Homeಮುಖಪುಟಕ್ಷೇತ್ರ ಪುನರ್ವಿಂಗಡಣೆ : ಟಿಎಂಸಿಯಿಂದ ಹೊರಹೋದ 20 ಸಂಸದರ ಮತ ಚಲಾವಣೆಗೆ ನಿಷೇಧ ಹೇರುವಂತೆ ಲೋಕಸಭಾ...

ಕ್ಷೇತ್ರ ಪುನರ್ವಿಂಗಡಣೆ : ಟಿಎಂಸಿಯಿಂದ ಹೊರಹೋದ 20 ಸಂಸದರ ಮತ ಚಲಾವಣೆಗೆ ನಿಷೇಧ ಹೇರುವಂತೆ ಲೋಕಸಭಾ ಸ್ಪೀಕರ್‌ಗೆ ಅಭಿಷೇಕ್ ಬ್ಯಾನರ್ಜಿ ಪತ್ರ

- Advertisement -
- Advertisement -

ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ (NCPI) ಜೊತೆ ವಿಲೀನಗೊಂಡಿದ್ದಾರೆ ಎನ್ನಲಾದ 20 ಸಂಸದರಿಗೆ ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ತೃಣಮೂಲ ಕಾಂಗ್ರೆಸ್ (TMC) ಲೋಕಸಭಾ ನಾಯಕ ಅಭಿಷೇಕ್ ಬ್ಯಾನರ್ಜಿ ಅವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ನವೆಂಬರ್ 28ರಂದು ಬರೆದಿರುವ ಈ ಪತ್ರದಲ್ಲಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITC) ಟಿಕೆಟ್‌ನಿಂದ ಲೋಕಸಭೆಗೆ ಆಯ್ಕೆಯಾದ ಈ 20 ಸಂಸದರ ಅನರ್ಹತೆ ಪ್ರಕ್ರಿಯೆಗಳು ಇನ್ನೂ ಬಾಕಿ ಉಳಿದಿರುವುದರಿಂದ ಅವರಿಗೆ ನೀಡಿರುವ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ತುರ್ತಾಗಿ ಪರಿಶೀಲಿಸುವಂತೆಯೂ ಬ್ಯಾನರ್ಜಿ ಕೋರಿದ್ದಾರೆ.

“ಸಂಬಂಧಪಟ್ಟ 20 ಸದಸ್ಯರ ಅನರ್ಹತೆ ಪ್ರಕ್ರಿಯೆಗಳು ಬಾಕಿ ಉಳಿದಿದ್ದು, ಈ ಬಗ್ಗೆ ಯಾವುದೇ ಅಂತಿಮ ನಿರ್ಧಾರ ತೆಗೆದುಕೊಳ್ಳದ ಕಾರಣ ವಿಶೇಷ ಅಧಿವೇಶನದಲ್ಲಿ ಅವರಿಗೆ ಮತದಾನ ಮಾಡಲು ಅವಕಾಶ ನೀಡಬಾರದು. ಅವರಿಗೆ ಮತದಾನಕ್ಕೆ ಅವಕಾಶ ನೀಡುವುದರಿಂದ ಬಾಕಿ ಇರುವ ಪ್ರಕ್ರಿಯೆಗಳಿಗೆ ಧಕ್ಕೆಯಾಗುತ್ತದೆ” ಎಂದು ಅಭಿಷೇಕ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸಂವಿಧಾನದ 10ನೇ ಶೆಡ್ಯೂಲ್ ಉಲ್ಲೇಖ:

ಪಕ್ಷಾಂತರ ನಿಷೇಧ ಕಾಯ್ದೆಯಡಿ (ಸಂವಿಧಾನದ 10ನೇ ಶೆಡ್ಯೂಲ್ ಮತ್ತು ಲೋಕಸಭಾ ಸದಸ್ಯರ ಅನರ್ಹತೆ ನಿಯಮಗಳು, 1985) ಜೂನ್ 19, 2026 ರಂದು ಈ ಎಲ್ಲಾ 20 ಸಂಸದರ ವಿರುದ್ಧ ಅನರ್ಹತೆ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅವು ಇನ್ನೂ ಇತ್ಯರ್ಥವಾಗಿಲ್ಲ ಎಂದು ಅಭಿಷೇಕ್ ತಿಳಿಸಿದ್ದಾರೆ. ಅಲ್ಲದೆ, ಲೋಕಸಭೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಲೂ ಎಐಟಿಸಿ ಬಲವನ್ನು 28 ಸದಸ್ಯರು ಎಂದೇ ತೋರಿಸಲಾಗುತ್ತಿದೆ ಎಂದು ಬ್ಯಾನರ್ಜಿ ಬೆಟ್ಟು ಮಾಡಿದ್ದಾರೆ.

10ನೇ ಶೆಡ್ಯೂಲ್‌ನ ಪ್ಯಾರಾ 4 ರ ಅಡಿಯಲ್ಲಿ ಅನರ್ಹತೆಯಿಂದ ರಕ್ಷಣೆ ಪಡೆಯಲು ಮೂಲ ರಾಜಕೀಯ ಪಕ್ಷವೇ ಮತ್ತೊಂದು ಪಕ್ಷದೊಂದಿಗೆ ವಿಲೀನವಾಗಬೇಕು. ಆದರೆ, ಇಲ್ಲಿ ಮೂಲ ಪಕ್ಷವಾದ ಎಐಟಿಸಿ, ಎನ್‌ಸಿಪಿಐ ಜೊತೆ ವಿಲೀನವಾಗಿಲ್ಲ ಎಂದು ಅಭಿಷೇಕ್ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.

ಮಹತ್ವದ ಮಸೂದೆಗಳ ಮಂಡನೆ:

ನವೆಂಬರ್ 30 ರಂದು ಲೋಕಸಭೆಯಲ್ಲಿ ಸರ್ಕಾರವು ಸಂವಿಧಾನ (132ನೇ ತಿದ್ದುಪಡಿ) ಮಸೂದೆ 2026, ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಎರಡನೇ ಮಸೂದೆ 2026, ಮತ್ತು ಕ್ಷೇತ್ರ ಪುನರ್ವಿಂಗಡಣೆ (ಎರಡನೇ) ಮಸೂದೆ 2026 ಸೇರಿದಂತೆ ಮೂರು ಪ್ರಮುಖ ಮಸೂದೆಗಳನ್ನು ಮಂಡಿಸಲಿದೆ. ಸಂವಿಧಾನ ತಿದ್ದುಪಡಿ ಮಸೂದೆಗೆ ಸದನದಲ್ಲಿ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಮೂರನೇ ಎರಡರಷ್ಟು ಬಹುಮತದ ಅಗತ್ಯವಿರುವುದರಿಂದ, ಈ 20 ಸಂಸದರ ಮತಗಳನ್ನು ಪರಿಗಣಿಸುವುದರ ಬಗ್ಗೆ ಟಿಎಂಸಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ಈ ಹಿನ್ನೆಲೆಯಲ್ಲಿ ನವೆಂಬರ್ 30 ರಿಂದ ಡಿಸೆಂಬರ್ 4 ರವರೆಗೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು ಪಕ್ಷದ ನಿಲುವನ್ನು ಬೆಂಬಲಿಸುವಂತೆ ಟಿಎಂಸಿ ತನ್ನ ಎಲ್ಲಾ ಲೋಕಸಭಾ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದೆ. “ಈ ಅಂತಿಮ ಹೋರಾಟವನ್ನು ಯಾವುದೇ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಅಲ್ಲ, ಜನತಾ ನ್ಯಾಯಾಲಯದಲ್ಲಿ ನಡೆಸಲಾಗುವುದು; ದೇಶದ ಜನರೇ ನಿರ್ಧರಿಸಲಿ” ಎಂದು ಅಭಿಷೇಕ್ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇಸ್ರೇಲ್‌ನಲ್ಲಿ ಏಕತಾ ಸರ್ಕಾರಕ್ಕೆ ನೆತನ್ಯಾಹು ಹೊಸ ತಂತ್ರ: ಮೊದಲು ಐಸೆನ್‌ಕೋಟ್‌ಗೆ ಪ್ರಧಾನಿ ಹುದ್ದೆ ನೀಡುವ ಪ್ರಸ್ತಾಪ 

ಜೆರುಸಲೆಮ್: ಇಸ್ರೇಲ್‌ನಲ್ಲಿ ಚುನಾವಣೆಯ ಬಳಿಕ ಉಂಟಾಗಿರುವ ರಾಜಕೀಯ ಬಿಕ್ಕಟ್ಟನ್ನು ಅವಕಾಶವಾಗಿ ಬಳಸಿಕೊಳ್ಳಲು ನೆತನ್ಯಾಹು ಹೊಸ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಪೂರ್ಣ ಬಹುಮತ ಯಾವ ಪಕ್ಷಕ್ಕೂ ಬರದ ಕಾರಣ ಏಕತಾ ಸರ್ಕಾರ ರಚಿಸುವ ಉದ್ದೇಶದಿಂದ ಪ್ರಧಾನಿ...

‘ಮೂರು ಗುರಿಗಳು ಇನ್ನೂ ಜೀವಂತ’: ಕ್ಷೇತ್ರ ಪುನರ್ವಿಂಗಡಣೆಯ ಒಳಸಂಚುಗಳ ಬಗ್ಗೆ ಯೋಗೇಂದ್ರ ಯಾದವ್ ಎಚ್ಚರಿಕೆ

ಎಲ್ಲಾ ರಾಜ್ಯಗಳ ಲೋಕಸಭಾ ಸ್ಥಾನಗಳನ್ನು ಏಕರೂಪವಾಗಿ ಶೇ.50ರಷ್ಟು ಹೆಚ್ಚಿಸಲಾಗುವುದು ಮತ್ತು 1971ರ ಜನಗಣತಿ ಆಧಾರಿತ ಪ್ರಾತಿನಿಧ್ಯದ ಅನುಪಾತ ಮುಂದಿನ 25 ವರ್ಷಗಳವರೆಗೆ (2051ರವರೆಗೆ) ಯಥಾಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗುವುದು ಎಂಬ ಪ್ರಮುಖ ಭರವಸೆಗಳನ್ನು ನೀಡುವ ಮೂಲಕ...

ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ವಿಜಯೇಂದ್ರ ವಿರೋಧ: ಬಸವಕಲ್ಯಾಣದ ಶರಣ ಕಮ್ಮಟದಲ್ಲಿ ಭುಗಿಲೆದ್ದ ಪ್ರತಿಭಟನೆ, ಉದ್ವಿಗ್ನ ವಾತಾವರಣ

ಬಸವಕಲ್ಯಾಣ: ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬಸವಣ್ಣನ ಭಕ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಶನಿವಾರ ಬಸವಕಲ್ಯಾಣದಲ್ಲಿ ನಡೆಯುತ್ತಿರುವ 47ನೇ ಶರಣ ಕಮ್ಮಟ ಹಾಗೂ ಅನುಭವ...

ಕ್ಷೇತ್ರ ಪುನರ್ವಿಂಗಡಣೆ ಚರ್ಚೆಯ ನಡುವೆ ‘ಜೆರಿಮ್ಯಾಂಡರಿಂಗ್’ ಸದ್ದು : ಏನಿದು ಹೊಸ ಪದ, ವಿಪಕ್ಷಗಳ ಆತಂಕಕ್ಕೆ ಕಾರಣವೇನು?

2029ರ ಲೋಕಸಭಾ ಚುನಾವಣೆಗೆ ಮುನ್ನ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಯನ್ನು ಮಂಡಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ರಾಜಕೀಯ ವಲಯದಲ್ಲಿ 'ಜೆರಿಮ್ಯಾಂಡರಿಂಗ್' (Gerrymandering) ಎಂಬ ಪದ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರಗಳ...

‘ಪ್ರಜಾಪ್ರಭುತ್ವವನ್ನು ಯಾರು ರಕ್ಷಿಸುತ್ತಿದ್ದಾರೆ, ಯಾರು ರಕ್ಷಿಸುತ್ತಿಲ್ಲ ಎಂಬುದು ಸ್ಪಷ್ಟವಾಗಲಿದೆ’: ಎಲ್ಲ ರಾಜಕೀಯ ಪಕ್ಷಗಳಿಗೂ ರಾಹುಲ್ ಗಾಂಧಿ ಕರೆ

ನವದೆಹಲಿ: ಕೇಂದ್ರ ಸರ್ಕಾರದ ಕ್ಷೇತ್ರ ಪುನರ್ವಿಂಗಡಣೆ ಪ್ರಸ್ತಾಪದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಕೊಲೆಯಾಗುತ್ತಿದೆ, ದಯವಿಟ್ಟು ಎದ್ದೇಳಿ...

ಶಾಶ್ವತವಾಗಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯಿಂದ ‘800 ಪಾರ್’ ಗುರಿ ; SC/ST ಸಮುದಾಯಕ್ಕೆ ಅನ್ಯಾಯ : ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಬಗ್ಗೆ ಖರ್ಗೆ ಕಳವಳ

ಶನಿವಾರ (ನ.28) ತಮ್ಮ ನಿವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸದನ ನಾಯಕರ ಸಭೆಯ ನಂತರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ....

ಕ್ಷೇತ್ರ ಪುನರ್‌ವಿಂಗಡಣೆ : ಮಸೂದೆ ವಿರುದ್ಧ ಮತ ಚಲಾಯಿಸುವಂತೆ ಸಂಸದರಿಗೆ ವಿಪ್ ಜಾರಿ ಮಾಡಿದ ಸಮಾಜವಾದಿ ಪಕ್ಷ

ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲಿರುವ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ (ಡಿಲಿಮಿಟೇಶನ್) ಮಸೂದೆಗಳ ವಿರುದ್ಧ ಮತ ಚಲಾಯಿಸುವಂತೆ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಎಲ್ಲಾ ಲೋಕಸಭಾ ಸದಸ್ಯರಿಗೆ ಮೂರು ಸಾಲಿನ...

ಕ್ಷೇತ್ರ ಪುನರ್ವಿಂಗಡಣೆ: ವಿರೋಧ ಪಕ್ಷಗಳ ಒಗ್ಗಟ್ಟಿಗೆ ಸವಾಲು; ಸ್ಟಾಲಿನ್, ಶರದ್ ಪವಾರ್ ಮನವೊಲಿಸಲು ಖರ್ಗೆ, ರಾಹುಲ್, ಸೋನಿಯಾ ಚೆನ್ನೈ, ಮುಂಬೈಗೆ ಭೇಟಿ

ನವದೆಹಲಿ: ವಿವಾದಾತ್ಮಕ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ವಿರೋಧಿಸುವ ವಿಚಾರದಲ್ಲಿ ಪ್ರತಿಪಕ್ಷಗಳ ನಡುವಿನ ಭಿನ್ನಮತ INDIA ಮೈತ್ರಿಕೂಟದ ಒಗ್ಗಟ್ಟಿಗೇ ಸವಾಲಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಡಿಎಂಕೆ ಮತ್ತು ಎನ್‌ಸಿಪಿ (ಎಸ್‌ಪಿ) ಪಕ್ಷಗಳು ತಮ್ಮ ನಿಲುವು...

ಸ್ಟಾಲಿನ್ ಅಲಿಯಾಸ್ ‘ಸಾವರ್ಕರ್ 2.0’: ಕ್ಷೇತ್ರ ಪುನರ್‌ವಿಂಗಡಣೆ ಬೆಂಬಲಿಸಿದ ಡಿಎಂಕೆ ವಿರುದ್ಧ ಟಿವಿಕೆ ತೀಕ್ಷ್ಣ ವಾಗ್ದಾಳಿ

ಚೆನ್ನೈ: ಕೇಂದ್ರ ಸರ್ಕಾರದ ಪರಿಷ್ಕೃತ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಡಿಎಂಕೆ ಅಧಿಕೃತ ಬೆಂಬಲ ಘೋಷಿಸಿದ ಬೆನ್ನಲ್ಲೇ, ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಡಿಎಂಕೆ ಅಧ್ಯಕ್ಷ ಎಂ.ಕೆ....

“ಸ್ಪಷ್ಟ ಲಿಖಿತ ಭರವಸೆ ದೊರೆಯುವವರೆಗೂ ಹೋರಾಟವನ್ನು ಹಿಂಪಡೆಯುವುದಿಲ್ಲ”: ಸರ್ಕಾರಿ ಶಾಲೆಗಳ ದತ್ತು ನೀತಿ ವಿರೋಧಿಸಿ ಅಹೋರಾತ್ರಿ ಧರಣಿ ಮುಂದುವರಿಕೆ; ಪ್ರತಿಭಟನಾ ಸ್ಥಳಕ್ಕೆ ಸಚಿವ ಡಾ. ಅಜಯ್ ಸಿಂಗ್ ಭೇಟಿ

ಬೆಂಗಳೂರು, ನವೆಂಬರ್ 28, 2026: ಶಿಕ್ಷಣ ಹಕ್ಕು ಕಾಯಿದೆ (RTE) ಸಮರ್ಪಕ ಜಾರಿ ಹಾಗೂ ಸರ್ಕಾರಿ ಶಾಲೆಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡುವ ನೀತಿಯನ್ನು ತಕ್ಷಣವೇ ಕೈಬಿಡುವಂತೆ ಆಗ್ರಹಿಸಿ 'ಸರ್ಕಾರಿ ಶಾಲೆ ಅಭಿವೃದ್ಧಿ...