Homeಅಂಕಣಗಳುಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

ಕಳೆದು ಹೋದ ದಿನಗಳು  -8: ಕರ್ನಾಟಕದಲ್ಲಿ ಸ್ವತಂತ್ರ ಪಾರ್ಟಿ ಕಟ್ಟಿ ಬೆಳೆಸಿದ್ದ ಗಣಪಯ್ಯನವರು..

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು.

- Advertisement -
- Advertisement -

1965ನೇ ಇಸವಿಯ ವೇಳೆಗಾಗಲೇ ಹಾರ್ಲೆ ಮತ್ತು ಹಾರ್ಲೆ ಮ್ಯಾನೇಜ್ಮೆಂಟ್‌ನ ತೋಟಗಳ ವಿಸ್ತೀರ್ಣ ಸಾವಿರ ಎಕರೆಗಳನ್ನು ಮೀರಿತ್ತು. ಸುಮಾರು ಇನ್ನೂರೆವತ್ತಕ್ಕೂ ಹೆಚ್ಚು ಕುಟುಂಬಗಳು ಹಾರ್ಲೆ ಸಮೂಹದಲ್ಲಿ ದುಡಿದು ಬದುಕುತ್ತಿದ್ದರು.

ಕಾಫಿ ವಲಯದಲ್ಲಿ ಆಗ ಈಗಿನಂತೆ ಹೊರಗಿನಿಂದ ಬಂದು ಕೆಲಸ ಮಾಡುವ ಜನರಿರಲಿಲ್ಲ. ಎಲ್ಲರೂ ಆಯಾ ತೋಟಗಳಲ್ಲೇ ವಾಸ. ಹೊರಗಿಂದ ಕೆಲಸಕ್ಕೆ ಬರಲು ಆ ಕಾಲದಲ್ಲಿ ಕೆಲಸಗಾರರಿಗೆ ಸ್ವಂತ ನೆಲೆಯೆನ್ನುವುದು ಇರಲೇ ಇಲ್ಲ. ಈ ತೋಟ ಬಿಟ್ಟು ಹೊರಟರೆ ಇನ್ನೊಂದು ತೋಟ ಅಷ್ಟೇ.

ಅದಕ್ಕೂ ಹಿಂದೆ ದಕ್ಷಿಣ ಕನ್ನಡದಿಂದ ಮತ್ತು ಕೇರಳ- ತಮಿಳುನಾಡಿಗಳಿಂದ ಬರುತ್ತಿದ್ದ ಹಂಗಾಮಿ ಕಾರ್ಮಿಕರು ಹೆಚ್ಚಾಗಿ ಘಟ್ಟಗಳಲ್ಲೇ ನೆಲೆ ನಿಂತಿದ್ದರು. ಘಟ್ಟದ ಕೆಳಗಿನಿಂದ ಬರುವ ವಲಸೆ ಕಡಿಮೆಯಾಗಿತ್ತು. ಈ ಎಲ್ಲ ಕಾರಣಗಳಿಂದ ಕಾಫಿ ತೋಟಗಳಲ್ಲಿ ಕನ್ನಡ, ತುಳು, ಮಲೆಯಾಳಂ ಮತ್ತು ತಮಿಳು ಈ ನಾಲ್ಕೂ ವ್ಯವಹಾರ ಭಾಷೆಯಾಗಿದ್ದವು.

ಕಾಲಾನಂತರದಲ್ಲಿ ಎರಡನೇ ತಲೆಮಾರಿಗೆ, ಇಲ್ಲಿ ನೆಲೆಸಿದ್ದ ತಮಿಳು ಮತ್ತು ಮಲೆಯಾಳಿಗಳು ಕನ್ನಡಿಗರೇ ಆಗಿದ್ದಾರೆ. ಇಲ್ಲಿನ ಸಾಂಸ್ಕೃತಿಕ ವಲಯದಲ್ಲಿ ಸೇರಿ ಹೋಗಿದ್ದಾರೆ. ತುಳು ಭಾಷಿಕರು ಹೇಗೂ ಕನ್ನಡಿಗರೇ, ಅವರಿಂದ ಇಲ್ಲಿನವರೂ ಸಾವಿರಾರು ಜನ ತುಳು ಕಲಿತರು. ಈಗ ಸಕಲೇಶಪುರ ತಾಲ್ಲೂಕಿನಲ್ಲಿ ತುಳು ಎರಡನೇ ಸಾಮಾನ್ಯ ಭಾಷೆಯಾಗಿದೆ.

ಹಾರ್ಲೆ‌‌ ಬಂಗಲೆ

ಹಾರ್ಲೆ ತೋಟಗಳ ಸಮೂಹದಲ್ಲಿ ಕೃಷಿ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದವು. ಏಳೆಂಟು ವರ್ಷಗಳಲ್ಲಿ  ಮ್ಯಾನೇಜರ್, ರೈಟರುಗಳು, ಮೇಸ್ತ್ರಿಗಳು, ಮೆಕ್ಯಾನಿಕ್, ಡ್ರೈವರ್‌ಗಳು, ಬಡಗಿಗಳು ಒಳ್ಳೆಯ ನುರಿತ ಕಾರ್ಮಿಕರು ಹೀಗೆ ಅನುಭವೀ ಕೆಲಸಗಾರರ ತಂಡವೊಂದನ್ನು ಗಣಪಯ್ಯ ಕಟ್ಟಿದ್ದರು. ತಮ್ಮ ರಾಜಕಾರಣದ ಓಡಾಟಗಳೆಷ್ಟೇ ಇರಲಿ ಗಣಪಯ್ಯ ಮನೆಯಲ್ಲಿದ್ದಾಗ ಪ್ರತಿದಿನ ತೋಟಕ್ಕೆ ಒಂದು ಭೇಟಿ ನೀಡದೆ ಇರುತ್ತಿರಲಿಲ್ಲ.

ಇಷ್ಟು ದೊಡ್ಡ ಸಂಸ್ಥೆಯ ಯಜಮಾನರಾಗಿದ್ದರೂ ಇವರು ವಾಸವಿದ್ದುದು ಮಿಡ್ಲಟನ್ ಕಾಲದಲ್ಲಿ ಕಟ್ಟಿದ್ದ, ಬೇರೆ ಕಾಫಿ ಎಸ್ಟೇಟ್ ಬಂಗಲೆಗಳಿಗೆ ಹೋಲಿಸಿದರೆ ಅತಿ ಸಾಮಾನ್ಯವೆನಿಸಿದ ಒಂದು ಬಂಗಲೆಯಲ್ಲಿ. ಮನೆಯೊಳಗೂ ಅತ್ಯಂತ ಸರಳ. ಮನೆಗೆ ಯಾರೇ ಬರಲಿ ಎಲ್ಲರಿಗೂ ಜೊತೆಯಲ್ಲಿಯೇ ಊಟ. ಅದೂ ನೆಲದಲ್ಲಿ ಕುಳಿತು.

ಇವರ ಊಟದ ಮನೆಗೆ ಹೋಗುವ ದಾರಿಯಲ್ಲಿ ಗೋಡೆಯಲ್ಲಿ ಒಂದು ಹಲಗೆಯನ್ನು ಚಜ್ಜಾದಂತೆ  ಅಳವಡಿಸಲಾಗಿತ್ತು. ಅದರ ಮೇಲೆ ಒಂದು ಮಡಕೆ, ಒಂದು ತೆಂಗಿನ ಚಿಪ್ಪಿಗೆ ಬಿದಿರು ಕಡ್ಡಿ ಸಿಕ್ಕಿಸಿದ ಸೌಟು. -ಹಿಂದಿನ ಕಾಲದಲ್ಲಿ ಗಂಜಿ, ಸಾರು ಮುಂತಾದವನ್ನು ಬಡಿಸಲು ಬಳಸುತ್ತಿದ್ದಂತಹದು. ಮತ್ತೊಂದು ಹಳೆಯ ಹಿತ್ತಾಳೆ ಗಂಗಳ.

ಒಮ್ಮೆ ಗಣಪಯ್ಯನವರ ಗೆಳೆಯರಾದ ಗ್ರೆಗೊರಿ ಮಥಾಯಿಸರು ಅದನ್ನು ನೋಡಿ “ಇದನ್ನೇಕೆ ಇಲ್ಲಿ ಇಟ್ಟುಕೊಂಡಿದ್ದೀರಿ”? ಎಂದರಂತೆ.

ಆಗ ಗಣಪಯ್ಯ “ನನಗೆ ಅಹಂಕಾರ ಬರದೇ ಇರಲಿ ಅಂತ ನೆನಪು ಮಾಡಿಕೊಡಲು ಅದನ್ನು ಅಲ್ಲಿ ಕಾಣುವಂತೆ ಇಟ್ಟಿದ್ದೇನೆ. ಒಂದು ಕಾಲದಲ್ಲಿ ನಾನು ಅದರಲ್ಲೇ ಊಟ ಮಾಡುತ್ತಿದ್ದುದು” ಎಂದರಂತೆ.

ಸ್ವತಂತ್ರ ಪಾರ್ಟಿ ಸೇರಿದ ನಂತರ ಬಹುಬೇಗ ಪಕ್ಷದಲ್ಲಿ ಅವರ ಜವಾಬ್ದಾರಿ ಹೆಚ್ಚಾಗುತ್ತ ಹೋಯಿತು. ಅವರು ಸ್ವತಂತ್ರ ಪಾರ್ಟಿ ರಾಜ್ಯಾಧ್ಯಕ್ಷರೂ ಆದರು.

ಹಾರ್ಲೆ A to k estates ಹಳೆಯ ಆಫೀಸ್

ಈ ಕಾಲದಲ್ಲಿ ಅವರು ಸ್ವತಂತ್ರ ಪಾರ್ಟಿಗೆ ನೂರಾರು ಯುವಕರನ್ನು ಸೇರಿಸಿಕೊಂಡು ಬೆಳೆಸಿದರು. ಸ್ಥಳೀಯವಾಗಿ ಹಾನುಬಾಳಿನ ಅಜ್ಜೇಗೌಡರು, (ಇವರು ಕರ್ನಾಟಕದ ಹಿರಿಯ ಅಧಿಕಾರಿಗಳಾಗಿದ್ದ ಐ.ಎಂ. ವಿಠ್ಠಲ ಮೂರ್ತಿಯವ ಮಾವ) ಗಾಣದಹೊಳೆ ಸುಬ್ಬೇಗೌಡರ ಮಗ ಕೇಶವೇ ಗೌಡರು ಮುಂತಾದವರೆಲ್ಲ ಇದ್ದರು.

ದಕ್ಷಿಣಕನ್ನಡದಿಂದ ಲೋಕಸಭಾ ಸದಸ್ಯರಾಗಿದ್ದ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯನವರಿಗೆ ನಿಕಟ ಸಂಪರ್ಕವಿತ್ತು. ಮಲ್ಯರ ಬಗ್ಗೆ ಇವರಿಗೆ ಅಪಾರ ಗೌರವ, ಅವರ ದೂರದೃಷ್ಟಿಯ ಕುರಿತು ಮೆಚ್ಚುಗೆ.

ಒಮ್ಮೆ ಶ್ರೀನಿವಾಸ ಮಲ್ಯರೊಡನೆ ಗಣಪಯ್ಯ ಮತ್ತು ರವೀಂದ್ರನಾಥರು ಮಂಗಳೂರಿನಿಂದ ಸಕಲೇಶಪುರದತ್ತ ಕಾರನಲ್ಲಿ ಬರುತ್ತಿದ್ದರಂತೆ. ಆಗ ಹಾಸನ ಮಂಗಳೂರು ರಸ್ತೆಯಲ್ಲಿ ದಿನಕ್ಕೆ ಮೂರು ಬಸ್ಸುಗಳು ನಾಲ್ಕೈದು ಲಾರಿಗಳು  ಮಾತ್ರ ಸಂಚರಿಸುತ್ತಿದ್ದ ಕಾಲ. ಏನೋ ಮಾತಾಡುತ್ತ ಮಲ್ಯರು ಈ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ಮಾಡಲು ಶಿಫಾರಸು ಮಾಡಿದ್ದೇನೆ ಎಂದರಂತೆ.

ಶಿರಾಡಿ ಘಾಟ್ ಹಳೆಯ ರಸ್ತೆ

ಆಗ ರವೀಂದ್ರನಾಥರು “ಸರ್ ಇಲ್ಲಿ ದಿನಕ್ಕೆ ಮೂರು ಬಸ್ಸು ಸಂಚರಿಸುವುದು ಇದು ರಾಷ್ಟ್ರೀಯ ಹೆದ್ದಾರಿಯೇ”? ಎಂದರಂತೆ,

ಆಗ ಮಲ್ಯರು “ರವಿ ನೀನು ಇವತ್ತಿನ ಸ್ಥಿತಿ ನೋಡಬೇಡ. ಇಪ್ಪತ್ತೈದು ವರ್ಷ ಮುಂದೆ ನೋಡು” ಎಂದು ಉತ್ತರಿಸಿದರಂತೆ.

ಇಂತಹ ದೂರ ದೃಷ್ಟಿಯನ್ನು ಗಣಪಯ್ಯನವರೂ ಹೊಂದಿದ್ದರು. ಇದನ್ನವರು ಕೃಷಿ ಉದಾಹರಣೆಗಳ ಮೂಲಕ ಹೇಳುತ್ತಿದ್ದರು. “ಒಂದು ಗಿಡ ನೆಡುವಾಗ, ಅದು ಬೆಳೆದು ನಿಂತಾಗ ಬೇಕಾಗುವ ಅವಶ್ಯಕತೆಗಳನ್ನು ಅರಿಯದೆ ನೆಟ್ಟವ ಒಳ್ಳೆಯ ಕೃಷಿಕನಾಗಲಾರ ಎನ್ನುತ್ತಿದ್ದರು.”

ಗಣಪಯ್ಯನವರ ಯಾವುದೇ ಬೇರೆ ಭಾಷಣವಿರಲಿ, ರಾಜಕೀಯ ಭಾಷಣಗಳಲ್ಲಿ ಕೂಡಾ ಕೃಷಿ ಮತ್ತು ಕೃಷಿಕರ ಸಮಸ್ಯೆಗಳು ಮತ್ತು ಪರಿಹಾರಗಳ ಪ್ರಸ್ತಾಪವಿಲ್ಲದೆ ಇರುತ್ತಿರಲಿಲ್ಲ. ಮುಂದೆ ಅವರು ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದಾಗಲೂ ನಂತರದ ಚುನಾವಣಾ ಭಾಷಣಗಳಲ್ಲೂ ಇದು ಮುಂದುವರಿದೇ ಇತ್ತು.

1960 ದಕ್ಷಿಣ ಕನ್ನಡ ದ ಲೋಕಸಭಾ ಸದಸ್ಯರಾಗಿದ್ದ ಯು. ಶ್ರೀನಿವಾಸ ಮಲ್ಯ

1967ನೇ ಇಸವಿ ರಾಷ್ಟ್ರ ರಾಜಕಾರಣದಲ್ಲಿ ಪ್ರಥಮ ಬಾರಿಗೆ ಕಮ್ಯೂನಿಸ್ಟೇತರ ಪಕ್ಷವೊಂದು ಕಾಂಗ್ರೆಸ್ಸಿಗೆ ಸವಾಲೊಡ್ಡಿತ್ತು. ಸ್ವತಂತ್ರ ಪಕ್ಷ  44 ಸ್ಥಾನ ಗಳಿಸಿ ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನುಗ್ಗೆಹಳ್ಳಿ ಶಿವಪ್ಪ ಲೋಕಸಭೆಗೆ ಆಯ್ಕೆಯಾದರು. ಕರ್ನಾಟಕದ ವಿಧಾನಸಭೆಯಲ್ಲಿ ಹದಿನಾರು ಸ್ಥಾನ ಗಳಿಸಿತ್ತು. ಹಾಸನ ಜಿಲ್ಲೆಯಲ್ಲಿ ನಾಲ್ಕು ಜನ ಸ್ವತಂತ್ರ ಪಾರ್ಟಿಯಿಂದಲೂ, ಒಬ್ಬರು ಪಿ.ಎಸ್.ಪಿ ಯಿಂದ ಇನ್ನೊಬ್ಬರು ಪಕ್ಷೇತರರಾಗಿಯೂ ಸ್ವತಂತ್ರ ಪಾರ್ಟಿ ಬೆಂಬಲದೊಂದಿಗೆ ಗೆದ್ದಿದ್ದರು. ಅವರಲ್ಲಿ ಒಬ್ಬರು ಹೊಳೆನರಸೀಪುರದಿಂದ ಹೆಚ್.ಡಿ.ದೇವೇಗೌಡರು ಪ್ರಥಮ ಬಾರಿಗೆ ಶಾಸಕರಾಗಿದ್ದರು.

ಪಕ್ಕದ ಸುಳ್ಯ ಮತ್ತು ಸೋಮವಾರಪೇಟೆಯಲ್ಲೂ ಸ್ವತಂತ್ರ ಪಾರ್ಟಿ ಗೆದ್ದಿತ್ತು. ಸುಳ್ಯ ಕ್ಷೇತ್ರದಿಂದ ಎ.ರಾಮಚಂದ್ರ ಶಾಸಕರಾಗಿದ್ದರು. ಸೋಮವಾರಪೇಟೆಯಿಂದ ಗುಂಡುಕುಟ್ಟಿ ಮಂಜುನಾಥಯ್ಯ ಗೆದ್ದಿದ್ದರು.

ಗಣಪಯ್ಯನವರು ರಾಜ್ಯ ರಾಜಕಾರಣದ ಮುಂಚೂಣಿ ನಾಯಕರಾಗಿ ಹೊರ ಹೊಮ್ಮಿದ್ದರು. ಅದೇ ಚುನಾವಣೆಯಲ್ಲಿ ಸಿ.ಎಂ.ಪೂಣಚ್ಚ ಕಾಂಗ್ರೆಸ್‌ನಿಂದ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ರೈಲ್ವೆ ಸಚಿವರಾದರು.

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು ಅಂದಿನ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸುವಾಗ ಕೊಡಗಿನ ಮುಖ್ಯಮಂತ್ರಿಗಳಾಗಿ ಅದನ್ನು ಬೆಂಬಲಿಸಿದವರು ಸಿ.ಎಂ. ಪೂಣಚ್ಚ. ಇದರಿಂದಾಗಿ ಅವರು ಕೊಡಗಿನಲ್ಲಿ ಸಾಕಷ್ಟು ವಿರೋಧವನ್ನು ಕಟ್ಟಿಕೊಳ್ಳಬೇಕಾಯಿತು. ಜೊತೆಗೆ ಪೂಣಚ್ಚನವರ ಇಬ್ಬರು ಆಪ್ತಗೆಳೆಯರು ಗುಂಡುಕುಟ್ಟಿ ಮಂಜುನಾಥಯ್ಯ, ಹಾರ್ಲೆ ಗಣಪಯ್ಯ ಕಾಂಗ್ರೆಸ್ಸಿನ ಕಡು ವಿರೋಧಿಗಳಾಗಿ ಸ್ವತಂತ್ರ ಪಾರ್ಟಿಯಲ್ಲಿದ್ದರು. ಪೂಣಚ್ಚನವರ ಮತದಾರ ಕ್ಷೇತ್ರಕ್ಕೆ ಸೇರಿದ ಸುಳ್ಯ ಮತ್ತು ಸೋಮವಾರಪೇಟೆ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ವತಂತ್ರ ಪಾರ್ಟಿಯೂ ವಿರಾಜಪೇಟೆಯಲ್ಲಿ ಜನಸಂಘವೂ ಜಯಗಳಿಸಿದ್ದವು. ಆದರೆ ಮಂಗಳೂರಿನ ಇತರ ವಿಭಾಗಗಳು ಪೂಣಚ್ಚನವರನ್ನು ಬೆಂಬಲಿಸಿದ್ದವು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದುಹೋದ ದಿನಗಳು – 4: ಗಣಪಯ್ಯನವರು ಹಾರ್ಲೆ ಎಸ್ಟೇಟ್ ಮಾಲೀಕರಾಗಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...