Homeಕರ್ನಾಟಕ́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!': ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ...

́ನಿಮ್ಮ ದೀಪಾವಳಿ ವೀಕೆಂಡ್ ಹಾಳುಮಾಡಲ್ಲ, ಸೋಮವಾರ ಉತ್ತರ ಕೊಡ್ತೀವಿ!’: ಎಥನಾಲ್ ಮಿಶ್ರಣ ಸ್ಪಷ್ಟೀಕರಣ ನೀಡಿದ ತೈಲ ಸಂಸ್ಥೆಗಳಿಗೆ ಸಚಿವ ರಿಜ್ವಾನ್ ಅರ್ಷಾದ್ ಟಾಂಗ್!

- Advertisement -
- Advertisement -

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20 ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು ಶೇಕಡ 31.2 ರಷ್ಟು ಹೆಚ್ಚಿರುವುದು ದಾಖಲಾಗಿದೆ ಎಂದು ಹೇಳಿದೆ. ಈ ಗಂಭೀರ ಆರೋಪ ಹಾಗೂ ಅದಕ್ಕೆ ಕೇಂದ್ರದ ತೈಲ ಕಂಪನಿಗಳು ನೀಡಿದ ಸರಣಿ ಸ್ಪಷ್ಟೀಕರಣಗಳ ನಡುವೆ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷಾದ್ ತೈಲ ಸಂಸ್ಥೆಗಳಿಗೆ ಹರಿತವಾದ ಪ್ರತ್ಯುತ್ತರ ನೀಡಿದ್ದಾರೆ. ತೈಲ ಸಂಸ್ಥೆಗಳ ‘X’ (ಟ್ವಿಟರ್) ಜಂಟಿ ಹೇಳಿಕೆಗಳಿಗೆ ಸೋಷಿಯಲ್ ಮೀಡಿಯಾದಲ್ಲೇ ತಿರುಗೇಟು ನೀಡಿರುವ ಸಚಿವರು, “ನಿಮ್ಮ ಕಟ್-ಕಾಪಿ-ಪೇಸ್ಟ್ ಉತ್ತರಗಳನ್ನು ನಾವು ಗಮನಿಸಿದ್ದೇವೆ. ನಿಮ್ಮ ದೀಪಾವಳಿ ಹಬ್ಬದ ಸಂಭ್ರಮವನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ, ಸೋಮವಾರ ಸಂಪೂರ್ಣ ದೇಶಕ್ಕೆ ಸಾಕ್ಷಿ ಸಮೇತ ಸೂಕ್ತ ಉತ್ತರ ನೀಡುತ್ತೇನೆ” ಎಂದು ಟಾಂಗ್ ನೀಡಿದ್ದಾರೆ.

ಕಿಡಿ ಹೊತ್ತಿಸಿದ ಸಚಿವರ ಸ್ಫೋಟಕ ವರದಿ:

ಈ ಇಡೀ ವಿವಾದದ ಆರಂಭವಾಗಿದ್ದು ಶುಕ್ರವಾರ. ರಾಜ್ಯದ 7 ಜಿಲ್ಲೆಗಳ 63 ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಇಂಧನ ಮಾದರಿಗಳನ್ನು NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ತಪಾಸಣೆಗೆ ಒಳಪಡಿಸಿದಾಗ, ನಿಗದಿತ 20 ಪ್ರತಿಶತಕ್ಕಿಂತ (E20) ಭಾರಿ ಪ್ರಮಾಣದ ಎಥನಾಲ್ ಇರುವುದು ಪತ್ತೆಯಾಗಿತ್ತು. ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ ಸಂಗ್ರಹಿಸಿದ ಪೆಟ್ರೋಲ್ ಮಾದರಿಗಳಲ್ಲಿ HPCL ಪೆಟ್ರೋಲ್‌ನಲ್ಲಿ ಗರಿಷ್ಠ ಶೇ. 31.25 ರಷ್ಟು ಹಾಗೂ IOCL ಮಾದರಿಗಳಲ್ಲಿ ಶೇ. 30.5 ಕ್ಕೂ ಹೆಚ್ಚು ಎಥನಾಲ್ ಪತ್ತೆಯಾಗಿದ್ದು, ನಿಯಮಿತ 20 ಪ್ರತಿಶತಕ್ಕಿಂತ ಭಾರಿ ಪ್ರಮಾಣದ ಎಥನಾಲ್ ಬೆರೆಸಿರುವುದು ಲ್ಯಾಬ್ ಪರೀಕ್ಷೆಯಲ್ಲಿ ದೃಢಪಟ್ಟಿತ್ತು…‌ ಇದರಿಂದ ಸಾರ್ವಜನಿಕರ ವಾಹನಗಳ ಎಂಜಿನ್‌ಗಳು ಹಾಳಾಗುತ್ತಿವೆ ಮತ್ತು ಇದು ಭಾರಿ ಪ್ರಮಾಣದ ಗ್ರಾಹಕರ ವಂಚನೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಜ್ವಾನ್ ಅರ್ಷಾದ್ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಪ್ರಕಟಣಣೆ ಹೊರಡಿಸಿದ್ದರು.

ತೈಲ ಸಂಸ್ಥೆಗಳಿಂದ ಒಂದೇ ಶೈಲಿಯ ಸರಣಿ ಸಮಜಾಯಿಷಿ:

ಕರ್ನಾಟಕ ಸರ್ಕಾರದ ಆರೋಪವನ್ನು ನಿರಾಕರಿಸಿದ HPCL, “ಕರ್ನಾಟಕ ಸರ್ಕಾರ ನಡೆಸಿದೆ ಎನ್ನಲಾದ ಪರೀಕ್ಷೆಗಳು ನಿಯಮಿತ ಬಿಐಎಸ್ (BIS – IS 17021) ಮಾನದಂಡಗಳ ಪ್ರಕಾರ ನಡೆದಿಲ್ಲ. ನಮ್ಮ ಪರೀಕ್ಷೆ ಪ್ರಕಾರ ಕರ್ನಾಟಕದ 56 ಮಾದರಿಗಳು ಸೇರಿದಂತೆ 27 ರಾಜ್ಯಗಳ 893 ಮಾದರಿಗಳಲ್ಲೂ ಎಥನಾಲ್ ಪ್ರಮಾಣ ನಿಗದಿತ ಶೇಕಡಾ 19 ರಿಂದ 21 ರಷ್ಟು ಮಿತಿಯಲ್ಲೇ ಇದೆ” ಎಂದು ಪ್ರತಿಪಾದಿಸಿದೆ. ಸ್ವತಂತ್ರ ಹಾಗೂ ವೈಜ್ಞಾನಿಕವಾಗಿ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರದೊಂದಿಗೆ ಪಾರದರ್ಶಕ ಜಂಟಿ ಪರೀಕ್ಷೆ ನಡೆಸಲು ಸಿದ್ಧ ಎಂದಿದೆ.

ಇತ್ತ IOCL ಕೂಡ ವಿಸ್ತೃತ ಹೇಳಿಕೆ ನೀಡಿ, “ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ಮಿತಿಮೀರಿದ ಎಥನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಇತ್ತೀಚಿನ ಆರೋಪಗಳು ನಿಗದಿತ ಪ್ರಕ್ರಿಯೆಗಳ ಮೂಲಕ ನಡೆಸಿದ ಪರೀಕ್ಷೆಗಳಿಂದ ದೃಢಪಟ್ಟಿಲ್ಲ. ದೇಶಾದ್ಯಂತ ಪರೀಕ್ಷಿಸಲಾದ 893 ಮಾದರಿಗಳೂ ನಿಗದಿತ ಶೇ. 19-21 ರಷ್ಟು ಮಿತಿಯಲ್ಲೇ ಇವೆ. ಸತ್ಯಾಸತ್ಯತೆಯನ್ನು ಸ್ಥಾಪಿಸಲು HPCL ಮತ್ತು BPCL ಜೊತೆಗೂಡಿ ರಾಜ್ಯ ಸರ್ಕಾರದೊಂದಿಗೆ ಜಂಟಿ ಹಾಗೂ ಪಾರದರ್ಶಕ ತಪಾಸಣೆ ನಡೆಸಲು ಕೋರಿದ್ದೇವೆ. ಇಂಧನದ ಗುಣಮಟ್ಟ ಹಾಗೂ ಗ್ರಾಹಕರ ನಂಬಿಕೆಯ ವಿಷಯದಲ್ಲಿ ನಾವು ಸ್ಥಿರವಾಗಿದ್ದು, ಗ್ರಾಹಕರು ಅಧಿಕೃತ ಮೂಲಗಳ ಮಾಹಿತಿಯನ್ನಷ್ಟೇ ನಂಬಬೇಕು” ಎಂದು ಮನವಿ ಮಾಡಿದೆ.

BPCL ಸಹ ಇದೇ ವಿಚಾರವನ್ನು ಪುನರುಚ್ಚರಿಸಿದ್ದು, “E20 ಪೆಟ್ರೋಲ್‌ನಲ್ಲಿ ಶೇ. 26-31 ರಷ್ಟು ಎಥನಾಲ್ ಇದೆ ಎಂಬ ಹಕ್ಕುಗಳು ನಿಗದಿತ ಪರೀಕ್ಷೆಗಳನ್ನು ಆಧರಿಸಿಲ್ಲ. ಕರ್ನಾಟಕದ 56 ಮಾದರಿಗಳು ಸೇರಿದಂತೆ ಎಲ್ಲಾ 893 ಮಾದರಿಗಳು ನಿಗದಿತ ಮಿತಿಯಲ್ಲಿದ್ದವು. ನಾವು ರಾಜ್ಯ ಸರ್ಕಾರದೊಂದಿಗೆ ಜಂಟಿ ಪಾರದರ್ಶಕ ಪರೀಕ್ಷೆಗೆ ಕೋರಿದ್ದೇವೆ. ಗ್ರಾಹಕರು ಯಾವುದೇ ಪರಿಶೀಲಿಸದ ಅಪಪ್ರಚಾರಗಳನ್ನು ನಂಬಬೇಡಿ, ಅಧಿಕೃತ ಮಾಹಿತಿಗಳನ್ನಷ್ಟೇ ನಂಬಿ” ಎಂದು ತಿಳಿಸಿದೆ.

‘ನಾವು ಸರ್ಕಾರ, ಯಾರೋ ಅಪರಿಚಿತರಲ್ಲ!’

ಇನ್ನೂ ಈ ಮೂರೂ ತೈಲ ಸಂಸ್ಥೆಗಳು ಹೊರಡಿಸಿರುವ ಸಿದ್ಧಸೂತ್ರ ಎಂಬಂತಿರುವ ಸ್ಪಷ್ಟೀಕರಣಗಳನ್ನು ಕಂಡು ತೀವ್ರವಾಗಿ ಆಕ್ಷೇಪಿಸಿರುವ ಸಚಿವ ರಿಜ್ವಾನ್ ಅರ್ಷಾದ್, ತೈಲ ಕಂಪನಿಗಳನ್ನು ತೀವ್ರ ವ್ಯಂಗ್ಯದಿಂದ ತರಾಟೆಗೆ ತೆಗೆದುಕೊಂಡಿದ್ದಾರೆ. “ನಿಮ್ಮ ಕಟ್-ಕಾಪಿ-ಪೇಸ್ಟ್ ಉತ್ತರವನ್ನು ನಾವು ಗಮನಿಸಿದ್ದೇವೆ. ನಿಮ್ಮ ದೀಪಾವಳಿ ಹಬ್ಬದ ವೀಕೆಂಡ್ ಸಂಭ್ರಮವನ್ನು ನಾನು ಹಾಳುಮಾಡಲು ಬಯಸುವುದಿಲ್ಲ. ಸೋಮವಾರದಂದು ಇಡೀ ದೇಶದ ಮುಂದೆ ಎಲ್ಲಾ ವಿವರವಾದ ಸಾಕ್ಷ್ಯಾಧಾರಿತ ವರದಿಯನ್ನು ನೀಡುತ್ತೇನೆ. ಅಲ್ಲಿಯವರೆಗೆ ಹಬ್ಬದ ರಜೆಯನ್ನು ಆನಂದಿಸಿ, ಹ್ಯಾಪಿ ದೀಪಾವಳಿ!” ಎಂದು ತಿವಿದಿದ್ದಾರೆ.

ಅಷ್ಟೇ ಅಲ್ಲದೆ ಪೋಸ್ಟ್‌ನ ಕೊನೆಯಲ್ಲಿ ಸಾಲೊಂದನ್ನು ಬರೆದಿರುವ ಸಚಿವರು, “P.S.: ನಿಮ್ಮ ಮಾಹಿತಿಗಾಗಿ ಇರಲಿ, ನಾವು ಅಧಿಕೃತ ಮೂಲವಾದ ‘ಸರ್ಕಾರ’, ಮೂಲಸೌಕರ್ಯವಿಲ್ಲದ ಯಾರೋ ಅಪರಿಚಿತ ಸಂಸ್ಥೆಯಲ್ಲ” ಎಂದು ತೈಲ ಕಂಪನಿಗಳಿಗೆ ಎಚ್ಚರಿಕೆಯ ಜೊತೆಗೆ ಪ್ರತ್ಯುತ್ತರ ನೀಡಿದ್ದಾರೆ. ಸೋಮವಾರ ರಾಜ್ಯ ಸರ್ಕಾರ ಬಿಡುಗಡೆ ಮಾಡಲಿರುವ ಈ ಮಹತ್ವದ ವರದಿ ಈಗ ಇಡೀ ದೇಶದ ತೈಲ ವಲಯದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯೂಟರ್ನ್ ಹೊಡೆದ ಚುನಾವಣಾ ಆಯೋಗ : SIR ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವು

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧದ ಹೋರಾಟದಲ್ಲಿ ಜನ ಸಂಘಟನೆಗಳಿಗೆ ಮತ್ತೊಂದು ಮಹತ್ವದ ಗೆಲುವಾಗಿದೆ. ಎಸ್‌ಐಆರ್ ವೇಳೆ ಡಿಲೀಟ್ ಪಟ್ಟಿಗೆ (ಎಎಸ್‌ಡಿಡಿ) ಬಿದ್ದ ಅರ್ಹ ಮತದಾರರು ತಮ್ಮ ಹಕ್ಕು ಮರಳಿ...

‘ಪ್ರಧಾನಿ ಮೋದಿಯನ್ನು ಗೊಂದಲಕ್ಕೀಡುಮಾಡಬೇಡಿ, ನನ್ನೊಂದಿಗೆ ಬಹಿರಂಗ ಚರ್ಚೆಗೆ ಒಪ್ಪಿಸಿ!’: ಅಮಿತ್ ಷಾಗೆ ರಾಹುಲ್ ಗಾಂಧಿ ಆಗ್ರಹ!

ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೊಂದಲಕ್ಕೀಡುಮಾಡುವ ಬದಲು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಹಾಗೂ ಇವಿಎಂ ಕುರಿತು ತಮ್ಮೊಂದಿಗೆ ಬಹಿರಂಗ ಚರ್ಚೆಗೆ...

‘ಅಮೆರಿಕ ಅಧ್ಯಕ್ಷರ ಹತ್ಯೆ ಮಾಡುವಂತೆ ಧ್ವನಿ ಕೇಳಿಸುತ್ತಿತ್ತು’: ವೈಟ್ ಹೌಸ್ ಬಳಿ ಮಾರಕಾಸ್ತ್ರಗಳಿದ್ದ ಕಾರಿನೊಂದಿಗೆ ವೆನಿಜುವೆಲ್ಲಾ ಪ್ರಜೆ ಬಂಧನ!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 26 ವರ್ಷದ ರೋನಿ ಯೋರ್ಡ್ರಿಕ್ಸ್ ಗುವಾನಿಪಾ ಚ್ರಿನೋಸ್ ಎಂಬ ವೆನಿಜುಎಲ್ಲಾ ಮೂಲದ ವಲಸಿಗನನ್ನು ಯುಎಸ್ ಸೀಕ್ರೆಟ್ ಸರ್ವಿಸ್...

‘E20 turned into 420’ : ಕರ್ನಾಟಕ ಸರ್ಕಾರದ ಪರಿಶೀಲನೆಯಲ್ಲಿ ಬಯಲಾದ ‘ಪೆಟ್ರೋಲ್ ಚೋರಿ’; ಕೇಂದ್ರದ ವಿರುದ್ಧ ಜನಾಕ್ರೋಶ

E20 ಹೆಸರಿನಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್‌ನಲ್ಲಿ ಶೇಕಡ 30ಕ್ಕಿಂತ (31.2) ಅಧಿಕ ಎಥೆನಾಲ್ ಇರುವುದು ಕರ್ನಾಟಕ ಸರ್ಕಾರದ ನಡೆಸಿದ ಪರಿಶೀಲನೆಯಲ್ಲಿ ಬಟಾಬಯಲಾಗಿದ್ದು, ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ದೇಶದಾದ್ಯಂತ...

ಜೆಡಿಎಸ್ ಸಮರ್ಥನೆ ಬಿಜೆಪಿಯ ರಾಜಕೀಯ ದಿವಾಳಿತನ ತೋರಿಸುತ್ತದೆ : ಆರ್. ಅಶೋಕ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು!

ಕರ್ನಾಟಕ ರಾಜಕೀಯದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಪ್ರತಿಪಕ್ಷ ನಾಯಕ ಆರ್. ಅಶೋಕ್ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಾಕ್ಸಮರ ತೀವ್ರಗೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಆರ್. ಅಶೋಕ್ ಮಾಡಿದ ಕಟು...

ಪೆಟ್ರೋಲ್‌ನಲ್ಲಿ ಶೇ.31.2ರಷ್ಟು ಎಥೆನಾಲ್ ಪತ್ತೆ : ಕೇಂದ್ರದಿಂದ ಸ್ಪಷ್ಟನೆ ಕೋರಿದ ಕರ್ನಾಟಕ ಸರ್ಕಾರ

ಕರ್ನಾಟಕದಲ್ಲಿ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು ಮಾರಾಟ ಮಾಡುತ್ತಿರುವ ಪೆಟ್ರೋಲ್‌ನಲ್ಲಿ ನಿಗದಿಪಡಿಸಿದ ಶೇಕಡ 20ಕ್ಕಿಂತ ಹೆಚ್ಚು ಪ್ರಮಾಣದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಆರೋಪಿಸಿದ್ದು, ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಇದರ ಮಟ್ಟವು...

ಸಿಜೆಐ ಸೂರ್ಯ ಕಾಂತ್ ವಿರುದ್ಧದ ಪೋಸ್ಟ್ ಪ್ರಕರಣ: ಕೇರಳ ಕಾಂಗ್ರೆಸ್ ನಾಯಕರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದ ಆಕ್ಷೇಪಾರ್ಹ ಪೋಸ್ಟ್‌ಗೆ ಸಂಬಂಧಿಸಿದಂತೆ, ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಸುಪ್ರೀಂ ಕೋರ್ಟ್...

ಗೃಹಲಕ್ಷ್ಮಿ ಯೋಜನೆಯಡಿ ₹2 ಸಾವಿರ ಪಡೆಯುವುದು ಫಲಾನುಭವಿಗಳ ಹಕ್ಕಲ್ಲ : ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸ್ಪಷ್ಟನೆ

'ಗೃಹಲಕ್ಷ್ಮಿ' ಒಂದು ಕಲ್ಯಾಣ (ಪರೋಪಕಾರಿ) ಯೋಜನೆಯಾಗಿದ್ದು, ಇದರ ಅನುಷ್ಠಾನವು ಹೆಚ್ಚಾಗಿ ಆಡಳಿತಾತ್ಮಕ ಅಗತ್ಯತೆಗಳನ್ನು ಅವಲಂಬಿಸಿರುತ್ತದೆ. ಹಾಗಾಗಿ, ಈ ಯೋಜನೆಯ ಫಲಾನುಭವಿಗಳು ಇದನ್ನು ತಮ್ಮ ಹಕ್ಕು ಎಂದು ಪ್ರತಿಪಾದಿಸಲು ಸಾಧ್ಯವಿಲ್ಲ ಮತ್ತು ನ್ಯಾಯಾಂಗದ ಹಸ್ತಕ್ಷೇಪದ...

ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!

ಕೇಂದ್ರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಇನ್ಮುಂದೆ ಆಧಾರ್ ಕಾರ್ಡ್ ಬದಲು 'ವೋಟರ್ ಐಡಿ' (ಮತದಾರರ ಗುರುತಿನ ಚೀಟಿ) ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಆಧಾರವಾಗಿ ಬಳಸಲಾಗುವುದು...

AMU ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾದ ನಶ್ರಾ ನಯೀಮ್ : ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆ ಆಯ್ಕೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (AMUSU) 105 ವರ್ಷಗಳ ಇತಿಹಾಸದಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಾನೂನು ವಿದ್ಯಾರ್ಥಿನಿ ನಶ್ರಾ ನಯೀಮ್ ಪಾತ್ರರಾಗಿದ್ದಾರೆ. ಶುಕ್ರವಾರ (ನ.6) ಪ್ರಕಟಗೊಂಡ ಚುನಾವಣೆಯ...