Homeಮುಖಪುಟಕೊಲೆ ಯತ್ನ ಆರೋಪ ಸಾಬೀತು; ಲಕ್ಷದೀಪ ಸಂಸದನನ್ನು ಅನರ್ಹಗೊಳಿಸಿದ ಲೋಕಸಭಾ ಸಚಿವಾಲಯ

ಕೊಲೆ ಯತ್ನ ಆರೋಪ ಸಾಬೀತು; ಲಕ್ಷದೀಪ ಸಂಸದನನ್ನು ಅನರ್ಹಗೊಳಿಸಿದ ಲೋಕಸಭಾ ಸಚಿವಾಲಯ

- Advertisement -
- Advertisement -

ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಂದ್ರಾಡಳಿತ ಪ್ರದೇಶದ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಅನರ್ಹಗೊಳಿಸಿ ಲೋಕಸಭೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.

ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದ್ದು, ಕವರಟ್ಟಿಯ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದ ದಿನಾಂಕವಾದ ಜನವರಿ 11ರಿಂದ ಫೈಝಲ್ ಅವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಎನ್‌ಸಿಪಿಯಿಂದ ಫೈಜಲ್ ಆಯ್ಕೆಯಾಗಿದ್ದರು.

ಜನತಾ ಪ್ರಾತಿನಿಧ್ಯ ಕಾಯಿದೆ 1951ರ ಸೆಕ್ಷನ್ 8 ಮತ್ತು ಭಾರತದ ಸಂವಿಧಾನದ 102 (ಎಲ್) (ಇ) ನಿಬಂಧನೆಗಳ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

“ಕವರಟ್ಟಿ ಲಕ್ಷದ್ವೀಪದ ಸೆಷನ್ಸ್ ನ್ಯಾಯಾಲಯವು ಸೆಷನ್ಸ್ ಪ್ರಕರಣ 01/2017ಕ್ಕೆ ಸಂಬಂಧಿಸಿದಂತೆ ಅಪರಾಧಿ ಎಂದು ಘೋಷಿಸಿದ ಪರಿಣಾಮವಾಗಿ, ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಲಕ್ಷದ್ವೀಪ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಮೊಹಮ್ಮದ್ ಫೈಝಲ್ ಪಿ.ಪಿ. ಅವರು ಲೋಕಸಭೆ ಸದಸ್ಯತ್ವದಿಂದ ಅನರ್ಹರಾಗಿದ್ದಾರೆ. 1951 ರ ಜನತಾ ಪ್ರಾತಿನಿಧ್ಯ ಕಾಯಿದೆಯ 8 ನೇ ಪರಿಚ್ಛೇದ ಮತ್ತು ಭಾರತದ ಸಂವಿಧಾನದ 102 (ಎಲ್‌) (ಇ) ವಿಧಿಗಳ ನಿಬಂಧನೆಗಳ ಅನ್ವಯ, 2023ರ ಜನವರಿ 11 ರಂದು ಅಪರಾಧ ಸಾಬೀತಾದ ದಿನಾಂಕದಿಂದ ಅವರು ಅನರ್ಹರಾಗಿದ್ದಾರೆ” ಎಂದು ಆದೇಶ ತಿಳಿಸಿದೆ.

ಕೊಲೆ ಯತ್ನ ಪ್ರಕರಣದಲ್ಲಿ ಫೈಝಲ್ ಸೇರಿದಂತೆ ನಾಲ್ವರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ಲಕ್ಷದ್ವೀಪ ನ್ಯಾಯಾಲಯ ಬುಧವಾರ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇದನ್ನೂ ಓದಿರಿ: ಪಕ್ಷದ ಕಚೇರಿ ಮಾಲಿಕತ್ವದ ವಿಚಾರ: ಎನ್ಐಎ ತಂಡದಿಂದ ಕಿಮ್ಮನೆ ವಿಚಾರಣೆ

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪಿ ಎಂ ಸಯೀದ್ ಅವರ ಅಳಿಯ ಮೊಹಮ್ಮದ್ ಸಾಲಿಹ್ ಅವರನ್ನು ಕೊಲ್ಲಲು ಪ್ರಯತ್ನಿಸಿದ್ದಕ್ಕಾಗಿ ಕವರಟ್ಟಿ ಸೆಷನ್ಸ್ ನ್ಯಾಯಾಲಯವು ಅಪರಾಧಿಗಳಿಗೆ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಪರಾಧಿಗಳೆಲ್ಲರೂ ಸಂಬಂಧಿಕರು.

ಮೊಹಮ್ಮದ್ ಫೈಜಲ್ ಅವರು ಕೊಲೆ ಯತ್ನ ಪ್ರಕರಣದಲ್ಲಿ ತನಗೆ ಮತ್ತು ಇತರ ಮೂವರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಸೆಷನ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಫೈಝಲ್ ಮತ್ತು ಇತರ ಮೂವರು ಆರೋಪಿಗಳನ್ನು ಬುಧವಾರ ಐಪಿಸಿ ಸೆಕ್ಷನ್ 143, 147, 148, 448, 427, 324, 342, 307, 506 ಆರ್/ಡಬ್ಲ್ಯು 149 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ದೋಷಿಗಳೆಂದು ಘೋಷಿಸಲಾಗಿದೆ.

ನ್ಯಾಯವಾದಿ ಸದ್ಮಂಗಲಂ ಡಿ.ಅಜಿತ್‌ಕುಮಾರ್ ಅವರ ಮೂಲಕ ಸಲ್ಲಿಸಿದ ಮೇಲ್ಮನವಿಯಲ್ಲಿ ಮೇಲ್ಮನವಿದಾರರು, “ವಿಚಾರಣಾ ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯು ಕಾನೂನು, ಸತ್ಯ ಮತ್ತು ಸಾಕ್ಷ್ಯಕ್ಕೆ ವಿರುದ್ಧವಾಗಿದೆ” ಎಂದು ವಾದಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read