Homeಕರೋನಾ ತಲ್ಲಣ2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

2,250 ಕೋಟಿ ರೂ ಖರ್ಚು ಮಾಡಿ ಮೋದಿ ಸರ್ಕಾರ ಖರೀದಿಸಿದ ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲವೇಕೆ?

- Advertisement -
- Advertisement -

ದೋಷಪೂರಿತ ಖರೀದಿ ಪ್ರಕ್ರಿಯೆಯಿಂದಾಗಿ ಆಸ್ಪತ್ರೆಗಳು ಅಗ್ಗದ ವೆಂಟಿಲೇಟರ್‌ಗಳನ್ನು ಪಡೆಯುತ್ತಿವೆ. ಅವುಗಳಲ್ಲಿ ಹಲವು ನಿರುಪಯುಕ್ತವಾಗಿವೆ ಎಂದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿಯೂ ವೈದ್ಯರು ಹೇಳುತ್ತಿದ್ದಾರೆ ಎಂದು ದಿ ಸ್ಕ್ರೋಲ್ ಪೋರ್ಟಲ್ ತನಿಖಾ ವರದಿ ಹೇಳುತ್ತಿದೆ.

ಕೋವಿಡ್ ಪ್ರಕರಣಗಳು ಮತ್ತು ಸಾವುಗಳಲ್ಲಿ ಮಹಾರಾಷ್ಟ್ರವು ಭೀಕರ ಏರಿಕೆ ಕಂಡ ಏಪ್ರಿಲ್ ಮೂರನೇ ವಾರದಲ್ಲಿ ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ 150 ವೆಂಟಿಲೇಟರ್‌ಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಕಳಿಸಿತ್ತು.

ಆಸ್ಪತ್ರೆಯು ಯಂತ್ರಗಳನ್ನು ಮರಾಠವಾಡ ಪ್ರದೇಶದ ಇತರ ಜಿಲ್ಲಾ ಮತ್ತು ಖಾಸಗಿ ಆಸ್ಪತ್ರೆಗಳಿಗೆ ವಿತರಿಸಿತು. ಆದರೆ ಕೆಲವೇ ದಿನಗಳಲ್ಲಿ, ಅನೇಕ ಆಸ್ಪತ್ರೆಗಳು ಅವನ್ನು ವಾಪಸ್ ಕಳುಹಿಸಿದವು. ವೆಂಟಿಲೇಟರ್‌ಗಳು ಕೆಲಸ ಮಾಡುತ್ತಿಲ್ಲ, ಕಳಪೆಯಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.

ನಿರ್ಣಾಯಕ ಆರೈಕೆ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಮತ್ತು ಈ ಯಂತ್ರಗಳನ್ನು ನಿರ್ವಹಿಸುವ ಈ ಆಸ್ಪತ್ರೆಗಳ ಎಂಟು ವೈದ್ಯರ ತಂಡವು ಸಿದ್ಧಪಡಿಸಿದ ವರದಿಯ ಪ್ರಕಾರ, “ವೆಂಟಿಲೇಟರ್‌ಗಳನ್ನು ಸ್ವಿಚ್ ಆನ್ ಮಾಡಿದ ಕೆಲವೇ ಗಂಟೆಗಳಲ್ಲಿ ರೋಗಿಗಳು ಉಸಿರಾಟದ ತೊಂದರೆ ಮತ್ತು ಸಂಬಂಧಿತ ರೋಗಲಕ್ಷಣಗಳ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು….’
ಅವುಗಳನ್ನು ತಯಾರಿಸಿದ ಜ್ಯೋತಿ ಸಿಎನ್‌ಸಿಯ ಎಂಜಿನಿಯರ್‌ಗಳ ತಂಡವು ಮೇ 14 ರಂದು ಕೆಲವು ಯಂತ್ರಗಳ ಸರ್ವಿಸ್ ಮಾಡಿತು. ಆದರೆ ವೈದ್ಯರ ವರದಿಯನ್ನು ಉಲ್ಲೇಖಿಸಿ ಮೇ 28ರಂದು ಬಾಂಬೆ ಹೈಕೋರ್ಟ್ “ಈ ವೆಂಟಿಲೇಟರ್‌ಗಳು ರಾತ್ರಿಯಿಡೀ ಚೆನ್ನಾಗಿ ಕೆಲಸ ಮಾಡಿದವು. ಆದರೆ ಮರುದಿನ ಮಧ್ಯಾಹ್ನದ ಹೊತ್ತಿಗೆ ರೋಗಿಗಳು ಕಳಪೆ ಆಮ್ಲಜನಕದ ಬಗ್ಗೆ ದೂರು ನೀಡಿದರು ಮತ್ತು ಚಡಪಡಿಕೆಯ ಲಕ್ಷಣಗಳನ್ನು ತೋರಿಸಿದರು…..’ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಇಲ್ಲಿವರೆಗೆ, ತಲುಪಿದ 150 ವೆಂಟಿಲೇಟರ್‌ಗಳಲ್ಲಿ 117 ಬಳಕೆಯಾಗುತ್ತಿಲ್ಲ ಎಂದು ಔರಂಗಾಬಾದ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಧಿಕಾರಿಗಳು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದು, ಉಳಿದ 33 ವೆಂಟಿಲೇಟರ್‌ಗಳನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ತಿಳಿಸಿದೆ.

ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗದೆ ನಿಂತಿರುವ ವೆಂಟಿಲೇಟರ್‌ಗಳು

“ಅವುಗಳನ್ನು ಬಳಸುವುದು ತುಂಬಾ ಅಪಾಯಕಾರಿ” ಎಂದು ಔರಂಗಾಬಾದ್‌ನಿಂದ 25 ವೆಂಟಿಲೇಟರ್‌ಗಳನ್ನು ಪಡೆದ ಬೀಡ್ ಜಿಲ್ಲೆಯ ಸುಕ್ರೆಸ್ವಾಮಿ ರಾಮಾನಂದ್ ತೀರ್ಥ್ ಗ್ರಾಮೀಣ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶಿವಾಜಿ ಹೇಳಿದರು..

ಕಳೆದ ವರ್ಷ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ, 60,000 ಕ್ಕೂ ಹೆಚ್ಚು ವೆಂಟಿಲೇಟರ್‌ಗಳಿಗೆ ಕೇಂದ್ರವು ಸುಮಾರು 2,350 ಕೋಟಿ ರೂ.ಗಳ ಆದೇಶಗಳನ್ನು ನೀಡಿತ್ತು, ಈ ಪೈಕಿ 2,000 ಕೋಟಿ ರೂ. ವೆಚ್ಚದ 50,000 ವೆಂಟಿಲೇಟರ್‌ಗಳಿಗೆ ಪಿಎಂ-ಕೇರ್ಸ್ ನಿಧಿ ಮೂಲಕ ಹಣ ನೀಡಲಾಯಿತು.

ಮಹಾರಾಷ್ಟ್ರದ ಹೊರತಾಗಿ, ರಾಜಸ್ಥಾನ, ಪಂಜಾಬ್, ಜಾರ್ಖಂಡ್ ಮತ್ತು ಛತ್ತೀಸಗಡ ರಾಜ್ಯಗಳು ಈ ವೆಂಟಿಲೇಟರ್‌ಗಳ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿವೆ.

ಆದರೆ, ಕೇಂದ್ರವು ಈ ವೆಂಟಿಲೇಟರ್‌ಗಳನ್ನು ಮತ್ತೆ ಮತ್ತೆ ಸಮರ್ಥಿಸಿಕೊಂಡಿದೆ. ಈ ಸಮಸ್ಯೆ ಸಾಧನಗಳಲ್ಲಿಲ್ಲ, ರಾಜ್ಯಗಳು ನಿರ್ವಹಿಸುವಲ್ಲಿ ವಿಫಲವಾಗಿವೆ ಎಂದು ಅದು ಹೇಳುತ್ತ ಬಂದಿದೆ.
ಟೀಕೆಗಳು ಜೋರಾಗಿ ಬರುತ್ತಿದ್ದಂತೆ, ಮೇ 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವೆಂಟಿಲೇಟರ್‌ಗಳ ಲೆಕ್ಕಪರಿಶೋಧನೆಗೆ ಆದೇಶಿಸಿದರು. ಆದರೆ ಅವರ ಹೇಳಿಕೆ, ಆರೋಗ್ಯ ಕಾರ್ಯಕರ್ತರಿಗೆ ವೆಂಟಿಲೇಟರ್‌ಗಳನ್ನು ನಿರ್ವಹಿಸುವ ತರಬೇತಿ ನೀಡಬೇಕು’ ಎಂಬ ಅರ್ಥದಲ್ಲಿದೆ.

ಸ್ಕ್ರೋಲ್.ಇನ್ ಹಲವಾರು ವೈದ್ಯರು, ಸರ್ಕಾರಿ ಅಧಿಕಾರಿಗಳು ಮತ್ತು ವೆಂಟಿಲೇಟರ್ ತಯಾರಕರೊಂದಿಗೆ ಮಾತನಾಡಿದೆ. ನಮಗೆ ದೊರೆತ ಮಾಹಿತಿ ಇಲ್ಲಿದೆ:

ಮೊದಲನೆಯದಾಗಿ, ವೆಂಟಿಲೇಟರ್ ಸಮಸ್ಯೆ ಪ್ರತಿಪಕ್ಷಗಳು ನಡೆಸುವ ರಾಜ್ಯಗಳಿಗೆ ಸೀಮಿತವಾಗಿಲ್ಲ. ಭಾರತೀಯ ಜನತಾ ಪಕ್ಷದ ಆಡಳಿತದಲ್ಲಿರುವ ರಾಜ್ಯಗಳಲ್ಲೂ ಇದೆ. ಆದರೆ ಅವು ಬಹಿರಂಗವಾಗಿ ಇದನ್ನು ಹೇಳುತ್ತಿಲ್ಲ. ಆದರೆ ಅಲ್ಲಿನ ವೈದ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಆಡಳಿತದಲ್ಲಿರುವ ಮೂರು ರಾಜ್ಯಗಳಾದ ಉತ್ತರ ಪ್ರದೇಶ, ಗುಜರಾತ್ ಮತ್ತು ಗೋವಾ, ತಮ್ಮ ಆಸ್ಪತ್ರೆಗಳಿಗೆ ಸರಬರಾಜು ಮಾಡಿದ ಕೆಲವು ವೆಂಟಿಲೇಟರ್‌ಗಳು ಯಾವುದೇ ಉದ್ದೇಶವನ್ನು ಪೂರೈಸಲಿಲ್ಲ ಎಂದು ಸ್ಕ್ರೋಲ್.ಇನ್‌ಗೆ ತಿಳಿಸಿವೆ.

ಎರಡನೆಯದಾಗಿ, ವೆಂಟಿಲೇಟರ್‌ಗಳ ಕಾರ್ಯಕ್ಷಮತೆ ಒಂದು ಉತ್ಪಾದಕರಿಂದ ಇನ್ನೊಂದಕ್ಕೆ ಹೆಚ್ಚು ಬದಲಾಗುತ್ತದೆ ಎಂದು ಅವುಗಳನ್ನು ನಿರ್ವಹಿಸಿದ ವೈದ್ಯರು ಹೇಳಿದರು. ಎರಡು ಖಾಸಗಿ ಕಂಪನಿಗಳ ಮಾದರಿಗಳು ವಿಶೇಷವಾಗಿ ಟೀಕೆಗೆ ಗುರುಯಾಗಿವೆ.

ಒಂದು ನೋಯ್ಡಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆಗ್ವಾ. ಇನ್ನೊಂದು, ರಾಜ್‌ಕೋಟ್ ಮೂಲದ ಜ್ಯೋತಿ ಸಿಎನ್‌ಸಿ. 2019ರವರೆಗೆ, ಈ ಕಂಪನಿ ಪ್ರಮುಖ ಷೇರುದಾರರಲ್ಲಿ ಒಬ್ಬರಾಗಿದ್ದ ಉದ್ಯಮಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರಿನೊಂದಿಗೆ ಮೊನೊಗ್ರಾಮ್ ಮಾಡಿದ ದುಬಾರಿ ಸ್ಯೂಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಮೂರನೆಯದಾಗಿ, ಕೇಂದ್ರ ಸರ್ಕಾರಕ್ಕೆ ವೆಂಟಿಲೇಟರ್‌ಗಳನ್ನು ಪೂರೈಸಿದ ಏಳು ಕಂಪನಿಗಳಲ್ಲಿ, ಹೆಚ್ಚು ಅನುಭವವನ್ನು ಹೊಂದಿರುವ ಕಂಪನಿಯು –(ಇದು ಎರಡು ದಶಕಗಳಿಂದ ವೆಂಟಿಲೇಟರ್‌ಗಳನ್ನು ತಯಾರಿಸುತ್ತಿದೆ) – ಕನಿಷ್ಠ ಆರ್ಡರ್‌ಗಳನ್ನು ಪಡೆದಿದೆ.

ಪ್ರಸ್ತುತ ಬಿಕ್ಕಟ್ಟು ಕೇಂದ್ರ ಸರ್ಕಾರ ಕಳೆದ ವರ್ಷ ತೆಗೆದುಕೊಂಡ ನಿರ್ಧಾರಗಳಲ್ಲಿ ಬೇರೂರಿದೆ.
ವೆಂಟಿಲೇಟರ್‌ಗಳನ್ನು ತಯಾರಿಸುವಲ್ಲಿ ಪೂರ್ವ ಅನುಭವವಿಲ್ಲದ ಕಂಪನಿಗಳಿಗೆ ಆರ್ಡರ್ ನೀಡಿತು. ಏಳು ಕಂಪೆನಿಗಳಲ್ಲಿ ಎರಡು – ಸರ್ಕಾರ ನಿರ್ವಹಿಸುವ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಅಲೈಡ್ ಮೆಡಿಕಲ್ ಲಿಮಿಟೆಡ್ ಸಹಭಾಗಿತ್ವ ಹೊಂದಿರುವ ಸ್ಕನ್ರೆ- ವೆಂಟಿಲೇಟರ್‌ಗಳನ್ನು ತಯಾರಿಸುವ ಬಗ್ಗೆ ಯಾವುದೇ ಗಮನಾರ್ಹ ದಾಖಲೆಯನ್ನು ಹೊಂದಿಲ್ಲ.

ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಅದರಲ್ಲಿ ಭಾಗವಹಿಸಿದ ಕಂಪನಿಗಳ ಅಧಿಕಾರಿಗಳು ಹೇಳುತ್ತಾರೆ. ಉದಾಹರಣೆಗೆ, ಅಲೈಡ್ ಮೆಡಿಕಲ್ ಲಿಮಿಟೆಡ್‌ಗೆ ಹೆಚ್ಚಿನ ಅನುಭವವಿದ್ದರೂ ಸಹ, ಒಂದು ಸಣ್ಣ ಪರಿಮಾಣವನ್ನು ನೀಡಲಾಯಿತು. ಕೇವಲ 350 ವೆಂಟಿಲೇಟರ್‌ಗಳ ಆರ್ಡರ್ ನೀಡಲಾಗಿತು. ಇದಕ್ಕೆ ವ್ಯತಿರಿಕ್ತವಾಗಿ, ವೆಂಟಿಲೇಟರ್ ತಯಾರಿಕೆಯಲ್ಲಿ ಯಾವುದೇ ಅನುಭವ ಇಲ್ಲದ ಅಗ್ವಾ ಮತ್ತು ಜ್ಯೋತಿ ಸಿಎನ್‌ಸಿ ಕಂಪನಿಗಳಿಗೆ ಕ್ರಮವಾಗಿ 10,000 ಮತ್ತು 5,000 ಯುನಿಟ್‌ಗಳ ಆರ್ಡರ್‌ಗಳನ್ನು ನೀಡಲಾಗಿತು!

ಈ ಆರೋಪಗಳಿಗೆ ಪ್ರತಿಕ್ರಿಯೆ ಕೋರುವ ಪ್ರಶ್ನೆಗಳಿಗೆ ಬಹುತೇಕ ಕಂಪನಿಗಳು ಪ್ರತಿಕ್ರಿಯಿಸಲಿಲ್ಲ.

(ಕೃಪೆ: ಸ್ಕ್ರೋಲ್.ಇನ್)


ಇದನ್ನೂ ಓದಿ; ಪಿಎಂ ಕೇರ್ಸ್ ನಿಧಿಯಡಿ ಖರೀದಿಸಿರುವ ವೆಂಟಿಲೇಟರ್ ಬಳಸಬೇಕಾದರೆ ‘ಬ್ಯಾಕಪ್’ ವೆಂಟಿಲೇಟರ್ ಅಗತ್ಯ..!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕಳಪೆ ಗುಣಮಟ್ಟದ Ventilator ಖರೀದಿಯ ಬಗ್ಗೆ ವಿಚಾರಣೆ ಆಗಬೇಕೆಂದು ಯಾರೂ ಒತ್ತಾಯಿಸುತ್ತಿಲ್ಲವಲ್ಲ ಏಕೆ?
    ವಿಷಯ ಇಷ್ಟೊಂದು ಗಂಭೀರವಾಗಿದ್ದರೊ ಸಹ ವಿರೋಧ ಪಕ್ಷದವರಾಗಲೀ, ಬುದ್ಧಿ ಜೀವಿ ಗಳಾಗಲಿ ಅಥವಾ ಪತ್ರಕರ್ತರು ಸುಮ್ಮನಿರುವದು ಯಾಕೆ?
    ಯಾರಾದರೂ ನ್ಯಾಯಾಲಯದ ಕದ ತತ್ತಬೇಕಿತ್ತಲ್ಲವೇ…
    ಇಂತಹ ಕೆಲವೊಂದು ಸರಳ ಸತ್ಯಗಳು ನಮ್ಮಂಥಹ ಜನಸಾಮಾನ್ಯರನ್ನು ಗೊಂದಲಕ್ಕೇ ಈಡು ಮಾಡುತ್ತಾವೆ.

LEAVE A REPLY

Please enter your comment!
Please enter your name here

- Advertisment -

ಆರು ಮಕ್ಕಳಿದ್ದರೆ ನೀವು ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು: ಮತದಾರರ ಪಟ್ಟಿ ‘ಕ್ಲೀನ್’ ಮಾಡಲು ECI ಹೊಸ ಪ್ಲಾನ್!

ಭಾರತದಲ್ಲಿ 'ಆರು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದಾರೆ' ಎಂಬ ಕಾರಣಕ್ಕೆ ಯಾರಾದರೂ ಮತದಾನದ ಹಕ್ಕನ್ನು ಕಳೆದುಕೊಳ್ಳಲು ಸಾಧ್ಯವೇ? ಮೇಲ್ನೋಟಕ್ಕೆ ಹೌದು ಎನ್ನುವಂತಿದೆ ಉತ್ತರ ಪ್ರದೇಶದ ವಾರಾಣಸಿಯ ಕ್ಯಾಂಟೋನ್ಮೆಂಟ್ ಕ್ಷೇತ್ರದ ಮತದಾರ ಸೋನು...

ಕದನ ವಿರಾಮವೆಂಬ ಕಳ್ಳಾಟ : ಗಾಝಾದಿಂದ ಸಿರಿಯಾವರೆಗೆ ಮುಂದುವರಿದ ಇಸ್ರೇಲ್ ನರಮೇಧ

ಬರೋಬ್ಬರಿ ಎಪ್ಪತ್ತು ಸಾವಿರದಷ್ಟು (ವರದಿಗಳ ಪ್ರಕಾರ 67, 900) ಜನರನ್ನು ಹತ್ಯೆಗೈದು, ಶೇಕಡ 90ರಷ್ಟು ಜನರನ್ನು ನಿರಾಶ್ರಿತರನ್ನಾಗಿ ಮಾಡಿದ ಬಳಿಕ, ಅಕ್ಟೋಬರ್ 10, 2025ರಂದು ಗಾಝಾ ಮೇಲಿನ ಆಕ್ರಮಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಕದನ...

ಚುನಾವಣಾ ಆಯೋಗಕ್ಕೆ ಪೌರತ್ವ ನಿರ್ಧಾರ ಮಾಡುವ ಹಕ್ಕಿದೆಯೇ? SIR ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ಮೇ 27 ರಂದು 'ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಮತ್ತು ಭಾರತೀಯ ಚುನಾವಣಾ ಆಯೋಗ (ECI)' ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ'...

ಮಹಾರಾಷ್ಟ್ರ: 80 ಲಕ್ಷ ಮಹಿಳೆಯರು ‘ಲಡ್ಕಿ ಬಹಿನ್’ ಯೋಜನೆಗೆ ಅನರ್ಹ: ಆರ್ಥಿಕ ಬಿಕ್ಕಟ್ಟಿಗೆ ಸಾಕ್ಷಿ ಎಂದು ವಿಪಕ್ಷಗಳ ಆರೋಪ

ಮುಂಬೈ: ಮಹಾರಾಷ್ಟ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ 'ಮುಖ್ಯಮಂತ್ರಿ ಮಾಝಿ ಲಡ್ಕಿ ಬಹಿನ್' ಇ-ಕೆವೈಸಿ (e-KYC) ಪ್ರಕ್ರಿಯೆ ಪೂರ್ಣಗೊಳಿಸಲು ನೀಡಿದ್ದ ಗಡುವು ಮುಗಿದಿದ್ದು, ಸುಮಾರು 80 ಲಕ್ಷ ಮಹಿಳೆಯರು ಯೋಜನೆಯಿಂದ ಅನರ್ಹರಾಗಿದ್ದಾರೆ. ರಾಜ್ಯ ಸರ್ಕಾರವು...

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...