Homeಮುಖಪುಟ'ಭಾರತದ ಬಹುತ್ವವು ಅಪಾಯದಲ್ಲಿದೆ': ರಾಹುಲ್ ಬಹಿರಂಗ ಪತ್ರ

‘ಭಾರತದ ಬಹುತ್ವವು ಅಪಾಯದಲ್ಲಿದೆ’: ರಾಹುಲ್ ಬಹಿರಂಗ ಪತ್ರ

- Advertisement -
- Advertisement -

ಭಾರತ್ ಜೋಡೋ ಯಾತ್ರೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಪತ್ರ ವಿತರಿಸುವ ಅಭಿಯಾನ ಹಮ್ಮಿಕೊಳ್ಳಲಿದ್ದಾರೆ. ಆ ಪತ್ರದಲ್ಲಿ ‘ವಿಭಜಕ ಶಕ್ತಿಗಳು ದೇಶದ ವೈವಿಧ್ಯತೆಯನ್ನು ತನ್ನ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿದ್ದರೂ ಭಾರತವು ದ್ವೇಷವನ್ನು ತಿರಸ್ಕರಿಸುತ್ತದೆ’ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನ “ಹಾಥ್ ಸೆ ಹಾಥ್ ಜೋಡೋ ಅಭಿಯಾನ”ದ ಭಾಗವಾಗಿ ಜನರಿಗೆ ಪತ್ರದ ಜೊತೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧದ “ಚಾರ್ಜ್ ಶೀಟ್” ಅನ್ನು ಹಂಚಲಾಗುವುದು ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಜನವರಿ 26 ರಿಂದ ಮಾರ್ಚ್ 26 ರವರೆಗೆ “ಹಾಥ್ ಸೆ ಹಾಥ್ ಜೋಡೋ ಅಭಿಯಾನ” ವನ್ನು ಕಾಂಗ್ರೆಸ್ ಪಕ್ಷ ಆರಂಭಿಸಲಿದ್ದು, ಇದನ್ನು ಬ್ಲಾಕ್, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ನಡೆಸುವ ಗುರಿಯನ್ನು ಹೊಂದಿದೆ. ಈ ಅಭಿಯಾನವು 2.5 ಲಕ್ಷ ಗ್ರಾಮ ಪಂಚಾಯಿತಿಗಳು, ಆರು ಲಕ್ಷ ಗ್ರಾಮಗಳು ಮತ್ತು ಸುಮಾರು 10 ಲಕ್ಷ ಚುನಾವಣಾ ಬೂತ್‌ಗಳ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ರಮೇಶ್ ಸುದ್ದಿಗಾರರಿಗೆ ತಿಳಿಸಿದರು.

ರಾಹುಲ್ ಗಾಂಧಿಯವರ ಈ ಪತ್ರದಲ್ಲಿ “ಭಾರತದ ಬಹುತ್ವವು ಅಪಾಯದಲ್ಲಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ವಿವಿಧ ಧರ್ಮಗಳು, ಸಮುದಾಯಗಳು, ಪ್ರದೇಶಗಳು ಪರಸ್ಪರ ವಿರುದ್ಧವಾಗಿವೆ” ಎಂದು ಬರೆಯಲಾಗಿದೆ. “ಆದರೆ ಭಾರತ್ ಜೋಡೋ ಯಾತ್ರೆಯ ನಂತರ, ಈ ಕೆಟ್ಟ ಪರಿಸ್ಥಿತಿ ಸ್ವಲ್ಪಮಟ್ಟಿಗೆ ತಗ್ಗಿದೆ. ಅದು ಇನ್ನು ಮುಂದೆ ಮುಂದುವರಿಯಲು ಸಾಧ್ಯವಿಲ್ಲ ಎಂದು ನನಗೆ ಮನವರಿಕೆಯಾಗಿದೆ” ಎಂದಿದ್ದಾರೆ.

“ದೇಶದಲ್ಲಿ ಸ್ಪಷ್ಟ ಆರ್ಥಿಕ ಬಿಕ್ಕಟ್ಟು ಇದೆ” ಎಂದು ರಾಹುಲ್ ಕಳವಳ ವ್ಯಕ್ತಪಡಿಸಿದ್ದಾರೆ. “ಪ್ರತಿಯೊಬ್ಬರಿಗೂ ಆರ್ಥಿಕ ಸಮೃದ್ಧಿಯನ್ನು ಸೃಷ್ಟಿಸಲು ನಾನು ಸಂಕಲ್ಪ ಮಾಡಿದ್ದೇನೆ- ದೇಶದ ರೈತರ ಉತ್ಪನ್ನಗಳಿಗೆ ಸರಿಯಾದ ಬೆಲೆ, ನಮ್ಮ ಯುವಕರಿಗೆ ಉದ್ಯೋಗಗಳು, ದೇಶದ ಸಂಪತ್ತಿನ ನ್ಯಾಯಯುತ ಹಂಚಿಕೆ, MSME ಗಳಿಗೆ [ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು] ಮತ್ತು ಉದ್ಯಮಿಗಳಿಗೆ ಅನುಕೂಲಕರ ವಾತಾವರಣ, ಕಡಿಮೆ ಬೆಲೆಗೆ ಡೀಸೆಲ್, ಗ್ಯಾಸ್ ಸಿಲಿಂಡರ್ ರೂ. 500 ಸಿಗುವಂತಾಗಬೇಕು” ಎಂದಿದ್ದಾರೆ.

ಪ್ರಸ್ತುತ ಪಂಜಾಬ್‌ನಲ್ಲಿರುವ ಭಾರತ್ ಜೋಡೋ ಯಾತ್ರೆ ಜನವರಿ 19 ರಂದು ರಾಜ್ಯದ ಪಠಾಣ್‌ಕೋಟ್ ನಗರವನ್ನು ತಲುಪಲಿದ್ದು, ಅಲ್ಲಿ ರ್ಯಾಲಿ ನಡೆಯಲಿದೆ. ನಂತರ ಯಾತ್ರೆಯು ಜನವರಿ 20 ರಂದು ಜಮ್ಮುವನ್ನು ಪ್ರವೇಶಿಸಲಿದೆ ಎಂದು ಜೈರಾಮ್‌ ರಮೇಶ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಅರವಿಂದ್ ಕೇಜ್ರಿವಾಲ್ ನಿವಾಸದ ಹೊಸ ವೀಡಿಯೊ ವೈರಲ್

0
ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಮುಖ್ಯಮಂತ್ರಿಯ ಮನೆಯೊಳಗೆ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಬಿಭವ್ ಕುಮಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿರುವ ಎಎಪಿ ನಾಯಕಿ ಸ್ವಾತಿ ಮಲಿವಾಲ್ ಅವರು,...