Homeಆರೋಗ್ಯಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು

ಕನ್ನಡಕ್ಕೆ ಕನ್ನಡದ್ದೆ ಊಟ ಉಂಟಾ? ಡಾ. ಕೆ.ಸಿ ರಘು

ಆಹಾರ ಸಂಸ್ಕೃತಿಯೆಂದರೆ ಆಹಾರವನ್ನು ಸೇವಿಸುವಾಗ ಇಳಿವಯಸ್ಸಿನ ನೆನೆಪು ಮರುಕಳಿಸುವುದು. ಅಜ್ಜಿಯ ನೆನೆಪು ತರಿಸುವುದು. ತನ್ನ ಹುಟ್ಟೂರು ಮತ್ತು ಸಂಗಾತಿಗಳನ್ನು ಜೀವಂತಗೊಳಿಸುವುದು.

- Advertisement -
- Advertisement -

ಪ್ರತಿಯೊಂದು ದೇಶ, ರಾಜ್ಯ, ಜಿಲ್ಲೆ, ತಾಲೂಕು ಅಥವಾ ಗ್ರಾಮಗಳಲ್ಲಿನ ಸಮುದಾಯಗಳೆಲ್ಲವಕ್ಕೂ ತನ್ನದೇ ಆದ ಆಹಾರ ಸಂಸ್ಕೃತಿಯ ಬಗ್ಗೆ ಅಪಾರವಾದ ಗೌರವ ಮತ್ತು ಹೆಮ್ಮೆ ಇರುತ್ತದೆ. ಸ್ಥಳೀಯವಾಗಿ ಪ್ರಾಕೃತಿಕ ಪರಿಸರದಲ್ಲಿ ಲಭ್ಯವಿರುವ ಸಸ್ಯ, ಪ್ರಾಣಿ-ಮೀನುಗಳ ಆಧಾರದ ಮೇಲೆ ಆಹಾರ ಸಂಸ್ಕೃತಿಯೂ ವಿಕಾಸವಾಗಿರುತ್ತದೆ.

ಕೊಲಂಬಸ್ ದಕ್ಷಿಣ ಅಮೆರಿಕವನ್ನು ತಲುಪಿದ ಮೇಲೆ ಅಲ್ಲಿದ್ದ ಅಪಾರವಾದ ಆಹಾರ ವೈವಿಧ್ಯತೆ ಯುರೋಪ್ ಮತ್ತು ಏಷ್ಯಾ ಖಂಡಗಳಿಗೆ ತಲುಪುವಂತಾಯಿತು. ಇದನ್ನು ಕೊಲೊಂಬಿಯನ್ ಎಕ್ಸ್ಚೇಂಜ್ ಎನ್ನುತ್ತಾರೆ. ಅನಾನಸ್‍ಅನ್ನು ಹಿಂದೆಂದೂ ಕಾಣದ ಯುರೋಪಿಯನ್ನರು ಅದರ ಮೋಹದಿಂದ ಯುರೋಪಿನಲ್ಲಿ ಅನಾನಸ್ ತರದ ಕಟ್ಟಡಗಳನ್ನು ನಿರ್ಮಿಸಿ ಅದರ ವೈಭವವನ್ನು ಕೊಂಡಾಡಿದರು. ಅನೇಕ ಆರ್ಥಿಕ ತಜ್ಞರ ಪ್ರಕಾರ ದಕ್ಷಿಣ ಅಮೆರಿಕದ ಆಲೂಗಡ್ಡೆ ಯುರೋಪಿಯನ್ನರಿಗೆ ಸಿಕ್ಕದಿದ್ದಲ್ಲಿ ಅಲ್ಲಿ ಕೈಗಾರಿಕಾ ಕ್ರಾಂತಿಯೇ ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ. ಹೊಟ್ಟೆಗೆ ಆಹಾರವಿದ್ದ ಕಾರಣ ಮನುಷ್ಯನ ಕ್ರಿಯಾತ್ಮಕ ಶಕ್ತಿ ನಗರ ನಿರ್ಮಾಣ ಮತ್ತು ಉತ್ಪಾದನೆಗೆ ಸಹಕರಿಸಿ ಕೈಗಾರಿಕಾ ಕ್ರಾಂತಿ ಉಂಟಾಯಿತು. ಬಿಜಿಎಲ್ ಸ್ವಾಮಿಯವರು ‘ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೇರಿಕಾ’ ಎನ್ನುವ ಪುಸ್ತಕ ಬರೆದು ಇಂದು ನಾವು ನಮ್ಮದೇ ಎಂದುಕೊಳ್ಳುವ ಬ್ಯಾಡಗಿ ಮೆಣಸಿನಕಾಯಿ ಕೂಡ ದಕ್ಷಿಣ ಅಮೇರಿಕಾದ ಚಿಲಿಯಿಂದ ಬಂದಿದ್ದು ಎಂದ ಮೇಲೆ ಸ್ವಲ್ಪ ಮುಜುಗರವಾಗುತ್ತದೆ. ತಮಾಷೆಗಾಗಿ ಹೀಗೆ ಹೇಳುವುದುಂಟು. ಭಾರತೀಯರು ಏನೇ ತಿಂದರು ಅದು ಮೆಣಸಿನಕಾಯಿಗೋಸ್ಕರವೇ ಎಂದು.

ಅದೆಲ್ಲ ಹಾಗಿರಲಿ, ರಾಗಿ ಮುದ್ದೆ ನಮ್ಮದೆ ಅಲ್ಲವೇ ಎಂದು ಹೆಮ್ಮೆ ಪಡೋಣ ಎಂದುಕೊಂಡರೆ, ಮೂಲತಃ ರಾಗಿ ಆಫ್ರಿಕಾ ಖಂಡದ ಇಥಿಯೋಪಿಯಾದಿಂದ ಬಂದದ್ದು ಎನ್ನುವುದನ್ನು ಮರೆಯುವಂತಿಲ್ಲ. ಹಾಗೆ ನೋಡಿದರೆ ನಾವೆಲ್ಲರೂ ಸಹ ಸುಮಾರು ಎಪ್ಪತ್ತು ಸಾವಿರದ ವರ್ಷದ ಹಿಂದೆ ಆಫ್ರಿಕಾ ಖಂಡದಿಂದ ಹೊರಟು ಇಡೀ ಜಗತ್ತನ್ನು ಆವರಿಸಿಕೊಂಡ ಪ್ರಳಯಾಂತಕ ಪ್ರಾಣಿಗಳೆ. ಅಷ್ಟೇ ಅಲ್ಲ, ನಮ್ಮ ಕೃಷಿ ಕೂಡ ಕೇವಲ ಸುಮಾರು 15 ಸಾವಿರ ವರ್ಷ ಹಳೆಯದ್ದಷ್ಟು. ಅದಕ್ಕೂ ಹಿಂದೆ ನಾವೆಲ್ಲರೂ ಬೇಟೆಯಾಡಿ ಬದುಕುತ್ತಿದ್ದ ಪ್ರಾಣಿಗಳೆ. ಬೆನಿಡಿಕ್ಟ್ ಆಂಡರ್‍ಸನ್ ತನ್ನ ‘ಇಮ್ಯಾಜಿನ್ಡ್ ಕಮ್ಯುನಿಟಿ’ ಎನ್ನುವ ಪುಸ್ತಕದಲ್ಲಿ ರಾಷ್ಟ್ರ, ಜನಾಂಗ, ಸಮುದಾಯ ಎನ್ನುವುದೆಲ್ಲವೂ ಕಲ್ಪಿತವೇ ಎನ್ನುತ್ತಾನೆ. ಭಾಷೆ ಕೂಡ ನಮ್ಮದು ಎಂದು ಬಹಳ ಹೆಗ್ಗಳಿಕೆಯಿಂದ ಹೇಳುವಾಗ ನೋಮ್ ಚಾಮ್ಸ್‌ಕಿಯ ಯೂನಿವರ್ಸಲ್ ಗ್ರಾಮರ್ ಸಿದ್ಧಾಂತದ ಪ್ರಕಾರ ಭಾಷೆಗಿಂತ ಮೊದಲು ವ್ಯಾಕರಣದ ಹುಟ್ಟು ಎನ್ನುವುದನ್ನ ಮರೆಯುವಂತಿಲ್ಲ. ವ್ಯಾಕರಣ ನಮ್ಮ ಮೆದುಳಿನ ಭೌತಿಕ ಹೆಣಿಕೆ ಹುಟ್ಟಿನಿಂದಲೇ ಇರುವಂತದ್ದು. ಮನುಷ್ಯನ ಅಡುಗೆ ಕೂಡ ಬಹಳ ಪುರಾತನವಾದದ್ದೇನು ಅಲ್ಲ. ಮತ್ತೆ ಬೇಯಿಸದೇ ಇರುವ ಆಹಾರ ಸಂಸ್ಕೃತಿಯೂ (Paleo diet ) ಇದೆ ಎನ್ನುವುದನ್ನು ಮರೆಯುವಂತಿಲ್ಲ.

ಬೆಳೆದ ಮತ್ತು ಪೃಕೃತಿಯಲ್ಲಿಯೇ ಸ್ಥಳೀಯವಾಗಿ ದಕ್ಕುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ತನ್ನದೇ ಆಹಾರ ಸಂಸ್ಕೃತಿಯನ್ನು ಪ್ರತಿಯೊಂದು ಸಮುದಾಯವೂ ರೂಪಿಸಿಕೊಂಡಿರುವುದನ್ನು ಮತ್ತು ಅದು ವಿಕಾಸವಾಗಿರುವುದನ್ನು ಗಮನಿಸಬಹುದು. ಎಷ್ಟು ರೀತಿಯಲ್ಲಿ ಸಾಂಬಾರು ಮತ್ತು ರಸಂ ಮಾಡುಬಹುದೆನ್ನುವುದನ್ನು ಊಹಿಸಲಾಗದು. ಗುಲಾಬಿಯ ಬಗ್ಗೆ ಎಷ್ಟು ರೀತಿಯ ಕವಿತೆಗಳನ್ನು ಬರೆಯಬಹುದೆಂಬುದಕ್ಕೆ ಇತಿಮಿತಿ ಇರುವುದಿಲ್ಲವೋ ಹಾಗೆಯೆ ಒಂದೇ ಸಾಮಾಗ್ರಿಯನ್ನು ಹತ್ತು ಹಲವು ಬಗೆಯಲ್ಲಿ ಅಡುಗೆಯಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಇದ್ದೇ ಇರುತ್ತದೆ. ಆಹಾರ ಸಂಸ್ಕೃತಿ ಎನ್ನುವಾಗ ಸಾಮಾನ್ಯವಾಗಿ ನಾವು ಹೆಗ್ಗಳಿಕೆಯಿಂದ ಮಾತನಾಡುವುದು, ನಾವು ಕಲ್ಪಿಸಿಕೊಂಡಿರುವ ಶ್ರೇಷ್ಠ, ಶುದ್ಧ, ಉಚ್ಛ ಎನ್ನುವ ಆಹಾರ ಸಂಸ್ಕೃತಿಯ ಬಗ್ಗೆ. ಬುಡಕಟ್ಟು ಜನಾಂಗಗಳ ಮತ್ತು ತಳ ಸಮುದಾಯಗಳ ಬಹು ಆಹಾರ ಸಂಸ್ಕೃತಿಯನ್ನು ನಾವು ಅಷ್ಟಾಗಿ ವಿಜೃಂಭಿಸುವುದಿಲ್ಲ ಮತ್ತು ಅವುಗಳ ಬಗ್ಗೆ ಬಹಳ ಕೀಳರಿಮೆ ಉಳಿಸಿಕೊಂಡಿದ್ದೇವೆ. ಕರ್ನಾಟಕದಲ್ಲಿಯೇ ಸುಮಾರು ಸಾವಿರ ರೀತಿಯ ಕೀಟಗಳ ಭಕ್ಷಣೆ ಉಂಟು. ಕಾಡಿನ ವೈವಿಧ್ಯಮಯ ಸಂಪತ್ತನ್ನು ಅಡುಗೆಗೆ ಬಳಸುವುದುಂಟು. ವಿ.ಗಾಯಿತ್ರಿಯವರ ಪುಟ್ಟೀರಮ್ಮನ ಪುರಾಣ ಎನ್ನುವ ಪುಸ್ತಕದಲ್ಲಿ ನಂಜನಗೂಡಿನ ಅವಿದ್ಯಾವಂತ ಮಹಿಳೆ ಪುಟ್ಟೀರಮ್ಮ ಸುಮಾರು 300ಕ್ಕೂ ಹೆಚ್ಚು ಕಾಡು ಸೊಪ್ಪುಗಳನ್ನ ಅಡುಗೆಗೆ ಬಳಸುತ್ತಾಳೆ ಎಂದು ದಾಖಲಿಸಿದ್ದಾರೆ. ಇದು ನಿಜವಾದ ಆಹಾರ ಸಂಸ್ಕೃತಿ. ಸಾಮಾನ್ಯವಾಗಿ ಔಷಧೀಯ ಗಿಡವನ್ನು ಕಳೆಯನ್ನಾಗಿ ನೋಡುವವರನ್ನು ಇಂದು ವಿದ್ಯಾವಂತ ನಾಗರಿಕ ಎಂದು ನಾವು ಪರಿಗಣಿಸುತ್ತೇವೆ. ಮಾರ್ಕ್ ಟ್ವೈನ್ Cauliflower is a cabbage with college education ಎಂದು ಹೇಳಿದ್ದಾನೆ. ಸಮಾಜ ಶಾಸ್ತ್ರಜ್ಞ ಎಂ.ಎನ್.ಶ್ರೀನಿವಾಸ್ ಇರುಳಾ ಸಮುದಾಯದೊಂದಿಗೆ ಮಾತನಾಡುತ್ತ, ನೀವು ಇಲಿ ತಿನ್ನುತ್ತೀರಾ ಎಂದಾಗ ಅವರು ಕೋಪಗೊಂಡು ಇಲಿಗಳಲ್ಲಿರುವ ಹತ್ತಾರು ಬಗೆಯನ್ನು ಹೇಳಿ ನಾವು ಬಳಸುವ ಇಲಿಯ ಮೇಲೆ ಮೂರು ಗೆರೆಗಳುಂಟು ಎಂದು ಬಣ್ಣಿಸುತ್ತಾರೆ. ಹೀಗೆ ಇಂತಹ ಆಹಾರ ಸಂಸ್ಕೃತಿಗಳ ಬಗ್ಗೆ ಸಮಾಜ ಶಾಸ್ತ್ರೀಯ ಅಧ್ಯಯನವೂ ಬಹಳ ಕಮ್ಮಿ.

ಆಹಾರ ಸಂಸ್ಕೃತಿಯಲ್ಲಿ ಇದು ನಮ್ಮದೇ ಎಂದು ಹೇಳುವುದು ಬಹಳ ಕಷ್ಟ. ಉದಾಹರಣೆಗೆ ಪಶ್ಚಿಮ ಬಂಗಾಳಕ್ಕೆ ರಸಗುಲ್ಲಾದ ಭೌತಿಕ ಹಕ್ಕಾದ ಬೌಗೋಳಿಕ ಸೂಚ್ಯಂಕವನ್ನು (GI) ನೀಡಿದಾಗ ಒರಿಸ್ಸಾ ರಾಜ್ಯದವರು ತಕರಾರು ತಂದರು. ಏಕೆಂದರೆ ಅನೇಕ ವರ್ಷಗಳಿಂದ ರಸಗುಲ್ಲಾವನ್ನು ಪಕ್ಕದ ಹಳ್ಳಿಯೊಂದರಿಂದ ಪುರಿಯ ಜಗನ್ನಾಥ ದೇವಾಲಯಕ್ಕೆ ನೈವೇದ್ಯಕ್ಕೆ ತಂದುಕೊಡುತ್ತಿದ್ದ ತಿಂಡಿಯಾಗಿದೆ.

ಇಂತಹ ಸಂದರ್ಭದ ನಡುವೆಯೂ ನಮ್ಮ ಕನ್ನಡ ನಾಡಿನ ಆಹಾರ ಸಂಸ್ಕೃತಿಯನ್ನು ಅಲ್ಲಗಳೆಯುವುದು ಅಸಾಧ್ಯವೆ. ಕರ್ನಾಟಕದ ಆಹಾರ ಸಂಸ್ಕೃತಿಯೆಂದರೆ ನಮಗೆ ಎದ್ದು ಕಾಣುವುದು ದಕ್ಷಿಣ ಕರ್ನಾಟಕದ ಮುದ್ದೆ ಸೊಪ್ಪಿನ ಸಾರು, ಉತ್ತರ ಕರ್ನಾಟಕದ ಜೋಳದ ರೊಟ್ಟಿ ಎಣಗಾಯಿ ಪಲ್ಯ, ಮಂಗಳೂರಿನ ಕುಚ್ಚಲಕ್ಕಿ ಗಂಜಿ ಒಣಮೀನು, ಕೊಡವರ ಪಂದಿಕರಿ, ಮಲೆನಾಡಿನ ಅಕ್ಕಿರೊಟ್ಟಿ ಹೀಗೆ. ಮೂಲ ಊಟವನ್ನು ಬಿಟ್ಟು ಪರಿಗಣಿಸುವುದಾದರೆ ಧಾರವಾಡದ ಪೇಡ, ಬೆಳಗಾವಿಯ ಕುಂದಾ, ಮೈಸೂರು ಪಾಕ್, ಮಸಾಲಾ ದೋಸೆ, ಕರದಂಟು ಹೀಗೆ ಪಟ್ಟಿಮಾಡಬಹುದು. ಹಾಗೆಯೆ ಮಂಗಳೂರಿನ ಬ್ಯಾರಿ ಸಮುದಾಯದ ಊಟ, ಲಂಬಾಣಿಯವರ ಊಟ ಹೀಗೆ ಸಮುದಾಯದಿಂದ ಸಮುದಾಯಕ್ಕೆ ಸೂಕ್ಷ್ಮ ವ್ಯತ್ಯಾಸಗಳನ್ನು ಗಮನಿಸಬಹುದು.
ಉಡುಪಿಯ ಶಿವಳ್ಳಿ ಬ್ರಾಹ್ಮಣರು ಸೌಟು ಹಿಡಿದು ಇಡೀ ಭಾರತಕ್ಕೆ ತಮ್ಮ ಆಹಾರ ಸಂಸ್ಕೃತಿಯನ್ನು ಹೊಟೇಲ್ ವ್ಯಾಪಾರದ ಮೂಲಕ ಪಸರಿಸಿದ್ದಾರೆ. ಮುಂಬೈ ನಗರದಲ್ಲಿಯೇ ಸುಮಾರು 15 ಸಾವಿರ ಉಡುಪಿ ಹೋಟೆಲ್‍ಗಳಿವೆ ಎನ್ನುವ ಅಂದಾಜು. ದೆಹಲಿಯ ಮದ್ರಾಸ್ ಕೆಫೆ, ಚೆನ್ನೈನ ವುಡ್‍ಲ್ಯಾಂಡ್ಸ್ ಇವರು ಹುಟ್ಟುಹಾಕಿದ ಹೊಟೇಲ್‍ಗಳೆ.

ಇಂದು ಆಹಾರ ಸಂಸ್ಕೃತಿ ಅನೇಕ ಕೊಡುಕೊಳ್ಳುವಿಕೆಗಳ ಹಂತದಲ್ಲಿದೆ. ಜಾಗತೀಕರಣ, ಮನುಷ್ಯನ ಓಡಾಟ ಮತ್ತು ವಿಭಿನ್ನ ಸಂಸ್ಕೃತಿಗಳು ಪಸರುವಿಕೆಯ ಕಾರಣದಿಂದ ಆಹಾರ ಸಂಸ್ಕೃತಿಯಲ್ಲಿ ಹೊಸ ಹೊಸ ಬೆಸುಗೆ ಸಾಧ್ಯವಾಗಿದೆ. ಬೆಂಗಳೂರು ನಗರದಲ್ಲಿಯೇ ಇಂದು ಸುಮಾರು 20 ಜಪಾನಿ ಹೊಟೆಲ್‍ಗಳಿವೆ. ಆಹಾರ ಸಂಸ್ಕೃತಿ ಎಂಬುದು ಸಹ ನಿಂತ ನೀರಲ್ಲ. ಹೊಸ ಅಡುಗೆ ತಂತ್ರಜ್ಞಾನಗಳ ಮತ್ತು ಯಂತ್ರಗಳ ಅಳವಡಿಕೆಯೂ ಸಹ ಆಹಾರ ಸಂಸ್ಕೃತಿಯನ್ನು ಹೊಸ ದಿಕ್ಕಿನತ್ತ ಹರಿಸಬಹುದು.

ಆಹಾರ ಸಂಸ್ಕೃತಿಯೆಂದರೆ ಆಹಾರವನ್ನು ಸೇವಿಸುವಾಗ ಇಳಿವಯಸ್ಸಿನ ನೆನೆಪು ಮರುಕಳಿಸುವುದು. ಅಜ್ಜಿಯ ನೆನೆಪು ತರಿಸುವುದು. ತನ್ನ ಹುಟ್ಟೂರು ಮತ್ತು ಸಂಗಾತಿಗಳನ್ನು ಜೀವಂತಗೊಳಿಸುವುದು. ಹೀಗೆ Eating is a massive memory.

ಡಾ.ಕೆ. ಸಿ. ರಘು ಚಿಂತಕರು, ಆಹಾರ ತಜ್ಞರು

ಇದನ್ನೂ ಓದಿ: ಹತ್ರಾಸ್ ಪ್ರಕರಣ:’ಸೇಡು ತೀರಿಸಿಕೊಳ್ಳುವುದಲ್ಲ, ಬದಲಾವಣೆ ಬೇಕು’; ಮಹಿಳಾ ಸಂಘಟನೆಗಳು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...