Homeಕರ್ನಾಟಕಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ: ಸಿದ್ದರಾಮಯ್ಯ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ: ಸಿದ್ದರಾಮಯ್ಯ

ಬಿ.ಎಸ್ ಯಡಿಯೂರಪ್ಪ ಪದಚ್ಯುತಿ ಪ್ರಯತ್ನದಲ್ಲಿ ಯತ್ನಾಳ್ ಮತ್ತು ಈಶ್ವರಪ್ಪನವರ ಜೊತೆ ಬಿ.ಎಲ್ ಸಂತೋಷ್ ಕೂಡಾ ಷಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ

- Advertisement -
- Advertisement -

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಒಬ್ಬ ಅಸಮರ್ಥ ನಾಯಕ, ಇಂತವರಿಗೆ ವಿರೋಧ ಪಕ್ಷದ ನಾಯಕರ ಬಗ್ಗೆ ಮಾತನಾಡುವ ಯಾವ ಯೋಗ್ಯತೆ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ನೀಡಿರುವ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, “ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪದಚ್ಯುತಿಯ ಪ್ರಯತ್ನದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಕೆ.ಎಸ್. ಈಶ್ವರಪ್ಪನವರ ಜೊತೆಯಲ್ಲಿ ಬಿ.ಎಲ್ ಸಂತೋಷ್ ಕೂಡಾ ಷಾಮೀಲಾಗಿದ್ದಾರೆ. ಈ ಕಾರಣದಿಂದಾಗಿಯೇ ಬಿಜೆಪಿ ಹೈಕಮಾಂಡ್ ಮೂಕಪ್ರೇಕ್ಷಕನಾಗಿ ಕೂತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರ: ಪಟ್ಟು ಬಿಡದ ಸರ್ಕಾರ, ರೋಡಿಗಿಳಿದ ಖಾಸಗಿ ಬಸ್‌ಗಳು

“ಮುಖ್ಯಮಂತ್ರಿಗಳ ವಿರುದ್ದ ದಿನನಿತ್ಯ ಹೇಳಿಕೆ ನೀಡಿ ಬಹಿರಂಗ ಸಮರ ಸಾರಿರುವ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಈಶ್ವರಪ್ಪ ವಿರುದ್ದ ಕ್ರಮಕೈಗೊಳ್ಳಲಾಗದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ. ಇಂತಹವರಿಗೆ ವಿರೋಧ ಪಕ್ಷದ ನಾಯಕರ ಬಗ್ಗೆ‌ ಮಾತನಾಡುವ ಯಾವ ಯೋಗ್ಯತೆ ಇದೆ?” ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬಿಜಿಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಅಪ್ಪ- ಮಗನ ನಿಜ ಬಣ್ಣ ಬಯಲಾಗಲಿದೆ, ಮೇ 2 ರ ನಂತರ ಮುಖ್ಯಮಂತ್ರಿ ಯಡಿಯೂರಪ್ಪರ ಬದಲಾವಣೆ ಆಗುವುದು ಗ್ಯಾರಂಟಿ. ಮೇ 2ರ ನಂತರ ಯಾವ ಸಮಯದಲ್ಲಾದರೂ ಬದಲಾವಣೆ ಆಗುತ್ತಾರೆ” ಎಂದು ಹೇಳಿದ್ದರು.

ಇದನ್ನೂ ಓದಿ: ಅಪ್ಪ-ಮಗನ ನಿಜ ಬಣ್ಣ ಬಯಲಾಗಲಿದೆ: ಸಿಎಂ ಮತ್ತು ವಿಜಯೇಂದ್ರ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕದನ ವಿರಾಮದ ಹೊರತಾಗಿಯೂ ಗಾಜಾದಲ್ಲಿ ಇಸ್ರೇಲ್‌ ದಾಳಿ; ಪತ್ರಕರ್ತ ಸೇರಿದಂತೆ ಕನಿಷ್ಠ ಎಂಟು ಮಂದಿ ಪ್ಯಾಲೆಸ್ತೀನಿಯರ ಹತ್ಯೆ

ಪ್ಯಾಲೆಸ್ತೀನ್ ಅಧಿಕಾರಿಗಳು ಮತ್ತು ವೈದ್ಯಕೀಯ ಮೂಲಗಳ ಪ್ರಕಾರ, ಬುಧವಾರ (ಸೆ.30) ದಂದು ಗಾಜಾ ಪಟ್ಟಿಯಾದ್ಯಂತ ಇಸ್ರೇಲ್ ನಡೆಸಿದ ದಾಳಿಯಲ್ಲಿ ಪತ್ರಕರ್ತ ಹಾಗೂ ಇಮಾಮ್ ಮೊಹಮ್ಮದ್ ಅಬ್ದುಲ್ ಅಜೀಜ್ ಅಲ್-ನಜ್ಜಾರ್ ಸೇರಿದಂತೆ ಕನಿಷ್ಠ ಎಂಟು...

ಸಿಇಸಿ ಗ್ಯಾನೇಶ್ ಕುಮಾರ್ ವಿರುದ್ಧ ಪ್ರತಿಭಟನೆ: ಕೇರಳ ಯೂತ್ ಕಾಂಗ್ರೆಸ್ -ಎಸ್‌ಎಫ್‌ಐ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು

ಕೇರಳ ರಾಜಧಾನಿಯ ಪಾಳಯಂ ಪ್ರದೇಶದಲ್ಲಿ ನಡೆದ ಘರ್ಷಣೆಯ ನಂತರ, ಕೆಎಸ್‌ಯು/ಯೂತ್ ಕಾಂಗ್ರೆಸ್ ಮತ್ತು ಎಸ್‌ಎಫ್‌‌ಐ/ಡಿವೈಎಫ್‌ಐ ಕಾರ್ಯಕರ್ತರ ವಿರುದ್ಧ ಗುರುವಾರ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ ರಾತ್ರಿ ಕೇಂದ್ರ ಸರ್ಕಾರ...

ಹೈದರಾಬಾದ್: ಕೇಸರಿ ಶಾಲುಗಳೊಂದಿಗೆ ಶಾಲೆಗೆ ನುಗ್ಗಿ ಮುಸ್ಲಿಂ ಶಿಕ್ಷಕಿಗೆ ಬೆದರಿಕೆ ಆರೋಪ: ಬಿಜೆಪಿ ಕಾರ್ಪೊರೇಟರ್ ವಿರುದ್ಧ ಪ್ರಕರಣ ದಾಖಲು

ಹೈದರಾಬಾದ್: ಶಾಲೆಯೊಂದರ ಮುಸ್ಲಿಂ ಶಿಕ್ಷಕಿಗೆ ಕಿರುಕುಳ ನೀಡಿ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಪೊರೇಟರ್ ಅಕುಲಾ ಶ್ರೀವಾಣಿ ವಿರುದ್ಧ ಹೈದರಾಬಾದ್ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಸರೂರ್ ನಗರದ ಶ್ರೀ ವೆಂಕಟೇಶ್ವರ...

ಪ್ರತಿಯೊಂದರಲ್ಲೂ ಅಜೆಂಡಾ; ಉತ್ತರ ಪ್ರದೇಶ ಪೊಲೀಸರನ್ನೇ ವಿಸರ್ಜಿಸಿಬಿಡುವುದು ಒಳ್ಳೆಯದು: ಸುಪ್ರೀಂ ಕೋರ್ಟ್

ಉತ್ತರ ಪ್ರದೇಶ ಪೊಲೀಸರ ವಿರುದ್ಧ ತೀವ್ರವಾಗಿ ಕಿಡಿಕಾರಿರುವ ಸುಪ್ರೀಂ ಕೋರ್ಟ್, ಆ ಇಲಾಖೆಯನ್ನೇ ವಿಸರ್ಜಿಸಿ ರಾಜ್ಯದ ಪ್ರತಿಯೊಂದು ತನಿಖೆಯನ್ನು ಸಿಬಿಐ (ಸಿಬಿಐ) ವಹಿಸಿಕೊಳ್ಳುವಂತೆ ಮಾಡುವುದು ಉತ್ತಮ ಎಂದು ಬುಧವಾರ (ಸೆ.30) ಕಟುವಾಗಿ ಟೀಕಿಸಿದೆ. ಮೋಟಾರ್...

ಜಾತಿ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಣೆ ಆರೋಪ : ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ದಲಿತ ಮಹಿಳೆ!

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಗ್ಯಾನ್‌ಪುರದಲ್ಲಿರುವ ಮಹಾರಾಜ ಚೇತ್ ಸಿಂಗ್ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲಿಸಿಕೊಳ್ಳಲು ನಿರಾಕರಿಸಿದ ಕಾರಣ, ಆದಿವಾಸಿ ಮಹಿಳೆಯೊಬ್ಬರು ಆಸ್ಪತ್ರೆಯ ಹೊರಗಿನ ರಸ್ತೆ ಬದಿಯೇ ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದೆ....

ಬ್ಯಾಂಕ್ ಖಾತೆಗಳು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿದ್ಧ ಟಿಎಂಸಿ ಆರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ : ವಿಚಾರಣೆ ತ್ವರಿತಗೊಳಿಸುವಂತೆ ಹೈಕೋರ್ಟ್‌ಗೆ ಸೂಚನೆ

ಪಶ್ಚಿಮ ಬಂಗಾಳ ಪೊಲೀಸರು ತಮ್ಮ ನಾಲ್ಕು 'ಇಂಡಿಯನ್ ಬ್ಯಾಂಕ್' ಖಾತೆಗಳನ್ನು ಸ್ಥಗಿತಗೊಳಿಸಿರುವುದನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ 'ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್' (ಎಐಟಿಸಿ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ (ಅ.1)...

ಬಂಗಾಳ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು; ನಂದಿಗ್ರಾಮ ಕಾಂಗ್ರೆಸ್‌ ಅಭ್ಯರ್ಥಿ ಜೈಲಿನಿಂದ ಬಿಡುಗಡೆ

ಪಶ್ಚಿಮ ಬಂಗಾಳ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ ಮರುದಿನವೇ, ಕಾಂಗ್ರೆಸ್‌ನ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಮಿಲನ್ ಪ್ರಧಾನ್ ಬುಧವಾರ (ಸೆ. 30) ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಲ್ದಿಯಾ ಜೈಲಿನ ಹೊರಗೆ...

ಚುನಾವಣಾ ಆಯೋಗದ ಐಟಿ ಸೆಲ್ ನಿರ್ದೇಶಕಿ ಸೀಮಾ ಖನ್ನಾ ವಿರುದ್ಧ ದೂರು ದಾಖಲಿಸಿದ ಸಂಸದೆ ಮಹುವಾ ಮೊಯಿತ್ರಾ

ಬಂಗಾಳದಲ್ಲಿ ಮತದಾರರ ಹೆಸರುಗಳು ಮತ್ತು ಪಟ್ಟಿಗಳನ್ನು ಕೇಂದ್ರ ಮಟ್ಟದಲ್ಲೇ ಸೇರಿಸಲು, ತೆಗೆದುಹಾಕಲು ಅಥವಾ ಬದಲಾಯಿಸಲು ಅನುವು ಮಾಡಿಕೊಡುವಂತಹ ಮತದಾರರ ಪಟ್ಟಿ ಸಾಫ್ಟ್‌ವೇರ್ ಬಳಕೆಗೆ ಸಂಬಂಧಿಸಿದಂತೆ, ಭಾರತೀಯ ಚುನಾವಣಾ ಆಯೋಗದ ಐಟಿ ವಿಭಾಗದ ಮಹಾನಿರ್ದೇಶಕಿ...

‘TCS ಮೇಲೆ ಒತ್ತಡ ಹೇರಲಾಗಿತ್ತೇ?’ : ಆನ್‌ಲೈನ್ ಫಾರಂ-6ರ ಬದಲಾವಣೆಗಳ ಕುರಿತು ಚುನಾವಣಾ ಆಯೋಗವನ್ನು ಪ್ರಶ್ನಿಸಿದ ರಾಹುಲ್ ಗಾಂಧಿ

ಹೊಸ ಮತದಾರರ ನೋಂದಣಿಗೆ ಬಳಸಲಾಗುವ ಆನ್‌ಲೈನ್ ಫಾರಂ ನಂಬರ್-6ರಲ್ಲಿ ಮಾಡಲಾದ ವಿವಾದಾತ್ಮಕ ಬದಲಾವಣೆಗಳ ಕುರಿತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ (ಅ.1) ಭಾರತೀಯ ಚುನಾವಣಾ ಆಯೋಗದಿಂದ ಉತ್ತರವನ್ನು...

ರಾಜ್ಯದಾದ್ಯಂತ ಫಾರಂ-7ರ ಮೂಲಕ ವೋಟ್ ಡಿಲೀಟ್ ಮಾಡಿಸುತ್ತಿರುವ ಬಿಜೆಪಿಗರು : ಮಾಹಿತಿ ನೀಡಲು ಸಿಎಂ ಡಿ.ಕೆ ಶಿವಕುಮಾರ್ ಸೂಚನೆ

ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಫಾರಂ ನಂಬರ್ -7 ಸಲ್ಲಿಸುವ ಮೂಲಕ ಅಲ್ಪಸಂಖ್ಯಾತರು, ದಲಿತರು ಮತ್ತು ಬಡವರ ಮತಗಳನ್ನು ಡಿಲೀಟ್ ಮಾಡಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಬುಧವಾರ (ಸೆ.30) ಸಾಮಾಜಿಕ...