Homeಅಂಕಣಗಳುಗೌರಿ ಆಶಯಗಳ ಜೊತೆಗೆ.....

ಗೌರಿ ಆಶಯಗಳ ಜೊತೆಗೆ…..

- Advertisement -
- Advertisement -

ಬಂಧುಗಳೇ,

ಗೌರಿ ಲಂಕೇಶ್‌ರ ಹತ್ಯೆ ಮಾಡುವ ಮೂಲಕ ತಮ್ಮ ವಿರುದ್ಧದ ಗಟ್ಟಿದನಿಯನ್ನು ಇಲ್ಲವಾಗಿಸುವುದು ಆ ಸಂಚುಕೂಟದ ಲೆಕ್ಕಾಚಾರವಾಗಿತ್ತು. ಆದರೆ ಈ ನಾಡಿನ ಜನತೆ ‘ನಾನೂ ಗೌರಿ! ನಾವೆಲ್ಲಾ ಗೌರಿ!!’ ಎಂದು ಒಕ್ಕೊರಲಿನಿಂದ ಕೂಗಿ ಹೇಳಿ ಈ ಸಂಚುಕೂಟಕ್ಕೆ ಬೇರೆಯದೇ ಸಂದೇಶವನ್ನು ರವಾನಿಸಿದ್ದಾರೆ. ”ವ್ಯಕ್ತಿಗಳಿಗೆ ಗುಂಡಿಕ್ಕಬಹುದೇ ಹೊರತು ವಿಚಾರಗಳಿಗೆ ಗುಂಡಿಕ್ಕಲು ನಿಮ್ಮಿಂದ ಎಂದಿಗೂ ಸಾಧ್ಯವಿಲ್ಲ” ಎಂದು ಸಾರಿ ಹೇಳಿದ್ದಾರೆ. ‘ಒಬ್ಬ ಗೌರಿಯ ವಿಚಾರವನ್ನು ಸಾವಿರಾರು ಗೌರಿಯರಾಗಿ ನಾವು ಮುಂದುವರೆಸುತ್ತೇವೆ’ ಎಂಬ ಪಣ ತೊಟ್ಟಿದ್ದಾರೆ.

ಇಂಥ ಒಂದು ಸಾಮೂಹಿಕ ದೃಢ ಸಂಕಲ್ಪದ ಫಲವಾಗಿ ‘ನಾನು ಗೌರಿ’ ಪತ್ರಿಕೆ ಆರಂಭವಾಗಿದೆ. ಪತ್ರಿಕೆಯ ಆರಂಭದೊಂದಿಗೆ ನಮ್ಮ ಗೌರಿ ಲಂಕೇಶ್ ಮರುಹುಟ್ಟು ಪಡೆದಿದ್ದಾರೆ. ಗೌರಿ ಇಲ್ಲದ ಈ ಸಂಕಟಮಯ ಸನ್ನಿವೇಶದಲ್ಲಿ ಗೌರಿ ಪತ್ರಿಕೆಯನ್ನು ಹೊರತರಲು ಕೈಜೋಡಿಸಿದ ಎಲ್ಲರಿಗೂ ‘ಗೌರಿ ಮೀಡಿಯಾ’ ತಂಡದ ಹೃದಯಪೂರ್ವಕ ಕೃತಜ್ಞತೆಗಳು.

ಲಂಕೇಶ್‌ರು ಹುಟ್ಟುಹಾಕಿದ ಜನಪರ, ನಿರ್ಭೀತ ಪತ್ರಿಕೋದ್ಯಮದ ಮಾದರಿಯನ್ನು ಮುಂದುವರೆಸಿದ ಗೌರಿ ಲಂಕೇಶ್ ಆಕ್ಟಿವಿಸ್ಟ್ ಆಗಿ, ಪತ್ರಕರ್ತೆಯಾಗಿ ಹಾಕಿಕೊಟ್ಟ ಮಾದರಿ ನಮಗೆ ಸದಾ ಸ್ಫೂರ್ತಿ. ಈ ಎರಡೂ ಲೆಗಸಿಗಳನ್ನು ಮುಂದುವರೆಸಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜೊತೆಗೆ ಈ ಕಾಲಘಟ್ಟದ ಹೊಸ ಸಂಕೀರ್ಣತೆಗಳಿಗೆ ಮುಖಾಮುಖಿಯಾಗಬೇಕಿರುವ ಸವಾಲು ನಮ್ಮ ಮುಂದಿದೆಯೆಂಬುದನ್ನೂ ಅರಿತು ಮುಂದಡಿ ಇಡುತ್ತಿದ್ದೇವೆ.

ಕಲ್ಬುರ್ಗಿ ಹತ್ಯೆ ಖಂಡಿಸಿ ಗೌರಿ ಹಾಗೂ ಇನ್ನಿತರೆ ಪ್ರಗತಿಪರರ ಪ್ರತಿಭಟನೆ

ಇಂದು ನಮ್ಮ ಪ್ರಜಾತಂತ್ರ ಬಿಕ್ಕಟ್ಟಿನಲ್ಲಿದೆ. ನಮ್ಮ ಸಂವಿಧಾನದ ಆಶಯಗಳಾದ ಸ್ವಾತಂತ್ರ್ಯ, ಸಮಾನತೆ, ಸಹೋದರತೆಯ ಬುನಾದಿಯನ್ನೇ ಅಲುಗಾಡಿಸುವ ಮಟ್ಟಕ್ಕೆ ಇಂದು ಫ್ಯಾಸಿಸ್ಟ್ ಶಕ್ತಿಗಳು ಬೆಳೆದು ನಿಂತಿವೆ. ಸ್ವತಂತ್ರ, ನಿರ್ಭೀತ ಪತ್ರಿಕೆಗಳ ಹಾಗೂ ಪತ್ರಕರ್ತರ ದನಿ ಅಡಗಿಸಲು ಈ ಹಿಟ್ಲರ್‌ಶಾಹಿಗಳು ದೇಶಾದ್ಯಂತ ಸೃಷ್ಟಿಸುತ್ತಿರುವ ಭೀಭತ್ಸಕ್ಕೆ ಗೌರಿಯವರ ಹತ್ಯೆಯೇ ಸಾಕ್ಷಿ. ದೀನ ದಲಿತರ, ದುರ್ಬಲರ ದನಿಯಾಗಬೇಕಿದ್ದ ಮಾಧ್ಯಮ ಕ್ಷೇತ್ರವನ್ನು ಇಡಿಯಾಗಿ ಕಾರ್ಪೊರೇಟ್ ಶಕ್ತಿಗಳು ಆವರಿಸಿಕೊಳ್ಳುತ್ತಿವೆ. ಸಾಮಾಜಿಕ ಮಾಧ್ಯಮದಲ್ಲೂ ಫ್ಯಾಸಿಸ್ಟ್‌ಗಳದೇ ಕಾರುಬಾರು.

ಹಿಟ್ಲರ್‌ಶಾಹಿಗಳು ಸೃಷ್ಟಿಸಿರುವ ಇಂಥ ವಿಷಮ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸದೆ ಹೋದರೆ ಈ ದೇಶದ ಪ್ರಜಾತಂತ್ರದ ಅಸ್ತಿತ್ವಕ್ಕೇ ಸಂಚಕಾರ ಒದಗುವ ಅಪಾಯವಿದೆ. ಈ ಕಾಲದ ಕರೆಗೆ ಓಗೊಡಬೇಕಾದ್ದು ಜನಪರ ಪತ್ರಿಕೆಯೊಂದರ ಆದ್ಯ ಕರ್ತವ್ಯ. ‘ನಾನು ಗೌರಿ’ ಪತ್ರಿಕೆ ಈ ಕರ್ತವ್ಯವನ್ನು ನಿರ್ವಹಿಸಲು ಬದ್ಧವಾಗಿದೆ. ಹಾಗೆಯೇ ಗದ್ದುಗೆಯಲ್ಲಿರುವವರ ಜನವಿರೋಧಿತನವನ್ನು ಎದುರಿಸಿ ನಿರಂತರ ವಿರೋಧ ಪಕ್ಷವಾಗಿ ನಿಲ್ಲುವ ಆಶಯ ನಮ್ಮದು. ಯಾವುದೇ ರಾಜಕೀಯ ಪಕ್ಷದ, ರಾಜಕಾರಣಿಗಳ ಮರ್ಜಿಗೆ ಒಳಗಾಗದೆ ಅಥವ ಜಾಹಿರಾತುಗಳ ಹಂಗಿಗೆ ಸಿಲುಕದೆ ಪತ್ರಿಕಾ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ‘ನಾನು ಗೌರಿ’ ಬದ್ಧವಾಗಿರುತ್ತದೆ.

ಪತ್ರಿಕೆಯ ಸ್ವಭಾವ ಮತ್ತು ಗುಣಮಟ್ಟಗಳನ್ನು ಉತ್ತಮಪಡಿಸುವ ನಿರಂತರ ಪ್ರಕ್ರಿಯೆಯ ಭಾಗವಾಗಿ ಹೊಸದಾರಿಯಲ್ಲಿ ಸಾಗುತ್ತೇವೆ. ಇದರ ಭಾಗವಾಗಿ ಹೊಸ ತಲೆಮಾರಿನ ಬರಹಗಾರರನ್ನು ಒಳಗೊಳ್ಳುವುದು ಮಾತ್ರವಲ್ಲದೆ, ವಿವಿಧ ಜನಪರ ಚಳವಳಿಗಳ ನಮ್ಮ ನಡುವಿನ ಭಿನ್ನ ವಿಚಾರ ಧಾರೆಗಳ ನಡುವೆ ರಚನಾತ್ಮಕ ಸಂವಾದಕ್ಕೆ ‘ಪತ್ರಿಕೆ’ ವೇದಿಕೆಯಾಗಲಿದೆ. ವರ್ತಮಾನಕ್ಕೆ ಸಂವಾದಿಯಾಗಿ ಬರಹದಲ್ಲಿ ತೊಡಗಿಸಿಕೊಂಡಿರುವ ಹಲವು ಗಣ್ಯರ ಅಂಕಣಗಳೂ ಇರುತ್ತವೆ. ದಿಕ್ಕೆಟ್ಟ ರಾಜಕಾರಣ, ಆರ್ಥಿಕ ಕ್ಷೇತ್ರದ ಕಾರ್ಪೊರೇಟ್ ಹಿಡಿತ, ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು, ಸಾಹಿತ್ಯ, ಸಿನಿಮಾ, ವಿಮರ್ಶೆ ಇತ್ಯಾದಿ ಹತ್ತು ಹಲವು ಬಗೆಯ ಬರಹಗಳನ್ನು ಪತ್ರಿಕೆ ಒಳಗೊಳ್ಳಲಿದೆ. ಕನ್ನಡದ ಜಾಣ, ಜಾಣೆಯರು ಇಷ್ಟಪಡುವ ರಂಜನೆ, ಬೋಧನೆ, ಪ್ರಚೋದನೆಗೆ ಪೂರಕವಾದ ಬರಹಗಳೂ ಇರುತ್ತವೆ.

ಗೌರಿ ಹತ್ಯೆಯನ್ನು ಖಂಡಿಸಿ, ಈ ಹಿಂದೆ ಗೌರಿ ಪ್ರತಿಭಟಿಸಿದ್ದ ಜಾಗದಲ್ಲೇ ಪ್ರಗತಿಪರರ ಪ್ರತಿಭಟನೆ!

ಗೌರಿ ಲಂಕೇಶ್‌ರ ಸಹೋದ್ಯೋಗಿಗಳಾಗಿದ್ದ ಬಹುತೇಕ ಲೇಖಕ, ಲೇಖಕಿಯರು ಹಾಗೂ ಇಡೀ ಕಚೇರಿ ಸಿಬ್ಬಂದಿ ಈ ಹೊಸ ಪ್ರಯತ್ನದಲ್ಲಿ ಹೃತ್ಪೂರ್ವಕವಾಗಿ ತೊಡಗಿಸಿಕೊಂಡಿರುವುದು ನಮ್ಮ ಶಕ್ತಿಯನ್ನು ಇಮ್ಮಡಿಸಿದೆ. ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ‘ನಾನು ಗೌರಿ’ ಪತ್ರಿಕೆ ಯಾರೊಬ್ಬರ ಖಾಸಗಿ ಸ್ವತ್ತಲ್ಲ. ಗೌರಿಯವರ ಆಶಯದೊಂದಿಗೆ ಏಕೀಭವಿಸುವ ಲಕ್ಷಾಂತರ ಜನರು ಪತ್ರಿಕೆ ಪ್ರಾರಂಭಿಸುವ ಪ್ರಕ್ರಿಯೆಯಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ. ಹಾಗೆ ಹೇಳಬೇಕೆಂದರೆ ಈ ಪತ್ರಿಕೆ ಗೌರಿ ಆಶಯವನ್ನು ಪ್ರತಿನಿಧಿಸುವ ಎಲ್ಲರಿಗೂ ಸೇರಿದ್ದು.

ಈ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಟ್ಯಾಬ್ಲಾಯ್ಡ್ ಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಅದೆಷ್ಟೋ ಹಿರಿಯರು, ಹಿತೈಷಿಗಳು ಕಿವಿ ಮಾತು ಹೇಳಿದ್ದಾರೆ. ಇದು ಸುಗಮವಾದ ಹಾದಿಯಲ್ಲ ಎಂಬುದು ನಿಜ. ಆದರೆ ನಾಡಿನಾದ್ಯಂತ ‘ಪತ್ರಿಕೆ’ಗಾಗಿ ಆಗ್ರಹಿಸುತ್ತಿರುವವರ ಸಂಖ್ಯೆಯೂ ದೊಡ್ಡದಿದೆ ಎಂಬುದೂ ನಿಜ. ಆದರೆ ಗೌರಿ ಪತ್ರಿಕೆಯನ್ನು ಮುಂದುವರೆಸುವುದು ಭಾವನಾತ್ಮಕ ವಿಷಯ ಎಂಬುದಕ್ಕಿಂತಲೂ ಹೆಚ್ಚಾಗಿ ನಮ್ಮ ಬದ್ಧತೆಗೆ ಸಂಬಂಧಿಸಿದ್ದು. ನಿಮ್ಮಲ್ಲರ ಬೆಂಬಲ, ಪ್ರೋತ್ಸಾಹಗಳ ಬಲದಿಂದ ಪತ್ರಿಕೆ ನಡೆಸುವ ಸಂಕಷ್ಟವನ್ನು ದಾಟಬಹುದೆಂಬ ವಿಶ್ವಾಸ ನಮ್ಮದು.

ಪ್ರತಿರೋಧ ಸಮಾವೇಶದಲ್ಲಿ ಗೌರಿ ಹತ್ಯಗೆ ಮಿಡಿದ ಜನಸಾಗರ

ನಮ್ಮೆಲ್ಲರ ಹೃದಯದಾಳದಲ್ಲಿ ಮಡುಗಟ್ಟಿದ ನೋವು, ಆಕ್ರೋಶಗಳು ನಮ್ಮ ಈ ಬದ್ಧತೆಯನ್ನು ಗಟ್ಟಿಗೊಳಿಸಿ, ಪತ್ರಿಕೆಯ ಮರುಹುಟ್ಟಿಗೆ ಭದ್ರ ಬುನಾದಿ ಹಾಕಿಕೊಟ್ಟಿವೆ. ಈ ಸವಾಲಿನ ಹೋರಾಟದಲ್ಲಿ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸದಿಂದ ನಮ್ಮ ತಂಡ ಕಾರ್ಯೋನ್ಮುಖವಾಗಿದೆ. ಹಾಗೆಂದು ಸಮಸ್ಯೆಗಳೇ ಇರುವುದಿಲ್ಲ, ತಪ್ಪುಗಳೇ ಆಗುವುದಿಲ್ಲ ಎಂದರ್ಥವಲ್ಲ. ನಾವು ಎಡವಿದಾಗ ನೀವು ನಮ್ಮ ಕೈಹಿಡಿಯುತ್ತೀರಿ, ತಪ್ಪು ಮಾಡಿದಾಗ ಕಿವಿ ಹಿಂಡುತ್ತೀರಿ, ಪತ್ರಿಕೆಯ ನೋವು-ನಲಿವುಗಳಲ್ಲಿ ನಮ್ಮೊಂದಿಗಿರುತ್ತೀರಿ ಎಂಬ ತುಂಬು ವಿಶ್ವಾಸ ನಮ್ಮದು.

ಕೊನೆಯದಾಗಿ, ಈಜಿಪ್ಟ್ ಬಂಡಾಯದ ಸಂದರ್ಭದಲ್ಲಿ ಹುಟ್ಟಿಕೊಂಡ ಒಂದು ಮಾತು ನೆನಪಿಸುತ್ತೇನೆ. “The power of the people is stronger than the people in power”. ಅಂದರೆ ಅಧಿಕಾರದಲ್ಲಿರುವವರ ಬಲಕ್ಕಿಂತ ಜನಶಕ್ತಿಯ ಬಲ ಹೆಚ್ಚು ಬಲಿಷ್ಠವಾದುದು. ಅಂಥಾ ಜನಶಕ್ತಿಯ ಬಲವನ್ನು ನಿರೂಪಿಸಲು ನಾವೆಲ್ಲರೂ ಒಗ್ಗೂಡೋಣ. ಗೆಲುವಿನ ಹಾದಿ ನಮ್ಮದು.
ನಾನು ಗೌರಿ! ನಾವೆಲ್ಲಾ ಗೌರಿ!!

ಗೌರಿ ಮೀಡಿಯಾ ಟ್ರಸ್ಟ್ ಪರವಾಗಿ
ದೊಡ್ಡಿಪಾಳ್ಯ ನರಸಿಂಹಮೂರ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...

ಜಿರಳೆ ಜನತಾ ಪಕ್ಷದ ಖಾತೆಗೆ ನಿರ್ಬಂಧ; ದೆಹಲಿ ಹೈಕೋರ್ಟ್‌ನಿಂದ ಕೇಂದ್ರ-ಎಕ್ಸ್‌ಗೆ ನೋಟಿಸ್

ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು, ದೆಹಲಿ ಹೈಕೋರ್ಟ್ (ಮೇ 29) ಕೇಂದ್ರ ಸರ್ಕಾರ ಮತ್ತು ಸಾಮಾಜಿಕ...

“ದಲಿತ ಮುಖ್ಯಮಂತ್ರಿ” ಅರ್ಹರು ಯಾರಿಲ್ಲಿ?

ಸದ್ಯ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಬದಲಾವಣೆಗೆ ವೇದಿಕೆ ಸಜ್ಜುಗೊಂಡಿದೆ. ಸುಧೀರ್ಘಾವಧಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಅಹಿಂದ ರಾಜಕಾರಣದ ಕುರಿತು ಮಾತಾಡುತ್ತಿದ್ದ, ಸಮಾಜವಾದಿ ಹಿನ್ನೆಲೆಯ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಡಿ.ಕೆ. ಶಿವಕುಮಾರ್‌ ಮುಖ್ಯಮಂತ್ರಿಯಾಗಿ...

‘ನಾನು ಪ್ರೀತಿ-ವಿಶ್ವಾಸಗಳಿಗೆ ತಲೆಬಾಗುವವನೇ ಹೊರತು ಒತ್ತಡ-ಪ್ರಭಾವಗಳಿಗೆ ಒಳಗಾಗುವವನಲ್ಲ’: ವಿದಾಯ ಭಾಷಣದಲ್ಲಿ ಸಿದ್ದರಾಮಯ್ಯ

ಹೈಕಮಾಂಡ್ ಯಾವಾಗ ಸೂಚಿಸುತ್ತದೆಯೋ ಆಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ 2026 ಮೇ 28 ರಂದು ಹೈಕಮಾಂಡ್ ಸೂಚನೆ ಮೇರೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ...