Homeಮುಖಪುಟಗೋಧ್ರಾ ರೈಲು ದಹನ ಪ್ರಕರಣ : ಅಪರಾಧಿಯ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್

ಗೋಧ್ರಾ ರೈಲು ದಹನ ಪ್ರಕರಣ : ಅಪರಾಧಿಯ ಶಿಕ್ಷೆ ಅಮಾನತುಗೊಳಿಸಿದ ಸುಪ್ರೀಂ ಕೋರ್ಟ್

- Advertisement -
- Advertisement -

2002ರ ಗೋಧ್ರಾ ರೈಲು ದಹನ ಪ್ರಕರಣದ ಅಪರಾಧಿಗಳಲ್ಲಿ ಒಬ್ಬರಾದ ಇರ್ಫಾನ್ ಸಿರಾಜ್ ಪಾಡಾ ಅವರಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಸೋಮವಾರ (ನ.23) ಅಮಾನತುಗೊಳಿಸಿದ್ದು, ವೈದ್ಯಕೀಯ ಕಾರಣಗಳ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದೆ ಎಂದು livelaw.in ವರದಿ ಮಾಡಿದೆ.

ನ್ಯಾಯಮೂರ್ತಿ ಎಂ.ಎಂ. ಸುಂದರೇಶ್ ಮತ್ತು ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು, ಇರ್ಫಾನ್ ಗಂಭೀರ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವುದನ್ನು ಮತ್ತು ಈಗಾಗಲೇ 17 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿರುವುದನ್ನು ಪರಿಗಣಿಸಿ ಈ ಆದೇಶ ಹೊರಡಿಸಿದೆ. ಅಪರಾಧಿಯ ವೈದ್ಯಕೀಯ ಸ್ಥಿತಿಯನ್ನು ರಾಜ್ಯ ಸರ್ಕಾರವು ನ್ಯಾಯಾಲಯದಲ್ಲಿ ಆಕ್ಷೇಪಿಸಿಲ್ಲ ಎಂದು ವರದಿ ಹೇಳಿದೆ.

2002ರ ಫೆಬ್ರವರಿ 27ರಂದು ಅಯೋಧ್ಯೆಯಿಂದ ಕರಸೇವಕರನ್ನು ಕರೆತರುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿನ ಎಸ್-6 ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ 58 ಮಂದಿ ಸಜೀವ ದಹನವಾಗಿದ್ದರು. ಈ ಘಟನೆಯು ಗುಜರಾತ್‌ನಲ್ಲಿ ಕೋಮು ಗಲಭೆಗಳಿಗೆ ಕಾರಣವಾಗಿತ್ತು.

ಗುಜರಾತ್ ಹೈಕೋರ್ಟ್ 11 ಮಂದಿಯ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿ, ಉಳಿದ 20 ಮಂದಿಯ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ಈ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸಲ್ಲಿಸಿರುವ ಮೇಲ್ಮನವಿಗಳು 2018ರಿಂದ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ಇದಕ್ಕೂ ಮುನ್ನ, 2025ರಲ್ಲಿ ಇರ್ಫಾನ್ ಅವರಿಗೆ ಅವಧಿಪೂರ್ವ ಬಿಡುಗಡೆಯ ಮನವಿಯನ್ನು ರಾಜ್ಯ ಸರ್ಕಾರ ಪರಿಗಣಿಸಲು ಮಧ್ಯಂತರ ಪೆರೋಲ್ ನೀಡಲಾಗಿತ್ತು. ಅಲ್ಲದೆ, 2022 ಮತ್ತು 2023ರ ಅವಧಿಯಲ್ಲಿ ಈ ಪ್ರಕರಣದ ಇತರ ಹಲವು ಅಪರಾಧಿಗಳಿಗೂ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ SIR: ಮತದಾರರ ಪಟ್ಟಿಯಿಂದ ಹೆಸರು ಅಳಿಸಿಹೋದವರ ಮೇಲ್ಮನವಿಗಳಿಗೆ ಮೊದಲ ಆದ್ಯತೆ; ಸೇರ್ಪಡೆ ವಿರುದ್ಧದ ಅರ್ಜಿ ಮುಂದೂಡಲು ಸುಪ್ರೀಂಕೋರ್ಟ್ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR — Special Intensive Revision) ಪ್ರಕ್ರಿಯೆಗೆ ಸಂಬಂಧಿಸಿದಂತೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿರುವ (deleted) ನಾಗರಿಕರು ಸಲ್ಲಿಸಿರುವ ಮೇಲ್ಮನವಿಗಳಿಗೆ ಮೊದಲ...

ನೇಪಾಳದ ಪುನರ್‌ನಿರ್ಮಾಣಕ್ಕೆ ಭಾರತದಿಂದ ₹15,000 ಕೋಟಿ ನೆರವು; ‘ಉಭಯ ದೇಶಗಳ ಸಂಬಂಧ ಹಿಮಾಲಯದಷ್ಟೇ ದೃಢವಾಗಿವೆ’ ಎಂದ ಪ್ರಧಾನಿ ಬಲೇಂದ್ರ ಶಾ

ನೇಪಾಳ: ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳದ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸುಮಾರು 15,000 ಕೋಟಿ ರೂಪಾಯಿಗಳ ನೆರವು ಪ್ಯಾಕೇಜ್ ಘೋಷಿಸಿದೆ. ಸೋಮವಾರ ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗಿನ ಜಂಟಿ...

ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿ

2018ರ ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯವೊಂದು ಸೋಮವಾರ (ನ.23) ಜಾಮೀನು ರಹಿತ ವಾರಂಟ್ ಹೊರಡಿಸಿದೆ. ರಾಠೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ, ವಿಕಾಸ್...

ಡಿಲಿಮಿಟೇಶನ್ ಮಸೂದೆ ಬೆಂಬಲಿಸಲು ಸಂಸದರಿಗೆ ಬಿಜೆಪಿಯಿಂದ ತಲಾ 150 ಕೋಟಿ ರೂ. ಆಫರ್ : ಸಂಜಯ್ ರಾವುತ್ ಗಂಭೀರ ಆರೋಪ

ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗೆ ಬೆಂಬಲ ಪಡೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂಸದರಿಗೆ ತಲಾ 150 ಕೋಟಿ ರೂಪಾಯಿ ಆಫರ್ ಮಾಡುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)...

ಮಧ್ಯಪ್ರದೇಶ| ದೇವಸ್ಥಾನ ಪ್ರವೇಶಿಸದಂತೆ ತಡೆದ ಸವರ್ಣೀಯರು; ಎಸ್‌ಪಿ ಕಚೇರಿ ಮುಂದೆ ದಲಿತ ಮಹಿಳೆಯರಿಂದ ಪ್ರತಿಭಟನೆ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ರಿಚ್ಛಾರಾ ಗ್ರಾಮದ ದಲಿತ ಮಹಿಳೆಯರು, ತಮ್ಮ ಜಾತಿಯ ಕಾರಣಕ್ಕೆ ಹೊಸದಾಗಿ ನಿರ್ಮಿಸಲಾದ ಶಿವ ದೇವಾಲಯ ಪ್ರವೇಶಿಸಲು ಮತ್ತು ಶಿವಲಿಂಗಕ್ಕೆ ನೀರು ಅರ್ಪಿಸಲು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗುರುವಾರ ಕುಟುಂಬದ ಸದಸ್ಯರು...

ಎಸ್‌ಐಆರ್‌ ರದ್ದಾದರೆ ಸಿಇಸಿ ಗ್ಯಾನೇಶ್ ಕುಮಾರ್ ಜೈಲಿಗೆ: ಪ್ರಶಾಂತ್ ಭೂಷಣ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಜೈಲು ಸೇರಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಭಾನುವಾರ...

ಬಿಸ್ಲೆರಿ ವಿರುದ್ಧ FSSAI ಕ್ರಮ ಕೈಗೊಂಡಿದ್ದೇಕೆ? ಕುಡಿಯುವ ನೀರಿನಲ್ಲಿ ಪತ್ತೆಯಾದ ಕ್ಯಾನ್ಸರ್ ಕಾರಕ ಯಾವುದು?

ಲಕ್ಷಾಂತರ ಭಾರತೀಯರಿಗೆ ಬಿಸ್ಲೆರಿ (Bisleri) ನೀರಿನ ಬಾಟಲಿಯನ್ನು ಖರೀದಿಸುವುದು ಬಹುತೇಕ ಸಹಜ ಅಭ್ಯಾಸವಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ರೆಸ್ಟೋರೆಂಟ್‌ಗಳು ಮತ್ತು ನೆರೆಹೊರೆಯ ಅಂಗಡಿಗಳಲ್ಲಿ ಈ ಚಿರಪರಿಚಿತ ಲೇಬಲ್ ಸುರಕ್ಷಿತ ಕುಡಿಯುವ ನೀರಿಗೆ ಪರ್ಯಾಯ...

ಸರ್ಕಾರಿ ಶಾಲೆಯಲ್ಲಿ ಜಾತಿ ತಾರತಮ್ಯದ ಆರೋಪ: ದಲಿತ ಲ್ಯಾಬ್ ಅಸಿಸ್ಟೆಂಟ್ ಮೇಜಿನ ಮೇಲೆ ಮಲ ಸುರಿದು ಕಿರುಕುಳ!

ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಸಮೀಪದ ಕೀಲವೆಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರಯೋಗಾಲಯ ಸಹಾಯಕ (ಲ್ಯಾಬ್ ಅಸಿಸ್ಟೆಂಟ್) ಪಿ. ಕಣ್ಣದಾಸನ್ ಅವರ ಮೇಜಿನ ಮೇಲೆ ಕೆಲವು ಸಿಬ್ಬಂದಿ...

ಜೆಡಿಯು ವಿಲೀನಕ್ಕೆ ಬಿಜೆಪಿ ಏಜೆಂಟರಿಂದ ಸಂಚು; ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿಡಲಾಗುತ್ತಿದೆ: ಪ್ರಶಾಂತ್ ಕಿಶೋರ್ ಆರೋಪ

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಥವಾ ಜೆಡಿಯು ಪಕ್ಷದೊಳಗೆ ಬಿಜೆಪಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದು, ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಕ್ಕೆ ವ್ಯವಸ್ಥಿತವಾಗಿ ದಾರಿ ಮಾಡಿಕೊಡುತ್ತಿದ್ದಾರೆ. ಈ ಉದ್ದೇಶದಿಂದಲೇ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್...

ಕಣ್ಣೂರು ಸಿಪಿಐ(ಎಂ) ನಾಯಕನ ಕೊಲೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ತೀರ್ಪು

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ 2016ರಲ್ಲಿ ನಡೆದ ಸಿಪಿಐ(ಎಂ) ನಾಯಕ ಸಿ.ವಿ. ಧನರಾಜ್ ಅವರ ಕೊಲೆ ಪ್ರಕರಣದಲ್ಲಿ ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಸೋಮವಾರ (ನವೆಂಬರ್ 23) ತೀರ್ಪು...