Homeಕರ್ನಾಟಕಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

ಪಿ.ಸಾಯಿನಾಥ್ ಉಪನ್ಯಾಸ; ಕರಾವಳಿಯಲ್ಲಿ ಮೊಳಗಿದ ಎಡಪಂಥದ ಕಹಳೆ

- Advertisement -
- Advertisement -

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು.

ಭಾರತ ಸಂವಿಧಾನ ಸಂಘಟನಾ ಸಮಿತಿಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಆಡಿದ ಮಾತುಗಳನ್ನು ಉದ್ಧರಿಸುತ್ತ ಖ್ಯಾತ ಎಡಪಂಥೀಯ ಚಿಂತಕ, ಪಿ. ಸಾಯಿನಾಥ್ ‘ಭಾರತದ ಪ್ರಜಾಪ್ರಭುತ್ವದಲ್ಲಿ ಅಂತರ್ಗತವಾಗಿರುವ ದೌರ್ಬಲ್ಯದ ಬಗ್ಗೆ ಬಾಬಾ ಸಾಹೇಬರು ಬಹಳ ಹಿಂದೆಯೇ ಎಚ್ಚರಿಸಿದ್ದರು. ಸಮಾನತೆಯನ್ನು ಹೊರಗಿಟ್ಟ ಸ್ವಾತಂತ್ರ್ಯ ಬಹುಜನರ ಮೇಲೆ ಕೆಲವೇ ಕೆಲವು ಜನಗಳ ದಬ್ಬಾಳಿಕೆಗೆ ದಾರಿಮಾಡಿಕೊಡುತ್ತದೆ. ಸ್ವಾತಂತ್ರ್ಯ ಸಮಾನತೆ ಮತ್ತು ಸಹೋದರತ್ವಗಳ ಮೌಲ್ಯಗಳನ್ನು ಬೇರ್ಪಡಿಸಿ ನೋಡುವ ಹಾಗಿಲ್ಲ. ಅವುಗಳ ಪೈಕಿ ಒಂದನ್ನು ಹೊರತುಪಡಿಸಿ ಇನ್ನೊಂದು ಇರಲಾರದು’ ಎಂದು ಸಾಯಿನಾಥ್ ಬಾಬಾ ಸಾಹೇಬರನ್ನು ಉಲ್ಲೇಖಿಸಿದ್ದರು. ತನ್ನ ಮಾತು ಮುಂದುವರಿಸುತ್ತ ಸಾಯಿನಾಥ್ ಹಾಲೀ ಕೇಂದ್ರ ಸರಕಾರದ ಧೋರಣೆಗಳು ದೇಶದಲ್ಲಿ ಹಿಂದೆಂದೂ ಕಾಣದ ಅಸಮಾನತೆಗೆ ಕಾರಣವಾಗಿದೆ ಎಂದು ಹೇಳಿದರು.

ಈ ಸಂಗತಿಗಳಲ್ಲಿ ಒಂದಕ್ಕೊಂದು ಹೇಗೆ ಥಳಕು ಹಾಕಿಕೊಂಡಿದೆ ಎಂದು ಹೇಳುತ್ತ ಸಾಯಿನಾಥ್ ತನ್ನ ಮಾತಿಗೆ ಮುಸ್ಲಿಂ ಜಾನುವಾರು ಕಸಾಯಿಗಳ ನಿದರ್ಶನ ನೀಡಿದರು. ಈ ವ್ಯವಹಾರದ ಮೂಲಾಧಾರವಾಗಿರುವ ಜಾನುವಾರು ದಲ್ಲಾಳಿಗಳಲ್ಲಿ ಹೆಚ್ಚಿನವರು ಕೆಳಜಾತಿ, ವರ್ಗಗಳ ಹಿಂದುಗಳು. ಜಾನುವಾರು ಹತ್ಯೆ ನಿಷೇಧಗೊಂಡಾಗ ಮುಸ್ಲಿಂ ಕಸಾಯಿಗಳು ನಿರುದ್ಯೋಗಿಗಳಾದರು; ಹಿಂದುಳಿದ ಜಾತಿವರ್ಗಗಳವರು ತಮ್ಮ ಅರೆಕಾಲಿಕ ಉದ್ಯೋಗಗಳನ್ನು ಕಳಕಂಡರು. ಬೆಲೆಗಳು ಕುಸಿದವು. ಮಹಾರಾಷ್ಟ್ರ ರಾಜ್ಯದ ಬಹುಮುಖ್ಯ ಉದ್ಯಮಗಳಲ್ಲಿ ಒಂದಾಗಿರುವ ಕೊಲ್ಹಾಪುರಿ ಚಪ್ಪಲಿಗಳ ತಯಾರಿಕೆ ದಿವಾಳಿ ಎದ್ದಿತು. ದೇಶದ ಆರ್ಥಿಕ ಧೋರಣೆಗಳನ್ನು ದೆಹಲಿಯಲ್ಲಿ ಕೂತು ನಿರ್ಧರಿಸುವವರಿಗೆ ಗ್ರಾಮೀಣ ಉದ್ಯಮಗಳು ಹೇಗೆ ಪರಸ್ಪರ ಸಂಬಂಧ ಹೊಂದಿದ್ದು ನಿಕಟವಾಗಿ ಹೆಣೆದುಕೊಂಡಿದೆ ಎಂಬ ಕಲ್ಪನೆಯೇ ಇಲ್ಲ ಎಂದು ಸಾಯಿನಾಥ್ ಹೇಳಿದರು. ದೇಶ ಈಗ ಕೃಷಿ, ಶಿಕ್ಷಣ ಅರ್ಥವ್ಯವಸ್ಥೆ ಮತ್ತು ಉದ್ಯೋಗ ನಿರ್ಮಾಣ ಕ್ಷೇತ್ರಗಳಲ್ಲಿ ಗಂಭೀರವಾದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಅವರು ತಿಳಿಸಿದರು. ಮಂಗಳೂರಿನ ಈ ಉಪನ್ಯಾಸವನ್ನು ನಗರದ ಸೈಂಟ್ ಅಲೋಸಿಯಸ್ ಕಾಲೇಜು ಏರ್ಪಡಿಸಿತ್ತು.

ಕುಂದಾಪುರದಲ್ಲಿ ‘ಸಮುದಾಯ’ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್‍ನ ಜಂಟಿ ಆಶ್ರಯದಲ್ಲಿ ನಡೆದ ಇನ್ನೊಂದು ಸಭೆಯಲ್ಲಿ ‘ಕಾರ್ಪೊರೇಟ್ ಫಾರ್ಮಿಂಗ್ – ಭಾರತದ ಕೃಷಿ ಬಿಕ್ಕಟ್ಟುಗಳು’ ಎಂಬ ವಿಷಯದ ಕುರಿತು ನೀಡಿದ ಉಪನ್ಯಾಸದಲ್ಲಿ ಸಾಯಿನಾಥ್ ರೈತನಿಗೆ ಆತ ಬಳಸುವ ನೆಲ ಹೊರತು ಪಡಿಸಿ, ಬೇರೆ ಯಾವುದರ ಮೇಲೂ ಹಿಡಿತವಿಲ್ಲ. ಕೃಷಿಯ ಮೂಲಭೂತ ಅಗತ್ಯಗಳಾದ ನೀರು, ಗೊಬ್ಬರ, ಬೀಜ, ಮಾರುಕಟ್ಟೆ, ಸಾರಿಗೆ – ಎಲ್ಲವೂ ಕಾರ್ಪೊರೇಟ್ ಕಂಪನಿಗಳ ನಿಯಂತ್ರಣದಲ್ಲಿವೆ. ಕಾರ್ಪೊರೇಟ್ ಕಂಪನಿಗಳು ಕೃಷಿಕ್ಷೇತ್ರವನ್ನು ಕೈವಶ ಮಾಡಿಕೊಂಡಿವೆ. ಇದರ ಪರಿಣಾಮವಾಗಿ ರೈತ, ಇಂದು, ಅಕ್ಷರಶಃ ಕಾರ್ಪೊರೇಟ್ ಹಿತಾಸಕ್ತಿಗಳ ಗುಲಾಮನಾಗಿದ್ದಾನೆ. ಒಬ್ಬ ಬಡಗಿ, ನೇಕಾರ, ಮೋಚಿ ಅಥವಾ ಅಕ್ಕಸಾಲಿಗ, ಹೀಗೆ ಯಾವ ದುಡಿಮೆಗಾರನಿಗಾದರೂ ತನ್ನ ದುಡಿಮೆಯ ವೇತನ ಎಷ್ಟು? ತಾನು ಉತ್ಪಾದಿಸಿದ ಸರಕಿನ ಬೆಲೆ ಎಷ್ಟು? ಎಂದು ನಿರ್ಧರಿಸುವ ಹಕ್ಕು ಇರುತ್ತದೆ. ಆದರೆ ಕೃಷಿ ಕ್ಷೇತ್ರದಲ್ಲಿ ಮಾತ್ರ ರೈತನ ನಿರ್ಧಾರಗಳನ್ನೂ ಆತನ ಹೆಸರಿನಲ್ಲಿ ಕಾರ್ಪೊರೇಶನ್ ಕಂಪನಿಗಳೇ ತೆಗೆದುಕೊಳ್ಳುತ್ತವೆ. ಹಾಗಾಗಿ ‘ರೈತ’ ಎಂಬ ಶಬ್ದಕ್ಕೆ ಈಗ ಯಾವ ಅರ್ಥವೂ ಉಳಿದಿಲ್ಲ. ಹಾಲೀಕೇಂದ್ರ ಸರಕಾರದ ಬಹುಮುಖ್ಯ ಆರ್ಥಿಕ ನಿರ್ಧಾರಗಳನ್ನೆ ನೋಡಿ. ನೋಟು ಅಮಾನ್ಯೀಕರಣ ಹಾಗೂ ಜಿ.ಎಸ್.ಟಿ ತೆರಿಗೆಗಳು ರೈತನ ಪರವಾಗಿಲ್ಲ. ರೈತರ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸದೆ ತೆಗೆದುಕೊಂಡ ಏಕಪಕ್ಷೀಯ ನಿರ್ಧಾರಗಳು ಅವು. ದೇಶದ ಕೃಷಿ ವಿಶ್ವ ವಿದ್ಯಾಲಯಗಳು ಸಹ ಈಗ ರೈತರ ಬದಲು ಕಾರ್ಪೊರೇಟ್ ಹಿತಾಸಕ್ತಿಗಳ ವಕ್ತಾರರಂತೆ ವರ್ತಿಸುತ್ತಿವೆ. ಅವು ಹೆಸರಿಗಷ್ಟೇ ‘ಸ್ವಾವಲಂಬಿ’ ವಾಸ್ತವವಾಗಿ ಅವೆಲ್ಲವೂ ಕಾರ್ಪೊರೇಟ್ ಬಂಡವಾಳಶಾಹಿಯ ಕೃಪಾಪೋಷಿತ ಸಂಸ್ಥೆಗಳು ಈ ಸನ್ನಿವೇಶದಲ್ಲಿ ಮಾರುಕಟ್ಟೆಯನ್ನೇ ಅವಲಂಬಿಸಿದ ವಾಣಿಜ್ಯ ಕೃಷಿ ಅತಂತ್ರವಾಗುತ್ತಿದೆ. ಕೆಲವು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ವೆನಿಲ್ಲಾ ಬೆಳೆಗೆ ವಿಪರೀತ ಬೆಲೆ ಏರಿದುದರಿಂದ ಕೇರಳ, ಮಂಗಳೂರುಗಳ ರೈತರು ಭಾರೀ ವರಮಾನ ಗಳಿಸಿದರು. ಆದರೆ ಒಮ್ಮೆ ವೆನಿಲ್ಲಾದ ಬೆಲೆ ಕುಸಿಯಲಾರಂಭಿಸಿದಾಗ ಅವುಗಳ ಮೇಲೆ ಭರವಸೆ ಇಟ್ಟಿದ್ದ ರೈತರು ದಿಕ್ಕೆಟ್ಟು ಆತ್ಮಹತ್ಯೆ ಮಾಡಿ ಕೊಳ್ಳಬೇಕಾಯಿತು. ಇದೇ ಪರಿಸ್ಥಿತಿ ಪಂಜಾಬ್‍ನ ರೈತರಿಗೂ ಎದುರಾಯಿತು. ಬಹುರಾಷ್ಟ್ರೀಯ ಕಂಪನಿ ಪೆಪ್ಸಿಕೋ ಪಂಜಾಬ್‍ನ ರೈತರು ಬೆಳೆಸಿದ ವಿಶಿಷ್ಟ ತಳಿಯ ಟೊಮೆಟೋ ಹಣ್ಣು ಕೊಳ್ಳಲಾರಂಭಿತು. ಮೊದಲ ಎರಡು ವರ್ಷ ಪಂಜಾಬ್ ರೈತರಿಗೆ ಪೆಪ್ಸಿಕೋ ಬಹಳ ಒಳ್ಳೆಯ ವರ ನೀಡಿತು. ಆ ನಂತರ ಕಂಪನಿಗೆ ಅದೇ ಗುಣಮಟ್ಟದ ಟೊಮೆಟೋ ಹಣ್ಣು ಬೇರೆ ದೇಶಗಳಲ್ಲಿ ಲಭ್ಯವಿದ್ದುದರಿಂದ ಪಂಜಾಬ್ ಟೊಮೆಟೋ ಬೆಳೆಯನ್ನು ಕೇಳುವವರೇ ಇಲ್ಲ ಎಂಬ ಪರಿಸ್ಥಿತಿ ತಲೆದೋರಿತು.

ಈಗ ಈ ಎಲ್ಲ ವಿದ್ಯಮಾನಗಳ ಜೊತೆ ಭಾರತದಲ್ಲಿ ಬಹಳ ಹಿಂದೆಯೇ ರಾಷ್ಟ್ರೀಕರಣ ಗೊಂಡಿದ್ದ ಬ್ಯಾಂಕುಗಳ ಖಾಸಗೀಕರಣದ ಪ್ರಸ್ತಾಪಗಳು ಮುನ್ನೆಲೆಗೆ ಬರುತ್ತಿದೆ. ರೈತನ ವಿಶ್ವವೇ ಕುಸಿದಿದೆ, ರೈತನ ಹತಾಶ ಪರಿಸ್ಥಿತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಳವಳಕಾರಿಯಾಗಬಹುದು. ರಾಷ್ಟ್ರೀಯ ಹಾಗೂ ಬಹುರಾಷ್ಟ್ರೀಯ ಬಂಡವಾಳಶಾಹಿಯ ದುರಾಶೆಗೆ ಬಲಿಯಾಗಿ ಬದುಕನ್ನೇ ಕಳೆದುಕೊಳ್ಳುತ್ತಿರುವ ಪ್ರಕ್ರಿಯೆಯ ಭಾಗವಾಗಿ 1991 ರಿಂದ ಮುಂದಿನ 20 ವರ್ಷಗಳ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದೇ ಕಾಲಾವಧಿಯಲ್ಲಿ 72 ಲಕ್ಷಕ್ಕೂ ಮೀರಿ ರೈತರು ಕೃಷಿಕ್ಷೇತ್ರಕ್ಕೆ ವಿದಾಯ ಹೇಳಿದ್ದಾರೆ. ಈ ಪರಿಸ್ಥಿತಿ ಬದಲಾಗಲೇಬೇಕು. ಇದು ನಮ್ಮ ಕಾಲ ಎದುರಿಸುತ್ತಿರುವ ಬಹು ದೊಡ್ಡ ಪಂಥಾಹ್ವಾನ ಎಂದು ಸಾಯಿನಾಥ್ ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಭಾರತ ವೆನೆಜುವೆಲಾದ ತೈಲ ಖರೀದಿಸಲಿದೆ’ ಎಂದ ಟ್ರಂಪ್: ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್

ನವದೆಹಲಿ: ಭಾರತ ಇರಾನ್ ಬದಲು ವೆನೆಜುವೆಲಾದಿಂದ ತೈಲ ಖರೀದಿಸಲಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಭಾನುವಾರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕದ ನಾಯಕ "ನಮ್ಮ...

ಕೇಂದ್ರ ಬಜೆಟ್ 2026: ಕ್ಯಾನ್ಸರ್ ಸೇರಿದಂತೆ ಇತರ 7 ಕಾಯಿಲೆಗಳ ಔಷಧಿ ಬೆಲೆಯಲ್ಲಿ ಇಳಿಕೆ

ಗಂಭೀರ ಖಾಯಿಲೆಗಳಿಂದ ಬಳುತ್ತಿರುವ ರೋಗಿಗಳಿಗೆ ಗಮನಾರ್ಹ ಪರಿಹಾರವಾಗಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026 ರ ಬಜೆಟ್‌ನಲ್ಲಿ 17 ವಿಧದ ಕ್ಯಾನ್ಸರ್ ಮತ್ತು ಇತರ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಿಗಳನ್ನು...

ಕೇಂದ್ರ ಬಜೆಟ್ 2026: ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ; ವಿದೇಶಿ ಪ್ರವಾಸದ ಟಿಸಿಎಸ್ ದರ ಶೇ.2ಕ್ಕೆ ಇಳಿಕೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಕೇಂದ್ರ ಬಜೆಟ್ 2026 ಅನ್ನು ಮಂಡಿಸಿದರು. "2025ರ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದೆ, ಪ್ರಸ್ತುತ ಶೇ.5 ಮತ್ತು ಶೇ.20...

ಗಾಜಾದಲ್ಲಿ ಇಸ್ರೇಲ್ ನಡೆಸಿದ ಹೊಸ ಕದನ ವಿರಾಮ ಉಲ್ಲಂಘನೆಯಲ್ಲಿ ಮಕ್ಕಳು ಸೇರಿದಂತೆ 31 ಮಂದಿ ಸಾವು

ಮೇ 2024ರ ನಂತರ ಇಸ್ರೇಲ್ ಮೊದಲ ಬಾರಿಗೆ ಈಜಿಪ್ಟ್‌ನೊಂದಿಗೆ ರಫಾ ಕ್ರಾಸಿಂಗ್ ಅನ್ನು ಮತ್ತೆ ತೆರೆಯಲು ಸಜ್ಜಾಗುತ್ತಿರುವ ಒಂದು ದಿನ ಮೊದಲು, ಅಲ್ ಜಜೀರಾ ಜೊತೆ ಮಾತನಾಡಿದ ವೈದ್ಯಕೀಯ ಮೂಲಗಳು, ಬೆಳಗಿನ ಜಾವದಿಂದ...

ಶಬರಿಮಲೆ ಚಿನ್ನ ಕಳವು ಪ್ರಕರಣ: ಎರಡನೇ ಪ್ರಕರಣದಲ್ಲೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ

ಕೊಲ್ಲಂ (ಕೇರಳ): ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿ, ತಮ್ಮ ವಿರುದ್ಧ ದಾಖಲಾಗಿರುವ ಎರಡನೇ ಪ್ರಕರಣದಲ್ಲಿ ಶಾಸನಬದ್ಧ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದ್ವಾರಪಾಲಕ (ರಕ್ಷಕ ದೇವತೆ) ವಿಗ್ರಹ...

ಆಕಸ್ಮಿಕವಾಗಿ ಗಡಿ ದಾಟಿದ್ದ 7 ಭಾರತೀಯರನ್ನು ಹಸ್ತಾಂತರಿಸಿದ ಪಾಕಿಸ್ತಾನ

2023 ರ ಪ್ರವಾಹದ ಸಮಯದಲ್ಲಿ ಅಜಾಗರೂಕತೆಯಿಂದ ಗಡಿ ದಾಟಿದ ನಂತರ ಬಂಧಿಸಲ್ಪಟ್ಟ ಏಳು ಭಾರತೀಯ ನಾಗರಿಕರನ್ನು ಪಾಕಿಸ್ತಾನ ಶನಿವಾರ ಸ್ವದೇಶಕ್ಕೆ ವಾಪಸ್ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಂಜಾಬ್‌ನ ಅಟ್ಟಾರಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್‌ನಲ್ಲಿ...

ಮೀರತ್| ಅಪಹರಣ ಪ್ರಕರಣ ಹಿಂಪಡೆಯುವಂತೆ ಪೊಲೀಸರ ಒತ್ತಡ; ‘ಗೃಹಬಂಧನ’ದಲ್ಲಿ ದಲಿತ ಕುಟುಂಬ

ಜನವರಿ ತಿಂಗಳ ಆರಂಭದಲ್ಲಿ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಪ್ಸಾದ್ ಗ್ರಾಮದಲ್ಲಿ ತಾಯಿಯ ಕೊಲೆಯ ನಂತರ ಅಪಹರಿಸಲ್ಪಟ್ಟ ದಲಿತ ಹುಡುಗಿಯ ಕುಟುಂಬ ಸದಸ್ಯರು ತಾವು ಗೃಹಬಂಧನದಲ್ಲಿದ್ದು, ಆರೋಪಿಗಳ ವಿರುದ್ಧ ಪ್ರಕರಣವನ್ನು ಮುಂದುವರಿಸದಂತೆ ಪೊಲೀಸರು...

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...