Homeಕರ್ನಾಟಕಹಿಂದೆ ಹೇರಿಕೆಯ ವಿರುದ್ಧದ ಪ್ರತಿಭಟನೆಯನ್ನು ತಡೆದರೇಕೇ ಮನುಬಳಿಗಾರ್?

ಹಿಂದೆ ಹೇರಿಕೆಯ ವಿರುದ್ಧದ ಪ್ರತಿಭಟನೆಯನ್ನು ತಡೆದರೇಕೇ ಮನುಬಳಿಗಾರ್?

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಹಿಂದೆ ಹೇರಿಕೆಯ ವಿರುದ್ಧ ಇದೇ ಜೂನ್ 6ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯೊಂದು ನಡೆಯುತ್ತದೆ ಎಂದು ಘೋಷಿಸಲಾಗಿತ್ತು. ಆದರೆ, ಅದು ನಡೆಯಲಿಲ್ಲ. ತಮಿಳುನಾಡು ಇಂತಹ ವಿಚಾರ ಬಂದಾಗ, ಅಪೂರ್ವವಾದ ಒಗ್ಗಟ್ಟನ್ನು ಕಾಪಾಡಿಕೊಂಡು ಕೇಂದ್ರಕ್ಕೆ ಮುಟ್ಟಿಸಬೇಕಾದ ಸಂದೇಶ ಮುಟ್ಟಿಸಿಯೇ ತೀರುತ್ತದೆ. ಕರ್ನಾಟಕದಲ್ಲಿ ಹೀಗಾಗದ್ದಕ್ಕೆ ಕಾರಣವೇನು ಎಂಬುದರ ಅವಲೋಕನದ ಅಗತ್ಯವಿದೆ. ಅದೇನೇ ಇರಲಿ, ಜೂನ್ 6ರ ಪ್ರತಿಭಟನೆ ಏಕೆ ನಡೆಯಲಿಲ್ಲ ಎಂಬುದನ್ನು ನೋಡೋಣ. ಸ್ವತಃ ಈ ವರದಿಗಾರ ಹಾಜರಿದ್ದ ಪೂರ್ವಭಾವಿ ಸಭೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಜೂನ್ 4, ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್‍ನ ಸಭಾಂಗಣದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಸಾಹಿತಿಗಳೂ ಮತ್ತು ಕನ್ನಡ ಅಭಿಮಾನಿಗಳ ಸಭೆ ಕರೆದಿದ್ದರು. ಕರ್ನಾಟಕ ಕೈಗಾರಿಕ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟವು ಹಿಂದಿ ಹೇರಿಕೆಯ ವಿರುದ್ಧ 6ರಂದು ಪ್ರತಿಭಟನೆ ಮಾಡಬೇಕೆಂಬ ಕಾರಣಕ್ಕೇ ಕರೆದಿದ್ದ ಪೂರ್ವಭಾವಿ ಸಭೆ ಅದಾಗಿತ್ತು. ಈ ಸಭೆಯು ಹಿರಿಯರಾದ ತಿಮ್ಮಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಭೆಯಲ್ಲಿ ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಜಿ.ಸಿದ್ಧರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರ ಭೂಪತಿ, ಹಿರಿಯ ಸಾಹಿತಿ ಸಿದ್ದಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನುಬಳಿಗಾರ್, ಕರ್ನಾಟಕ ಕೈಗಾರಿಕೋದ್ಯಮ ಸಂಘಟನೆಗಳ ಮುಖಂಡರಾದ ಶ್ರೀಧರ್, ಕನ್ನಡ ಸಂಘದ ಭೀಮಶಂಕರ್ ಪಾಟೀಲ್ ಭಾಗವಹಿಸಿದ್ದರು.

ದಲಿತ ಕವಿ ಸಿದ್ದಲಿಂಗಯ್ಯನವರು ಮಾತನಾಡಿ ಹಿಂದಿ ಹೇರಿಕೆಯ ಕುರಿತ ಭಾಗವನ್ನು ಕೇಂದ್ರ ಸರ್ಕಾರವು ಮೊನ್ನೆ ವಾಪಸ್ಸು ತೆಗೆದುಕೊಂಡಿದ್ದೆವೆ ಎಂದಿದ್ದಾರೆ. ಆದರೆ ಅವರನ್ನು ನಾವು ನಂಬುವ ಹಾಗಿಲ್ಲ. ದಕ್ಷಿಣದಲ್ಲಿ ಕಪ್ಪು ಜನರಿದ್ದಾರೆ ನಾವು ಸಹಿಸಿಕೊಂಡಿಲ್ಲವೇ ಎಂದು ಕೇಳುವ ಉತ್ತರ ಭಾರತದ ರಾಜಕಾರಣಿಗಳಿದ್ದಾರೆ. ಒಂದು ಭಾಷೆಯನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡಲು ಹೋಗಿ ದೇಶಗಳೇ ಒಡೆದಿರುವ ಉದಾಹರಣೆಗಳಿವೆ. ನಮ್ಮಲ್ಲಿ ಹಾಗಾಗಬಾರದು. ಹಾಗಾಗಿ 6ನೇ ತಾರೀಖು ನಡೆಯುವ ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಹೇಳಿದರು.

ಎಸ್.ಜಿ.ಸಿದ್ದರಾಮಯ್ಯನವರು ಮಾತನಾಡಿ ದಕ್ಷಿಣ ರಾಜ್ಯದ ಭಾಷೆಗಳ ಮೇಲೆ ಹಿಡಿತ ಸಾಧಿಸಲು ಪದೇ ಪದೇ ಈ ರೀತಿ ನಡೆಯುತ್ತಿದೆ. ಇದಕ್ಕೆ ಸರಿಯಾದ ಬುದ್ಧಿ ಕಲಿಸಬೇಕಾದರೆ ಪ್ರತಿಭಟನೆ ಮಾಡಲೇಬೇಕು ಮತ್ತು ಒಕ್ಕೂಟಕ್ಕೆ ಗೌರವ ಬರಬೇಕು. ದೇಶ ಛಿದ್ರವಾಗಬಾರದು ಎಂದರೆ ಎಲ್ಲಾ ಭಾಷೆಗಳನ್ನು ಗೌರವಿಸುವುದು ಕಲಿಯಬೇಕು ಎಂದು ಹೇಳಿ ಕೇಂದ್ರದ ನೀತಿಗಳನ್ನು ಖಂಡಿಸಿದರು. 6ರ ಪ್ರತಿಭಟನೆಗೆ ಮಾಡಬೇಕಾದ ತಯಾರಿಯನ್ನು ಮಾಡಿಕೊಂಡು ಮುನ್ನುಗ್ಗೋಣ ಎಂದರು.

ಭೀಮಶಂಕರ್ ಪಾಟೀಲ್, ಅರುಣ್ ಜಾವಗಲ್, ಕ.ಸಾ.ಪ ಮಾಯಣ್ಣ ಮತ್ತು ಅಲ್ಲಿ ಬಂದಿದ್ದ ಸಾಕಷ್ಟು ಜನ ಪ್ರತಿಭಟನೆ ಮಾಡಬೇಕೆಂದರು. ಮತ್ತು ಇದರ ವಿರುದ್ಧ ಹಿಂದಿ ವಿರೋಧಿ ಕನ್ನಡ ಒಕ್ಕೂಟ ಮಾಡಿಕೊಂಡು ದೀರ್ಘಕಾಲದ ಹೋರಾಟ ಮಾಡಬೇಕೆಂಬುದೂ ಅಲ್ಲಿನ ಬಹುತೇಕರ ಅಭಿಪ್ರಾಯವಾಗಿತ್ತು. ಪುಸ್ತಕ ಪ್ರಾಧಿಕಾರದ ಅಧಕ್ಷತೆ ವಸುಂಧರ ಭೂಪತಿಯವರು ಮಾತ್ರ ‘ಹಿಂದಿ ಹೇರಿಕೆಯ ವಿರುದ್ಧ ಎಲ್ಲಾ ಕಡೆ ಧ್ವನಿ ಬಂದಿದ್ದಕ್ಕಾಗಿ ವಾಪಸ್ಸು ತೆಗೆದುಕೊಂಡಿದ್ದಾರೆ ಹಾಗಾಗಿ ಪ್ರತಿಭಟನೆ ನಂತರ ಮಾಡೋಣ’ ಎಂದರು.

ಕಸಾಪ ಅಧ್ಯಕ್ಷ ಮನು ಬಳಿಗಾರ್ ಅವರು ಮಾತನಾಡಿದರು. ಅವರ ಮಾತಿನಲ್ಲಿ ಹಿಂದಿ ಹೇರಿಕೆಯ ಕುರಿತ ಯಾವ ಸಿಟ್ಟೂ ಇರಲಿಲ್ಲ. ಸದ್ಯಕ್ಕೆ ರಾಷ್ಟ್ರೀಯ ಶಿಕ್ಷಣ ನೀತಿಯ ವೆಬ್ ಸೈಟ್‍ನಿಂದ ಇದನ್ನ ತೆಗೆದಿರುವುದರಿಂದ ಪ್ರತಿಭಟನೆಯ ಅವಶ್ಯಕತೆ ಇಲ್ಲ ಎಂದು ಹೇಳಿದರು. ಇದರ ಬಗ್ಗೆ ಹಲವರು ಅಸಮಾಧಾನಗೊಂಡು ಪ್ರಶ್ನಿಸಿದಾಗ, ಕಾರಣ ಇಲ್ಲದೇ ಪ್ರತಿಭಟನೆ ಬೇಡ ಎಂದು ಹೇಳಿ ಮುಗಿಸಿದರು. ಕೆಲವರು ಅವರ ಬೆಂಬಲಕ್ಕೆ ನಿಂತರು. ಕೊನೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ತಿಮ್ಮಯ್ಯನವರು ಕೂಡ ಮನು ಬಳಿಗಾರ್ ಅಭಿಪ್ರಾಯವನ್ನೇ ಮುಂದಿಟ್ಟರು.

ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ನಡೆದ ಸಭೆಯಾಗಿದ್ದು, ಜೊತೆಗೆ ಕಸಾಪ ರಾಜ್ಯಾಧ್ಯಕ್ಷರ ಮಾತಿಗೆ ಹೆಚ್ಚಿನ ಮಹತ್ವವಿರುತ್ತದೆ. ಕನ್ನಡದ ಪ್ರಾತಿನಿಧಿಕ ಸಂಸ್ಥೆಯಾಗಿರುವ ಇದರ ಅಧ್ಯಕ್ಷರಾಗಿರುವವರು ಇನ್ನೂ ಹೆಚ್ಚಿನ ಜವಾಬ್ದಾರಿಯಿಂದ ವರ್ತಿಸಬೇಕೆಂಬುದು ಸಭೆಯಿಂದ ಹೊರಗೆ ಬಂದ ನಂತರ ಹೆಚ್ಚಿನವರ ಅನಿಸಿಕೆಯಾಗಿತ್ತು. ಏಕೆಂದರೆ, ಇದು ಕೇವಲ ಹಿಂದಿ ಹೇರಿಕೆಯ ಪ್ರಶ್ನೆಯಾಗಿರದೇ, ಈಗಾಗಲೇ ಕರ್ನಾಟಕದ ನೆಲದ ಎರಡು ಬ್ಯಾಂಕುಗಳು (ಮೈಸೂರು ಬ್ಯಾಂಕ್ ಮತ್ತು ವಿಜಯಾ ಬ್ಯಾಂಕ್) ನಷ್ಟದಲ್ಲಿರುವ ಬೇರೆ ರಾಜ್ಯಗಳ ಬ್ಯಾಂಕುಗಳಲ್ಲಿ ವಿಲೀನವಾಗಬೇಕಾಗಿ ಬಂದಿದೆ. ಜಿಎಸ್‍ಟಿಯ ನಂತರ ರಾಜ್ಯಗಳು ಆರ್ಥಿಕವಾಗಿಯೂ ಕೇಂದ್ರದ ಮರ್ಜಿಯಲ್ಲಿರಬೇಕಾಗುತ್ತದೆ. ಹಾಗಾಗಿ ಹಿಂದಿ ಹೇರಿಕೆಯ ವಿಚಾರದಲ್ಲಿ ನಡೆಯಬಹುದಾಗಿದ್ದ ಪ್ರತಿಭಟನೆಯು ಸರಿಯಾದ ಸಂದೇಶವನ್ನೇ ನೀಡುತ್ತಿತ್ತು.

ಆದರೆ, ಅದಾಗದಂತೆ ಪೂರ್ವಭಾವಿ ಸಭೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ಮನು ಬಳಿಗಾರ್. ಉಳಿದ ಕನ್ನಡಪರ ಸಂಘಟನೆಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಹೋರಾಟ ಮುಂದುವರೆಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅನಿಲ್ ಕುಮಾರ್ ಚಿಕ್ಕ ದಾಳವಟ್ಟ ಅವರ ಸುದ್ದಿಗೆ ಕುತೂಹಲ ಕೆರಳಿಸುವ ಶೀರ್ಷಿಕೆ ಕೊಟ್ಟು ಅದಕ್ಕೆ ಉತ್ತರ ಕೊಟ್ಟಿಲ್ಲ.
    ಹಿಂದಿ ಹೇರಿಕೆ ವಿರುದ್ಧ ಕನ್ನಡ ಜನ ಒಗ್ಗಟ್ಟಿನಿಂದ ಪ್ರತಿಭಟಿಸುವ ಅನಿವಾರ್ಯತೆ ಉಂಟಾಗಿದೆ. ಆ ವಿಷಯಗಳನ್ನು ಚೆನ್ನಾಗಿ ತಿಳಿಸಿದ್ದಾರೆ.
    ಧನ್ಯವಾದಗಳು ಸರ್.

LEAVE A REPLY

Please enter your comment!
Please enter your name here

- Advertisment -

‘ವೆಟ್ಟುವಂ’ ಪಾ.ರಂಜಿತ್ ಅವರ ಅದ್ಭುತ ಅಪೋಕಲಿಪ್ಟಿಕ್ ಆಕ್ಷನ್ ಸಿನಿಮಾ: ರಂಗನಾಥ್ ಆರ್. ವಿ

ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ವೆಟ್ಟುವಂ' ಚಿತ್ರವನ್ನು 'ಲರ್ನ್ ಆಂಡ್ ಟೀಚ್ ಪ್ರೊಡಕ್ಷನ್' ಸಂಸ್ಥೆಯ ಸಹಯೋಗದೊಂದಿಗೆ, ಪಾ.ರಂಜಿತ್ ಅವರ 'ನೀಲಂ ಪ್ರೊಡಕ್ಷನ್ಸ್' ನಿರ್ಮಿಸಿದೆ. ಈ ಚಿತ್ರದ ಜಗತ್ತನ್ನು ಪರಿಚಯಿಸುವ...

SIR ಮೋಸ: ಅಗತ್ಯಬಿದ್ದರೆ ಕಾಂಗ್ರೆಸ್‌ನಿಂದ ಕಾನೂನು ಹೋರಾಟ ಬಿ.ಕೆ. ಹರಿಪ್ರಸಾದ್ ಎಚ್ಚರಿಕೆ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ 2026ರ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಭಾರಿ ಪ್ರಮಾಣದ ತಾಂತ್ರಿಕ ಲೋಪಗಳು, ಅಂಕಿಅಂಶಗಳ ವ್ಯತ್ಯಾಸ ಹಾಗೂ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ಪಷ್ಟತೆಯ ಕೊರತೆ ಎದ್ದುಕಾಣುತ್ತಿದೆ ಎಂದು...

ವಿಚಾರಣೆಯಿಲ್ಲದೆ ಆರು ವರ್ಷ ಜೈಲುವಾಸ: ಉಮರ್ ಖಾಲಿದ್ ಹೋರಾಟದ ಹಾದಿ

ಸೆಪ್ಟೆಂಬರ್ 13, 2020 ರಂದು, ಮಾನವ ಹಕ್ಕುಗಳ ಯುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ದೇಶದ ರಾಜಧಾನಿಯಲ್ಲಿ ಗುರಿಯಾಗಿಸಿಕೊಳ್ಳಲಾಯಿತು. ವಿಚಾರಣೆಯೇ ಇಲ್ಲದೆ ಅವರು ಜೈಲಿನಲ್ಲಿ ಆರು ವರ್ಷಗಳನ್ನು ಪೂರೈಸಿದ್ದಾರೆ. ಸರ್ಕಾರದ ವಿರುದ್ಧದ ರಾಜಕೀಯ...

ಕನ್ವರ್ ಯಾತ್ರೆ ವೇಳೆ 18 ದ್ವೇಷ ಘಟನೆಗಳು: ಮುಸ್ಲಿಮರು, ಅವರ ವ್ಯಾಪಾರಗಳನ್ನು ಗುರಿಯಾಗಿಸಿಕೊಂಡ ಪ್ರಕರಣಗಳೇ ಹೆಚ್ಚು; APCR ವರದಿ

ನವದೆಹಲಿ: 2026ರ ಕನ್ವರ್ ಯಾತ್ರೆಯ 13 ದಿನಗಳ ಅವಧಿಯಲ್ಲಿ ಹಿಂಸಾಚಾರ, ಬಲವಂತ, ತಾರತಮ್ಯ, ಆರ್ಥಿಕ ಬಹಿಷ್ಕಾರ ಹಾಗೂ ಸಾರ್ವಜನಿಕ ಅಶ್ಲೀಲ ವರ್ತನೆಗೆ ಸಂಬಂಧಿಸಿದ ಕನಿಷ್ಠ 18 ಘಟನೆಗಳು ವರದಿಯಾಗಿವೆ ಎಂದು ನಾಗರಿಕ ಹಕ್ಕುಗಳ...

ಸಿಐಟಿಯು ಕಾನೂನು ಹೋರಾಟಕ್ಕೆ ಮೊದಲ ಜಯ: ಕನಿಷ್ಠ ವೇತನ ತಡೆಹಿಡಿದಿದ್ದ ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ

ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು...

ಟಿಎಂಸಿ ಹೆಸರು, ಚಿಹ್ನೆ ಫ್ರೀಜ್: ಮಮತಾ ಬ್ಯಾನರ್ಜಿಗೆ ‘ಫುಟ್‌ಬಾಲ್ ಪ್ಲೇಯರ್’, ಬಂಡಾಯ ಬಣಕ್ಕೆ ‘ಲಕೋಟೆ’ ಚಿಹ್ನೆ ನೀಡಿದ ಚುನಾವಣಾ ಆಯೋಗ

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂಲ ಹೆಸರು ಮತ್ತು ಸಾಂಪ್ರದಾಯಿಕ 'ಹೂವು-ಹುಲ್ಲು' ಚಿಹ್ನೆಯನ್ನು ಮುಟ್ಟುಗೋಲು (ಫ್ರೀಜ್) ಹಾಕಿದ ನಂತರ, ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಎರಡೂ ಎದುರಾಳಿ ಬಣಗಳಿಗೆ ಪ್ರತ್ಯೇಕ ಮಧ್ಯಂತರ ಹೆಸರು...

‘ರೋಹಿತ್ ವೇಮುಲಾ ಸ್ಥಿತಿ ನನಗೆ ಬಾರದಿರಲಿ..’; ವಿದೇಶದಲ್ಲಿ ಕಷ್ಟಕ್ಕೆ ಸಿಲುಕಿದ ತಮಿಳುನಾಡಿನ ದಲಿತ ಸಂಶೋಧಕ

ಮಲೇಷ್ಯಾದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ತಮಿಳುನಾಡಿನ ದಲಿತ ಸಂಶೋಧನಾ ವಿದ್ಯಾರ್ಥಿ ಭಾರತಿ ದಾಸನ್ ರಾಮನ್, ತಮಿಳುನಾಡು ಸರ್ಕಾರದ ಸಾಮಾಜಿಕ ನ್ಯಾಯ ಇಲಾಖೆಯು ನನ್ನನ್ನು ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು 'ದಿ ನ್ಯೂಸ್‌ ಮಿನಿಟ್'...

DUSU ಚುನಾವಣೆ: ಮತದಾನ ಆರಂಭ; ವಿಜಯೋತ್ಸವ ಮೆರವಣಿಗೆಗೆ ದೆಹಲಿ ಹೈಕೋರ್ಟ್ ತಡೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (DUSU) 2026-27ನೇ ಸಾಲಿನ ಚುನಾವಣೆಗೆ ಶುಕ್ರವಾರ (ಸೆ.18) ಮತದಾನ ಆರಂಭವಾಗಿದೆ. ಬೆಳಗಿನ ಅವಧಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 8:30ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ ಕಾಲೇಜುಗಳ ವಿದ್ಯಾರ್ಥಿಗಳಿಗೆ...

ಕರಾವಳಿ ಇತಿಹಾಸದಲ್ಲೇ ಪ್ರಥಮ: ಮಂಗಳೂರಿನಲ್ಲಿ ಸಿಎಂ ‘ಡಿ.ಕೆ ಶಿವಕುಮಾರ್’ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ

ಕರಾವಳಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ (Cabinet) ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಪಡೀಲ್‌ನಲ್ಲಿರುವ ನೂತನ 'ಪ್ರಜಾ ಸೌಧ'ದಲ್ಲಿ (ಜಿಲ್ಲಾಡಳಿತ ಸೌಧ) ಶುಕ್ರವಾರ ವಿಜೃಂಭಣೆಯಿಂದ ಆರಂಭವಾಗಿದೆ....

ಟಿಎಂಸಿ ಹೆಸರು, ಚಿಹ್ನೆ ಬಳಕೆಗೆ ತಡೆ: ಚುನಾವಣಾ ಆಯೋಗದ ಆದೇಶ ‘ಕಾನೂನಿಗೆ ವಿರುದ್ಧ’ ಎಂದ ಮಮತಾ ಬಣ, ಆದೇಶ ಸ್ವಾಗತಿಸಿದ ಬಂಡಾಯ ಪಾಳಯ 

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತ ರಾಜಕಾರಣದಲ್ಲಿ ಪ್ರಮುಖ ಶಕ್ತಿಯಾಗಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ)ಯ ಆಂತರಿಕ ಬಿಕ್ಕಟ್ಟು ಇದೀಗ ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯ ಮೇಲಿನ ಹಕ್ಕಿನ ಸಂಘರ್ಷವಾಗಿ ತೀವ್ರಗೊಂಡಿದೆ. ಟಿಎಂಸಿಯ ಎರಡು...