Homeಮುಖಪುಟಅನ್ನದ ಭಾಷೆಯಾಗಲಿ ಎಂಬ ಕೂಗಿನ ಜೊತೆಗೆ ತಿಳಿವಳಿಕೆಯ ಭಾಷೆಯಾಗಲಿ ಎಂಬ ಹಂಬಲ ಹೆಚ್ಚಲಿ

ಅನ್ನದ ಭಾಷೆಯಾಗಲಿ ಎಂಬ ಕೂಗಿನ ಜೊತೆಗೆ ತಿಳಿವಳಿಕೆಯ ಭಾಷೆಯಾಗಲಿ ಎಂಬ ಹಂಬಲ ಹೆಚ್ಚಲಿ

ಆಧುನಿಕ ಜನಗತ್ತಿನ ಬಿಕ್ಕಟ್ಟುಗಳಿಗೆ, ಹೊಸ ಸನ್ನಿವೇಶಗಳಿಗೆ ಸ್ಪಂದಿಸುವ ಕಥೆ, ಕವನ ಮತ್ತು ಚಲನಚಿತ್ರಗಳು ಕನ್ನಡ ಭಾಷೆಯಲ್ಲಿ ಹೆಚ್ಚೆಚ್ಚು ಮೂಡಿ, ಹೊಸ ಜಗತ್ತಿಗೆ ಬೇಕಾದ ಪ್ರಗತಿಪರ ತಿಳಿವಳಿಕೆಯನ್ನು ನೀಡಲಿ ಎಂಬ ಆಶಯವನ್ನು 2020ರ ಕನ್ನಡ ರಾಜ್ಯೋತ್ಸವಕ್ಕೆ ವ್ಯಕ್ತಪಡಿಸುವುದು ಇಂದಿನ ಅಗತ್ಯವಾಗಿದೆ.

- Advertisement -
- Advertisement -

ತಾವಾಡುವ ಭಾಷೆ ಪ್ರಾಚೀನವಾದದ್ದು ಎಂದೋ, ತಾವಾಡುವ ಭಾಷೆ ಹೆಚ್ಚು ಕಾವ್ಯಾತ್ಮಕ ಎಂದೋ, ತಮ್ಮ ಭಾಷೆಯಲ್ಲಿ ಹೆಚ್ಚು ಜನ ಓದಿರುವ ಕಾವ್ಯ, ಸಾಹಿತ್ಯ ಅಡಗಿದೆ ಎಂದೋ, ಕೊನೆಗೆ ತಮ್ಮ ಭಾಷೆಗೆ ಯಾವುದೋ ಒಂದು ನಿರ್ಧಿಷ್ಟ ಪ್ರಶಸ್ತಿ ಅತಿ ಹೆಚ್ಚು ಬಾರಿ ಒಲಿದು ಬಂದಿದೆ ಎಂದೋ ಹೆಮ್ಮೆ ಪಟ್ಟುಕೊಳ್ಳುವುದು ನಮ್ಮ ಸುತ್ತಲೂ ಸರ್ವೇ ಸಾಮಾನ್ಯವಾಗಿರುವ ಸಂಗತಿ. ಇವುಗಳಲ್ಲಿ ಕನ್ನಡಿಗರಿಗೂ ಹೆಮ್ಮೆ ಪಟ್ಟುಕೊಳ್ಳಲಿಕ್ಕೆ ಹಲವು ಸಂಗತಿಗಳು ಇವೆ ಕೂಡ. ಈ ಹೆಮ್ಮೆ ಮತ್ತೊಂದು ಭಾಷೆಯ ಜೊತೆಗೆ ಸ್ಪರ್ಧಾತ್ಮಕವಾಗದೆ ಉಳಿದರೆ, ಅದು ಕನ್ನಡ ಮತ್ತು ಕರ್ನಾಟಕ ಸಮುದಾಯದ ವಿವೇಕವಾಗಿ ಎಲ್ಲರ ಒಳಿತಿಗಾಗಿ ಇನ್ನಷ್ಟು ಹೆಚ್ಚು ತಿಳಿವಳಿಕೆಯನ್ನು ತನ್ನದಾಗಿಸಿಕೊಂಡು ಬೆಳೆಯಬಹದು.

ಬಹುಷಃ ಯಾವುದೇ ವಲಯದಲ್ಲಿ ಭಾಷೆಯೊಂದು ತಿಳಿವಳಿಕೆಯನ್ನು, ಜ್ಞಾನವನ್ನು ಗಳಿಸಿಕೊಂಡು ಅಭಿವೃದ್ಧಿಗೊಳ್ಳಲು ತನ್ನ ಪ್ರಾಚೀನತೆಯ ಬಗ್ಗೆ ಇರುವ ಅತೀವ ಹೆಮ್ಮೆಯ ಹಳಹಳಿಕೆಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಿಕೊಂಡು ಮುಂದುವರಿಯುವುದು ಅಗತ್ಯವಿದೆ. ಈ ದೇಶದಲ್ಲಿ ಹಲವು ಸಂದರ್ಭಗಳಲ್ಲಿ ಮುಂದಾಗುವ ಚರ್ಚೆಯೊಂದನ್ನು ಗಮನಿಸಬಹುದು. ಅದು ವಿಜ್ಞಾನ ಆಗಲಿ, ಸಮಾಜ ವಿಜ್ಞಾನ ಆಗಲಿ, ಮಾನವಶಾಸ್ತ್ರ ಆಗಲಿ ಎಲ್ಲವೂ ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಇತ್ತು, ಎಲ್ಲವೂ ಸಂಸ್ಕೃತ ಗ್ರಂಥಗಳಲ್ಲಿ ಅಡಗಿ ಕುಳಿತಿದೆ ಎಂಬ ಪುನರಾವರ್ತಿತ ಮಾತುಗಳನ್ನು ಕೇಳುತ್ತಿರುತ್ತೇವೆ. ಆದರೆ ಇಂತಹ ಹಳಹಳಿಕೆಯ ಹೊರತು ಸಂಸ್ಕೃತದ ಬಳಕೆ ಇವತ್ತಿಗೆ ಏನಾಗಿದೆ ಎಂಬುದು ನಮ್ಮ ಕಣ್ಣಮುಂದಿದೆ.

ಈ ನಿಟ್ಟಿನಲ್ಲಿ ಕನ್ನಡ ಅನ್ನದ ಭಾಷೆಯಾಗಬೇಕು ಎಂಬುದರ ಕೂಗಿನ ಜೊತೆಗೆ ಜಗತ್ತಿನ ಎಲ್ಲಾ ತಿಳಿವಳಿಕೆ ಮತ್ತು ಜ್ಞಾನವನ್ನು ಹೊಂದಿರುವ ಭಾಷೆಯಾಗಬೇಕು ಎನ್ನುವ ಹಸಿವು ಎಲ್ಲರಿಗೂ ಹೆಚ್ಚಬೇಕಿದೆ. 2014ರಿಂದೀಚೆಗೆ ನ್ಯಾಶನಲಿಸಂ, ನೇಶನ್ ಸ್ಟೇಟ್, ಫೆಡರಲಿಸಂ ಇತ್ಯಾದಿ ಚರ್ಚೆಗಳು ಹೆಚ್ಚಾಗಿವೆ. ಇಂತಹ ಚರ್ಚೆಗಳನ್ನು ಕನ್ನಡದಲ್ಲಿ ಪರಿಣಾಮಕಾರಿಯಾಗಿ ನಡೆಸಲು ಅಗತ್ಯವಾದ ಪರಿಭಾಷೆಯನ್ನು ಕನ್ನಡದಲ್ಲಿ ಕಟ್ಟಿ ಮತ್ತು ಅವುಗಳ ವ್ಯಾಖ್ಯಾನವನ್ನು ಜನಪ್ರಿಯಗೊಳಿಸಲು ನಮಗಿನ್ನೂ ಸಾಧ್ಯವಾಗಿಲ್ಲ. ಮಾನವಿಕ ವಿಜ್ಞಾನಗಳ ಕಥೆ ಇದಾದರೆ, ಬೇಸಿಕ್ ಸೈನ್ಸಸ್ ಎಂದು ಕರೆಯಲಾಗುವ ಭೌತಶಾಸ್ತ್ರ, ರಸಾಯನ ಶಾಸ್ತ್ರ ಮುಂತಾದ ವಿಭಾಗಗಳು ನಮ್ಮ ಪ್ರೀತಿಯ ಕನ್ನಡದ ಒಳಗೆ ಇಳಿದಿವೆಯೇ ಎಂಬ ಪ್ರಶ್ನೆಗೆ ಅಘಾತಕಾರಿ ಉತ್ತರ ಸಿಗಬಲ್ಲದು. ಈ ವರ್ಷ ‘ಬ್ಲಾಕ್ ಹೋಲ್ಸ್’ ಬಗೆಗಿನ ಸಂಶೋಧನೆಗಾಗಿ ರೋಜರ್ ಪೆನ್ರೋಸ್, ರೀಹಾರ್ಡ್ ಗೆನ್ಸಲ್ ಮತ್ತು ಆ್ಯಂಡ್ರಿಯಾ ಘೆಜ್ ಅವರುಗಳಿಗೆ 2020ರ ನೊಬೆಲ್ ಪ್ರಶಸ್ತಿ ದೊರಕಿತು. ಇದರಲ್ಲಿ ರೋಜರ್ ಪೆನ್ರೋಸ್ ಅವರು ಬರೆದಿರುವ ಹಲವು ಇಂಗ್ಲಿಷ್ ಪುಸ್ತಕಗಳು ಸಾಮಾನ್ಯ ಜನರ ನಡುವೆಯೂ ಜನಪ್ರಿಯವಾಗಿವೆ. ಕನ್ನಡದಲ್ಲಿ ಹೀಗೆ ವಿಜ್ಞಾನವನ್ನು ಸಾಮಾನ್ಯರಿಗೆ ವಿವರಿಸಬಲ್ಲ ಎಷ್ಟು ಪುಸ್ತಕಗಳಿವೆ? ನೊಬೆಲ್ ಪ್ರಶಸ್ತಿಯ ಸಂಶೋಧನೆ ಬಗ್ಗೆ ಒಂದು ವಲಯದ ಇಂಗಿಷ್ ಮಾಧ್ಯಮಗಳಲ್ಲಿಯಾದರೂ ಸಾಕಷ್ಟು ಚರ್ಚೆ ಆಯಿತು. ಆದರೆ ಕನ್ನಡ ದಿನಪತ್ರಿಕೆಗಳಲ್ಲಿ, ಮ್ಯಾಗಜಿನ್‍ಗಳಲ್ಲಿ ಕಂಡ ಲೇಖನಗಳೇಷ್ಟು?

ಇಂಗ್ಲಿಷ್ ಭಾಷೆಯಲ್ಲಿ ಹಲವು ಜ್ಞಾನಶಾಖೆಗಳ ತಿಳಿವಳಿಕೆ ಜನಪ್ರಿಯವಾಗಿ ಚರ್ಚೆಯಾಗಿರುವುದರಿಂದ ಮತ್ತು ಸಾಮಾನ್ಯ ಜನರಿಗೆ ಗ್ರಹಿಸುವಂತೆ ಅವುಗಳ ಬಗ್ಗೆ ಸಾಹಿತ್ಯ ಲಭ್ಯ ಇರುವುದರಿಂದ, ಇಂಗ್ಲಿಷ್ ಭಾಷೆಯ ಜನಪ್ರಿಯ ಮಾಧ್ಯಮಗಳ ಒಂದು ವಲಯದಲ್ಲಿ ಆದರೂ ಪ್ರಗತಿಪರ ಮತ್ತು ವಿಚಾರಪರ ಚಿಂತನೆಗಳು, ಈ ದೇಶದ ಹಲವು ನೆಲದ ಭಾಷೆಗಳ ಮಾಧ್ಯಮಗಳಿಗೆ ಹೋಲಿಸಿದರೆ ಸಮೃದ್ಧವಾಗಿವೆ ಮತ್ತು ಚಾಲ್ತಿಯಲ್ಲಿವೆ. ಉದಾಹರಣೆಯಾಗಿ ಗಮನಿಸುವುದಾದರೆ ಇಂದು ಪ್ರಭುತ್ವ ಸೃಷ್ಟಿಸಿರುವ ಬಿಕ್ಕಟ್ಟುಗಳನ್ನು ವೈಚಾರಿಕವಾಗಿ ಚರ್ಚಿಸುವ ಇಂಗ್ಲಿಷ್ ಮಾಧ್ಯಮಗಳು ಕನ್ನಡದವೋ, ತೆಲುಗಿನವೋ ಅಥವಾದ ಹಿಂದಿ ಮಾಧ್ಯಮಗಳಿಗೆ ಹೋಲಿಸಿದರೆ ಹೆಚ್ಚಿಲ್ಲವೇ? ಇಂಗ್ಲಿಷ್ ಭಾಷೆಯಲ್ಲಿ ಇಂತಹ ವಿಷಯಗಳನ್ನು ಕನ್ಸ್ಯೂಮ್ ಮಾಡುವವರು ಹೆಚ್ಚು ಜನ ಇದ್ದಾರೆ, ಅದಕ್ಕಾಗಿ ಈ ಪರಿಸ್ಥಿತಿ ಇದೆ ಎಂಬ ಉತ್ತರ ಮೂಡಬಹುದಾದರೂ ಅದು ಅರ್ಧಸತ್ಯ. ನೆಲ ಭಾಷೆಗಳನ್ನಾಡುವ ಜನರೇ ಹೆಚ್ಚು ಇರುವಾಗ ಆ ಶಕ್ತಿಯನ್ನು ಇನ್ನು ಅನ್ವೇಷಿಸಲಾಗಿಲ್ಲ.

ಆದುದರಿಂದ ಹಲವು ಜ್ಞಾನಶಾಖೆಗಳ ತಿಳಿವಳಿಕೆಯನ್ನು ಈ ನಾಡಿನ ಭಾಷೆಗಳಲ್ಲಿ ಸಿಕ್ಕುವಂತೆ ನೋಡಿಕೊಳ್ಳುವ ಕೆಲಸ ಹೆಚ್ಚಬೇಕಿದೆ. ಆದರೆ ಇಂಗ್ಲಿಷ್ ಭಾಷೆಯ ಜೊತೆಗೆ ಅಂಟಿಕೊಂಡಿರುವ ಎಲೈಟಿಸಂಅನ್ನು ಕಳೆದುಕೊಂಡು ಆ ಕೆಲಸ ಆಗಬೇಕಿದೆ. ಆದರೆ ಈ ನಾಡಿನ ಭಾಷೆಗಳು ಮತ್ತು ಸಾಮಾನ್ಯ ಜನರಿಗೆ ಇರುವ ಸಂಬಂಧ ಮತ್ತು ಸಂಪರ್ಕದ ಸ್ವಭಾವದಿಂದಲೇ ಈ ಎಲೈಟಿಸಂ ಸ್ವಾಭಾವಿಕವಾಗಿ ತಿಳಿವಳಿಕೆಯ ಜೊತೆಗೆ ಸೇರಿಕೊಳ್ಳದೆ ಕಳೆದುಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ.

ಎಲೈಟಿಸ್ಟ್ ವಲಯದ ಜನರ ನಡುವೆ ನಡೆಯುವ ಒಂದು ಕಥೆ ಈಗ ಆರು ಭಾಗಗಳ ಧಾರಾವಾಹಿಯಾಗಿ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಇಂಗ್ಲಿಷ್ ಭಾಷೆಯ ಬರಹಗಾರ ವಿಕ್ರಂ ಸೇಥ್ ಅವರ ‘ಎ ಸ್ಯೂಟೆಬಲ್ ಬಾಯ್’ ಕಾದಂಬರಿ ಆಧಾರಿತ ಅದೇ ಹೆಸರಿನ ಸಿನೆಮಾ ಇದಾಗಿದ್ದು, ಆಗ ತಾನೆ ಸ್ವಾತಂತ್ರ್ಯ ಗಳಿಸಿದ್ದ ಭಾರತದ ಮೇಲ್ವರ್ಗದಲ್ಲಿ ಇದ್ದ ಸಣ್ಣತನಗಳು, ಮತಾಂಧತೆ, ಸಾಂಪ್ರದಾಯಿಕ ಮನೋಧೋರಣೆ ಇವುಗಳ ನಡುವೆ ಪ್ರೀತಿಗಾಗಿ ಹಂಬಲಿಸುವ ಕೆಲವು ಯುವ ಪಾತ್ರಗಳ ಜೊತೆಗೆ ಜಾತ್ಯಾತೀತ ಕಥೆಯನ್ನು ಹೇಳುವ ಈ ಕಿರು ಧಾರಾವಾಹಿ ಇವತ್ತಿನ ಬಿಕ್ಕಟ್ಟಿಗೂ ಸ್ಪಂದಿಸುತ್ತಿದೆ. ಸಂಭಾಷಣೆಯೆಲ್ಲವೂ ಇಂಗ್ಲಿಷ್ ಭಾಷೆಯಲ್ಲಿದ್ದು ತುಸು ಅಸಹಜ ಎನಿಸಿದರೂ ಆಗ ತಾನೆ ಸಿಕ್ಕಿದ್ದ ಸ್ವಾತಂತ್ರ್ಯದ ಸಮಯದಲ್ಲಿ, ದೇಶವಿಭಜನೆಯ ಕರಾಳ ದಿನಗಳಲ್ಲಿ ಅಗತ್ಯವಿದ್ದ ಮತಧರ್ಮ ಸಾಮರಸ್ಯದ, ಮನುಷ್ಯ ಪ್ರೀತಿಯ ಕಥೆ ಹೇಳುವ ಈ ಸಿನೆಮಾ ಇಂದಿನ ಯುವಕರಿಗೆ ಪ್ರೀತಿಯ ಪಾಠ ಹೇಳಿಕೊಡುವುದರಲ್ಲಿ ಸ್ವಲ್ಪವಾದರೂ ಸಹಕರಿಸೀತು.

ಆಧುನಿಕ ಜನಗತ್ತಿನ ಬಿಕ್ಕಟ್ಟುಗಳಿಗೆ, ಹೊಸ ಸನ್ನಿವೇಶಗಳಿಗೆ ಸ್ಪಂದಿಸುವ ಕಥೆ, ಕವನ ಮತ್ತು ಚಲನಚಿತ್ರಗಳು ಕನ್ನಡ ಭಾಷೆಯಲ್ಲಿ ಹೆಚ್ಚೆಚ್ಚು ಮೂಡಿ, ಹೊಸ ಜಗತ್ತಿಗೆ ಬೇಕಾದ ಪ್ರಗತಿಪರ ತಿಳಿವಳಿಕೆಯನ್ನು ಅದು ಒಳಗೊಂಡು ಮುನ್ನಡೆಯಬೇಕಿದೆ ಎಂಬ ಆಶಯವನ್ನು 2020ರ ಕನ್ನಡ ರಾಜ್ಯೋತ್ಸವಕ್ಕೆ ವ್ಯಕ್ತಪಡಿಸುವುದು ಇಂದಿನ ಅಗತ್ಯವಾಗಿದೆ. ಯಾರನ್ನೂ ದ್ವೇಷಿಸದ, ಕಲ್ಪಿತ ಶತ್ರುವನ್ನು ಸೃಷ್ಟಿಸಿಕೊಳ್ಳದ, ಪ್ರೀತಿ ಮತ್ತು ಮಾನವೀಯತೆಯನ್ನು ಕರ್ನಾಟಕದ ಜನತೆಯ ಆಡುಮಾತನ್ನಾಗಿಸುವ ಭಾಷೆಯಾಗಿ ಕನ್ನಡ ರೂಪುಗೊಂಡು ಬೆಳೆಯಬೇಕಿದೆ.


ಇದನ್ನೂ ಓದಿ: ಮಗು ಕನಸು ಕಾಣುವ-ಚಿಂತಿಸುವ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬ ಹೋರಾಟದ ಸುತ್ತ..
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದತ್ತಾಂಶ ಸಂರಕ್ಷಣಾ ಕಾನೂನಿನಡಿಯಲ್ಲಿ ಆರ್‌ಟಿಐ ತಿದ್ದುಪಡಿಗೆ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಡಿಜಿಟಲ್ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಕಾಯ್ದೆಯ ಮೂಲಕ ಪರಿಚಯಿಸಲಾದ ಮಾಹಿತಿ ಹಕ್ಕು ಕಾಯ್ದೆಗೆ ತಿದ್ದುಪಡಿಯನ್ನು ತಡೆಹಿಡಿಯಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ ಎಂದು 'ಬಾರ್ ಮತ್ತು ಬೆಂಚ್' ವರದಿ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಯ ಆಧಾರದ...

ಅಜಿತ್ ಪವಾರ್ ಸಾವು : ಎರಡೂ ಫ್ಲೈಟ್ ರೆಕಾರ್ಡರ್‌ಗಳು ಹಾನಿಗೊಳಗಾಗಿವೆ ಎಂದ ವಿಮಾನಯಾನ ಸಚಿವಾಲಯ

ಬಾರಾಮತಿಯಲ್ಲಿ ಜನವರಿ 28 ರಂದು ಅಜಿತ್ ಪವಾರ್ ಅವರನ್ನು ಹೊತ್ತೊಯ್ಯುತ್ತಿದ್ದ ವಿಮಾನ ಅಪಘಾತಕ್ಕೀಡಾದ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಮಂಗಳವಾರ (ಫೆ.17) ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ವಿಮಾನದ ಎರಡೂ ಸ್ವತಂತ್ರ ಫ್ಲೈಟ್...

ರಾಜಸ್ಥಾನ| ಮೊದಲ ಬಜೆಟ್‌ನಲ್ಲಿ ಪಕ್ಷವು ‘ಗಂಡು ಮಗುವಿಗೆ ಜನ್ಮ ನೀಡಿದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ

ರಾಜಸ್ಥಾನದ ಬಿಜೆಪಿ ಶಾಸಕ ಬಹದ್ದೂರ್ ಸಿಂಗ್ ಕೋಲಿ, ತಮ್ಮ ಪಕ್ಷ ಮತ್ತು ಕಾಂಗ್ರೆಸ್ ಮಂಡಿಸಿದ ಬಜೆಟ್‌ಗಳನ್ನು ಗಂಡು ಮತ್ತು ಹೆಣ್ಣು ಮಗುವಿನ ಜನನಕ್ಕೆ ಹೋಲಿಸಿದ ಬಳಿಕ ವಿಧಾನಸಭೆಯಲ್ಲಿ ವಿವಾದ ಭುಗಿಲೆದ್ದಿತು. ರಾಜ್ಯ ಬಜೆಟ್ ಮೇಲಿನ...

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಖ್ ರೆಹಮಾನ್ ಪ್ರಮಾಣವಚನ ಸ್ವೀಕಾರ

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ತಾರಿಖ್ ರೆಹಮಾನ್ ಅವರು ಮಂಗಳವಾರ (ಫೆ.17) ಪ್ರಮಾಣ ವಚನ ಸ್ವೀಕರಿಸಿದರು. ಪದಗ್ರಹಣ ಕಾರ್ಯಕ್ರಮವು ಸಂಪ್ರದಾಯದಂತೆ ಅಧ್ಯಕ್ಷೀಯ ಅರಮನೆಯಲ್ಲಿ ನಡೆಯುವ ಬದಲು, ಢಾಕಾದ ರಾಷ್ಟ್ರೀಯ...

ಮಹಾರಾಷ್ಟ್ರ| ಪರೀಕ್ಷೆಯ ಸಮಯದಲ್ಲಿ ಸಾಮೂಹಿಕ ನಕಲಿಗೆ ಬೆಂಬಲಿಸಿದ 5 ಜನ ಶಿಕ್ಷಕರ ಅಮಾನತು

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಕೇಂದ್ರವೊಂದರಲ್ಲಿ ನಡೆದ 12 ನೇ ತರಗತಿಯ ಹೆಚ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ನಕಲು ಮಾಡಲು ಅನುಕೂಲ ಮಾಡಿಕೊಟ್ಟ ಆರೋಪದ ಮೇಲೆ ಸಿಕ್ಕಿಬಿದ್ದ ಐದು ಶಿಕ್ಷಕರನ್ನು...

ಬಿಜೆಪಿ ವಿರುದ್ಧ 40% ಕಮಿಷನ್ ಜಾಹೀರಾತು : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್‌

ಜಾಹೀರಾತಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಹೈಕೋರ್ಟ್ ಮಂಗಳವಾರ (ಫೆ.17) ರದ್ದುಗೊಳಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ ಬಾರ್ & ಬೆಂಚ್ ವರದಿ ಮಾಡಿದೆ. ಪ್ರಕರಣ ರದ್ದುಕೋರಿ...

‘ನಾವು ಎಐ ಯುಗದಲ್ಲಿದ್ದೇವೆ..’; ಸೋನಮ್ ವಾಂಗ್‌ಚುಕ್ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಅಸಮಾಧಾನ

ಲಡಾಖ್ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ವಿರುದ್ಧ ಸಲ್ಲಿಸಿದ ವೀಡಿಯೊ ಪ್ರತಿಗಳ ಅನುವಾದದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರವನ್ನು ಪ್ರಶ್ನಿಸಿದೆ. ಕೃತಕ ಬುದ್ಧಿಮತ್ತೆ (ಎಐ) ಕಾಲದಲ್ಲಿ ಅನುವಾದ ನಿಖರವಾಗಿರಬೇಕು ಎಂದು ಹೇಳಿದೆ. ನ್ಯಾಯಮೂರ್ತಿಗಳಾದ...

ಬಜೆಟ್ ಅಧಿವೇಶನದಲ್ಲಿ ‘ರೋಹಿತ್ ಕಾಯ್ದೆ’ ಜಾರಿಗೆ ಆಗ್ರಹ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ದೌರ್ಜನ್ಯವನ್ನು ತಡೆಯುವ ಸಲುವಾಗಿ ತುರ್ತಾಗಿ 'ರೋಹಿತ್ ವೇಮುಲ ಕಾಯ್ದೆ'ಯನ್ನು ಜಾರಿಗೊಳಿಸಬೇಕು ಎಂದು 'ರೋಹಿತ್ ವೇಮುಲ ಕಾಯ್ದೆಗಾಗಿ ಜನಾಂದೋಲನ' ತಂಡ ರಾಜ್ಯ ಸರ್ಕಾರವನ್ನು ಆಗ್ರಹಿಸಿತು. ಮಂಗಳವಾರ (ಫೆ.17) ಬೆಂಗಳೂರಿನ ಪ್ರೆಸ್‌...

ಖಾಸಗಿ ಜಾಗದಲ್ಲಿ ನಮಾಝ್ ತಡೆದ ಅಧಿಕಾರಿಗಳು: ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಅಲಹಾಬಾದ್ ಹೈಕೋರ್ಟ್

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮೊಹಮ್ಮದ್‌ಗಂಜ್ ಗ್ರಾಮದ ಖಾಲಿ ಮನೆಯೊಂದರಲ್ಲಿ ಮುಸ್ಲಿಂ ಸಮುದಾಯದವರು ನಮಾಝ್ ಮಾಡುವುದನ್ನು ತಡೆದ ಜಿಲ್ಲಾಧಿಕಾರಿ ಅವಿನಾಶ್ ಸಿಂಗ್ ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಅವರಿಗೆ ಅಲಹಾಬಾದ್...

ರೂ. 80 ಸಾವಿರ ಕೋಟಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ಎನ್‌ಜಿಟಿ ಹಸಿರು ನಿಶಾನೆ

ತೀವ್ರ ವಿರೋಧಗಳ ನಡುವೆಯೇ 80 ಸಾವಿರ ಕೋಟಿ ರೂಪಾಯಿ ವೆಚ್ಚದ ವಿವಾದಾತ್ಮಕ ಗ್ರೇಟ್ ನಿಕೋಬಾರ್ ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಸೋಮವಾರ (ಫೆ.16) ಹಸಿರು ನಿಶಾನೆ ತೋರಿದೆ. ಆರು ಸದಸ್ಯರ ಎನ್‌ಜಿಟಿಯ ವಿಶೇಷ...