Homeಕರೋನಾ ತಲ್ಲಣಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ’ಸೀರಮ್ ಇನ್ಸ್ಟಿಟ್ಯೂಟ್’

ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ’ಸೀರಮ್ ಇನ್ಸ್ಟಿಟ್ಯೂಟ್’

ಈ ಮೂಲಕ ಕೊರೊನಾ ಲಸಿಕೆಗಾಗಿ ಅನುಮತಿ ಕೇಳುತ್ತಿರುವ ಎರಡನೆ ಕಂಪೆನಿಯಿದು

- Advertisement -
- Advertisement -

ಉತ್ಪಾದನೆಯ ಪ್ರಮಾಣಗಳ ಪ್ರಕಾರ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಔಷಧ ತಯಾರಕ ಅಸ್ಟ್ರಾಜೆನೆಕಾ ಜೊತೆ ಅಭಿವೃದ್ಧಿಪಡಿಸುತ್ತಿರುವ ಕೊರೊನಾ ವೈರಸ್ ಲಸಿಕೆಯ ತುರ್ತು ಬಳಕೆಯ ಅನುಮತಿಗಾಗಿ ಸರ್ಕಾರದ ಅನುಮತಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.

ಈ ಮೂಲಕ ಕೊರೊನಾ ಲಸಿಕೆಗಾಗಿ ಅನುಮತಿ ಕೇಳುತ್ತಿರುವ ಎರಡನೆ ಕಂಪೆನಿಯಿದು. ಈ ಹಿಂದೆ ಅಮೆರಿಕಾ ಮೂಲದ ಫೈಝರ್‌ ಲಸಿಕೆಯ ತುರ್ತು ಬಳಕೆಗಾಗಿ ಅನುಮತಿ ಕೋರಿತ್ತು ಎಂದು ಮೂಲಗಳು ತಿಳಿಸಿದೆ. ಫೈಝರ್‌ ಲಸಿಕೆಯ ವ್ಯಾಪಕ ಬಳಕೆಗೆ ಬ್ರಿಟನ್ ಮತ್ತು ಬಹರೈನ್ ದೇಶಗಳು ಈಗಾಗಲೇ ಅನುಮತಿ ನೀಡಿದೆ.

ಇದನ್ನೂ ಓದಿ: ಭಾರತದಲ್ಲಿ ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ಫೈಝರ್

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ತನ್ನ ಕೋವಿಶೀಲ್ಡ್ ಲಸಿಕೆ ಕುರಿತು ಭಾರತದಲ್ಲಿ ಪ್ರಯೋಗಗಳನ್ನು ನಡೆಸಲು ಅಸ್ಟ್ರಾಜೆನೆಕಾ ಪಿಎಲ್‌ಸಿ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. “ಕೋವಿಶೀಲ್ಡ್ ಸುರಕ್ಷಿತ ಮತ್ತು ಉತ್ತಮವಾಗಿ ಸಹಿಸಿಕೊಳ್ಳಬಲ್ಲ ಲಸಿಕೆಯಾಗಿದೆ. ಉದ್ದೇಶಿತ ಜನಸಂಖ್ಯೆಯಲ್ಲಿ ಕೊರೊನಾ ತಡೆಗಟ್ಟಲು ಪರಿಣಾಮಕಾರಿಯಾಗಿ ಬಳಸಬಹುದು” ಎಂದು ಔಷಧ ಕಂಪೆನಿಯು ಸರ್ಕಾರಿ ಔಷಧ ನಿಯಂತ್ರಕಕ್ಕೆ ನೀಡಿರುವ ಅರ್ಜಿಯಲ್ಲಿ ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ಮೂಲವನ್ನು ಉಲ್ಲೇಖಿಸಿ ವರದಿ ಮಾಡಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹ-ಪ್ರಾಯೋಜಿತ ಕೋವಿಶೀಲ್ಡ್‌ನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗವನ್ನು ಬ್ರಿಟನ್ ಮತ್ತು ಬ್ರೆಜಿಲ್‌ನಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ನಡೆಸುತ್ತಿರುವ ಕ್ಲಿನಿಕಲ್ ಅಧ್ಯಯನಗಳ ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ನಡೆಸಲಾಗುತ್ತಿದೆ.

ಕಂಪೆನಿಯು ನಾಲ್ಕು ಕ್ಲಿನಿಕಲ್ ಪ್ರಯೋಗಗಳ ಮಧ್ಯಂತರ ಡೇಟಾವನ್ನು ಸರ್ಕಾರಿ ಔಷಧ ನಿಯಂತ್ರಕದೊಂದಿಗೆ ಹಂಚಿಕೊಂಡಿದೆ. ಭಾರತದಲ್ಲಿ ಒಂದು, ಬ್ರಿಟನ್‌ನಲ್ಲಿ ಎರಡು ಮತ್ತು ಬ್ರೆಜಿಲ್‌ನಲ್ಲಿ ಒಂದು ಕಂಪೆನಿಯ ಕ್ಲಿನಿಕಲ್ ಪ್ರಯೋಗಗಳು ನಡೆದಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ: ಕೊರೊನಾ ಲಸಿಕೆಯ ಬಳಕೆಗೆ ಅನುಮತಿ ನೀಡಿದ ಬ್ರಿಟನ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಆಡಳಿತದಲ್ಲಿ 151 ಅಂಬೇಡ್ಕರ್ ಪ್ರತಿಮೆಗಳ ಧ್ವಂಸ: ಅಖಿಲೇಶ್ ಯಾದವ್ ಆರೋಪ

ಉತ್ತರ ಪ್ರದೇಶದಲ್ಲಿ ಬಿಜೆಪಿ ಆಡಳಿತದ ಅವಧಿಯಲ್ಲಿ 72 ಜಿಲ್ಲೆಗಳಲ್ಲಿ ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ 151 ಪ್ರತಿಮೆಗಳನ್ನು ಧ್ವಂಸಗೊಳಿಸಲಾಗಿದೆ. ಆದರೆ ಈವರೆಗೆ ಕೇವಲ 14 ಮಂದಿಯನ್ನು ಮಾತ್ರ ಬಂಧಿಸಲಾಗಿದೆ ಎಂದು ಸಮಾಜವಾದಿ ಪಕ್ಷದ...

ಜಾತಿ ತಾರತಮ್ಯ ಹಿಂದೂ ಸಮಾಜಕ್ಕಂಟಿದ ‘ಕಳಂಕ’: ಆರ್‌ಎಸ್‌ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ

"ಜಾತಿ ಆಧಾರಿತ ತಾರತಮ್ಯವು ಹಿಂದೂ ಸಮಾಜಕ್ಕಂಟಿದ ಕಳಂಕ, ಕೇವಲ ಕಾನೂನುಗಳಿಂದ ಜಾತೀಯತೆ ಮತ್ತು ಅಸ್ಪೃಶ್ಯತೆಯನ್ನು ಕೊನೆಗೊಳಿಸಲು ಸಾಧ್ಯವಿಲ್ಲ, ಇದಕ್ಕೆ ಪ್ರತಿಯೊಬ್ಬ ವ್ಯಕ್ತಿಯ ನಡವಳಿಕೆಯಲ್ಲಿ ಬದಲಾವಣೆಯಾಗುವ ಅಗತ್ಯವಿದೆ" ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌)...

ಎಸ್‌ಐಆರ್‌ನ ಮೂರು ಹಂತಗಳಲ್ಲಿ 13.98 ಕೋಟಿ ಮತದಾರರು ಹೊರಕ್ಕೆ; 5.43 ಕೋಟಿ ಮತದಾರರಿಗೆ ಅಳಿಸುವಿಕೆಯ ಭೀತಿ: ಕಾಂಗ್ರೆಸ್ 

ನವದೆಹಲಿ: ಭಾರತೀಯ ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ದೇಶದ ಕೋಟ್ಯಂತರ ಮತದಾರರ ಹಕ್ಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. SIRನ...

ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ : ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶ

ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಸೋಮವಾರ (ಸೆ.21) ಆದೇಶಿಸಿದೆ. ಈ ಪ್ರಕರಣದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೂರು ತಿಂಗಳೊಳಗೆ ಅನುಪಾಲನಾ ವರದಿಯನ್ನು (compliance report)...

1,400 ಮುಸ್ಲಿಂ ಕುಟುಂಬಗಳ ಬದುಕು ಕಸಿದುಕೊಂಡ ಭೂಮಿಯಲ್ಲಿ ಅದಾನಿ ವಿದ್ಯುತ್ ಯೋಜನೆಗೆ ಹಿಮಂತ್ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಅಡಿಪಾಯ

ಗುವಾಹಟಿ: ಅಸ್ಸಾಂನ ಧುಬ್ರಿ ಜಿಲ್ಲೆಯಲ್ಲಿ ಸುಮಾರು 1,400 ಬಂಗಾಳಿ ಮೂಲದ ಮುಸ್ಲಿಂ ಕುಟುಂಬಗಳನ್ನು ತೆರವುಗೊಳಿಸಿ, ಅವರ ಮನೆಗಳನ್ನು ನೆಲಸಮಗೊಳಿಸಿದ ಪ್ರದೇಶದಲ್ಲೇ ಅದಾನಿ ಪವರ್ ಲಿಮಿಟೆಡ್‌ನ 3,200 ಮೆಗಾವ್ಯಾಟ್ ಸಾಮರ್ಥ್ಯದ ಉಷ್ಣ ವಿದ್ಯುತ್ ಯೋಜನೆಗೆ...

ಮಧುಗಿರಿ: ಗಣೇಶೋತ್ಸವದಲ್ಲಿ ಕುಣಿದಿದ್ದಕ್ಕೆ 17 ವರ್ಷದ ದಲಿತ ಬಾಲಕನ ಕೊಲೆ

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಸಾಪುರ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಕುಣಿದಿದ್ದಕ್ಕೆ ಆಕ್ಷೇಪಿಸಿ ದಲಿತ ಸಮುದಾಯದ17 ವರ್ಷದ ಬಾಲಕ ಸಿಂಹಾದ್ರಿಯನ್ನು ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ. ಘಟನೆಯ...

DELHI SIR : ಕರಡು ಪಟ್ಟಿಯಲ್ಲಿ 2024ರಲ್ಲಿ ನಿಧನರಾದ ಅರ್ಥಶಾಸ್ತ್ರಜ್ಞ ಬಿಬೇಕ್ ದೆಬ್ರಾಯ್ ಹೆಸರು!

ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಅವಾಂತರಗಳು ದಿನಕ್ಕೊಂದು ಬೆಳಕಿಗೆ ಬರುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, 2024ರಲ್ಲಿ ನಿಧನರಾದ ಪದ್ಮ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಬಿಬೆಕ್ ದೆಬ್ರಾಯ್ ಅವರ...

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...