Homeಕರ್ನಾಟಕವಿಧಾನ ಪರಿಷತ್‌ ಕೋಲಾಹಲ: ಬಿಜೆಪಿ-ಜೆಡಿಎಸ್‌ನ ‍ಷಡ್ಯಂತ್ರ ಎಂದ ಸಿದ್ದರಾಮಯ್ಯ - ಸರಣಿ ಟ್ವೀಟ್

ವಿಧಾನ ಪರಿಷತ್‌ ಕೋಲಾಹಲ: ಬಿಜೆಪಿ-ಜೆಡಿಎಸ್‌ನ ‍ಷಡ್ಯಂತ್ರ ಎಂದ ಸಿದ್ದರಾಮಯ್ಯ – ಸರಣಿ ಟ್ವೀಟ್

ಬಿಜೆಪಿ ಸದಸ್ಯರು ನನ್ನ ಕೈಹಿಡಿದು ಪೀಠದಲ್ಲಿ ಕೂರಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಬೇಡ ಎಂದು ಎಳೆದಾಡಿದರು. ಹೀಗಾಗಿ ನಾನು ಒಬ್ಬನೇ ಏನು ಮಾಡಲಿ- ಉಪಸಭಾಪತಿ ಧರ್ಮೇಗೌಡ

- Advertisement -
- Advertisement -

ಇಂದು ಆರಂಭವಾಗಬೆಕಿದ್ದ ವಿಧಾನ ಪರಿಷತ್ ಅಧಿವೇಶನ ಬಿಜೆಪಿ-ಕಾಂಗ್ರೆಸ್ ನಾಯಕರ ಮೇಲಾಟಗಳಿಂದ ಸ್ಥಗಿತಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಆಡಳಿತ ಮತ್ತು ವಿರೋಧ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿಕೊಳ್ಳುತ್ತಿವೆ. ಸಭಾಪತಿಗಳು ಸದನ ಪ್ರವೇಶಿಸದಂತೆ ಬಲವಂತವಾಗಿ ಬಾಗಿಲು ಹಾಕಿಕೊಂಡು ತಡೆಯೊಡ್ಡಿದ ಬಿಜೆಪಿ, ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕಡೆ, ಕಾಂಗ್ರೆಸ್ ನಾಯಕರು ಉಪಸಭಾಪತಿಗಳನ್ನು ಎಳೆದಾಡಿ ಗೂಂಡಾಗಿರಿ ಮಾಡಿದ್ದಾರೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ. ಈಗ ಜೆಡಿಎಸ್-ಬಿಜೆಪಿ ನಾಯಕರು ಒಟ್ಟುಗೂಡಿ ರಾಜ್ಯಪಾಲರಿಗೆ ದೂರು ನೀಡಿದ್ದು, ರಾಜ್ಯಪಾಲರ ಆದೇಶಕ್ಕಾಗಿ ಕಾಯುತ್ತಿದ್ದಾರೆ.

ಈ ಬೆಳವಣಿಗೆಗಳ ಕುರಿತು ತೀವ್ರ ಆಕ್ರೋಶಗೊಂಡಿರುವ ಸಿದ್ದರಾಮಯ್ಯ, “ಅವರೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ‘ಬನಾನ ರಿಪಬ್ಲಿಕಾ’ನಾ?” ಎಂದು ಕಿಡಿಕಾರಿದ್ದು ಸರಣಿ ಟ್ವೀಟ್ ಮಾಡುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಜಪಾನ್‌ನ ’ಟ್ವಿಟರ್ ಕಿಲ್ಲರ್’ಗೆ ಮರಣದಂಡನೆ ವಿಧಿಸಿದ ಟೋಕಿಯೊ ನ್ಯಾಯಾಲಯ

“ವಿಧಾನ ಪರಿಷತ್ ನಲ್ಲಿ ಬಿಜೆಪಿಯ ಸಚಿವರು ಮತ್ತು ಸದಸ್ಯರಿಂದ ನಡೆದಿರುವ ಗೂಂಡಾಗಿರಿ ರಾಜ್ಯದ ಮಾತ್ರವಲ್ಲ, ದೇಶದ ಸಂಸದೀಯ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ. ಇದು ಖಂಡಿತ ಸಾಂವಿಧಾನಿಕ ಪ್ರಜಾಪ್ರಭುತ್ವ ಅಲ್ಲ, ಇದು ನರೇಂದ್ರ ಮೋದಿಯವರ
ಪ್ರಜಾಪ್ರಭುತ್ವ. ಇದು ಅಪರಾಧ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ತಬ್ಲೀಘಿ ಜಮಾತ್‌ನ 36 ವಿದೇಶಿಗರೂ ದೋಷಮುಕ್ತ ಎಂದ ಹೈಕೋರ್ಟ್: ಬಿಜೆಪಿಗೆ ಮುಖಭಂಗ

“ವಿಧಾನ ಪರಿಷತ್ ಸಭಾಪತಿಗಳನ್ನು ಅವರ ಕಚೇರಿಯಲ್ಲಿ ಬಲತ್ಕಾರದಿಂದ ಕೂಡಿಹಾಕಿ, ಅವರ ಅನುಮತಿ ಇಲ್ಲದೆ ಉಪಸಭಾಪತಿಗಳನ್ನು ಸಭಾಪತಿ ಪೀಠದ ಮೇಲೆ ಕೂರಿಸಿ ಕಲಾಪ ನಡೆಸಲು ಹೊರಟಿರುವ ಬಿಜೆಪಿ ಸದಸ್ಯರು ಹಾಡಹಗಲೇ ಸಂವಿಂಧಾನಕ್ಕೆ ಅಪಚಾರ ಎಸಗಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದಾರೆ. ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಡೆಸಲು ಸರ್ವಸಮ್ಮತಿಯಿಂದ ರಚಿಸಲಾದ ನಿಯಮಾವಳಿಗಳಿವೆ. ಬಿಜೆಪಿ ಸದಸ್ಯರ ಇಂದಿನ ನಡವಳಿಕೆ ಆ ನಿಯಮಾಳಿಗಳಿಗೆ ಅನುಗುಣವಾಗಿತ್ತೇ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ತಿಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಏಮ್ಸ್ ನರ್ಸಿಂಗ್ ನೌಕರರ ಪ್ರತಿಭಟನೆಗೆ ಹೈಕೋರ್ಟ್ ತಡೆ: ಪ್ರತಿಭಟನಾಕಾರರಿಗೆ ನೋಟಿಸ್

“ವಿಧಾನ ಪರಿಷತ್ ಸಭಾಪತಿ, ವಿದೇಶ ಪ್ರವಾಸ, ಅನಾರೋಗ್ಯ ಇಲ್ಲವೇ ಇನ್ನು ಯಾವುದೋ ಕಾರಣಕ್ಕೋ ಕರ್ತವ್ಯ ನಿರ್ವಹಣೆ ಮಾಡಲು ಸಾಧ್ಯವಾಗದೆ ಇದ್ದಾಗ ಸಭಾಪತಿಯಾಗಿ ಕಾರ್ಯನಿರ್ವಹಿಸಲು ಅವರು ಉಪಸಭಾಪತಿಯವರಿಗೆ ಅವಕಾಶವನ್ನು ನೀಡಬಹುದೆಂದು ಸದನದ ನಿಯಮಾವಳಿ ಹೇಳಿದೆ. ಇದರ ಪಾಲನೆಯಾಗಿದೆಯೇ? ಮುಖ್ಯಂತ್ರಿಗಳೇ. ಬಿಜೆಪಿಯವರು ವಿಧಾನಪರಿಷತ್ ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯಕ್ಕೆ ನೋಟೀಸ್ ನೀಡಿದ್ದರು. ನಿಯಮಾವಳಿ ಪ್ರಕಾರ ಅದರ ಇತ್ಯರ್ಥಕ್ಕೆ 14 ದಿನಗಳ ಕಾಲಾವಕಾಶ ಇದೆ. ಆದರೆ ನೋಟೀಸ್ ಕ್ರಮಬದ್ದವಾಗಿಲ್ಲ ಎಂದು ಸಭಾಪತಿಯವರು ತಿರಸ್ಕರಿಸಿದ್ದ ಕಾರಣ ಆ ವಿಷಯ ಇಂದಿನ ಅಜೆಂಡಾದಲ್ಲಿ ಇರಲಿಲ್ಲ. ಅವಿಶ್ವಾಸ ನಿರ್ಣಯ ಅಜೆಂಡಾದಲ್ಲಿ ಸೇರ್ಪಡೆಯಾದ ನಂತರ ಸದನದಲ್ಲಿ ಅದನ್ನು ಕನಿಷ್ಠ ಹತ್ತು ಜನ ಯಾವುದೇ ಚರ್ಚೆ ಇಲ್ಲದೆ ಬೆಂಬಲಿಸಬೇಕು. ಅದರ ಆಧಾರದಲ್ಲಿ ಮುಂದಿನ ಐದು ದಿನಗಳೊಳಗೆ ನಿರ್ಣಯದ ಚರ್ಚೆಗೆ ಸಭಾಪತಿಗಳು ದಿನ ಗೊತ್ತುಪಡಿಸಬೇಕು. ಈ ನಿಯಮ ಪಾಲನೆಯಾಗಿದೆಯೇ? ಮುಖ್ಯಮಂತ್ರಿಗಳೇ” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಸಿಇಒ ವಿಕಾಸ್ ಖಂಚಂದಾನಿಗೆ 14 ದಿನಗಳ ನ್ಯಾಯಾಂಗ ಬಂಧನ

“ಬಿಜೆಪಿ ಸದಸ್ಯರ ಅವಿಶ್ವಾಸ ನಿರ್ಣಯದ ನೊಟೀಸ್ ಸಭಾಪತಿಯವರಿಂದ ತಿರಸ್ಕೃತಗೊಂಡಿದೆ ಮತ್ತು ಅಜೆಂಡಾದಲ್ಲಿಯೂ ಇರಲಿಲ್ಲ. ಹೀಗಿದ್ದಾಗ ಅವರೇ ಉಪಸಭಾಪತಿಯವರನ್ನು ಅಕ್ರಮವಾಗಿ ಪೀಠದಲ್ಲಿ ಕೂರಿಸಿ ತಾವೇ ನಿರ್ಧರಿಸಿದ ಅಜೆಂಡಾ ಮೂಲಕ ಕಲಾಪ ನಡೆಸಲು ಇದೇನು ಬನಾನ ರಿಪಬ್ಲಿಕಾ? ವಿಧಾನಪರಿಷತ್ ಅಧಿವೇಶನ ನಡೆಸಲು ಸಂಸದೀಯ ವ್ಯವಹಾರಗಳ ಖಾತೆಯ ಕಾರ್ಯದರ್ಶಿಗಳು ಸಭಾಪತಿಯವರಿಗೆ ನೇರವಾಗಿ ಪತ್ರಬರೆದಿದ್ದೇ ಅಕ್ರಮ ನಡವಳಿಕೆ. ಹೀಗಿದ್ದರೂ ಸಭಾಪತಿಗಳು ಸಂಘರ್ಷಕ್ಕಿಳಿಯದೆ ಸೌಜನ್ಯಪೂರ್ವಕವಾಗಿ ಅಧಿವೇಶನ ಕರೆದಿದ್ದಾರೆ. ಈ ಸೌಜನ್ಯವೇ ತಪ್ಪಾಯಿತೇ?” ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ರಜನಿಯ ಹೊಸ ರಾಜಕೀಯ ಪಕ್ಷದ ಹೆಸರು ಮಕ್ಕಳ್ ಸೇವೈ ಕಚ್ಚಿ? ಚಿಹ್ನೆ ಆಟೋ ರಿಕ್ಷಾ?

“ನಿಯಮಾವಳಿಯಂತೆ ಸದನದಲ್ಲಿ ಕೋರಮ್ ಬಗ್ಗೆ ಮಾರ್ಷಲ್ ಗಳಿಂದ ದೃಡೀಕರಿಸಿಕೊಂಡ ನಂತರ ಸೂಚನಾ ಗಂಟೆ ನಿಲ್ಲಿಸಲು ತಿಳಿಸಿ ಸಭಾಪತಿಗಳು ಬಂದು ಪೀಠವನ್ನು ಅಲಂಕರಿಸಬೇಕಾಗುತ್ತದೆ. ಇಂದು ಸೂಚನಾ ಗಂಟೆ ನಿಲ್ಲಿಸುವ ಮೊದಲೇ ಬಿಜೆಪಿ ಸದಸ್ಯರು ಉಪಸಭಾಪತಿಯವರನ್ನು ಕೂರಿಸಿ ಕಲಾಪ ನಡೆಸಲು ಹೊರಟಿದ್ದು ಅಕ್ರಮ‌ ಅಲ್ಲವೇ? ರಾಜ್ಯದ ಸಚಿವರಾದ ಅಶ್ವತ್ ನಾರಾಯಣ್
ಅವರು ಖುದ್ದಾಗಿ ಸಭಾಪತಿ ಪೀಠದಲ್ಲಿ ಉಪಸಭಾಪತಿಯವರನ್ನು ಅಕ್ರಮವಾಗಿ ಕೂರಿಸ್ತಾರೆ, ಕಾನೂನು ಸಚಿವ ಮಾಧುಸ್ವಾಮಿ
ಸದನದಲ್ಲಿ ಮಾರ್ಷಲ್ ಗಳಿಗೆ ಧಮಕಿ ಹಾಕ್ತಾರೆ. ತಮ್ಮ ಪಕ್ಷದ ಸದಸ್ಯರನ್ನು ಗೂಂಡಾಗಿರಿಗೆ ಪ್ರಚೋದಿಸುವ ಇವರು ಸಚಿವರಾಗಲು ಅರ್ಹರೇ?” ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವು ರಾಮ ಭಕ್ತರು: ಅಖಿಲೇಶ್ ಯಾದವ್

“ವಿಧಾನಪರಿಷತ್ ನಲ್ಲಿ ಇಂದು ನಡೆದಿರುವ ಘಟನಾವಳಿಗಳು ಬಿಜೆಪಿ ಮತ್ತು ಜೆಡಿಎಸ್‌ನ ಸದಸ್ಯರು ಕೂಡಿ ನಡೆಸಿರುವ ಯೋಜಿತ ಷಡ್ಯಂತ್ರ. ಇದರಿಂದ ಬಿಜೆಪಿ ಮತ್ತು ಜೆಡಿ(ಎಸ್) ನಡುವಿನ ಒಳ ಒಪ್ಪಂದ ಬಯಲಾಗಿದೆ. ಇದಕ್ಕಾಗಿ ಎರಡೂ ಪಕ್ಷಗಳ ನಾಯಕರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಕರ್ನಾಟಕದ ಘನತೆವೆತ್ತ ರಾಜ್ಯಪಾಲರು ವಿಧಾನಪರಿಷತ್ ನಲ್ಲಿ ನಡೆದ ಘಟನಾವಳಿಗಳನ್ನು ನಿಷ್ಪಕ್ಷಪಾತವಾಗಿ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಭರವಸೆ ನಮಗಿದೆ.” ಎಂದು ಟ್ವೀಟ್ ಮಾಡಿದ್ದಾರೆ.

ಇದರ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, “ಸಭಾಪತಿ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಜೆಡಿಎಸ್ ಸದಸ್ಯರು ಬೆಂಬಲಿಸಿದ್ದಾರೆ. ಹೀಗಾಗಿ ಅವರು ರಾಜೀನಾಮೆ ನೀಡಬೇಕಿತ್ತು. ಸಭಾಪತಿ ಪೀಠದಲ್ಲಿ ಉಪಸಭಾಪತಿ ಅವರನ್ನು ಕೂರಿಸುತ್ತೇವೆಂದು ನಾವು ಪ್ರಕಟಿಸಿದ್ದೆವು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೋರಾಟನಿರತ ರೈತರನ್ನು ವಿರೋಧ ಪಕ್ಷಗಳು ದಾರಿ ತಪ್ಪಿಸುತ್ತಿವೆ: ನರೇಂದ್ರ ಮೋದಿ

ಇಂದು ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಅವಿಶ್ವಾಸ ನಿರ್ಣಯ ಮಂಡನೆ ಬಳಿಕ ಉಪಸಭಾಪತಿ ಅವರೇ ಮುಂದುವರಿಯುತ್ತಾರೆ. ‘ಬೆಲ್’ ಚಾಲನೆಯಲ್ಲಿರುವ ವೇಳೆ ಪೀಠಕ್ಕೆ ಬಂದರು ಎಂಬುದು ಮುಖ್ಯವಲ್ಲ. ಕಾಂಗ್ರೆಸ್ ನೈತಿಕತೆ ಇದ್ದರೆ ಸಭಾಪತಿಗೆ ರಾಜೀನಾಮೆ ಕೊಡಲು ಸೂಚಿಸಬೇಕು. ಘಟನೆಯ ಬಗ್ಗೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ” ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಉಪಸಭಾಪತಿ ಧರ್ಮೇಗೌಡ, “ಸಭಾಪತಿ ಸ್ಥಾನದ ಬಗ್ಗೆ ಗೌರವವಿದೆ. ಎಲ್ಲ ಪಕ್ಷಗಳಲ್ಲಿ ಗೊಂದಲ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸದಸ್ಯರು ನನ್ನ ಕೈಹಿಡಿದು ಪೀಠದಲ್ಲಿ ಕೂರಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಬೇಡ ಎಂದು ಎಳೆದಾಡಿದರು. ಹೀಗಾಗಿ ನಾನು ಒಬ್ಬನೇ ಏನು ಮಾಡಲಿ. ಈ ಘಟನೆಯಿಂದ ನನಗೆ ಬೇಸರವೇನು ಆಗಿಲ್ಲ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಕರ್ನಾಟಕದ ಸುಮಾರು 50% ರಷ್ಟು ಯುವತಿಯರಿಗೆ ರಕ್ತಹೀನತೆ- NFHS ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...