Homeಕರ್ನಾಟಕಹಿಜಾಬ್ ಧರಿಸಿದ ಪುಟಾಣಿಯನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌

ಹಿಜಾಬ್ ಧರಿಸಿದ ಪುಟಾಣಿಯನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌

- Advertisement -
- Advertisement -

ಶಾಂತವಾಗಿದ್ದ ಶಾಲಾ ಅಂಗಳವನ್ನು ಕೋಮು ಕೇಂದ್ರಗಳನ್ನಾಗಿ ಮಾಡುವತ್ತ ಕನ್ನಡ ಮಾಧ್ಯಮಗಳು ಯತ್ನಿಸುತ್ತಿವೆಯೇ? ಮಕ್ಕಳ ಮೇಲಾಗುವ ದುಷ್ಪರಿಣಾಮಗಳನ್ನು ಮಾಧ್ಯಮಗಳು ಯೋಚಿಸುತ್ತಿಲ್ಲವೇ? ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದರೂ ಮಕ್ಕಳ ಹಕ್ಕುಗಳ ಆಯೋಗ ಏನು ಮಾಡುತ್ತಿದೆ ಎಂಬ ಪ್ರಶ್ನೆಗಳು ಮೂಡಿವೆ.

ಹಿಜಾಬ್‌ ಧರಿಸಿಲ್ಲವೆಂದು ತೋರಿಸುತ್ತಾ, ಮಕ್ಕಳನ್ನು ಭೀತಿಗೆ ತಳ್ಳಲಾಗುತ್ತಿರುವ ಬೆಳವಣಿಗೆಗಳ ನಡುವೆ ವರದಿಗಾರನೊಬ್ಬನ ದುಷ್ಕೃತ್ಯ ಮನಸಾಕ್ಷಿ ಇದ್ದವರನ್ನೆಲ್ಲ ಡಿಸ್‌ಡರ್ಬ್ ಮಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್‌ ಆಗಿದ್ದು, ಇಂತಹ ವರ್ತನೆಗಳ ವಿರುದ್ಧ ಕ್ರಮ ಜರುಗಿಸಬೇಕೆಂಬ ಕೂಗು ಕೇಳಿಬಂದಿದೆ.

ಮತ್ತೊಂದೆಡೆ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ತಿರುಚಿ ಅಥವಾ ತಪ್ಪಾಗಿ ಅರ್ಥ ಮಾಡಿಕೊಂಡು ಮಕ್ಕಳನ್ನು ತಪಾಸಣೆ ಮಾಡಲಾಗುತ್ತಿದೆ. ಶಿಕ್ಷಣ ತಜ್ಞರಾದ ಡಾ.ವಿ.ಪಿ.ನಿರಂಜನಾರಾಧ್ಯ ಹಾಗೂ ಹೈಕೋರ್ಟ್ ಹಿರಿಯ ವಕೀಲರಾದ ಎಸ್.ಬಾಲನ್‌ ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. “ಹೈಕೋರ್ಟ್ ಆದೇಶ, ವಿವಾದಿತ ಕಾಲೇಜುಗಳಿಗೆ ಮಾತ್ರ ಸಂಬಂಧಿಸಿದ್ದು, ಆದರೆ ಇಡೀ ಶಾಲಾ ಕಾಲೇಜುಗಳಿಗೆಲ್ಲ ಅನ್ವಯಿಸುತ್ತದೆ ಎಂಬಂತೆ ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ” ಎಂದು ವಿ.ಪಿ.ನಿರಂಜನಾರಾಧ್ಯ ಹಾಗೂ ಎಸ್.ಬಾಲನ್‌ ಹೇಳಿದ್ದಾರೆ.

ಉರಿವ ಬೆಂಕಿಗೆ ತುಪ್ಪ ಸುರಿಯುವ, ಆಗಿರುವ ಗಾಯಕ್ಕೆ ಉಪ್ಪು ಸವರುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿರುವುದು ಸುಳ್ಳಲ್ಲ. ಈಗ ಸದ್ಯಕ್ಕೆ ‘ಈ ಟಿ.ವಿ. ಭಾರತ್‌ ಕನ್ನಡ ಮಾಧ್ಯಮ’ದ ಶಿವಮೊಗ್ಗ ವರದಿಗಾರರೊಬ್ಬರು ಮಾಡಿರುವ ಯಡವಟ್ಟು ಗಂಭೀರವಾಗಿ ಚರ್ಚೆಯಾಗುತ್ತಿದೆ.

“ಶಿವಮೊಗ್ಗದ ​ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ವಾಪಸ್​ ಆದ ಘಟನೆ ಇಂದು ನಡೆದಿದೆ. ಬಿ.ಹೆಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ 9ನೇ ತರಗತಿಯ ವಿದ್ಯಾರ್ಥಿನಿಯರು ಮನೆಗೆ ವಾಪಸ್ ಆಗಿದ್ದಾರೆ” ಎಂದು ವರದಿ ಮಾಡಿರುವ ಈ.ಟಿ.ವಿ. ಭಾರತ್‌, ಒಂದು ಹೆಣ್ಣು ಮಗುವನ್ನು ಹಿಂಬಾಲಿಸಿ ಮಾಡಿರುವ ವಿಡಿಯೊವನ್ನೂ ಸುದ್ದಿಯಲ್ಲಿ ಲಗತ್ತಿದೆ. ಇದಕ್ಕಿಂತ ಮುಖ್ಯವಾಗಿ ಆ ಪುಟಾಣಿಯನ್ನು ಓಡಿಸಿಕೊಂಡು ಹೋಗುತ್ತಾ, ಈ ಟಿ.ವಿ.ಭಾರತ್‌ ವರದಿಗಾರ ಫೋಟೋ ತೆಗೆದುಕೊಳ್ಳುವುದು ಮತ್ತೊಂದು ಮಾಧ್ಯಮದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿರಿ: ಆದೇಶ ಅರಿಯದೆ ಮಕ್ಕಳ ಮೇಲೆ ಮಾಧ್ಯಮಗಳ ಸವಾರಿ: ಅಧಿಕಾರಿಗಳ ಬೇಸರ

ಹಿಜಾಬ್‌ ಧರಿಸಿ ಹೋಗುತ್ತಿರುವ ಮಗುವನ್ನು ಹಿಂಬಾಲಿಸಿ ಮಾಡಿರುವ ವಿಡಿಯೊವನ್ನು ವರದಿಯಲ್ಲಿ ಕಾಣಬಹುದು. ಜೊತೆಗೆ ಶಾಲೆಯ ಒಳಗೆ ಇನ್ನಿಬ್ಬರು ಆ ಮಗುವಿನ ಫೋಟೋಗಳನ್ನು ಕ್ಲಿಕ್ಕಿಸುವುದೂ ಈ.ಟಿ.ವಿ. ಭಾರತ್ ವಿಡಿಯೊದಲ್ಲಿ ದಾಖಲಾಗಿದೆ.

“ಈ ರೀತಿಯ ವರದಿಗಾರಿಕೆ ಮಾಡಬಾರದಲ್ಲವೇ?” ಎಂದು ‘ನಾನುಗೌರಿ.ಕಾಂ’ ತಂಡ ಈ.ಟಿ.ವಿ. ಭಾರತ್‌ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಸುದರ್ಶನ್‌ ದಾಮ್ಲೆ ಅವರಲ್ಲಿ ಕೇಳಿದಾಗ, “ಈ ವಿಡಿಯೊದ ಹಿಂದಿನ ಹಾಗೂ ಮುಂದಿನ ಬೆಳವಣಿಗೆಗಳು ಏನಾಗಿದ್ದವು ಎಂಬುದನ್ನು ಪರಿಶೀಲಿಸಲಾಗುವುದು. ಇದು ನಮ್ಮ ಗಮನಕ್ಕೆ ಬಂದಿದೆ. ನಾಳೆ ಮೀಟಿಂಗ್‌ನಲ್ಲಿ ಚರ್ಚಿಸಲಾಗುವುದು” ಎಂದಿದ್ದಾರೆ.

ಇಂತಹ ವರ್ತನೆಗಳಿಗೆ ಶಿಕ್ಷೆ ಇಲ್ಲವೆ? ಮಕ್ಕಳ ಹಕ್ಕುಗಳ ಆಯೋಗ ಏನು ಮಾಡುತ್ತಿದೆ?

ಹಿಜಾಬ್‌- ಕೇಸರಿ ಶಾಲು ವಿವಾದ ಬಂದ ಮೇಲೆ ಮಕ್ಕಳ ಹಕ್ಕುಗಳು ಪದೇ ಪದೇ ಉಲ್ಲಂಘನೆಯಾಗುತ್ತಲೇ ಇವೆ. ಆದರೆ ಇಲ್ಲಿಯವರೆಗೆ ಒಂದೇ ಒಂದು ಪ್ರಕರಣವನ್ನು ಈ ಸಂಬಂಧ ಮಕ್ಕಳ ಹಕ್ಕುಗಳ ಆಯೋಗ ದಾಖಲಿಸಿಲ್ಲ. ಹೋರಾಟನಿರತ ಬಾಲಕಿಯರ ಹೆಸರುಗಳನ್ನು ಪ್ರಕಟಿಸಿ ಬಿಜೆಪಿಯ ಅಧಿಕೃತ ಟ್ವಿಟರ್‌ ಖಾತೆ ವಿಕೃತಿ ಮೆರೆಯಲಾಗಿದೆ. ಇದೆಲ್ಲವನ್ನೂ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಡಾ.ಜಯಶ್ರೀ ಅವರ ಗಮನಕ್ಕೂ ನಾನುಗೌರಿ.ಕಾಂ ತಂಡ ತಂದಿದೆ. ನಮ್ಮೊಂದಿಗೆ ಮಾತನಾಡಿದ ಅವರು, ಈ ಕುರಿತು ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ.

ಶಿಕ್ಷಣ ತಜ್ಞರಾದ ವಿ.ಪಿ.ನಿರಂಜನಾರಾಧ್ಯ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯೆ ನೀಡಿ, “ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಕ್ರಮ ವಹಿಸಿ ನ್ಯಾಯಾಂಗದ ಆದೇಶವನ್ನು ಇಲಾಖೆಯ ಅಧಿಕಾರಿಗಳಿಗೆ ತಿಳಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿರಿ: ಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮಾದ್ಯಮದ ಕೆಲವರು ತಮ್ಮನ್ನು ತಾವೇ ಸರ್ವಶಕ್ತರೂ, ಸರ್ವಜ್ಞ ಮೂರ್ತಿಗಳು ಎಂದು ತಿಳಿದು, ಅಮಾನವೀಯವಾಗಿ, ಮನುವಾದಿಗಳ ಬಾಲಬಡುಕರಂತೆ ವರ್ತಿಸುತ್ತಿರುವುದು ಕಂಡನಾರ್ಹ.

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...