Homeಮುಖಪುಟಸಿಇಸಿ ಗ್ಯಾನೇಶ್ ಕುಮಾರ್ ಸಹೋದರನ ನೇತೃತ್ವದ ದೆಹಲಿ ಕಸ್ಟಮ್ಸ್‌ನಲ್ಲಿ ಪಂಜಾಬ್‌ ಮುಖ್ಯಮಂತ್ರಿಯನ್ನು ತಡೆದು ದಂಡ ವಿಧಿಸಲಾಯಿತೇ?

ಸಿಇಸಿ ಗ್ಯಾನೇಶ್ ಕುಮಾರ್ ಸಹೋದರನ ನೇತೃತ್ವದ ದೆಹಲಿ ಕಸ್ಟಮ್ಸ್‌ನಲ್ಲಿ ಪಂಜಾಬ್‌ ಮುಖ್ಯಮಂತ್ರಿಯನ್ನು ತಡೆದು ದಂಡ ವಿಧಿಸಲಾಯಿತೇ?

- Advertisement -
- Advertisement -

ಪ್ರಸ್ತುತ ಇಡೀ ದೇಶದ ಜನರ ಆಕ್ರೋಶಕ್ಕೆ ಗುರಿಯಾಗಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ಸಹೋದರ ಮನೀಶ್ ಕುಮಾರ್ ಮುಖ್ಯ ಆಯುಕ್ತರಾಗಿರುವ ದೆಹಲಿ ವಿಮಾನ ನಿಲ್ದಾಣದ ಕಸ್ಟಮ್ಸ್‌ನಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಅಧಿಕಾರಿಗಳು ಮೂರು ಗಂಟೆಗಳ ಕಾಲ ತಡೆದು ನಿಲ್ಲಿಸಿದ್ದಲ್ಲದೆ, 50 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ಹೇಳಲಾಗ್ತಿದೆ. ‘ಇದು ನಿಜವೇ’..? ಎಂದು ಆಮ್ ಆದ್ಮಿ ಪಕ್ಷ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.

ದೆಹಲಿ ಕಸ್ಟಮ್ಸ್ ಮುಖ್ಯಸ್ಥರು ಮತ್ತು ಸಿಇಸಿ ನಡುವಿನ ಸಂಬಂಧಕ್ಕೆ ಸಂಬಂಧಿಸಿದ ಈ ವಿಷಯವನ್ನು, ಕಸ್ಟಮ್ಸ್ ಹಾಗೂ ಇತರ ಆರ್ಥಿಕ ವಿಷಯಗಳ ಕುರಿತು ಕೆಲಸ ಮಾಡುವ ವಕೀಲರಾದ @ramakantgaur ಅವರು ಮೊದಲು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಸ್ತಾಪಿಸಿದ್ದರು.

ಭಾರತೀಯ ಕಂದಾಯ ಸೇವೆಯ (ಐಆರ್‌ಎಸ್‌) ಅಧಿಕಾರಿಯಾಗಿರುವ ಮನೀಶ್, ಗ್ಯಾನೇಶ್ ಕುಮಾರ್ ಅವರ ಕುಟುಂಬದಲ್ಲಿರುವ ಅನೇಕ ನಾಗರಿಕ ಸೇವಾ ಅಧಿಕಾರಿಗಳಲ್ಲಿ ಒಬ್ಬರು. ಆಡಳಿತ ಪಕ್ಷಕ್ಕೆ ಸಿಇಸಿ ಎಷ್ಟರ ಮಟ್ಟಿಗೆ ‘ಸಹಾಯ’ ಮಾಡಿದ್ದಾರೆ ಎಂಬ ಬಗ್ಗೆ ರಾಜಕೀಯ ಪಕ್ಷಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದ್ದು, ಈ ಮೂಲಕ ಸಿಇಸಿ ಸರ್ಕಾರದಿಂದ ‘ರಕ್ಷಣೆ’ ಪಡೆಯಲು ಯತ್ನಿಸುತ್ತಿದ್ದಾರೆ ಎಂಬ ಚರ್ಚೆಯು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ; ಈ ಚರ್ಚೆಯ ಸುಳಿಗೆ ಮನೀಶ್ ಕೂಡ ಸಿಲುಕಿಕೊಂಡಿದ್ದಾರೆ.

ಅಕ್ಟೋಬರ್ 19ರಂದು ಪಂಜಾಬ್ ಸಿಎಂ ಪ್ಯಾರಿಸ್‌ನಿಂದ ಹಿಂತಿರುಗುತ್ತಿದ್ದರು; ಅವರು ಅಲ್ಲಿ ಆಹಾರ ವ್ಯಾಪಾರ ಮೇಳವೊಂದರಲ್ಲಿ ಭಾಗವಹಿಸಲು ಮತ್ತು ಪಂಜಾಬ್‌ನ ಉತ್ಪನ್ನಗಳನ್ನು ಪ್ರಚಾರ ಮಾಡಲು ಹೋಗಿದ್ದರು. ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಮೂರು ಗಂಟೆಗಳ ಕಾಲ ತಡೆಹಿಡಿದು, 50,000 ರೂಪಾಯಿ ದಂಡ ವಿಧಿಸಿದ್ದಾರೆ ಎನ್ನಲಾಗಿದೆ. ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, “ಮಾನ್ ಅವರ ಲಗೇಜ್‌ನಲ್ಲಿ ಪಾದರಕ್ಷೆ, ಬೆಲ್ಟ್‌, ಬಟ್ಟೆಗಳು, ದೈನಂದಿನ ಬಳಕೆಯ ಕೈಗಡಿಯಾರಗಳು ಮತ್ತು ಆಭರಣಗಳಂತಹ ‘ದೈನಂದಿನ ಬಳಕೆಯ ವಸ್ತುಗಳು’ ಇದ್ದವು”.

ಬಿಜೆಪಿ ಮಾನ್ ಅವರನ್ನು ‘ಅವಮಾನಿಸಲು’ ಮತ್ತು ‘ಪಂಜಾಬ್‌ನ ಘನತೆಯನ್ನು ಕುಗ್ಗಿಸಲು’ ಉದ್ದೇಶಪೂರ್ವಕವಾಗಿ ಈ ಪ್ರಯತ್ನ ನಡೆಸಿದೆ ಎಂದು ಎಎಪಿ ಆರೋಪಿಸಿದೆ. “ರಾಜ್ಯವೊಂದರ ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಮೂರು ಗಂಟೆಗಳ ಕಾಲ ಕಾಯುವಂತೆ ಮಾಡಿ, ನಂತರ ಕೇವಲ 50,000 ರೂಪಾಯಿಗಳ ದಂಡ ವಿಧಿಸಿದ ಘಟನೆ ಎಂದಾದರೂ ನಡೆದಿದೆಯೇ?” ಎಂದು ಎಎಪಿ ಪ್ರಧಾನ ಕಾರ್ಯದರ್ಶಿ ಬಲ್ತೇಜ್ ಪನ್ನು ಅವರು ವಿಡಿಯೋ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.

ಸಿಇಸಿ ಕೈಗೊಂಡ ನಿರ್ಧಾರಗಳನ್ನು ಚುನಾವಣಾ ಆಯೋಗದ ಹೆಸರಿನಲ್ಲಿ ಜಾರಿಗೊಳಿಸುವುದಕ್ಕೆ, ಇತರ ಇಬ್ಬರು ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕನಿಷ್ಠ 14 ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂಬ ವಿಷಯ ಬೆಳಕಿಗೆ ಬಂದಾಗಿನಿಂದಲೂ, ಸಿಇಸಿ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ, ಅವರ ಸಂಬಂಧಿಕರೊಬ್ಬರು ರಾಜಕೀಯ ವಿವಾದವೊಂದರಲ್ಲಿ ಸಿಲುಕಿಕೊಂಡಿರುವುದು ಇದೇ ಮೊದಲ ಬಾರಿಯೇನಲ್ಲ.

ತಮ್ಮ ಕೆಲಸದ ವಿಚಾರಕ್ಕೆ ಪ್ರಶ್ನೆಗೆ ಒಳಗಾದವರಲ್ಲಿ ಗೌತಮ್ ಬುದ್ಧ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಗ್ಯಾನೇಶ್ ಕುಮಾರ್ ಅವರ ಮಗಳು ಮೇಧಾ ರೂಪಂ ಕೂಡ ಒಬ್ಬರು. ಕೆಲಸದ ಪರಿಸ್ಥಿತಿ ಕುರಿತು ನೋಯ್ಡಾದಲ್ಲಿ ಕಾರ್ಮಿಕರು ನಡೆಸಿದ ಪ್ರತಿಭಟನೆ ಸಂಬಂಧ ಹೋರಾಟಗಾರ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆಯನ್ನು (ಎನ್‌ಎಸ್‌ಎ) ಜಾರಿಗೊಳಿಸಲು ರೂಪಂ ಅವರ ಆದೇಶಗಳೇ ಕಾರಣವಾಗಿದ್ದವು. ಈ ಪ್ರಕರಣದಲ್ಲಿ ಅವರ ಆದೇಶವೊಂದನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿತಲ್ಲದೆ, ರೂಪಂ ಅವರಿಗೆ ದಂಡವನ್ನು ವಿಧಿಸಿತು ಮತ್ತು ಅವರ ನಿರ್ಧಾರವನ್ನು ಕಠಿಣವಾಗಿ ತರಾಟೆಗೆ ತೆಗೆದುಕೊಂಡಿತ್ತು. ಸುಪ್ರೀಂ ಕೋರ್ಟ್ ದಂಡಕ್ಕೆ ತಡೆಯಾಜ್ಞೆ ನೀಡಿದ್ದರೂ, ಎನ್‌ಎಸ್‌ಎ ಆದೇಶಗಳನ್ನು ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪು ಹಾಗೇ ಉಳಿದುಕೊಂಡಿದೆ. ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ಅವರ ಪರವಾಗಿ ವಾದ ಮಂಡಿಸಲು ಬಂದಿದ್ದು ಮತ್ತು ವಾದ-ಪ್ರತಿವಾದಗಳು ನಡೆಯುತ್ತಿದ್ದಂತೆ ವರ್ಚುವಲ್ ಕೋರ್ಟ್‌ನ ಆಡಿಯೋವನ್ನು ಮ್ಯೂಟ್ (ಮೌನ) ಮಾಡಲು ಸರ್ವೋಚ್ಚ ನ್ಯಾಯಾಲಯವು ಸೂಚಿಸಿದ ವಿಷಯವು ಸಾರ್ವಜನಿಕರ ಗಮನ ಸೆಳೆದಿದ್ದಲ್ಲದೆ ತೀವ್ರ ಆಕ್ರೋಶಕ್ಕೂ ಕಾರಣವಾಗಿತ್ತು.

ಮನೀಶ್ ಕುಮಾರ್ ಅವರು 1992ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾಗಿದ್ದು, ಜೂನ್ 2025ರಿಂದ ಕಸ್ಟಮ್ಸ್ ಮತ್ತು ಪರೋಕ್ಷ ತೆರಿಗೆಗಳ ಮುಖ್ಯ ಆಯುಕ್ತರಾಗಿ ನಿಯೋಜನೆಗೊಂಡಿದ್ದಾರೆ.

ಮಾನ್ ಅವರಿಗೆ ವಿಧಿಸಲಾದ ದಂಡದ ಕುರಿತು ವಿವರಗಳನ್ನು ಕೋರಿ ದೆಹಲಿ ಕಸ್ಟಮ್ಸ್ ವಲಯವನ್ನು ಸಂಪರ್ಕಿಸಲಾಗಿದೆ. ಪ್ರತಿಕ್ರಿಯೆ ಬಂದ ನಂತರ ವರದಿಯನ್ನು ಅಪ್ಡೇಟ್ ಮಾಡುತ್ತೇವೆ ಎಂದು thewire.in ಹೇಳಿದೆ. ಅಕ್ಟೋಬರ್ 21 ರಿಂದ ದೆಹಲಿ ಕಸ್ಟಮ್ಸ್ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದೆ.



ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯುದ್ಧದ ಮುಂಚೂಣಿ ರೇಖೆಗಳ ಸ್ಥಗಿತಕ್ಕೆ ಸಿದ್ಧ..’; ಉಕ್ರೇನ್‌ನ ಶೇ. 25ರಷ್ಟು ಭೂಭಾಗವನ್ನು ರಷ್ಯಾಕ್ಕೆ ಬಿಟ್ಟುಕೊಡಲು ಒಪ್ಪಿದರೇ ಝೆಲೆನ್‌ಸ್ಕಿ?

ರಷ್ಯಾದೊಂದಿಗಿನ ಶಾಂತಿ ಒಪ್ಪಂದದ ಭಾಗವಾಗಿ ಪ್ರಸ್ತುತ ಯುದ್ಧದ ಮುಂಚೂಣಿ ರೇಖೆಗಳನ್ನು ಸ್ಥಗಿತಗೊಳಿಸಲು ಸಿದ್ಧವಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. 2022ರ ಫೆಬ್ರವರಿಯಲ್ಲಿ ಆರಂಭವಾದ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಅಗತ್ಯ...

ಸೌದಿ ಅರೇಬಿಯಾದ ದಮ್ಮಾಮ್‌ ವಿಮಾನ ನಿಲ್ದಾಣದ ಮೇಲೆ ದಾಳಿ : ಭಾರತೀಯ ಪ್ರಜೆ ಸೇರಿ ಇಬ್ಬರು ಸಾವು, 8 ಮಂದಿಗೆ ಗಾಯ

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿರುವ ಕಿಂಗ್ ಫಹದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ದಾಳಿಯಲ್ಲಿ ಒಬ್ಬರು ಭಾರತೀಯ ಪ್ರಜೆ, ಮತ್ತೊಬ್ಬರು ಸೌದಿ ಪ್ರಜೆ ಮೃತಪಟ್ಟಿದ್ದಾರೆ ಎಂದು ಸೌದಿ ಅರೇಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ...

ಸಂಸತ್ತಿನ ಅನುಮೋದನೆ ಇಲ್ಲದೆ ಕೇಂದ್ರ ಸರ್ಕಾರ ಫಾರ್ಮ್‌-6 ತಿದ್ದುಪಡಿ ಮಾಡಬಹುದೇ?

ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರನ್ನು ನೋಂದಾಯಿಸಲು ಬಳಸುವ ಫಾರ್ಮ್‌-6 ಅನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬಹುದು. ಆದರೆ, ಇಂತಹ ಬದಲಾವಣೆಗಳನ್ನು ಕಾನೂನಿನಲ್ಲಿ ನಿಗದಿಪಡಿಸಿರುವ ಪ್ರಕ್ರಿಯೆಯ ಅನುಸಾರವೇ ಕೈಗೊಳ್ಳಬೇಕು. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ...

ಸುಪ್ರೀಂ ಕೋರ್ಟ್ ನಿರ್ದೇಶನದ ಬೆನ್ನಲ್ಲೇ ಆಂಧ್ರ ಪ್ರದೇಶ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸ್ಥಗಿತ

ಸುಪ್ರೀಂ ಕೋರ್ಟ್‌ನ ನಿರ್ದೇಶನದ ಹಿನ್ನೆಲೆ, ಅಕ್ಟೋಬರ್ 14ರಂದು ಅಧಿಸೂಚನೆ ಹೊರಡಿಸಲಾಗಿದ್ದ ಎಲ್ಲಾ 100 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯುವಂತೆ ಆಂಧ್ರ ಪ್ರದೇಶ ರಾಜ್ಯ ಚುನಾವಣಾ ಆಯುಕ್ತ (ಎಸ್‌ಇಸಿ) ಅನಿಲ್...

ಜೆಎನ್‌ಯು ಪಿಎಚ್‌ಡಿ ಪ್ರವೇಶದಲ್ಲಿ ಪಾಲನೆಯಾಗದ ಮೀಸಲಾತಿ ಮಾನದಂಡ; 56 ಕೋರ್ಸ್‌ಗಳಲ್ಲಿ ಇಲ್ಲ ಒಂದೇ ಒಂದು ಎಸ್‌ಟಿ ಸೀಟ್

ಮೀಸಲಾತಿ ಸೀಟುಗಳ ಹಂಚಿಕೆ ವ್ಯತ್ಯಾಸಕ್ಕೆ ವಿವರಣೆ ನೀಡುವಂತೆ ಬಾಪ್ಸಾ ಆಗ್ರಹ 2026-27ನೇ ಶೈಕ್ಷಣಿಕ ಸಾಲಿನ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಪಿಎಚ್‌ಡಿ ಪ್ರವೇಶ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಮೀಸಲಾತಿ ಪ್ರಮಾಣದಲ್ಲಿ ಕೊರತೆಯಾಗಿದೆ ಎಂದು...

ಜೀವನ ನಿರ್ವಹಣಾ ವೆಚ್ಚದ ಏರಿಕೆ ವಿರುದ್ಧ ಫ್ರಾನ್ಸ್‌ನಲ್ಲಿ ಪ್ರತಿಭಟನೆ: ಭಾರತೀಯ ಪ್ರಜೆಗಳಿಗೆ ಎಚ್ಚರಿಕೆ

ಜೀವನ ನಿರ್ವಹಣಾ ವೆಚ್ಚದ ಏರಿಕೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕ ಘರ್ಷಣೆಗಳಿಗೆ ತಿರುಗಿದ ಹಿನ್ನೆಲೆಯಲ್ಲಿ, ಪಶ್ಚಿಮ ಯುರೋಪಿಯನ್ ದೇಶದಲ್ಲಿರುವ ಮತ್ತು ಅಲ್ಲಿಗೆ ಪ್ರಯಾಣಿಸುತ್ತಿರುವ ತಮ್ಮ ನಾಗರಿಕರು ಎಚ್ಚರಿಕೆಯಿಂದಿರಬೇಕು ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು...

ನ್ಯಾಯಾಂಗ ಬಂಧನದಿಂದ ಬಿಡುಗಡೆ ಬೆನ್ನಲ್ಲೇ ಸಿಜೆಪಿ ನಾಯಕರಿಗೆ ದೆಹಲಿ ಕ್ರೈಮ್ ಬ್ರಾಂಚ್ ಸಮನ್ಸ್

ದೆಹಲಿ ಪೊಲೀಸ್ ಅಪರಾಧ ವಿಭಾಗವು (ಕ್ರೈಮ್ ಬ್ರಾಂಚ್) ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದು, ಗುರುವಾರ (ಅ.22) ಮಧ್ಯಾಹ್ನ 12...

ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ: ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ

ಹುಗ್ಲಿ ನದಿಯಲ್ಲಿ ದುರ್ಗಾ ವಿಸರ್ಜನೆಯ ಸಮಯದಲ್ಲಿ ಸನಾತನ ಧರ್ಮದ ಅನುಯಾಯಿಗಳಿಗೆ ಮಾತ್ರ ದೇವಿಯ ವಿಗ್ರಹಗಳನ್ನು ಸ್ಪರ್ಶಿಸಲು ಅನುಮತಿ ನೀಡಲಾಗುವುದು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಬುಧವಾರ ಹೇಳಿದ್ದಾರೆ. ಸುರಕ್ಷತಾ ಕಾಳಜಿಗಳು ಮತ್ತು...

ಮಹಾರಾಷ್ಟ್ರ ಸಿಇಒ ಮನವಿಗೆ ಸ್ಪಂದಿಸಿದ ಚುನಾವಣಾ ಆಯೋಗ: ‘ಇಸಿಐನೆಟ್’ ಸಾಫ್ಟ್‌ವೇರ್‌ನಲ್ಲಾಯಿತು 4 ಪ್ರಮುಖ ಬದಲಾವಣೆ!

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಾಫ್ಟ್‌ವೇರ್‌ನ ಅತಿಯಾದ ನಿಯಂತ್ರಣವು ಸ್ಥಳೀಯ ನೋಂದಣಿ ಅಧಿಕಾರಿಗಳ ಶಾಸನಬದ್ಧ ಅಧಿಕಾರವನ್ನೇ ಕಸಿದುಕೊಳ್ಳುತ್ತಿದೆ ಎಂಬ ತೀವ್ರ ಕಳವಳದ ಬೆನ್ನಲ್ಲೇ, ಭಾರತೀಯ ಚುನಾವಣಾ ಆಯೋಗವು ತನ್ನ 'ಇಸಿಐನೆಟ್' (ECINet)...

ಮಸೀದಿಯಲ್ಲಿ ಚುಂಬಿಸಿದ್ದಕ್ಕೆ ಮರಣದಂಡನೆ? ಸೌದಿ ಅಮಾನವೀಯ ತೀರ್ಪಿಗೆ ತೀವ್ರ ಆಕ್ರೋಶ

ಮುಸ್ಲಿಂ ಸಮುದಾಯದ ಪವಿತ್ರ ನಗರವಾದ ಮೆಕ್ಕಾದ ಮಸೀದಿಯೊಂದರಲ್ಲಿ ಅನೈತಿಕ ಕೃತ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಸೌದಿ ಅರೇಬಿಯಾ ಇಬ್ಬರು ಬಾಂಗ್ಲಾದೇಶಿ ಪ್ರಜೆಗಳಿಗೆ ಮರಣದಂಡನೆ ವಿಧಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಮರಣದಂಡನೆಗಳು...