Homeಚಳವಳಿಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ

ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್: ಸುಳ್ಳು, ಸಂಚು, ದಮನಗಳೇ ತಿರುಗುಬಾಣವಾದ ಗಳಿಗೆ

ಜನವರಿ 26 ರ ಕೆಂಪುಕೋಟೆಯ ಅಹಿತಕರ ಘಟನೆಯನ್ನೇ ಮುಂದೆ ಮಾಡಿಕೊಂಡು, ಒಂದು ಅಪ್ರತಿಮ ಹೋರಾಟವನ್ನು ಬಲಪ್ರಯೋಗದಿಂದ ಹಿಮ್ಮೆಟ್ಟಿಸಲು ಯೋಚಿಸಿದ್ದ, ಯೋಜಿಸಿದ್ದ ಸರ್ಕಾರಕ್ಕೆ ಅದೇ ತಿರುಗುಬಾಣವಾಗುತ್ತಿದೆ.

- Advertisement -
- Advertisement -

ಉತ್ತರಪ್ರದೇಶ-ದೆಹಲಿ ಗಡಿಯ ಗಾಜಿಪುರ್‌‌ ಪ್ರದೇಶದಲ್ಲಿ ರಾಕೇಶ್ ಟಿಕಾಯತ್ ನೇತೃತ್ವದ ಭಾರತ್ ಕಿಸಾನ್ ಯುನಿಯುನ್ (ಬಿಕೆಯು) ಅಡಿಯಲ್ಲಿ 60 ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಮುಗಿಸಿಬಿಡಲು ಅರೆಸೇನಾ ತುಕಡಿಗಳು, ಸಿಅರ್‌ಪಿಎಫ್ ತುಕಡಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ಗುರುವಾರ ಸಂಜೆ ನಿಯೋಜಿಸಲಯಿತು.

ಇದಕ್ಕು ಮೊದಲೆ ಗುರುವಾರ ರಾತ್ರಿಯೊಳಗೆ ಪ್ರತಿಭಟನಾ ಸ್ಥಳವನ್ನು ಖಾಲಿ ಮಾಡಬೇಕು ಎಂದು ಉತ್ತರಪ್ರದೇಶ ಆಡಳಿತವು ಹುಕುಂ ಚಲಾಯಿಸಿತ್ತು. ಮಧ್ಯರಾತ್ರಿ ಹೊತ್ತಿಗೆ ಪೊಲೀಸ್ ಲಾಠಿಗಳು, ಅಶ್ರುವಾಯು, ಜಲಫಿರಂಗಿಗಳನ್ನು ಬಳಸಿ ವ್ಯವಸ್ಥಿತವಾಗಿ ರೈತರನ್ನು ಅಲ್ಲಿಂದ ಒಕ್ಕಲೆಬ್ಬಿಸುವ ಸಂಚು ರೂಪುಗೊಂಡಿತ್ತು. ಅದಕ್ಕೆ ಪೂರ್ವಭಾವಿಯಾಗಿ 144 ಸೆಕ್ಷನ್ ಹೇರಲಾಗಿತ್ತು.

ಹರಿಯಾಣ

ಇದನ್ನೂ ಓದಿ: ಒಂದೇ ಒಂದು ಇಂಚು ಹಿಂದೆ ಸರಿಯದಿರಿ, ನಿಮ್ಮ ಜೊತೆ ನಾವಿದ್ದೇವೆ: ರೈತರಿಗೆ ರಾಹುಲ್ ಗಾಂಧಿ

ಮೀಡಿಯಾಗಳು ಸಹಜವಾಗಿಯೇ ಪ್ರತಿಭಟನೆ ಮುಗಿದ ಕತೆ ಎನ್ನುತ್ತ, ಮತ್ತೆ ಮತ್ತೆ ದೆಹಲಿಯ ಅಹಿತಕರ ಘಟನೆಯ ತುಣಕನ್ನು ಪ್ರದರ್ಶಿಸುತ್ತಿದ್ದವು. ಇದು ದೇಶದ ಎಲ್ಲ ಭಾಗದ ರೈತರಷ್ಟೇ ಅಲ್ಲದೇ, ಈ ಚಳವಳಿಯನ್ನು ಬೆಂಬಲಿಸುತ್ತ ಬಂದವರೆಲ್ಲರಿಗೂ ಆತಂಕ, ಸಂಕಟ ಶುರುವಾಗಿತ್ತು. ಎಷ್ಟೋ ಜನ ಮಧ್ಯರಾತ್ರಿ 2 ರವರೆಗೂ ನಿದ್ದೆ ಮಾಡದೇ ಏನಾಗುವುದೋ ಎಂದು ಟಿವಿ, ಸಾಮಾಜಿಕ ಜಾಲತಾಣಗಳ ಮೊರೆ ಹೋಗಿದ್ದರು.

ರಾತ್ರಿಯಾಗುತ್ತಿದ್ದಂತೆ ಕೆಲವು ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರೊಂದಿಗೆ ಬಂದು ಅಲ್ಲಿಂದ ಜಾಗ ಖಾಲಿ ಮಾಡುವಂತೆ ಒತ್ತಡ ಹೇರುತ್ತ ಧಮಕಿ ಹಾಕತೊಡಗಿದರು. ಅವರ ಬೆನ್ನಿಗೆ ಪೊಲೀಸ್ ಪಡೆಯಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಆಗಲೇ ಭಯ ಹುಟ್ಟಿಸಿದ್ದರು. ಇನ್ನೇನು ದೌರ್ಜನ್ಯದಿಂದ ಅಲ್ಲಿನ ರೈತರನ್ನು ಓಡಿಸುತ್ತಾರೆ ಎನ್ನುವ ಹೊತ್ತಿಗೆ ಹಿರಿಯ ರೈತ ನಾಯಕ ರಾಕೇಶ್ ಟಿಕಾಯತ್ ಮೈಕ್ ತೆಗೆದುಕೊಂಡರು.

ಇದನ್ನೂ ಓದಿ: ರೈತರನ್ನು ಗೌರವಿಸದ ದೇಶ ದೇಶವೇ ಅಲ್ಲ: ಮಾಜಿ ಸ್ಪೀಕರ್‌ ರಮೇಶ್ ಕುಮಾರ್‌‌

ಮಧ್ಯರಾತ್ರಿಯ ಮಾಸ್ಟರ್‌ಸ್ಟ್ರೋಕ್

ತೀವ್ರ ನೊಂದಿದ್ದ ಟಿಕಾಯತ್, “ನಾವು ಇಲ್ಲಿಂದ ಕದಲುವುದಿಲ್ಲ. ಗುಂಡಿಗೆ ಬೇಕಾದರೆ ಎದೆ ಕೊಡುತ್ತೇನೆ ಇಲ್ಲವೇ ಇಲ್ಲೇ ನೇಣು ಹಾಕಿಕೊಳ್ಳುತ್ತೇನೆ. ಪೊಲೀಸರು ಮತ್ತು ಬಿಜೆಪಿಯವರು ಸೇರಿ ನಮ್ಮನ್ನೆಲ್ಲ ದೌರ್ಜನ್ಯದಿಂದ ಕೊಲ್ಲಲು ಬಂದಿದ್ದಾರೆ. ಆದರೆ ಯಾರೂ ಧೃತಿಗೆಡಬೇಡಿ” ಎನ್ನುತ್ತ ಭಾವುಕರಾದರು. ಅವರ ಕಣ್ಣುಗಳು ತೇವಗೊಂಡವು.

ಅಲ್ಲಿಗೇ ಮತ್ತೆ ರೈತರಲ್ಲಿ ಹೊಸ ಚೈತನ್ಯ ಸಂಚಯವಾಯಿತು. ನಾವ್ಯಾರೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಸಾರಿದರು. ಟಿಕಾಯತ್ ಭಾಷಣ ವೈರಲ್ ಆಯಿತು. ಇದು ಪಶ್ಚಿಮ ಉತ್ತರಪ್ರದೇಶ ಮತ್ತು ಹರಿಯಾಣದಲ್ಲಿ ಪೊಲೀಸರ ಮೇಲೆ ಆಕ್ರೋಶ ಹೆಚ್ಚಲು ಕಾರಣವಾಯಿತು, ರಾತ್ರಿಯೇ ತಂಡೋಪತಂಡವಾಗಿ ಟ್ರ್ಯಾಕ್ಟರಿಗಳಲ್ಲಿ ರೈತರು ಗಾಜಿಪುರ್‌ದತ್ತ ಬರತೊಡಗಿದರು. ಆಗ ರೈತಶಕ್ತಿಯೇ ಪ್ರಭುತ್ವಕ್ಕೆ ಒಂದು ಮಾಸ್ಟರ್‌ಸ್ಟ್ರೋಕ್ ತೋರಿಸಿದಂತಾಗಿತು. ಮುಂಜಾನೆ ಹೊತ್ತಿಗೆ ರೈತರ ಜಮಾವಣೆ ಹೆಚ್ಚುತ್ತಲೇ ಹೋಯಿತು. ದೇಶದ ಎಲ್ಲೆಡೆಯಿಂದ ರೈತರಿಗೆ ಬೆಂಬಲ ದ್ವಿಗುಣಗೊಂಡಿತು.

ಇದನ್ನೂ ಓದಿ: ಟ್ರ್ಯಾಕ್ಟರ್ ರ್‍ಯಾಲಿಯಲ್ಲಿ ಮಿಂದೆದ್ದ ರೈತ ಗಣರಾಜ್ಯೋತ್ಸವ: ವಿಶೇಷ ವರದಿ

ಜಾಟರ ಸಿಟ್ಟು ಬಿಜೆಪಿ ಮೇಲೆ

ಪಶ್ಚಿಮ ಉತ್ತರಪ್ರದೇಶ, ಹರಿಯಾಣ ಮತ್ತು ಪೂರ್ವ ರಾಜಸ್ತಾನದಲ್ಲಿ ಕೃಷಿಕ ಜಾಟ್ ಸಮುದಾಯ ಪ್ರಬಲವಾಗಿದೆ, ಜನಸಂಖ್ಯೆಯಲ್ಲೂ ಗಣನೀಯವಾಗಿದೆ. 2013 ರಲ್ಲಿ ಉತ್ತರಪ್ರದೇಶದ ಮುಜಾಫರ್‌ಘರ್‌ನಲ್ಲಿ ಸಂಭವಿಸಿದ (ಸೃಷ್ಟಿಸಿದ) ಹೇಯ ಕೋಮು ಗಲಭೆಯ ನಂತರ, ಜಾಟರು ಮತ್ತು ಮುಸ್ಲಿಮರ ನಡುವೆ ಬಿರುಕು ತಂದ ಬಿಜೆಪಿ ಅಲ್ಲಿ ಜಾಟರ ವೊಟ್‌ಬ್ಯಾಂಕ್ ಅನ್ನು ಭದ್ರಪಡಿಸಿಕೊಂಡು ಚುನಾವಣೆಗಳನ್ನು ಗೆಲ್ಲುತ್ತಾ ಬಂದಿದೆ.

ನೇರ ರಾಜಕಾರಣ ಮಾಡದಿದ್ದರೂ ಟಿಕಾಯತ್ ಸಹೋದರರು ಬಿಜೆಪಿಗೆ ಬಹಿರಂಗ ಬೆಂಬಲ ಕೊಡುತ್ತ ಬಂದಿದ್ದರು. ತಮ್ಮ ರೈತ ನಾಯಕ ಕಣ್ಣೀರು ಹಾಕುವಂತೆ ಮಾಡಿದ ಬಿಜೆಪಿ ವಿರುದ್ದ ಜಾಟರು ತಿರುಗಿ ಬೀಳಬಹುದು ಎಂದು ರಾಜಕಿಯ ವಿಶ್ಲೇಷಕರು ಅಬಿಪ್ರಾಯ ಪಟ್ಟಿದ್ದಾರೆ. ಶುಕ್ರವಾರ ಅದರ ಕುರುಹುಗಳು ಢಾಳಾಗಿಯೇ ಗೋಚರಿಸಿವೆ ಅಲ್ಲವೇ?

ತಿರುಗುಬಾಣ

ಈ ಮಾಸ್ಟರ್‌ಸ್ಟ್ರೋಕ್‌ನಿಂದಾಗಿ ಕೇಂದ್ರ ಸರ್ಕಾರದ ಸುಳ್ಳು, ಸಂಚು ಮತ್ತು ದಮನಕಾರಿ ಪ್ರವೃತ್ತಿಯೇ ಅದಕ್ಕೆ ತಿರುಗುಬಾಣವಾಗಿತು. ರಾತ್ರಿಯೇ ಸ್ಥಗಿತಗೊಂಡಿದ್ದ ವಿದ್ಯುತ್, ನೀರು ಸೌಲಭ್ಯ ಮುಂಜಾನೆ ವಾಪಸ್ ಬಂದಿತು. ಹೆಚ್ಚುವರಿ ತುಕಡಿಗಳು ಮತ್ತು ಪೊಲೀಸರನ್ನು ಸರ್ಕಾರ ಹಿಂದಕ್ಕೆ ಕರೆಸಿಕೊಂಡಿತು. ಜಾಗ ಖಾಲಿ ಮಾಡಿಸಲು ಬಂದ ಸರ್ಕಾರವೇ ಜಾಗ ಖಾಲಿ ಮಾಡಬೇಕಾಯಿತು.

ಶುಕ್ರವಾರ ಮಧ್ಯಾಹ್ನ ಪಕ್ಷವೊಂದರ ಬಾಲಂಗೋಚಿಗಳಾದ ದುಷ್ಕರ್ಮಿಗಳು ಪ್ರತಿಭಟನೆಯ ಒಂದು ಸ್ಥಳಕ್ಕೆ ನುಗ್ಗಿ ದಾಂಧಲೆ ಮಾಡಿ, ರೈತರನ್ನು ಬೆದರಿಸಲು ನೋಡಿದರು. ರೈತರು ಅದಕ್ಕೆ ಪ್ರತ್ಯುತ್ತರ ನೀಡಿದರು.
ಶುಕ್ರವಾರ ಸಿಂಘುವಿನಲ್ಲಿ ಸಂಯುಕ್ತ್ ಕಿಸಾನ್ ಮೋರ್ಚಾ ತನ್ನ ಪ್ರತಿಭಟನೆಯನ್ನು ಚುರುಕುಗೊಳಿಸಿದೆ, ಪ್ರತಿಭಟನಾಕಾರರ ಹುಮ್ಮಸ್ಸನ್ನು ಹೆಚ್ಚಿಸಿದೆ.

ಸರ್ಕಾರ ಬೇರೊಂದು ಮಾರ್ಗದಲ್ಲಿ ದಮನ ಮಾಡಲು ಯತ್ನಿಸಬಹುದು. ಅದನ್ನು ವಿಫಲಗೊಳಿಸುವ ಶಕ್ತಿ ರೈತ ಹೋರಾಟಕ್ಕೆ ಇನ್ನಷ್ಟು ಸಂಚಯವಾಗಲಿ. ಅದಾಗಬೇಕೆಂದರೆ, ನಮ್ಮ ನಮ್ಮ ನೆಲೆಯಲ್ಲಿ ನಾವು ರೈತರ ಪರ ಧ್ವನಿ ಎತ್ತಬೇಕಾದ ತುರ್ತು ಸಮಯವಿದು.

ಇದನ್ನೂ ಓದಿ: ‘ಜ. 26ರ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರ ಕಾರಣ’: ಬಿಜೆಪಿ ತೊರೆದ ಹಿರಿಯ ನಾಯಕ ರಾಂಪಾಲ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...