Homeಮುಖಪುಟಕೇಜ್ರಿವಾಲ್‌ 'ಅಂಗಾಂಗ ವೈಫಲ್ಯಗೊಳಿಸಿ ನಿಧಾನವಾಗಿ ಸಾವಿಗೆ ತಳ್ಳಲು ಸಂಚು ರೂಪಿಸಲಾಗುತ್ತಿದೆ': ಎಎಪಿ

ಕೇಜ್ರಿವಾಲ್‌ ‘ಅಂಗಾಂಗ ವೈಫಲ್ಯಗೊಳಿಸಿ ನಿಧಾನವಾಗಿ ಸಾವಿಗೆ ತಳ್ಳಲು ಸಂಚು ರೂಪಿಸಲಾಗುತ್ತಿದೆ’: ಎಎಪಿ

- Advertisement -
- Advertisement -

ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ನಿಧಾನವಾಗಿ ಸಾವಿನತ್ತ ತಳ್ಳಲಾಗುತ್ತಿದೆ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಜೈಲಿನೊಳಗೆ ಇನ್ಸುಲಿನ್ ಮತ್ತು ಕೇಜ್ರಿವಾಲ್ ಅವರ ವೈದ್ಯರ ಸಮಾಲೋಚನೆಗೆ ಅನುಮತಿಗೆ ಒತ್ತಾಯಿಸಿ ಎಎಪಿಯ ಮನವಿಯ ಕುರಿತು ದೆಹಲಿ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದ ಒಂದು ದಿನದ ನಂತರ ಈ ಹೇಳಿಕೆ ಹೊರಬಿದ್ದಿದೆ.

ಟೈಪ್ -2 ಡಯಾಬಿಟಿಸ್‌ನಿಂದ ಬಳಲುತ್ತಿರುವ ಅರವಿಂದ್ ಕೇಜ್ರಿವಾಲ್‌ಗೆ ಜೈಲು ಆಡಳಿತವು ಇನ್ಸುಲಿನ್ ನಿರಾಕರಿಸುತ್ತಿದೆ ಎಂಬ ತಮ್ಮ ಪಕ್ಷದ ಆರೋಪವನ್ನು ಎಎಪಿ ನಾಯಕ ಸೌರಭ್ ಭಾರದ್ವಾಜ್ ಪುನರುಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಉಲ್ಲೇಖಿಸಿದ ಸೌರಭ್ ಭಾರದ್ವಾಜ್, ಕೇಜ್ರಿವಾಲ್ ಅವರ ನಿಧಾನಗತಿಯ ಸಾವಿಗೆ ಪಿತೂರಿ ನಡೆಯುತ್ತಿದೆ ಎಂದು ನಾನು ಸಂಪೂರ್ಣವಾಗಿ ಜವಾಬ್ದಾರಿಯಿಂದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ. ಅರವಿಂದ್ ಕೇಜ್ರಿವಾಲ್‌ಗೆ ಇನ್ಸುಲಿನ್ ನಿರಾಕರಿಸಿದ್ದಕ್ಕಾಗಿ ತಿಹಾರ್ ಜೈಲು ಆಡಳಿತ, ಬಿಜೆಪಿ, ಕೇಂದ್ರ ಮತ್ತು ದೆಹಲಿ ಲೆಪ್ಟಿನೆಂಟ್‌ ಗವರ್ನರ್‌ ವಿರುದ್ಧ ಸೌರಭ್ ಭಾರದ್ವಾಜ್ ವಾಗ್ದಾಳಿ ನಡೆಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಕಾರಣ ಮುಂದಿಟ್ಟು ಜಾಮೀನಿಗೆ,  ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ಮಾವಿನಹಣ್ಣು, ಆಲೂ-ಪೂರಿ ಮತ್ತು ಸಕ್ಕರೆಯನ್ನು ಚಹಾದಲ್ಲಿ ಸೇವಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಅರವಿಂದ್ ಕೇಜ್ರಿವಾಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ, ಜಾಮೀನಿಗಾಗಿ ದೆಹಲಿ ಸಿಎಂ ಪಾರ್ಶ್ವವಾಯು ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ ಎಂದು ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಹೇಳಿದ್ದು, ಅವರು ನಿಯಮಿತವಾಗಿ ಮಾವಿನ ಹಣ್ಣುಗಳನ್ನು ತಿನ್ನುತ್ತಿದ್ದಾರೆ ಎಂಬ ಇಡಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ. ಅರವಿಂದ್‌ ಕೇಜ್ರಿವಾಲ್‌ಗೆ ಮನೆಯಿಂದ ಕಳುಹಿಸಲಾದ 48 ಊಟಗಳಲ್ಲಿ ಮೂರು ಬಾರಿ ಮಾತ್ರ ಮಾವಿನ ಹಣ್ಣುಗಳು ಇದ್ದವು ಎಂದು ಅಭಿಷೇಕ್ ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದ್ದರು.

ನಾನು ನನ್ನ ಚಹಾದಲ್ಲಿ ಸಕ್ಕರೆ ಬಳಸುವುದಿಲ್ಲ. ಜಾರಿ ನಿರ್ದೇಶನಾಲಯದ ಆರೋಪ ಎಷ್ಟು ಕ್ಷುಲ್ಲಕ, ರಾಜಕೀಯ ಮತ್ತು ಹಾಸ್ಯಾಸ್ಪದವಾಗಿದೆ? ಅವರ ಹೇಳಿಕೆಗಳು ಸಂಪೂರ್ಣವಾಗಿ ಸುಳ್ಳು ಮತ್ತು ದುರುದ್ದೇಶಪೂರಿತವಾಗಿವೆ. ನೀವು ಮಾಧ್ಯಮದಲ್ಲಿ ಸಾಕಷ್ಟು ಪ್ರಭಾವ ಬೀರಿರುವ ಕಾರಣದಿಂದ ‘ನಾನು ಆಲೂ ಪೂರಿ ತಿನ್ನುತ್ತಿದ್ದೇನೆ’ ಎಂದು ಪ್ರಕಟಿಸಲು ಸಾಧ್ಯವಾಗುತ್ತದೆ. ವೈದ್ಯರು ಸಿದ್ಧಪಡಿಸಿದ ಡಯಟ್ ಚಾರ್ಟ್‌ನ ಪ್ರಕಾರ ಆಹಾರವನ್ನು ನಾನು ಸೇವಿಸುತ್ತಿದ್ದೇನೆ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕೇಜ್ರಿವಾಲ್ ಅವರನ್ನು ಬಹು ಅಂಗಾಂಗ ಹಾನಿ ಮಾಡಿಸಿ ನಿಧಾನವಾಗಿ ಸಾವಿನತ್ತ ತಳ್ಳುವ ಉದ್ದೇಶವನ್ನು ಅವರು ಹೊಂದಿದ್ದಾರೆ. ಜೈಲಿನಿಂದ ಹೊರಬಂದ 2-4 ತಿಂಗಳ ನಂತರ ಕೇಜ್ರಿವಾಲ್‌ ಅವರು ಮೂತ್ರಪಿಂಡ, ಹೃದಯ ಮತ್ತು ಇತರ ಅಂಗಗಳ ಚಿಕಿತ್ಸೆಗೆ ಒಳಪಡಲಿದ್ದಾರೆ ಎಂದು ಭಾರದ್ವಾಜ್ ಆರೋಪಿಸಿದ್ದಾರೆ.

ದೆಹಲಿಯ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಸಿಎಂ  ಅರವಿಂದ್ ಕೇಜ್ರಿವಾಲ್ ಅವರನ್ನು ಕಳೆದ ತಿಂಗಳು ಬಂಧಿಸಲಾಗಿತ್ತು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಆಳವಾದ ಪಿತೂರಿ ನಡೆಸಲಾಗುತ್ತಿದೆ ಮತ್ತು ಜೈಲಿನಲ್ಲಿ ಅವರಿಗೆ ಏನು ಬೇಕಾದರೂ ಆಗಬಹುದು ಎಂದು ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ನಿನ್ನೆ ಆರೋಪಿಸಿದ್ದರು.

ಇದನ್ನು ಓದಿ: ಕೀಟನಾಶಕ ರಾಸಾಯನಿಕ ಬಳಕೆ ಆರೋಪ: ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ನಿಷೇಧಿಸಿದ ಸಿಂಗಾಪುರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...