ರಾಜ್ಯ ಸಾರಿಗೆಗೆ ಬಾಬಾಸಾಹೇಬ್ ಸಾರಿಗೆ ಸಂಸ್ಥೆ ಎಂದು ಮರುನಾಮಕರಣ ಮಾಡಲು ಸಂಸದೆ ಸುಮಲತಾ ಮನವಿ
ಸುಮಲತ

ರಾಜ್ಯ ಸಾರಿಗೆಯ ‘ಕೆಎಸ್‌ಆರ್‌‌ಟಿಸಿ’ ಎಂಬ ಹೆಸರನ್ನು ಕರ್ನಾಟಕ ರಾಜ್ಯ ಸಾರಿಗೆ ನಿಗಮವು ಕಳೆದುಕೊಂಡಿದೆ. ಹಲವು ಮಂದಿ ಹೊಸ ಹೆಸರುಗಳನ್ನು ಸೂಚಿಸುತ್ತಿದ್ದು, ಸಂಸದೆ ಸುಮಲತಾ ಅಂಬರೀಶ್ ಸಂವಿಧಾನ ಶಿಲ್ಪಿಯ ನೆನಪಿನಲ್ಲಿ ’ಬಾಬಾಸಾಹೇಬ್ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲು ಮನವಿ ಮಾಡಿದ್ದಾರೆ.

ಕೇಂದ್ರ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯು ‘ಕೆಎಸ್‌ಆರ್‌ಟಿಸಿ’ ಹೆಸರು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದೆ ಎಂದು ತೀರ್ಪು ನೀಡಿರುವ ಹಿನ್ನೆಲೆ ಇನ್ನು ಮುಂದಕ್ಕೆ ಕರ್ನಾಟಕವು ‘ಕೆಎಸ್‌ಆರ್‌ಟಿಸಿ’ ಎಂಬ ಹೆಸರನ್ನು ಬಳಸುವಂತಿಲ್ಲ.

ಕರ್ನಾಟಕ ರಾಜ್ಯ ಸಾರಿಗೆಗೆ ಮುಂದೆ ಯಾವ ಹೆಸರಿಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಈ ವೇಳೆ ಹಲವು ಮಂದಿ ಕಡೆಗಣಿಸಲ್ಪಟ್ಟಿರುವ ಹಲವು ನಾಯಕರ ಹೆಸರನ್ನು ಸೂಚಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್, ಅಂಬೇಡ್ಕರ್​ ಅವರ ಸ್ಮರಣೆಯಲ್ಲಿ ಬಾಬಾ ಸಾಹೇಬ್​ ಸಾರಿಗೆ ಸಂಸ್ಥೆ ಎಂದು ಹೆಸರಿಡಬೇಕೆಂದು ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದಾರೆ.

ಇದನ್ನೂ ಓದಿ: ಕನ್ನಡವನ್ನು ಕೊಳಕು ಭಾಷೆ ಎಂದು ತೋರಿಸಿದ್ದ ವೆಬ್‌ಸೈಟ್, ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್

 

ರಾಜ್ಯದ ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿಗೆ ಪತ್ರ ಬರೆದಿರುವ ಸುಮಲತಾ, ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿ ಪ್ರಯಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ತಲುಪಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆಯ ಟ್ರೆಡ್ ಮಾರ್ಕ್ 27 ವರ್ಷಗಳ ಕಾನೂಣು ಹೋರಾಟದ ನಂತರ ಕೇರಳದ ಪಾಲಾಗಿದೆ. ಈ ಹಿನ್ನೆಲೆ ಕರ್ನಾಟಕ ಸಾರಿಗೆಗೆ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ ಅವರ ನೆನಪಿನಾರ್ಥವಾಗಿ ’ಬಾಬಾಸಾಹೇಬ್ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರವನ್ನು ಮನವಿ ಮಾಡಿಕೊಳ್ಳುತ್ತೇನೆ’ ಎಂದಿದ್ದಾರೆ.

ಕೇರಳ ಮತ್ತು ಕರ್ನಾಟಕದ ಸಾರಿಗೆ ಇಲಾಖೆಗಳ ನಡುವಿನ ಏಳು ವರ್ಷಗಳ ಕಾನೂನು ಹೋರಾಟದ ಅಂತಿಮ ತೀರ್ಪು ಬುಧವಾರ ಪ್ರಕಟವಾಗಿದ್ದು, ‘ಕೇಂದ್ರ ವ್ಯಾಪಾರ ಗುರುತು ನೋಂದಾವಣೆ’ಯು ‘ಕೆಎಸ್‌ಆರ್‌ಟಿಸಿ’ ಎಂಬ ಸಂಕ್ಷಿಪ್ತ ಹೆಸರು ಕೇರಳ ರಸ್ತೆ ಸಾರಿಗೆಗೆ ಸೇರಿದೆ ಎಂದು ಹೇಳಿದೆ.  ಇದರ ಜೊತೆಗೆ ಕೇರಳವು ‘ಆನವಂಡಿ’ ಎಂಬ ಬಸ್ ಸೇವೆಯ ಜನಪ್ರಿಯ ಅಡ್ಡಹೆಸರಿನ ಮಾಲೀಕತ್ವವನ್ನು ಪಡೆದುಕೊಂಡಿದೆ.


ಇದನ್ನೂ ಓದಿ: ‘ಕೆಎಸ್‌ಆರ್‌‌ಟಿಸಿ’ ಬ್ರಾಂಡ್‌ ನೇಮ್‌ ಕಳೆದುಕೊಂಡ ಕರ್ನಾಟಕ! ಸಾರಿಗೆ ಸಚಿವ ಹೇಳಿದ್ದೇನು?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

3 COMMENTS

  1. ಈ ದೇಶಕ್ಕೆ ಬೃಹತ್ ಸಂವಿಧಾನ ನೀಡಿರುವ ಎಲ್ಲರ ಸಮಾನತೆ ಬಯಸಿದ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಾರಿಗೆ ಸಂಸ್ಥೆಗೆ ನಾಮಕರಣ ಮಾಡೋದು ಒಳ್ಳೆಯ ನಿರ್ಧಾರ. ಪ್ರತಿಯೊಬ್ಬರಿಗೂ ಸಂವಿಧಾನದ ಹಾಗೂ ಅಂಬೇಡ್ಕರ್ ರವರ ಮಹತ್ವ ಗೊತ್ತಾಗಲೀ …. ಬಿಕೆಕುಮಾರ್ ಬೆಳಕವಾಡಿ

  2. ಮಂಡ್ಯ ಸಂಸದೆ ಶ್ರೀಮತಿ ಸುಮಲತಾ ಅಂಬರೀಷ್ ರವರಿಗೆ ಕೋಟಿ ಧನ್ಯವಾದಗಳು

  3. ಹೌದು, ಇದೊಂದು ಅತ್ಯುತ್ತಮ ಸಲಹೆ ಮತ್ತು ಎರಡನೆಯ ಯೋಚನೆಯ ಅವಶ್ಯಕತೆ ಇಲ್ಲ.

LEAVE A REPLY

Please enter your comment!
Please enter your name here