ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮಂಗಳಮುಖಿಯರು ಕೂಡ ಮನುಷ್ಯರೇ, ಸಮಾಜದಲ್ಲಿ ಅವರನ್ನು ಕೀಳಾಗಿ ಅಥವಾ ಭಯದಿಂದ ನೋಡುವ ಮನೋಭಾವ ಬದಲಾಗಬೇಕು ಎಂದು ಸ್ವಾತಂತ್ರ್ಯ ದಿನಾಚರಣೆಯಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಗಿದೆ.
ಬೆಂಗಳೂರಿನ ಎಲ್.ಆರ್ ಬಂಡೆ ಸರ್ಕಲ್‌ನಲ್ಲಿ, ಭರವಸೆ ಟ್ರಸ್ಟ್ ಸಹಯೋಗದೊಂದಿಗೆ ಆಗಸ್ಟ್ 15 ರಂದು ಮಂಗಳಮುಖಿಯರು ಧ್ವಜಾರೋಹಣ ಮಾಡಿ ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ.
ರಾಷ್ಟ್ರಧ್ವಜಾರೋಹಣ ಮಾಡಿ, ರಾಷ್ಟ್ರಗೀತೆಯನ್ನು ಹಾಡಿದ ಮಂಗಳಮುಖಿಯರು ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನಂತರ ತಮ್ಮ ಹಕ್ಕುಗಳನ್ನು ಕೇಳುವ ಭಿತ್ತಿಪತ್ರಗಳನ್ನು ನಗರದ ಹಲವೆಡೆ ನಿಂತು ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: ಪರಿಶಿಷ್ಟ ಜಾತಿಯವರನ್ನು ಸಿನಿಮಾ ಉದ್ಯಮದಿಂದ ಹೊರಹಾಕಬೇಕು ಎಂದ ತಮಿಳು ನಟಿ: ಪ್ರಕರಣ ದಾಖಲು

ಈ ಕಾರ್ಯಕ್ರಮದ ಭಾಗವಾಗಿ ಮಂಗಳಮುಖಿಯರು ಭಿತ್ತಿ ಪತ್ರಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ನಾವೆಂದರೆ ಭಯ ಬೇಡ, ನಾವು ನಿಮ್ಮ ಹಾಗೆ ಮನುಷ್ಯರು. ಚಿಲ್ಲರೆ ಕಾಸಲ್ಲ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನತೆ, ಗೌರವ ಬೇಕು. ಅನುಕಂಪ ಬೇಡ, ಗೌರವ ಕೊಡಿ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಯಿತು….ನಮಗೆ ಸ್ವಾತಂತ್ರ್ಯ ಯಾವಾಗ…? ಎಂಬ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಾರೆ.
ಮಂಗಳಮುಖಿಯರ ಬಗ್ಗೆ ತಾರತಮ್ಯ ಧೋರಣೆ ಅನುಸರಿಸದಂತೆ, ಅವರ ಬಗ್ಗೆ ಇರುವ ಮನೋಭಾವ ಬದಲಿಸಿಕೊಳ್ಳುವಂತೆ ಭರವಸೆ ಟ್ರಸ್ಟ್ ಸಹಯೋಗದೊಂದಿಗೆ ಮಂಗಳಮುಖಿಯರು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ.
ವಿಡಿಯೊ ನೋಡಿ..
ಇದನ್ನೂ ಓದಿ: ‘ಮೊದಲು ಆಕಾಶ.. ಈಗ ನಿಂತ ನೆಲವನ್ನೂ ಕಸಿಯುತ್ತಿದ್ದಾರೆ!’; ಫ್ಲೈಯಿಂಗ್ ಎಲಿಫೆಂಟ್ಸ್ ಕಿರುಚಿತ್ರ


