Homeಮುಖಪುಟಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ,...

ಕರ್ನಾಟಕದ ಎಥನಾಲ್ ವಿವಾದದ ಬೆನ್ನಲ್ಲೇ ಎಚ್ಚೆತ್ತ ಕೇರಳ: 4 ಜಿಲ್ಲೆಗಳ 9 ಬಂಕ್‌ಗಳಿಂದ ಸ್ಯಾಂಪಲ್ ಸಂಗ್ರಹ, ಲ್ಯಾಬ್‌ಗೆ ರವಾನೆ!

- Advertisement -
- Advertisement -

ಕರ್ನಾಟಕದ ಪೆಟ್ರೋಲ್ ಬಂಕ್‌ಗಳಲ್ಲಿ ನಿಗದಿತ ಶೇ. 20ರ ಮಿತಿಗಿಂತಲೂ ಅಧಿಕ (ಶೇ. 31.2 ರಷ್ಟು) ಎಥನಾಲ್ ಬೆರೆಸಲಾಗುತ್ತಿದೆ ಎನ್ನುವ ಸಚಿವ ರಿಜ್ವಾನ್ ಆರ್ಷದ್ ಅವರ ಆರೋಪಗಳ ಬೆನ್ನಲ್ಲೇ, ನೆರೆಯ ಕೇರಳ ಸರ್ಕಾರವೂ ಪೆಟ್ರೋಲ್ ಗುಣಮಟ್ಟ ತಪಾಸಣಾ ಕಾರ್ಯಾಚರಣೆಗೆ ಇಳಿದಿದೆ. ಕೇರಳದ ನಾಲ್ಕು ಪ್ರಮುಖ ಜಿಲ್ಲೆಗಳ ಒಟ್ಟು 9 ಪೆಟ್ರೋಲ್ ಬಂಕ್‌ಗಳಿಂದ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕೇರಳದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಅನೂಪ್ ಜೇಕಬ್ ಈ ಕುರಿತು ಅಧಿಕೃತ ಮಾಹಿತಿ ನೀಡಿದ್ದು, ಸಾರ್ವಜನಿಕರಿಂದ ವಾಹನಗಳ ಮೈಲೇಜ್ ಕುಸಿತ ಹಾಗೂ ಇಂಜಿನ್ ಹಾನಿಯ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸ್ಯಾಂಪಲ್ ಸಂಗ್ರಹ ಮತ್ತು ತಪಾಸಣೆ ವಿವರ:

  • ಬಂಕ್‌ಗಳ ವಿವರ: ತಿರುವನಂತಪುರಂ (2), ಎರ್ನಾಕುಲಂ (3), ಕೋಝಿಕ್ಕೋಡ್ (2) ಹಾಗೂ ಕಣ್ಣೂರು (2) ಜಿಲ್ಲೆಗಳ ಒಟ್ಟು 9 ಪ್ರಮುಖ ಪೆಟ್ರೋಲ್ ಬಂಕ್‌ಗಳಿಂದ ಸ್ಯಾಂಪಲ್‌ಗಳನ್ನು ಪಡೆದುಕೊಳ್ಳಲಾಗಿದೆ.
  • ಸಮ್ಮುಖದಲ್ಲಿ ಸಂಗ್ರಹ: ಪ್ರತಿಯೊಂದು ಸ್ಯಾಂಪಲ್ ಅನ್ನು ಆಯಾ ತೈಲ ಕಂಪನಿಗಳ (OMCs) ಪ್ರತಿನಿಧಿಗಳು ಹಾಗೂ ಬಂಕ್‌ಗಳ ಸೇಲ್ಸ್ ಮ್ಯಾನೇಜರ್‌ಗಳ ಸಮ್ಮುಖದಲ್ಲೇ ಅಧಿಕೃತ ನಿಯಮಾವಳಿಗಳ ಪ್ರಕಾರ ಸಂಗ್ರಹಿಸಲಾಗಿದೆ.

ಲ್ಯಾಬ್ ಪರೀಕ್ಷೆಯ ಅಧಿಕೃತ ವರದಿಗಳು ಮುಂದಿನ 10 ದಿನಗಳಲ್ಲಿ ಲಭ್ಯವಾಗಲಿದ್ದು, ಒಂದು ವೇಳೆ ಎಥನಾಲ್ ನಿಯಮ ಉಲ್ಲಂಘನೆ ಕಂಡುಬಂದರೆ ಅಂತಹ ಬಂಕ್‌ಗಳನ್ನು ಸೀಲ್ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ ವಿವಾದದ ಹಿನ್ನೆಲೆ:

ನವೆಂಬರ್ 6 ರಂದು ಕರ್ನಾಟಕ ಸರ್ಕಾರವು NABL ಮಾನ್ಯತೆ ಪಡೆದ ಪರೀಕ್ಷಾಗಾರದ ವರದಿಯನ್ನು ಉಲ್ಲೇಖಿಸಿ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಬಂಕ್‌ಗಳ ಪೆಟ್ರೋಲ್‌ನಲ್ಲಿ ಇಂಡಿಯನ್ ಆಯಿಲ್ ಸ್ಯಾಂಪಲ್‌ನಲ್ಲಿ ಶೇ. 31.2 ಹಾಗೂ ಹೆಚ್‌ಪಿಸಿಎಲ್ ಸ್ಯಾಂಪಲ್‌ನಲ್ಲಿ ಶೇ. 30.5 ಎಥನಾಲ್ ಪತ್ತೆಯಾಗಿದೆ ಎಂದು ಆರೋಪಿಸಿತ್ತು. ಆದರೆ, ತೈಲ ಮಾರುಕಟ್ಟೆ ಕಂಪನಿಗಳಾದ IOCL, BPCL ಹಾಗೂ HPCL ಜಂಟಿ ಹೇಳಿಕೆ ನೀಡಿ ಈ ಆರೋಪವನ್ನು ತಿರಸ್ಕರಿಸಿದ್ದವು. ನವೆಂಬರ್ 7 ರಂದು ಕೇಂದ್ರ ತೈಲ ಸಚಿವಾಲಯವೂ ಸ್ಪಷ್ಟನೆ ನೀಡಿ, ದೇಶಾದ್ಯಂತ ಪರೀಕ್ಷಿಸಲಾದ ಸ್ಯಾಂಪಲ್‌ಗಳು ಶೇ. 19 ರಿಂದ ಶೇ. 21 ರ ನಿಗದಿತ ಮಿತಿಯೊಳಗೇ ಇವೆ ಎಂದು ಸಮರ್ಥಿಸಿಕೊಂಡಿತ್ತು. ಇದರ ನಡುವೆಯೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಥನಾಲ್ ಮಿತಿಯನ್ನು ಶೇ. 30ಕ್ಕೆ ಏರಿಸುವ ಕುರಿತು ಕೇಂದ್ರದಲ್ಲಿ ಚರ್ಚೆ ನಡೆದಿತ್ತು ಎಂದು ತಿಳಿಸಿದ್ದರು.

ಕರ್ನಾಟಕದ ಆರೋಪಗಳ ಬೆನ್ನಲ್ಲೇ ಈಗ ಕೇರಳ ಸರ್ಕಾರವೂ ಅಧಿಕೃತವಾಗಿ ಪರೀಕ್ಷೆಗೆ ಮುಂದಾಗಿರುವುದು ರಾಷ್ಟ್ರಮಟ್ಟದಲ್ಲಿ ಎಥನಾಲ್ ಬ್ಲೆಂಡಿಂಗ್ ನೀತಿಯ ಕುರಿತು ಮತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮನಮೋಹನ್ ಸಿಂಗ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಲು ಅವರ ಪ್ರಶ್ನಾತೀತ ಪ್ರಾಮಾಣಿಕತೆಯೇ ಕಾರಣ: ಸೋನಿಯಾ ಗಾಂಧಿ

2004ರಲ್ಲಿ ದೇಶದ ಪ್ರಧಾನಿಯಾಗಿ ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಲು ಅವರ ‘ಪ್ರಶ್ನಾತೀತ ಪ್ರಾಮಾಣಿಕತೆ’ ಮತ್ತು ಆಡಳಿತದ ಕುರಿತಾದ ಆಳವಾದ ತಿಳುವಳಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಅಂದಿನ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಗಾಂಧಿ...

ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ವಿಡಿಯೋ ವಿವಾದ: ಸಿಸಿಬಿ ವಿಚಾರಣೆಗೆ ಹಾಜರಾದ ಉಚ್ಚಾಟಿತ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದೆ ಎನ್ನಲಾದ ಸ್ಟಿಂಗ್ ವಿಡಿಯೋ ವಿವಾದದ ತನಿಖೆ ಚುರುಕುಗೊಂಡಿದ್ದು, ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡಿರುವ ನಾಯಕಿ ಕೃಪಾ ಆಳ್ವ ಅವರನ್ನು ಸೋಮವಾರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಸೈಬರ್ ಅಪರಾಧ...

ಮೂರನೇ ಪತ್ನಿಗೂ ವಿಚ್ಛೇದನ: ರಷ್ಯಾದ ಅನ್ನಾ ಲೆಜ್ನೆವಾ ಜೊತೆಗಿನ 12 ವರ್ಷಗಳ ದಾಂಪತ್ಯ ಅಂತ್ಯಗೊಳಿಸಿದ ಪವನ್ ಕಲ್ಯಾಣ್

ಹೈದರಾಬಾದ್: ತೆಲುಗು ಚಿತ್ರರಂಗದ ನಟ ಹಾಗೂ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರ ಮೂರನೇ ದಾಂಪತ್ಯವೂ ಮುರಿದುಬಿದ್ದಿದೆ. ರಷ್ಯಾದ ಮಾಡೆಲ್ ಮತ್ತು ನಟಿ ಅನ್ನಾ ಲೆಜ್ನೆವಾ ಅವರೊಂದಿಗಿನ 12...

ಬ್ರಿಟಿಷ್ ಲೇಖಕ ಎಂ. ಜಾನ್ ಹ್ಯಾರಿಸನ್‌ಗೆ 2026ರ ಬೂಕರ್ ಪ್ರಶಸ್ತಿ : ‘ದಿ ಎಂಡ್ ಆಫ್ ಎವೆರಿಥಿಂಗ್’ ವೈಜ್ಞಾನಿಕ ಕಾದಂಬರಿಗೆ ಜಾಗತಿಕ ಮನ್ನಣೆ

ಬ್ರಿಟಿಷ್ ಮೂಲದ ಪ್ರಸಿದ್ಧ ಲೇಖಕ ಎಂ. ಜಾನ್ ಹ್ಯಾರಿಸನ್ ಅವರು ತಮ್ಮ ವೈಜ್ಞಾನಿಕ ಹಾಗೂ ಡಿಸ್ಟೋಪಿಯನ್ ವಿಡಂಬನಾತ್ಮಕ ಕಾದಂಬರಿ 'ದಿ ಎಂಡ್ ಆಫ್ ಎವೆರಿಥಿಂಗ್' ಕೃತಿಗೆ 2026ರ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.  ಲಂಡನ್‌ನ...

ಅತ್ಯಾಚಾರದ ಬೆದರಿಕೆ, ಆಹಾರ ನಿರಾಕರಣೆ: ಇಸ್ರೇಲ್ ಬಂಧನದಲ್ಲಿರುವ 380 ಮಕ್ಕಳು ಸೇರಿದಂತೆ 9,200 ಪ್ಯಾಲೆಸ್ಟೀನಿಯನ್ನರ ಜೀವಕ್ಕೆ ಅಪಾಯ: ವರದಿ

ಗಾಜಾ ಮೇಲಿನ ಇಸ್ರೇಲ್‌ನ ನರಮೇಧದ ದಾಳಿ ಮುಂದುವರಿದಿರುವ ಬೆನ್ನಲ್ಲೇ, ಪ್ಯಾಲೆಸ್ಟೀನಿಯನ್ನರ ಮೇಲಿನ ದೌರ್ಜನ್ಯಗಳು ಜೈಲುಗಳ ಒಳಗೂ ಭೀಕರ ಸ್ವರೂಪ ಪಡೆದುಕೊಂಡಿವೆ. ಚಿತ್ರಹಿಂಸೆ, ಲೈಂಗಿಕ ದೌರ್ಜನ್ಯದ ಬೆದರಿಕೆ, ಆಹಾರದ ಕೊರತೆ, ವೈದ್ಯಕೀಯ ಚಿಕಿತ್ಸೆಯ ನಿರಾಕರಣೆ,...

ದಾಖಲೆಯ 89 ದಿನಗಳು ಕಳೆದರೂ ಅಧಿಕೃತವಾಗಿ ಮುಕ್ತಾಯಗೊಳ್ಳದ ಸಂಸತ್ತಿನ ಮುಂಗಾರು ಅಧಿವೇಶನ!

ಸಂಸತ್ತಿನ ಮುಂಗಾರು ಅಧಿವೇಶನವು ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ 'ಸೈನ್ ಡೈ' (ನಿರ್ದಿಷ್ಟ ದಿನಾಂಕ ನಿಗದಿಪಡಿಸದೆ ಮುಂದೂಡುವುದು) ಮುಂದೂಡಿಕೆಯನ್ನು ದಾಖಲಿಸಿದೆ. ಬರೋಬ್ಬರಿ 89 ದಿನಗಳು ಕಳೆದರೂ ಅಧಿವೇಶನವನ್ನು ಔಪಚಾರಿಕವಾಗಿ ಮುಕ್ತಾಯಗೊಳಿಸುವ 'ಪ್ರೊರೋಗ್' (ಅಧಿವೇಶನದ ಮುಕ್ತಾಯ...

ಗೋಹತ್ಯೆ ಶಂಕೆಯ ಮೇಲಷ್ಟೇ ವಾಹನ ಜಪ್ತಿ ಮಾಡುವಂತಿಲ್ಲ: ಸಂತ್ರಸ್ತನಿಗೆ 15 ಲಕ್ಷ ರೂ. ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಆದೇಶ

ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಕೇವಲ ಗೋಹತ್ಯೆಯ ಶಂಕೆಯ ಆಧಾರದ ಮೇಲೆ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಂಪೂರ್ಣ ಕಾನೂನುಬಾಹಿರ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನಿಯಮಬಾಹಿರವಾಗಿ ವಾಹನ ಜಪ್ತಿ ಮಾಡಿ ಸಂತ್ರಸ್ತನಿಗೆ ನಷ್ಟ...

ಕ್ಯಾಬ್ ಚಾಲಕನಿಂದ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ಎಲ್ಲ ಮೃತದೇಹಗಳೂ ಪತ್ತೆ

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಕುಟುಂಬದ ಏಳು ಮಂದಿಯನ್ನು ಹತ್ಯೆ ಮಾಡಿರುವ ಆರೋಪದ ಪ್ರಕರಣದಲ್ಲಿ, ನವೆಂಬರ್ 9ರ ಸೋಮವಾರ ಕೊನೆಯ ಎರಡೂ ಮೃತದೇಹಗಳನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಶಿರಾಡಿ ಘಾಟ್‌ನ ಅರಣ್ಯ...

ಪೆಟ್ರೋಲ್‌ನಲ್ಲಿ ನಿಗದಿಗಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಆರೋಪಕ್ಕೆ ಕರ್ನಾಟಕ ಸರ್ಕಾರ ಬದ್ಧ: ಸಚಿವ ರಿಜ್ವಾನ್ ಅರ್ಷದ್

ಪೆಟ್ರೋಲ್‌ನಲ್ಲಿ ನಿಗದಿಪಡಿಸಿರುವ ಶೇ.20ರ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ತನ್ನ ವರದಿಗೆ ಕರ್ನಾಟಕ ಸರ್ಕಾರ ಬದ್ಧವಾಗಿದೆ ಎಂದು ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಹಾಗೂ ಕಾನೂನು ಮಾಪನಶಾಸ್ತ್ರ...

ಫಿರೋಜಾಬಾದ್‌ನಲ್ಲಿ ದಲಿತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಭೀಕರ ಹಲ್ಲೆ: ಆಗ್ರಾ ಆಸ್ಪತ್ರೆಯಲ್ಲಿ 16ರ ಬಾಲಕಿ ಸಾವು 

ಉತ್ತರ ಪ್ರದೇಶ: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಮೂವರು ವ್ಯಕ್ತಿಗಳಿಂದ ಸಾಮೂಹಿಕ ಅತ್ಯಾಚಾರ ಮತ್ತು ಅತ್ಯಂತ ಕ್ರೂರ ಹಲ್ಲೆಗೊಳಗಾಗಿದ್ದ 16 ವರ್ಷದ ದಲಿತ ಬಾಲಕಿ, ಒಂದು ವಾರದ ಸಾವು ಬದುಕಿನ ಹೋರಾಟದ ಬಳಿಕ ಶುಕ್ರವಾರ...