HomeUncategorizedವಾಸವಾನಿ ಜಯಂತಿಗೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ : ಸಾರ್ವಜನಿಕರಿಂದ ತೀವ್ರ ಆಕ್ರೋಶ!

ವಾಸವಾನಿ ಜಯಂತಿಗೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ : ಸಾರ್ವಜನಿಕರಿಂದ ತೀವ್ರ ಆಕ್ರೋಶ!

- Advertisement -
- Advertisement -

“ಸಾಧು ವಾಸವಾನಿ ಜಯಂತಿ” ಪ್ರಯುಕ್ತ ನವೆಂಬರ್ 25, 2026ರ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. GBA ಪಶುಪಾಲನೆ ವಿಭಾಗದ ಉಪ ನಿರ್ದೇಶಕರು ನವೆಂಬರ್ 23, 2026ರಂದು ಈ ಸಂಬಂಧ ಆದೇಶ ಹೊರಡಿಸಿದ್ದು, ಪ್ರಾಧಿಕಾರ ವ್ಯಾಪ್ತಿಯ ಕಸಾಯಿಖಾನೆಗಳಲ್ಲಿ ಪ್ರಾಣಿವಧೆ ಹಾಗೂ ಮಾಂಸದ ಅಂಗಡಿಗಳು ಮತ್ತು ಮಳಿಗೆಗಳಲ್ಲಿ ಮಾಂಸ ಮಾರಾಟ ಮಾಡದಂತೆ ಸೂಚನೆ ನೀಡಲಾಗಿದೆ. ಈ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು GBA ತನ್ನ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಯ ಮೂಲಕವೂ ತಿಳಿಸಿದೆ.

ಈ ಆದೇಶದ ವಿರುದ್ಧ ಬೆಂಗಳೂರಿನಲ್ಲಿ ಆಕ್ರೋಶದ ಕಿಡಿ ಜೋರಾಗಿದೆ. “ನಮ್ಮ ಊಟ, ನಮ್ಮ ಹಕ್ಕು” ಅಭಿಯಾನದ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವರ್ಗದ ಜನರು ಮತ್ತು ನೆಟ್ಟಿಗರು ಸರಣಿ ಪೋಸ್ಟ್‌ಗಳ ಮೂಲಕ ಆಡಳಿತ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಸ್ಥಳೀಯ ಸಂದರ್ಭದೊಂದಿಗೆ ಸಾಧು ವಾಸವಾನಿ ಜಯಂತಿಯ ಪ್ರಸ್ತುತತೆಯನ್ನೂ ಹಲವರು ಪ್ರಶ್ನಿಸಿದ್ದಾರೆ.

“ನಮ್ಮ ಊಟ, ನಮ್ಮ ಹಕ್ಕು” ಅಭಿಯಾನದ ಪೋಸ್ಟರ್‌ನಲ್ಲಿ, “ನಮ್ಮ ತಟ್ಟೆಯಲ್ಲಿ ಏನಿರಬೇಕು ಎಂದು ಆದೇಶಿಸಲು ನೀವು ಯಾರು?” ಎಂದು ಪ್ರಶ್ನಿಸುತ್ತಾ, ಸಿಂಧ್‌ನಲ್ಲಿ ಹುಟ್ಟಿ ಪುಣೆಯಲ್ಲಿ ನೆಲೆಸಿದ್ದ ಸಾಧು ವಾಸವಾನಿ ಜಯಂತಿಗೆ ಬೆಂಗಳೂರಿನ ಮಾಂಸದಂಗಡಿಗಳನ್ನು ಏಕೆ ಮುಚ್ಚಬೇಕು ಎಂದು ಕೇಳಲಾಗಿದೆ. ಜೊತೆಗೆ, ಆರು ವರ್ಷಗಳಿಂದ ಚುನಾಯಿತ ಪಾಲಿಕೆ ಇಲ್ಲದ ಸ್ಥಿತಿಯಲ್ಲಿ ಒಬ್ಬ ಅಧಿಕಾರಿ ಇಡೀ ನಗರದ ಆಹಾರವನ್ನು ನಿರ್ಧರಿಸುವುದು ಯಾವ ಪ್ರಜಾಪ್ರಭುತ್ವ ಹಾಗೂ ಮಾಂಸ ವ್ಯಾಪಾರಿಗಳು ಮತ್ತು ಕಾರ್ಮಿಕರ ಒಂದು ದಿನದ ದುಡಿಮೆಯ ನಷ್ಟಕ್ಕೆ ಪರಿಹಾರ ಕೊಡುವವರು ಯಾರು ಎಂಬ ಪ್ರಶ್ನೆಗಳನ್ನೂ ಮುಂದಿಡಲಾಗಿತ್ತು.

ಇದೇ ವೇಳೆ, @WazBLR ಎಂಬುವವರು, ಉತ್ತರ ಭಾರತದ ವ್ಯಕ್ತಿಯೊಬ್ಬರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಏನು ತಿನ್ನಬೇಕು ಎಂಬುದನ್ನು ನಿರ್ಧರಿಸುವುದು ಏಕೆ ಎಂದು ಪ್ರಶ್ನಿಸಿ, @INCKarnataka ಖಾತೆಯನ್ನು ಟ್ಯಾಗ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ @drunkJournalist ಎಂಬ ಖಾತೆಯಿಂದ, ಬೆಂಗಳೂರಿನಲ್ಲಿ ಸಾಧು ವಾಸವಾನಿ ಯಾರೆಂಬುದೇ ಬಹುತೇಕರಿಗೆ ತಿಳಿದಿಲ್ಲದಿರುವಾಗ ಅವರ ಜಯಂತಿಗೆ ಮಾಂಸ ಮಾರಾಟ ನಿಷೇಧ ಮಾಡಿರುವುದು ಏಕೆ ಮತ್ತು ಇದರ ಹಿಂದೆ ಯಾವ ತುಷ್ಟೀಕರಣವಿದೆ ಎಂದು ಪ್ರಶ್ನಿಸಲಾಗಿದೆ. ಇದರ ಜೊತೆಗೆ ಇನ್ನೂ ಹಲವು ಜನರು ತಮ್ಮ ಆಕ್ರೋಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತ GBA ನಿರ್ಧಾರದ ಬಗ್ಗೆ ಕಿಡಿಕಾರಿದ್ದಾರೆ.

ಒಟ್ಟಾರೆಯಾಗಿ, ನವೆಂಬರ್ 25ರ ಬುಧವಾರದಂದು ಪ್ರಾಣಿವಧೆ ಮತ್ತು ಮಾಂಸ ಮಾರಾಟ ನಿಷೇಧಿಸಿರುವ GBA ಆದೇಶವು, ಕೇವಲ ಒಂದು ದಿನದ ನಿರ್ಬಂಧದ ಸುದ್ದಿಯಾಗಿ ಉಳಿಯದೆ, ಬೆಂಗಳೂರಿನ ಜನರ ಆಹಾರದ ಆಯ್ಕೆ, ಸ್ಥಳೀಯ ವ್ಯಾಪಾರಿಗಳು ಮತ್ತು ಕಾರ್ಮಿಕರ ಜೀವನೋಪಾಯ ಹಾಗೂ ಜನರ ಅಭಿಪ್ರಾಯವಿಲ್ಲದೆ ಹೊರಬೀಳುವ ಆಡಳಿತಾತ್ಮಕ ಆದೇಶಗಳ ಬಗ್ಗೆ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಿರುಪ್ಪರಂಕುಂದ್ರಂ ದೀಪಂ ವಿವಾದ: ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಹೈಕೋರ್ಟ್ ಸೂಚನೆ; ಬಿಜೆಪಿ ನಾಯಕರಿಗೆ ಗೃಹಬಂಧನ

ತಮಿಳುನಾಡಿನ ಮದುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತ್ತೂಣ್'ನಲ್ಲಿ ಕಾರ್ತಿಗೈ ದೀಪಂ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ...

‘ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕವಲ್ಲ’: ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿತ್ತು: ರಾಹುಲ್ ಗಾಂಧಿ ಗಂಭೀರ ಆರೋಪ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕೇವಲ ಭದ್ರತಾ ವೈಫಲ್ಯದಿಂದ ಸಂಭವಿಸಿದ ಘಟನೆಯಲ್ಲ, ಬದಲಾಗಿ ಅವರನ್ನು ಹತ್ಯೆ ಮಾಡಲು ಅನುಕೂಲವಾಗುವಂತೆ ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿತ್ತು ಎಂದು ಲೋಕಸಭೆಯ ವಿರೋಧ...

ಜಿಬಿಎ ಚುನಾವಣೆಗೆ ರಾಜ್ಯದ ಮತಪಟ್ಟಿ ಬಳಸಲು ಸಿದ್ಧ : ಸಂಗ್ರೇಶಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಚುನಾವಣೆಗೆ 2025ರ ಮತದಾರರ ಪಟ್ಟಿಯನ್ನೇ ಬಳಸಲು ರಾಜ್ಯ ಚುನಾವಣಾ ಆಯೋಗ ಸಿದ್ಧವಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನು...

ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ SIR ಮತಪಟ್ಟಿ ಬಳಸಬೇಡಿ; 2025ರ ಪಟ್ಟಿಯನ್ನೇ ಪರಿಷ್ಕರಿಸಿ ಬಳಸಿ : ರಾಜ್ಯ ಚುನಾವಣಾ ಆಯುಕ್ತರಿಗೆ ಹೋರಾಟಗಾರರ ಮನವಿ

ಮುಂಬರುವ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ವಿವಾದಾತ್ಮಕ ಹಾಗೂ ದೋಷಪೂರಿತವಾಗಿರುವ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿಯನ್ನು ಬಳಸದೆ, 2025ರ ಮತಪಟ್ಟಿಯನ್ನೇ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಿ ಬಳಸಬೇಕು ಎಂದು 'SIR...

ಕರ್ನಾಟಕದ ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ಮತದಾರನನ್ನೂ ಕೈಬಿಟ್ಟಿಲ್ಲವೇ? ವಾಸ್ತವ ಬೇರೆಯೇ ಇದೆ! (ಭಾಗ-1)

ಲೇಖಕರು: ಅಮನ್ ಭಾರ್ಗವಮೂಲ: Diagram Chasingಕನ್ನಡಕ್ಕೆ: ಸೋಮಶೇಖರ್ ಚಲ್ಯ "ಮತದಾರರ ಪಟ್ಟಿಯಿಂದ ಒಬ್ಬ ಅರ್ಹ ನಾಗರಿಕನನ್ನೂ ಹೊರಗಿಟ್ಟಿಲ್ಲ; ಒಬ್ಬ ಅನರ್ಹ ವ್ಯಕ್ತಿಯನ್ನೂ ಮತದಾರರ ಪಟ್ಟಿಯಲ್ಲಿ ಸೇರಿಸಿಲ್ಲ" - ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ, ಅಕ್ಟೋಬರ್ 27,...

ಪಂಜಾಬ್‌ ಚುನಾವಣೆಗೆ ಬಿಜೆಪಿ-ಎಸ್‌ಎಡಿ ಮೈತ್ರಿ : ಮತ್ತೆ ಎನ್‌ಡಿಎಗೆ ಮರಳಿದ ಅಕಾಲಿದಳ

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮೈತ್ರಿ ಘೋಷಣೆ ಮಾಡಿವೆ. ಇದರೊಂದಿಗೆ ಅಕಾಲಿ ದಳ ಮತ್ತೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ...

ದಿಲ್ಜಿತ್ ದೋಸಾಂಜ್ ಬೆಂಗಳೂರು ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ; ಮಾದಾವರ ಮೆಟ್ರೋ ನಿಲ್ದಾಣದಲ್ಲೂ ಐಇಡಿ ಸ್ಫೋಟದ ಎಚ್ಚರಿಕೆ

ಬೆಂಗಳೂರು: ಖ್ಯಾತ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಅವರ ಬೆಂಗಳೂರಿನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮಕ್ಕೆ ಬಾಂಬ್ ಬೆದರಿಕೆ ಇಮೇಲ್ ಬಂದಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ನವೆಂಬರ್ 29ರಂದು ಮಾದಾವರದ ನೈಸ್ ಮೈದಾನದಲ್ಲಿ ನಡೆಯಲಿರುವ...

SIR ವಿರುದ್ಧದ ಹೋರಾಟದೇಶಕ್ಕೆ ಮಾದರಿಯಾದ ಕರ್ನಾಟಕ

ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ನಿರ್ಣಾಯಕ ಹೋರಾಟಕ್ಕೆ ಪ್ರಸ್ತುತ ದೇಶದ ಜನರು ಧುಮುಕಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯಿಂದ ಹಿಡಿದು, ನಮ್ಮ ಕರ್ನಾಟಕದ ಕೊಡಗಿನ ಆದಿವಾಸಿ ಹಾಡಿಗಳವರೆಗೆ ಹೋರಾಟದ ಕಿಚ್ಚು ಹಬ್ಬಿದೆ. ಕಳೆದ 10-12 ವರ್ಷಗಳಲ್ಲಿ...

ಎಫ್‌ಐಆರ್ ರದ್ದತಿ ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ವಿವಾದಿತ ‘ಬಸವ ಮಂಟಪ’ ಕೃತಿ ಲೇಖಕ ರವಿ ಹಂಜ್‌

‘ಬಸವ ಮಂಟಪ’ ಕೃತಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸುವಂತೆ ಕೋರಿ ಲೇಖಕ ರವಿ ಹಂಜಗಿಮಠ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ತಮ್ಮ ಅರ್ಜಿಯಲ್ಲಿ, ತಾನು ಬದ್ಧ ವೀರಶೈವ ಲಿಂಗಾಯತ ಧರ್ಮದ...

ದೇವಾಲಯ ಆವರಣದಲ್ಲಿನ ಪೆರಿಯಾರ್ ಪ್ರತಿಮೆ ಸ್ಥಳಾಂತರಿಸಲು ಹೈಕೋರ್ಟ್ ಸೂಚನೆ: ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ತಮಿಳುನಾಡು ಸರ್ಕಾರ ಮೇಲ್ಮನವಿ

ತಂಜಾವೂರು (ತಮಿಳುನಾಡು): ತಂಜಾವೂರು ಜಿಲ್ಲೆಯ ಅರುಳ್ಮಿಗು ಬ್ರಹ್ಮಸಿರಕಂಡೀಶ್ವರರ್ ದೇವಾಲಯದ ಸಮೀಪ ಸ್ಥಾಪಿಸಲಾಗಿರುವ ದ್ರಾವಿಡ ಚಳವಳಿಯ ನಾಯಕ ಹಾಗೂ ಸಮಾಜ ಸುಧಾರಕ ಇ.ವಿ. ರಾಮಸ್ವಾಮಿ (ಪೆರಿಯಾರ್) ಅವರ ಪ್ರತಿಮೆಯನ್ನು ತೆರವುಗೊಳಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿದ್ದ...