Homeಅಂತರಾಷ್ಟ್ರೀಯಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ...

ಖಲಿಸ್ತಾನಿ ಪ್ರತ್ಯೇಕತಾವಾದಿ ಪನ್ನುನ್ ಹತ್ಯೆಗೆ ಸಂಚು : ಭಾರತೀಯ ಪ್ರಜೆಗೆ 19 ವರ್ಷ ಜೈಲು ಶಿಕ್ಷೆ ವಿಧಿಸಿದ ಅಮೆರಿಕ ನ್ಯಾಯಾಲಯ

- Advertisement -
- Advertisement -

ಅಮೆರಿಕ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ (55) ಅವರಿಗೆ ಅಮೆರಿಕದ ಫೆಡರಲ್ ನ್ಯಾಯಾಲಯವು 235 ತಿಂಗಳುಗಳ (ಸುಮಾರು 19 ವರ್ಷ ಮತ್ತು 7 ತಿಂಗಳು) ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

ಶುಕ್ರವಾರ (ನವೆಂಬರ್ 20) ಅಮೆರಿಕದ ನ್ಯಾಯಾಂಗ ಇಲಾಖೆಯು ಈ ಶಿಕ್ಷೆಯ ವಿವರಗಳನ್ನು ಪ್ರಕಟಿಸಿದೆ. ಭಾರತ ಸರ್ಕಾರದ ಉದ್ಯೋಗಿಯೊಬ್ಬರ ನಿರ್ದೇಶನದ ಮೇರೆಗೆ ಅಮೆರಿಕದ ನೆಲದಲ್ಲಿ ಪನ್ನುನ್ ಅವರನ್ನು ಹತ್ಯೆ ಮಾಡಲು ರೂಪಿಸಲಾದ ಪಿತೂರಿಯಲ್ಲಿ ‘ನಿಕ್’ ಎಂದೂ ಕರೆಯಲ್ಪಡುವ ನಿಖಿಲ್ ಗುಪ್ತಾ ಭಾಗಿಯಾಗಿದ್ದರು ಎಂದು ಇಲಾಖೆ ತಿಳಿಸಿದೆ. 2026ರ ಫೆಬ್ರವರಿಯಲ್ಲಿ ಗುಪ್ತಾ ಅವರು ಸುಪಾರಿ ಹತ್ಯೆ, ಹತ್ಯೆಗೆ ಸಂಚು ಮತ್ತು ಅಕ್ರಮ ಹಣ ವರ್ಗಾವಣೆ ಪಿತೂರಿ ಆರೋಪಗಳನ್ನು ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರು.

ನ್ಯಾಯಾಲಯದ ದಾಖಲೆಗಳ ಪ್ರಕಾರ, ಭಾರತದ ವಿದೇಶಿ ಗುಪ್ತಚರ ಸಂಸ್ಥೆಯಾದ ‘ರಾ’ (RAW) ಒಳಗೊಂಡಿರುವ ಕ್ಯಾಬಿನೆಟ್ ಸೆಕ್ರೆಟರಿಯೇಟ್‌ನ ಉದ್ಯೋಗಿ ವಿಕಾಸ್ ಯಾದವ್ ಎಂಬುವವರು 2023ರ ಮೇ ತಿಂಗಳಲ್ಲಿ ಪನ್ನುನ್ ಹತ್ಯೆಗಾಗಿ ನಿಖಿಲ್ ಗುಪ್ತಾ ಅವರನ್ನು ನೇಮಿಸಿಕೊಂಡಿದ್ದರು.

ಹತ್ಯೆ ಮಾಡಲು ಬಾಡಿಗೆ ಹಂತಕನನ್ನು ಹುಡುಕುವ ಭರದಲ್ಲಿ ಗುಪ್ತಾ ಅವರು ತಮಗೆ ಪರಿಚಯವಿದ್ದ ವ್ಯಕ್ತಿಯೊಬ್ಬರನ್ನು ಸಂಪರ್ಕಿಸಿದ್ದರು. ಆದರೆ, ಆ ವ್ಯಕ್ತಿ ಅಮೆರಿಕದ ಮಾದಕವಸ್ತು ನಿಗ್ರಹ ದಳದ (DEA) ರಹಸ್ಯ ಮಾಹಿತಿದಾರನಾಗಿದ್ದು, ಡಿಇಎಯ ರಹಸ್ಯ ಅಧಿಕಾರಿಯನ್ನೇ ಬಾಡಿಗೆ ಹಂತಕನಂತೆ ಗುಪ್ತಾಗೆ ಪರಿಚಯಿಸಿದ್ದರು.

ನ್ಯೂಯಾರ್ಕ್ ನಗರದಲ್ಲಿ ಪನ್ನುನ್ ಅವರನ್ನು ಹತ್ಯೆ ಮಾಡಲು 1,00,000 ಡಾಲರ್ (ಸುಮಾರು 83 ಲಕ್ಷಕ್ಕೂ ಅಧಿಕ ರೂಪಾಯಿ) ನೀಡಲು ಒಪ್ಪಂದವಾಗಿತ್ತು. ಇದರ ಮುಂಗಡವಾಗಿ 2023ರ ಜೂನ್ 9 ರಂದು ಸಹಚರನೊಬ್ಬನ ಮೂಲಕ 15,000 ಡಾಲರ್ ನಗದನ್ನು ತಲುಪಿಸಲಾಗಿತ್ತು.

ಪನ್ನುನ್ ಅವರ ನ್ಯೂಯಾರ್ಕ್ ನಿವಾಸದ ವಿಳಾಸ, ಫೋನ್ ಸಂಖ್ಯೆಗಳು ಮತ್ತು ದಿನಚರಿಯ ವಿವರಗಳನ್ನು ಯಾದವ್ ಅವರು ಗುಪ್ತಾಗೆ ನೀಡಿದ್ದರು. ಗುಪ್ತಾ ಈ ಮಾಹಿತಿ ಮತ್ತು ಪನ್ನುನ್ ಅವರ ಕಣ್ಗಾವಲು ಫೋಟೋಗಳನ್ನು ರಹಸ್ಯ ಅಧಿಕಾರಿಗೆ ಹಸ್ತಾಂತರಿಸಿದ್ದರು.

2023ರ ಜೂನ್ 20ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ನಿಗದಿಯಾಗಿದ್ದ ಕಾರಣ, ಆ ಸಮಯದಲ್ಲಿ ಹತ್ಯೆ ನಡೆಸದಂತೆ ಗುಪ್ತಾ ಸೂಚಿಸಿದ್ದರು. ಆದರೆ, ಜೂನ್ 18ರಂದು ಕೆನಡಾದಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದ ಮರುದಿನ, “ನಿಜ್ಜರ್ ಕೂಡ ನಮ್ಮ ಗುರಿಯಾಗಿದ್ದರು, ಇನ್ನು ಕಾಯುವ ಅಗತ್ಯವಿಲ್ಲ” ಎಂದು ಗುಪ್ತಾ ರಹಸ್ಯ ಅಧಿಕಾರಿಗೆ ತಿಳಿಸಿದ್ದರು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಅಮೆರಿಕದ ಮನವಿಯ ಮೇರೆಗೆ 2023ರ ಜೂನ್ 30ರಂದು ಜೆಕ್ ಗಣರಾಜ್ಯದಲ್ಲಿ ನಿಖಿಲ್ ಗುಪ್ತಾ ಅವರನ್ನು ಬಂಧಿಸಲಾಗಿತ್ತು. ಬಳಿಕ 2024ರ ಜೂನ್‌ನಲ್ಲಿ ಅವರನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ವಿಕಾಸ್ ಯಾದವ್ ವಿರುದ್ಧವೂ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು, ಅವರನ್ನು ಇನ್ನೂ ಬಂಧಿಸಲಾಗಿಲ್ಲ.

“ಅಮೆರಿಕದ ನೆಲದಲ್ಲಿ ಅಥವಾ ಅಮೆರಿಕದ ಪ್ರಜೆಗಳ ವಿರುದ್ಧ ಹಿಂಸಾಚಾರ ನಡೆಸಲು ಯತ್ನಿಸುವವರು ಎಲ್ಲೇ ಇದ್ದರೂ ಅವರನ್ನು ಕಾನೂನಿನ ಕುಣಿಕೆಗೆ ತರಲಾಗುವುದು ಎಂಬುದಕ್ಕೆ ಈ ಶಿಕ್ಷೆ ಸ್ಪಷ್ಟ ಎಚ್ಚರಿಕೆಯಾಗಿದೆ” ಎಂದು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಅಮೆರಿಕ ಅಟಾರ್ನಿ ಜೇಮೀ ಮೆಕ್‌ಡೊನಾಲ್ಡ್ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

560 ದಿನಗಳ ಜೈಲುವಾಸದ ಬಳಿಕ ಪತ್ರಕರ್ತನ ವಿರುದ್ಧದ ಯುಎಪಿಎ ಆರೋಪ ಕೈಬಿಟ್ಟ ನ್ಯಾಯಾಲಯ

ಕೇರಳ ಮೂಲದ ಪತ್ರಕರ್ತ ರೆಜಾಜ್ ಎಂ. ಶೀಬಾ ಸಿದ್ದೀಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ದಾಖಲಿಸಲಾಗಿದ್ದ ಎರಡು ಆರೋಪಗಳಿಂದ ನಾಗಪುರದ ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿದೆ. ಈ ಪ್ರಕರಣದಲ್ಲಿ...

ಪತ್ರಕರ್ತರನ್ನು ವಶಕ್ಕೆ ಪಡೆದು ‘ಜನಸಂದಣಿ ನಿಯಂತ್ರಣ’ ಎಂದು ಸಮರ್ಥಿಸಿಕೊಳ್ಳಲಾಗದು: ದೆಹಲಿ ಪೊಲೀಸರ ಕ್ರಮಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ಪತ್ರಕರ್ತರ ಸಂಘದ ಆಕ್ಷೇಪ

ನವದೆಹಲಿ: ಪ್ರತಿಭಟನೆಗಳನ್ನು ವರದಿ ಮಾಡಲು ತೆರಳಿದ ಪತ್ರಕರ್ತರನ್ನು ಬಲವಂತವಾಗಿ ಸ್ಥಳದಿಂದ ಹೊರಗೆಳೆದು ಪೊಲೀಸ್ ವಾಹನಗಳಿಗೆ ತಳ್ಳುವುದು, ಅವರ ಚಲನವಲನಗಳಿಗೆ ನಿರ್ಬಂಧ ಹೇರುವುದು ಸೇರಿದಂತೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಕ್ರಮಗಳನ್ನು ಕೇವಲ ‘ಜನಸಂದಣಿ...

‘BJP Ka Beta, BJPberg’ : ಮೆಟಾ ವಿರುದ್ಧ ಯುವ ಕಾಂಗ್ರೆಸ್ ರಾಷ್ಟ್ರವ್ಯಾಪಿ ಅಭಿಯಾನ; ನಿರ್ಬಂಧಿತ ಖಾತೆ, ಪೋಸ್ಟ್‌ಗಳ ಮರುಸ್ಥಾಪನೆಗೆ 7 ದಿನಗಳ ಗಡುವು 

ವಿರೋಧ ಪಕ್ಷದ ನಾಯಕರು (ವಿಶೇಷವಾಗಿ ಕಾಂಗ್ರೆಸ್ ನಾಯಕರು), ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿಗಳ (Influencers) ಖಾತೆಗಳನ್ನು ನಿರ್ಬಂಧಿಸಲಾಗುತ್ತಿದೆ ಎಂದು ಆರೋಪಿಸಿ, ಭಾರತೀಯ ಯುವ ಕಾಂಗ್ರೆಸ್ (ಐವೈಸಿ) ಟೆಕ್ ದೈತ್ಯ ‘ಮೆಟಾ’ (Meta)...

ಕಾಡುಗೊಲ್ಲರ ಎಸ್‌ಟಿ ಹಕ್ಕಿನ ಹೋರಾಟ: ಮೂರು ತಿಂಗಳ ಅಧ್ಯಯನದ ಬಳಿಕ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವನೆ; ಹಿರಿಯೂರು ಉಪಚುನಾವಣೆ ಸಿದ್ಧತೆಯೂ ಜೋರು

ಸಮುದಾಯದ ಬಹುದಿನಗಳ ಬೇಡಿಕೆಯ ಹಿನ್ನೆಲೆಯಲ್ಲಿ, ಕಾಡುಗೊಲ್ಲ ಮತ್ತು ಹಟ್ಟಿಗೊಲ್ಲ ಸಮುದಾಯಗಳಿಗೆ ಪರಿಶಿಷ್ಟ ಪಂಗಡ (ಎಸ್‌ಟಿ) ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ಮೂರು ತಿಂಗಳೊಳಗೆ ಜನಾಂಗೀಯ ಅಧ್ಯಯನ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಪ್ರಸ್ತಾವನೆ ಸಲ್ಲಿಸಲಾಗುವುದು...

ಕೇರಳ: ಇ20 ಪರೀಕ್ಷೆಗೆ ಶುದ್ಧ ಪೆಟ್ರೋಲ್ ನೀಡಲು ತೈಲ ಕಂಪನಿಗಳ ಹಿಂದೇಟು

ಪೆಟ್ರೋಲ್‌ನಲ್ಲಿರುವ ಎಥನಾಲ್ ಪ್ರಮಾಣವನ್ನು ಪರಿಶೀಲಿಸುವ ಕೇರಳ ಸರ್ಕಾರದ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಇ20 ಪೆಟ್ರೋಲ್‌ನಲ್ಲಿನ ಎಥನಾಲ್ ಪ್ರಮಾಣವನ್ನು ಹೋಲಿಕೆ ಮಾಡಿ ಪರೀಕ್ಷಿಸಲು ಅಗತ್ಯವಿರುವ ಎಥನಾಲ್ ಮಿಶ್ರಣವಿಲ್ಲದ ಶುದ್ಧ ಪೆಟ್ರೋಲ್ ಮಾದರಿಗಳನ್ನು ಒದಗಿಸಲು ತೈಲ ಕಂಪನಿಗಳು...

ಜಮ್ಮು-ಕಾಶ್ಮೀರ: ನೇಮಕಾತಿ ಅಕ್ರಮದ ವಿರುದ್ಧ  ಕೊರೆಯುವ ಚಳಿಯಲ್ಲೂ ಧರಣಿ: ವಿದ್ಯಾರ್ಥಿಗಳ ಜೊತೆ ರಾತ್ರಿ ಕಳೆದ ಮಾಜಿ ಸಂಸದ ಅಗಾ ರುಹುಲ್ಲಾ

ಶ್ರೀನಗರ: ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮಗಳು, ಪರೀಕ್ಷಾ ವಂಚನೆ ಮತ್ತು ನೇಮಕಾತಿ ವ್ಯವಸ್ಥೆಯಲ್ಲಿನ ಪಾರದರ್ಶಕತೆಯ ಕೊರತೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಯುವ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆ...

ತಿರುಪರಂಕುಂದ್ರಂ ವಿವಾದ : ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ತಮಿಳುನಾಡು ಸರ್ಕಾರದಿಂದ ಮರುಪರಿಶೀಲನಾ ಅರ್ಜಿ

ಮಧುರೈನ ತಿರುಪರಂಕುಂದ್ರಂ ಬೆಟ್ಟದ ಮೇಲಿರುವ ದರ್ಗಾದ ಸಮೀಪದ 'ದೀಪತ್ತೂನ್' (ಕಲ್ಲಿನ ಸ್ತಂಭ) ಮೇಲೆ ಕಾರ್ತಿಕ ದೀಪ ಬೆಳಗಲು ಅನುಮತಿ ನೀಡಿರುವ ಇತ್ತೀಚಿನ ಆದೇಶವನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ....

ಅಗ್ನಿವೀರರ ಮಾಹಿತಿ ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲು ಯತ್ನ: 14 ವರ್ಷದ ಬಾಲಕನ ವಶಕ್ಕೆ ಪಡೆದ ದೆಹಲಿ ಪೊಲೀಸರು

ಸುಮಾರು 4,000 ಅಗ್ನಿವೀರ ಸಿಬ್ಬಂದಿಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಹ್ಯಾಕ್ ಮಾಡಿ, ಅದನ್ನು ಡಾರ್ಕ್ ವೆಬ್‌ನಲ್ಲಿ 500 ಡಾಲರ್‌ಗೆ ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇಲೆ ಹರಿಯಾಣದ ಬಲ್ಲಭಗಢದ 14 ವರ್ಷದ ಬಾಲಕನನ್ನು...

ರೋಹಿಂಗ್ಯಾ ಮುಸ್ಲಿಮರ ನರಮೇಧಕ್ಕೆ ಇಸ್ರೇಲ್‌ ಶಸ್ತ್ರಾಸ್ತ್ರ ಪೂರೈಕೆ ಹಾಗೂ ತರಬೇತಿ ನೀಡಿದೆ: ಮ್ಯಾನ್ಮಾರ್ ಹೋರಾಟಗಾರ ಮೌಂಗ್ ಝರ್ನಿ ಗಂಭೀರ ಆರೋಪ

ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನರಮೇಧ ನಡೆಸುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್ ದೇಶವು ಮ್ಯಾನ್ಮಾರ್ ಸೇನೆಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿ, ತರಬೇತಿಯನ್ನೂ ನೀಡಿತ್ತು ಎಂದು ಮ್ಯಾನ್ಮಾರ್‌ನ ಖ್ಯಾತ ಹೋರಾಟಗಾರ ಮತ್ತು ಶಿಕ್ಷಣತಜ್ಞ ಮೌಂಗ್ ಝರ್ನಿ...

ಉತ್ತರ ಪ್ರದೇಶ ಚುನಾವಣೆ: ಒಬಿಸಿ ಮತಗಳ ‘ಕ್ರೋಢೀಕರಣಕ್ಕೆ’ ಅಖಿಲೇಶ್ ಯಾದವ್ ಯತ್ನ; ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿಗೆ ಚಿಂತನೆ

ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ (ಒಬಿಸಿ) ಮತಗಳನ್ನು ಕ್ರೋಢೀಕರಿಸಿ ಚುನಾವಣಾ ಲಾಭ ಪಡೆಯುವ ಉದ್ದೇಶದಿಂದ ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್...