Homeಅಂತರಾಷ್ಟ್ರೀಯನೇಪಾಳದ ಪುನರ್‌ನಿರ್ಮಾಣಕ್ಕೆ ಭಾರತದಿಂದ ₹15,000 ಕೋಟಿ ನೆರವು; ‘ಉಭಯ ದೇಶಗಳ ಸಂಬಂಧ ಹಿಮಾಲಯದಷ್ಟೇ ದೃಢವಾಗಿವೆ’ ಎಂದ...

ನೇಪಾಳದ ಪುನರ್‌ನಿರ್ಮಾಣಕ್ಕೆ ಭಾರತದಿಂದ ₹15,000 ಕೋಟಿ ನೆರವು; ‘ಉಭಯ ದೇಶಗಳ ಸಂಬಂಧ ಹಿಮಾಲಯದಷ್ಟೇ ದೃಢವಾಗಿವೆ’ ಎಂದ ಪ್ರಧಾನಿ ಬಲೇಂದ್ರ ಶಾ

- Advertisement -
- Advertisement -

ನೇಪಾಳ: ಪ್ರವಾಹದಿಂದ ತೀವ್ರ ಹಾನಿಗೊಳಗಾಗಿರುವ ನೇಪಾಳದ ಪುನರ್‌ನಿರ್ಮಾಣ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಭಾರತ ಸುಮಾರು 15,000 ಕೋಟಿ ರೂಪಾಯಿಗಳ ನೆರವು ಪ್ಯಾಕೇಜ್ ಘೋಷಿಸಿದೆ. ಸೋಮವಾರ ನೇಪಾಳದ ಪ್ರಧಾನಿ ಬಲೇಂದ್ರ ಶಾ ಅವರೊಂದಿಗಿನ ಜಂಟಿ ಹೇಳಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಘೋಷಣೆ ಮಾಡಿದ್ದು, ಸಂಕಷ್ಟದ ಸಮಯದಲ್ಲಿ ಭಾರತ ಮತ್ತು ನೇಪಾಳ ಪರಸ್ಪರ ಬೆಂಬಲವಾಗಿ ನಿಂತಿವೆ ಎಂದು ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ಸಂಬಂಧ ಕೇವಲ ನೆರೆಹೊರೆಯ ಸಂಬಂಧಕ್ಕೆ ಸೀಮಿತವಾಗಿಲ್ಲ. ಅದು ಮುರಿಯಲಾಗದ ನಂಬಿಕೆ, ಸ್ನೇಹ ಮತ್ತು ಪರಸ್ಪರ ಸಹಕಾರದ ಮೇಲೆ ನಿಂತಿದೆ ಎಂದು ಮೋದಿ ಪ್ರತಿಪಾದಿಸಿದ್ದಾರೆ. ನೇಪಾಳ ಪ್ರವಾಹದಂತಹ ಸಂಕಷ್ಟಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅದರ ಪುನರ್‌ನಿರ್ಮಾಣಕ್ಕೆ ಭಾರತ ನೆರವಾಗಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ.

ಈ ವರ್ಷ ತೈಲ ಪೂರೈಕೆಗೆ ಸಂಬಂಧಿಸಿದಂತೆ ಗಂಭೀರ ಸವಾಲುಗಳು ಎದುರಾದರೂ ಭಾರತವು ನೇಪಾಳಕ್ಕೆ ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆಯನ್ನು ನಿರಂತರವಾಗಿ ಕಾಯ್ದುಕೊಂಡಿದೆ ಎಂದು ಮೋದಿ ಉಲ್ಲೇಖಿಸಿದ್ದಾರೆ.

ಇದೇ ವೇಳೆ, ಭಾರತ-ನೇಪಾಳ ಸಂಬಂಧಗಳ ಕುರಿತು ಮಾತನಾಡಿದ ಪ್ರಧಾನಿ ಬಲೇಂದ್ರ ಶಾ, ಪರಸ್ಪರ ಗೌರವ, ದೃಢವಾದ ನಂಬಿಕೆ ಮತ್ತು ಅಚಲ ಸದ್ಭಾವನೆಯೇ ಉಭಯ ದೇಶಗಳ ಸಂಬಂಧದ ಬುನಾದಿ ಎಂದು ಹೇಳಿದ್ದಾರೆ. ಭಾರತದೊಂದಿಗಿನ ಮಾತುಕತೆ ಮತ್ತು ಸಹಕಾರದಿಂದ ದ್ವಿಪಕ್ಷೀಯ ಸಂಬಂಧಗಳು ಮತ್ತಷ್ಟು ಹೊಸ ಎತ್ತರಕ್ಕೆ ತಲುಪಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಪ್ರವಾಹದ ಸಂಕಷ್ಟದ ನಡುವೆಯೇ ಭಾರತದ ಈ ನೆರವು ಘೋಷಣೆ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಮತ್ತು ಆರ್ಥಿಕ ಸಹಕಾರದ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಜಾರಿ

2018ರ ಮಾನನಷ್ಟ ಮೊಕದ್ದಮೆಯೊಂದಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಧ್ರುವ್ ರಾಠೀ ವಿರುದ್ಧ ದೆಹಲಿ ನ್ಯಾಯಾಲಯವೊಂದು ಸೋಮವಾರ (ನ.23) ಜಾಮೀನು ರಹಿತ ವಾರಂಟ್ ಹೊರಡಿಸಿದೆ. ರಾಠೀ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವೊಂದಕ್ಕೆ ಸಂಬಂಧಿಸಿದಂತೆ, ವಿಕಾಸ್...

ಡಿಲಿಮಿಟೇಶನ್ ಮಸೂದೆ ಬೆಂಬಲಿಸಲು ಸಂಸದರಿಗೆ ಬಿಜೆಪಿಯಿಂದ ತಲಾ 150 ಕೋಟಿ ರೂ. ಆಫರ್ : ಸಂಜಯ್ ರಾವುತ್ ಗಂಭೀರ ಆರೋಪ

ಕ್ಷೇತ್ರ ಪುನರ್ವಿಂಗಡಣೆ (ಡಿಲಿಮಿಟೇಶನ್) ಮಸೂದೆಗೆ ಬೆಂಬಲ ಪಡೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸಂಸದರಿಗೆ ತಲಾ 150 ಕೋಟಿ ರೂಪಾಯಿ ಆಫರ್ ಮಾಡುತ್ತಿದೆ ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)...

ಮಧ್ಯಪ್ರದೇಶ| ದೇವಸ್ಥಾನ ಪ್ರವೇಶಿಸದಂತೆ ತಡೆದ ಸವರ್ಣೀಯರು; ಎಸ್‌ಪಿ ಕಚೇರಿ ಮುಂದೆ ದಲಿತ ಮಹಿಳೆಯರಿಂದ ಪ್ರತಿಭಟನೆ

ಮಧ್ಯಪ್ರದೇಶದ ಛತ್ತರ್‌ಪುರ ಜಿಲ್ಲೆಯ ರಿಚ್ಛಾರಾ ಗ್ರಾಮದ ದಲಿತ ಮಹಿಳೆಯರು, ತಮ್ಮ ಜಾತಿಯ ಕಾರಣಕ್ಕೆ ಹೊಸದಾಗಿ ನಿರ್ಮಿಸಲಾದ ಶಿವ ದೇವಾಲಯ ಪ್ರವೇಶಿಸಲು ಮತ್ತು ಶಿವಲಿಂಗಕ್ಕೆ ನೀರು ಅರ್ಪಿಸಲು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಗುರುವಾರ ಕುಟುಂಬದ ಸದಸ್ಯರು...

ಎಸ್‌ಐಆರ್‌ ರದ್ದಾದರೆ ಸಿಇಸಿ ಗ್ಯಾನೇಶ್ ಕುಮಾರ್ ಜೈಲಿಗೆ: ಪ್ರಶಾಂತ್ ಭೂಷಣ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೆ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಜೈಲು ಸೇರಬೇಕು ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ. ಭಾನುವಾರ...

ಬಿಸ್ಲೆರಿ ವಿರುದ್ಧ FSSAI ಕ್ರಮ ಕೈಗೊಂಡಿದ್ದೇಕೆ? ಕುಡಿಯುವ ನೀರಿನಲ್ಲಿ ಪತ್ತೆಯಾದ ಕ್ಯಾನ್ಸರ್ ಕಾರಕ ಯಾವುದು?

ಲಕ್ಷಾಂತರ ಭಾರತೀಯರಿಗೆ ಬಿಸ್ಲೆರಿ (Bisleri) ನೀರಿನ ಬಾಟಲಿಯನ್ನು ಖರೀದಿಸುವುದು ಬಹುತೇಕ ಸಹಜ ಅಭ್ಯಾಸವಾಗಿದೆ. ರೈಲ್ವೆ, ವಿಮಾನ ನಿಲ್ದಾಣಗಳು, ರೆಸ್ಟೋರೆಂಟ್‌ಗಳು ಮತ್ತು ನೆರೆಹೊರೆಯ ಅಂಗಡಿಗಳಲ್ಲಿ ಈ ಚಿರಪರಿಚಿತ ಲೇಬಲ್ ಸುರಕ್ಷಿತ ಕುಡಿಯುವ ನೀರಿಗೆ ಪರ್ಯಾಯ...

ಸರ್ಕಾರಿ ಶಾಲೆಯಲ್ಲಿ ಜಾತಿ ತಾರತಮ್ಯದ ಆರೋಪ: ದಲಿತ ಲ್ಯಾಬ್ ಅಸಿಸ್ಟೆಂಟ್ ಮೇಜಿನ ಮೇಲೆ ಮಲ ಸುರಿದು ಕಿರುಕುಳ!

ತಮಿಳುನಾಡಿನ ಅರಿಯಲೂರು ಜಿಲ್ಲೆಯ ಜಯಂಕೊಂಡಂ ಸಮೀಪದ ಕೀಲವೆಲಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಪ್ರಯೋಗಾಲಯ ಸಹಾಯಕ (ಲ್ಯಾಬ್ ಅಸಿಸ್ಟೆಂಟ್) ಪಿ. ಕಣ್ಣದಾಸನ್ ಅವರ ಮೇಜಿನ ಮೇಲೆ ಕೆಲವು ಸಿಬ್ಬಂದಿ...

ಜೆಡಿಯು ವಿಲೀನಕ್ಕೆ ಬಿಜೆಪಿ ಏಜೆಂಟರಿಂದ ಸಂಚು; ನಿತೀಶ್ ಕುಮಾರ್ ಅವರನ್ನು ಸಾರ್ವಜನಿಕ ಕಾರ್ಯಕ್ರಮಗಳಿಂದ ದೂರವಿಡಲಾಗುತ್ತಿದೆ: ಪ್ರಶಾಂತ್ ಕಿಶೋರ್ ಆರೋಪ

ಪಾಟ್ನಾ: ಬಿಹಾರದಲ್ಲಿ ಆಡಳಿತಾರೂಢ ಜನತಾ ದಳ (ಯುನೈಟೆಡ್) ಅಥವಾ ಜೆಡಿಯು ಪಕ್ಷದೊಳಗೆ ಬಿಜೆಪಿ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದು, ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುವುದಕ್ಕೆ ವ್ಯವಸ್ಥಿತವಾಗಿ ದಾರಿ ಮಾಡಿಕೊಡುತ್ತಿದ್ದಾರೆ. ಈ ಉದ್ದೇಶದಿಂದಲೇ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್...

ಕಣ್ಣೂರು ಸಿಪಿಐ(ಎಂ) ನಾಯಕನ ಕೊಲೆ ಪ್ರಕರಣ: ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ತೀರ್ಪು

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನಲ್ಲಿ 2016ರಲ್ಲಿ ನಡೆದ ಸಿಪಿಐ(ಎಂ) ನಾಯಕ ಸಿ.ವಿ. ಧನರಾಜ್ ಅವರ ಕೊಲೆ ಪ್ರಕರಣದಲ್ಲಿ ಮೂವರು ಬಿಜೆಪಿ-ಆರ್‌ಎಸ್‌ಎಸ್ ಕಾರ್ಯಕರ್ತರು ದೋಷಿಗಳು ಎಂದು ಸ್ಥಳೀಯ ನ್ಯಾಯಾಲಯ ಸೋಮವಾರ (ನವೆಂಬರ್ 23) ತೀರ್ಪು...

2024ರಲ್ಲಿ ಚಂದ್ರಬಾಬು ನಾಯ್ಡು ಗೆದ್ದ ಚುನಾವಣೆ | ಸಂಜೆ 6ರ ನಂತರದ ಮತದಾನದಲ್ಲಿ ಭಾರೀ ವ್ಯತ್ಯಾಸ; ತನಿಖೆ ನಡೆಸದ ಚುನಾವಣಾ ಆಯೋಗ

ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ 2024ರ ಚುನಾವಣಾ ಗೆಲುವಿಗೆ ಸಾಕ್ಷಿಯಾದ ಚಿತ್ತೂರು ಲೋಕಸಭಾ ಕ್ಷೇತ್ರದ ಮತದಾನದ ಅಂಕಿಅಂಶಗಳಲ್ಲಿ ಭಾರೀ ವ್ಯತ್ಯಾಸ ಕಂಡುಬಂದಿರುವುದನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್' (The Reporters’ Collective)...

ಆಲೋಚನೆ, ಹಾಸ್ಯ – ಚರ್ಚೆಗೆ ಮುಕ್ತ ವೇದಿಕೆ: ‘ಕಾಕ್ರೋಚ್ ಕ್ಲಬ್’ ಆರಂಭಿಸಿದ ಸಿಜೆಪಿ

ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮತ್ತು ವಿಡಂಬನಾತ್ಮಕ ಮುಕ್ತ ಚರ್ಚೆಗಳನ್ನು ಆಯೋಜಿಸಲು "ಕಾಕ್ರೋಚ್ ಕ್ಲಬ್" ಎಂಬ ಹೊಸ ಉಪಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರಂಭಿಸಿದೆ...