Homeಮುಖಪುಟಆಲೋಚನೆ, ಹಾಸ್ಯ - ಚರ್ಚೆಗೆ ಮುಕ್ತ ವೇದಿಕೆ: 'ಕಾಕ್ರೋಚ್ ಕ್ಲಬ್' ಆರಂಭಿಸಿದ ಸಿಜೆಪಿ

ಆಲೋಚನೆ, ಹಾಸ್ಯ – ಚರ್ಚೆಗೆ ಮುಕ್ತ ವೇದಿಕೆ: ‘ಕಾಕ್ರೋಚ್ ಕ್ಲಬ್’ ಆರಂಭಿಸಿದ ಸಿಜೆಪಿ

- Advertisement -
- Advertisement -

ದೇಶದಲ್ಲಿ ಬದಲಾವಣೆ ತರಲು ಯುವಜನರ ಶಕ್ತಿಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜಕೀಯ ಮತ್ತು ವಿಡಂಬನಾತ್ಮಕ ಮುಕ್ತ ಚರ್ಚೆಗಳನ್ನು ಆಯೋಜಿಸಲು “ಕಾಕ್ರೋಚ್ ಕ್ಲಬ್” ಎಂಬ ಹೊಸ ಉಪಕ್ರಮವನ್ನು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆರಂಭಿಸಿದೆ ಎಂದು ಪಕ್ಷದ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ.

“ಕಾಕ್ರೋಚ್ ಕ್ಲಬ್ ದೇಶದ ಯುವಜನರಿಗೆ ಭೌತಿಕವಾಗಿ ಒಂದೆಡೆ ಸೇರಲು ಇರುವ ವೇದಿಕೆಯಾಗಲಿದೆ. ಇಲ್ಲಿ ಅವರು ಒಟ್ಟಾಗಿ ಸೇರಿ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು, ಪ್ರಶ್ನಿಸಬಹುದು, ಕಲಿಯಬಹುದು ಮತ್ತು ಬೆಳೆಯಬಹುದು” ಎಂದು ಅವರು ಹೇಳಿದ್ದಾರೆ.

ಕ್ಲಬ್‌ನ ಸಭೆಗಳಲ್ಲಿ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಬಿ.ಆರ್. ಅಂಬೇಡ್ಕರ್ ಅವರ ವಿಚಾರಗಳನ್ನು ಪ್ರಸ್ತಾಪಿಸಲಾಗುವುದು. ದೇಶದ ಹಿತದೃಷ್ಟಿಯಿಂದ ಯಾವುದು ಉತ್ತಮ ಎಂಬುದನ್ನು ಅರ್ಥಮಾಡಿಕೊಳ್ಳಲು ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ದಾಸ್ ತಿಳಿಸಿದ್ದಾರೆ.

“ಉಪನ್ಯಾಸಗಳು ಮತ್ತು ಚರ್ಚೆಗಳ ಮೂಲಕ ಗಾಂಧಿ, ನೆಹರು, ಅಂಬೇಡ್ಕರ್ ಸೇರಿದಂತೆ ಮಹಾನ್ ಚಿಂತಕರ ವಿಚಾರಗಳನ್ನು ಅರಿಯಲು ಯುವ ಮನಸ್ಸುಗಳಿಗೆ ಇಲ್ಲಿ ಅವಕಾಶವಿರಲಿದೆ. ಚಲನಚಿತ್ರ ಪ್ರದರ್ಶನಗಳ ಮೂಲಕ ನಮ್ಮ ಆಲೋಚನೆಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿದ್ದೇವೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದರ ಜೊತೆಗೆ, ಜನರು ಓದಲು, ಅಧ್ಯಯನ ಮಾಡಲು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಕೂಡ ಈ ಕ್ಲಬ್ ಅವಕಾಶ ಕಲ್ಪಿಸಲಿದೆ ಎಂದು ದಾಸ್ ತಿಳಿಸಿದ್ದಾರೆ.

ಪುಣೆಯಲ್ಲಿ ನಡೆದ ಕ್ಲಬ್‌ನ ಮೊದಲ ಸಭೆಯಲ್ಲಿ ಮಾತನಾಡಿದ ಅವರು, “ನಿಮ್ಮ ಅಭಿಪ್ರಾಯಗಳನ್ನು ನಾವು ಸ್ವೀಕರಿಸುತ್ತೇವೆ. ದೇಶದಲ್ಲಿ ಉತ್ತಮ ಬದಲಾವಣೆ ತರಲು ಯಾವ ರೀತಿಯ ಆಲೋಚನೆಗಳನ್ನು ರೂಪಿಸಬಹುದು ಎಂಬುದರ ಕುರಿತು ಚರ್ಚಿಸುತ್ತೇವೆ” ಎಂದು ಹೇಳಿದ್ದಾರೆ.

ಜನರೇಷನ್ ಝಡ್ (ಜೆನ್‌ – ಝಿ) ಕೇವಲ ಗಂಭೀರ ಚಿಂತನೆಗಳಲ್ಲಿ ತೊಡಗಿರುವ ಯುವಜನರ ಗುಂಪಲ್ಲ ಎಂಬುದನ್ನು ಒತ್ತಿಹೇಳಿದ ಸಿಜೆಪಿ ನಾಯಕ, ಕ್ಲಬ್‌ನಲ್ಲಿ ಮನರಂಜನೆಗೂ ಅವಕಾಶವಿರಲಿದೆ ಎಂದಿದ್ದಾರೆ. ಯುವಜನರು ತಮ್ಮ ಒತ್ತಡಗಳನ್ನು ಮರೆತು, ನಗುತ್ತಾ, ಸಂತೋಷದಿಂದ ಕಾಲ ಕಳೆಯಲು ಇಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

“ಎಲ್ಲಕ್ಕಿಂತ ಮುಖ್ಯವಾಗಿ, ಯುವಜನರು ಸ್ವತಂತ್ರವಾಗಿ ಆಲೋಚಿಸುವುದನ್ನು ಪ್ರೋತ್ಸಾಹಿಸುವ ವೇದಿಕೆಯಾಗಿ ಕಾಕ್ರೋಚ್ ಕ್ಲಬ್ ರೂಪುಗೊಳ್ಳಲಿದೆ. ಇಲ್ಲಿ ಯಾರ ಮೇಲೂ ಅಭಿಪ್ರಾಯಗಳನ್ನು ಹೇರಲಾಗುವುದಿಲ್ಲ ಅಥವಾ ಯಾವುದೇ ಸಿದ್ಧಾಂತವನ್ನು ಬಲವಂತವಾಗಿ ಒಪ್ಪಿಸುವುದಿಲ್ಲ. ಬದಲಿಗೆ, ವಿಚಾರಗಳ ಕುರಿತು ಚರ್ಚೆ ನಡೆಯಲಿದೆ, ವಿಭಿನ್ನ ದೃಷ್ಟಿಕೋನಗಳನ್ನು ಪ್ರಶ್ನಿಸಲಾಗುತ್ತದೆ ಮತ್ತು ಸ್ವತಂತ್ರ ಚಿಂತನೆಗೆ ಗೌರವ ನೀಡಲಾಗುತ್ತದೆ” ಎಂದು ದಾಸ್ ಹೇಳಿದ್ದಾರೆ.

ಈ ಕ್ಲಬ್ ಮೂಲಕ ದೇಶದ ಯುವಜನರು ಭಾರತದ ಕುರಿತಾದ ತಮ್ಮದೇ ಆದ ಆಲೋಚನೆ ಮತ್ತು ದೃಷ್ಟಿಕೋನವನ್ನು ರೂಪಿಸಿಕೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಅಭಿಜೀತ್ ದೀಪ್ಕೆ ಅವರು ಮೇ ತಿಂಗಳಲ್ಲಿ ವಿಡಂಬನಾತ್ಮಕ ಡಿಜಿಟಲ್ ವೇದಿಕೆಯಾಗಿ ಕಾಕ್ರೋಚ್ ಜನತಾ ಪಾರ್ಟಿಯನ್ನು ಆರಂಭಿಸಿದ್ದರು. ಬಳಿಕ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಖಂಡಿಸಿ ಸಂಘಟನೆ ಪ್ರತಿಭಟನೆಗಳನ್ನು ನಡೆಸಿತ್ತು. ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ಅಕ್ಟೋಬರ್‌ನಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವೇಳೆ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಅಳಿಸಿರುವುದನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ಪ್ರತಿಭಟನೆಗಳನ್ನು ನಡೆಸಿತ್ತು. ಈ ವೇಳೆ ಪೊಲೀಸರು ನಡೆಸಿದ ವ್ಯಾಪಕ ಕಾರ್ಯಾಚರಣೆಗಳು ಮತ್ತು ವಿಧಿಸಿದ ನಿರ್ಬಂಧಗಳ ಹಿನ್ನೆಲೆಯಲ್ಲಿ ಸಂಘಟನೆ ತನ್ನ ಪ್ರತಿಭಟನಾ ಚಳವಳಿಯನ್ನು ಸ್ಥಗಿತಗೊಳಿಸಿತ್ತು. ಇದೀಗ ಸಾರ್ವಜನಿಕ ಸಂಪರ್ಕ ಮತ್ತು ಜನಜಾಗೃತಿ ಕಾರ್ಯಕ್ರಮಗಳತ್ತ ಗಮನಹರಿಸುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ...

560 ದಿನಗಳ ಜೈಲುವಾಸದ ಬಳಿಕ ಪತ್ರಕರ್ತನ ವಿರುದ್ಧದ ಯುಎಪಿಎ ಆರೋಪ ಕೈಬಿಟ್ಟ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ...

ಪತ್ರಕರ್ತರನ್ನು ವಶಕ್ಕೆ ಪಡೆದು ‘ಜನಸಂದಣಿ ನಿಯಂತ್ರಣ’ ಎಂದು ಸಮರ್ಥಿಸಿಕೊಳ್ಳಲಾಗದು: ದೆಹಲಿ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪತ್ರಕರ್ತರ ಸಂಘದ ಆಕ್ಷೇಪ

ನವದೆಹಲಿ: ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಲವಂತವಾಗಿ ಸ್ಥಳದಿಂದ ಹೊರಗೆಳೆದು ಪೊಲೀಸ್ ವಾಹನಗಳಿಗೆ ತಳ್ಳುವುದು, ಅವರ ಚಲನವಲನಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೇವಲ ‘ಜನಸಂದಣಿ...

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...

ಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ; ಹಿರಿಯೂರು ಉಪಚುನಾವಣೆ ಸಿದ್ಧತೆಯೂ ಜೋರು

ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು...

ಕೇರಳ: ಇ20 ಪರೀಕ್ಷೆಗೆ ಶುದ್ಧ ಪೆಟ್ರೋಲ್ ನೀಡಲು ತೈಲ ಕಂಪನಿಗಳ ಹಿಂದೇಟು

ಪೆಟ್ರೋಲ್‌ನಲ್ಲಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸುವ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇ20 ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣವನ್ನು ಹೋಲಿಕೆ ಮಾಡಿ ಪರೀಕ್ಷಿಸಲು ಅಗತ್ಯವಿರುವ ಎಥನಾಲ್ ಮಿಶ್ರಣವಿಲ್ಲದ ಶುದ್ಧ ಪೆಟ್ರೋಲ್ ಮಾದರಿಗಳನ್ನು ಒದಗಿಸಲು ತೈಲ ಕಂಪನಿಗಳು...

ಜಮ್ಮು-ಕಾಶ್ಮೀರ: ನೇಮಕಾತಿ ಅಕ್ರಮದ ವಿರುದ್ಧ  ಕೊರೆಯುವ ಚಳಿಯಲ್ಲೂ ಧರಣಿ: ವಿದ್ಯಾರ್ಥಿಗಳ ಜೊತೆ ರಾತ್ರಿ ಕಳೆದ ಮಾಜಿ ಸಂಸದ ಅಗಾ ರುಹುಲ್ಲಾ

ಶ್ರೀನಗರ: ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು, ಪರೀಕ್ಷಾ ವಂಚನೆ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ...

ತಿರುಪರಂಕುಂದ್ರಂ ವಿವಾದ : ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ 'ದೀಪತ್ತೂನ್' (ಕಲ್ಲಿನ ಸ್ತಂಭ) ಮೇಲೆ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿರುವ ಇತ್ತೀಚಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ....

ಅಗ್ನಿವೀರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಯತ್ನ: 14 ವರ್ಷದ ಬಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್‌ನಲ್ಲಿ 500 ಡಾಲರ್‌ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು...

ರೋಹಿಂಗ್ಯಾ ಮುಸ್ಲಿಮರ ನರಮೇಧಕ್ಕೆ ಇಸ್ರೇಲ್‌ ಶಸ್ತ್ರಾಸ್ತ್ರ ಪೂರೈಕೆ ಹಾಗೂ ತರಬೇತಿ ನೀಡಿದೆ: ಮ್ಯಾನ್ಮಾರ್ ಹೋರಾಟಗಾರ ಮೌಂಗ್ ಝರ್ನಿ ಗಂಭೀರ ಆರೋಪ

ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನರಮೇಧ ನಡೆಸುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್ ದೇಶವು ಮ್ಯಾನ್ಮಾರ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ, ತರಬೇತಿಯನ್ನೂ ನೀಡಿತ್ತು ಎಂದು ಮ್ಯಾನ್ಮಾರ್‌ನ ಖ್ಯಾತ ಹೋರಾಟಗಾರ ಮತ್ತು ಶಿಕ್ಷಣತಜ್ಞ ಮೌಂಗ್ ಝರ್ನಿ...