HomeUncategorizedರೈತ ಹೋರಾಟವನ್ನು ಹತ್ತಿಕ್ಕಲು ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷ ಹರಡಲು ಪ್ರಯತ್ನ - ಸುಖ್‌ಬೀರ್ ಸಿಂಗ್

ರೈತ ಹೋರಾಟವನ್ನು ಹತ್ತಿಕ್ಕಲು ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷ ಹರಡಲು ಪ್ರಯತ್ನ – ಸುಖ್‌ಬೀರ್ ಸಿಂಗ್

"ಎನ್‌ಡಿಎ ಸರ್ಕಾರವು ಫೆಡರಲಿಸಂ ಅನ್ನು ಮಾತ್ರವಲ್ಲದೆ ಪ್ರತಿಭಟಿಸುವ ಸ್ವಾತಂತ್ರ್ಯವನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇವರ ಪರವಾಗಿರುವವರನ್ನು ದೇಶಭಕ್ತರು ಎಂಬಂತೆ, ವಿರುದ್ಧವಾಗಿರುವವರು ದೇಶ ದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ"

- Advertisement -
- Advertisement -

ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವುದಕ್ಕಾಗಿ ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷವನ್ನು ಹರಡಲಾಗುತ್ತಿದೆ ಎಂದು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಹೇಳಿದ್ದು, ಪರೋಕ್ಷವಾಗಿ ಬಿಜೆಪಿ-ಎನ್‌ಡಿಎ ಸರ್ಕಾರವನ್ನು ದೂರಿದ್ದಾರೆ.

“ರೈತರ ಆಂದೋಲನವನ್ನು ಸಿಖ್-ಹಿಂದೂ ಸಂಘರ್ಷವನ್ನಾಗಿಸಲು ಈ ಪ್ರಯತ್ನಗಳು ನಡೆಯುತ್ತಿವೆ. ಇದು ಈಗಾಗಲೇ ದೆಹಲಿಯಲ್ಲಿ ಪ್ರಾರಂಭವಾಗಿದೆ. ಈಗ ಇದನ್ನು ಪಂಜಾಬ್‌ನಲ್ಲಿ ಪುನರಾವರ್ತಿಸಲು ಬಯಸುತ್ತಿವೆ. ಅಕಾಲಿ ದಳವು ಶಾಂತಿ ಮತ್ತು ಕೋಮು ಸಹೋದರತ್ವವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ” ಎಂದು ಅಮೃತಸರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸುಖ್‌ಬೀರ್ ಸಿಂಗ್ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇದನ್ನೂ ಓದಿ: ಬಾಯ್ಕಾಟ್ ಅಭಿಯಾನ: ಏರ್‌ಟೆಲ್, ವೊಡಾಫೋನ್ ವಿರುದ್ಧ ದೂರು ನೀಡಿದ ಜಿಯೋ!

“ಎನ್‌ಡಿಎ ಸರ್ಕಾರವು ಫೆಡರಲಿಸಂ ಅನ್ನು ಮಾತ್ರವಲ್ಲದೆ ಪ್ರತಿಭಟಿಸುವ ಸ್ವಾತಂತ್ರ್ಯವನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇವರ ಪರವಾಗಿರುವವರನ್ನು ದೇಶಭಕ್ತರು ಎಂಬಂತೆ, ವಿರುದ್ಧವಾಗಿರುವವರು ದೇಶ ದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ” ಎಂದು ಆರೋಪಿಸಿದರು.

“ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕೇಂದ್ರ ಸಚಿವಾಲಯಕ್ಕೆ ರಾಜೀನಾಮೆ ನೀಡಿದ ಹರ್ಸಿಮ್ರತ್ ಕೌರ್ ಬಾದಲ್ ದೇಶ ದ್ರೋಹಿಯೇ? ತನ್ನ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್ ದೇಶದ್ರೋಹಿಯೇ? ಇವರನ್ನು ದೇಶದ್ರೋಹಿ ಎಂದು ಯಾರಾದರೂ ಹೇಳಬಹುದೇ?” ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕೊರೊನಾ ಕಾರಣ ನೀಡಿ ಸಂಸತ್ತಿನ ’ಚಳಿಗಾಲದ ಅಧಿವೇಶನ’ ರದ್ದುಪಡಿಸಿದ ಕೇಂದ್ರ ಸರ್ಕಾರ

“ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಸಮರ್ಥನೆಯನ್ನು ರೈತರು ಒಪ್ಪದ ಕಾರಣ ಅವರನ್ನು ಉಗ್ರಗಾಮಿಗಳು ಎಂದು ಬಿಂಬಿಸಲಾಯಿತು. ಅಕಾಲಿ ದಳವು ಒಕ್ಕೂಟ ವ್ಯವಸ್ಥೆಯ ಬಗ್ಗೆ ದನಿಯೆತ್ತಿದಾಗ ಪ್ರತ್ಯೇಕತಾವಾದಿಗಳು ಎಂದು ಬ್ರಾಂಡ್ ಮಾಡಲಾಯಿತು” ಎಂದು ಸುಖ್‌ಬೀರ್ ಸಿಂಗ್ ಹೇಳಿದರು.

ಅದೇ ಸ್ಥಳದಲ್ಲಿದ್ದ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, “ಸರ್ಕಾರದ ಪ್ರಸ್ತಾವಗಳಿಗೆ ಒಪ್ಪದ ಕಾರಣ ರೈತರನ್ನು ನಕ್ಸಲೈಟ್ ಮತ್ತು ಭಯೋತ್ಪಾದಕರು ಎಂದು ಕರೆಯುತ್ತಿರುವುದು ದುರದೃಷ್ಟಕರ. ಇಂತಹ ತಂತ್ರಗಳು ಕೇಂದ್ರಕ್ಕೆ ಸಹಾಯ ಮಾಡುವುದಿಲ್ಲ” ಎಂದು ಹೇಳಿದರು.


ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ 25,000 ಸೇನಾ ಪದಕಗಳನ್ನು ಹಿಂದಿರುಗಿಸಲು ಮುಂದಾದ ಮಾಜಿ ಸೈನಿಕರು!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನಲ್ಲಿ ಎಸ್ಐಆರ್ ವಿರೋಧಿ ಪ್ರತಿಭಟನೆ: ವಿದ್ಯಾರ್ಥಿ ಸಂಘಟನೆಗಳ ನಾಯಕರ ಬಂಧನ: ಕಾಂಗ್ರೆಸ್ ಸರ್ಕಾರದ ದ್ವಂದ್ವ ನಿಲುವಿನ ವಿರುದ್ಧ ಆಕ್ರೋಶ

ಕರ್ನಾಟಕದಲ್ಲಿ ಎಸ್‌ಐಆರ್ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿರುವುದು ಕಾಂಗ್ರೆಸ್ ಸರ್ಕಾರದ ಪ್ರಜಾಸತ್ತಾತ್ಮಕ ಮುಖವಾಡವನ್ನು ಬಯಲುಮಾಡಿದೆ ಎಂದು ಎಐಎಸ್‌ಎ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ದಮನಕಾರಿ...

ಸಿಜೆಪಿ ಪ್ರತಿಭಟನೆಗೆ ಬೆಂಬಲ: ಸಿಪಿಐ(ಎಂ) ನಾಯಕರು, ತುಷಾರ್ ಗಾಂಧಿ ಪೊಲೀಸರ ವಶಕ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಿರುದ್ಧದ ಪ್ರತಿಭಟನೆಗೆ ದೇಶದ ವಿವಿಧ ಭಾಗಗಳಿಂದ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ದೆಹಲಿ ಮತ್ತು ಮುಂಬೈನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದೆಹಲಿಯ ಜಂತರ್ ಮಂತರ್‌ನಲ್ಲಿ...

ಮೋದಿ, ಶಾ ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ

ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಿಂದ ಸಿಆರ್‌ಪಿಎಫ್ ಪಡೆಗಳನ್ನು ಕರೆಸಿ ದೆಹಲಿಯಲ್ಲಿ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ ಜನರ ವಿರುದ್ಧವೇ ಯುದ್ಧ ಸಾರಲು ಬಯಸುತ್ತಿದ್ದಾರೆ ಎಂದು...

ಹಲ್ಲೆ ಸುದ್ದಿ ತಳ್ಳಿ ಹಾಕಿದ ‘ಫ್ಯಾಕ್ಟ್‌ ಚೆಕ್ಕರ್’ ಝುಬೈರ್ : ಸುಳ್ಳು ಸುದ್ದಿ ಹಬ್ಬಿದ ಮಾಧ್ಯಮದ ವಿರುದ್ಧ ಕ್ರಮದ ಎಚ್ಚರಿಕೆ

ಬೆಂಗಳೂರು ಮೆಟ್ರೋದಲ್ಲಿ ತನ್ನ ಹಲ್ಲೆ ನಡೆದಿದೆ ಎಂಬ ಸುದ್ದಿಯನ್ನು ಫ್ಯಾಕ್ಟ್‌ ಚೆಕ್ಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಝುಬೈರ್ ತಳ್ಳಿಹಾಕಿದ್ದಾರೆ. ಝುಬೈರ್ ಮೇಲೆ ಬೆಂಗಳೂರು ಮೆಟ್ರೋದಲ್ಲಿ ಸಹ ಪ್ರಯಾಣಿಕರು ಹಲ್ಲೆ...

ಬಿಜೆಪಿಗೆ ರಿಲಯನ್ಸ್ ಬೆಂಬಲಿತ ಸಂಸ್ಥೆಗಳ ದೇಣಿಗೆ ವರದಿ ಹಂಚಿಕೊಂಡ ಎಲೋನ್ ಮಸ್ಕ್; ‘ಪ್ರಧಾನಿ ಅಂಬಾನಿ’ ಎಂದು ವ್ಯಂಗ್ಯ, ಏಕಸ್ವಾಮ್ಯದ ವಿರುದ್ಧ ವಾಗ್ದಾಳಿ

ನವದೆಹಲಿ: ಭಾರತದಲ್ಲಿ ತನ್ನ ಸ್ಟಾರ್‌ಲಿಂಕ್ ಉಪಗ್ರಹ ಇಂಟರ್ನೆಟ್ ಸೇವೆ ಆರಂಭಿಸಲು ಎದುರಾಗಿರುವ ವಿಳಂಬದ ಹಿನ್ನೆಲೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿರುವ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್ ಮುಖ್ಯಸ್ಥ ಎಲೋನ್...

SIR LIVE UPDATES: ಜಂತರ್‌ ಮಂಥರ್‌ ಪ್ರತಿಭಟನೆಯ ಕ್ಷಣ ಕ್ಷಣದ ಮಾಹಿತಿ

SIR ಅಕ್ರಮವನ್ನು ವಿರೋಧಿಸಿ ಸಿಜೆಪಿ ಸೇರಿದಂತೆ ವಿದ್ಯಾರ್ಥಿ ಯುವಜನರು ದೆಹಲಿಯ ಜಂತರ್‌ ಮಂಥರ್‌ ನಲ್ಲಿ ಇಂದು (ಅ.10) ಬೃಹತ್‌ ಪ್ರತಿಭಟನೆಗೆ ಕರೆ ನೀಡಿದೆ. ಈ ಪ್ರತಿಭಟನೆಗೆ ಕೇಂದ್ರ ಸರ್ಕಾರ ನಿರ್ಭಂಧ ವಿಧಿಸಿ, ರೈಲು,...

ಸಿಜೆಪಿ ಪ್ರತಿಭಟನೆ 2.0: ದೆಹಲಿಯಲ್ಲಿ 25 ಸಾವಿರ ಪೊಲೀಸರು, 300 ಕ್ಯಾಮೆರಾಗಳು, 12 ಬಂಧನ ಕೇಂದ್ರಗಳು; ಇಂಟರ್ನೆಟ್ ಸ್ಥಗಿತ, ರೈಲು-ಮೆಟ್ರೊ ಸಂಚಾರಕ್ಕೂ ನಿರ್ಬಂಧ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಅಕ್ಟೋಬರ್ 10ರಂದು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ತಡೆಯಲು ದೆಹಲಿ ಪೊಲೀಸರು ರಾಜಧಾನಿಯಾದ್ಯಂತ ಬೃಹತ್ ಭದ್ರತಾ...

DELHI PROTEST: ಸಿಜೆಪಿಯ ಅಭಿಜೀತ್ ದೀಪ್ಕೆ, ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದ ಪೊಲೀಸರು 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಲು ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನಾಯಕರಾದ ಅಭಿಜಿತ್ ದೀಪ್ಕೆ, ಸೌರವ್ ದಾಸ್ ಮತ್ತು...

DELHI PROTEST : ಧ್ರುವ್ ರಾಠಿ, ಬೃಂದಾ ಕಾರಟ್, ಕೆಕೆ ಶೈಲಜಾ ಸೇರಿದಂತೆ ನೂರಾರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು

ಜಂತರ್ ಮಂತರ್‌ ಪ್ರತಿಭಟನೆಗೂ ಮುನ್ನ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ, ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಕಾನೂನು ವ್ಯವಹಾರಗಳ ಮುಖ್ಯಸ್ಥೆ ರತ್ನಾ ಸಿಂಗ್ ಮತ್ತು ಮಾಜಿ ಸಂಸದೆ ಬೃಂದಾ ಕಾರಟ್, ಕೆ.ಕೆ. ಶೈಲಜಾ...

ಗ್ಯಾನೇಶ್‌ ಕುಮಾರ್ ವಜಾ – ಎಸ್‌ಐಆರ್ ಸಂಪೂರ್ಣ ರದ್ದತಿಗೆ ಆಗ್ರಹ; ಅ.10ರ ದೆಹಲಿ ಹೋರಾಟಕ್ಕೆ ಎಸ್‌ಐಆರ್ ವಿರೋಧಿ ಒಕ್ಕೂಟ ಬೆಂಬಲ

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ವಜಾಗೊಳಿಸಿ, ಎಸ್‌ಐಆರ್ ಸಂಪೂರ್ಣ ರದ್ದು ಮಾಡುವಂತೆ ಅ.10 ರಂದು ಸಿಜೆಪಿ ಕರೆ ನೀಡಿರುವ ದೆಹಲಿ ಹೋರಾಟಕ್ಕೆ 'ಎಸ್‌ಐಆರ್ ವಿರೋಧಿ ಒಕ್ಕೂಟ' ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು,...