Homeಮುಖಪುಟಕಾರ್ಮಿಕರಿಗೆ ಮತ್ತೇ ಬರೆ ಎಳೆಯಲು ತಯಾರಿ; ಪಿಎಫ್ ಬಡ್ಡಿದರ ಕಡಿತ...!

ಕಾರ್ಮಿಕರಿಗೆ ಮತ್ತೇ ಬರೆ ಎಳೆಯಲು ತಯಾರಿ; ಪಿಎಫ್ ಬಡ್ಡಿದರ ಕಡಿತ…!

- Advertisement -
- Advertisement -

ಕೊರೊನಾ ಸಾಂಕ್ರಮಿಕ ಬಿಕ್ಕಟ್ಟಿನಿಂದಾಗಿ ಹಲವಾರು ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುತ್ತಿರುವ ನಡುವೆ ‘ನೌಕರರ ಭವಿಷ್ಯ ನಿಧಿ ಸಂಸ್ಥೆ’ ಕಾರ್ಮಿಕರ ಪಿಎಫ್ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡಲು ಮತ್ತೊಮ್ಮೆ ಮುಂದಾಗಿದೆ ಎಂದು ವರದಿಯಾಗಿದೆ.

ಹೂಡಿಕೆ ಮೇಲಿನ ಆದಾಯ ಕ್ಷೀಣಿಸುತ್ತಿರುವ ಕಾರಣದಿಂದಾಗಿ ಪಿಎಫ್ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಅನಿವಾರ್ಯ ಎದುರಾಗಿದೆ ಎಂದು ಹೇಳಲಾಗುತ್ತಿದೆ. 2019-20 ರ ಆರ್ಥಿಕ ವರ್ಷದಲ್ಲಿ ಪಿಎಫ್ ಮೇಲಿನ ಬಡ್ಡಿದರವನ್ನು ಶೇ.8.65 ರಿಂದ ಶೇ.8.55 ಕ್ಕೆ ಇಳಿಸಲಾಗಿದೆ. ಆದರೆ, ಇದನ್ನು ಹಣಕಾಸು ಸಚಿವಾಲಯ ಇನ್ನೂ ಅನುಮೋದಿಸಿಲ್ಲ. ಹಣಕಾಸು ಸಚಿವಾಲಯ ಅನುಮೋದನೆ ನೀಡಿದ ನಂತರ ಕಾರ್ಮಿಕ ಸಚಿವಾಲಯ ನೂತನ ಬಡ್ಡಿ ದರವನ್ನು ಜಾರಿಗೆ ತರಲಿದೆ.

ಎಕನಾಮಿಕ್ ಟೈಮ್ಸ್‌ ವರದಿಯ ಪ್ರಕಾರ, ಪಿಎಫ್ ಮೇಲಿನ ಬಡ್ಡಿದರಗಳ ಬಗ್ಗೆ ನಿರ್ಧರಿಸಲು ಇಪಿಎಫ್ಒ ಶೀಘ್ರದಲ್ಲೇ ಹಣಕಾಸು ಇಲಾಖೆ, ಹೂಡಿಕೆ ಇಲಾಖೆ ಮತ್ತು ಲೆಕ್ಕಪರಿಶೋಧನಾ ಸಮಿತಿಯೊಂದಿಗೆ ಸಭೆ ನಡೆಸಲಿದೆ.

ಈ ಸಭೆಯು ಪಿಎಫ್‌ನಲ್ಲಿ ಪಾವತಿಸಲು ಇಪಿಎಫ್ಒ ನೀಡಬಹುದಾದ ಬಡ್ಡಿದರಗಳ ಬಗ್ಗೆ ನಿರ್ಧರಿಸುತ್ತದೆ. ಇಪಿಎಫ್ಒ ತನ್ನ ಒಟ್ಟು ನಿಧಿಯ ಶೇ.85ರಷ್ಟನ್ನು ಸಾಲ ಮಾರುಕಟ್ಟೆಯಲ್ಲಿ (ಬಾಂಡ್‌ಗಳು) ಹೂಡಿಕೆ ಮಾಡಿದ್ದರೆ, ಉಳಿದ ಶೇ.15 ರಷ್ಟು ಹಣವನ್ನು ಷೇರು ಮಾರುಕಟ್ಟೆಯಲ್ಲಿ ಇಟಿಎಫ್ ಮೂಲಕ ಹೂಡಿಕೆ ಮಾಡಿದೆ.

ಕಳೆದ ವರ್ಷದ ಮಾರ್ಚ್ ಅಂತ್ಯದ ವೇಳೆಗೆ, ಇಪಿಎಫ್ಒ ಷೇರುಗಳಲ್ಲಿ ಒಟ್ಟು ಹೂಡಿಕೆ 74,324 ಕೋಟಿ ಆಗಿತ್ತು ಮತ್ತು ಈ ಹೂಡಿಕೆಯ ಮೇಲೆ ಇಪಿಎಫ್‌ಒ ಶೇ. 14.74 ರಷ್ಟು ಲಾಭವನ್ನು ಗಳಿಸಿತ್ತು.

ಸಂಸ್ಥಯೂ ಲಾಭದಲ್ಲಿದ್ದರೂ ಬಡ್ಡಿದರವನ್ನು ಕಡಿಮೆ ಮಾಡುತ್ತಿರುವುದರ ಯಾಕೆ ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.


ಓದಿ: ಯಾವೊಬ್ಬ ವಲಸೆ ಕಾರ್ಮಿಕರೂ ಆಹಾರವಿಲ್ಲದೆ ಸಾವನ್ನಪ್ಪಿಲ್ಲ: ನಳಿನ್ ಕುಮಾರ್‌ ಕಟೀಲ್


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...