Homeಕರ್ನಾಟಕಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

ಆರ್.ಎಸ್.ಎಸ್ ಸಖ್ಯಕ್ಕೆ ಬಂದದ್ದು ಮತ್ತು ಪ್ರಶ್ನಿಸಿ ಹೊರಬಂದದ್ದು..

- Advertisement -
- Advertisement -

ನನ್ನ ಹಿನ್ನೆಲೆ ವಿಚಿತ್ರ. ಆದರೆ ಅದರ ಚಿತ್ರ ಮಾತ್ರ ಇನ್ನೂ ನನ್ನ ಮನಸ್ಸಿನಿಂದ ಅಳಿಸಿಹೋಗಿಲ್ಲ. ನಾನು ಆಗ ಬಹುಶಃ ಹತ್ತು ವರ್ಷದ ಹುಡುಗ. ಪಿರಿಯಾಪಟ್ಟಣದಿಂದ ಒಬ್ಬ ವ್ಯಕ್ತಿ ಸೈಕಲ್ ಮೇಲೆ ಬಂದು, ಮನೆಮನೆಗೂ ಹೋಗಿ, ನನ್ನಂತಹ ಎಳೆಯ ಹುಡುಗರನ್ನು ಹಿಡಿದುಕೊಂಡು ಬಂದು ಕಬಡ್ಡಿ, ಕೊಕೊ ಇತ್ಯಾದಿ ಆಟಗಳನ್ನು ಆಡಿಸುತ್ತಿದ್ದ. ಕೆಲವು ತಿಂಗಳುಗಳ ಕಾಲ ನಾವು ಅಂದರೆ ನಾನು ಮತ್ತು ನನ್ನ ಸ್ನೇಹಿತರು, ಕುಗ್ರಾಮದಲ್ಲೊಂದು ಮನರಂಜನೆ ಸಿಕ್ಕಿತಲ್ಲ ಎನ್ನುವ ಸಂತೋಷದಿಂದ ಆಟ ಆಡುವುದಕ್ಕಾಗಿ ಪ್ರತಿದಿನ ಮುಗ್ಧತೆಯಿಂದ ತಪ್ಪದೇ ಆ ವ್ಯಕ್ತಿಗಾಗಿ ಕಾಯುತ್ತಿದ್ದೆವು.

ಹೈಸ್ಕೂಲ್ ಹೆಡ್ಮಾಸ್ಟರ್ ಆಗಿದ್ದ ನಮ್ಮಪ್ಪ ಅಂದು ಸಂಜೆ ಸ್ಕೂಲ್ ಬಾಗಿಲು ಹಾಕಿಕೊಂಡು ಮನೆಗೆ ಹೋಗುವಾಗ ನಾವು ಆಟ ಆಡುತ್ತಿದ್ದ ಸ್ಥಳದಲ್ಲಿ ಕಾವಿ ಬಣ್ಣದ ಧ್ವಜವನ್ನ ನೆಟ್ಟಿರುವುದನ್ನ ಕಂಡರು ಅನಿಸುತ್ತದೆ. ಆದರೆ ಅಲ್ಲಿ ಅವರು ಏನನ್ನೂ ಮಾತನಾಡದೇ ಮನೆಗೆ ಬಂದರು. ಅವರು ಅಸಹನೆಗೊಂಡಿದ್ದರು ಅನ್ನುವುದು ನನಗೆ ಗೊತ್ತಾಗಿದ್ದು ನಾನು ಮನೆಗೆ ಬಂದ ಮೇಲೆ.

ನಮ್ಮಪ್ಪ ತನಿಖೆ ಮಾಡುವವರ ರೀತಿ “ಅದ್ಯಾರೊ, ನಿಮ್ಮನ್ನೆಲ್ಲಾ ಆಟ ಆಡಿಸುತ್ತಿದ್ದವರು?” ಅಂತ ಕೇಳಿದಾಗ ನಾನು, “ಅವರು ಪಿರಿಯಾಪಟ್ಟಣದಿಂದ ಸೈಕಲ್ಲಿನಲ್ಲಿ ಬರುತ್ತಾರೆ, ನಮಗೆ ಅನೇಕ ಆಟಗಳನ್ನು ಹೇಳಿಕೊಟ್ಟು, ಆಡಿಸುತ್ತಾರೆ. ಮೊದಲು ಒಂದು ಹಾಡನ್ನೂ ನಾವು ಹೇಳಬೇಕು” ಅಂತ ಹೇಳಿದಾಗ ನಮ್ಮಪ್ಪನಿಗೆ ಖಾತ್ರಿಯಾಗಿತ್ತೆನಿಸುತ್ತದೆ ಇದು ಆರ್.ಎಸ್.ಎಸ್‌ನ ಒಂದು ಶಾಖೆ ಎಂದು.

ಅಪ್ಪ ನನ್ನನ್ನು ಮರುದಿನದಿಂದ ಸಂಜೆ ಅಲ್ಲಿಗೆ ಹೋಗದಂತೆ ನಿಷೇಧಿಸಿದರು. ಆರ್.ಎಸ್.ಎ.ಸ್ ಮತ್ತು ಗೋಡ್ಸೆ ನಂಟು ಮತ್ತು ಅವನ ಗಾಂಧಿ ಹತ್ಯೆಯ ಕೃತ್ಯದ ನೆನಪು ಅವರಲ್ಲಿ ಹಸಿಯಾಗಿಯೇ ಇನ್ನೂ ಉಳಿದಿತ್ತು. ಅದಲ್ಲದೇ ಅವರು ಮುಂಬೈ ಲಾ ಕಾಲೇಜಿನಲ್ಲಿ ಅಂಬೇಡ್ಕರ್ ಅವರ ವಿದ್ಯಾರ್ಥಿಯಾಗಿದ್ದವರೂ ಕೂಡ. ಅಂಬೇಡ್ಕರ್ ಅವರ ವ್ಯಕ್ತಿತ್ವದ ಒಂದು ಕಿರಣ ಬಹುಶಃ ನನ್ನ ತಂದೆಯವರಲ್ಲಿಯೂ ಬಂದು ಹೊಕ್ಕಿದ್ದಿರಬಹುದು. ಅಲ್ಲಿಗೆ ನನ್ನ ಆರ್.ಎಸ್.ಎಸ್ ಸಂಸ್ಥೆಯ ಒಡನಾಟ ಮೊಳಕೆಯಲ್ಲಿಯೇ ಒಣಗಿಹೋಯಿತು. ಬಹುಶಃ ಮತ್ತೊಂದು ಸಂದರ್ಭಕ್ಕೆ ಹವಣಿಸುತ್ತಿತ್ತು!

ನನ್ನ ಎಸ್.ಎಸ್.ಎಲ್.ಸಿ. ಮುಗಿದು ನಾನು ಬೆಂಗಳೂರಿನ ನನ್ನ ಅಣ್ಣನ ಮನೆಯಲ್ಲಿ ನೆಲೇಸಿ ನನ್ನ ಪಿ.ಯು.ಸಿ. ಮತ್ತು ಬಿ.ಎಸ್.ಸಿ. ತರಗತಿಗಳನ್ನು ಮುಗಿಸಿದೆ. ನಂತರ ನನ್ನ ಕೆಲವು ಸಹಪಾಠಿಗಳು ಲಾ ಕಾಲೇಜು ಸೇರಿದರು. ಯಾವುದೇ ಗೊತ್ತುಗುರಿ ಇಲ್ಲದೇ ನಾನೂ ಲಾ ಕಾಲೇಜನ್ನು ಸೇರಿದೆ. ಅದೇ ಸಮಯಕ್ಕೆ ಅಣ್ಣ ಮುಂಬೈಯಲ್ಲಿ ಕೆಲಸಕ್ಕೆ ಸೇರಿದ. ಆಗ ನನ್ನ ವಾಸ್ತವ್ಯವೇ ಒಂದು ದೊಡ್ಡ ಸಮಸ್ಯೆಯಾಗಿ ನನ್ನನ್ನು ಕಾಡಿತು. ಇದನ್ನು ನನ್ನ ಸ್ನೇಹಿತನೊಬ್ಬನ ಹತ್ತಿರ ತೋಡಿಕೊಂಡೆ. ಎಲ್ಲಾದರೂ ರೂಮು ಕೊಡಿಸೊ ಅಂತ ಅವನ ಹಿಂದೆ ಬಿದ್ದೆ. ಅವನೊಬ್ಬ ನಿಷ್ಠಾವಂತ ಸ್ವಯಂಸೇವಕ ಅನ್ನುವುದು ನನಗೆ ಅಲ್ಲಿಯವರೆಗೂ ತಿಳಿದಿರಲಿಲ್ಲ. ನನ್ನ ಅಣ್ಣನ ಮನೆಯನ್ನು ಖಾಲಿ ಮಾಡುವುದಕ್ಕೆ ಒಂದು ತಿಂಗಳ ಸಮಯವಿತ್ತು. ನಾನಿನ್ನೂ ಅಲ್ಲಿಯೇ ವಾಸಿಸುತ್ತಿದ್ದೆ. ಎರಡು ದಿನಗಳ ನಂತರ ಇನ್ನೂ ಖಾಲಿ ಮಾಡದ ಅಣ್ಣನ ಮನೆಗೆ ಬಂದ ಅವನು, “ನಿನಗೆ ಇರಲು ಒಂದು ಜಾಗ ಇದೆ, ಆದರೆ ಒಂದು ಷರತ್ತು, ನೀನು ಸಂಘಕ್ಕೆ ಸೇರಬೇಕು” ಅಂದ. ನನ್ನ ಚಿಕ್ಕವಯಸ್ಸಿನಲ್ಲಾದ ಪ್ರಕರಣ ಆಗಲೇ ನೆನಪಿನಿಂದ ಮಾಸಿಹೋಗಿತ್ತು. ನನ್ನ ತಂದೆ ಈಗ ದೂರದ ಊರಾದ ಶೃಂಗೇರಿ ಸ್ಕೂಲಿನಲ್ಲಿ ಮುಖ್ಯೋಪಾಧ್ಯಾಯರು. ಇರೋದಕ್ಕೆ ರೂಮು ಸಿಕ್ಕರೆ ಏನು ಬೇಕಾದರೂ ಮಾಡ್ತೀನಿ ಅನ್ನುವ ಪರಿಸ್ಥಿತಿಯನ್ನ ಎದುರಿಸುತ್ತಿದ್ದೆ ಆ ದಿನಗಳಲ್ಲಿ. ಇದು ಸಂಘದ ಸಹವಾಸದ ಎರಡನೇ ಇನ್ನಿಂಗ್ಸ್.

ಅಂದಿನಿಂದ ನಾನು ಕಾರ್ಯಾಲಯದಲ್ಲಿ ವಾಸಿಸಲು ಪ್ರಾರಂಭಿಸಿದೆ. ಕೆಲವು ಪ್ರಚಾರಕರು ಮತ್ತು ನಿವಾಸಿಗಳ ಜತೆ ಬೇಗನೆ ಎದ್ದು ಪ್ರಾತಃ ಸ್ಮರಣೆಯ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದೆ. ನಂತರ ಏಳು ಗಂಟೆಗೆ ಬೆಳಗಿನ ಶಾಖೆಯ ಸಭೆ. ನಂತರ ನನ್ನ ಲಾ ಕಾಲೇಜು ಇತ್ಯಾದಿ. ಇಷ್ಟೇ ಆದರೆ ಹೇಗೋ ಅನುಸರಿಸಿಕೊಂಡು ಇದ್ದುಬಿಡಬಹುದು ಅಂತ ನನ್ನ ಮನಸ್ಸಿನಲ್ಲಿ ಅನಿಸತೊಡಗಿತು. ಆದರೆ ನನಗೊಂದು ಬಡ್ತಿ ಸಿಕ್ಕಿತು. ಅದು ಸಂಘದ ಪ್ರಮುಖ ಬೈಟಕ್ಕುಗಳಲ್ಲಿ ಕುಳಿತು ಅವರ ಮಾತುಗಳನ್ನು ಕೇಳುವ ಅವಕಾಶ. ನನಗೆ ಚಿಕ್ಕಂದಿನಲ್ಲಿ ನಮ್ಮಪ್ಪ ನನ್ನಲ್ಲಿ ಹುಟ್ಟುಹಾಕಿದ ಸೆಕ್ಯುಲರಿಸಂ ಬೀಜ ಮೊಳಕೆಯೊಡೆದು ಹೆಮ್ಮರವೇನೂ ಆಗದೆ, ಬಹುಶಃ ನನ್ನ ಸುಪ್ತಪ್ರಜ್ಞೆಯಲ್ಲಿ ತಟಸ್ಥವಾಗಿಯೇ ಇತ್ತು. ಈ ಭೈಟಕ್‌ಗಳಲ್ಲಿನ ವಿಚಾರ ಲಹರಿಗಳು ನನ್ನ ಕಿವಿಯ ಮೇಲೆ ಬೀಳುತ್ತಿದ್ದಂತೆ ಅದು ಮೊಳಕೆಯೊಡೆಯಲು ಶುರುವಾಯಿತು ಎನ್ನಬಹುದು. ಅದು ದೊಡ್ಡ ಮರವಾಗಿ ಬೆಳೆಯಲು ಹೆಚ್ಚು ಸಮಯವೇನು ಹಿಡಿಯಲಿಲ್ಲ. ಅದೇ ಕಾರಣಕ್ಕೆ ನಾನು ಅವರ ಸಂವಾದಗಳ ಮಧ್ಯೆ ಮೂಗು ತೂರಿಸಲು ಪ್ರಾರಂಭಿಸಿದೆ. ಒಂದು ದಿನ “ಹಾಗೇನಿಲ್ಲ, ನನ್ನ ಚಿಕ್ಕ ವಯಸ್ಸಿನ ಅನೇಕ ಸ್ನೇಹಿತರುಗಳ ನೀವು ಹೇಳುವ ಧರ್ಮಕ್ಕೆ ಸೇರಿದವರು.. ಅದಲ್ಲದೇ ನನಗೆ ಕನ್ನಡವನ್ನ ಕಲಿಸಿದವರೇ ಸೈಯದ್ ಹುಸೇನ್ ಅನ್ನುವ ಮೇಷ್ಟ್ರು” ಅಂದಾಗ ಅಲ್ಲಿ ನೆರೆದಿದ್ದ ಪ್ರಮುಖರ ಮುಖದಲ್ಲೆಲ್ಲಾ ಅಸಹನೆಯ ಸುಕ್ಕುಗಳು ಮೂಡತೊಡಗಿದವು.

ನಂತರ, ಇವನು ನಮ್ಮ ಗುಂಪಿಗೆ ಸರಿಹೊಂದುವುದಿಲ್ಲ ಎಂದು ನನ್ನನ್ನು ಈ ಘಟನೆ ನಡೆದ ದಿನಗಳ ನಂತರ ವಿದ್ಯಾರ್ಥಿ ಪರಿಷತ್‌ನ ಆಫೀಸನ್ನು ನೋಡಿಕೊಳ್ಳಲು ನಿಯೋಜಿಸಿಬಿಟ್ಟರು.

ಒಂದು ದಿನ ವಿದ್ಯಾರ್ಥಿ ಪರಿಷತ್‌ನ ಒಂದು ದೊಡ್ಡ ಸಭೆಯನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಅಂದು ಒಂದು ದೊಡ್ಡ ವ್ಯಾನಿನಲ್ಲಿ ಸ್ವಯಂಸೇವಕರ ಜತೆ ಮೈಸೂರಿಗೆ ನಾನೂ ಹೊರಟೆ. ದಾರಿಯಲ್ಲಿ ಅಂತ್ಯಾಕ್ಷರಿ ಆಟ ಆಡುವ ಮನಸ್ಸು ಎಲ್ಲರಿಗೂ ಆಯಿತು. ನನಗೂ ಖುಷಿ ಆಯಿತು. ಆದರೆ ಯಾವುದೇ ಸಿನೆಮಾ ಹಾಡು ಹಾಡುವುದನ್ನ ನಿಷೇಧಿಸಲಾಗಿತ್ತು. ಬರೀ ಸಂಘಗೀತೆಗಳು. ಒಂದು ಸಂಘಗೀತೆಯ ಚರಣ ಅಂತ್ಯಗೊಂಡಿದ್ದು ಒಂದು ಜನಾಂಗವನ್ನು ನಿಂದಿಸುವ ಶಬ್ದಗಳಿಂದ. ಅಂದು ನನ್ನ ಮನಸ್ಸಿನಲ್ಲಿ ವಿಪ್ಲವವೊಂದು ಆರಂಭಗೊಂಡಿತು. ಜಿಗುಪ್ಸೆಗೊಂಡ ನಾನು ಮೈಸೂರು ತಲುಪುವವರೆಗೂ ಮೌನದಿಂದಲೇ ಕುಳಿತುಬಿಟ್ಟಿದ್ದೆ.

ನನ್ನ ಮನಸ್ಸಿನಲ್ಲಿ ಎದ್ದ ವೈಚಾರಿಕ ಭಾವನೆಗಳು ಘನೀಭವಿಸಿ ರೂಪಪಡೆಯಲು ಪ್ರಾರಂಭವಾಗಿತ್ತು ಎನ್ನಬಹುದು. ಯಾವ ಪರಂಪರೆಯಲ್ಲಿಯೂ ಅದರಲ್ಲೂ ಭಾರತೀಯ ಪರಂಪರೆಯಲ್ಲಿ, ಅದು ನೈಜ ಸ್ವರೂಪದ್ದಾಗಿದ್ದರೆ, ಇನ್ನೊಂದು ಧರ್ಮಕ್ಕೆ ಸೇರಿದ ಜೀವಗಳ ಸಾವನ್ನ ಹಾಡಿನ ರೂಪದಲ್ಲಿ ವೈಭವಿ ಕರಿಸುತ್ತದೆಯೇ? ನನಗೆ ಗೊತ್ತಿದ್ದಂತೆ ನಮ್ಮ ಭಾರತೀಯ ಪರಂಪರೆಯ ಧರ್ಮದಲ್ಲಿ ಯಾವುದನ್ನ ಹಿಂದೂ ಅಂತ ಕರೆಯುತ್ತವೆಯೋ ಅದೊಂದು ಹನಿಹನಿಯಾಗಿ ಇಡೀ ಭೂಮಿಯನ್ನ ತಣಿಸುವ ಸೋನೆ ಮಳೆಯ ಹಾಗೆ ಅಲ್ಲವೇ? ಮಳೆ ಬಿದ್ದರೆ ಒಂದು ಪಂಗಡಕ್ಕಾಗಿ ಬೀಳುತ್ತದೆಯೇ? ಆದರೆ ಅದೇ ನೀರು ಶೇಖರಣೆಯಾಗಿ ಒಂದು ಗುಂಡಿಯಲ್ಲಿ ನಿಂತು, ಕೊಳೆತು ಬಗ್ಗಡವಾಗಿ ಕಾಯಿಲೆ ಹರಡಲು ಶುರುಮಾಡಿಬಿಟ್ಟರೆ? ಈ ರೀತಿಯ ದ್ವಂದ್ವಗಳು ನನ್ನನ್ನು ಕಾಡತೊಡಗಿತು.

ಇನ್ನು ಈ ವಾತಾವರಣದಲ್ಲಿದ್ದರೆ ನನ್ನ ಆಲೋಚನೆಗಳೂ ಇದೇ ರೀತಿ ಬಗ್ಗಡವಾಗಿಬಿಡಬಹುದು ಅನ್ನುವ ಭಯದಿಂದ ನಾನು ಆ ಸಭೆಗೆ ಹೋಗದೇ ವಾಪಸ್ಸು ಬೆಂಗಳೂರಿನ ಬಸ್ಸನ್ನು ಹತ್ತಿದೆ. ನಾನು ವಾಸಿಸುತ್ತಿದ್ದ ಸ್ಥಳಕ್ಕೆ ನನ್ನ ಬಟ್ಟೆ ಬರೆಯನ್ನು ತೆಗೆದುಕೊಳ್ಳುವುದಕ್ಕೂ ನಾನು ಅಲ್ಲಿಗೆ ಹೋಗಲಿಲ್ಲ.

ಇಲ್ಲಿಗೆ ಸಂಘದ ನನ್ನ ಎರಡನೇ ಇನ್ನಿಂಗ್ಸ್ ಕೂಡ ಕೊನೆಯಾಗಿತ್ತು. ಅದೇ ಕೊನೆಯಾಗಿತ್ತು.

ಕೆ ಶ್ರೀನಾಥ್

ಕೆ ಶ್ರೀನಾಥ್
ಮಾಜಿ ಕೈಗಾರಿಕೋದ್ಯಮಿ ಮತ್ತು ಹಾಲಿ ನಟ ಶ್ರೀನಾಥ್ ಈಗ ಸಾಹಿತ್ಯ ಕೃಷಿಯಲ್ಲಿ ನಿರತರಾಗಿದ್ದು, ಇತ್ತೀಚೆಗಷ್ಟೇ ಅವರು ಅನುವಾದಿಸಿರುವ ದಾಸ್ತೋವಸ್ಕಿಯ ’ಕರಮಜೋವ್ ಸಹೋದರರು’ ಪ್ರಕಟವಾಗಿದೆ.


ಇದನ್ನೂ ಓದಿ: ಆರ್‌ಎಸ್‌ಎಸ್‌ ಸಾಮಾಜಿಕ ನ್ಯಾಯದ ವಿರೋಧಿ, ಅದು ಮನುಸ್ಮೃತಿಯನ್ನು ನಂಬುತ್ತದೆ: ಮಲ್ಲಿಕಾರ್ಜುನ ಖರ್ಗೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...