಅಪರಾಧ ವಿಭಾಗಕ್ಕೆ ತನಿಖೆ ವರ್ಗಾವಣೆ

ನವದೆಹಲಿ: ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಹ-ಸಂಚಾಲಕರಾದ ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ವಿರುದ್ಧ ದಾಖಲಾದ ಪ್ರಕರಣದ ತನಿಖೆಯನ್ನು ದೆಹಲಿ ಪೊಲೀಸರು...

‘ವೋಟ್ ಚೋರಿ ಸರ್ಕಾರ’ದಿಂದ ಗ್ರಾಮೀಣ ಕಾರ್ಮಿಕರ ಕೂಲಿ ಕಳ್ಳತನವೂ ಪರಿಪೂರ್ಣ: ವಿಬಿ-ಜಿ ರಾಮ್ ಜಿ ಕಾಯ್ದೆ ವಿರುದ್ಧ ಜೈರಾಮ್ ರಮೇಶ್ ವಾಗ್ದಾಳಿ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಬದಲಿಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ಕಾಯ್ದೆ ಗ್ರಾಮೀಣ ಭಾರತದ ಬಡವರು ಮತ್ತು...

ಸೋಶಿಯಲ್ ಮೀಡಿಯಾ ಅಕೌಂಟ್ ಬ್ಲಾಕ್: ಬಳಕೆದಾರರಿಗೆ ಸರ್ಕಾರದ ನೋಟಿಸ್‌ ಪ್ರತಿ ನೀಡುವುದು ಕಡ್ಡಾಯ ಎಂದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌

ಸಾಮಾಜಿಕ ಜಾಲತಾಣಗಳಲ್ಲಿನ ಖಾತೆ ಅಥವಾ ವಿಷಯಗಳನ್ನು (Content) ತಡೆಹಿಡಿಯಲು ಸರ್ಕಾರವು ಮಧ್ಯವರ್ತಿ ಸಂಸ್ಥೆಗಳಿಗೆ (ಫೇಸ್‌ಬುಕ್, ಟ್ವಿಟರ್ ಇತ್ಯಾದಿ) ಸೂಚನೆ ಅಥವಾ ಆದೇಶ ರವಾನಿಸಿದ ತಕ್ಷಣ, ಆ ಆದೇಶ ಅಥವಾ ನೋಟಿಸ್‌ನ ಪ್ರತಿಯನ್ನು ಸಂಬಂಧಪಟ್ಟ...

ಉತ್ತರ ಪ್ರದೇಶ| ದೇವಾಲಯದಲ್ಲಿ ಪೂಜೆ ಸಲ್ಲಿಸಿದ ದಲಿತ ವ್ಯಕ್ತಿಯ ಮೇಲೆ ಹಲ್ಲೆ

ದಲಿತ ಸಮುದಾಯದ ವ್ಯಕ್ತಿಯೊಬ್ಬರು ಧಾರ್ಮಿಕ ಸ್ಥಳದಲ್ಲಿ ವಾಸಿಸುತ್ತಿರುವುದಕ್ಕೆ ಮತ್ತು ಅವರು ಪೂಜೆ ಸಲ್ಲಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಬ್ಬರು ವ್ಯಕ್ತಿಗಳು, ಅವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ. ಸಾಲದ್ದಕ್ಕೆ ಅವರನ್ನು ದೇವಾಲಯದೊಳಗೆ...

ಸುಪ್ರೀಂ ಕೋರ್ಟ್‌ ತೀರ್ಪನ್ನು ‘ನ್ಯಾಯ ನಿರಾಕರಣೆ’ ಎಂದು ಟೀಕಿಸುವುದು ಅಪರಾಧವಲ್ಲ : ಕರ್ನಾಟಕ ಹೈಕೋರ್ಟ್

ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿನ ವ್ಯಾಪ್ತಿಯನ್ನು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪೊಂದನ್ನು ಟೀಕಿಸುವ ಘೋಷವಾಕ್ಯಗಳನ್ನು ಸಾರ್ವಜನಿಕ ಗೋಡೆಯ ಮೇಲೆ ಬರೆದಿದ್ದಾರೆ ಎಂಬ ಆರೋಪದ ಮೇರೆಗೆ 13 ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್...

‘ಭಾರತದಲ್ಲಿ ಆಡಳಿತ ಬದಲಾವಣೆ ಆಗುವುದಿಲ್ಲ’: ಪ್ರತಿಭಟನೆ, ಹೋರಾಟಗಳಿಗೆ ಪಶ್ಚಿಮ ದೇಶಗಳ ಪ್ರಭಾವ ಕಾರಣ ಎಂದ ಮೋಹನ್ ಭಾಗವತ್

ನಾಗ್ಪುರ: ಭಾರತದಲ್ಲಿ ಆಡಳಿತ ಬದಲಾವಣೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವ ವಾದವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರೋಧಿಸಿದ್ದಾರೆ. ಆಡಳಿತ ಬದಲಾವಣೆಗೆ ಕರೆ ನೀಡುವ ಚಳವಳಿಗಳು ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಿಗೆ,...

ಗಾಜಿಯಾಬಾದ್‌| ದಲಿತ ವಿದ್ಯಾರ್ಥಿಗೆ ಸಹಪಾಠಿಗಳಿಂದ ಜಾತಿ ನಿಂದನೆ – ಹಲ್ಲೆ ಆರೋಪ

ಅಕ್ಟೋಬರ್ 7 ರ ಮಧ್ಯರಾತ್ರಿ ಮಹೇಶ್ ಕುಮಾರ್ (45) ಎಚ್ಚರಗೊಂಡಾಗ, ತಮ್ಮ ಮನೆಯ ಹೊರಗೆ 11ನೇ ತರಗತಿಯಲ್ಲಿ ಓದುತ್ತಿದ್ದ ಮಗ ಕುಳಿತಿರುವುದನ್ನು ಗಮನಿಸಿದರು. ಆ ಹದಿಹರೆಯದ ಬಾಲಕನ ಮುಖದಲ್ಲಿ ಆತಂಕವಿತ್ತು, ಶಾಲೆಯಲ್ಲಿ ತನಗಾಗುತ್ತಿದ್ದ...

ಪ್ರಧಾನಿ, ಮಾಜಿ ಪ್ರಧಾನಿ ವಿದೇಶಿ ಪ್ರವಾಸ ವಿವರ ಬಹಿರಂಗಪಡಿಸುವ ಅಗತ್ಯವಿಲ್ಲ: ದೆಹಲಿ ಹೈಕೋರ್ಟ್!

ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಡಾ. ಮನ್ಮೋಹನ್ ಸಿಂಗ್ ಅವರು ಭಾರತೀಯ ವಾಯುಪಡೆಯ (IAF) ವಿಮಾನಗಳಲ್ಲಿ ನಡೆಸಿದ್ದ ವಿದೇಶಿ ಪ್ರವಾಸಗಳಿಗೆ ಸಂಬಂಧಿಸಿದ ವಿವರವಾದ ದಾಖಲೆಗಳನ್ನು ಬಹಿರಂಗಪಡಿಸುವಂತೆ...

ಗಾಯಕಿ ನೇಹಾ ಸಿಂಗ್ ಕುರಿತು ಎಬಿಪಿ ನ್ಯೂಸ್ ಸುಳ್ಳು, ಮಾನಹಾನಿಕರ ವರದಿ : ಸ್ವಯಂಪ್ರೇರಿತ ಪ್ರಕರಣ ಕೈಗೆತ್ತಿಕೊಂಡ ರಾಷ್ಟ್ರೀಯ ಮಹಿಳಾ ಆಯೋಗ

ಗಾಯಕಿ ಹಾಗೂ ಹೋರಾಟಗಾರ್ತಿ ನೇಹಾ ಸಿಂಗ್ ರಾಥೋರ್ ಬಗ್ಗೆ ಎಬಿಪಿ ನ್ಯೂಸ್ ಸುಳ್ಳು ಹಾಗೂ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿರುವುದಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯು) ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿದೆ. ಎಬಿಪಿ ನ್ಯೂಸ್...

ಜಂತರ್ ಮಂತರ್ ಪ್ರತಿಭಟನೆ: ಕಾಕ್ರೋಚ್ ಜನತಾ ಪಾರ್ಟಿ ನಾಯಕರ ನ್ಯಾಯಾಂಗ ಬಂಧನ ಎರಡು ದಿನಗಳಿಗೆ ವಿಸ್ತರಣೆ; ಪ್ರಕರಣ ಕ್ರೈಂ ಬ್ರಾಂಚ್‌ಗೆ ವರ್ಗಾವಣೆ!

ದೆಹಲಿಯ ನಿರ್ಬಂಧಿತ ಜಂತರ್ ಮಂತರ್ ಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ...