Homeಮುಖಪುಟಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ 'ಆಧಾರ್' ಬದಲು 'ವೋಟರ್ ಐಡಿ'?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್...

ಇನ್ಮುಂದೆ ಸರ್ಕಾರಿ ಯೋಜನೆಗಳ ಅರ್ಹತೆಗೆ ‘ಆಧಾರ್’ ಬದಲು ‘ವೋಟರ್ ಐಡಿ’?: ಕೇಂದ್ರ ಸಚಿವರ ಹೇಳಿಕೆಗೆ ರಾಹುಲ್ ಗಾಂಧಿ ತೀವ್ರ ಆಕ್ರೋಶ!

- Advertisement -
- Advertisement -

ಕೇಂದ್ರ ಸರ್ಕಾರಿ ಕಲ್ಯಾಣ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಹಾಗೂ ಪಾವತಿ ಪ್ರಕ್ರಿಯೆಗಳನ್ನು ನಡೆಸಲು ಇನ್ಮುಂದೆ ಆಧಾರ್ ಕಾರ್ಡ್ ಬದಲು ‘ವೋಟರ್ ಐಡಿ’ (ಮತದಾರರ ಗುರುತಿನ ಚೀಟಿ) ಹಾಗೂ ಬಯೋಮೆಟ್ರಿಕ್ ಪರಿಶೀಲನೆಯನ್ನು ಆಧಾರವಾಗಿ ಬಳಸಲಾಗುವುದು ಎಂಬ ಕೇಂದ್ರ ಸಚಿವರ ಹೇಳಿಕೆ ಈಗ ದೇಶಾದ್ಯಂತ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಸರ್ಕಾರದ ಈ ಯೋಜನೆಯು ಪ್ರಜಾಪ್ರಭುತ್ವದ ಮೂಲಭೂತ ಆಶಯಕ್ಕೆ ಹಾಗೂ ಬಡಜನರ ಜೀವನಾಧಾರಿತ ಹಕ್ಕುಗಳಿಗೆ ನೇರ ಬೆದರಿಕೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಇಡೀ ವಿವಾದದ ಕಿಡಿ ಹೊತ್ತಿಕೊಂಡಿದ್ದು ನವದೆಹಲಿಯಲ್ಲಿ ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ಆಯೋಜಿಸಿದ್ದ ‘ಪೀಪಲ್ಸ್ ಪ್ಲಾನ್ ಕ್ಯಾಂಪೇನ್’ ರಾಷ್ಟ್ರೀಯ ಕಾರ್ಯಾಗಾರದಲ್ಲಿ. ಕಾರ್ಯಾಗಾರದಲ್ಲಿ ಮಾತನಾಡಿದ್ದ ಕೇಂದ್ರ ಪಂಚಾಯತ್ ರಾಜ್ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್), ಪ್ರಸ್ತುತ ಸಾರ್ವಜನಿಕ ವ್ಯವಸ್ಥೆಯಲ್ಲಿ ಆಧಾರ್ ಕಾರ್ಡ್‌ಗಳನ್ನು ಸುಲಭವಾಗಿ ಸೃಷ್ಟಿಸಲು ಹಾಗೂ ನಕಲಿ ಮಾಡಲು ಸಾಧ್ಯವಾಗುತ್ತಿರುವುದರಿಂದ ದುರುಪಯೋಗ ತಡೆಯಲು ಈ ಹೊಸ ಮಾರ್ಗವನ್ನು ಕಂಡುಕೊಳ್ಳಲಾಗುತ್ತಿದೆ ಎಂದು ಪ್ರತಿಪಾದಿಸಿದ್ದರು. ಪಂಚಾಯತ್ ರಾಜ್ ಹಾಗೂ ಇತರ ಸರ್ಕಾರಿ ಕಲ್ಯಾಣ ಯೋಜನೆಗಳ ಪಾವತಿಯಲ್ಲಿ ಪಾರದರ್ಶಕತೆ ತರಲು ಆಧಾರ್ ಬದಲು ಫಲಾನುಭವಿಗಳ ಬಯೋಮೆಟ್ರಿಕ್ ವಿವರಗಳು ಹಾಗೂ ಮತದಾರರ ಗುರುತಿನ ಚೀಟಿಯ (EPIC) ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸುವ ಯೋಜನೆಯನ್ನು ಸರ್ಕಾರ ಹೊಂದಲಿದೆ ಎಂದು ಅವರು ಹೇಳಿಕೆ ನೀಡಿದ್ದರು.

ಸಚಿವರ ಈ ಹೇಳಿಕೆ ಹೊರಬೀಳುತ್ತಿದ್ದಂತೆಯೇ ತೀವ್ರವಾಗಿ ಖಂಡಿಸಿದ ರಾಹುಲ್ ಗಾಂಧಿ, “ಇದು ಅತ್ಯಂತ ದುಷ್ಟ ಹಾಗೂ ಅಪಾಯಕಾರಿ ಸಂಚು. ಇದನ್ನು ಅರ್ಥಮಾಡಿಕೊಳ್ಳಲು ಒಂದು ಕ್ಷಣ ಸಮಯ ಕೊಡಿ” ಎಂದು ಜನರಲ್ಲಿ ಮನವಿ ಮಾಡುತ್ತಾ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ದೇಶದಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಹೆಸರಿನಲ್ಲಿ ಈಗಾಗಲೇ ಲಕ್ಷಾಂತರ ನಿಜವಾದ ಹಾಗೂ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ರಹಸ್ಯವಾಗಿ ತೆಗೆದುಹಾಕಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ಕಲ್ಯಾಣ ಯೋಜನೆಗಳ ಅರ್ಹತೆಯನ್ನು ಅದೇ ಮತದಾರರ ಪಟ್ಟಿಗೆ ಲಿಂಕ್ ಮಾಡಿದರೆ, ಪಟ್ಟಿಯಿಂದ ಹೊರಬಿದ್ದ ಲಕ್ಷಾಂತರ ಬಡವರು ಸ್ವಯಂಚಾಲಿತವಾಗಿ ರೇಷನ್, ಪಿಂಚಣಿ, ಉದ್ಯೋಗ ಖಾತರಿ (MGNREGA) ಹಾಗೂ ವಸತಿಯಂತಹ ಮೂಲಭೂತ ಸರ್ಕಾರಿ ಸೌಲಭ್ಯಗಳಿಂದಲೂ ವಂಚಿತರಾಗುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ.

ಮತದಾನ ಮಾಡುವುದು ಪ್ರಜೆಗಳ ಪವಿತ್ರ ಹಕ್ಕೇ ಹೊರತು ಸರ್ಕಾರಿ ಸೌಲಭ್ಯ ಪಡೆಯಲು ಇರುವ ಷರತ್ತಲ್ಲ ಎಂದಿರುವ ರಾಹುಲ್ ಗಾಂಧಿ, “ಹೆಸರು ಕಟ್ ಆದರೆ – ಮತ ಹೋಯಿತು. ಮತ ಹೋಯಿತು ಎಂದರೆ – ಹಕ್ಕುಗಳೇ ಹೋದವು. ಬಡವನೊಬ್ಬನ ಪಿಂಚಣಿಯನ್ನು ಆತನ ವೋಟರ್ ಕಾರ್ಡ್‌ಗೆ ಒತ್ತೆಯಾಳಾಗಿ ಇಡಲು ಸಾಧ್ಯವಿಲ್ಲ” ಜನಪ್ರತಿನಿಧಿಗಳನ್ನು ಪ್ರಜೆಗಳು ಆಯ್ಕೆ ಮಾಡುವ ವ್ಯವಸ್ಥೆಯನ್ನು ಬದಲಾಯಿಸಿ, ತನಗೆ ಬೇಕಾದ ಪ್ರಜೆಗಳನ್ನಷ್ಟೇ ಸರ್ಕಾರ ಆಯ್ಕೆ ಮಾಡಿಕೊಳ್ಳುವಂತಹ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು, “ಇದು ಕೇವಲ ಮತಗಳ ಕಳವಲ್ಲ – ಇದು ನಿಮ್ಮ ಹಕ್ಕುಗಳ ಕಳವು. ನಾವು ಇದನ್ನು ಎಂದಿಗೂ ನಡೆಯಲು ಬಿಡುವುದಿಲ್ಲ” ಎಂದು ಕೇಂದ್ರ ಬಿಜೆಪಿ ಸರ್ಕಾರಕ್ಕೆ ಎಚ್ಚರಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹಿರಿಯ ನಾಯಕ ಜೈರಾಮ್ ರಮೇಶ್ ಹಾಗೂ ಸಿಪಿಐ(ಎಂ) ಸೇರಿದಂತೆ ಇತರ ವಿಪಕ್ಷ ನಾಯಕರೂ ಸಹ ಧ್ವನಿ ಎತ್ತಿದ್ದು, “ಆಧಾರ್ ಬದಲಿಗೆ ಎಸ್‌ಐಆರ್ (SIR) ಆಧಾರಿತ ಮತದಾರರ ಪಟ್ಟಿಯನ್ನು ಕಲ್ಯಾಣ ಯೋಜನೆಗಳಿಗೆ ಜೋಡಿಸುವುದು ಬಡವರನ್ನು ಯೋಜನೆಗಳಿಂದ ಹೊರಗಿಡುವ ಗಂಭೀರ ಯತ್ನ. ‘ವೋಟ್ ಕಳ್ಳತನ’ ಎನ್ನುವುದು ಕೇವಲ ಟ್ರೇಲರ್, ನಿಜವಾದ ಚಿತ್ರವೇ ಹಕ್ಕುಗಳ ಕಳ್ಳತನ” ಎಂದು ಖಂಡಿಸಿದ್ದಾರೆ. ಕಲ್ಯಾಣ ಯೋಜನೆಗಳು ಮತ್ತು ಮತದಾರರ ಪಟ್ಟಿಯನ್ನು ಒಂದಕ್ಕೊಂದು ಬೆಸೆಯುವ ಈ ಪ್ರಸ್ತಾವನೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ತೀವ್ರ ರಾಜಕೀಯ ಕಾಳಗಕ್ಕೆ ನಾಂದಿ ಹಾಡುವ ಲಕ್ಷಣಗಳು ಎದ್ದು ಕಾಣುತ್ತಿವೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

AMU ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆಯಾದ ನಶ್ರಾ ನಯೀಮ್ : ಮೊದಲ ಬಾರಿಗೆ ಉನ್ನತ ಹುದ್ದೆಗೆ ಮಹಿಳೆ ಆಯ್ಕೆ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ (AMUSU) 105 ವರ್ಷಗಳ ಇತಿಹಾಸದಲ್ಲೇ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕಾನೂನು ವಿದ್ಯಾರ್ಥಿನಿ ನಶ್ರಾ ನಯೀಮ್ ಪಾತ್ರರಾಗಿದ್ದಾರೆ. ಶುಕ್ರವಾರ (ನ.6) ಪ್ರಕಟಗೊಂಡ ಚುನಾವಣೆಯ...

ಸ್ಥಳಾಂತರಗೊಂಡ ಮತದಾರರು ಫಾರಂ-6 ಅಥವಾ ಎಸ್‌ಐಆರ್ ಎನ್ಯುಮರೇಷನ್ ಫಾರಂ ಸಲ್ಲಿಸಿದರೆ ಸುಳ್ಳು ಘೋಷಣೆ ಮಾಡಿದಂತಾಗುತ್ತದೆ, ಕಾನೂನು ಕ್ರಮ ಎದುರಿಸಬೇಕಾದೀತು : ಬಾಂಬೆ ಹೈಕೋರ್ಟ್

ವಾಸಸ್ಥಳ ಬದಲಾಯಿಸಿದ ಅಥವಾ ಸ್ಥಳಾಂತರಗೊಂಡ ಮತದಾರರು ಕೇವಲ 'ಫಾರಂ-8' ಅನ್ನು ಮಾತ್ರ ಭರ್ತಿ ಮಾಡಬಹುದು; ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಸಂದರ್ಭದಲ್ಲಿ ಮೊದಲೇ ಭರ್ತಿ ಮಾಡಲಾದ ಗಣತಿ ನಮೂನೆ (enumeration form)...

ವಿಳಾಸ ಬದಲಿಸಿದ್ದಕ್ಕೆ ಫಾರಂ-8 ಸಲ್ಲಿಸಿದ್ದರೂ ಒಂದೇ ಕುಟುಂಬದ 6 ಮಂದಿಯ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ : ಮರುಸೇರ್ಪಡೆಗೆ ಬಾಂಬೆ ಹೈಕೋರ್ಟ್ ಆದೇಶ

ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಅಂತಿಮ ಮತದಾರರ ಪಟ್ಟಿಯಿಂದ ಕೈಬಿಡಲಾಗಿದ್ದ ಒಂದೇ ಕುಟುಂಬದ ಆರು ಸದಸ್ಯರ ಹೆಸರುಗಳನ್ನು ಮರುಸೇರ್ಪಡೆಗೊಳಿಸುವಂತೆ ಬಾಂಬೆ ಹೈಕೋರ್ಟ್ ಗುರುವಾರ (ನ.5) ಭಾರತೀಯ ಚುನಾವಣಾ...

ಪ್ರಧಾನಿಗೆ ಪತ್ರ ಬರೆಯಿರಿ, ಸಂಸತ್ತಿನಲ್ಲಿ ಎಸ್‌ಐಆರ್ ಕುರಿತು ಚರ್ಚಿಸಿ: ರಾಹುಲ್‌ಗೆ ಅಮಿತ್ ಶಾ ಸವಾಲು

ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಚರ್ಚೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸ್ವೀಕರಿಸಿದ್ದಾರೆ. ಸಂಸತ್ತಿನಲ್ಲಿ ಚರ್ಚಿಸಲು ಗಂಭೀರವಾದ ವಿಷಯಗಳನ್ನು ಎತ್ತಿಕೊಳ್ಳುವಂತೆ ವಿಪಕ್ಷ ನಾಯಕರಿಗೆ ಅವರು ಸಲಹೆ...

ಫಾರಂ-7 ದುರುಪಯೋಗದ ವಿರುದ್ಧ ಪೊಲೀಸ್ ತನಿಖೆ : ಸಿಎಂ ಡಿ.ಕೆ ಶಿವಕುಮಾರ್

ಮತಗಳ್ಳತನಕ್ಕೆ ಕುಮ್ಮಕ್ಕು ನೀಡಿದ ಹಾಗೂ ಫಾರಂ-7ನ್ನು ದುರುಪಯೋಗಪಡಿಸಿಕೊಂಡವರ ವಿರುದ್ಧ ಪೊಲೀಸ್ ತನಿಖೆ ನಡೆಸಲು ನಮ್ಮ ಸರ್ಕಾರ ಮುಂದಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂಡಿಯಾ ಒಕ್ಕೂಟ...

ಸಿಜೆಪಿ ನಾಯಕರಾದ ಸೌರವ್ ದಾಸ್ – ಅಶುತೋಷ್ ರಾಂಕಾ ವಿಚಾರಣೆ ನಡೆಸಿದ ಕ್ರೈಂ ಬ್ರಾಂಚ್

'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರು, ಗುರುವಾರ (ನ.5) ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ ಮುಂದೆ ಹಾಜರಾದರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ...

ಬೆಂಗಳೂರು : ಇಂಡಿಯಾ ಒಕ್ಕೂಟದಿಂದ ಬೃಹತ್ ‘ಮತ ಉಳಿಸಿ, ದೇಶ ಉಳಿಸಿ’ ಪ್ರತಿಭಟನೆ

'ಮತ ಉಳಿಸಿ, ದೇಶ ಉಳಿಸಿ' ಎಂಬ ಶಿರ್ಷಿಕೆಯಡಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ ಒಕ್ಕೂಟ'...

ಉದ್ಯೋಗಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ, ನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಅರ್ಹತೆ ಮತ್ತು ಪ್ರತಿಭೆಯ ಆಧಾರದಲ್ಲಿ ನೇಮಕಾತಿ ಮಾಡುವುದರ ಜೊತೆಗೆ, ಕರ್ನಾಟಕದ ಖಾಸಗಿ ಕಂಪನಿಗಳು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನ್ಯಾಯಯುತ ಪಾಲು ನೀಡಬೇಕು. ಪ್ರತಿಭಾವಂತ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ದೊರೆಯಬೇಕು ಎಂದು ಮುಖ್ಯಮಂತ್ರಿ ಡಿ.ಕೆ....

‘ನೀವು ನಮ್ಮೊಂದಿಗಿದ್ದೀರಾ, ಇಲ್ಲ ನಮ್ಮ ವಿರುದ್ಧ ಇದ್ದೀರಾ’: ಇರಾನ್ ತೈಲ ವ್ಯಾಪಾರಕ್ಕೆ ನೆರವು ಆರೋಪ; ಭಾರತ ಮೂಲದ ದಂಪತಿಗೆ ಅಮೆರಿಕ ನಿರ್ಬಂಧ

ವಾಷಿಂಗ್ಟನ್: ಇರಾನ್‌ನ ತೈಲ ವ್ಯಾಪಾರಕ್ಕೆ ನೆರವು ನೀಡುವ ಮೂಲಕ ಅಮೆರಿಕದ ಆರ್ಥಿಕ ನಿರ್ಬಂಧಗಳನ್ನು ಉಲ್ಲಂಘಿಸಲು ಸಹಕರಿಸಿದ ಆರೋಪದ ಮೇಲೆ ಭಾರತ ಮೂಲದ ದಂಪತಿ ಮತ್ತು ಅವರೊಂದಿಗೆ ಸಂಪರ್ಕ ಹೊಂದಿರುವ ಹಲವು ಕಂಪನಿಗಳ ವಿರುದ್ಧ...

ಆರು ರಾಜ್ಯಗಳು – ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಎಸ್‌ಆರ್’ ಪ್ರಕ್ರಿಯೆ ಘೋಷಿಸಿದ ಚುನಾವಣಾ ಆಯೋಗ

ಅರುಣಾಚಲ ಪ್ರದೇಶ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು, ಮಿಜೋರಾಂ, ಒಡಿಶಾ ಮತ್ತು ಸಿಕ್ಕಿಂಗಳಲ್ಲಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (Special Summary Revision -...