Homeಮುಖಪುಟರಫಿ ಹಾಡುಗಳಿಗೆ ಕನ್ನಡ ಸ್ಪರ್ಶ

ರಫಿ ಹಾಡುಗಳಿಗೆ ಕನ್ನಡ ಸ್ಪರ್ಶ

- Advertisement -
- Advertisement -

ಮಹಮ್ಮದ್ ರಫಿ, ಮುಖೇಶ್ ಕುಮಾರ್, ಕಿಶೋರ್ ಕುಮಾರ್, ಮಹೇಂದ್ರ ಕಪೂರ್, ಲತಾ ಮಂಗೇಶ್ಕರ್ ಇವೆಲ್ಲ ಕೇವಲ ಹೆಸರುಗಳಷ್ಟೇ ಅಲ್ಲ, ಬದಲಿಗೆ ಭಾರತೀಯ ಸಂಗೀತಾಸಕ್ತರ ಪಾಲಿಗೆ ದಶಕಗಳ ಕಾಲ ಜೀವ ತಣಿಸುವ ನಾಡಿಮಿಡಿತವೇ ಆಗಿಹೋಗಿದ್ದ ಅಚ್ಚರಿಗಳು.

ದೂರದರ್ಶನ ಆಗಿನ್ನು ದೂರದ ಮಾತು ಬಿಡಿ, ಅಂತಹ ಕಾಲದಲ್ಲಿ ರೇಡಿಯೋ ಮೂಲಕ ದೇಶದ ಮೂಲೆಮೂಲೆಗೂ ಸಂಗೀತವನ್ನು ತಲುಪಿಸಿದ, ಹಿಂದಿ-ಉರ್ದು ಭಾಷೆಯ ಪರಿಚಯ ಇಲ್ಲದವರ ಬಾಯಲ್ಲೂ ಅಪರೂಪದ ಚಿತ್ರಗೀತೆಗಳನ್ನು, ಘಜಲ್‌ಗಳನ್ನು ಗುನುಗಿಸಿದ ಕೀರ್ತಿ ಈ ಎಲ್ಲಾ ಸಂಗೀತ ದಿಗ್ಗಜರಿಗೆ ಸಲ್ಲುತ್ತದೆ.

ಅದರಲ್ಲೂ 50ರಿಂದ 70ರ ದಶಕಗಳಲ್ಲಿ, ಭಾರತದಲ್ಲಿ ಮಹಮ್ಮದ್ ರಫಿ ಉಂಟುಮಾಡಿದ್ದ ಮೋಡಿ ಇದೆಯಲ್ಲ ಅದನ್ನು ಪದಗಳಲ್ಲಿ ಹಿಡಿದಿಡುವುದು ಅಷ್ಟು ಸುಲಭದ ಮಾತಲ್ಲ.

ಗಣೇಶ್ ಪ್ರಸಾದ್

ದಿಲ್ ಕೆ ಜಾ ರೋಕೆ ಮೆ, ಯೇ ಮೇರಾ ಪ್ರೇಮ್ ಪತ್ರ ಪದಕಾರ್, ಯೇ ಚಾಂದ್ ಸಾ ರೋಷಾನ್ ಚೆಹೆರಾ, ಬದನ್ ಪೇ ಸಿತಾರೆ ಹೀಗೆ ಒಂದೊಂದೆ ಹಾಡುಗಳ ಮೂಲಕ ಜನರನ್ನು ಮೋಡಿ ಮಾಡಿದ ಮೋಡಿಗಾರ ಎಂದೇ ಮಹಮ್ಮದ್ ರಫಿ ಅವರನ್ನು ಗುರುತಿಸಲಾಗುತ್ತದೆ. ಭಾರತದ ಮಟ್ಟಿಗೆ ಚಲನಚಿತ್ರಗಳಿಗೂ ಘಜಲ್ ಸಾಹಿತ್ಯ ಸಂಗೀತವನ್ನು ಪರಿಚಯಿಸಿ ಅದನ್ನು ಉತ್ತುಂಗಕ್ಕೆ ಕೊಂಡೊಯ್ದ ಅಪರೂಪದ ಕಲಾವಿದ ಮಹಮ್ಮದ್ ರಫಿ.

ಬಾಲಿವುಡ್ ಮತ್ತು ಹಿಂದಿ ಭಾಷಿಕ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಹಿಂದಿ ಭಾಷೆಗೆ ಇರುವಷ್ಟೇ ಪ್ರಾಮುಖ್ಯತೆ ಉರ್ದು ಭಾಷೆಗೂ ಇದೆ. ಮಿರ್ಜಾ ಗಾಲಿಬ್‌ನಂತೆ ಉರ್ದು ಭಾಷೆಯಲ್ಲಿ ಸಾವಿರಾರು ಘಜಲ್‌ಗಳನ್ನು ರಚಿಸಿದ ಅನೇಕರು ಇಂದು ಇತಿಹಾಸದ ಪುಟ ಸೇರಿದ್ದಾರೆ. ಅಂತಹ ಘಜಲ್‌ಗಳನ್ನು ತಮ್ಮ ಅಪರೂಪದ ಕಂಠಸಿರಿಯ ಮೂಲಕ ಮನೆಮನೆಗೂ ತಲುಪಿಸಿದ ಕೀರ್ತಿ ಮಹಮ್ಮದ್ ರಫಿ ಅವರದ್ದು.

50ರಿಂದ 70ರ ದಶಕಗಳ ಕಾಲದಲ್ಲಿ ಹಿಂದಿ ಚಿತ್ರಲೋಕವನ್ನು ಸಂಪೂರ್ಣ ಆವರಿಸಿದ್ದ ರಫಿ ಹಾಡಿಗೆ ಕರ್ನಾಟಕ ಸೇರಿದಂತೆ ದೇಶ-ವಿದೇಶಗಳಲ್ಲೂ ಅಪಾರ ಅಭಿಮಾನಿಗಳಿದ್ದರು. ಅವರು ಕನ್ನಡದಲ್ಲಿ ’ನೀನೆಲ್ಲಿ ನಡೆವೆ ದೂರ’ (ಒಂದೇ ಬಳ್ಳಿಯ ಹೂಗಳು) ಎಂಬ ಹಾಡನ್ನು ಹಾಡಿದ್ದರು ಎಂಬುದು ಕೂಡ ವಿಶೇಷ.

ಒಮ್ಮೆ ಯೋಚಿಸಿ, ರೇಡಿಯೋ ಕಾಲದಲ್ಲಿ, ದೂರದರ್ಶನ ಎಂಬ ಏಕೈಕ ಸರ್ಕಾರಿ ಚಾನೆಲ್ ಅಸ್ತಿತ್ವದಲ್ಲಿದ್ದ ಕಾಲದಲ್ಲಿ ಹಿಂದಿ ಚಿತ್ರಗೀತೆಗಳ ಮೂಲಕ, ಘಜಲ್ ಹಾಡುಗಳ ಮೂಲಕ ನಮ್ಮನ್ನು ರಂಜಿಸಿದ್ದ ಮಹಮ್ಮದ್ ರಫಿ ಹಾಡುಗಳು ಇಂದು ಕನ್ನಡದಲ್ಲೇ, ಕನ್ನಡ ಸೊಗಡಿನ ಸಾಹಿತ್ಯದಲ್ಲೇ ಕೇಳುವಂತಾದರೆ ಹೇಗಿರಬಹುದು! ಇಂತಹ ರೋಮಾಂಚನಕಾರಿ ಸಾಹಸಕ್ಕೆ ಇದೀಗ ಓರ್ವ ಉತ್ಸಾಹಿ ಹಿರಿಜೀವ ಕೈಹಾಕಿದೆ. ಅಷ್ಟೇ ಅಲ್ಲ ತಮ್ಮ ಪ್ರಯತ್ನದಲ್ಲಿ ದೊಡ್ಡ ಯಶಸ್ಸನ್ನೂ ಅವರು ಸಾಧಿಸಿದ್ದಾರೆ. ಅಂತಹ ಅಪರೂಪದ ಕನ್ನಡ ಸಾಹಸಿಯೇ ಗಣೇಶ್ ಪ್ರಸಾದ್!

ಕವಿ ರಾಗ ಮಾರ್ಗ ಎಂಬ ಸಂಗೀತಾಮೃತ

ಕನ್ನಡದಲ್ಲಿ ಈ ಹೆಸರಿನಲ್ಲಿ ಒಂದು ಯೂಟ್ಯೂಬ್ ಚಾನೆಲ್ (https://www.youtube.com/channel/UCJ9FYIKjFrIJFK96quimBNA) ಕಳೆದ ಒಂದೂವರೆ ವರ್ಷದಿಂದ ಕೆಲಸ ನಿರ್ವಹಿಸುತ್ತಿದೆ. ಅದರ ಸೂತ್ರಧಾರ ಇದೇ ಗಣೇಶ್ ಪ್ರಸಾದ್. ಈ ಯೂಟ್ಯೂಬ್ ಚಾನೆಲ್‌ನಲ್ಲಿ ಅಂತದ್ದೇನು ವಿಶೇಷ? ಎಂಬ ಪ್ರಶ್ನೆಗೆ ಉತ್ತರ ಮಹಮ್ಮದ್ ರಫಿ, ಕಿಶೋರ್ ಕುಮಾರ್ ಅವರ ಪ್ರಖ್ಯಾತ ಹಿಂದಿ ಹಾಡುಗಳು ಇದೀಗ ಅದೇ ಸೊಗಡಿನಲ್ಲಿ ಕನ್ನಡೀಕರಣಗೊಂಡು ಕನ್ನಡ ಸಂಗೀತ ಆಸಕ್ತರನ್ನು ರಂಜಿಸುತ್ತಿದೆ. ಅಲ್ಲದೆ, ಕಳೆದ ಶತಮಾನದ ದಿಗ್ಗಜರ ಸಂಗೀತಾಮೃತವನ್ನು ಇಂದಿನ ನವ ತಲೆಮಾರಿಗೂ ದಾಟಿಸುತ್ತಿದೆ.

ಯಾರೀ ಗಣೇಶ್ ಪ್ರಸಾದ್?

ಮೂಲತಃ ಮೈಸೂರಿನವರಾದ, ಇಂಗ್ಲಿಷ್ ಪ್ರಾಧ್ಯಾಪಕರಾಗಿರುವ ಗಣೇಶ್ ಪ್ರಸಾದ್ ಅವರಿಗೆ ರಫಿ ಹಾಡುಗಳೆಂದರೆ ಎಲ್ಲಿಲ್ಲದ ಪ್ರೀತಿ. ಸಂಗೀತದ ಪರಿಚಯವೂ ಇದ್ದ ಅವರು 80-90ರ ದಶಕದಲ್ಲಿ ಮೈಸೂರಿನಲ್ಲಿ ಪ್ರಖ್ಯಾತವಾಗಿದ್ದ ಮೋಹನ್ ಆರ್ಕೆಸ್ಟ್ರಾದಲ್ಲಿ ಹಾಡುಗಾರರಾಗಿ ಸಾಕಷ್ಟು ಹೆಸರು ಮಾಡಿದ್ದರು.

ಶರತ್

ಹಿಂದಿ ಭಾಷೆಯಲ್ಲಿ ಅಷ್ಟೇನೂ ಹಿಡಿತವಿಲ್ಲದಿದ್ದರೂ, ಗಣೇಶ್ ಅವರು ರಫಿ ಮೇಲಿನ ಪ್ರೀತಿಯಿಂದಾಗಿ ಕ್ಲಾಸಿಕಲ್ ಸಂಗೀತವನ್ನು ಕಲಿತು ಆರ್ಕೆಸ್ಟ್ರಾಗಳಲ್ಲಿ ಹಾಡಿದ್ದಾರೆ. ಈ ಎಲ್ಲಾ ಹಾಡುಗಳನ್ನು ಕನ್ನಡೀಕರಿಸಬೇಕು, ಈ ಹಾಡುಗಳಿಗೆ ಕನ್ನಡದಲ್ಲಿ ಸಾಹಿತ್ಯ ಬರೆಯಬೇಕು ಎಂಬ ಅವರ ಕನಸಿಗೆ ಆಗಲೇ ರೆಕ್ಕೆಪುಕ್ಕ ಹುಟ್ಟಿತ್ತು. ಆದರೆ, ಅದು ಸಫಲವಾಗಿದ್ದು ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಎಂಬುದು ವಿಶೇಷ.

ಕೊರೊನಾ ಕಾಲದಲ್ಲಿ ನಡೆದಿತ್ತು ಅದ್ಭುತ

ಮೈಸೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಗಣೇಶ್ ಇದೀಗ ದಾವಣಗೆರೆಯ ಸಿದ್ಧಗಂಗಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಕಾಲೇಜು ಕೆಲಸ ಇಲ್ಲದ ಕಾರಣ ಎಲ್ಲರಂತೆ ಅವರೂ ಮನೆಯಲ್ಲೇ ಕೂರುವಂತಾಗಿತ್ತು. ಈ ಸಂದರ್ಭದಲ್ಲೇ ಅವರ ಹಳೆಯ ಕನಸು ಮತ್ತೆ ರೆಕ್ಕೆ ಬಿಚ್ಚಿಕೊಂಡಿದ್ದು. ಈ ಕನಸಿಗೆ ಕೈಜೋಡಿಸಿದ್ದು ಅವರ ಗೆಳೆಯರಾದ ನಾರಾಯಣ್ ಮತ್ತು ಅವರಲ್ಲೇ ಇಂಗ್ಲಿಷ್ ಕಲಿತಿದ್ದ ವಿದ್ಯಾರ್ಥಿ ಶರತ್ ಆರೋಹಣ. ಈ ತಂಡಕ್ಕೆ ನೆರವಾದವರಲ್ಲಿ ಚೇತನ್ ಸುಬ್ಬಯ್ಯ, ವಾಸುಕಿ ರಾಘವನ್ ಮತ್ತು ಪ್ರದೀಪ್ ವಿ ಕೂಡ ಇದ್ದಾರೆ.

ಮಹಮ್ಮದ್ ರಫಿ ಅವರ ಬಹುತೇಕ ಎಲ್ಲಾ ಹಾಡುಗಳನ್ನೂ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ನಾಸೀರ್ ಎಂಬುವವರು ಈಗಾಗಲೇ ತಮ್ಮದೇ ಹೆಸರಿನ ಬ್ಲಾಗ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಹೀಗಾಗಿ ಇಂಗ್ಲಿಷ್‌ನಲ್ಲಿರುವ ಹಾಡುಗಳ ಸಾಹಿತ್ಯವನ್ನು ಕನ್ನಡಕ್ಕೆ ತರ್ಜುಮೆ ಮಾಡುವುದು ಇಂಗ್ಲಿಷ್ ಪ್ರಾಧ್ಯಾಪಕರಾದ ಗಣೇಶ್ ಅವರಿಗೆ ಅಷ್ಟೇನು ಕಷ್ಟವಾಗಲಿಲ್ಲ. ಇದರ ಜೊತೆಗೆ ಹಿಂದಿಯಲ್ಲಿ ಪರಿಣತಿ ಪಡೆದಿದ್ದ ಅವರ ಗೆಳೆಯರಾದ ನಾರಾಯಣ್ ಸಹ ಈ ವೇಳೆ ಸಹಕಾರ ನೀಡಿದ್ದಾರೆ. ಅಲ್ಲದೆ, ಯೂಟ್ಯೂಬ್‌ಗೆ ’ಕವಿ ರಾಗ ಮಾರ್ಗ’ ಎಂಬ ಹೆಸರನ್ನೂ ಅವರೇ ಸೂಚಿಸಿದ್ದಾರೆ.

ನಾರಾಯಣ್

ಹೀಗೆ ಲಾಕ್‌ಡೌನ್ ಕಾಲದಲ್ಲಿ ಆರಂಭವಾದ ಹೊಸ ಬಗೆಯ ಕನ್ನಡದ ಸಂಗೀತ ಚಾನೆಲ್ ಒಂದು ಇದೀಗ ರಾಜ್ಯದಲ್ಲಿ ಮೋಡಿ ಮಾಡುತ್ತಿದೆ. 2020 ಅಕ್ಟೋಬರ್ 25ರ ವಿಜಯದಶಮಿಯಂದು ಆರಂಭವಾದ ಈ ಚಾನೆಲ್‌ನಲ್ಲಿ ಮಹಮ್ಮದ್ ರಫಿ ಮತ್ತು ಕಿಶೋರ್ ಕುಮಾರ್ ಅವರ 50ಕ್ಕೂ ಅಧಿಕ ಹಾಡುಗಳನ್ನು ಕನ್ನಡೀಕರಿಸಿ, ಮೂಲ ರಾಗಸಂಯೋಜನೆಯಲ್ಲಿಯೇ ಹಾಡಲಾಗಿದೆ. ಪ್ರತಿ ಶನಿವಾರ ಒಂದು ಪ್ರೀಮಿಯಂ ಹಾಡನ್ನು ಬಿಡುಗಡೆ ಮಾಡುವುದು ಈ ಚಾನೆಲ್‌ನ ವಿಶೇಷ. ಇಷ್ಟು ದಿನ ಮಹಮ್ಮದ್ ರಫಿ ಅವರ ಹಾಡುಗಳನ್ನು ನೀಡುತ್ತಿದ್ದ ಗಣೇಶ್ ಅವರು ಇದೀಗ ಕಿಶೋರ್ ಕುಮಾರ್ ಅವರ ಸರಣಿಯನ್ನು ಆರಂಭಿಸಿದ್ದಾರೆ. ಈವರೆಗೆ 1.5 ಲಕ್ಷ ವೀಕ್ಷಕರು ಈ ಚಾನೆಲ್‌ನ ಹಾಡುಗಳನ್ನು ನೋಡಿ ಆನಂದಿಸಿದ್ದಾರೆ ಎಂಬುದೇ ಹೆಚ್ಚುಗಾರಿಕೆ.

ರಫಿ ಅವರನ್ನು ಕನ್ನಡದಲ್ಲಿ ಪರಿಚಯಿಸಿದ ಕೀರ್ತಿ ನಮಗಿರಲಿ

ಮಹಮ್ಮದ್ ರಫಿ ದೇಶವನ್ನೇ ಬೆರಗುಗೊಳಿಸಿದ ಬಹುದೊಡ್ಡ ಸಂಗೀತ ಗಾರುಡಿಗ. ನಮ್ಮ ತಲೆಮಾರಿನ
ಬಹುದೊಡ್ಡ ಅದ್ಭುತ. ಅವರ ಹಾಡುಗಳಲ್ಲಿನ ಸಾಹಿತ್ಯಕ್ಕೆ ಮಾರುಹೋಗದವರು ಯಾರೂ ಇಲ್ಲ. ಆದರೆ, ಅಂತಹ ಉತ್ಕೃಷ್ಟ ಸಾಹಿತ್ಯವನ್ನು ನಮ್ಮದೇ ಕನ್ನಡ ಭಾಷೆಯಲ್ಲಿ ಸವಿಯುವಂತಾಗಬೇಕು ಎಂಬುದು ನನ್ನ ಬಹುದಿನದ ಕನಸು. ಇದೇ ಕಾರಣಕ್ಕೆ ಈ ಯೂಟ್ಯೂಬ್ ಚಾನೆಲ್ ಆರಂಭಿಸಲಾಗಿದೆ. ಇದರಿಂದ ಹಣ ಗಳಿಸುವುದು ನಮ್ಮ ಉದ್ದೇಶವಲ್ಲ. ಬದಲಿಗೆ ರಫಿ ಅವರನ್ನು ಈ ತಲೆಮಾರಿಗೂ ಪರಿಚಯಿಸಿದ ಮತ್ತು ಅವರ ಹಾಡುಗಳನ್ನು ಕನ್ನಡದಲ್ಲಿ ನೀಡಿದ ಕೀರ್ತಿ ನಮಗಿರಲಿ ಎಂಬುದೇ ನಮ್ಮ ಉದ್ದೇಶ.
ಗಣೇಶ್ ಪ್ರಸಾದ್


ಇದನ್ನೂ ಓದಿ: ‘ಧೀರ ಭಗತ್ ರಾಯ್‌’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...